ಅಗೋಚರ
ಆಸ್ತಿ ಪುರ ನನ್ನ ಹೆಸರಲ್ಲಿ ಇದ್ದದು ತಿಳಿದ ಚಿಕ್ಕಮ್ಮ, ಆಗಾಗ ನನ್ನ ಜೊತೆಗೆ ಕೆಟ್ಟದಾಗಿ ನೆಡೆದುಕೊಳ್ಳುತ್ತಿದ್ದರು. ಆಗಲು ಏನು ಹೇಳದೆ ಸುಮ್ಮನಿದ್ದೆ, ನನ್ನ ಅಮ್ಮನ ಸಂಬಧಿಕರು ಬಂದು ಹೊಸ ಮದುಮಕ್ಕಳು, ಸ್ವಲ್ಪ ದಿನದ ಮಟ್ಟಿಗೆ ಮನೆಗೆ ಕರೆದುಕೊಂಡು ಹೋಗುತ್ತೀನಿ ಅಂತ ಹೇಳಿ ಕರೆದುಕೊಂಡು ಹೋದರು, ಅಲ್ಲಿ ನಮ್ಮ ದಾಂಪತ್ಯ ಶುರು ಆಯಿತು. ಹೀಗೆ ಸುಮಾರು ದಿನ ಆದಮೇಲೆ ಚಿಕ್ಕಮ್ಮ, ನನ್ನ ಚಿಕ್ಕಮ್ಮ ಅಲ್ಲಿಗೂ ಬಂದು ಜಗಳ ಮಾಡಿದ ಕಾರಣ ವಿಧಿ ಇಲ್ಲದೆ ಅಲ್ಲಿಂದ ಹೋಗಲೆ ಬೇಕಾಯಿತು.
ಮನೆಗೆ ಹೋದ ಮೇಲೆ ಮತ್ತೆ ನಮ್ಮಿಬರನ್ನ ಬೇರೆ ಮಾಡಿದಳು, ಆ ಸಮಯದಲ್ಲಿ ನಾನು ತಾಯಿ ಆಗೋ ಸೂಚನೆ ಕಂಡೀತು, ಚಿಕ್ಕಮ್ಮನಾ ಗಮನಕ್ಕೆ ಬಾರದಂತೆ ಆದಷ್ಟು ಪ್ರಯತ್ನ ಪಟ್ಟೆ ಆದ್ರೆ ಹೊಟ್ಟೆ ಮುಂದೆ ಬಂದ ಹಾಗೆ ಅವರಿಗೂ ತಿಳೀತು, ಆ ಮಗುನ ಎಲ್ಲಿ ಸಾಯಿಸ್ತಾರೋ ಅನ್ನೋ ಭಯ, ಅದಕ್ಕೆ ಒಮ್ಮೆ ಚಿಕ್ಕಮ್ಮನಾ ಹತ್ತೀರಾ ಹೇಳಿದೆ ನನ್ನ ಆಸ್ತಿ ಎಲ್ಲಾ ನನ್ನ ಹೆಸರಲ್ಲೇ ಇತ್ತು, ಹಾಗಾಗಿ ಅದನ್ನ ಮಗು ಹುಟ್ಟಿದ ಮೇಲೆ ನಿಮ್ಮ ಹೆಸರಿಗೆ ಬರೆದು ಇಲ್ಲಿಂದ ಹೋಗ್ತೀನಿ ಅದಕ್ಕೆ ಚಿಕ್ಕಮ್ಮ ನನ್ನ ಮುಖ ನೋಡಿ ಅಲ್ಲೇ ಇದ್ದ ನನ್ನ ತಂದೆ ಫೋಟೋ ತಂದು ಆಣೆ ಮಾಡಲು ಹೇಳಿದರು ಅವರ ಫೋಟೋ ಮುಟ್ಟಿ ಆಣೆ ಮಾಡಿದ ಮೇಲೆ ಅಲ್ಲಿಂದ ಹೋದರು.
ಮತ್ತೆ ನನ್ನ ಮಗುವಿನ ಅತ್ವ ನನ್ನ ತಂಟೆಗೆ ಬರುದು ಸ್ವಲ್ಪ ಕಡಿಮೇ ಮಾಡಿದರು, ಮತ್ತೆ ಹೆರಿಗೆ ಆಯಿತು, ಹೆಣ್ಣು ಮಗುಗೆ ಜನ್ಮ ಕೊಟ್ಟೆ, ಬಾಣಂತನಾ ಮುಗಿದ ಕೂಡಲೇ ಅಸ್ತಿ ಸಹಿ ಹಾಕು, ಲಾಯರ್ ಬರ್ತಾರೆ ಅಂತ ಸಿಡುಕಿ ಹೋದರು. ನನಗು ಈ ಅಸ್ತಿ ಪಾಸ್ತಿ ಏನು ಬೇಡ, ನನ್ನ ಗಂಡ, ಮಗು ಜೊತೆಗೆ ದೂರ ಹೋಗಿ ಬಿಟ್ಟರೆ ಸಾಕು ಅಂತ ಏನಿಸಿದ್ದೆ.
