ನಾವು ಆಫ್ರೀಕಾದಲ್ಲಿರುವ ಧರ್ಮಗಳ ಬಗ್ಗೆ ಮಾತನಾಡುವಾಗ ಒಂದು ನಿಗೂಢ ಧರ್ಮದ ಬಗ್ಗೆ ನಮ್ಮ ಮನಸ್ಸು ಹೊರಳುತ್ತದೆ ಅದೇ "ವೂಡೂ". ಈ ಪದವನ್ನು ಕೇಳಿದಾಗಲೆಲ್ಲಾ, ಸಾಮಾನ್ಯವಾಗಿ ಈ ಧರ್ಮವನ್ನು ವಾಮಾಚಾರದೊಂದಿಗೆ ಬೆರೆಸಿ ಮಾತನಾಡುವ ಪ್ರವೃತ್ತಿ ಬೆಳೆದಿದೆ. ಆದರೆ ಇದು ಪಶ್ಚಿಮ ಆಫ್ರಿಕಾದ ದೇಶಗಳಲ್ಲಿ ವಿಶೇಷವಾಗಿ ಘಾನಾ, ನೈಜೀರಿಯಾ ಮತ್ತು ಬೆನಿನ್‌ನಲ್ಲಿ ಸುಮಾರು 30 ಲಕ್ಷ ಜನರು ಅನುಸರಿಸುವ ಧರ್ಮವಾಗಿದೆ.
ವೂಡೂ ಅತ್ಯಂತ ಹಳೆಯ ಧಾರ್ಮಿಕ ಆಚರಣೆಗಳಲ್ಲಿ ಒಂದಾಗಿದೆ. ವಸಾಹತುಗಾರರು ಆಫ್ರಿಕಾ ಖಂಡವವನ್ನು ಆಳುವಾಗ ಅಲ್ಲಿನ ಜನರನ್ನು ಅವರುಗಳನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಂಡರು. ಅವರ ಆಚಾರ ವಿಚಾರಗಳನ್ನು ಕೆಟ್ಟದ್ದು ಎಂದು ಪ್ರಚಾರ ಮಾಡಿದರು. ಈ ತರಹದ ಪ್ರಚಾರದಿಂದ ವೂಡೂ ಧರ್ಮದವರು ಆಚರಿಸುವ ಜಾಂಗ್ಬೆಟೊ ನೃತ್ಯ ವಾಮಾಚಾರ ಕ್ರಿಯೆಗೆ ಸಂಬಂಧ ಪಟ್ಟಿರುವುದು ಎಂದು ತಪ್ಪು ತಿಳುವಳಿಕೆ ಬೆಳೆಯುವಂತೆ ಮಾಡಿದರು. ಆದರೆ ಈ ನೃತ್ಯ ನೋಡಲು ಭಯವೆನಿಸಿದರೂ, ಕುತೂಹಲ ಮಾತ್ರ ಹಾಗೆಯೇ ಇರುತ್ತದೆ . ಸಾಮಾನ್ಯವಾಗಿ ಈ ನೃತ್ಯವನ್ನು ಪೂರ್ವಜರನ್ನು ಪೂಜಿಸುವುದಕ್ಕೆ ಹಾಗೂ ಸಮುದಾಯಕ್ಕೆ ಒಳ್ಳೆಯದಾಗಲಿ ಎಂದು ಮಾಡಲಾಗುತ್ತದೆ.
"ಜಾಂಗ್ಬೆಟೊ" ದ ಅರ್ಥ "ರಾತ್ರಿ ಕಾವಲುಗಾರ" ಅಥವಾ "ರಾತ್ರಿಯ ಪುರುಷರು"ಎಂದು . ಅವರು ವೂಡೂ ಸಮುದಾಯದ ಪ್ರಾಥಮಿಕ ಪೊಲೀಸ್ ಪಡೆ ಎಂದು ತಿಳಿಯಲಾಗಿದೆ, ಅವರು ರಾತ್ರಿಯಲ್ಲಿ ಹಳ್ಳಿಯನ್ನು ರಕ್ಷಣೆ ಮಾಡುವುದಲ್ಲದೆ ಕಾನೂನು ಹಾಗೂ ಸುವ್ಯವಸ್ಥೆಯನ್ನು ಸಹ ಕಾಪಾಡಬಲ್ಲವಾರಾಗಿದ್ದಾರೆ . ಈ Zangbetos ವರ್ಣರಂಜಿತ ತಾಳೆ ಮರದ ನಾರುಗಳ ಎಳೆಗಳಿಂದ ಮಾಡಲ್ಪಟ್ಟ ಶಂಕುವಿನಾಕಾರದ ರಚನೆಗಳಾಗಿ ರಚಿಸಿ ಅದರೊಳಗೆ ತಮ್ಮ ಪೂರ್ವಜರ ಆತ್ಮಗಳನ್ನು ಆವಾಹನೆ ಮಾಡಿ ತಮ್ಮ ದೈನಂದಿನ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳುತ್ತಾರೆ.
