ಸುಮಾರು ಹದಿನೈದು ವರ್ಷಗಳ ಹಿಂದೆ ನಾಡೋಜ ಅಮೃತ ಸೋಮೇಶ್ವರರು ಒಮ್ಮೆ ಮಾತಿನ ನಡುವೆ “ಪುಣಿಚಿತ್ತಾಯರಿಗೆ ಎಲ್ಲಿ ಹೋದರೂ ಪ್ರಾಚೀನ ತುಳು ಗ್ರಂಥಗಳ ಹಸ್ತ ಪ್ರತಿ ಕಣ್ಣಿಗೆ ಬೀಳುತ್ತದೆ ಹಾಗೆಯೇ ನಿಮಗೂ ಎಲ್ಲಿ ಹೋದರೂ ಸ್ಥಳೀಯ ದೈವಗಳು ಕಾಣಿಸಿಕೊಂಡು ತಮ್ಮ ಕಥೆಯನ್ನು ಹೇಳುತ್ತವೆನಿಮಗೆ ದೈವಗಳು ಒಲಿದಿವೆ ನಿಮ್ಮ ಕೆಲಸ ಮುಂದುವರಿಸಿ.ಇದು ತುಳು ಸಂಸ್ಕೃತಿ ಗೆ ಒಂದು ದೊಡ್ಡ ಕೊಡುಗೆ ಆಗುತ್ತದೆ” ಎಂದಿದ್ದರು . ಅವರಿಗೆ ನನ್ನ ಬಗ್ಗೆ ಬಹಳ ಪ್ರೀತಿ ಅಭಿಮಾನ ಹಾಗಾಗಿ ಅವರಿಂದ ಈ ಮಾತು ಬಂದಿತ್ತು .
ಅವರ ಈ ಮಾತು ನನಗೆ ನೆನಪಾದದ್ದು ಈವತ್ತು .
ಕಳೆದ ವಾರ ಕಡಂಬಾರು ಮೂಲದ ಈಗ ಮುಂ ೈ ಯಲ್ಲಿ ನೆಲೆಸಿರುವ ಸಂ ತೋಷ್ ಎಂಬವರು ನನ್ನ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ ತಗೊಂಡಿದ್ದರು ಈವತ್ತು ಫೋನ್ ಮಾಡಿ "ನಾನು ಕಡಂಬಾರು ದೇವಾಲಯದ ನೀವು ಹೇಳಿದ ಅಯ್ಯರ್ ಬಂಟೆರ್ ದೈವಗಳ ಕಲ್ಲಿನ ಎದುರು ನೂರಾರು ಬಾರಿ ಓಡಾಡಿದ್ದೇನೆ.ಆದರೂ ಆ ಕಲ್ಲುಗಳು ದೈವಿಕವಾದವುಗಳು,ಅಲ್ಲಿ ಅಯ್ಯೆರ್ ಬಂಟೆರ್ ಎಂಬ ದೈವಗಳಿಗೆ ಆರಾಧನೆ ಇದೆ ಎಂದು ಗೊತ್ತೇ ಇರಲಿ ಲ್ಲ . ನಿಮಗೆ ನಿಜಕ್ಕೂ ದೈವಾನುಗ್ರಹ ಇದೆ "ಎಂದರು
ನಾನು ಬಹಳ ವಾಸ್ತವಿಕ ನೆಲೆಯಲ್ಲಿ ಆಲೋಚನೆ ಮಾಡುವವಳು.ಆದರೂ ಯಾ ುದೇ ಸಂಘ ಸಂಸ್ಥೆಗಳ ಯೂನ ವರ್ಸಿಟಿ ಗಳ ಬೆಂಬಲ ಅನುದಾನವಿಲ್ಲದೆ ಏಕಾಂ ಿಯಾಗಿ ಓರ್ವ ಮಹಿಳೆ ಗೆ1253 ದೈವಗಳ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವೇ?ಇದು ಖಂಡಿತ ದೈವ ದೇವರುಗಳ ಅನುಗ್ರಹ ಎಂದು ನನಗೂ ಕೆಲವೊಮ್ಮೆ ನನಗೂ ಅನಿಸ್ತಿದೆ
2015 ರಲ್ಲಿ ನನ್ನ ಅತ್ತೆಯವರ ವರ್ಷಾಂತವನ್ನು ನಾವು ಕಡಂಬಾರು ದೇವಾಲಯದ ಹಾಲ್ ನ ಲ್ಲಿ ಮಾಡಿದ್ದೆವು.
