Do you have a passion for writing?Join Ayra as a Writertoday and start earning.

ಅನುಕರಣೆ ಎಂಬ ಗೀಳು

ಫ್ಯಾಶನ್

ProfileImg
30 Mar '24
4 min read


image

ಅನುಕರಣೆ ಎಂಬ ಗೀಳು
 


ತುಂಬಾ ವೇಗದ ಗತಿಯಲ್ಲಿ ಸಾಗುತ್ತಿರುವ ಈ ಯುಗದಲ್ಲಿ , ಫ್ಯಾಶನ್ ಎಂಬುವುದು ಕೂಡ ಅಷ್ಟೇ ವೇಗದ ಗತಿಯಲ್ಲಿ ಸಾಗುತ್ತಿದೆ . ಫ್ಯಾಶನ್ ಎಂಬುವುದು ಕೇವಲ ಉಡುಪುಗಳಿಗೆ ಸೀಮಿತವಾಗಿರದೆ , ಉಡುಗೆ_ ತೊಡುಗೆ, ಆಹಾರ ,  ಕೇಶ ರಚನೆ, ಮೇಕಪ್ ಅಲಂಕಾರ, ದೈನಂದಿನ ಆಚರಣೆಯಲ್ಲಿ ಆಗುವ  ಪ್ರತಿಯೊಂದು ವಿಷಯಗಳು ಈಗ ಫ್ಯಾಷನ್ ಆಗಿವೆ. ಫ್ಯಾಷನ್ ಯುವಜನತೆಯ ಮೇಲೆ ಪ್ರಭಾವ ಬೀರುತ್ತಿದೆ.ಫ್ಯಾಶನ್‌ನ ಸಕಾರಾತ್ಮಕ ಅಂಶವೆಂದರೆ ಅದು ನಮ್ಮ
ಜೀವನವನ್ನು ಉತ್ತಮಗೊಳಿಸುತ್ತದೆ. ಇದು ಫ್ಯಾಶನ್ ಬಟ್ಟೆಗಳನ್ನು ಧರಿಸಲು ಮಾತ್ರವಲ್ಲದೆ ಆಲೋಚನೆಯಲ್ಲಿ ಸ್ವತಂತ್ರವಾಗಿರಲು ಮತ್ತು ಸ್ವಾಭಿಮಾನವನ್ನು ಕಾಪಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.  ಜೊತೆಯಲ್ಲಿ , ಫ್ಯಾಷನ್ ಯುವಜನರ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಇದು ಯುವಕರ ಜೀವನದ ಮೇಲೆ ಎಷ್ಟು ಪ್ರಭಾವ ಬೀರಿದೆಯೆಂದರೆ, ವಯಸ್ಸಿನಲ್ಲಿ ಯುವಕರು ಸ್ಟೈಲ್ ಸ್ಟೇಟ್‌ಮೆಂಟ್ ಮಾಡುವಲ್ಲಿ ಹೆಚ್ಚು ಗೀಳನ್ನು ಹೊಂದುತ್ತಿದ್ದಾರೆ. 
ತಮ್ಮ ಅಧ್ಯಯನಗಳು ಮತ್ತು ಜೀವನದ ಇತರ ಪ್ರಮುಖ ಅಂಶಗಳ ಮೇಲೆ ಕೇಂದ್ರೀಕರಿಸಬೇಕಾದಾಗ, ಇಂದಿನ ಪೀಳಿಗೆಯಲ್ಲಿ ಫ್ಯಾಷನ್ ಟ್ರೆಂಡ್ ಒಂದು ಆರಾಧನೆಯಾಗಿ ಮಾರ್ಪಟ್ಟಿದೆ. ಫ್ಯಾಷನ್‌ನ ನೈಜ ಸಾರವನ್ನು ಅರ್ಥಮಾಡಿಕೊಳ್ಳದೆ  ಮಾದರಿಗಳು ಮತ್ತು ಪ್ರಸಿದ್ಧ ವ್ಯಕ್ತಿಗಳನ್ನು ಕುರುಡಾಗಿ ನಕಲಿಸಲು ಹೊರಟಿದ್ದೇವೆ.

