ನಾವು ಯಾವುದೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆˌತುಂಬಾನೆ ಗೌರವ ಕೊಡುತ್ತೇವೆ. ಅವರನ್ನ ಪ್ರೀತಿಸುತ್ತೇವೆˌಅವರಂತೆ ನಾವು ಆಗಬೇಕು ಅಂತ ಕನಸು ಕಾಣುತ್ತೆವೆ.ˌಆದರೆ ಅವರಂತೆ ನಾವು ಮಾಡಬೇಕು ಅನ್ನುವುದನ್ನ ಮರೆತುಬಿಡುತ್ತೇವೆ! ಹೌದು ನೀವು ಯಾವುದೆ ಸಾಧಕರನ್ನು ತೆಗೆದುಕೊಳ್ಳಿ ಅವರು ರಾತ್ರಿಮಲಗಿ ಬೆಳಗ್ಗೆ ಎದ್ದಕೂಡಲೆ ಸಾಧಕನಾಗಿಲ್ಲ. ವರ್ಷಗಳ ಲೆಕ್ಕದಲ್ಲಿ ಅವರ ಪರಿಶ್ರಮವಿದೆ.
ವಿರಾಟ್ ಕೊಹ್ಲಿ
ನಾವು ವಿರಾಟ್ ಕೊಹ್ಲಿ ಅಧ್ಭುತ ಕ್ರಿಕೇಟ್ ಆಟಗಾರˌಅವನಿಗೆ ಹಣದಲ್ಲಿ ಏನು ಕಡಿಮೆ?ಇನ್ಸ್ಟಾಗ್ರಾಂನಲ್ಲಿˌಒಂದು ಪೋಟೊ ಹಾಕಿದರೂ ಅವನಿಗೆ ಕೋಟಿಯ ಲೆಕ್ಕದಲ್ಲಿ ಹಣಸಿಗುತ್ತೆ ಅಂತ ಮಾತಡಿಕೊಳ್ಳುವ ನಾವುˌಆತ ಸತತ 20ವರ್ಷಗಳಿಂದ 4ರ ಸುಮಾರಿಗೆ ಎದ್ದು ಪ್ರತಿನಿತ್ಯ ಕ್ರಿಕೇಟ್ ನ್ನು ಅಭ್ಯಾಸ ಮಾಡುತ್ತಾನೆ ಅನ್ನುವುದರ ಬಗ್ಗೆ ಯಾಕೆ ಮಾತನಾಡುವುದಿಲ್ಲ.
ನಮ್ಮ ಮನೆಯಲ್ಲಿ ಯಾರಾದರೂ ತೀರಿಕೊಂಡಿದಾರೆ! ಎಂಬ ಸುದ್ಧಿ ಕೇಳಿದರೆˌ ನಮ್ಮ ಪ್ರತಿಕ್ರಿಯೆ ಹೇಗಿರಬಹುದು ಒಮ್ಮೆ ಕಲ್ಪಿಸಿಕೊಳ್ಳಿˌ ಆದರೆ ವಿರಾಟ್ ರಣಜಿ ಪಂದ್ಯಾವಳಿಯ ಸಂಧರ್ಭದಲ್ಲಿˌಆತ ಕೇಳಿದ್ದು ತನ್ನ ತಂದೆಯ ಸಾವಿನ ವಿಚಾರವನ್ನ. ಆದಿನ 40 ರನ್ ಗಳಿಸಿದ್ದ. ಮಾರನೆ ದಿನ ಆತ ಅಟವನ್ನು ಮುಂದುವರಿಸಬೇಕ ಬೇಡವೆ ಎಂಬ ಗೊಂದಲ. ಆತ ಏನು ಮಾಡಿರಬಹುದು ? ನಾವೆಲ್ಲ ಏನು ಯೋಚಿಸುತ್ತೇವೆˌಅವನು ಆಟ ಮುಂದುವರಿಸಲಿಲ್ಲ ಅಂತ. ಆದರೆ ನಿಜ ಹೇಳಬೇಕೆಂದರೆˌವಿರಾಟ್ ಅಟಮುಂದುವರಿಸಿದ್ದ. ಈ ರೀತಿಯ ನಿತ್ಯಪರಿಶ್ರಮˌಮತ್ತೆ ಯಾವುದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿ ನಿಂತ ಕಾರಣದಿಂದಲೇ ವಿರಾಟ್ ಈ ಎತ್ತರಕ್ಕೆ ಬೆಳೆದಿದ್ದಾರೆ ಬಿಟ್ಟರೆˌಕೇವಲ ಕನಸ್ಸು ಕಂಡು ಸುಮ್ಮನಾಗಿದ್ರೆˌಅದು ಸಾಧ್ಯವಿರಲಿಲ್ಲ.ˌಅನ್ನೊದನ್ನ ನೆನಪಿನಲ್ಲಿ ಇಟ್ಟುಕೊಳ್ಳಬೇಕು .
