ಅಗೋಚರ
ಅಜ್ಜಿ, ಅಜ್ಜಿ, ಎಲ್ಲಿ ಇದ್ದೀರಾ? ಅಂತ ಗಾಬರಿ ಅಲ್ಲಿ ಬಂದ ಗೌರಿನಾ ನೋಡಿ, ಪಾರು
ಏನಾಯಿತು, ಗೌರಿ..... ಮಾತಾಡು,ಇರು ಅಜ್ಜಿನ ಕರೀತೀನಿ...
ಜೆಲ್ಲೂ ಬಡಿಯುತ್ತ ಬಂದ್ ಅಜ್ಜಿನ ನೋಡಿ, ಗೌರಿ
ಅಜ್ಜಿ, ಬಂದ್ರ, ಅವತ್ತು ನನ್ನ ಮಗುನ್ನ, ಕಾಪಾಡಿದ್ರಿ, ಇವತ್ತು, ಇವತ್ತು ನನ್ನ ಮಗುನ್ನ ಕಾಪಾಡ್ತೀರಾ ಅನ್ನೋ ನಿರೀಕ್ಷೆ ಇಂದ ಬಂದಿದೀನಿ, ನನ್ ಮಗುನ ಕಾಪಾಡ್ತೀರಾ,ಅಂತ ಕಾಲಿಗೆ ಬಿದ್ದಳು. ಸಂಜು ಕೂಡ ಕೈ ಮುಗಿದು, ಹೌದು, ನನ್ ಮಗುನ ಉಳಿಸ್ಕೊಡಿ ಅಂದ..
ಪಾರು , ಜೊಯೆಷರ್ ಮನೆಗೆ ಹೋಗ್ಬೇಕು, ಬೇಗ ಏನಾದ್ರು ವ್ಯವಸ್ಥೆ ಮಾಡು, ಅಂದಾಗ ಪಾರು ಅಜ್ಜಿನ ಅಲ್ಲಿಗೆ ಹೋಗಲು ವ್ಯವಸ್ಥೆ ಮಾಡಿ ಕಳಿಸಿದಳು. ಪಾರು ನೀನು ಇಲ್ಲೇ ಇರು, ಅಲ್ಲಿ ಏನೆ ಕಂಡರೂ, ನೀನು ನಮಗೆ ಸೂಚನೇ ಕೊಡ್ಬೇಕು ಅಂತ ಗೌರಿ ಸಂಜು ಜೊತೆಗೆ ಹೋದರು.
ಅದೊಂದು ಓಣೆ ಅಲ್ಲಿ ಕಾಲು ದಾರೀಲಿ ಕಾರ್ ಹೊರಟಿತ್ತು, ಗೌರಿ ಕಣ್ಣಲಿ ಕಣ್ಣೀರು ಹರೀತಾನೆ ಇತ್ತು, ಕಾರ್ ಒಂದು ದಟ್ಟವದಾ ಮನೆ ಮುಂದೆ ನಿಂತಿತ್ತು, ಅಲ್ಲಿ, ಇಲ್ಲಿ ಯಾರು ಇಲ್ಲ, ನಿಶಬ್ದ ಮೌನ ಮನೆ, ಮೂವರು ಒಳಗೆ ಹೋದರು, ಯಾರೋ ವ್ಯಕ್ತಿ ನಮ್ಮನ ನೋಡಿ, ಒಳಗಡೆ ಹೋದ, ಸ್ವಲ್ಪ ಹೊತ್ತಿಗೆ ಒಂದು ವಿಭೂತಿದಾರ ಹೊರಗೆ ಬಂದು, ಅವರ ಮುಂದೆ ಕುಳಿತ
ಆಗ ಅಜ್ಜಿನ ನೋಡಿ, ನಿನ್ನೇನೆ ಹೇಳಿದ್ರಿ, ಅಲ್ವಾ ಅದಕ್ಕೆ ಎಲ್ಲಾ ತಯಾರಿ ಆಗಿದೆ, ನೀವೇನು ಯೋಚನೇ ಮಾಡ್ಬೇಡಿ ಅಂದಾಗ ಗೌರಿ , ನಿನ್ನೇನೆ ಗೋತ್ತಿತ್ತ, ಹಾಗಾದ್ರೆ ನನ್ನ ಮಗಳು ಈ ಸ್ಥಿತಿಗೆ ಬರ್ತಾಳೆ ಅಂತ ನಿಮಗೆ ಗೊತ್ತಿದ್ದರು , ಸುಮ್ನೆ ಇದ್ರ, ಅಜ್ಜಿ ಮಾತಾಡಿ, ಏನು ಆದ್ರೂ ಹೇಳಿ, ಹಾಗಾದ್ರೆ ನನ್ ಮಗಳು, ನನ್ ಕೈಗೆ ಸಿಗಲ್ಲ, ಅಂತ ಆಯಿತು, ನೀವೆಲ್ಲ ಮೋಸಗಾರು, ನನ್ನ ಮಗಳನ್ನ ಬೇಕಂತೆ ಸಾಯಿಸೋಕೆ ಹಿಗೇಲ್ಲ ಮಾಡ್ತಾ ಇದ್ದೀರಾ, ಅಂತ ಅತ್ತಳು. ಆಗ ಅಜ್ಜಿ
ಸಾಕು ಸುಮ್ನಿರು, ಅಂತ ಜೋರಾಗಿ ಕೂಗಿದಳು....