ಆ ತನಕ ನಾನು ಕಡಂಬಾರು ದೇವಾಲಯಕ್ಕೆ ಹೋಗಿರಲಿಲ್ಲ
ನಾನು ಅಲ್ಲಿ ಪ್ರವೇಶ ಮಾಡುವಾಗಲೇ ಈ ಕಲ್ಲುಗಳನ್ನು ನೋಡಿದೆ.ಏನೋ ದೈವಿಕ ಶಕ್ತಿಯ ಸೆಳೆತದ ಅನುಭವ ಆಯಿತು.ಮತ್ತೆ ಮತ್ತೆ ಆ ಕಲ್ಲುಗಳನ್ನು ನೋಡಿ ಒಳಗಡೆ ಹೋದೆ.
ಅಲ್ಲಿ ಅತ್ತೆಯವರ ಕಾರ್ಯ ನಡೆಯುವಾಗಲೂ ಈ ಕಲ್ಲುಗಳು ನನ್ನನ್ನು ಸೆಳೆಯುತ್ತಿದ್ದವು
ನಡುವೆ ಎದ್ದು ಮತ್ತೆ ಈ ಕಲ್ಲುಗಳ ಸಮೀಪ ಬಂದು ನೋಡಿದೆ.
ಸೂಕ್ಷ್ಮವಾಗಿ ನೋಡಿದಾಗ ಅಲ್ಲಿ ಹೂ ಅಕ್ಷತೆ ಹಾಕಿ ಪೂಜಿಸಿರುವಂತೆ ಕಾಣಿಸಿತು
ಅತ್ತೆ ಯವರ ಕಾರ್ಯ ಮುಗಿಸಿ ಹೊರಡುವಾಗ ದೇವಾಲಯದ ಮುಖ್ಯ ಸ್ಥರಾದ ಸೂರ್ಯ ನಾರಾಯಣ ಅಯ್ಯ ಅವರಲ್ಲಿ ಈ ಕಲ್ಲುಗಳು ಇಲ್ಲಿ ಯಾಕೆ ಇವೆ ಎಂದು ಕೇಳಿದೆ
ಅದು ದೈವಗಳ ಕಲ್ಲು.ಎಂದರು.ಆಗ ನಾನು ಈ ದೈವಗಳ ಹೆಸರು ಇನ್ನಿತರ ಮಾಹಿತಿಗಳನ್ನು ಕೇಳಿದೆ
ಅಯ್ಯೆರ್ ಬಂಟೆರ್ ಕಡಂಬಾರಿನ ಅಯ್ಯನವರ ಕುಟುಂಬ ದ ಈರ್ವರು ಹಿರಿಯರು.ಕದಂಬ ಅರಸರ ಸಂತತಿಯ ಜರ್ವ ಅರಸ ಕಡಂಬಾರಿನಲ್ಲಿ ನೆಲೆಸಿದ್ದರು.ಕದಂಬ ಅರಸರ ಕಾರಣದಿಂದ ಈ ಪ್ರದೇಶಕ್ಕ ಕಡಂಬಾರು ಎಂಬ ಹೆಸರು ಬಂದಿದೆ
ಇಲ್ಲಿನ ಸೂರ್ಯ ನಾರಾಯಣ ಅಯ್ಯ ಅವರ ಹಿರಿಯರು ಈ ಕದಂಬ ಅರಸನಿಗೆ ಸೇನಾಪತಿಗಳಾಗಿದ್ದರು.ಅರಸರು ಬ್ರಾಹ್ಮಣರನ್ನು ಅಯ್ಯ ಎಂದು ಸಂಬೋಧಿಸುತ್ತಿದ್ದರು.ಹಾಗಾಗಿ ಈ ಬ್ರಾಹ್ಮಣ ಮನೆಯವರಿಗೆ ಅಯ್ಯ ಎಂಬ ಉಪನಾಮ ಬಂತು
ಕದಂಬ ಅರಸನ ಬಹಳ ಆಪ್ತರಾದ ಈ ಈರ್ವರು ಬ್ರಾಹ್ಮಣ ಸೇನಾಪತಿಗಳು ಕಾಲಾಂತರದಲ್ಲಿ ದೈವತ್ವವನ್ನು ಪಡೆದು ಆರಾಧಿಸಲ್ಪಡುತ್ತಾರೆ.ಇವರನ್ನು ಬ್ರಾಹ್ಮಣ ನೀರರು ಎಂಬ ಅರ್ಥದಲ್ಲಿ ಅಯ್ಯೆರ್ ಬಂಟೆರ್ ಎಂದು ಕರೆದು ಆರಾಧಿಸುತ್ತಾರೆ