ಎಲಾನ್ ಮಸ್ಕ್
ಇವತ್ತು >ಎಲಾನ್ ಮಸ್ಕ್ ಹೆಸರನ್ನ ಕೇಳಿಲ್ಲದವರು ಯಾರು? ಎಲನ್ ಮಾಡಿದ್ದು ಭೌತಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿˌಪದವಿಯನ್ನು ˌಆದರೆ ಆಯ್ಕೆ ಮಾಡಿಕೊಂಡ ಕ್ಷೇತ್ರ, ಸಾಪ್ಟ್ ವೇರ್. ನಾವು ಅಂದುಕೊಂಡ ರೀತಿˌ ಎಲನ್ ನ ಬದುಕು ಹೂವಿನ ಹಾಸಿಗೆಯಲ್ಲˌಅದು ಮುಳ್ಳಿನ ಹೊದಿಕೆ! 1995 ರಲ್ಲೇ ತನ್ನ ಸಹೋದರನ ಜೊತೆಯಲ್ಲಿ ಸೇರಿಕೊಂಡು ಸಾಪ್ಟ್ ವೇರ್ ಕಂಪೆನಿಯೊಂದನ್ನ ಪ್ರಾರಂಭ ಮಾಡುತ್ತಾರೆ. ಕಂಪೆನಿಯೂ ಬೆಳೆಯಿತುˌಆದರೆ ಅಲ್ಲಿದ್ದ ನಿರ್ದೇಶಕರುˌಈ ಚಿಕ್ಕಹುಡುಗ ಸಿಇಒ ಆಗಬೇಕಾ ಅಂತˌಅತನನ್ನೆ ಕೆಳಗೆ ಇಳಿಸಿದರು. ತಾನೇ ಕಷ್ಟಪಟ್ಟು ಕಟ್ಟಿದ ಕಂಪನಿಯಲ್ಲಿ ತನಗೆ ಸ್ಥಾನವಿಲ್ಲವೆಂದರೆˌಯಾರಾದರೂ ಏನು ಆಲೋಚಿಸಬಹುದು! ಎಲನ್ ಸುಮ್ಮನೆ ಕೂರಲಿಲ್ಲˌಹೊಸ ಹೊಸ ಪ್ರಯೋಗವನ್ನು ಮುಂದುವರಿಸುತ್ತ ಹೋದರು. ಬೇರೆ ಬೇರೆˌ ಸಾಪ್ಟ್ ವೇರ್ ಕಂಪೆನಿಯನ್ನ ಶುರುಮಾಡುತ್ತ ಹೋದರುˌ ಆದರೆ ಎಲ್ಲ ಕಡೆಯಲ್ಲಿಯೂ ಸಿಇಓ ಪಟ್ಟದಿಂದ ಕೆಳಗೆ ಇಳಿಸುವುದೆ ನಡೆಯಿತು.
