ಬಣ್ಣ ಹಾಕದೆ ನಟಿಸೋ ನಾಟಕೀಯತೆ..!

ProfileImg
30 Apr '24
2 min read


image

ALL THE WORLD IS A STAGE AND ALL ARE MERELY PLAYERS.

 

ಎಲ್ಲರಿಗೂ ಒಂದು ಪಾತ್ರ ಕೆಲವು ಮೂಲ ಪಾತ್ರ, ಕೆಲವು ಪೋಷಕ ಪಾತ್ರ, ಕೆಲವು ಅಥಿತೇಯ ಪಾತ್ರ. ಇಲ್ಲಿ ಪ್ರತಿ ಪಾತ್ರಗಳು ಒಂದೊಂದು ಪಾಠಕಲಿಸಲು ಸೃಷ್ಟಿಯಾಗಿವೆ. ಕಲಿತಿರುವುದು ಹನಿಗಳಷ್ಟು ಕಲಿಯುವುದು ಸಾಗರದಷ್ಟು.

ಜೀವನ ಕಳಿಸಿದಷ್ಟು ಕಲಿಯುವ.

ಬದುಕು ಒಂದು ಚರಣ ನೆಡೆದಷ್ಟೂ ದಾರಿ, ಕಲಿತಷ್ಟು ಪಾಠ.

ಇಲ್ಲಿ ನೈಜ ತಿರುವುಗಳು ಸಿಗುವುದೆ ಪಾಠ ಕಲಿಸುವ ಆ ಪಾತ್ರಧಾರಿಗಳ ಆಗಮನದಿಂದ.

ಪ್ರತಿ ಚರಣದಲ್ಲೂ ಈ ರೀತಿಯ ತಿರುವುಗಳು ಇದ್ದೆ ಇವೆ. ಅವುಗಳಲ್ಲಿ ನಿಮ್ಮ ಶಕ್ತಿ ಹೆಚ್ಚುಸುವ, ಶಕ್ತಿ ಕುಂದಿಸುವ ಎಲ್ಲ ತಿರುವುಗಳು ಇವೆ, ಆಯ್ಕೆ ನಿಮ್ಮದು ನಿಮಗೆ ಬೇಕಾದ ಹಾದಿಯಲ್ಲಿ ಶ್ರದ್ದೆ ಛಲ ಸಂಯಮದಿಂದ ಹೆಜ್ಜೆ ಹಾಕಿ ಗೆಲ್ಲುವ ಸವಾಲು ನಿಮ್ಮದು ಮಾತ್ರ.

ಶೀರ್ಷಿಕೆಯಂತೆ ಕೆಲವು ನಾಟಕೀಯತೆಗಳನ್ನು ಎತ್ತಿಹಿಡಿಯುವ ಪ್ರಯತ್ನ 

ನಾವು ವಿಚಾರಧಾರೆಗಳನ್ನು ಬೆನ್ನತ್ತುವ ಪಾತ್ರ ಬಯಸಬೇಕೇ ವಿನಃ ವ್ಯಾವಹಾರಿಕ ವಸ್ತು ಆಗಿರುವ ಹಣವಂತನ ಬಾಲ ಹಿಡಿಯುವ ಪಾತ್ರವಲ್ಲ.

ಬದಲಾಗುತ್ತಿರುವ ವಿಶ್ವದಲ್ಲಿ ಎಲ್ಲರೂ ವಿದ್ಯಾವಂತರೇ ಎಲ್ಲರೂ ಹಣವಂತರೇ ಆದರೆ ವಿಚಾರವಂತಿಕೆಯೇ ಬೇರೆ ಅದರ ವೈಶಿಷ್ಟ್ಯವೇ ಬೇರೆ..!

ಕಾಯಕನಾಥನ ಕಾಲೊತ್ತುವಳು ಲಕ್ಷ್ಮಿ. ಹಾಗೆಯೇ ವಿದ್ಯೆಗೆ ವಿನಯವೇ ಭೂಷಣ. 

ಕಾಯಕ ಮಾಡದೆ ಬಂದ ಹಣ. ವಿನಯವೇ ಇಲ್ಲದ ವಿದ್ಯಾರ್ಥಿ ಇಬ್ಬರು ಆತ್ಮ ವಂಚಕರೇ ಇದ್ದಂತೆ.

ಇಂಥ ಹಣ ದುರಹಂಕಾರ ಕೊಟ್ಟ್ಟರೆ ಈ ವಿದ್ಯೆ ಅಹಂಕಾರ ಕೊಡುತ್ತದೆ ಎರಡಕ್ಕೂ ಒಂಟಿ ಜೀವನ, ಅಂತೆಯೇ ಸರಸ್ವತಿಯನ್ನು ಹಿಂಬಾಲಿಸಿದರೆ ಲಕ್ಷ್ಮಿ ಆಕೆಯನ್ನು ಹಿಮ್ಮೆಟುವಳು. ಇದು ವಿಚಾರವಂತನಿಗಿರುವ ಹಿತ ನಮ್ಮ ಪಾತ್ರ ಇದಾಗಿರಬೇಕು.

