ಸಿಂಧನೂರು ತಾಲೂಕಿನ ಮಲ್ಲಾಪುರ ಗ್ರಾಮದ ಅಮರೇಗೌಡ ಮಲ್ಲಾಪುರ ಕಳೆದ 5-6ವರುಷಗಳ ಹಿಂದೆ ವನಸಿರಿ ಫೌಂಡೇಶನ್ ಸ್ಥಾಪಿಸಿ ಇದರ ಮೂಲಕ ತಮ್ಮ ದಿನನಿತ್ಯದ ಕಾಯಕದಂತೆ ಪರಿಸರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ, ಈಗಾಗಲೇ ಹಲವಾರು ಗಿಡಗಳನ್ನು ಸರ್ಕಾರಿ ಶಾಲೆ ಉದ್ಯಾನವನ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ವನಸಿರಿ ಫೌಂಡೇಶನ್ ಯುವಕರೊಂದಿಗೆ ಹಾಗೂ ವಿವಿಧ ಸಂಘಟಕರೊಂದಿಗೆ ಸಸಿಗಳ ನೆಡುವ ಕಾರ್ಯದಲ್ಲಿರುವುದು ಬಿಸಿಲುನಾಡು ರಾಯಚೂರು ಜಿಲ್ಲೆಯನ್ನು ಹಸಿರುಮಯ ಮಾಡಲು ಪ್ರಯತ್ನಿಸುತ್ತಿದ್ದಾರೆ.
ಪರಿಸರ ಸಂರಕ್ಷಣೆ ಸೇವೆಯಲ್ಲಿರುವ ಅಮರೇಗೌಡ ಮಲ್ಲಾಪೂರ ಇವರು ಈ ಬಾರಿ ತಮ್ಮ ಸ್ವಗ್ರಾಮವಾದ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮಲ್ಲಾಪೂರ ಗ್ರಾಮದ ಸರಕಾರಿ ಶಾಲೆಯಲ್ಲಿ ಶಾಲಾ ಆಡಳಿತಮಂಡಳಿ ಸಹಕಾರದೊಂದಿಗೆ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಸಂಭ್ರಮದಿಂದ ಆಚರಣೆಯ ಮಾಡಿದ್ದಾರೆ.
ಪರಿಸರ ಸಂರಕ್ಷಣೆ ಸೇವೆಯಲ್ಲಿರುವ ಅಮರೇಗೌಡ ಮಲ್ಲಾಪೂರ ಅವರ ವನಸಿರಿ ಫೌಂಡೇಶನ್ ಕಳೆದ ವರ್ಷ ಕರ್ನಾಟಕ ರಾಜ್ಯ ಸರ್ಕಾರದಿಂದ ರಾಜ್ಯ ಪರಿಸರ ಪ್ರಶಸ್ತಿಗೆ ಭಾಜನ ಆಗಿದ್ದು, ರಸ್ತೆ ಬದಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಗಿಡ,ಮರಗಳನ್ನು ಅರಣ್ಯ ಇಲಾಖೆ ಅನುಮತಿ ಇಲ್ಲದೆ, ಕಡಿದರೆ ಇಲಾಖೆಯವತಿಯಿಂದ ಗಿಡ ಮರಗಳನ್ನು ಕಡಿಸಿದವರಿಗೆ ದಂಡ ವಿಧಿಸುವ ಮೂಲಕ ಗಿಡಗಳ ರಕ್ಷಣೆಗೆ ಮುಂದಾಗಿದ್ದಾರೆ. ಪ್ರತಿ ವರ್ಷ ರಕ್ಷಾ ಬಂಧನವನ್ನು ಗಿಡಗಳಿಗೆ ರಕ್ಷೆ ಕಟ್ಟಿ ವೃಕ್ಷಾ ಬಂಧನ ಕಾರ್ಯಕ್ರಮ ಮಾಡಿ, ಗಿಡಗಳ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವು ಮಾಡುತ್ತಿದ್ದಾರೆ.