ಯಾರೆ ಆದರು ಇಂತಹ ಪರಿಸ್ಥಿತಿಯಲ್ಲಿ ಯಾವುದೆ ಕೆಲಸವನ್ನು ಮಾಡುವುದಕ್ಕೆ ಮುಂದಾಗುವುದಿಲ್ಲˌ. ಆದರೆ ಎಲನ್ ವಿಭಿನ್ನ ಅಲೋಚನೆಯ ವ್ಯಕ್ತಿˌ ಮಂಗಳಗ್ರಹದಲ್ಲಿ ಯಾಕೆ ಮನುಷ್ಯ ವಾಸ ಮಾಡಬಾರದು ಅಂತ ಯೋಚನೆ ಬರುತ್ತೆ. ರಷ್ಯದಲ್ಲಿ ಮಾತುಕತೆˌ ಕೂಡ ನಡೆಸುತ್ತಾರೆ. ಅದೆ ಸಮಯದಲ್ಲಿ ಎಲನ್ ನ ಮನಸ್ಸಿನಲ್ಲಿ ಸ್ವತಃ ರಾಕೇಟ್ ನ ನಿರ್ಮಾಣ ಯಾಕೆ ಮಾಡಬಾರದು ಎಂದು ಯೋಚನೆ ಬಂದಿತು. ಅದು ಅಷ್ಟು ಸುಲಭದ ಮಾತ ಖಂಡಿತವಾಗಿಯೂ ಅಲ್ಲ , ಆದರೆ ಮಸ್ಕ್ ಸುಮ್ಮನೆ ಕೂರುವ ಮನುಷ್ಯನೆ ಅಲ್ಲ. ಸ್ಪೇಸ್ ಎಕ್ಸ್ ಎಂಬ ಕಂಪೇನಿಯನ್ನು ಕೂಡ ಶುರುಮಾಡಿದ್ರು. ಯಾರ ಬೆಂಬಲವೂ ಸಿಗಲಿಲ್ಲ. ಸತತ ಸೋಲುಗಳು ಮೊದಲನೆ ಪ್ರಯತ್ನದಲ್ಲೆ ರಾಕೇಟ್ ನ ಇಂಜಿನಿಗೆ ಬೆಂಕಿ ಬಿತ್ತು!ಎರಡನೆ ಪ್ರಯತ್ನದಲ್ಲಿ ರಾಕೆಟ್ ವಾಪಸ್ ಬಂತುˌಮೂರನೆ ಪ್ರಯತ್ನದಲ್ಲಿ ಸ್ಪೇಸ್ ಗೆ ಹೋದರು ಸರಿಯಾದ ದಾರಿ ತಲುಪಲಿಲ್ಲ. ಸೋಲಿನ ಮೇಲೆˌಸೋಲು ಯಾರೆ ಆದರೂ ಸುಮ್ಮನಾಗುತ್ತಿದ್ದರು. ಎಲನ್ ಇಟ್ಟಹೆಜ್ಜೆಯನ್ನು ಹಿಂದೆ ಇಡುವ ವ್ಯಕ್ತಿಯೆˌಅಲ್ಲವೇ ಅಲ್ಲ. ತನ್ನ ಆಸ್ತಿಯನ್ನೆಲ್ಲ ಮಾರಿ, ಬಾಡಿಗೆ ಮನೆಯಲ್ಲಿ ವಾಸಮಾಡುವುದಕ್ಕೆˌಶುರುಮಾಡುತ್ತಾರೆ ಮತ್ತೆ ನಾಲ್ಕನೆ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾರೆ. ಮೋಟರ್ ವಿಭಾಗದಲ್ಲಿ ಟೆಸ್ಲಾ ಕಂಪೇನಿಯ ನಿರ್ಮಾಣವಾಯಿತು ಅದರ ಸಿಇಓ ಕೂಡˌಆದರೂ ಮೊದಲ ವಿದ್ಯುತ ಚಲಿತ ಕಾರಿನ ನಿರ್ಮಾಣವಾಯಿತು.