ಹೀಗಾಗಿ, ಆಫ್ರಿಕನ್ ಝಾಂಗ್ಬೆಟೋಸ್ ಅಲೌಕಿಕ ಹಾಗೂ ಪೂರ್ವಜರ ಆತ್ಮಗಳಾದರೂ ದೇವರಂತೆ ಮೌಲ್ಯಯುತವಾಗಿದೆ ಮತ್ತು ಈ ಜಾಂಗ್ಬೆಟೋಸ್ ಪ್ರದರ್ಶಿಸಿದ ಆಫ್ರಿಕನ್ ಮ್ಯಾಜಿಕ್ ನೃತ್ಯವು ದುಷ್ಟಶಕ್ತಿಗಳು ಮತ್ತು ದುರುದ್ದೇಶಪೂರಿತ ಜನರ ವಿರುದ್ಧ ಹಳ್ಳಿಯ ಜನಗಳನ್ನು ರಕ್ಷಣೆ ಮಾಡುತ್ತವೆ..
ಆಫ್ರಿಕನ್ ಜಾಂಗ್ಬೆಟೊ ನೃತ್ಯದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ನಾವು ಮೊದಲು ಮೂಲಕ್ಕೆ ಹಿಂತಿರುಗಿ ಮತ್ತು ಆಫ್ರಿಕನ್ ಜಾಂಗ್ಬೆಟೊ ನೃತ್ಯದ ಕಥೆಯನ್ನು ತಿಳಿದುಕೊಳ್ಳೋಣ.
ಆಫ್ರಿಕನ್ ಜಾಂಗ್ಬೆಟೊ ನೃತ್ಯದ ಮೂಲವನ್ನು ಘಾನಾ, ಟೋಗೊ ಮತ್ತು ಬೆನಿನ್‌ನ ಕರಾವಳಿ ಕಡಲತೀರಗಳಲ್ಲಿ ಗುರುತಿಸಬಹುದು. ಪ್ರಾಥಮಿಕವಾಗಿ, ಆಫ್ರಿಕನ್ ಜಾಂಗ್‌ಬೆಟೊ ಈ ಕರಾವಳಿ ಪಟ್ಟಣಗಳನ್ನು ಪರಕೀಯರ ದಾಳಿಗಳಿಂದ ರಕ್ಷಿಸಬೇಕಾಗಿತ್ತು, ಅದಕ್ಕಾಗಿ ಅಲ್ಲಿನ ಆದಿವಾಸಿಗಳು ತಮ್ಮ ಪೂರ್ವಜರ ಆತ್ಮಗಳ ಮೊರೆ ಹೋದರು. ಅವರೊಂದಿಗೆ ಸಂವಹನ ನಡೆಸಲು ಅನುಕೂಲ ಆಗುವ ಹಾಗೆ ಜಾಂಗ್ಬೆಟೊ ನೃತ್ಯವನ್ನು ಕಂಡುಹಿಡಿದರು. ಈ ನೃತ್ಯ ನಡೆಯುವಾಗ ಹಾಗೂ ನಡೆದ ಕೆಲವು ಕಾಲದ ವರೆಗೂ ಎಲ್ಲಾ ದುಷ್ಟಶಕ್ತಿಗಳನ್ನುಹಾಗೂ ಪರಕೀಯರನ್ನು ಹೊಡೆದೋಡಿಸುವ ಶಕ್ತಿ ಬರುತ್ತದೆ ಎಂದು ವೂಡೋ ಧರ್ಮದವರು ನಂಬುತ್ತಾರೆ.