ಗೌರಿ ಲಾಯರ್ ಬಂದ್ರು, ಬೇಗ ಬಾ ಅಂತ ಹೇಳಿದಾಗ ಬಟ್ಟೆ ಪ್ಯಾಕ್ ಮಾಡಿ, ಅಲ್ಲೇ ಇಟ್ಟು ಹೊರಗೆ ಬಂದೆ, ಲಾಯರ್, ತಂದೆ ಪರಿಚಯದವರು ಹಾಗಾಗಿ ನನ್ನ ಮುಖ ನೋಡಿ ಬೇಜಾರು ಪಟ್ಟುಕೊಂಡರು. ಅಸ್ತಿ ವಿವರ ಓದಿದರೂ, ಅದರಲ್ಲಿ ಗೌರಿ ಹಾಗೂ ಅವಳ ಮಗುನ ಹೆಸರಗೆ ಆಸ್ತಿ ಅಂತಾ ಬರೆದಿದ್ದರು. ಇದನ್ನ ಕೇಳಿ ಚಿಕ್ಕಮ್ಮ ಕೋಪದಲ್ಲಿ ನನ್ನ ಮುಖ ನೋಡಿದಳು.
ಏನೆ ಆಸ್ತಿನಾ ನಿನ್ನ ಮಗಳ ಹೆಸ್ರೇಗೂ ಆ ಮುದ್ಕ ಬರೆದು ಹೋಗಿದಾನೆ, ಅದೆಲ್ಲ ನಂಗೆ ಗೋತ್ತಿಲ್ಲ ಲಾಯರ್ ಸಾಹೇಬ್ರೆ ಆಸ್ತಿ ಈಗ್ಲೇ ನನ್ನ ಹೆಸರಿಗೆ ಬರೀಬೇಕು, ಅಂದಾಗ ಲಾಯರ್ ಖಾರವಾಗಿ ನೋಡಿದರು, ಮಕ್ಳ್ ಇಲ್ಲ ಮರಿ ಇಲ್ಲ, ಆಸ್ತಿ ತಗೊಂಡು ಬೆಲ್ಲ ಹಾಕಿ ನಕ್ತಿರಾ, ಈ ವಿಲ್ ಪ್ರಕಾರ ಆ ಮಗುಗೆ ಸೈನ್ ಹಾಕ್ಲಿಕ್ ಬಾರೋ ತನಕ ನಿಮ್ಮ ಹೆಸರಿಗೆ ಏನು ಸಿಕ್ಕಲ್ಲ ಅಂತ ಅಲ್ಲಿಂದ ಹೋದರು. ಅಲ್ಲಿಂದ ನನ್ನ ಚಿಕ್ಕಮ್ಮ ನನ್ ಹಸಿ ಬಾಣಂತಿ ಅಂತ ಗೋತ್ತಿದ್ರು, ಎಲ್ಲ ಕೆಲಸ ಮಾಡುತಿದ್ರು, ಈ ಮಗು ನನ್ನ ಜೊತೇನೆ ಇರ್ಲಿ, ಇದ್ಕೆ ನಿನ್ನ ಅಗತ್ಯ ಇಲ್ಲ, ಬೇಕಿದ್ರೆ ನನ್ ಕರೀತೀನಿ,ನೀನ ಜೊತೆಗೆ ಇದ್ರೆ ನನ್ ಮಾತು ಕೇಳೋದು ಕಷ್ಟ ಅಂತ ಎತ್ತಿಕೊಂಡು ಹೋದರು,
ಎದೆ ಸುಡುತ್ತದೆ, ಚಿಕ್ಕಮ್ಮ ಹಾಲು ಕುಡಿಸ್ಬೇಕು ಮಗು ಕೊಡಿ ಅಂದ್ರು, ಗೊಗರೆದರು ಮಗುನ್ನ ಕೊಡದೆ, ನನ್ನಿಂದ ಮಗುನ್ನ ದೂರ ಮಾಡ್ತಾರೆ ಅನ್ನೋ ಭಯ, ಇದನ್ನ ನೋಡಿದ ಸಂಜು, ಮಗುನ್ನ ಕರೆದುಕೊಂಡು ಈ ಊರೇ ಬಿಟ್ಟು ಹೋಗೋಣ. ಅಂತ ಹೇಳಿ ಧೈರ್ಯ ತುಂಬಿದರು. ಚಿಕ್ಕಮ್ಮ ಮಗುನ ಮಲಗಿಸಿ ಸ್ನಾನಕ್ಕೆ ಹೋದಾಗ ಮಗುನ ಸಂಜು ಎತ್ತಿಕೊಂಡು ಬಂದು ಬಾ ಹೋಗೋಣ ಅಂತ ಅಲ್ಲಿಂದ ಓಡಿ ಬಂದೆವು.