ಜೀವನದಲ್ಲಿ ನಾವು ಯಾವಾಗಲೂ ಒಳ್ಳೆಯದಾಗಲಿ, ಕೆಟ್ಟದಾಗಲಿ , ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಂದನ್ನು ಗೊತ್ತಿದ್ದೂ ಅಥವಾ ಗೊತ್ತಿಲ್ಲದೆಯೋ ಅನುಕರಣೆ ಮಾಡುತ್ತಿರುತ್ತೇವೆ. ಈ ಅನುಕರಣೆ ಕೆಲವೊಮ್ಮೆ ಯಶಸ್ಸನ್ನು ತಂದುಕೊಡಬಹುದು, ಕೆಲವೊಮ್ಮೆ ಹಾನಿಯೂ ಆಗಬಹುದು. ನಾವು ಏನು ಮಾಡುತ್ತಿದ್ದೇವೆ , ಯಾವ ದಿಶೆಯಲ್ಲಿ ಹೋಗುತ್ತಿದ್ದೇವೆ ,  ಅಥವಾ ನಮಗೆ ಅವಶ್ಯಕತೆ ಇದೆಯಾ ? ಹೀಗೆ ಯೋಗ- ಯೋಗ್ಯ ಹಂತದಲ್ಲಿ ವಿಚಾರ ಮಾಡಿದಾಗ ನಮ್ಮ ಆತ್ಮವಿಶ್ವಾಸ - ನಮ್ಮ  ಉತ್ಸಾಹವು ಹೆಚ್ಚಾಗುತ್ತದೆ.ಅದೇ ತಪ್ಪಾಗಿ ಅರಸಿಕೊಂಡರೆ  ಉತ್ಸಾಹ ಕಡಿಮೆಯಾಗುತ್ತದೆ. ಇದರಿಂದ ಜೀವನದ ಮುಂದಿನ ಉತ್ತಮ ದಿಶೆಯು  ತಪ್ಪಿ ಹೋಗಬಹುದು.

ಫ್ಯಾಷನ್ ಪ್ರವೃತ್ತಿಗಳು ಪ್ರಾಥಮಿಕವಾಗಿ ಯಾವುದೇ ಸಮಯದಲ್ಲಿ ಸಂಸ್ಕೃತಿಯಲ್ಲಿ ಜನಪ್ರಿಯವಾಗಿರುವ ಯಾವುದನ್ನಾದರೂ ಉಲ್ಲೇಖಿಸುತ್ತವೆ. ಇದು ಉಡುಗೆ ಶೈಲಿ, ಆಹಾರ, ಸಾಹಿತ್ಯ, ಕಲೆ, ವಾಸ್ತುಶಿಲ್ಪ, ಫ್ಯಾಷನ್ ಪ್ರವೃತ್ತಿಗಳು ಮತ್ತು ಇತರ ಹಲವು ಜನಪ್ರಿಯ ಅಂಶಗಳಂತಹ ಕ್ಷೇತ್ರಗಳನ್ನು ಒಳಗೊಂಡಿರುತ್ತದೆ. ಫ್ಯಾಷನ್ ಪ್ರವೃತ್ತಿಗಳು ಸಾಮಾನ್ಯವಾಗಿ ವೇಗವಾಗಿ ಬದಲಾಗುತ್ತವೆ . ಮತ್ತು ಈ ಪ್ರವೃತ್ತಿಗಳ ಇತ್ತೀಚಿನ ಆವೃತ್ತಿಯನ್ನು ವಿವರಿಸಲು "ಫ್ಯಾಶನ್" ಅನ್ನು ಹೆಚ್ಚಾಗಿ ಬಳಸಲಾಗುತ್ತದೆ.

