ಅಗೋಚರ
ತಂದೆಯ ಬರ್ತಡೇನ ಮೊದಲೇ ಎಲ್ರು ಡಿಸೈಡ್ ಮಾಡಿದ ಹಾಗೆ ಮನೆಲ್ಲೇ ಕೇಕ್ ರೆಡಿ ಆಗಿತ್ತು, ಹಾಗೆ ಒಂದೆರಡು ಸ್ವೀಟ್, ಮತ್ತೆ ಪಾಯಸ ಮಾಡಿದ್ರು, ಎಲ್ರು ಸೇರಿ ಸೋಮಶೇಖರ್ಗೆ ಕೇಕ್ ಕಟ್ ಮಾಡಲು ಹೇಳಿ ಹ್ಯಾಪಿ ಬರ್ತ್ಡೇ ಅಂತ ವಿಶ್ ಮಾಡಿದ್ರು. ಮತ್ತೆ ಅಶೋಕ್ ಹೇಳಿದ ತಂದೆ ಅಲ್ಲಿ ಅಪ್ಪ ನಿಮ್ಮ ಇಷ್ಟದ ಆಟ ಆಡ್ಬೇಕು, ಕ್ಯಾರಂ, plz ಅಂತ ಹೇಳಿ ಅಪ್ಪ, ಮಗ ಆಟಕ್ಕೆ ಇಳಿದ್ರು,
ಭಾನು ಅಶೋಕ್ಗೆ ಸಪೋರ್ಟ್ ಮಾಡಿದ್ರೆ, ಲಕ್ಷ್ಮಿ ಸೋಮಶೇಖರ್ ಪಾರ್ಟಿ ಆಗಿದ್ಲು. ಕ್ಯಾರಂ ಕಾಯಿನ್ ಹಿಡಿದು ಲಾಸ್ಟ ಹಂತಕ್ಕೆ ಬರುವಾಗ ಅಶೋಕ್ಗೆ ಆಟದಲ್ಲಿ ಗೆಲ್ಲಲು ಆಗ್ತಾನೆ ಇರ್ಲಿಲ್ಲ, ಸೋಮಶೇಖರ್ ತನ್ನ ಕಾಯಿನ್ ಹಿಡಿದು ಗುರಿ ಹಾಕುವಗನೇ ಅದೇ ಕಾಯಿನ್ ಹೋಗಿ ಹೊಡೆಯುತ್ತಿತ್ತು, ಅದು ಯಾರಿಗೂ ತೊರ್ತನೆ ಇರ್ಲಿಲ್ಲ, ಆದ್ರೆ ಸೋಮಶೇಖರ್ ಗೆ ಇದೇನು ಅಂತ ಅರ್ಥ ಆಗ್ತಾನೆ ಇರ್ಲಿಲ್ಲ. ಮತ್ತೆ ಅವನೇ ವಿನ್ ಆಗಿ ಬಿಟ್ಟ.
ಮಗನಲ್ಲಿ, ಇಲ್ಲ ಅಶೋಕ್ ನಾನು ಕಾಯಿನ್ ಹೊಡಿಲೇ ಇಲ್ಲ, ಅದಾಗೇ ಬಂದು ಬೀಳ್ತಿತ್ತು, ಅಂದಾಗ ಅಶೋಕ್ ಗಟ್ಟಿಯಾಗಿ ನಕ್ಕು, ಅಪ್ಪ ಅರವತ್ತು ವರ್ಷಕ್ಕೆ ಅರಳು ಮರಳು ಅಂತಾರೆ ನಿಮಗೆ ಈವಾಗನೇ ಶುರು ಆಗಿದ್ಯಾ, ನಾವೆಲ್ಲ ನೋಡತಾ ಇದ್ದಿವಿ ನೀವೇ ಹೊಡಿತಾ ಇದ್ದೀರಿ, ಎನಿ ವೆ ಚನ್ನಾಗಿ ಆಡಿದ್ರಿ. ಅಂತ ಹೇಳಿದಾಗ
ಭಾನು ಬಂದು, ok.. ಆಡಿದ್ದು ಆಗಿದೆ, ಬನ್ನಿ ಊಟಕ್ಕೆ ಅಂತ ಹೇಳಿ ಊಟಕ್ಕೆ ರೆಡಿ ಮಾಡಿದಳು.