ಇದು ನನ್ನ ಕಥೆ, ಇಲ್ಲಿ ಸಂಜುಗೆ ಕೆಲಸ ಸಿಕ್ಕಿತ್ತು.ಇಲ್ಲೇ ಪಕ್ಕದ ಮನೇಲಿ ಇರೋದು ಅಂದಾಗ ಅಜ್ಜಿ ಪಾರು ಮುಖ ನೋಡಿದಳು. ಪಾರು ಹೌದು ಅನ್ನೋವಂತೆ ತಲೆ ಆಡಿಸಿದಳು.
ಆದ್ರೆ ನಂಗೆ ಆ ಮನೇಲಿ ಏನೋ, ವಿಚಿತ್ರವಾದ ಹಾಗೆ ತೋರುತ್ತಿದೆ. ನನ್ನ ಪುಟ್ಟ ಮಗು, ಯಾವಾಗ್ಲೂ ಯಾರನ್ನೋ ತೋರಿಸ್ತಾಳೆ. ಭಯ ಪಡ್ತಾಳೆ.ಅದನ್ನೇ ಪಾರಕ್ಕ್ ಹತ್ರ ಹೇಳ್ತಿದ್ದೆ ಆಗ ನೀವು ಕರಿದಿರಿ ಅಂತ ಅಕ್ಕ ಬಂದ್ರು.
ಪಾರಕ್ಕಾ ಆಗ್ಲೇ ಹೇಳ್ತಿದ್ರಿ ಮನೆ ಬಿಡಿ ಅಂತ, ಹೇಳಿ ಅಕ್ಕ ಅಂತದ್ದು ಏನಿದೆ ಅಲ್ಲಿ, ಅಂದಾಗ ಅಜ್ಜಿ ಹೇಳಬೇಡ ಅನ್ನೋವಂತೆ ತಲೆ ಆಡಿಸಿದಳು.
ಅದು ಗೌರಿ ಯಾಕ್ ಹಾಗೆ ಹೇಳ್ದೆ ಅಂದ್ರೆ ನೀನು ಅಲ್ಲಿ ಸಮಸ್ಯೆ ಆಗ್ತಿದೆ ಅಂದೇ ಅಲ್ಲ ಅದ್ಕೆ ಹೇಳ್ದೆ ಅಷ್ಟೇ ಅಂತ ಮಾತು ಮರೆಸಿದಳು. ಅಷ್ಟರಲ್ಲಿ ಮಗು ಎದ್ದು ಬಂದಳು. ಅಜ್ಜಿ ಮಗುನ ಬರುವಂತೆ ಹೇಳಿ, ಪಕ್ಕದಲ್ಲಿ ಇದ್ದ ಒಂದು ಸರವನ್ನ ಮಗುನ ಕೊರಳಿಗೆ ಹಾಕಿ, ಇದನ್ನ ಯಾವತ್ತು ತಗಿಬೇಡ, ಈಗ ಮನೆಗೆ ಹೋಗು ಗಂಡ ಕಾಯ್ತಾ ಇದ್ದಾನೆ. ಬೇಗ ಹೋಗು ಅಂದ ಕೂಡಲೇ ಮಗುನ ಎತ್ತಿಕೊಂಡು ಹೋದಳು.
ಅಜ್ಜಿ ಯಾಕೆ,ಹೀಗೆ ಮಾಡಿದ್ರಿ, ನಾನ್ ಹೇಳ್ಬೇಕಿತ್ತು ಎಲ್ಲಾ ವಿಷ್ಯ ಅವ್ರ್ನ ಕಷ್ಟದಿಂದ ಪಾರು ಮಾಡ್ತಿದ್ದೆ. ಅಂದಾಗ ಅಜ್ಜಿ ವಿಧಿ ಲಿಖಿತ ಬೇರೆ ಇದೆ. ನನ್ ಏನ್ ಮಾಡಿದ್ರು ಅದಕ್ಕೆ ಒಂದು ಅರ್ಥ ಇರುತ್ತೆ. ಮುಂದೆ ನಿನಗೆ ಗೊತ್ತಾಗುತ್ತೆ ಅಂತ ಅಲ್ಲೇ ಮಲಗಿದರು.