ಪ್ರಸ್ತುತ ಇಲ್ಲಿ ಕೋಲ ನೀಡುವುದಿಲ್ಲ.ತಂಬುಲ ನೀಡಿ ಆರಾಧನೆ ಮಾಡುತ್ತಾರೆ
ಇಲ್ಲಿನ ಕಡಂಬಾರು ವಿಷ್ಣು ಮೂರ್ತಿ ದೇವಾಲಯ ಬಹಳ ಪ್ರಸಿದ್ಧ ವಾದುದು.ಇಲ್ಲಿಗೆ ಲಕ್ಷಗಟ್ಟಲೆ ಜನರು ನನಗಿಂತ ಮೊದಲು ಬಂದಿದ್ದಾರೆ.ಅದರಲ್ಲಿ ಹಿರಿಯ ಕಿರಿಯ ವಿದ್ವಾಂಸರು ಸೇರಿದ್ದರಾರೆ
ಆದರೂ ಈ ದೈವಗಳ ಮಾಹಿತಿ ಸಂಗ್ರಹಿಸಿ ಬರೆದವರಿಲ್ಲ.
ನನ್ನಿಂದ ಬರೆಯಿಸುವುದಕ್ಕಾಗಿ ನನ್ನ ಮೇಲೆ ಅನುಗ್ರಹ ಬೀರಿ ನನ್ನನ್ನು ಅಲ್ಲಿಗೆ ಕರೆಸಿಕೊಂಡರೇ? ತಮ್ಮ ಕಥೆಯನ್ನು ಜಗತ್ತಿಗೆ ಸಾರಲು ನನ್ನನ್ನು ಆಯ್ದುಕೊಂಡು ನನಗಾಗಿ ಕಾದರೇ ?
ಅತ್ತೆ ತೀರಿ ಹೋದ ಸಮಯದಲ್ಲಿ ನಮಗೂ ನಮ್ಮ ಮನೆಯವರಿಗೂ ವಿರೋಧ ಆಗಿ ನಾವು ವರ್ಷಾಂತಿಕವನ್ನು ಕಡಂಬಾರಿನ ಹಾಲ್ ನಲ್ಲಿ ಮಾಡಿದ್ದವು.ನಮಗೆ ರಾಜಿ ಇರುತ್ತಿದ್ದರೆ ಊರಲ್ಲಿ ಮನೆಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿತ್ತು
ನಾನು ಕಡಂಬಾರಿಗೆ ಹೋಗುತ್ತಲೇ ಇರಲಿಲ್ಲ.
ಇಂತಹ ಅನೇಕ ಅನುಭವಗಳು ನನಗಾಗಿವೆ
ದೈವ ದೇವರುಗಳ ದಯೆ ಗೆ ಪಾರವಿಲ್ಲ
ಎಲ್ಲಾದರೂ ಹೋದಾಗ ಇಂತಹ ಅಲೌಕಿಕ ಅನುಭೂತಿ ನಿಮಗೂ ಆಗಿದೆಯಾ? ದೈವಗಳ ಅಧ್ಯಯನ ಮಾಡ್ತಾ ಮಾಡ್ತಾ ನಾನು ಭ್ರಮೆಗೆ ಒಳಗಾದೆನಾ ? ನಾನು ಈ ವಿಚಾರದಲ್ಲಿ ಬಹಳ ಜಾಗ್ರತೆಯಿಂದ ಇರ್ತೇನೆ.ಎಡ್ವರ್ಡ್ ಬುಲ್ಲೋನ ಮಾನಸಿಕ ದೂರ ದ ತತ್ವವನ್ನು ಅಧ್ಯಯನ ದ ಸಮಯದಲ್ಲಿ ಸದಾ ನೆನಪಿನಲ್ಲಿ ಇರಿಸಿಕೊಳ್ಳುತ್ತೇನೆ.ಆದರೂ ಅಂತರಂಗದ ಭಾವ ಭಕ್ತಿ ಇಂತಹ ಅನುಭೂತಿಯನ್ನು ಕೊಡುತ್ತದೆಯೋ ಏನೋ ಗೊತ್ತಿಲ್ಲ..