ಎಲ್ರು, ಊಟ ಮಾಡಿ, ಮಲಗಲು ರೆಡಿ ಆದ್ರೂ... ಸೋಮಶೇಖರ್ ಇಡೀ ರಾತ್ರಿ ನಿದ್ರೆ ಬಾರದೆ ಆಚೆ ಈಚೆ ಹೋಗ್ತಾನೆ ಇದ್ದ. ಹೊರಗಿಂದ ಏನೋ ಕಿಟಕಿ ಹತ್ತಿರ ಹೋದಂತೆ ಬಾಸ ಆಯಿತು, ಅದನ್ನ ನೋಡಿ ಸೋಮಶೇಖರ್ ಮನೆ ಇಂದ ವೇಗವಾಗಿ ಹೋದ, ಅಲ್ಲಿ ಯಾರು ಇರಲಿಲ್ಲ, ಪಕ್ಕದ ಹಿತ್ತಲಲ್ಲಿ ಬ್ಯಾಟರಿ ಹಿಡಿದುಕೊಂಡು ಹೋದ, ಆದ್ರೆ ಯಾರು ಇರಲಿಲ್ಲ ಅಲ್ಲಿ ಭಾನು ಸಿಕ್ಕಿದ ಕ್ಯಾಮರಾ ಪುನಃ ಅವನ ಕೈಗೆ ಸಿಕ್ತು, ಅದನ್ನ ಹಾಗೆ ಹಿಡಿದು ಒಳಗೆ ಬಂದನು, ಹೆಂಡತಿಗೆ ತಿಳಿಯದಂತೆ ಇಟ್ಟನು, ಮತ್ತೆ ಹೋಗಿ ಮಲಗಿದ ಆದರೂ ನಿದ್ರೆ ಕಣ್ಣು ಹತ್ತಲೇ ಇಲ್ಲ, ಆ ಕ್ಯಾಮರಾದಲ್ಲಿ ಏನಿದೆ, ನೋಡಲೇಬೇಕು ಅಂತ ಅದನ್ನ ತೆಗೆದುಕೊಂಡು ಅದನ್ನ ಓಪನ್ ಮಾಡಿದ ಅದೇ ವಿಚಿತ್ರ ಸನ್ನಿವೇಶ ಇತ್ತು....
ಬೆಳ್ಗೆ ಆಯಿತು, ಎಂದಿನಂತೆ ಭಾನು ಎದ್ದು ಅತ್ತೆಯ ರೂಮ್ಗೆ ಬಂದು ಕಾಫಿ ಕೊಟ್ಟು, ಮಾವ ಎಲ್ಲಿ ಅಂದಾಗ ಅವಳು ಗೊತ್ತಿಲ್ಲಾ ಮೋಸ್ಟ್ಲಿ ವಾಕಿಂಗ್ ಹೋಗಿರ್ಬೇಕು ಅಂದಾಗ ಭಾನು ಇಲ್ಲ ಅತ್ತೆ ನಾನು ಕಾಫಿ ಕೊಡದೆ ಹೋಗಲ್ಲ ಅವ್ರು ನೀವು ಕುಡೀರಿ ನನ್ ಕೊಟ್ಟು ಬರ್ತೀನಿ ಅಂತ ಹೊರಗೆ ಹೋದ, ಆದ್ರೆ ಅಲ್ಲಿ ಎಲ್ಲೂ ಮಾವ ಇರಲಿಲ್ಲ, ಮತ್ತೆ ಖಾಲಿ ಇದ್ದ ರೂಮ್ ಕಡೆ ಬಾಗಿಲು ಓಪನ್ಆಗಿದ್ದು ನೋಡಿದ ಭಾನು ಆ ರೂಮ್ ಕಡೆ ಹೋದಳು, ಅದೊಂದು ಕತ್ತಲು ಕೋಣೆ, ಅಲ್ಲಿ ಹೋಗಿ ನೋಡಿದಾಗ ಸೋಮಶೇಖರ್ ಬೆನ್ನು ಹಾಕಿ ಕುಳಿತಿತ್ತದ್ದ, ಹತ್ತಿರ ಬರೋ ತನಕ ಏನು ತಿಳಿಯದ ಹಾಗೆ ಕುಳಿತಿದ್ದ ಮಾವನ ನೋಡಿ