ಗೌರಿ... ಗೌರಿ ಅಂತ ಒಳಗೆ ಹೋಗಿ ಗಂಡ ಕರೆದಾಗ ಗೌರಿ ಬಂದೆ ಅಂತ ಕೂಗಿದಳು. ಮಗು ಕಾಲಲ್ಲಿ ಏನಿದು ಅಂದಾಗ ನೆಡದದ್ದು ಹೇಳಿ, ಇಲ್ಲಿ ಏನೋ ಇದೆ ನಾವು ಇಲ್ಲಿ ಇರೋದು ಬೇಡ ಸಂಜು ಅಂದಾಗ,
ಸಮಾಧಾನದಿಂದ ಹೆಂಡ್ತಿನಾ ಕರೆದು, ನೋಡು ಗೌರಿ ಇಲ್ಲಿ ಕಡಿಮೆ ಬೆಲೆಗೆ ಈ ಮನೆ ಬಾಡಿಗೆಗೆ ಸಿಕ್ಕಿದೆ. ಕೆಲಸಕ್ಕೂ ಹತ್ತಿರವಿದೆ. ಧಣಿ ಕೂಡ ತುಂಬಾ ಒಳ್ಳೆಯವರು, ನಾನು ಹಗಲು ರಾತ್ರಿ ಅಂತ ಯಾಕೆ ದುಡೀತೀನಿ ಹೇಳು ನಿಮಗೋಸ್ಕರ ತಾನೇ, ನೀನು ಕೂಡ ಏನೇನೊ ತಲೆಗೆ ಹಾಕಿ ಮಂಡೆ ಬಿಸಿ ಮಾಡ್ಕೊಂಡು ಕುತ್ಕೋಳ್ಬೇಡ. ಬಾ ಊಟಕ್ಕೆ ಹೊರಗಡೆ ಹೋಗೋಣ, ಸಂಬಳ ಆಗಿದೆ ಅಂತ ಹೇಳಿ ಹೆಂಡ್ತಿ, ಮಗಳನ್ನ ಹೊರಗಡೆ ತಿರುಗಲು ಕರೆದುಕೊಂಡು ಹೋದ. ಮುದ್ದಿನ ನಾಯಿ ಸಂಜುನ ನೋಡಿ ಬಾಲ ಅಲುಗಡಿಸಿ ಹಿಂದೆಯೇ ಬಂದಿತ್ತು. ಅವ್ರು ಹೋದ ಮೇಲೆ ಬಾಗಿಲ ಸಂದಿ ಅಲ್ಲೇ ಕುಳಿತು ಒಳಗಡೆ ನೋಡುತ್ತಾ ಕುಳಿತುಕೊಂಡಿತ್ತು.
ನಾಯಿನ ನೋಡಿ ಅಜ್ಜಿ, ನಗುತ್ತಾ, ಅಂತೂ ಕೊನೆಗೆ ನೀನೇ ಬರಬೇಕಾಯಿತು, ನಡಿಲಿ ನಡಿಲಿ ಅಂತ ಗೊಣಗುತ್ತಾ ಹೋದರು.ಆ ನಾಯಿ ಅಜ್ಜಿ ಎಲ್ಲೇ ಕರೆದರೂ ಹೋಗುತಿತ್ತು. ಮತ್ತೆ ಮನೆಯವರ ಜೊತೆಗೆ ಬಿಟ್ಟರೆ ಬೇರೆ ಎಲ್ಲೂ ಹೋಗುತ್ತಾನೆ ಇರಲಿಲ್ಲ.
ಗೌರಿ, ಸಂಜು ಹಿಂದೆ ಹೋಗಬೇಕಾದಾಗ ಜೋರಾಗಿ ಬಂದ ಗಾಳಿ ನಾಯಿನ ನೋಡಿ ಒಳಗೆ ನಿಂತು,ಒಳಗಿಂದ ಬಾಗಿಲು ದಪ್ಪನೆ ಹಾಕಿಕೊಂಡಿತ್ತು. ಆ ಶಬ್ದ ಅಷ್ಟು ಜೋರಾಗೆ ಇತ್ತು ಆಚೆ ಈಚೆ ಮನೆಯವರು ಪ್ರತಿ ನಿತ್ಯ, ಈ ಶಬ್ದ, ನರಳಾಟಾ ಕೇಳಿ ಕೇಳಿ ಅಭ್ಯಾಸ ಇದ್ದ ಕಾರಣ ಅವರವರ ಕೆಲಸ ಮುಗಿದ ಕೂಡಲೇ ಬೇಗ ಹೋಗಿ ಮಲಗಿ ಬಿಡುತ್ತ ಇದ್ರು....