ಕೆಲವೆಡೆ ಐವೆರ್ ಬಂಟೆರ್ ಎಂಬ ದೇವಕ್ಕೆ ಆರಾಧನೆ ಇದೆ.ಅಲ್ಲಿ ಐವರು ದೈವಗಳು ಇಲ್ಲ.ಈ ಹೆಸರು ಯಾಕೆ ಬಂದಿದೆ ಎಂಬುದಕ್ಕೆ ಸರಿಯಾದ ಉತ್ತ,ವೂ ಸಿಗುವುದಿಲ್ಲ
ಬಹುಶಃ ಈ ಈರ್ವರು ಅಯ್ಯೆರ್ ಬಂಟೆರ್ ದೈವಗಳಿಗೆ ಒಂದೇ ರೂಪದಲ್ಲಿ ಆರಾಧನೆ ನಡೆಯುತ್ತಿರ್ದು ಬೇರೆಡೆ ಪ್ರಸರಣವಾದಾಗ ಕಾಲಾಂತರದಲ್ಲಿ ಮೂಲ ಕಥಾನಕ ಕಳೆದು ಹೋಗಿ ಐವೆರ್ ಬಂಟೆರ್ ಎಂದು ಆಗಿರುವ ಸಾಧ್ಯತೆ ಇದೆ.ಅಥವಾ ಅದು ಬೇರೆ ದೈವ ಇರಲೂ ಸಾಕು .
ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆದರೆ ಹೆಚ್ಚಿನ ಮಾಹಿತಿ ಸಿಗಬಹುದು
ತುಳುನಾಡಿನಲ್ಲಿ ಅ ೇಕ ಬ್ರಾಹ್ಮಣ ಮೂಲದ ದೈವಗಳಿಗೆ ಆರಾಧನೆ ಇದೆ .
ತುಳುನಾಡಿನಲ್ಲಿ ದೈವತ್ವ ಪಡೆದು ಭೂತ ವಾಗಿ ಆರಾಧಿಸಲ್ಪಡುವುದು ಒಂದು ವಿಶಿಷ್ಟ ಸಂಸ್ಕೃತಿ .ಇಲ್ಲಿ ಭೂತತ್ವವನ್ನು ಯಾವುದೇ ಜಾತಿ ಭೇದ ಇರುವುದಿಲ್ಲ ಅಂತೆಯೇ ಧರ್ಮದ ಗಡಿ ಕೂಡಾ ಇದಕ್ಕಿಲ್ಲ .ಉಲ್ಲಾಳದಲ್ಲಿ ಭೂತ ಮಸೀದಿಗೆ ಭೇಟಿ ಕೊಡುವ ಸಂಪ್ರದಾಯ ಇದೆ. ಅದೇ ರೀತಿ ಕೆಲವೆಡೆ ಭೂತ ಮುಸ್ಲಿಂ ಕ್ರಿಸ್ಚಿ ಯನ್ ವ್ಯಕ್ತಿಗಳನ್ನು ಉದ್ದೇಶಿಸಿ ಕರೆದು ಗೌರವಿಸುವ ಪದ್ಧತಿ ಇದೆ .ತೊಕ್ಕೊಟು ಸಮೀಪ ಭೂತ “ಅಂತಂತೋನಿ “ಎಂದು ಕರೆಯುವ ಬಗ್ಗೆ ಭೂತ ಕಟ್ಟುವ ಕಲಾವಿದರಾದ ಅಪ್ಪಣ್ಣ ಅವರು ತಿಳಿಸಿದ್ದಾರ
ರಾಮ ಶೆಟ್ಟಿ ಎಂಬ ವೀರ ಶೈವ ಲಿಂಗಾಯತ ವ್ಯಕ್ತಿ ನೆತ್ತರು ಮುಗಳಿ ಎಂಬ ಭೂತವಾಗಿದ್ದಾನೆ .
ನೈದಾಲ ಪಾಂಡಿ ಕೂಡ ಮೂಲತಃ ಲಿಂಗಾಯತನಾಗಿ ಪರಿವರ್ತಿತನಾದ ರಾಜ ಕುಮಾರ . . ಅಚ್ಚುಬಂಗೇತಿ, ಅಕ್ಕಚ್ಚು ಭೂತ, ಬೊಟ್ಟಿ ಭೂತಗಳು ಮೂಲತಃ ಜೈನ ಧರ್ಮದವರಾಗಿದ್ದಾರೆ.
