ಅಗೋಚರ
ಡಾಕ್ಟ್ರ್ ಬಂದು ಏನು ಮಾಡ್ಲಿಕ್ ಆಗಲ್ಲ, ಬಿದ್ದು ತುಂಬಾ ಹೊತ್ತು ಆಗಿದೆ, ಬೇರೆ ದಾರಿ ಇಲ್ಲ, ಇರೋ ತನಕ ಹೀಗೆ ಇರ್ತಾರೆ, ಅಂತ ಹೇಳಿ ಕಳಿಸಿಕೊಟ್ರು...
ಮನೇಲಿ ಅತ್ತೆನ್ ನೋಡುವ ಕೆಲಸ ಭಾನು ಮಾಡಿದ್ರು ಆಗಾಗ ಸೋಮಶೇಖರ್ ರೂಮ್ಗೆ ಬರ್ತಿದ್ದ, ಅವ್ನ ನೋಡಿ ಭಯದಲ್ಲಿ ಇರೋದ ನೋಡಿ ಅವಳಿಗೆ ಅನುಮಾನ ಬರುತ್ತೆ.....
****************************
ಸೋಮಶೇಖರ್ ಭಾನು ಹತ್ತಿರ, ಲಕ್ಷ್ಮಿ ನಾ ನನ್ ನೋಡ್ಕೊಳ್ತೀನಿ ನಂಗೆ ಕಾಫಿ ತಂದು ಕೊಡು ಅಂತ ಹೇಳಿದಾಗ ಲಕ್ಷ್ಮಿ, ಬೇಡ ಅನ್ನೋ ಹಾಗೆ ಭಾನು ನಾ ನೋಡಿದಳು, ಆದ್ರೂ ಮಾವನ ಮಾತಿಗೆ ಬೆಲೆ ಕೊಟ್ಟು ಅಡುಗೆ ಮನೆಗೆ ಹೋದಳು.
ಸೋಮಶೇಖರ್ ಒಮ್ಮೆ ಲಕ್ಷ್ಮಿನಾ ನೋಡಿ, ಕಣ್ಣು ಕೆಂಪು ಮಾಡಿ, ಹತ್ತಿರ ಹೋದ, ಅವನ ರೂಪ ನೋಡಿ ಅವಳಿಗೆ ಭಯ ಆಯಿತು, ಅವನು ಹತ್ತಿರ ಬಂದ ಹಾಗೆ ಕೈಲಿ ಆಗದೆ ಇದ್ರು, ಹತ್ತಿರವಿದ್ದ ಮದ್ದಿನ ಬಾಟಲಿ ಕೆಳಗೆ ಬೀಳಿಸಿ ಕಣ್ಣು ಮುಚ್ಚಿದಳು.
ಅಡುಗೆ ಮನೆ ಅಲ್ಲಿದ್ದ ಭಾನು ಶಬ್ದ ಕೇಳಿ ದಾವಿಸಿ ಬಂದಳು, ನೋಡಿದಾಗ ಸೋಮಶೇಖರ್ ಏನು ಆಗದ ಹಾಗೆ ಅದು ಭಾನು, ನಾನು ವಾಶ್ ರೂಮ್ಗೆ ಹೋಗಿದ್ದೆ, ಬರುವಾಗ ನೋಡಿದ್ರೆ ಬಾಟಲ್ ಬಿದಿತ್ತು, ಅಂದ ಆಗ ಲಕ್ಷ್ಮಿ ಬಾನುನ ಮುಖ ನೋಡಿ ಕಣ್ಣೀರು ಹಾಕಿದಳು.
ಅದನ್ನ ನೋಡಿ ಭಾನುಗು ಸಂಕಟ ಆಯಿತು, ಅತ್ತೆ ತಲೆ ಸವರುತ್ತ ಅತ್ತೆ, ನೀವು ಏನೋ ಹೇಳೋಕೆ ಟ್ರೈ ಮಾಡ್ತಾ ಇದ್ದೀರಾ, ಆದ್ರೆ ಈ ತಲೆಗೆ ಅದು ಗೋತ್ತಾಗ್ತಿಲ್ಲ ಕ್ಷಮಿಸಿ ಅಂತ ಮನಸಲ್ಲಿ ಹೇಳಿದಳು.