ಹಣ ಕೇವಲ ವ್ಯಾವಹಾರಿಕ ವಸ್ತುವೇ ವಿನಃ ಪ್ರತಿಷ್ಠೆ ಅಲ್ಲ, ಆದರೆ ಕೆಲ ಪಾತ್ರಗಳು ಹಣವಂತಿಕೆಯೇ ಮೇಲೂ,ಮುಖ್ಯ ಎಂಬಂತೆ ಬಿಂಬಿಸುತ್ತಿವೆ. ಈ ಪಾತ್ರಗಳು ನಮ್ಮ ಸುತ್ತ ಇರುವುದು ನಮ್ಮ ಶೋಚನೀಯ ಸ್ಥಿತಿ. 

ಇಲ್ಲಿ ಹೇಳ ಹೊರಟಿರುವುದು ಒಂದೇ ಹಣವಂತರು ಎಂದು ತಮ್ಮ ಸ್ವಾಭಿಮಾನವನ್ನೇ ಮಾರಾಟಕ್ಕೆ ಇಡುವುದು,ಇಂಥ ಕಪಟಿಗಳ ಮುಂದೆ ಬಾಗುವುದು ಎಷ್ಟು ಸಮಂಜಸ...?

ಇದು ನೀವು ನಿಮ್ಮ  ಆತ್ಮಸಾಕ್ಷಿಗಳಿಗೆ ಕೇಳಬೇಕಾಗಿರುವ ಪ್ರಶ್ನೆ. ಮತ್ತೆ ಯಾವದು ಅಲ್ಲ ಇದೆ ಬಣ್ಣ ಹಾಕದೆ ನಟಿಸೋ ನಾಟಕೀಯತೆ. 

ಅಕ್ರಮ ಹಾದಿಯಲ್ಲಿ ಇರುವ ಹಣವಂತ ಮಾತ್ರ ಎಲ್ಲರನ್ನೂ ಕ್ಷೀಣವಾಗಿ ನೋಡಲು ಸಾಧ್ಯ. ಅದೇ ಒಬ್ಬ ವಿಚಾರವಂಥ ನಿಮ್ಮ ವಿಶೇಷತೆಗಳನ್ನು ಎತ್ತಿ ಇಡಿಯುವ ಯೋಚಿಸಿ ನಿಮ್ಮ ಒಡನಾಟ ಯಾವ ಪಾತ್ರದೊಂದಿಗೆ ಇರಬೇಕು.

ಇದೆಲ್ಲ ಒಂದು ಬಗೆಯ ಸ್ಟೀರಿಯೋಟೈಪಿಸಿ ಡಿಸ್ಕ್ರಿಮಿನಾಶನ್ stereotypic discrimination ಅಷ್ಟೇ.

ಈ ರಂಗಮಂಚದಲ್ಲಿ ದಂದೆಕೋರ ಬಡ್ಡಿ ಅಕ್ರಮ ಆಸ್ತಿವಂತ ಪಾತ್ರಗಳಿಗೆ ಪೋಷಕರು ಹಿಂಬಾಲಕರ ಸಾಲು ಜಾಸ್ತಿ ಬದಲಾಗಬೇಕಿರುವುದು ಇಲ್ಲಿ.

ಒಬ್ಬ ಹಣವಂತ ಮಾಡಿದ ತಪ್ಪನ್ನು ಅವನ ಹಣ ಮುಚ್ಚುವುದಾದರೆ, ಗುಣವಂತ ಮಾಡಿದ ತಪ್ಪುಗಳು ಅವನ ಗುಣವನ್ನೇ ಕೊಲ್ಲುತ್ತಿರುವುದು  ಯಾಕೆ?....ಯಾರು?

ಇದು ಈ ಪೋಷಕ ಪಾತ್ರಧಾರಿಗಳು, ಈ ಹಿಂಬಾಲಕರು ಸಮಾಜಕ್ಕೆ ಮಾಡುತ್ತಿರುವ ವಂಚನೆ.!

ಹಣವಂತನಿಗೆ ಹಿಂಬಾಲಕರು,ವಿಚಾರವಂತನಿಗೆ ಸ್ನೇಹಿತರು.

ನಮ್ಮ ಆತ್ಮಸಾಕ್ಷಿ ಎಷ್ಟು ವಿಶಿಷ್ಟವಾದದ್ದು ಎಂದರೆ ಅದರ ಮಾತನ್ನು ಕೇಳುವವರಿಗೆ ಮಾತ್ರ ಗೊತ್ತು.

ಈ ನವಯುಗದಲ್ಲಿ

ವಿದ್ಯಾರ್ಥಿಗಳೆಲ್ಲ ವಿದ್ಯಾವಂತರಲ್ಲ,

ವಿದ್ಯಾವಂತರೆಲ್ಲ ವಿಚಾರವಂತರಲ್ಲ. 

ವಿಚಾರವಂತಿಕೆಯೇ ಒಂದು ದೊಡ್ಡ ಆಸ್ತಿ.

ಬಣ್ಣ ಹಾಕದೆ ನಟಿಸೋ ನಾಟಕೀಯತೆ ನಮಗ್ಯಾಕೆ..... ಬದಲಾವಣೆ ಜಗದ ನಿಯಮ ಬದಲಾಗೋಣಾ….

                          ನೈಜತೆಗಳೊಂದಿಗೆ

                                                    -ಮಂಜುನಾಥ್ ಕೆ ಆರ್ 

 

 

Category:Personal Development



ProfileImg

Written by Manjunath KR