ˌಇವತ್ತು ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಎಲನ್ ಅಗ್ರಪಂಕ್ತಿಯಲ್ಲಿ ಇರಬಹುದುˌ.ಇವತ್ತು ಟ್ವಿಟರ್ ಸೇರಿದಂತೆ ಅನೇಕ ದೈತ್ಯ ಕಂಪೇನಿಗಳು ಎಲನ್ ನ ನೇತೃತ್ವದಲ್ಲಿ ನಡೆಯಬಹುದುˌ.ಆದರೆˌ ಆತ ಅನುಭವಿಸಿದ ನಷ್ಟ!ಸ್ವತಃ ತನ್ನ ಕಂಪೇನಿಗಳಿಂದಲೆ ಹೋರಬರಬೇಕಾದ ಪರಿಸ್ಥಿತಿˌರಾಕೇಟ್ ನಿರ್ಮಾಣದಲ್ಲಿ ಕೂಡ ಕೋಟಿಗಟ್ಟಲೆ ಹಣವನ್ನು ನಷ್ಟಮಾಡಿಕೊಂಡಿದ್ದು ಇದೆಲ್ಲಾ ಸಾಮಾನ್ಯವಾದ ಮಾತ? ನಾವು ಸೋಲೆ ಗೆಲುವಿನ ಮೆಟ್ಟಿಲು ಎಂಬ ಮಾತಿಗೆ ಎಲನ್ ರ ಬದುಕೆ ಒಂದು ಉದಾಹರಣೆಯಾಗಿ ತೆಗೆದುಕೊಳ್ಳಬಹುದು.
ಅಡೆಲ್
ಈ ರೀತಿ ತಮ್ಮ ಕ್ಷೇತ್ರದಲ್ಲಿ ಬದುಕನ್ನೆ ಮೀಸಲಾಗಿಟವರು ಅನೇಕ ಜನ. ಖ್ಯಾತ ಗಾಯಕಿ ಅಡೆಲ್ ನ ಹಾಡುಗಳು ಅದೆಷ್ಟು ಅಧ್ಭುತ. ಸಂಗೀತ ಕೇಳುವುದಕ್ಕೆ ಭಾಷೆಯ ಹಂಗಿಲ್ಲ. ಯಾರು ಯಾವ ಭಾಷೆಯ ಹಾಡನ್ನೂ ಬೇಕಾದರೂ ಕೇಳಬಹುದು. ಅದಕ್ಕೆ ಭಾಷೆಯ ಹಂಗಿಲ್ಲ. ಇವತ್ತು ಕನ್ನಡದ ಹಾಡುಗಳನ್ನ ಬೇರೆಯವರು ಕೇಳುವುದಿಲ್ಲವೆˌ ಅಥವಾ ಇತರ ಭಾಷೆಯ ಹಾಡುಗಳನ್ನು ಕನ್ನಡಿಗರಿಗೂ ಕೇಳುವುದಿಲ್ಲವೇ?
