ಕಾಡುವ ಅಗೋಚರ ಭಾಗ - 3

ಅಗೋಚರ

ProfileImg
12 Jan '24
4 min read


image

   ಅಗೋಚರ
 

    ಸಂಜು, ನೀನು ಏನ್ ಮಾಡ್ತಿದ್ಯ ಇಲ್ಲಿ, ಅದು ಇಷ್ಟು ರಾತ್ರಿ ಅಲ್ಲಿ, ಬಾ ಒಳ್ಗೆ,ಅಂತ ಹೇಳಿ ಒಳಗೆ ಹೋದರು.
    ಅಲ್ಲ, ಗೌರಿ ಮಲಗು ಅಂತ ಹೇಳಿದ್ರು, ನೀನು ಎಚ್ಚರ ಆಗಿಯೇ ಇದ್ದೆ, ಅಲಾ ಹೀಗೆ ಟ್ರೇಸ್ ಮಾಡ್ಕೊಂಡು ರೆಸ್ಟ್ ತಗೊಳ್ದೆ ಇದ್ರೆ ಏನೇನೊ ಭ್ರಮೆ ಬರೋದು, ತಿಳಿತಾ ಕಣ್ಣು ಮುಚ್ಚಿ ಮಲಗು, ನೈಟ್ ಡ್ಯೂಟಿ ಮಾಡಿ ಮಾಡಿ, ಕಣ್ಣಿಗೆ ನಿದ್ರೇನೇ ಬರಲ್ಲ.
    ನಮ್ಮಿಂದ ಎಷ್ಟು ಕಷ್ಟ ಅಲ್ವಾ, ಸಂಜು ನಿಂಗೆ....
ಹಾಗ್ಯಕೆ ಅಂದ್ಕೊಳ್ತಿಯಾ, ನಿಮ್ಮನ್ ಬಿಟ್ರೆ ನಂಗೆ ಯಾರಿದ್ದಾರೆ ಹೇಳು. ಸರಿ ನೀ ಮಲಗು ಅಂತ ಹೇಳಿ ಮಲಗಿಸಿದ.