ಹೊಸ ಫ್ಯಾಷನ್ ಮತ್ತು ವಿಭಿನ್ನ ಫ್ಯಾಷನ್ ಪ್ರವೃತ್ತಿಗಳ ಬಗ್ಗೆ ಯೋಚಿಸುವಾಗ, ಸಮಾಜದ ಸದಸ್ಯರಿಗೆ ಒಂದು ನಿರ್ದಿಷ್ಟ ಸಂದೇಶವನ್ನು ಹೊಂದಿರುವ ಕಲ್ಪನೆಗಳ ಬಗ್ಗೆ ಜನರು ಯೋಚಿಸುತ್ತಾರೆ. ಜನರು ಒಂದು ನಿರ್ದಿಷ್ಟ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅಥವಾ ಒಂದು ನಿರ್ದಿಷ್ಟ ರೀತಿಯಲ್ಲಿ ತಮ್ಮನ್ನು ತಾವು ಪ್ರಸ್ತುತಪಡಿಸಲು ನಿರ್ದಿಷ್ಟ ಶೈಲಿಯನ್ನು ಧರಿಸಲು ಆಯ್ಕೆ ಮಾಡುತ್ತಾರೆ
ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ
ರೀಲ್ಸನ ಅನುಕರಣೆ,  ಅದರಲ್ಲಿನ ಉಡುಗೆ-ತೊಡುಗೆ, ಅದರಲ್ಲಿ ತೋರಿಸುವ ಜಾಹೀರಾತು ಹೀಗೆ ಪ್ರತಿಯೊಂದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇವೆ. ಬೆಳಗ್ಗೆ ಏಳುವಾಗಲೇ ನಮ್ಮ ಕೈಯಲ್ಲಿ ಮೊಬೈಲ್ , ಆ ಮೊಬೈಲ್ ನಲ್ಲಿ facebook ಅಥವಾ youtube ನ ಮಾಧ್ಯಮದಿಂದ ಮೊದಲು ರೀಲ್ಸನ್ನು ನೋಡುವುದು, ಈಗಿನ ಸಮಾಜದಲ್ಲಿ ಇದೊಂದು ದಿನಚರಿಯಾಗಿ ಬಿಟ್ಟಿದೆ. ಕೇವಲ ನೋಡುವುದು ಮಾತ್ರವಲ್ಲ ಪ್ರತ್ಯಕ್ಷವಾಗಿ ಕೃತಿಯಲ್ಲಿ ತರಲು ಪ್ರಯತ್ನ ಮಾಡುತ್ತಿದ್ದೇವೆ. ಇದೊಂದು ಅನುಕರಣೆಯ ಗೀಳು ಹೆಚ್ಚಾಗುತ್ತಿದೆ.

ಎಷ್ಟರಮಟ್ಟಿಗೆ ಇದು ಸಮಾಜದಲ್ಲಿ ಪ್ರಭಾವ ಬೀರುತ್ತಿದೆ ಎಂದರೆ ,ಒಮ್ಮೆ ಒಂದು ಬ್ಯೂಟಿ ಪಾರ್ಲರ್ ಗೆ ಹೋದಾಗ ಅಲ್ಲಿ ಆರನೇ ತರಗತಿಯ ಒಂದು ಹುಡುಗಿಯು ತನಗೂ ಐಬ್ರೋ ಮತ್ತು ಫೇಶಿಯಲ್ ಮಾಡಲು ಕೇಳುತ್ತಿದ್ದಳು . ಬ್ಯೂಟಿ ಪಾರ್ಲರ್ ಅವರು ನಿನಗಿನ್ನೂ ವಯಸ್ಸಾಗಿಲ್ಲಮ್ಮ ಆ ಸಮಯ ಬಂದಾಗ ಮಾಡೋಣ ,   ಎನ್ನುವಷ್ಟರಲ್ಲಿ   ಇಲ್ಲ ಇಲ್ಲ ರಿಲ್ಸ್ ಗಳಲ್ಲಿ  ನನಗಿಂತ ಸಣ್ಣ ಹುಡುಗಿಯರು ಎಷ್ಟೊಂದು ಸುಂದರ ಮತ್ತು ಮೇಕಪ್ ಮಾಡಿರುತ್ತಾರೆ. ನೀವು ಸುಮ್ಮನೆ ಹೇಳುತ್ತಿದ್ದೀರಿ ಎಂದು ಹಠ ಮಾಡತೊಡಗಿದಳು ಇದರಿಂದಲೇ ಈಗಲೇ ಮಕ್ಕಳಲ್ಲಿ ಪ್ರತಿಯೊಂದನ್ನು ಅನುಕರಣೆಯ ಮಾಡುವ  ಮತ್ತು ಸ್ಪರ್ಧಾತ್ಮಕ ಭಾವನೆಯ ಶೇಕಡವಾರು ಪ್ರಮಾಣ ಹೆಚ್ಚಾಗುವುದು ಗಮನಕ್ಕೆ ಬರುತ್ತದೆ.