ಅಡೆಲ್ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ ಗಾಯಕಿˌಅವಳು ತನ್ನ ಬದುಕನ್ನ ಹೋರಾಟದ ಬದುಕನ್ನಾಗಿಯೆ ಬದುಕಬೇಕಾಗಿದ್ದು ಅವಳˌಅನಿವಾರ್ಯವಾಗಿತ್ತು! ಅವಳು ಎರಡು ವರ್ಷವಾಗಿರುವಾಗಲೇ ತಂದೆ ಮನೆ ಬಿಟ್ಟು ಹೋದ. ಆದರೂ ತಾಯಿಯೆ ಇವಳನ್ನು ಸಾಕುತ್ತ ಬಂದಳು. ತನ್ನ ಇಪ್ಪತ್ತನೆ ವಯಸ್ಸಿಗೆ ಮೊದಲ ಆಲ್ಬಂ ಅನ್ನು ಹೊರತಂದಲು. ಸರಿ ಸುಮಾರು 10 ಮಿಲಿಯನ್ ಪ್ರತಿಗಳು ಮಾರಟವಾಯಿತು. ಅದೆ ಸಮಯದಲ್ಲಿ ಅವಳು ಪ್ರೀತಿಯಲ್ಲಿ ಬಿದ್ದಿದಳು. ಒಂದುವರೆ ವರ್ಷದಲ್ಲೆ ಆ ಸಂಬಂಧ ಮುರಿದು ಬಿತ್ತು. ಆಕೆ ಬರೆದ ಸಮ್ ಒನ್ ಲೈಕ್ ಯೂ ಎಂಬ ಹಾಡನ್ನ ಇವತ್ತು ಅನೇಕರು ಪದೆ ಪದೆ ಕೇಳುತ್ತಾರೆ. ನಾನು ಸಹ. . ಆದರೆ ಅವಳು 23 ವರ್ಷಕ್ಕೆ ಹಾಡು ಹೇಳುವುದನ್ನೆ ನಿಲ್ಲಿಸಬೇಕಾಯಿತು! ಒಮ್ಮೆ ಕಲ್ಪಿಸಿಕೊಳ್ಳಿ ಆಕೆ ಬದುಕಿದ್ದೆ ನಾನು ಒಬ್ಬಳು ಗಾಯಕಿಯಾಗಬೇಕು ಅಂತ. ಅದನ್ನು ಸಾಧಿಸಿ ತೋರಿಸಿದಳು ಕೂಡ. ಆದರೆ ಅದೆ ಕೆಲಸವನ್ನು ನೀನು ಮುಂದುವರಿಸಬಾರದೆಂದರೆ ಹೇಗಿರಬೇಡ. ಕಾರಣವೂ ಇಲ್ಲದಿರಲಿಲ್ಲ. ಅವಳು ವಿಪರೀತ ಸಿಗರೆಟ್ ಸೇದುತ್ತಿದ್ದಳು. ಅದೆ ಅವಳ ಸಮಸ್ಯೆಗೆ ಕಾರಣ. ಧ್ವನಿಪೆಟ್ಟಿಗೆಯ ಶಸ್ತ್ರಚಿಕಿತ್ಸೆ ನಡೆಯಿತು.ˌ ಆದರೆ ತನ್ನ ಕನಸನ್ನು ಸುಲಭವಾಗಿ ಬಿಟ್ಟುಕೊಡುವ ಹುಡುಗಿಯಲ್ಲ. ಅವಳು ಸಿಗರೆಟ್ ಸೇದುವುದನ್ನ ಬಿಟ್ಟಳು. ಒಂದೇ ವರ್ಷದಲ್ಲಿ ಮತ್ತೆ ಹಾಡುವುದಕ್ಕೆ ಶುರುಮಾಡಿದಳು.