ಗೌರಿ ಒಬ್ಬಳೇ ಒಂದು ಕೊಣೇ ಕಡೆ ಹೋದಳು, ಅಲ್ಲಿ ಹೋದ ಕೂಡಲೇ ಬಾಗಿಲು ತಟ್ಟನೆ ಹಾಕಿಕೊಂಡಿತ್ತು. ಅಯ್ಯೋ ಯಾರಾದ್ರೂ ಬಾಗಿಲು ತೆಗೀರಿ ಅಂತ ಬಾಗಿಲು ಹಿಡಿದುಕೊಂಡು ಎಳೆದಳು, ಹಿಂದಿನಿಂದ ಒರಟಾದ ಕೈ ಮೈ ಮುಟ್ಟಿತು, ಹೆದರಿ ಹಿಂದೆ ತಿರುಗಿ ನೋಡಿದ್ರೆ ಯಾರು ಇಲ್ಲ, ಮತ್ತೆ ಅಲ್ಲಿಂದ ಹೇಗೆ ಹೋಗೋದು ಅಂತ ಮೆಲ್ಲಗೆ ಆಚೆ ನಡೆದಳು, ಅಲ್ಲೊಂದು ಟಿವಿ ತನ್ನಷ್ಟಕ್ಕೆ ಆನ್ ಆಯಿತು, ಅಲ್ಲೇ ಇದ್ದ ರಿಮೋಟ್ ಹಿಡಿದುಕೊಂಡು ಟಿವಿ ಆಫ್ ಮಾಡಿದಳು. ಮತ್ತೆ ಅಬ್ಬಾ ಅನ್ನುವಂತೆ ಅಲ್ಲಿಂದ ಹೋಗಬೇಕು ಅನ್ನೋವಾಗ ಪುನಃ ಟಿವಿ ಆನ್ ಆಯಿತು, ಅದ್ರಲ್ಲಿ ಏನೋ ಒಂದು ಸಮಾಧಿ ಕಾಣಿಸ್ತಿತ್ತು. ಅದನ್ನ ನೋಡಲು ಟಿವಿ ಮುಂದೆ ಕುಳಿತಳು. ಅದರಿಂದ ಯಾರೋ ಒಂದು ಕಪ್ಪು ನೆರಳು ಸಮಾಧಿ ಇಂದ ಹೊರಗೆ ಬಂದು ಕೆಂಪು ಕಣ್ಣು, ಉದ್ದಾನೆ ಬೆರಳು, ಮುಖ ಮಾತ್ರ ಕಾಣ್ತಾ ಇರಲಿಲ್ಲ. ಟಿವಿ ನಾ ದಿಟ್ಟಿಸಿ ನೋಡುತಿದ್ದ ಪ್ರಣತಿಗೆ ಏನು ಆಗ್ತಾ ಇದೆ ಅನ್ನೋದು ತಿಳಿಯಲಿಲ್ಲ. ಆ ನೆರಳು ಟಿವಿ ಇಂದ ಹೊರಗೆ ಬಂದೆ ಬಿಡ್ತು, ಗೌರಿ ಓಡಿ ಓಡಿ ಬಾಗಿಲ ಸಂದಿ ಅಲ್ಲಿ ನಿಂತಳು. ಆಗ ಅವಳ ಕುತ್ತಿಗೆ ಗಟ್ಟಿಯಾಗಿ ಹಿಡಿದುಕೊಂಡು ಬಿಟ್ಟಿತು, ಗೌರಿ ಗಟ್ಟಿಯಾಗಿ ಕೂಗಿದಳು. ಆಗ ಸಂಜು, ಏನಾಯಿತು ಗೌರಿ ಯಾಕೆ ಕೂಗಿಕೊಂಡೆ, ಅಂದಾಗಲೇ ಗೋತ್ತಾಗಿದ್ದು, ಅದು ಕನಸು ಅಂದು.ಸಂಜು ಕುಡಿಯಲು ಒಂದು ಗ್ಲಾಸ್ ನೀರು ಕೊಟ್ಟು,ಏನಾಯಿತು ಗೌರಿ ,ಕೆಟ್ಟ ಕನಸು ಬಿತ್ತ. ಜಾಸ್ತಿ ತಲೆಗೆ ಹಾಕೊಂಡ್ರೆ ಹೀಗೆ ಆಗೋದು, ನೋಡು ಇಡೀ ರಾತ್ರಿ ನನ್ ನಿದ್ರೆ ಮಾಡದೇ, ಆ ಶಬ್ದ ಬರುತ್ತಾ ನೋಡಿದೆ, ಆದ್ರೆ ನಂಗೆ ಕೇಳ್ತಾನೆ ಇಲ್ಲ, ಈ ಭೂತ, ಪ್ರೇತ ಇದೆಲ್ಲ ಸುಳ್ಳು, ನೀನು ಧೈರ್ಯದಿಂದ ಇದ್ರೆ ನಂಗೆ ನೆಮ್ಮದಿ,ಈಗ ಮಲಗು ಅಂದಾಗ ಫೋನ್ ರಿಂಗ್ ಆಯಿತು.
     ಅಯ್ಯೋ ಧಣಿ ಯಾಕ್ ಕಾಲ್ ಮಾಡ್ತಿದಾರೆ, ಫೋನ್ ರಿಸೀವ್ ಮಾಡಿದ
   ಹೆಲೋ, ಸರ್ ಹೇಳಿ, ಹಾ ಸರಿ ಸರ್, ಈಗನೇ ಬರ್ತೀನಿ, ಹಾ ಸರ್, ಸರಿ  ಸರಿ... ಅಂತ ಕಾಲ್ ಇಟ್ಟು, ಪಕ್ಕದಲ್ಲಿ ಬಿಚ್ಚಿಟ್ಟ ಡ್ರೆಸ್ ಹಾಕಿಕೊಳುತ್ತ, ಅರ್ಜೆಂಟ್ ಕೆಲಸ ಇದೆ, ಬರ್ಲಿಕ್ ಹೇಳಿದ್ರು, ಕಾಲ್ ಮಾಡ್ತೀನಿ, ಬರೋದಾದ್ರೆ ಕಾಲ್ ಮಾಡ್ತೀನಿ, ಮಗು ಜಾಗ್ರತೆ, ನೀನು ಕೂಡ ಏನೇನೊ ಆಲೋಚನೆ ಮಾಡ್ಕೊಂಡು ಕುತ್ಕೋಳ್ಬೇಡ, ಸರಿ ನಾನಿನ್ನು ಬರ್ತೀನಿ, ಬಾಗಿಲು ಗಟ್ಟಿಯಾಗಿ ಹಾಕೋ, ಬೈ ಅಂತ ಹೇಳಿ ಹೋದ.