ಸಂಬಳದ ದುಡ್ಡಲ್ಲಿ ಬೇಕಾದ ಸಾಮಗ್ರಿ ಜೊತೆಗೆ ಬಟ್ಟೆ, ಎಲ್ಲಾ ತೆಗೆದುಕೊಂಡು ಹೋಟೆಲ್ಗೆ ಹೋಗಿ ತಿಂದು ಬಂದರು. ಬರುವಾಗ 11ಆಗಿತ್ತು. ನಾಯಿ ಆ ಜಗದಿಂದ ಎದ್ದೆ ಇರಲಿಲ್ಲ. ಅದಕೋಸ್ಕರ ತಂದ ಊಟದ ಕಟ್ಟು ಬಿಚ್ಚಿ ನಾಯಿ ಮುಂದೆ ಇಟ್ಟರು. ಅದು ಅದನ್ನ ಬೇಗ ಬೇಗ ತಿಂದು ಬಿಟಿತ್ತು. ಮತ್ತೆ ಇಬ್ಬರು ಒಳಗೆ ಹೋದರು, ಮಗು ಬರುವಾಗನೇ ನಿದ್ರೆ ಅಲ್ಲೆ ಇತ್ತು. ಆ ದಿನ ಆ ಮಗು ಏನು ಆಗದೆ ಚನ್ನಾಗಿ ಮಲಗೆ ಇದ್ದಳು. ಸಂಜು, ಗೌರಿ ನಂಗೆ ನಿದ್ರೆ ಬರ್ತಿಲ್ಲ, ನಾನು ಹೊರಗಡೆ ಇರ್ತೀನಿ, ನೀನು ಮಲಗು ಅಂತ ಹೇಳಿದಾಗ ಸರಿ ಅಂತ ತಲೆ ಆಡಿಸಿ ಮಗು ಜೊತೆ ಮಲಗಿದಳು.
ಸಂಜು ದಿನವಿಡೀ ನೈಟ್ ಡ್ಯೂಟಿ ಮಾಡಿದ ಕಾರಣ ರಾತ್ರಿ ನಿದ್ರೆ ಬರ್ತನೆ ಇರ್ಲಿಲ್ಲ. ನಾಯಿ ಜೊತೆಗೆ ಮಾತಾಡುತ್ತಾ ಕುಳಿತ, ಸುಮಾರು ಹೊತ್ತು ಗಂಡ ಒಳಗೆ ಬರಲೇ ಇಲ್ಲ, ಗೌರಿ , ಸಂಜು ಸಂಜು ಅಂತ ಕರೆದಳು. ಪಕ್ಕದ ರೂಮಲ್ಲಿ ಸಂಜು ಇಲ್ಲಿ ಬಾ ಅಂತ ಕರೆದ ಹಾಗೆ ಆಯಿತು ಅಂತ ಮೆಲ್ಲಗೆ ಲೈಟ್ ಹಾಕಿ ಅಲ್ಲಿಂದ ಪಕ್ಕದ ರೂಮ್ಗೆ ಹೋಗಲು ಬಾಗಿಲ ಬಳಿ ಬಂದು ನಿಂತಳು. ಇನ್ನೇನು ಬಾಗಿಲು ತೆಗೀಬೇಕು ಆಗ ನಾಯಿ ಜೋರಾಗಿ ಕೂಗಿತ್ತು, ಅದನ್ನ ಸುಮ್ಮನಿರಿಸಲು ಸಂಜು ಜೋರಾಗಿ ಮಾತಾಡುದನ್ನ ಕೇಳಿ
ಅರೆ ಹೊರಗಡೆ ಸಂಜು ಸ್ವರ ಕೇಳ್ತು, ನಂಗೆ ಈ ಕೋಣೇಲಿ ಕರೆದ ಹಾಗೆ ಆಯ್ತಲ್ಲಾ ಬಹುಶ ಸಂಜು ಹೇಳಿದ ಹಾಗೆ ನನ್ನ ಭ್ರಮೆ ಇರಬೇಕು ಅಂತ ಹೊರಗಡೆ ನೆಡೆದಳು...
ಮುಂದುವರೆಯುವುದು.......
ಹೇಗಿದೆ ಕಥೆ ಇಷ್ಟಾ ಆಗ್ತಿದ್ರೆ ಓದಿ ಪ್ರೋತ್ಸಾಹಿಸಿ
0 Followers
0 Following