ವಾಸ್ತವದಲ್ಲಿ ಈ ಸಾಮಾಜಿಕ ವಿದ್ಯಮಾನವು ಹೆಚ್ಚಿನ ಪ್ರಾಮುಖ್ಯತೆಯನ್ನು ಒಳಗೊಂಡಿರುತ್ತದೆ. ನಾವು ಯಾರೆಂದು ತೋರಿಸಲು ಮತ್ತು ದೃಶ್ಯ ಮಾಹಿತಿಯ ವಿಷಯದಲ್ಲಿ ನಮ್ಮ ವ್ಯಕ್ತಿತ್ವವನ್ನು ಬಿಂಬಿಸಲು ಕೆಲವು ರೀತಿಯಲ್ಲಿ ನಮಗೆ ಸಹಾಯ ಮಾಡುತ್ತದೆ. ಇದು ಕೆಲವು ರೀತಿಯ ಸಂವಹನವೂ ಆಗಿದೆ. 
ಫ್ಯಾಷನ್ ಎನ್ನುವುದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾವಣೆಯಾಗುತ್ತಾ ಹೋಗುತ್ತದೆ . 
ಫ್ಯಾಷನ್ ಎನ್ನುವುದು ವ್ಯಕ್ತಿಯ -ವ್ಯಕ್ತಿತ್ವ, ಹಿನ್ನೆಲೆ ಮತ್ತು ಶೈಲಿಯ ಬಗ್ಗೆ ಬಹಳಷ್ಟು ಬಹಿರಂಗಪಡಿಸುವ ಮೌಖಿಕ ಸಂವಹನ ಮಾರ್ಗವಾಗಿದೆ. ಮೊದಲು ಇದು ಶ್ರೀಮಂತರು, ಸೆಲೆಬ್ರಿಟಿಗಳು ಮತ್ತು ರಾಜಮನೆತನದವರ ಪ್ರಪಂಚವಾಗಿತ್ತು. ಆದರೆ, ಫ್ಯಾಷನ್ ಈಗ ಸಾಮಾನ್ಯರಿಗೆ ಅದರಲ್ಲೂ ಯುವಕರ ಕೈಗೆಟುಕುತ್ತಿದೆ. ಇದಲ್ಲದೆ, ಉಡುಗೆ ಫ್ಯಾಷನ್ ಕಲ್ಪನೆಗಳ ವಿಕಸನವಾಗಿದೆ, ಇದು ಒಲವು ಎಂದು  ಪ್ರಾರಂಭವಾದರೂ, ಆದರೆ ಸಮಾಜದಲ್ಲಿ ಒಂದು ಶೈಲಿಯಾಗಿ ಅಂಗೀಕರಿಸಲ್ಪಟ್ಟಿದೆಅಂಗೀಕರಿಸಲ್ಪಟ್ಟಿದೆ.

ಫ್ಯಾಶನ್ ವಿಕಸನ - ಪ್ರಪಂಚವು ಯಾವಾಗಲೂ ವಿಕಸನಗೊಳ್ಳುತ್ತಿದೆ. ಇತಿಹಾಸದಲ್ಲಿ ವಿಭಿನ್ನ ಘಟನೆಗಳು ಹೇಗೆ ಪ್ರಭಾವ ಬೀರಿವೆ ಮತ್ತು ಸಮಯದುದ್ದಕ್ಕೂ ಜನರು ಉಡುಗೆ ಮತ್ತು ನೋಟವನ್ನು ಹೇಗೆ ಬದಲಾಯಿಸಿದ್ದಾರೆ ಎಂಬುದನ್ನು ನೋಡುವುದು ಅದ್ಭುತವಾಗಿದೆ. ಹೀಗಾಗಿ, ವಿಕ್ಟೋರಿಯನ್ ಯುಗದಲ್ಲಿ ಟ್ರೆಂಡ್ ಆಗಿದ್ದ ಉದ್ದನೆಯ ಉಡುಪುಗಳು ಮತ್ತು ಮುಸುಕಿನ ಟೋಪಿಗಳನ್ನು ಮೈಕ್ರೋ ಮತ್ತು ಮಿನಿ ಉಡುಪುಗಳು ಮತ್ತು ಆಧುನಿಕ ಯುಗಕ್ಕೆ ಸಂಬಂಧಿಸಿದ ಜೀನ್ಸ್ ಸಂಸ್ಕೃತಿಯಿಂದ ಬದಲಾಯಿಸಲಾಗಿದೆ. 
1920 ರಿಂದ 1990 ರ ದಶಕದವರೆಗೆ, ಫ್ಯಾಷನ್ ಬಟ್ಟೆಯಲ್ಲಿ ಮಾತ್ರವಲ್ಲದೆ ಬಿಡಿಭಾಗಗಳು, ಪಾದರಕ್ಷೆಗಳು ಮತ್ತು ಕೇಶವಿನ್ಯಾಸಗಳಲ್ಲಿಯೂ ಬದಲಾಯಿತು. ಟೋಪಿಗಳು, ಪರ್ಸ್, ಬೂಟುಗಳು ಮತ್ತು ಪುರುಷರ ಉದ್ದನೆಯ ಟೈ ಧರಿಸುವುದು  ಸಮಯ ಸಂದರ್ಭ ಮತ್ತು ಸಂಸ್ಕೃತಿಯೊಂದಿಗೆ ನಿರಂತರವಾಗಿ ಬದಲಾಗುತ್ತಿದೆ

