ನಾವು ಬಾಲ್ಯದಿಂದಲೇ ಕಲಿತಿರುವುದು ಕೇಳುತ್ತಿರುವುದು ಮೌಂಟ್ ಎವರೆಸ್ಟ್ ಪ್ರಪಂಚದ ಅತ್ಯಂತ ಎತ್ತರವಾದ ಶಿಖರ. ಈ ಶಿಖರಕ್ಕೆ ಸರ್ ಜಾರ್ಜ್ ಎವರೆಸ್ಟ್ ಅವರ ಹೆಸರನ್ನು ಇಡಲಾಗಿದೆ. ನಮ್ಮಲ್ಲಿ ಬಹಳಷ್ಟು ಜನಗಳಿಗೆ ಗೊತ್ತಿಲ್ಲದ ವಿಚಾರವೆಂದರೆ ಯಾರ ಹೆಸರನ್ನು ಈ ಪರ್ವತಕ್ಕೆ ಇಟ್ಟಿದ್ದಾರೋ ಅವರು ಮೌಂಟ್ ಎವರೆಸ್ಟನ್ನು ಅಳಿಯಲೂ ಇಲ್ಲ ಅಥವಾ ಅದರ ಸುತ್ತಮುತ್ತ ಸಹ ಸುಳಿಯಲಿಲ್ಲ. ನಿಮಗೆ ಇದನ್ನು ಓದಿ ಆಶ್ಚರ್ಯವಾಗಬಹುದು. ಹೌದು ಎವರೆಸ್ಟನ್ನು ಅಳೆದವರು ಯಾವುದೇ ಬ್ರಿಟಿಷ್ ಅಧಿಕಾರಿ ಅಲ್ಲ . ಅವನು ಒಬ್ಬ ಭಾರತದ ಗಣಿತಜ್ಞನಾಗಿದ್ದನು. ಅವನ ಹೆಸರು ರಾಧಾನಾಥ್ ಸಿಕ್ದರ್. ನೀವು ಯಾರಾದರೂ ಈ ಹೆಸರನ್ನು ಕೇಳಿದ್ದೀರಾ ? ನಾವು ಬ್ರಿಟಿಷರು ನಮಗೆ ಬಿಟ್ಟುಹೋದ ಇತಿಹಾಸವನ್ನೇ ಇಷ್ಟು ವರ್ಷದಿಂದ ಓದುತ್ತಿದ್ದೇವೆ . ಇತಿಹಾಸದಲ್ಲಿ ಅವರಿಗೆ ಸಿಕ್ಕ ಬೇಕಾಗಿದ್ದ ಸ್ಥಾನ ಸಿಕ್ಕದಿರುವ ಅನೇಕ ಮಹಾಜ್ಞಾನಿ ಗಳಲ್ಲಿ ರಾಧಾನಾಥ್ ಸಿಕ್ದರ್ ಕೂಡ ಒಬ್ಬರು. ಚಾಟ್ ಎವೆರೆಸ್ಟ್ ಅವರಿಗೆ ಮೌಂಟ್ ಎವರೆಸ್ಟ್ ನೊಂದಿಗೆ ಇದ್ದ ಸಂಬಂಧ ಎಂದರೆ ಅವರು ರಾಧಾನಾಥ್ ಸಿಕ್ದರ್ ಅವರನ್ನು ಹುಡುಕಿದ್ದು.
19ನೇ ಶತಮಾನದ ಪ್ರಾರಂಭದಲ್ಲಿ ಆಂಗ್ಲರು ಭಾರತದ ನಕ್ಷೆಯನ್ನು ಮಾಡ ಬೇಕೆಂಬ ಉದ್ದೇಶದಿಂದ ಪೂರ್ತಿ ದೇಶದ ತ್ರಿಕೋಣ ವಿಧಿಯ ಸರ್ವೆ ಮಾಡಲು ಪ್ರಾರಂಭಿಸಿದರು. 1830 ರಲ್ಲಿ ಸರ್ ಜಾರ್ಜ್ ಎವರೆಸ್ಟ್ ಎಂಬ ಒಬ್ಬ ಆಂಗ್ಲ ಅಧಿಕಾರಿ ಸರ್ವೇಯರ್ ಜನರಲ್ ಆಫ್ ಇಂಡಿಯಾ ಆಗಿ ಭಾರತಕ್ಕೆ ಬಂದರು. ಅವರು ಸ್ಫೇರಿಕಲ್ ಟ್ರಿಗ್ನಾಮಿಟ್ರಿ ಯಲ್ಲಿ ಪ್ರವೀಣರಾದ ವ್ಯಕ್ತಿಯನ್ನು ಕೆಲಸಕ್ಕಾಗಿ ಶೋಧಿಸಿ ತೊಡಗಿದ್ದರು. ಆಗ ಅವರ ಶಿಕ್ಷಕ ಮಿತ್ರರು ಕಲ್ಕತ್ತಾದ ಒಬ್ಬ ಯುವ ವಿದ್ಯಾರ್ಥಿ ರಾಧಾನಾಥ್ ಸಿಕ್ದರ್ ಅವರ ಬಗ್ಗೆ ಹೇಳಿದರು. ಅವನು ತನ್ನ ಗಣಿತದ ಪ್ರತಿಭೆಯಿಂದ ಶಿಕ್ಷಕರನ್ನು ವಿಸ್ಮಯಗೊಳಿಸಿದ್ದುನು.