     ಬಾಗಿಲು ಹಾಕಿ, ಗೌರಿ ಗಂಟೆ ನೋಡಿದಳು, ಆಗಷ್ಟೇ ಮುಳ್ಳು ಮೂರು ಗಂಟೆ ತೋರಿಸ್ತೀತ್ತು,ಕೋಣೆ ಕಡೆಗೆ ಹೋದವಳ್ಗೆ ಏನೋ ಶಬ್ದ ಬಂದಂತೆ ಬಾಸಾವಾಯ್ತು, ಸಂಜು ಹೇಳಿದ್ದು ನೆನಪಾಗಿ, ಧೈರ್ಯ ಮಾಡಿ, ಅದಕ್ಕೆ ಕಿವಿ ಕೊಡದೆ ಹೋಗಿ ಮಲಗಿದಳು. ನಿದ್ರೆ ಬಾರದೆ ಇದ್ರು ಕಣ್ಣು ಮುಚ್ಚಿ ಮಲಗಿದಳು. ಗಟ್ಟಿಯಾಗಿ ಅರಚುವ  ಶಬ್ದ,ಕಿವಿಯಲ್ಲಿ ಹತ್ತಿ ಇಟ್ಟು ಮಲಗಿದಳು. ಬೆಳ್ಗೆ 7 ಗಂಟೆ ಆದ್ರೂ ತಾಯಿ, ಮಗು ಎದ್ದೆ ಇರಲಿಲ್ಲ...

