ಕಲೆ ಮತ್ತು ಸಾಹಿತ್ಯ

ProfileImg
14 Oct '23
2 min read


image

ಕಲೆ ಎಂದರೆ ಮನುಷ್ಯನ ಭಾವನೆಗಳನ್ನು ಯಾವುದಾದರೂ ಒಂದು ಮಾಧ್ಯಮದ ಮೂಲಕ ಕಲಾತ್ಮವಾಗಿ ವ್ಯಕ್ತಪಡಿಸುವುದು. ಇದು ಮಾನವನಿಗೆ ಹುಟ್ಟಿದಾಗಿನಿಂದಲೇ ಬಂದಿರುತ್ತದೆ. ನಂತರ ಬೇರೆ ಬೇರೆ ರೀತಿಯಲ್ಲಿ ವ್ಯಕ್ತವಾಗುತ್ತದೆ ಮತ್ತು ಪ್ರಕಟಗೊಳ್ಳುತ್ತದೆ.

ನಮಗೆ ಸುಂದರವಾದ ಒಂದು ಪ್ರಕೃತಿಯನ್ನು ಹಸಿರಿನಿಂದ ಕೂಡಿದ ಬೆಟ್ಟ ಗುಡ್ಡಗಳ ಪ್ರಕೃತಿಯನ್ನು ಕಂಡಾಗ ಹೇಗೆ ಸಂತೋಷವಾಗುತ್ತದೆಯೋ ಹಾಗೆಯೇ ಶಿಲ್ಪ, ಚಿತ್ರಕಲೆ, ಸಂಗೀತ, ನೃತ್ಯ, ಮೊದಲಾದವುಗಳು ನಮ್ಮ ಮನಸ್ಸಿಗೆ ಆನಂದವನ್ನು ಕೊಡುತ್ತದೆ. ಬೆಟ್ಟ ಗುಡ್ಡಗಳು ಸುಂದರವಾದ ಪ್ರಕೃತಿ ಹೂ, ಹಣ್ಣು ಮುಂತಾದುವುಗಳ ಸೌಂದರ್ಯಕ್ಕೆ ಬೆರಗಾಗಿ ಅದನ್ನು ಚಿತ್ರಕಲೆಯ ಮುಖಾಂತರ ವ್ಯಕ್ತಿಯು ಸುಂದರವಾಗಿ ಕಲಾಕೃತಿಯ ಮೂಲಕ ವ್ಯಕ್ತಪಡಿಸುತ್ತಾನೆ. ಆದಿ ಮಾನವನಿಂದಲೂ (ಕಾಲದಿಂದಲೂ) ಕಲಾಸೃಷ್ಟಿಯು ಆರಂಭವಾಗಿದೆ. ಆತನು ತನ್ನ ಭಾವನೆಗಳನ್ನು ಗುಹೆಗಳ ಗೋಡೆಗಳ ಮೇಲೆ, ಬಂಡೆಗಳ ಮೇಲೆ, ನಂತರ ನದಿ ದಡದ ಬಂಡೆಗಳ ಮೇಲೆ, ತನ್ನದೇ ಆದ ರೇಖಾ ಚಿತ್ರಗಳ ಮೂಲಕ ಸುಂದರವಾಗಿ ವ್ಯಕ್ತಪಡಿಸುತ್ತಿದ್ದನು. ನಂತರ

ಬಣ್ಣಗಳನ್ನು ಪ್ರಕೃತಿಯಲ್ಲಿ ಸಿಗುವ ಗಿಡ ಮರಗಳ ತೊಗಟೆ, ಮಣ್ಣು, ಹಣ್ಣುಗಳು, ಸೊಪ್ಪು, ಮೊದಲಾದವುಗಳನ್ನು ಉಪಯೋಗಿಸಿಕೊಂಡು ಬಣ್ಣವನ್ನು ತಯಾರಿಸಿಕೊಂಡು ಅದನ್ನು ತನ್ನ ಕಲಾಕೃತಿಗೆ ಲೇಪನವನ್ನು ಮಾಡುತ್ತಿದ್ದನು. ಈ ರೀತಿಯ ಬಿತ್ತಿಚಿತ್ರಗಳನ್ನು ನಾವು ಈಗಲೂ ಸಹ ಗುಹಾಂತರ ದೇವಾಲಯಗಳಲ್ಲಿ ಕಾಣಬಹುದು ಮತ್ತು ಅಚಿದು, ಮಣ್ಣು, ಶಿಲೆ, ಮರ, ಮುಂತಾದವುಗಳ ಮೇಲೆ ಮುದ್ರಣದ ಮುಖಾಂತರ ತಮ್ಮ ಕಲೆಯನ್ನು ವ್ಯಕ್ತಪಡಿಸುತ್ತಿದ್ದರು ಅದನ್ನು ನಾವು ಈಗಲೂ ಕಾಣಬಹುದು. ಆದಿಮಾನವರು ಗುಹೆಗಳಲ್ಲಿ ಬಂಡೆಗಳ ಮೇಲೆ ಚಿತ್ರಿಸಿರುವ ಚಿತ್ರಗಳ ಮೂಲಕ ಅವನಿಗೂ ನೃತ್ಯ, ಸಂಗೀತದಲ್ಲಿ ಆಸಕ್ತಿ ಇತ್ತು ಎಂದು ತಿಳಿದುಬರುತ್ತದೆ. ನಮ್ಮ ಅಕ್ರೈಲಿಕ್ ಹಾಗೂ ಇತರ ಖಂಡಗಳಲ್ಲಿ ಅಲ್ಲಿಯ ಜನರು ತಮ್ಮದೇ ಆದ ರೀತಿಯಲ್ಲಿ ಬೇರೆ ಬೇರೆ ಶೈಲಿಗಳಲ್ಲಿ ಕಲೆಯನ್ನು ವ್ಯಕ್ತಪಡಿಸುತ್ತಿದ್ದರು. ಗ್ರೀಕ್ ಜನರು ರೂಡಿಸಿ ಬೆಳಸಿಕೊಂಡು ಬಂದಿದ್ದ ವಾಸ್ತುಶಿಲ್ಪ, ಸಂಗೀತ ಇತ್ಯಾದಿ ಜನರ ಮೇಲೆ ಪ್ರಭಾವ ಬೀರಲಾರಂಭಿಸಿದವು ನಂತರದಲ್ಲಿ ಇಟಲಿಯ ಚಿತ್ರಕಲೆ ಡ್ರಲೋಪಿನ ಚಿತ್ರಕಲೆ ಬೆಳವಣಿಗೆಗೆ ಸಹಾಯವಾಗ ತೊಡಗಿದವು. ಇದೇ ರೀತಿ ಬೇರೆ ಬೇರೆ ಶೈಲಿಯ ಸಂಗೀತ, ಚಿತ್ರಕಲೆ, ನೃತ್ಯ, ಏಷ್ಯಾಖಂಡದ ಬೇರೆ ಬೇರೆ ದೇಶ ವಿದೇಶಗಳ ಮೇಲೂ ಪ್ರಭಾವವನ್ನು ಬೀರಿಲಾರಂಬಿಸಿದವು.