ಈ ಕರಾವಳಿ ಪಟ್ಟಣಗಳನ್ನು ಎಲ್ಲಾ ಬಾಹ್ಯಹಾಗೂ ಆಂತರಿಕ ಶಕ್ತಿಗಳಿಂದ ರಕ್ಷಿಸಲು ಜವಾಬ್ದಾರರಾಗಿರುವ ಸಾಂಪ್ರದಾಯಿಕ ಮಿಲಿಟರಿ ಸಂಘಟನೆಯಾಗಿ ಆಫ್ರಿಕನ್ ಜಾಂಗ್ಬೆಟೊ ನೃತ್ಯ ಹೊರಹೊಮ್ಮಿದೆ. ರಕ್ಷಕನಾಗಿ ಕಾರ್ಯನಿರ್ವಹಿಸುವುದರ ಹೊರತಾಗಿ, ಈ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸುವ ಸಾಂಪ್ರದಾಯಿಕ ಆಡಳಿತ ಸಂಸ್ಥೆಯ ಒಂದು ಅಂಗವಾಗಿಯೂ ಸಹ ಈ ಸಂಸ್ಕೃತಿ ಬೆಳೆದು ಬಂದಿದೆ. ಆದರೆ, ಪ್ರಸ್ತುತ ಕಾಲದಲ್ಲಿ, ಆಫ್ರಿಕನ್ ಜಾಂಗ್‌ಬೆಟೊ ನೃತ್ಯವನ್ನು ದೇಶಾದ್ಯಂತ ಪ್ರಮುಖ ಜಾಂಗ್‌ಬೆಟೊ ಉತ್ಸವಗಳಲ್ಲಿ ಮನೋರಂಜನೆಯಾಗಿ ಮಾತ್ರ ಕಾಣಬಹುದಾಗಿದೆ .
ಆಫ್ರಿಕನ್ ಜಾಂಗ್ಬೆಟೊ ನೃತ್ಯದ ಕಥೆ ಅಡಗಿರುವುದು ಅದರ ಪವಾಡದಲ್ಲಿ . ಖಾಲಿಯಿರುವ ನಾರುಗಳಿಂದ ಹೊಲಿದಿರುವ ಮುಸುಕಿನ ಒಳಗೆ ಯಾರೂ ಇಲ್ಲದೆ, ಆತ್ಮವನ್ನು ಆವಾಹನೆ ಮಾಡಿದ ತಕ್ಷಣ ಜಡವಾಗಿ ಇದ್ದ ಅದೂ ಒಮ್ಮೆಲೇ ಗರಗರ ತಿರುಗುತ್ತದೆ, ಸುತ್ತಲೂ ತಿರುಗುತ್ತಲೇ ಅತ್ಯಂತ ವೇಗವಾಗಿ ಓಡಾಡುತ್ತದೆ. ಸಂಕೇತಗಳಿಂದ ಅನೇಕ ಜನರ ಸಮಸ್ಯೆಗಳನ್ನು ಆಲಿಸಿ ಹಾಗೂ ಅದಕ್ಕೆ ಪರಿಹಾರಗಳನ್ನು ಸೂಚಿಸುತ್ತವೆ . ಅನೇಕ ಸಲ ಪೊಲೀಸ್ ನವರಿಗೆ ಸಾದ್ಯವಾಗದ ಸಮಸ್ಯೆಗಳನ್ನು ಪರಿಹಾರ ಮಾಡುತ್ತವೆ.
ರಚನೆ ಮತ್ತು ವೈಶಿಷ್ಟ್ಯಗಳು
Zangbeto ಎಂಬುದು ಒಂದು ವೇಷಭೂಷಣದ ಹೆಸರು. "ಝಾನ್" ಎಂದರೆ ರಾತ್ರಿ ಮತ್ತು "Gbeto" ಎಂದರೆ ಬೇಟೆಗಾರ ಎಂದು. ಹೀಗಾಗಿ, ಝಾಂಗ್ಬೆಟೊ "ರಾತ್ರಿ ಬೇಟೆಗಾರನ ಮನೆ", ಇದು ನೃತ್ಯದ ಸಮಯದಲ್ಲಿ ಚಲಿಸುವ ಮನೆಯಂತೆ ಕಾಣುತ್ತದೆ. ಈ ಪವಿತ್ರ ವೇಷಭೂಷಣವನ್ನು ತಾಳೆ ಎಲೆಗಳು, ಹುಲ್ಲು, ರಾಫಿಯಾ, ಇತ್ಯಾದಿಗಳ ಎಳೆಗಳಿಂದ ತಯಾರಿಸಲಾಗುತ್ತದೆ. ಈ ಎಳೆಗಳನ್ನು ನಂತರ ತಲೆಕೆಳಗಾದ ಕೋನ್‌ನ ಆಕಾರದಲ್ಲಿರುವ ಟೊಳ್ಳಾದ ಬಿದಿರಿನ ರಚನೆಗೆ ಜೋಡಿಸಲಾಗುತ್ತದೆ. ಆಫ್ರಿಕನ್ ಝಾಂಗ್ಬೆಟೊ ನೃತ್ಯದ ಸಮಯದಲ್ಲಿ, ಈ ಪವಿತ್ರ ವೇಷಭೂಷಣವನ್ನು ಆತ್ಮಗಳು ಧರಿಸುತ್ತವೆ ಹಾಗೂ ಅದರ ಒಳಗೆ ವಾಸ ಮಾಡುತ್ತವೆ, . ಕೆಲವೊಮ್ಮೆ ಆತ್ಮಗಳು ಬಿದಿರು ಮತ್ತು ಬಾಳೆ ಎಳೆಗಳಿಂದ ಮಾಡಲಾದ ವೇಷಭೂಷಣವನ್ನು ಬೇಡುತ್ತದೆ, ನೃತ್ಯದ ಮೂಲಕ ಒಳ್ಳೆಯ ಹಾಗೂ ಕೆಟ್ಟ ಶಕುನ ಅಥವಾ ಕೋಪದ ಮನೋಭಾವವನ್ನು ಸಹ ಸೂಚಿಸುತ್ತದೆ..