            ಮಗು ಅಮ್ಮನ ಎಚ್ಚರ ವಾಗುವಂತೆ ಮಾಡಿ ಬ್ರೆಷ್ ಮಾಡಲು ಹೋಗುವುದಾಗಿ ಹೇಳಿ ಬಾತ್ರೂಮ್ ಕಡೆಗೆ ಹೋಯಿತು, ಅಲ್ಲಿ ಹಲ್ಲು ಉಜ್ಜುವಾಗ, ಗ್ಲಾಸ್ ಎದುರು ಯಾರೋ ಬಂದಂತೆ ಆದದ್ದು ನೋಡಿ ಅಲ್ಲಿಂದ ಓಡೋ ರಬ್ಬಸಕ್ಕೆ ಕೊರಳ ಸರ ಹರಿದು ಹೋಯಿತು. ಅಮ್ಮ ಅಮ್ಮ ಅಲ್ಲಿ ಅಲ್ಲಿ, ಅಂತ ಎದುಸಿರು ಬಿಡೋ ಮಗುವನ್ನ ನೋಡಿ, ಅಪ್ಪಿ ಹಿಡಿದು ಬಾತ್ರೂಮ್ ಕಡೆ ಹೋಗಿ ಸುತ್ತಲೂ ನೋಡಿದಳು. ಆದ್ರೆ ಮಗು ಆ ಕಡೆ, ಈ ಕಡೆ ಕೈಯಲ್ಲಿ ತೋರಿಸ್ತಾನೆ ಇತ್ತು. ಗೌರಿ  ಅಲ್ಲಿಂದ ಮಗುನ ಎತ್ತಿಕೊಂಡು ಹೊರಗೆ ಬಂದು ತಿಂಡಿ ಮಾಡಲು ಶುರು ಮಾಡಿದಳು. ಮಗುನ ಪಕ್ಕದಲ್ಲಿ ಕೂರಿಸಿಕೊಂಡು ಅವಳಷ್ಟಕೆ ಕೆಲಸ ಮಾಡ್ತಾ ಇದ್ದಾಗ, ಬಿಸಿ ಎಣ್ಣೆ ಇದ್ದಕ್ಕಿದಂತೆ ಕೆಳಗೆ ಬಿದ್ದು ಗೌರಿ ಕಾಲಿಗೆ ಎಣ್ಣೆ ತಾಗಿತ್ತು. ಅಮ್ಮ ಅಂತ ಬೊಬ್ಬೆ ಹೊಡೆದಳು,ಮತ್ತೆ ಮೆಲ್ಲಗೆ ಹೊರಗೆ ಬಂದಳು, ಸ್ವಲ್ಪ ತಾಗಿದ್ದರಿಂದ ಸ್ವಲ್ಪ ನೋವು ಇತ್ತು,ಆದ್ರೆ ಸಹಾಯಕ್ಕೆ ಕೂಗಿದ್ರು ಯಾಕ್, ಯಾರು ಬರಲ್ಲ ಅನ್ನೋದು ಗೌರಿ ಪ್ರಶ್ನೆ ಉತ್ತರ ಸಿಗದೇ ಮನಸಲ್ಲೇ ಆಳವಾಗಿ ಕುಳಿತಿತ್ತು.

         ಪಾರು ಅಕ್ಕಾ ಪಾರು ಅಕ್ಕಾ ಕಾಲಿಗೆ ಬಿಸಿ ಎಣ್ಣೆ ತಾಗಿದೆ, ಏನಾದ್ರು ಮುಲಾಮ್ ಇದ್ಯಾ, ಅಂದಾಗ ಅವ್ರು ಮನೆ ಗೆಟ್ ಹತ್ರ ನಿಂತು, ಇದೆ ಇರು ಅಂತ ತಗೆದುಕೊಂಡು ಕಾಂಪೌಂಡ್ ಹತ್ರ ಬಂದು ನಿಂತರು, ಗೌರಿ ಬನ್ನಿ ಅಂದ್ರು ಬರಲೇ ಇಲ್ಲ, ಗೌರಿ ಕಾಲು ಕುಂಟುತ್ತಾ ಬಂದು ಮುಲಾಮ್ ಕಾಲಿಗೆ ಹಚ್ಚಿಕೊಂಡಳು.

           ಮಗು ಸ್ನಾನ ಮಾಡಲು ಬಾತ್ರೂಮ್ ಹೋಗಿತ್ತು ಆಗ ಗೌರಿ ಕೋಣೇಲಿ ಮಲಗಿದ್ಲು.ಆಗ..............