ಆಮೇಲೆ ಸರ್ಜಾ ಎವರೆಸ್ಟ್ ತಮ್ಮ ವಿಭಾಗದಲ್ಲಿ ರಾಧಾನಾಥ್ ಅವರಿಗೆ ಕಂಪ್ಯೂಟರ್ ಕೆಲಸಕ್ಕೆ ಸೇರಿಸಿಕೊಂಡರು. ಆ ಕಾಲದಲ್ಲಿ ಕಂಪ್ಯೂಟರ್ ಕೆಲಸ ಯಂತ್ರಗಳಿಂದ ಮಾಡುತ್ತಿರಲಿಲ್ಲ ಮಾನವ ಕಂಪ್ಯೂಟರ್ ಗಳೇ ಈ ಕೆಲಸವನ್ನು ಮಾಡುತ್ತಿದ್ದರು. ಅವರು ಕಾಗದದ ಮೇಲಿದ್ದ ಡಾಟಾವನ್ನು ಕಂಪ್ಯೂಟ್ ಮಾಡುತ್ತಿದ್ದರು. ರಾಧಾನಾಥ್ ಸಿಕ್ದರ್ ಪ್ರಭಾವಶಾಲಿ ಹಾಗೂ ಶ್ರಮಪಟ್ಟು ಕೆಲಸ ಮಾಡುವ ಮನುಷ್ಯನಾಗಿದ್ದ. ಆದ್ದರಿಂದ ಎವರೆಸ್ಟ್ ಅವರು ಅವನಿಂದ ಪ್ರಭಾವಿತರಾಗಿದ್ದರು. 1843 ರಲ್ಲಿ ಜಾರ್ಜ್ ಎವರೆಸ್ಟ್ ಅವರು ನಿವೃತ್ತರಾದಾಗ ಅವರ ಜಾಗಕ್ಕೆ ಅಂಡ್ರೊ ಸ್ಕಾಟ್ ವಾಗ್ ಎನ್ನುವ ಅಧಿಕಾರಿ ಬಂದನು. ಆಶ್ಚರ್ಯ ಏನೆಂದರೆ ಅಲ್ಲಿಯವರೆಗೂ ಎವರೆಸ್ಟ್ ಶಿಖರಕ್ಕೆ ಇನ್ನು ಶಿಖರ XV ಎಂದು ಕರೆಯುತ್ತಿದ್ದರು ಮತ್ತು ಅದರ ಎತ್ತರ ಅಳೆಯುವ ಕೆಲಸ ಶುರುವಾಗಿರಲಿಲ್ಲ. ಸ್ಕಾಟ್ ಅವರು ರಾಧಾನಾಥ್ ಸಿಕ್ದರ್ ಗೆ ಪರ್ವತದ ಎತ್ತರ ಅಳೆಯುವ ಕೆಲಸವನ್ನು ವಹಿಸಿದರು. ರಾಧಾನಾಥ್ ಈ ಕೆಲಸದಲ್ಲಿ ಪೂರ್ತಿಯಾಗಿ ತೊಡಗಿಕೊಂಡರು ಮತ್ತು ಎಷ್ಟೋ ವರ್ಷಗಳ ಶ್ರಮದ ನಂತರ 1852 ರಲ್ಲಿ ಶಿಖರXV ಎತ್ತರವನ್ನು ಅಳೆಯಲು ಸಫಲರಾದರು. ಈ ಶಿಖರದ ಎತ್ತರ 29002 ಅಡಿ ಇದೆ ಮತ್ತು ಲೋಕದ ಎಲ್ಲಾ ಪರ್ವತಗಳಿಗಿಂತ ಎತ್ತರವಾಗಿದೆ ಎಂದು ಕಂಡುಹಿಡಿದರು.