ಆ ಮನೆ ಬಗ್ಗೆ ತಿಳಿದೇ ತಕೊಂಡಿದ್ದು, ಮೊದ್ಲೇ ತಪ್ಪು, ಆ ಮನೇಲಿ ಏನೋ ನರಳಾಟಾ ಕೇಳಿಯೂ ಅಲ್ಲೇ ಇರ್ತೀನಿ ಅಂತ ಅಲ್ಲೇ ವಾಸ ಹುಡಿದ್ದು 2ನೇ ತಪ್ಪು, ಆ ಮಗುನ ರಕ್ಷಣೆಗೆ ಹಾಕಿದ ಸರನ ಕಳ್ಕೊಂಡು ಈಗ ನನ್ನ ಮಗು ಈ ಸ್ಥಿತಿಗೆ ತಂದದ್ದು ನಾವು ಅಂತೀಯಾ, ಹೇಳು ನಂದ್ ತಪ್ಪ, ಹೌದು ವಿಷ್ಯ ಮುಚ್ಚಿಟ್ಟೆ, ಆ ಮನೇಲಿ ಏನೋ ಸಮಸ್ಯೆ ಇದೆ ಅಂತ ಹೇಳ್ಬೇಕಿತ್ತು, ಯಾಕ್ ಹೇಳಿಲ್ಲಾ ಅಂತಾ ಗೋತ್ತಾ ನಿಂಗೆ..
ಹೇಳಿದ ಮರು ಕ್ಷಣನೇ, ನೀನು ನಿನ್ನ ಗಂಡ, ಮಗು ಅದೇ ಕ್ಷಣ ರಕ್ತ ಕಾರಿ ಸಾಯ್ತಿದ್ರಿ, ಅದ್ಕೊಸ್ಕರ ಹೇಳಿಲ್ಲ,...ನೀನು ಏಣಿಸಿದಷ್ಟು ಸುಲಭ ಇಲ್ಲ, ಅಲ್ಲಿನ್ನ ಸ್ಥಿತಿ,
ಆಗ ಸಂಜು, ಹಾಗಾದ್ರೆ ನಮ್ ಮಗುನಾ, ನಾವು ಹೇಗ್ ಕಾಪಾಡೊದು..
ಅದ್ಕೆ ಅಂತಾನೇ, ಇಲ್ಲಿ ಕರೆದುಕೊಂಡು ಬಂದದ್ದು, ಇವ್ರು ವೆಂಕಟ ಜೊಯೆಷರು, ಈ ಮನೆ ಸಮಸ್ಯೆನ ಎಷ್ಟೋ ಸಲ ಬಗೆ ಹರಿಸಲು ಹೋಗಿ ತನ್ನ ಹೆಂಡತಿ, ಮಕ್ಕಳ್ನ ಕಳೆದುಕೊಂಡವರು, ಆದ್ರೂ ಇದ್ರಿಂದಾ ಕುಗ್ಗಲಿಲ್ಲ, ಅಷ್ಟೊಂದು ದೊಡ್ಡ ವ್ಯಕ್ತಿ ಇವರು, ನಿಮ್ಮ ಮಗುನ ಖಂಡಿತ ಕಾಪಾಡ್ತಾರೆ, ಧೈರ್ಯ ದಿಂದ ಇರಿ ಅಷ್ಟೇ...