ಎಂದು ಇಲ್ಲದ ಒಂದು ದೊಡ್ಡ್ ಪಾತ್ರೆ ಅಲ್ಲಿ  ತುಂಬಾ ನೀರು ತುಂಬಿತ್ತು. ಅದನ್ನ ನೋಡಿ ಮಗು, ಅದರಲ್ಲಿ ಆಟ ಆಡಲು ನೀರಲ್ಲಿ ಕಾಲು ಇಟ್ಟು, ಅದರಲ್ಲಿ ಕುಳಿತುಕೊಂಡು, ಖುಷಿಲಿ ನೀರನ್ನ ಆಚೆ ಈಚೆ ಎರಚಲು ಶುರು ಮಾಡಿತು. ಹೊರಗಡೆ ನಾಯಿ ಜೋರಾಗಿ ಕೂಗುತ್ತಿತ್ತು, ಮಲಗಿದ್ದ ಗೌರಿ ಪಕ್ಕನೆ ಎದ್ದು ಹೊರಗೆ ಬಂದು ಮಗುವನ್ನು ಕರೆದಳು.
       ಶ್ರೇಯ, ಶ್ರೇಯ ಎಲ್ಲಿದ್ಯಾ? ಮಾತಾಡಮ್ಮ, ಅಂತ ಹುಡುಕುವಾಗ ಬಾತ್ರೂಮ್ ಬಾಗಿಲು ಒಳಗಿಂದ ಲಾಕ್ ಆಯಿತು. ಶ್ರೇಯ ನೀರಲ್ಲೇ ಆಟ ಆಡ್ತಿದ್ದಳು, ಹಿಂದಿನಿಂದ ಬಂದ ಕೈ ಆ ಮಗುನ್ನ ನೀರಲ್ಲಿ ಮುಳುಗಿಸಿತು, ಗೌರಿ ಓಡಿ ಬಂದು ಶ್ರೇಯ ಬಾಗಿಲು ತೇಗಿ, ಏನಾಗ್ತಿದೆ ಮಾತಾಡು, ಮಾತಾಡು ಅಂತ ಬಾಗಿಲು ಜೋರಾಗಿ ಬಡಿದ ಮೇಲೆ ಬಾಗಿಲು ಪಟ್ಟಕನೆ ತೆರೆಯಿತು, ಪುಟ್ಟ ಪುಟ್ಟ ಅಂತ ಗಾಬರಿ ಅಲ್ಲಿ ಒಳಗೆ ಬಂದು ನೋಡಿದಾಗ, ಮಗು ಪ್ರಜ್ಞೆ ತಪ್ಪಿ ಕೆಳಗಡೇ ಬಿದ್ದಿತ್ತು. ಅಯ್ಯೋ ಅಯ್ಯೋ ಶ್ರೇಯ, ಮಾತಾಡಮ್ಮ, ಮಾತಾಡು ಅಂತ ಮಗುನ್ನ, ಹಿಡಿದುಕೊಂಡು ಅತ್ತಳು. ಮತ್ತೆ ಮಗುನ್ನ ಎತ್ತಿಕೊಂಡು  ಪಾರಕ್ಕನ ಮನೆಗೆ ಬಂದಳು.
  ಅಕ್ಕ, ಅಕ್ಕ ಅಂತ ಗಾಬರಿ ಅಲ್ಲಿ ಕರೆದನ್ನು ನೋಡಿ ಪಾರು ಅವಸರದಲ್ಲಿ ಹೊರಗೆ ಬಂದು ನೋಡಿದಳು. ಮಗುನಾ ನೋಡಿ ಏನಾಯಿತು ಗೌರಿ , ಮಗುಗೆ,ಅಂದಾಗ ಗೊತ್ತಿಲ್ಲಾ ಅಕ್ಕಾ , ನಾ ಮಲಗಿದ್ದೆ ಅವ್ಳು ಒಬ್ಳೆ ಬಾತ್ರೂಮ್ ಹೋಗಿದ್ಲು, ಅಲ್ಲಿ ನಾ ಹೋಗಿ ನೋಡುವಾಗ ಪ್ರಜ್ಞೆ ತಪ್ಪಿತ್ತು. ಮಾತು ಆಡ್ತಿಲ್ಲ, ಕಣ್ಣು ತೆರಿತಿಲ್ಲ, ಏನು ಮಾಡುದು ಅಂತ ಇಬ್ಬರು ಒಟ್ಟಿಗೆ ಕೈ ಕಾಲು ತಿಕ್ಕಿದರು, ಗೌರಿ ಬೊಬ್ಬೆ ಹೊಡೆಯುದನ್ನ ಕೇಳಿದ ಅಜ್ಜಿ, ಜಲ್ಲೂ ಹಿಡಿದು ಹೊರಗೆ ಬಂದು, ಈಚೆಗೆ ಬನ್ನಿ,