ಕೊರೋನ ಮಹಾಮಾರಿಯಲ್ಲಿ ವಿವಿಧ ಸಂಘ ಸಂಸ್ಥೆಗಳ ದಾನಿಗಳ ನೆರವಿನಿಂದ ಹಲವಾರು ಕೊರೋನಾ ಸಂತ್ರಸ್ತರಿಗೆ, ಕೊರೋನಾ ವಾರಿಯರ್ ಗಳಿಗೆ, ಅವಶ್ಯಕತೆ ಇರುವವರಿಗೆ ಆಹಾರ ಪೊಟ್ಟಣಗಳನ್ನು ನೀಡುವ ಕಾರ್ಯ ಮಾಡಿದ ವನಸಿರಿ ಫೌಂಡೇಶನ್, ಆಕ್ಸಿಜನ ಕೊರತೆಯಿಂದ, ಅನಾರೋಗ್ಯದಿಂದ ಹಲವರು ಸಾವನ್ನಪ್ಪಿದ್ದ ಘಟನೆ ನಡೆಯುತ್ತಿರುವಾಗ, ಈ ಸಮಯದಲ್ಲಿ ಅಮರೇಗೌಡ ಮಲ್ಲಾಪುರ ಗಿಡಗಳಿಂದ ಹೊರಬಿಡುವ ಆಕ್ಸಿಜನ ಮಹತ್ವವನ್ನು ಮನಮುಟ್ಟುವಂತೆ ಜಾಗೃತಿ ಮೂಡಿಸಿದರು. ಇದು ಹಲವಾರು ಪರಿಸರ ಪ್ರೇಮಿಗಳ ಮನಗೆದ್ದ ಕ್ಷಣವಾಗಿತ್ತು.
ಪರಿಸರ ಸ್ನೇಹಿ ಗಣೇಶೋತ್ಸವದ ಆಚರಿಸುವ ಸದುದ್ದೇಶದಿಂದ ಪ್ರತಿ ವರ್ಷವೂ ಸ್ಥಳೀಯ ಕುಂಬಾರಿಕೆ ಕುಟುಂಬಗಳಿಗೆ ಮಣ್ಣಿನಲ್ಲಿ ವಿವಿಧ ರೀತಿಯ ಹಣ್ಣಿನ , ತರಕಾರಿಯ ಬೀಜಗಳನ್ನು ಹಾಕಿ ಗಣೇಶನ ಮೂರ್ತಿ ತಯಾರಿಸಲು ಮುಂಗಡವಾಗಿ ಹೇಳಿರುತ್ತಾರೆ. ಇದರ ವಿಶೇಷತೆಯೆಂದರೆ ಗಣೇಶನ ವಿಸರ್ಜನೆಯನ್ನು ಬಾವಿ, ಹಳ್ಳ-ಕೊಳ್ಳಗಳಲ್ಲಿ, ಮಾಡದೇ ನಿಮ್ಮ ಮನೆಯ ಮಾಳಿಗೆಯಲ್ಲೊಂದು ಟಬ್ ನಲ್ಲಿ ನೀರು ಇರಿಸಿ ವಿಸರ್ಜನೆ ಮಾಡಿದರೆ, ನಂತರ ಗಣೇಶನ ಮೂರ್ತಿ ಸಂಪೂರ್ಣ ಕರಗಿ ಮಣ್ಣಾಗಿ ಅದರಲ್ಲಿನ ಬೀಜಗಳು ಮೊಳಕೆ ಬಂದು, ಸಾಕ್ಷಿಗಳಾಗಿ, ಮರಗಳಾಗಿ ಕಾಯಿ, ಹಣ್ಣು ನೀಡುವ ಜೊತೆ ನೆರಳು ನೀಡಲಿ ಎನ್ನುವುದು ನಮ್ಮ ವನಸಿರಿ ಫೌಂಡೇಶನ್ ಆಶಯ ಎನ್ನುತ್ತಾರೆ ಅಮರೇಗೌಡ ಮಲ್ಲಾಪುರ.
ಎಪ್ರಿಲ್ ಪೂಲ್ ಬದಲಿಗೆ ಎಪ್ರಿಲ್ ಕೂಲ್:
ಬೇಸಿಗೆಯಲ್ಲಿ ಪಕ್ಷಿಗಳ ಸಂಕುಲ ನಶಿಸುತ್ತಿರುವ ಸಮಯದಲ್ಲಿ ಅವುಗಳ ಸಂಕುಲ ಉಳಿವಿಗಾಗಿ ಹಕ್ಕಿ ಪಕ್ಷಿಗಳಿಗೆ ಗುಟುಕ ನೀರಿನ ಅಭಿಯಾನ ಎನ್ನುವ ಹೆಸರಿನಲ್ಲಿ ಗಿಡಗಳ ಟೊಂಗೆಗಳಿಗೆ ಮಡಿಕೆ ಕಟ್ಟಿ ನೀರು ಮತ್ತು ಕಾಳುಗಳನ್ನು ಇರಿಸುವುದು ಮತ್ತು ಶಾಲಾ ಮಕ್ಕಳಿಗೆ ,ಸಾರ್ವಜನಿಕರಿಗೆ ಇದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವು ಮಾಡುತ್ತಿದ್ದಾರೆ. ಪರಿಸರ ಉಳಿಸುವ ಕಾರ್ಯಕ್ಕೆ ನೀಡುವಷ್ಟೆ ಮಹತ್ವವನ್ನು ತುರ್ತ ಪರಿಸ್ಥಿತಿಯ ಸಮಯದಲ್ಲಿ ರಕ್ತದ ಅವಶ್ಯಕತೆ ಇರುವವರಿಗೆ ತಮ್ಮ ಸ್ನೇಹಬಳಗದಲ್ಲಿನ ರಕ್ತದಾನಿಗಳ ಮೂಲಕ ಸಹಕಾರ ನೀಡುವ ಮಾನವೀಯ ಕಾರ್ಯವನ್ನು ಮಾಡುತ್ತಿರುವುದು ಸಮಾಜದಲ್ಲಿ ಮಾದರಿಯಾಗುವ ಕಾರ್ಯ ಎಂದರೇ ತಪ್ಪಾಗಲಾರದು.