ಮಾನವನು ತನ್ನ ಮನಸ್ಸಿನಲ್ಲಿ ಬರುವ ಭಾವನೆಗಳನ್ನು ಜನರಿಗೆ ಚ್ಚುಗೆಯಾಗುವಂತೆ ತನ್ನದೇ ಆದ ಶೈಲಿಯಲ್ಲಿ ವಿವಿಧ ರೀತಿಯ ಕಲೆಯ ಮುಖಾಂತರ ವ್ಯಕ್ತಪಡಿಸುತ್ತಾ ಜನರ ಮೆಚ್ಚುಗೆಗೆ ಪಾತ್ರವಾಗುತ್ತಾನೆ. ನಮ್ಮ ದಕ್ಷಿಣ ಭಾರತದಲ್ಲಿ ವಿವಿಧ ರೀತಿಯ ಕಲಾಕೃತಿಗಳು, ಕಲಾ ಮಾಧ್ಯಮವನ್ನು ನಾವೂ ಈಗಲೂ ಕಾಣಬಹುದು. ರಾಜ ಮನೆತನದಿಂದಲೂ ಈ ಕಲಾಸೇವಯು ನಡೆಯುತ್ತಲೇ ಬಂದಿದೆ ಉದಾಹರಣೆಗೆ ರಾಜ ರವಿವರ್ಮ ಆತನ ಕಲಾಕೃತಿಯು ಮೈಸೂರಿನ ಜಗ್ನಮೋಹನ ಅರಮನೆಯಲ್ಲಿ ನಾವು ಈಗಲೂ ಕಾಣಬಹುದು. ಮೈಸೂರು ಮತ್ತು ತಂಜಾವೂರು ಶೈಲಿಯ ಕಲಾಕೃತಿಗಳನ್ನು ಕೂಡ ನಾವು ಕಂಡು ಮನಸ್ಸಿಗೆ ಸಂತೋಷ ಪಡಬಹುದು.

ಜಲವರ್ಣ, ತೈಲವರ್ಣ, ಅಕ್ರೈಲಿಕ್, ಪೋಸ್ಟರ್ ಕಲರ್ ಹೀಗೆ ವಿವಿಧ ರೀತಿಯ ಮಾದ್ಯಮಗಳ ಮೂಲಕ ತನ್ನ ಕಲೆಯನ್ನು ಕಲಾವಿದನು ವ್ಯಕ್ತಪಡಿಸುತ್ತಾನೆ. ಪಾಶ್ಚ್ಯಾತ್ಯರು ಕೂಡ ಅವರದೇ ಆದ ಶೈಲಿಯಲ್ಲಿ ಕಲಾ ನೈಪುಣ್ಯದಿಂದ ಕಲಾಕೃತಿಯನ್ನು ಚಿತ್ರಿಸಿ ಜಗತ್ಪ್ರಸಿದ್ಧಿ ಪಡೆದಿದ್ದಾರೆ. ಮಾನಸಿಕ ರೋಗದಿಂದ ಬಳಲುತ್ತಿರುವವರೂ ಕೂಡ ಬಣ್ಣಗಳ ಚಿಕಿತ್ಸೆಯ ಮೂಲಕ ಗುಣಮುಖರಾಗುತ್ತಿದ್ದಾರೆ. ಹೀಗೆ ಕಲೆಯು ನಮ್ಮ ಪ್ರಪಂಚದಾದ್ಯಾಂತ ಅದರದ್ದೇ ಆದ ಮಹತ್ವನ್ನು ಪಡೆದಿದೆ.

Category:Arts and Crafts



ProfileImg

Written by Ashwini B

0 Followers

0 Following