ಆಫ್ರಿಕನ್ ಝಾಂಗ್ಬೆಟೊದ ಅತ್ಯಂತ ಆಸಕ್ತಿದಾಯಕ ವೈಶಿಷ್ಟ್ಯವೆಂದರೆ ಆವಾಹನೆ ಆದ ಆತ್ಮಗಳಿಗೆ ಯಾವುದೇ ಲಿಂಗವಿಲ್ಲ ಅಂದರೆ ಅದು ಗಂಡೂ ಅಲ್ಲ ಹೆಣ್ಣು ಅಲ್ಲ ಅಥವಾ ನಪುಂಸಕವೂ ಅಲ್ಲ ಅದು ಒಂದು ತಟಸ್ಥ ಲಿಂಗ. ವೂಡೂ ಸಮುದಾಯವು ಶಕ್ತಿಯು ಗಂಡು ಅಥವಾ ಹೆಣ್ಣುಗಳಲ್ಲಿ ನೆಲೆಸುವುದಿಲ್ಲ ಎಂದು ನಂಬುತ್ತದೆ, ಆದರೆ ಇಬ್ಬರ ಸಾಮರಸ್ಯದ ಸಹಬಾಳ್ವೆಯಿಂದ ಅದ್ಭುತಗಳನ್ನು ಮಾಡಬಹುದು ಎಂದು ನಂಬಿದೆ ಅಂದರೆ ಈ "ಪೂರ್ವಜರ ಆತ್ಮಗಳು" ಲಿಂಗ-ತಟಸ್ಥವಾಗಿವೆ ಎಂಬುದು ಸಾಮಾನ್ಯ ನಂಬಿಕೆಯಾಗಿದೆ.
ಆಫ್ರಿಕನ್ ಜಾಂಗ್ಬೆಟೊ ನೃತ್ಯದ ಕಥೆಯು ಮಾನವರ ತಿಳುವಳಿಕೆಯನ್ನು ಮೀರಿದೆ. ಅದರ ಪ್ರಾಥಮಿಕ ಕಾರ್ಯವೆಂದರೆ ತಮ್ಮ ಸಮುದಾಯವನ್ನು ರಕ್ಷಿಸುವುದು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಸ್ಥಾಪಿಸುವುದು. ಆದರೆ, Zangbeto ಒಳಗೆ ಈ ಪೂರ್ವಜರ ಆತ್ಮಗಳು ಸಹ ಸಮುದಾಯದ ಸುಧಾರಣೆಗಾಗಿ ಕೆಲಸ ಮಾಡುತ್ತವೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.
ಮುಕ್ತಾಯ
ಆಫ್ರಿಕನ್ ಜಾಂಗ್ಬೆಟೊ ನೃತ್ಯ, ಭೂಮಿಯ ಮೇಲೆ ವಿಜ್ಞಾನವನ್ನು ವಿರೋಧಿಸುವ ಮತ್ತು ಮಾನವನ ತಿಳುವಳಿಕೆಯನ್ನು ಮೀರಿದ ಹಲವಾರು ಸ್ಥಳಗಳಿವೆ ಎಂಬುದನ್ನು ತೋರಿಸುತ್ತದೆ. ಅಗೋಚರ ಶಕ್ತಿಗಳು ಹೇಗೆ ಅದ್ಭುತಗಳನ್ನು ಮಾಡುತ್ತವೆ ಮತ್ತು ಖಾಲಿ ವಸ್ತುಗಳು ಯಾವುದೇ ಬಾಹ್ಯ ಹಾಗೂ ಆಂತರಿಕ ಪಾತ್ರಗಳು ಇಲ್ಲದೆ ಹೇಗೆ ನೃತ್ಯ ಮಾಡುತ್ತವೆ ಎಂಬುದೇ ಬಹಳ ಆಶ್ಚರ್ಯಕರವಾದ ವಿಷಯವಾಗಿದೆ .
0 Followers
0 Following