ಮಾವಯ್ಯ ಇಲ್ಲೇ, ಇದ್ದೀರಾ, ನನ್ ಎಲ್ಲಕಡೆ ಹುಡುಕಿದೆ ಗೊತ್ತಾ...ನೀವು ಇಲ್ಲಿ ಇದ್ದೀರಾ, ಮೊದ್ಲೇ ಗೊತ್ತಿದ್ದರೆ ರೂಮ್ ಕ್ಲೀನ್ ಮಾಡ್ತಿದ್ದೆ, ಇಲ್ಲಿ ಯಾಕೆ ಮಲಗಿದ್ರಿ ಅಂದಾಗ
ಅದು, ರೂಮ್ ಅಲ್ಲಿ ಶಕೆ ಆಗ್ತಿತ್ತು, ಅದ್ಕಕೆ ನಿದ್ರೆ ಬರಲಿಲ್ಲ, ಇಲ್ಲಿ ಬಂದು ಮಲಗಿದೆ ಅಷ್ಟೇ ಅಂತ್ ಮಾತು ನಿಲಿಸಿದ,
ನೀವು ವಾಕಿಂಗ್ ಹೋಗಲ್ವಾ, ಮಾವಯ್ಯ ಅಂದ ಮಾತಿಗೆ ಇಲ್ಲ ಅನ್ನೋ ಹಾಗೆ ತಲೆ ಆಡಿಸಿದ ಮಾವನ ಈ ವರ್ತನೆ ಅವ್ಳಿಗೆ ಅನುಮಾನ ತಂದಿತ್ತು. ಏನು ಹೇಳದೆ ಕಾಫಿ ಇಟ್ಟು ಅಲ್ಲಿಂದ ಹೋದಳು.
ಅಡುಗೆ ಮನೇಲಿ ತರಕಾರಿ ಹೇಚ್ಚುತ್ತ, ಮಾವ ಯಾಕೆ ವಂತರ ಮಾತಾಡಿದ್ರು ಅವರ ಸ್ವರ ಬೇರೇನೇ ಕೇಳ್ತಿತ್ತು, ಮತ್ತೆ ಮಾತಲ್ಲಿ ಸ್ಪಷ್ಟ ಇರ್ಲಿಲ್ಲ ಅಂತ ಮನಸಲ್ಲಿ ಏನೋ ಭಯ. ಅತ್ತೆ ಬಂದು ಕರೆದರೂ ಕೆಳದಂತೆ ಗಾಢವಾಗಿ ಯೋಚನೆ ಅಲ್ಲಿ ಮುಳುಗಿ ಹೋದ ಸೊಸೆನ ಅತ್ತೆ ಬಂದು ಎಬ್ಬಿಸಿದರು..
ಮತ್ತೆ ಏನು ಭಾನು, ತುಂಬಾ ಗಾಢವಾಗಿ ಯೋಚನೇ ಮಾಡ್ತಾ ಇದ್ಯಾ, ಈ ಸಂದರ್ಭದಲ್ಲಿ ಯೋಚ್ನೆ ಪುರ ನಿನ್ನ ಮಗು ಮೇಲೆ ಇರ್ಬೆಕು ತಿಳಿತಾ. ಅಂತ ನಕ್ಕರು.