ಹಾಗಾದ್ರೆ ಆ ಮನೇಲಿ ಏನಿದೆ, ನಮ್ಮ ಮಗುನ ನಮಗೆ ಸಿಗೋ ಹಾಗೆ ಮಾಡಿ ನಾವು ಊರೇ ಬಿಟ್ಟು ಹೋಗ್ತಿವಿ, ಇನ್ನು ಈ ಕಡೆ ಬರಲ್ಲ, ಅಂದಾಗ ಅಜ್ಜಿ ನಕ್ಕು ಆ ಸಮಯ ಮೀರಿ ಆಗಿದೆ, ಇನ್ನು ನೀನು ಎಲ್ಲೂ ಹೋಗೋಕೆ ಅಗಲ್ಲ,
ಅಂದ್ರೆ, ಏನು, ನಂಗೆ ಅರ್ಥ ಆಗ್ತಿಲ..
ನೀನು ಯಾವತ್ತೂ ಆ ಮಂತ್ರ ಹಾಕಿದ ಬಾಗಿಲು ತೆಗೆದಿಯೋ ಅಲ್ಲಿಂದ ಸಮಸ್ಯೆ ಪ್ರಾರಂಭ ಆಯಿತು.ಅಲ್ವಾ ಅಷ್ಟರ ತನಕ ಖಾಲಿ ಕಿರುಚಟಾ ಕೇಳ್ತಿತ್ತು. ನೀನು ಬಾಗಿಲು ತೆಗೆದುಕೊಂಡು ಒಳಗು ಹೋದೆ, ಇನ್ನು ನೀನು ಬಿಟ್ಟು ಹೋದರು, ಅದು ನಿನ್ನ ಬಿಡಲ್ಲ...
ಆಗ ಗೌರಿ, ಇದಕ್ಕೆಲ್ಲ ನೀನೇ ಕಾರಣ ಸಂಜು, ನನ್ ಅವತ್ತೇ ಹೇಳ್ದೆ, ಇಲ್ಲೇನೋ ಇದೆ, ಅಂತ ನೀನು ನಿನ್ನ ಭ್ರಮೆ ಅಂದೇ, ನಿಜಾನಾ ಭ್ರಮೆ ಅಂತ ನಾನೆ ಒಪ್ಕೋಳೋಕ್ಕೆ ನನ್ನನ್ಮ ನಾನೆ ಆ ಭ್ರಮೆಗೆ ಹಾಕಿಕೊಂಡೆ, ಆ ನರಳಾಟಾ ಬಂದಾಗ ಆ ರೂಮ್ ಕಡೆ ಹೋದ್ರೆ ಅದು ಭ್ರಮೆ ನಾ ನಿಜಾನಾ ಗೊತ್ತಾಗುತ್ತೆ ಅಂತ ಬಾಗಿಲು ತೆಗೆದೇ... ಅಂತ ಬಿಕ್ಕಿ ಬಿಕ್ಕಿ ಅತ್ತಳು.
ಆಗ ಜೋಯಿಷ್ಯರು, ಭಯಪಡೋದು ಬೇಡ, ನಿಮ್ಮ ಮಗಳು ಸುರಕ್ಷಿತವಾಗಿ ಬರ್ತಾಳೆ, ನನ್ನ ನಂಬಿ ಅಷ್ಟೇ...
ಇದಕ್ಕಿಂತ ಮುಂಚೆ ಐದು ಸಂಸಾರ ಅಲ್ಲಿಗೆ ಬಂದಿತ್ತು, ಎಲ್ಲರನ್ನ ಅಲ್ಲಿಂದ ಸುರಕ್ಷವಾಗಿ ಕಳಿಸಿದ್ದೆ, ಆದ್ರೆ ಯಾವಾಗಲು ಅವರು ಇಷ್ಟು ಸಮಯ ನಿಲ್ಲಲು ಬಿಡದ ಆ ಅಗೋಚರ ಶಕ್ತಿ ನಿಮ್ಮನ್ನ ಇಷ್ಟು ದಿನ ಹೇಗೆ ಈರೀಸಿಕೊಂಡಿತ್ತು, ಅಂತ ನಾನು ನನ್ನ ಮಂತ್ರ ಶಕ್ತಿ ಇಂದ ನೋಡಿದೆ, ಅದರಲ್ಲಿ ತಿಳೀತು ನನಗೆ..