ರಾತ್ರಿ ಒಬ್ಳೆ ರೂಮ್ ಅಲ್ಲಿ ಕುಳಿತು ಏನೋ ಆಲೋಚನೇ ಅಲ್ಲಿ ಮಗ್ನಳಾದ ಹೆಂಡತಿನ ನೋಡಿ ಅಶೋಕ್, ಏನಿವತ್ತು ನಮ್ ಹೋಂ ಮಿನಿಸ್ಟರು ಬಾರಿ ಯೋಚ್ನೆ ಅಲ್ಲಿ ಇದ್ದಾರೆ, ಏನಂತ ಹೇಳಿದ್ರೆ ನಾವು ಸೇರಿ ಕೇಳ್ತಿವಿ ಅಂದಾಗ ಭಾನು ಏನು ಹೇಳದೆ ಊಟಕ್ಕೆ ಬನ್ನಿ ಅಂತ ಹೇಳಿ ಅಡುಗೆ ಮನೆಗೆ ಹೋದ್ಲು. ಅಶೋಕ್ ಏನಾಗಿದೆ ಇವ್ಳಗೆ ಅಂತ ಅವಳ ಬೆನ್ನ ಹಿಂದೆ ಹೋದ, ಊಟಕ್ಕೆ ಹಾಕಿ, ಅವನು ಉಂಡ ನಂತರ ಕ್ಲೀನ್ ಮಾಡಿ ಕೋಣೆಗೆ ಹೋದಳು. ಮತ್ತೆ ಏನು ಮಾತಾಡದೆ ಮಲಗಿದಾಗ, ಅಶೋಕ್ ಮತ್ತೆ ಕೇಳಿದ,
ಭಾನು, ಮೊದ್ಲು ನೀನು ಹೀಗೆ ಇರಲಿಲ್ಲ, ಈಗ ಏನು ವಿಷ್ಯ ಇದ್ರು ಹೇಳ್ತಿದ್ದೆ, ಆದ್ರೆ ಈಗ ತುಂಬಾ ಬದಲಾದೆ, ಅಷ್ಟು ದೂರ ಅದ್ನ ನಾನು ಅಂತ ಮುಖ ತಿರುಗಿಸಿದ,
ಗಂಡನ್ನ ಹತ್ತಿರ ಹೋಗಿ, ಅವನನ್ನು ತಬ್ಬಿಕೊಂಡು ಅತ್ತು ಬಿಟ್ಟಳು. ಇದನ್ನ ನೋಡಿ ಅಶೋಕ್
ಭಾನು ಏನಾಯಿತು, ಅಳ್ತಿದ್ಯ, ಏನು ಆಯಿತು, ಅಂತ ಅಲ್ಲೆ ಇದ್ದ ಮಂಚದ ಮೇಲೆ ಕೂರಿಸಿ, ಒಂದು ಲೋಟ ನೀರು ಕೊಟ್ಟು, ಈಗ ಹೇಳು..
ಅದು, ಅದು, ಅತ್ತೆ ಹುಷಾರ್ ತಪ್ಪಿದ ಮೇಲೆ ಏನೇನೊ ಸನ್ನೆ ಮಾಡಿ ಹೇಳ್ತಾರೆ, ನಂಗೆ ಅರ್ಥ ಆಗದೆ ಇದ್ದಾಗ ಕಣ್ಣೀರು ಹಾಕ್ತಾರೆ,ಮಾವನ ಜೊತೆಗೆ ಇರೋಕೆ ಭಯ ಪಡ್ತಾರೆ, ಅಂತದು ಏನಿದೆ ನಂಗೆ ಒಂದು ಗೋತ್ತಾಗ್ತಿಲ್ಲ, ಮಾವ ಮೊದ್ಲು ಇದ್ದ ಹಾಗೆ ಇಲ್ಲ, ಯಾವಾಗ್ಲೂ ಆ ಕೋಣೇಲಿ ಇರ್ತಾರೆ, ಅತ್ತೆ ಜೊತೆಗೆ ಒಮ್ಮೊಮ್ ಬಂದು ಹೋಗ್ತಾರೆ, ಅವರಿಗೂ ಏನೋ ಆಗಿದೆ, ಅತ್ತೆ ಹೇಳ್ತಿದ್ರು ಮಾವ ಒಂದು ರೀತಿ ಆಡ್ತಾರೆ, ಯಾವ್ದೋ ಮಾಟ ಮಂತ್ರ ತಾಗಿದೆ ಅಂತ, ನಂಗು ಅದೇ ಡೌಟ್ ಅಂದಾಗ ಅಶೋಕ್