ಅತ್ತೆ,ಮಾವ ಎಲ್ಲಿ ಇದ್ರು ಗೊತ್ತಾ ,ಅಂದಾಗ್ ಅವ್ಳು ಹೌದ, ಅಲ್ಲಿ ಯಾಕೆ ಹೋದ್ರು, ಕೇಳ್ತೀನಿ ಇರು ಅಂತ ಹೋದಳು.
ಕತ್ತಲೆ ಕೋಣೆ ಒಂದಿಷ್ಟು ಮಾತ್ರ ಬೆಳಕು ಬರ್ತಾ ಇತ್ತು, ಲಕ್ಷ್ಮಿ ಬಂದವಳೇ ಕಿಟಕಿ ಬಾಗಿಲು ಎಲ್ಲಾ ತೆಗೆದರು, ಆಗ ಸೋಮಶೇಖರ್ ಯಾರದು, ಯಾರು ಅಂತ ಕಣ್ಣು ಮುಚ್ಚಿ ಕೂಗಿದಾಗ ಲಕ್ಷ್ಮಿ ನಾನು ರೀ ಅಂತ ಹತ್ತಿರ ಬಂದಾಗ ಕ್ಯಾಮರಾನ್ನ ಅಲ್ಲೆ ಆಚೆಗೆ ನುಕಿದ, ಇದನ್ನ ನೋಡಿದ ಲಕ್ಷ್ಮಿ ನೋಡದವಳ ಹಾಗೆ
ಈ ರೂಮ್ ಅಲ್ಲಿ ಮಲಗೋದು ಬೇಡ, ಹೊರಗೆ ಬನ್ನಿ ಅಂದಾಗ ಅವನು ಇಲ್ಲ, ನಾನು ಇಲ್ಲೇ ಇರ್ತೀನಿ, ನೀನು ಹೋಗು ಅಂತ ಹೇಳಿದ.
ಲಕ್ಷ್ಮಿ ಬಂದವಳೇ ಭಾನು, ನಿನ್ನ ಮಾವ ಆ ರೂಮಲ್ಲಿ ಆ ಕತ್ತಲು ರೂಮಲ್ಲಿ ಅದು ನಿನ್ನ ಆ ಕ್ಯಾಮರಾ ಅಲ್ಲಿ ಹೇಗೆ ಬಂತು, ಆ ದಿನ ದೂರ ಎಸೆದು ಬಂದಿದ್ದಾರೆ, ಈಗ ಹೇಗೆ ಅವರ ಕೈ ಸೇರಿತು. ನನ್ನ ನೋಡಿ ಅಡುಗಿಸಿ ಇಟ್ರು....
ವಾಕಿಂಗ್ ಹೋಗ್ತಾ ಇದ್ದ ಸೋಮಶೇಖರ್ ಇಡೀ ದಿನ ಕೋಣೆ ಲಿ ಇರ್ತ ಇದ್ದ, ಅವನ ವರ್ತನೆ ಒಮ್ಮೊಮ್ ಅತಿರೇಕ ಆಗ್ತಿತ್ತು, ಆದರೂ ಲಕ್ಷ್ಮಿ ಗಂಡನ ಸಮಸ್ಯ ಏನೆಂದು ತಿಳಿಯಲು ಮುಂದಾದಳು.
ಅಶೋಕ್ ಮತ್ತೆ ಭಾನು ಹೊಸದಾಗಿ ಬಂದ ಫಿಲಂ ನೋಡಲು ರಾತ್ರಿ ಶೋಗೆ ಹೋದ್ರು, ಲಕ್ಷ್ಮಿ, ಸೋಮಶೇಖರ್ ಹೋಗಲ್ಲ ಅಂತ ಮನೇಲಿ ಇದ್ರು.
ಆ ಕೋಣೆಗೆ ಹೋಗೋದು ಬೇಡ ಅಂದ್ರು ಕೇಳದ ಸೋಮಶೇಖರ್ ಅದೇ ರೂಮಲ್ಲಿ ಮಲಗುವ ಹಠ ಮಾಡಿ ಹೋದ.