ಗೌರಿಗೆ ದೈವ ಶಕ್ತಿ ಬಲವಿದೆ, ಆ ಶಕ್ತಿ ನಿನ್ನ ಹಿಂದೇನೆ ಬಂದಿದೆ, ಅದು ಬೇರೆ ಯಾರು ಅಲ್ಲ, ನೀವು ಆ ಮನೆಗೆ ಸೇರಿಸಿಕೊಂಡ ನಾಯಿ , ಅದು ಬೇರೆ ಯಾರು ಅಲ್ಲ ನಿಮ್ಮನ್ನ್ ಕಾಪಾಡಲು ಬಂದ ದೈವ, ಆದರೆ ಆ ಮನೆ ಬಾಗಿಲು ತೆಗೆದು ದೊಡ್ಡ ತಪ್ಪು ಮಾಡಿಬಿಟ್ಟೆ,ತೊಂದ್ರೆ ಇಲ್ಲ, ನಿನ್ನ ನಂಬಿದ ತಾಯಿ ಕೈ ಬಿಡಲ್ಲ, ಆ ಅಗೋಚರ ಶಕ್ತಿ ನಾಶಕ್ಕಾಗಿಯೇ ನೀನು ಈ ಮನೆ ಸೇರಿದ್ದು, ಸ್ವಲ್ಪ ಕಷ್ಟ ಆದ್ರೂ ಒಳ್ಳೇದೇ ಆಗುತ್ತೆ, ನಾನಿನ್ನು ಪೂಜೆಗೆ ಹೋಗ್ತೀನಿ, ಎಲ್ಲಾ ಸಿದ್ದವಾಗಿ ಹೋಗಬೇಕು ಅಂತ ಒಳಗೆ ನಡೆದರು.
ಸಂಜು, ಅಂತದ್ದು ಏನಿದೆ, ಅಲ್ಲಿ ಈಗ ಆದ್ರೂ ಹೇಳಿ, ಅಂತ 🙏 ಕೈ ಮುಗಿದರು..
ಆ ಮನೇಲಿ ಒಂದು ಪ್ರೇತಾತ್ಮ ಇದೆ, ಇದುವರೆಗೂ ಆ ಮನೇಗೆ ಬಂದವರನ್ನ ಒಂದೊಂದು ಸಮಸ್ಯ ಕೊಟ್ಟು ಅಲ್ಲಿಂದ ಓಡಿಸಿದೆ.
ಹೊಸದಾಗಿ ಮದ್ವೆ ಆದಾ ನವದಂಪತಿಗಳು ಅಲ್ಲಿ ವಾಸವಾಗಿದ್ರು, ಬಂದ ಎರೆಡು ದಿನ ಚನ್ನಾಗಿ ಇದ್ರು ಮತ್ತೆ ಮತ್ತೆ, ಏನೇನೊ ಶಬ್ದ, ಏನೇನು ಬಂದು ಹೋಗೋದನ್ನ ನೋಡಿದ ಅವ್ರು ಅಲ್ಲಿಂದ ಕಾಲು ಕಿತ್ತಿದರು.
ಹೀಗೆ 2ದಿನಕ್ಕೆ ಓಡೋಗುತಿದ್ದ ಜನರ ಮದ್ಯ, ಒಂದು ಗರ್ಭಿಣಿ ಆ ಮನೆ ಸೇರಿದ್ದಳು. ಅವಳು ಅವಳ ಗಂಡ ಅತ್ತೆ ಮಾವ ಇದ್ರು, ಆ ದಿನ......
ನೀರು ಸೆದಲು ಹೋದಾಗ ಹಿಂದಿನಿಂದ ಯಾರೋ ಬಂದು ತಳ್ಳಿದಂತೆ ಆಯಿತು, ಅಮ್ಮ ಅಂತ ಹಿಂದೆ ತಿರುಗಿದರೆ ಯಾರು ಇಲ್ಲ, ಮುಖ ಬೆವರಿ ಹೋಗಿತ್ತು, ತುಂಬಿದ ಗರ್ಭಿಣಿ ಮದ್ಯಾನ ಆಗಿತ್ತು, ಆಚೆ ಈಚೆ ನೋಡಿ ಮೆಲ್ಲನೆ ಹಿಂದೆ ಹೆಜ್ಜೆ ಹಾಕಿ ಮನೆಗೆ ಓಡಿದಳು, ಆ ದಿನ ಚಳಿ ಜ್ವರ ಬಂದು ಬಿಟ್ಟು ಹಾಸಿಗೆ ಹಿಡಿದಿದ್ಳು, ಆ ದಿನ ರಾತ್ರಿ......
ಮುಂದುವರೆಯುತ್ತದೆ......