ಚಿನ್ನ, ಅಮ್ಮಂಗೂ, ವಯಸ್ಸಾಯಿತು ಅವ್ರ್ ಯೋಚ್ನೆಗು ನೀನ ಯೋಚ್ನೆಗೂ ವ್ಯತ್ಯಾಸ ಇದೆ, ಅವ್ರು ಹಳೆ ಕಾಲದವ್ರು ನೀನು ಅದ್ನೇಲ್ಲ ನಂಬುತ್ತಿಯ, ಅಪ್ಪ ಚನ್ನಾಗಿ ಇದ್ದಾರೆ,ನನ್ನ ಜೊತೆಗೆ ನಾರ್ಮಲ್ ಆಗಿದ್ದಾರೆ, ಮೊದ್ಲಿನ್ದಲು ಹಾಗೆ ಒಬ್ರೇ ಇರ್ಬೇಕು ಅನ್ನೋ ಆಸೆ ಅವ್ರ್ಗೆ ನೀನು ಅದ್ನ್ ತಪ್ಪಾಗಿ ತಿಳ್ಕೊಂಡು, ಯೋಚ್ನೆ ಮಾಡ್ತಾ, ಹೊಟ್ಟೇಲಿ ಇರೋ ಮಗುಗು ತೊಂದ್ರೆ ಕೊಡ್ತಾ ಇದ್ದಿಯಾ, ಅಮ್ಮನ ಒಳ್ಳೆ ಡಾಕ್ಟ್ರ್ಗೆ ತೋರ್ಸಿ, ಹುಷಾರ್ ಮಾಡೋ ಜವಾಬ್ದಾರಿ ನಂದು, ಸರಿನಾ ಈಗ ಮಲಗು..
ಅಮ್ಮನ ನೋಡಿ ಬರ್ತೀನಿ, ಅಂತ ಅಶೋಕ್ ಹೊರಟ, ರೂಮಲ್ಲಿ ಅಮ್ಮ ಒಬ್ರೇ ಮಲಗಿ ಇದ್ರು, ಅಮ್ಮ ಹೇಗಿದ್ದೀಯ, ಅಳ್ಬೇಡ ಆದಷ್ಟು ಬೇಗ ಒಳ್ಳೆ ಡಾಕ್ಟ್ರ್ಗೆ ತೋರಿಸ್ತೀನಿ, ಹಾಗೆ ಈ ಮನೆ ನಮ್ಮ ಹೆಸ್ರೇಗೆ ಆಗ್ತಿದೆ, ಇನ್ನು 2ತಿಂಗಳಲ್ಲಿ, ನೋಡತಾ ಇರು, ಅಷ್ಟ್ರಲ್ಲಿ ನೀನು ಹುಷಾರಾಗ್ತೀಯ, ಈಗ ಮಲಗು ಅಂತ ಹೇಳಿ ಕೋಣೆ ಇಂದ ಹೊರಗೆ ನೆಡೆದ...
ಸ್ವಲ್ಪ ಪ್ರಶಾಂತ್ವಾದ ಸಮಯದಲ್ಲಿ ಜೋರಾಗೆ ಮಳೆ, ಗುಡುಗು ಬಂದಿತ್ತು,ಕರೆಂಟ್ ಕೂಡ ಹೋಯಿತು, ಬಾಗಿಲು ಬಡ ಬಡ ಅನ್ನೋ ಶಬ್ದ, ದೂರದಲ್ಲಿ ಎಲ್ಲೊ ನಾಯಿ ಬೊಗಳಿದ ಹಾಗೆ, ಹೊರಗಡೆ ಯಾರೋ ಹೋದ ಹಾಗೆ ಮತ್ತೆ ಬಾಗಿಲ ಹತ್ತಿರ ಏನೋ ಬಂದು ನಿಂತ ಹಾಗೆ ಬಾಸಾವಾಯ್ತು, ಲಕ್ಷ್ಮಿ ಒಮ್ಮೆಲೇ ಹೆದರಿದಳು , ಆ ಅಕ್ರತಿ ಹತ್ತಿರಾನೆ ಬರುತ್ತಾ ಇತ್ತು, ಸಡನ್ ಕರೆಂಟ್ ಬಂತು ಸೋಮಶೇಖರ್ ಹತ್ತಿರ ಬಂದು ಅದು ಹೇಗೆ ನಿನ್ನ ಮಗ ನನ್ನ ಮನೆ ತಗೊಳ್ತಾನೆ ನೋಡ್ತೀನಿ ಅಂತ ಅವಳನ ನೆಲಕ್ಕೆ ಬೀಳಿಸಿತು, ಶಬ್ದ ಕೇಳಿ ಅಶೋಕ್ ರೂಮ್ಗೆ ಬಂದ, ತಾಯಿ ಬಿದ್ದಿರೋದನ್ನ ನೋಡಿ ಅಮ್ಮ ಅಂತ ಅಪ್ಪನಾ ಕರೆದ, ಆದ್ರೂ ಅವ್ರು ಬರಲಿಲ್ಲ ಮತ್ತೆ ತಾನೇ ಎದ್ದು ಮಂಚದ ಮೇಲೆ ಮಲಗಿಸಿ, ಪೆಟ್ ಆಯಿತಾ ಅಂತ ಕೇಳಿ ಸಮಾಧಾನ ಮಾಡಿ ಅಲ್ಲಿಂದ ಹೋದ.