ಲಕ್ಷ್ಮಿ ತನ್ನದೇ ಕೋಣೇಲಿ ಮಲಗಿ ಇದ್ಲು, ಮದ್ಯ ರಾತ್ರಿ ಏನೋ ಗುನು ಗುನು ಅನ್ನೋ ಶಬ್ದ, ಮನೇಲಿ ಬೇರೆ ಯಾರು ಇರಲಿಲ್ಲ, ನಿದಾನಕ್ಕೆ ಎದ್ದು ಲೈಟ್ ಆನ್ ಮಾಡಿದಳು ಕರೆಂಟ್ ಹೋಗಿತ್ತು, ನಿದಾನಕ್ಕೆ ಮೊಬೈಲ್ ಬ್ಯಾಟರಿ ಹಿಡಿದುಕೊಂಡು ಶಬ್ದ ಬಂದ ದಾರಿಗೆ ಹೊರಟಳು. ಕೋಣೆ ಅಲ್ಲಿ ಏನೋ ಶಬ್ದ ಕೇಳತೊಡಗಿತ್ತು, ಒಳಗೆ ಬಂದವಳೇ ರೀ, ಇದ್ದೀರಾ, ಅಂತ ಮೆಲ್ಲಗೆ ಬ್ಯಾಟರಿ ಹಿಡಿದಳು, ಏನೋ, ಯಾರೋ ಕೂತಿರೋ ಹಾಗೆ ಚೇರ್ ಆಲೂಗಗಾಡುತ್ತ ಇತ್ತು. ಲೈಟ್ ಬಂದು ಹೋಗ್ತಾ ಇತ್ತು, ಭಯದಲ್ಲಿ ಆ ಚೇರ್ ಹತ್ತಿರ ಬಂದು ಬ್ಯಾಟರಿ ಹಿಡಿದಳು, ಆದ್ರೆ ಚೇರ್ ಮೇಲೆ ಬಿಳಿ ಬಟ್ಟೆ ಇತ್ತು, ಆದ್ರೂ ಕುರ್ಚಿ ಅಲುಗಾಡುತಿತ್ತು, ಅದನ್ನ ಸರಿಯಾಗಿ ನೋಡಲು ಮೇಲಿಂದ ಕೆಳಗೆ ತನಕ ಬ್ಯಾಟರಿ ಹಿಡಿದಾಗ ಚೇರ್ ಕೆಳಗೆ ರಕ್ತ ಸಿಕ್ತ ಕಾಲು ಕಾಣ್ತಾ ಇತ್ತು, ಭಯದಲ್ಲಿ ಅಮ್ಮ, ಅಂತ ಕೂಗಿ ಗಂಡನ ಕರೆದಳು, ಆಗ ಸ್ವಿಚ್ ಆನ್ ಆಗಿ ಲೈಟ್ ಬಂತು, ಎದುರಲ್ಲಿ ಸೋಮಶೇಖರ್ ನಿಂತಿದ್ದ, ಲಕ್ಷ್ಮಿ ಓಡಿ ಹೋಗಿ ಗಂಡನನ್ನು ಅಪ್ಪಿಕೊಂಡು, ರೀ ಇಲ್ಲಿ ಏನೋ ಇದೆ, ಈ ಚೇರ್ ಆಲುಗುತಿತ್ತು ಅದ್ರಲ್ಲಿ ಯಾರು ಇರಲಿಲ್ಲ, ಆದ್ರೆ ಕೆಳಗಡೆ ಒಂದು ರಕ್ತ ಹರಿತಿರೋ ಕಾಲು ಕಂಡೆ, ಇಲ್ಲಿ ಏನೋ ಸರಿ ಇಲ್ಲ, ನೀವು ಬನ್ನಿ ಹೋಗೋಣ,ಅಂತ ಹೇಳಿದಾಗ ಮತ್ತೆ ಕರೆಂಟ್ ಹೋಯಿತು, ಭಯದಲ್ಲಿ ಸೋಮಶೇಖರ್ ಗಟ್ಟಿಯಾಗಿ ಹಿಡಿದುಕೊಂಡು ಬನ್ನಿ ಹೋಗೋಣ ಅಂತ ಹೇಳಿದಾಗ ಪುನಃ ಲೈಟ್ ಆನ್ ಆಯಿತು, ಗಂಡನ ಮುಖ ನೋಡದೆ ಗಟ್ಟಿಯಾಗಿ ಹಿಡಿದಿದ್ದ ಲಕ್ಷ್ಮಿಗೆ ನೆಲದ ಮೇಲೆ ರಕ್ತ ಹರಿಯೋದನ್ನ ನೋಡಿ, ರೀ ಅಲ್ನೋಡಿ ರಕ್ತ ಅಂತ ಕೆಳಗೆ ನೋಡಿ ಹೇಳಿದಾಗ, ಸೋಮಶೇಖರ್ ಗಟ್ಟಿಯಾಗಿ ನಕ್ಕ, ಆಗ ಲಕ್ಷ್ಮಿ ಅವನ ಮುಖ ನೋಡಿದಾಗ ಅವನ ಮುಖದಿಂದ ಕೆಳಗಿನ ವರೆಗೂ ರಕ್ತ ಒಂದೊಂದು ಹುಂಡು ಬೀಳ್ತಾನೆ ಇತ್ತು, ಅಮ್ಮ ಅಂತ ಅಲ್ಲಿಂದ ಓಡಲು ಮುಂದಾದಾಗ ಅವನು ಅವಳ ಕಾಲಿನ, ಬಾಯಿನ ಸ್ವಾದಿನ ತಪ್ಪು ಅಂತೇ ಮಾಡಿದ, ಅವಳು ಅಲ್ಲೇ ಬಿದ್ದಳು.
ಮತ್ತೆ ಅಶೋಕ್, ಬಾನುಗೆ ಕಾಲ್ ಮಾಡಿ, ಬೇಗ ಮನೆಗೆ ಬನ್ನಿ, ಅಂತ ಹೇಳಿದಕ್ಕೆ ಅವಸರ ದಲ್ಲಿ ಮನೆಗೆ ಬಂದು ನೋಡಿದ್ರೆ ತಾಯಿ ಹೀಗೆ ಆಗಿದ್ಲು, ಹಾಸ್ಪಿಟಲ್ ಅಡ್ಮಿಟ್ ಮಾಡಿದನು. ಹೋಗುವಾಗ ಏನೋ ಹೇಳುವಂತೆ ಸನ್ನೆ ಮಾಡಿದ ಆದ್ರೂ ಏನು ತಿಳಿಯದೆ ಅಶೋಕ್, ಕಣ್ಣೀರು ಸುರಿಸಿದ, ಡಾಕ್ಟರ್ ಒಳಗಡೇ ಕರೆದುಕೊಂಡು ಹೋದರು, ಭಾನು, ಅಶೋಕ್ ಬಂದಿದ್ರು ಹಾಸ್ಪಿಟಲ್ಗೆ...
ಡಾಕ್ಟ್ರ್ ಬಂದು ಏನು ಮಾಡ್ಲಿಕ್ ಆಗಲ್ಲ, ಬಿದ್ದು ತುಂಬಾ ಹೊತ್ತು ಆಗಿದೆ, ಬೇರೆ ದಾರಿ ಇಲ್ಲ, ಇರೋ ತನಕ ಹೀಗೆ ಇರ್ತಾರೆ, ಅಂತ ಹೇಳಿ ಕಳಿಸಿಕೊಟ್ರು...
ಮನೇಲಿ ಅತ್ತೆನ್ ನೋಡುವ ಕೆಲಸ ಭಾನು ಮಾಡಿದ್ರು ಆಗಾಗ ಸೋಮಶೇಖರ್ ರೂಮ್ಗೆ ಬರ್ತಿದ್ದ, ಅವ್ನ ನೋಡಿ ಭಯದಲ್ಲಿ ಇರೋದ ನೋಡಿ ಅವಳಿಗೆ ಅನುಮಾನ ಬರುತ್ತೆ.....
ಮುಂದುವರೆಯುವುದು..........