  ಪಾರು ಹೋಗಿ ಒಂದು ಚಂಬು ನೀರು ತಕೊಂಡು ಬಾ, ಬೇಗ ಬಾ...
  ಗೌರಿ , ಮಗುನ್ನ ನಿನ್ನ ತೊಡೆಯ ಮೇಲೆ ಕೂರಿಸಿಕೋ,
  ಪಾರು , ಬಂದ್ಯಾ,...... ಹಾ ಬಂದೆ ಅಜ್ಜಿ,
  ಆ ನೀರು ಕೊಡು, ಆ ನೀರ ಒಳಗೆ ತನ್ನ ಸೀರೆ ಗಂಟಲ್ಲಿ ಇದ್ದ 1ಕಾಯಿನ್ ತೆಗೆದುಕೊಂಡು ನೀರು ಚಂಬಿಗೆ  ಹಾಕಿ, ಮಗುನಾ ಸುತ್ತ ತಿರುಗಿಸಿದಳು. ಮತ್ತೆ ತನ್ನ ಕೈಯಲ್ಲಿ ಇದ್ದ ಪ್ರಸಾದ್ವನ್ನ ಹಣೆಗೆ ಹಾಕಿ, ಮಗು ಏಳಮ್ಮ, ಅಂತ ಹೇಳಿದ ಮೇಲೆ ಮಗು ಎದ್ದು ಅಮ್ಮ, ಅಮ್ಮ ಅಂತ ಅಮ್ಮನ್ನ ಹಿಡಿದುಕೊಂಡಿತ್ತು.
  ಗೌರಿ , ಅಜ್ಜಿಗೆ 🙏 ಕೈ ಮುಗಿದು, ನನ್ನ ಮಗಳನ್ನ ಉಳಿಸಿದ್ರಿ,ಅಂತ ಅತ್ತು, ಇಲ್ಲಿ ಬಂದು ಹೋದ ಮೇಲೆ ಶ್ರೇಯ, ಧೈರ್ಯವಾಗಿ ಓಡಾಡ್ತಾ, ಹುಷಾರಾಗೆ ಇದ್ಲು, ಆದ್ರೆ ಇವತ್ತು ಹೀಗೆಲ್ಲ ಆಗೋಯಿತು. ನನ್ನ ಹಣೆಬರಹನೇ ಸರಿ ಇಲ್ಲ, ಅಂತ ಅತ್ತಾಗ.. ಅಜ್ಜಿ ಮನಸ್ಸಲಿ ಹೀಗೆ ಆಗೋಕೆ ಹೇಗೆ ಸಾಧ್ಯ, ಅಂತ ಯೋಚಿಸಿ ಮಗುವಿನ ಕೊರಳನ್ನ ನೋಡಿದಳು,
  ಅರೆ, ಮಗು ಕೊರಳಲ್ಲಿ ನಾ ಹಾಕಿದ ಸರ, ಇತ್ತು, ಎಲ್ಲಿ ಅದು, ಹಾ ಹೇಳು ಅಂತ ಜೋರಾಗಿ ಕೂಗಿದಳು. ಗೌರಿ ಹಾ ಹೌದು, ಎಲ್ಲಿ ಶ್ರೇಯ, ಅಜ್ಜಿ ಕೊಟ್ಟ ಸರ ಅಂದಾಗ ಅದು ಗೋತ್ತಿಲ್ಲ ಅಂತ ತಲೆ ಆಡಿಸಿತ್ತು.
   

ಮುಂದುವರೆಯುವುದು……..

Category:Stories



ProfileImg

Written by Sahana gadagkar