ಕ್ರಿಶ್ಚಿಯನ್ ತೆಯ್ಯಂಗೆ ಆರಾಧನೆ ಇರುವ ಬಗ್ಗೆ ಕೇಳು ಮಾಸ್ತರ್ ಅಗಲ್ಪಾಡಿ ಅವರು ತಿಳಿಸಿದ್ದಾರೆ . ಅಂತೆಯೇ ತುಳುನಾಡಿನ ಅನೇಕ ಮುಸ್ಲಿಂ ಮೂಲದ ವ್ಯಕ್ತಿಗಳು ದೈವತ್ವಕ್ಕೇರಿ ಆರಾಧಿಸಲ್ಪಡುತ್ತಿದ್ದಾರೆ.
ಹಾಗೆಯೇ
ಇಲ್ಲಿ ಬ್ರಾಹ್ಮಣರೂ ಭೂತವಾಗಿದ್ದಾರೆ.ಚಾಮುಂಡಿ,ಭಟ್ಟಿ ಭೂತ ,ಕಚ್ಚೆ ಭಟ್ಟ , ನಾರಳತ್ತಾಯ ಮೊದಲಾದ ಭೂತ ಗಳು ಬ್ರಾಹ್ಮಣ ಮೂಲದ ದೈವತಗಳು .
ಬ್ರಾಹ್ಮಣರುತುಳುನಾಡಿನ ಮೂಲ ನಿವಾಸಿಗಳಲ್ಲ ಆದರೂ ಇಲ್ಲಿ ದೈವತ್ವವನ್ನು ಪಡೆದು ಆರಾಧಿಸಲ್ಪಡುತ್ತಾರೆ
ತುಳುನಾಡಿನಲ್ಲಿ ಯಾರು ಯಾವಾಗ ಹೇಗೆ ಯಾಕೆ ದೈವತ್ವ ಪಡೆಯುತ್ತಾರೆ ಎಂಬುದಕ್ಕೆ ಸಿದ್ದ ಸೂತ್ರವಿಲ್ಲ.ಇಲ್ಲಿ ಎಲ್ಲ ಜಾತಿ ಸಮುದಾಯಗಳ ಜನರು ಕಾರಣಾಂತರಗಳಿಂದ ದೈವತ್ವ ಪಡೆದು ದೈವಗಳಾಗಿ ಆರಾಧಿಸಲ್ಪಡುತ್ತಿದ್ದಾರೆ.ಅನೇಕ ಬ್ರಾಹ್ಮಣರು ಕೂಡ ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ
ತುಳುನಾಡಿನಲ್ಲಿ ಯಾರು ಯಾವಾಗ ಹೇಗೆ ಯಾಕೆ ದೈವತ್ವ ಪಡೆಯುತ್ತಾರೆ ಎಂಬುದಕ್ಕೆ ಸಿದ್ದ ಸೂತ್ರವಿಲ್ಲ.ಇಲ್ಲಿ ಎಲ್ಲ ಜಾತಿ ಸಮುದಾಯಗಳ ಜನರು ಕಾರಣಾಂತರಗಳಿಂದ ದೈವತ್ವ ಪಡೆದು ದೈವಗಳಾಗಿ ಆರಾಧಿಸಲ್ಪಡುತ್ತಿದ್ದಾರೆ.ಅನೇಕ ಬ್ರಾಹ್ಮಣರು ಕೂಡ ದೈವತ್ವ ಪಡೆದು ಆರಾಧಿಸಲ್ಪಡುತ್ತಿದ್ದಾರೆ.
ನನಗೆ 68 ಬ್ರಾಹ್ಮಣ ಮೂಲದ ದೈವಗಳ ಮಾಹಿತಿ ಸಿಕ್ಕಿದ್ದು ನನ್ನ ಕರಾವಳಿಯ ಸಾವಿರದೊಂದು ದೈವಗಳು ಎಂಬ ಅಧ್ಯಯನ ಗ್ರಂಥದಲ್ಲಿ ಸಚಿತ್ರ ಮಾಹಿತಿ ನೀಡಿದ್ದೇನೆ
1 ಅಡ್ಕತ್ತಾಯ ದೈವ
2-3 ಅಯ್ಯೆರ್ ಬಂಟೆರ್
4-12 ಅಯ್ಯೆರ ಕೋಲ
13 ಇಲ್ಲತಮ್ಮ ಕುಮಾರಿ
14 ಏಳ್ನಾಡು ಗುತ್ತಿನ ದೇವಕಿಯಮ್ಮ
15ಒರಿ ಮಾಣಿ ಗುಳಿಗ
16 ಓಪೆತ್ತಿ ಮದಿಮಾಲ್
17 ಕಚ್ಚೆಭಟ್ಟ
18-19 ಕರೋಟ್ಟಿ -ಕುಮ್ಮಲುನ್ನಿ ತೆಯ್ಯಂಗಳು
20 ಕೆರೆ ಚಾಮುಂಡಿ/ ಮೂಲ ಚಾಮುಂಡಿ
21 ಕಾರಿಂಜೆತ್ತಾಯ
22 ಕಾವೂರಿನ ಬ್ರಾಂದಿ ದೈವ
23 ಗೋವಿಂದ ಧೂಮಾವತಿ ದೈವ
24 ಚೆಂಬರ್ಪುನ್ನಾಯ
25 ಚೆಂಬಿಲೋಟ್ ಭಗವತಿ ತೆಯ್ಯಂ
26 ಜಟ್ಟಿಗ ( ಚಿತ್ಪಾವನ ಮೂಲದ ದೈವ)
27 ಜತ್ತಿಂಗ
28;ನಾರಳತ್ತಾಯ
29;ನಾರಾಯಣ ಮಾಣಿಲು,ದೈಯಾರ್
30 ನೆಲ್ಲಿರಾಯ/ ಬವನ/ ಬವನೊ
31 -32 ನೆಲ್ಲೂರಾಯ- ಒರು ಬಾಣಿಯೆತ್ತಿ
33 ತಂತ್ರಿ ಗಣ
34ತೋಳಂಬಟ್ಟ
35ದೇವರ ಪೂಜಾರಿ ಪಂಜುರ್ಲಿ
36 ದೂಮ ದೈವ
37ಬಟ್ಟಿ ಭೂತ
38ಬ್ರಾಣ ಭೂತ
39ಬ್ರಾಣ್ತಿ ಭೂತ
40ಬ್ರಾಣ ತಂತ್ರಿ
41 ಬ್ರಾಹ್ಮಣತಿ ದೈವ
42 ಬ್ರಾಹ್ಮಣ ಜಕ್ಕಿಣಿ
43ಬ್ರಾಂದಿ ದೈವ
44 ಮುಚ್ಚಿಲೋಟ್ ಭಗವತಿ
45ಮುಂಡೆ ಬ್ರಾಂದಿ
46 ಮುಕಾಂಬಿ ಗುಳಿಗ/ ಅಗ್ನಿ ಚಾಮುಂಡಿ ಗುಳಿಗ
47 ಮುಂಡತ್ತಾಯ( ಕಮಲ ಶಿಲೆ)
48- 54 ಪೂಂಕಣಿ ಭಗವತಿ ಮತ್ತು ಸಹೋದರರು
55 ಬಾಲಮ್ಮ/ಬಾಲಜ್ಜಿ
56 ಬ್ರಾಣ್ತಿ ಭೂತ
57 ಬ್ರಾಣ್ತಿ ಮತ್ತು ಪೊಟ್ಟ
58 ಬೈಲಂಗಡಿಯ ಬ್ರಾಣ್ತಿ ದೈವ
59 ಮಣಿಕ್ಕಳದ ಬ್ರಾಣ ದೈವ
60-61ಬಿರಣ ಮತ್ತು ಮಾಣಿ
62 ಮಲೆಯಾಳ ಬ್ರಹ್ಮ
,63 ಮಲ್ಯಾಳ ಭಟ್ರು.
64 ಮುತ್ತಪ್ಪನ್
65 ಮೂಲಂಪೆತ್ತಮ್ಮ
66ಸತ್ಯ ಮಾಗಣ್ತಿ ದೈವ
67 ಸೀರಂಬಲತ್ತಾಯ
68 ಶಗ್ರಿತ್ತಾಯ ಪಂಜುರ್ಲಿ6
69 ಬ್ರಹ್ಮಣಂದಾರ್
ಡಾ.ಲಕ್ಷ್ಮೀ ಜಿ ಪ್ರಸಾದ್
ಆಧಾರ : ಕರಾವಳಿಯ ಸಾವಿರದೊಂದು ದೈವಗಳು-ಒಂದು ಐತಿಹಾಸಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ
ಮೊಬೈಲ್ 9480516684
ಐವೆರ್ ಬಂಟೆರ್ ನೇಮ: ಚಿತ್ರ ಕೃಪೆ: ಪರಶುರಾಮ ಸೃಷ್ಟಿ fb page