ಆದರೆ ಇದನ್ನು ಪ್ರಕಟಗೊಳ್ಳಲಿಲ್ಲ ಏಕೆಂದರೆ ರಾಧಾನಾಥ್ ಸಿಕ್ದರ್ ಅವರಿಗೆ ತಮ್ಮ ಎಲ್ಲ ಲೆಕ್ಕಾಚಾರಗಳನ್ನು ಪುನಃ ಪರಿಶೀಲಿಸಿ ಸಂತುಷ್ಟರಾಗ ಬೇಕಿತ್ತು. 1856 ನಲ್ಲಿ ರಾಧಾನಾಥ್ ಪೂರ್ತಿ ಸಂತುಷ್ಟರಾದ ಮೇಲೆ ಅಧಿಕೃತವಾದ ಘೋಷಣೆಯನ್ನು ಮಾಡಲಾಯಿತು. ಶಿಖರXV ಲೋಕದ ಅತ್ಯಂತ ಎತ್ತರವಾದ ಶಿಖರ ಎಂದು. ಇದಕ್ಕಿಂತ ಮುಂಚೆ ಕಾಂಚನಜಂಗಾ ಪರ್ವತವನ್ನು ಎಲ್ಲಕ್ಕಿಂತ ಎತ್ತರವಾದದ್ದು ಎಂದು ತಿಳಿಯಲಾಗಿತ್ತು.
ಈಗ ಶಿಖರXV ಗೆ ಹೆಸರಿಡುವ ಕಾಲ ಬಂತು. ಆಗ ನಾವು ಸ್ವಾತಂತ್ರ್ಯ ರಾಗಿದ್ದರೆ ಮೌಂಟ್ ರಾಧಾನಾಥ್ ಅಥವಾ ಮೌಂಟ್ ಸಿಕ್ದರ್ ಎಂದು ಇಡುತ್ತಿದ್ದರೋ ಏನೋ ಆದರೆ ಆಗ ಆಂಗ್ಲರು ಅಧಿಕಾರ ಮಾಡುತ್ತಿದ್ದರಿಂದ ಆನ್ಡ್ ಡ್ರೋ ಸ್ಕಾಟ್ ಅನು ತನ್ನ ಹಿಂದಿನ ಅಧಿಕಾರಿ ಎವರೆಸ್ಟ್ ಅವರ ಹೆಸರನ್ನು ಇಟ್ಟನು. ಈ ರೀತಿ ಒಬ್ಬ ಪ್ರತಿಭಾಶಾಲಿ ಮತ್ತು ಶ್ರಮಜೀವಿ ಗಣಿತಜ್ಞ ನ ಕೀರ್ತಿ ಮರೆಯಾಯಿತು. ಯಾರು ಆ ಕೆಲಸದಲ್ಲಿ ಶ್ರದ್ಧೆ ಇರಿಸಿ ಪೂರ್ತಿ ಜೀವನ ವಿವಾಹವನ್ನೇ ಮಾಡಿಕೊಳ್ಳಲಿಲ್ಲವೋ ಅವರ ಕೊಡುಗೆಯನ್ನು ಸುಲಭವಾಗಿ ತಳ್ಳಿಹಾಕಲಾಯಿತು.
ಆಗ ಬ್ರಿಟಿಷರು ಇದ್ದಿದ್ದರಿಂದ ಹಾಗೆ ಆಯ್ತು ಸರಿ. ದುಃಖದ ವಿಷಯ ಎಂದರೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ನಂತರವೂ ನಮ್ಮಲ್ಲಿ ಬಹಳಷ್ಟು ಜನಗಳು ರಾಧಾನಾಥ್ ಸಿಕ್ದರ್ ಅವರ ಹೆಸರನ್ನು ಕೇಳಿಲ್ಲ. ನಮ್ಮ ಮಕ್ಕಳಿಗೆ ಈ ಮರೆತುಹೋದ ಮಹಾನ್ ವ್ಯಕ್ತಿಗಳ ಬಗ್ಗೆ ನಾವು ಹೇಳಬೇಕಲ್ಲವೇ ? ನಾವು ನಮ್ಮ ಮಕ್ಕಳಿಗೆ ಮೌಂಟ್ ಎವರೆಸ್ಟ್ ಬಗ್ಗೆ ಹೇಳುವಾಗ ಅದನ್ನು ಅಳೆದ ಮಹಾನ್ ಗಣಿತಜ್ಞ ರಾಧಾನಾಥ್ ಸಿಕ್ದರ್ ಬಗ್ಗೆಯೂ ಹೇಳೋಣ ಅಲ್ಲವೇ ? .
ಮೂಲ : ವಾಟ್ಸಾಪ್ ನಿಂದ.
0 Followers
0 Following