ಅಪ್ಪ, ನಾಳೆ ಅಥವಾ ನಾಡಿದ್ದು ಈ ಮನೆ ಪ್ರಾಪರ್ಟಿ ವಿಷ್ಯಕ್ಕೆ ಮನೆಗೆ ಬರ್ತಾರೆ, ಬಂದ್ರೆ ಇನ್ಫಾರ್ಮಶನ್ ಕೊಡಿ, ಆದಷ್ಟು ಬೇಗ ಈ ಜಾಗ ನಮ್ ಹೆಸ್ರೇಗೆ ಬಂದ್ರೆ ಈ ಮನೆನ್ ಅಳಿದು ಹೊಸ ಮನೆ ಮಾಡೋಣ ಅಂತ ಹೇಳಿದಕ್ಕೆ ತಲೆ ಆಡಿಸಿದ.
ಈ ಮನೇನ ಹೇಗೆ ನಿಮ್ಮ್ ಹೆಸ್ರೇಗೆ ಮಾಡ್ಕೊಳ್ತಿಯಾ, ನೋಡ್ತೀನಿ ಅಂತ ಹೇಳಿದಾ
ಕ್ಯಾಮರಾ ಹಿಡಿದುಕೊಂಡು ನೋಡುತ್ತಾ ಕುಳಿತ ಮಾವನನ ನೋಡಿ ಭಾನು ಕಕ್ಕಬಿಕ್ಕಿ ಆದಳು. ಆದ್ರೂ ತಿಳಿಯದಂತೆ ಅವನ ಎದುರು ನಾರ್ಮಲ್ ಅಗೆ ಇದ್ಲು.ಸೋಮಶೇಖರ್ ಹಾ ಯಾವಾಗ ಬಂದೆ ಕೊಡು ಅಂತ ಕಾಫಿ ತಗೊಂಡು ಕುಡಿದ ಹೀಗೆ ಹೇಳಿ ಅಲ್ಲಿಂದ್ ಸಿದ ಹೋಗಿಯೇ ಬಿಟ್ಟ. ಅತ್ತೆ ರೂಮ್ಗೆ ಹೋದಾಗ ಅವ್ಳು ಕೂಡ ಕ್ಯಾಮರಾ ಅನ್ನೋದನ್ನ ಕೇಳಿದದ್ದರಿಂದ ಅದ್ರಲ್ಲಿ ಏನೋ ಇರ್ಬೇಕು ಅನ್ನೋದು ದೃಢ ಆಯಿತು.
ಮನೆಗೆ ಸಂಬಂಧ ಪಟ್ಟವರು ಬಂದು ಮಾರು ಬಗ್ಗೆ ಹೇಳಿ ಇನ್ನೇರೆಡು ತಿಂಗಳು ಎಲ್ಲಾ ರೆಡಿ ಆಗುತ್ತೇ, ಮತ್ತೆ ಬೇರೆ ಮನೆ ಮಾಡಿ ಇದನ್ನ ರೇಡಿ ಮಾಡ್ಸೋವರೆಗೂ ಅಂತ ಹೇಳಿದರು. ಜಾಗದ ವಿಷ್ಯ ಇನ್ನೇನು ಸ್ವಲ್ಪ ದಿನದಲ್ಲಿ ಮುಗಿಬೇಕು ಅನ್ನೋ ಆಗ ಅಶೋಕ್ ಕೆಲ್ಸದಿಂದ ತೆಗೆದು ಹಾಕಿದರೂ. ಪಾಪ ಮನೆ ಖರ್ಚು, ನಡೆಸೋದು ಕಷ್ಟ ಆಗ್ತಾ ಬಂತು.ಹೆಂಡ್ತಿಗೆ ಸುಳ್ಳು ಹೇಳಿ ಕೆಲ್ಸಕ್ಕೆ ಹೋಗ್ತೀನಿ ಅಂತ ರೋಡ್ ಅಲೆದು ಬರ್ತಾ ಇದ್ದ,.
ಮುಂದುವರೆಯುವುದು......
0 Followers
0 Following