ವನಸಿರಿ ಫೌಂಡೇಶನ ಸಂಸ್ಥಾಪಕ ಅಮರೇಗೌಡ ಮಲ್ಲಾಪುರ ಇಂದು ತುರ್ತುಪರಿಸ್ಥಿತಿಲ್ಲಿರುವವರಿಗೆ ರಕ್ತದಾನ ಮಾಡುವ ಮೂಲಕ 36ನೇ ಬಾರಿ ಸ್ವಯಂ ಪ್ರೇರಿತರಾಗಿ ರಕ್ತದಾನದ ಮಾಡಿದ್ದು, ಇದರ ಜೊತೆ ಹಲವು ಯುವಕರನ್ನು ರಕ್ತದಾನ ಮಾಡುವಂತೆ ಪ್ರೋತ್ಸಾಹ ಮಾಡುತ್ತಾ ರಕ್ತದಾನ ಮಾಡಿದವರಿಗೆ ಹೂವಿನ ಗಿಡಗಳ್ನು ಉಡುಗೊರೆಯಾಗಿ ನೀಡಿ ಅಭಿನಂದಿಸುವ ಕಾರ್ಯ ಮಾಡುತ್ತಿದ್ದಾರೆ.
ಸಿಂಧನೂರು ನಗರದಲ್ಲಿ ಎರಡು ರಕ್ತಭಂಡಾರಗಳಿವೆ ಅವುಗಳಲ್ಲಿ ರೋಗಿಗಳಿಗೆ ಅವಶ್ಯಕತೆಯಿರುವ ರಕ್ತದ ಗುಂಪು ಲಭ್ಯತೆ ಇಲ್ಲದಾಗ,ತುರ್ತು ಪರಿಸ್ಥಿತಿಗೆ ರಕ್ತದ ಅವಶ್ಯಕತೆ ಇರುವಾಗ ರೋಗಿಗಳು ಅಮರೇಗೌಡ ಮಲ್ಲಾಪೂರ ಅವರಂತಹ ಸಮಾಜಮುಖಿ ಸೇವಕರಿಗೆ ದೂರವಾಣಿ ಕರೆ ಮಾಡಿ ರಕ್ತದ ಅವಶ್ಯಕತೆ ಬಗ್ಗೆ ಮನವಿ ಮಾಡಿರುವ ಹಲವು ಉದಾಹರಣೆಗಳು ಇವೆ. ಕೆಲವು ವರ್ಷಗಳ ಹಿಂದೆ ಅಮರೇಗೌಡ ಮಲ್ಲಾಪುರ ತಮ್ಮ ಹುಟ್ಟುಹಬ್ಬವನ್ನು ರಕ್ತದಾನ ಶಿಬಿರ ಆಯೋಜಿಸುವ ಮೂಲಕ ರಕ್ತದಾನಿಗಳ ಸಂಖ್ಯೆ ಹೆಚ್ಚಿಸಲು ಶ್ರಮವಹಿಸಿದ್ದರು, ತನ್ನ ಬಳಿ ಸಹಾಯಕ್ಕೆ ಬಂದವರಿಗೆ ನಿಸ್ವಾರ್ಥವಾಗಿ ತನ್ನಿಂದಾಗುವ ಸಹಕಾರ ನೀಡುವ ಸದ್ಗುಣಗಳಿರುವ ಅಮರೇಗೌಡ ಮಲ್ಲಾಪುರರ ಸಾಮಾಜಿಕ ಕಾರ್ಯ ನಿರಂತರವಾಗಿರಲಿ ಇಂತಹ ಸಮಾಜಮುಖಿ ವ್ಯಕ್ತಿಗಳಿಗೆ, ಸಮಾಜವು ಸಹಕಾರ ನೀಡಲಿ ಎನ್ನುವುದು ನಮ್ಮ ಲೇಖನದ ಸದುದ್ದೇಶವಾಗಿದೆ.
Article Writer, Self Employee