1920 ರಿಂದ 1940 ರ ದಶಕದಲ್ಲಿ ಸಣ್ಣ ಬಾಲಿಶ ಹೇರ್ಕಟ್ಸ್ ಜನಪ್ರಿಯವಾಗಿತ್ತು. 1960 ರ ದಶಕದಲ್ಲಿ ವಿಗ್‌ಗಳು ಹೆಚ್ಚು ಜನಪ್ರಿಯವಾಗಿದ್ದವು . ಮತ್ತು ಅದರ ನಂತರ ಕೇಶವಿನ್ಯಾಸವು ಚಿಕ್ಕದಾದ ಬಾಬ್ ಕಟ್, ನಂತರ ಮಿಡ್-ಬ್ಯಾಕ್ ಕಟ್ ಮತ್ತು ಈಗ ಉದ್ದನೆಯ ಕೂದಲಿನಿಂದ  ವಿಧವಿಧವಾಗಿ ಬದಲಾಗುತ್ತಿದೆ. 
ಫ್ಯಾಷನ್ ಕೇವಲ ಸ್ವ-ಅಭಿವ್ಯಕ್ತಿಗೆ ಸೀಮಿತವಾಗಿರದೆ, ಸ್ವಯಂ ಸಬಲೀಕರಣ ಮತ್ತು ಆತ್ಮವಿಶ್ವಾಸದ ಸಾಧನವಾಗಿದೆ. ಇದು ಒಂದು ನಿರ್ದಿಷ್ಟ ಅವಧಿಗೆ ಸಂಬಂಧಿಸಿದ ಮಾನವ ಚಟುವಟಿಕೆಯ ಸಂಪೂರ್ಣ ಚಿತ್ರಣವನ್ನು ಒಳಗೊಂಡಿದೆ .
ಹದಿಹರೆಯದವರ ಮೇಲೆ ಫ್ಯಾಷನ್‌ನ  ಪ್ರಭಾವದ ಅನುಕರಣೆಯ ಗೀಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.  ಹದಿಹರೆಯದವರು ತಮ್ಮ ಉಡುಪಿನ ಬಗ್ಗೆ ಹೆಚ್ಚು ಜಾಗೃತರಾಗಿರುತ್ತಾರೆ;  ಆದರೂ ನಮ್ಮನ್ನು ಅದು ಯಾವುದೇ ಮಟ್ಟಕ್ಕೆ ಕೂಡ ಕೊಂಡೊಯ್ಯಬಹುದು ಇದನ್ನು ಗಮನಿಸಬೇಕಾದ ವಿಷಯ.
ಆದ್ದರಿಂದ  ನಮಗೆ ಸೂಕ್ತವಾದದನ್ನು ಧರಿಸುವುದರ ನಡುವೆ ಸಮತೋಲನವನ್ನು ಸಾಧಿಸುವುದು ಅಗತ್ಯವಾಗಿದೆ. ನಿಜವಾದ ಫ್ಯಾಷನ್ ನಾವು ಧರಿಸುವ ವರ್ತನೆಯೇ ಹೊರತು ಟ್ರೆಂಡಿ ಬಟ್ಟೆ ಮತ್ತು ಪರಿಕರಗಳಲ್ಲ ಎಂದು ಯುವ ಪೀಳಿಗೆ ಅರ್ಥಮಾಡಿಕೊಳ್ಳಬೇಕು. ಪ್ರತಿಯೊಂದನ್ನು ಅನುಕರಣೆ ಮಾಡಲು ಇತಿಮಿತಿಗಳಿರುತ್ತವೆ.
ಅನುಕರಣೆಯನ್ನೇ ಗೀಳು ಮಾಡಿಕೊಂಡರೆ ನಮ್ಮ ವ್ಯಕ್ತಿತ್ವವನ್ನು ಕಳೆದುಕೊಳ್ಳಬೇಕಾಗುತ್ತದೆ.

ವೇಗದ ಗತಿಯಲ್ಲಿ ಬದಲಾಗುತ್ತಿರುವ ವರ್ತಮಾನಗಳ ಸರಿ -ತಪ್ಪು, ಗಮನಿಸದೆ ಹೊಂದಿಕೊಂಡರೆ,  ಭವಿಷ್ಯದಲ್ಲಿ ಚಿಂತಿಸಬೇಕಾಗುತ್ತದೆ,  ಆಗ ನಮ್ಮ ಕೈಯಲ್ಲಿ ಸಮಯವೂ ಇರುವುದಿಲ್ಲ.

Category : Fashion


ProfileImg

Written by Sheela Nagaraj Mestha