ಜೇಮ್ಸ್ ಬಾಂಡ್ ಸಿನಿಮಾಕ್ಕೆ ತಾನೆ ಬರೆದುˌಹಾಡಿದ ಹಾಡೊಂದಕ್ಕೆ ಆಸ್ಕರ್ ಪ್ರಶಸ್ತಿಯೂ ದೊರೆಯಿತು. ಅವಳಿಗೆ ಪ್ರದರ್ಶಕರನ್ನ ಕಂಡ ಕೂಡಲೆ ಭಯವಾಗುತ್ತಿತ್ತುˌಇದನ್ನೆಲ್ಲ ಮೆಟ್ಟಿನಿಂತಲೂ ಅವಳು. ಅವಳು ಇಲ್ಲಿಯವರೆಗೆ ದಶಕಗಳ ಲೆಕ್ಕದಲ್ಲಿ ಗ್ರಾಮಿಪ್ರಶಸ್ತಿ ಗೆದ್ದಿರಬಹುದು, ಮೂರು ಸಲ ಗಿನ್ನಿಸ್ ರೇಕರ್ಡ್ ನಲ್ಲಿ ಹೆಸರು ಬಂದಿರಬಹುದು. ಬ್ರಿಟನ್ನಿನ ಅತಿ ಶ್ರೀಮಂತ ಹಾಡುಗಾರ್ತಿಯಾಗಿರಬಹುದು. ಆದರೆ, ಅವಳು ತಾನು ಎರಡನೆ ವರ್ಷದಲ್ಲೆ ತಂದೆಯಿಂದ ದೂರವಾದಳು ಅನ್ನುವುದನ್ನ ಮರೆಯಬಾರದು. ತಾಯಿಯೂ ಅಷ್ಟು ಅನುಕೂಲದಲ್ಲಿ ಇರಲಿಲ್ಲ. ಅವಳು ನಾಲ್ಕನೆ ವಯಸ್ಸಿನಿಂದ ಆಕೆಗೆ ತಾನೊಬ್ಬ ಹಾಡುಗಾರ್ತಿಯಾಗಬೇಕು ಎಂಬ ಕನಸ್ಸಿತ್ತು. ಅವಳ ಮೊದಲ ಆಲ್ಬಂ ಬಂದ ಮೂರೆ ವರ್ಷಕ್ಕೆˌ ನೀನು ಹಾಡಬಾರದೆಂದಾಗ ಅವಳಿಗೆ ಆದ ನೋವನ್ನು ಅನುಭವಕ್ಕೆ ತಂದುಕೊಳ್ಳಿ. ತಪ್ಪು ಅವಳದ್ದೆ ಇರಬಹುದುˌ ವೇದಿಕೆಯ ಮೇಲೆ ನಡೆದ ಅಪಮಾನಗಳುˌಅದೆಷ್ಟೊ ಸಲ ವೇದಿಕೆಯ ಮೇಲೆ ತಲೆಸುತ್ತಿಬಿದ್ದಿದ್ದು. ಇದನ್ನೆಲ್ಲ ಮೆಟ್ಟಿನಿಂತ ಕಾರಣದಿಂದಲೆ ಅವಳು ಈ ಎತ್ತರಕ್ಕೆ ಬೆಳೆದಿದ್ದು.
ಮೊಹಮ್ಮದ್ ಶಮಿ
ಇವತ್ತು ಮೊಹಮ್ಮದ್ ಶಮಿ ಬೌಲಿಂಗ್ ಗೆˌ ಬಂದರೆಂದರೆ ದೈತ್ಯ ಬ್ಯಾಟ್ಸ್ ಮ್ಯಾನ್ ಗಳು ಕೂಡ ಒಮ್ಮೆ ಹೆದರುತ್ತಾರೆ. ಇವತ್ತು ಭಾರತದ ಟಾಪ್ ಬೌಲರ್ ಗಳಲ್ಲಿ ಒಬ್ಬರು. ಔಟ್ ಸ್ವಿಂಗ್ˌರಿವರ್ಸ್ ಸ್ವಿಂಗ್ˌಯಾರ್ಕರ್ ಮೊದಲಾದ ಎಸೆತಗಳಿಗೆ ಬ್ಯಾಟ್ಸ್ ಮ್ಯಾನ್ ಗಳು ವಿಕೆಟ್ ಒಪ್ಪಿಸಿˌ ಪೆವಿಲಿಯನ್ ಕಡೆ ಹೋಗಿಬಿಡುತ್ತಾರೆ. ಆದರೆ ಶಮಿ ಸಾಗಿಬಂದ ದಾರಿ ನಿಜಕ್ಕೂ ರೋಚಕವಾದದ್ದುˌಅವರು 19 ವರ್ಷದ ಹುಡುಗನಾಗಿದಾಗಲೇˌಗಂಟೆಗೆ 140 ಕೀಮಿ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದರುˌಇಂತಹ ಅಧ್ಭುತ ಪ್ರತಿಭೆಯಾಗಿದ್ರು ಬಡತನದ ಕಾರಣದಿಂದ ಅವರಿಗೆ ಅವಕಾಶ ಸಿಗಲಿಲ್ಲ!ˌಮುಂದೆ 24 ನೇ ವಯಸ್ಸಿಗೆ ಅವರ ಮದುವೆಯೂ ಆಗುತ್ತೆˌಒಂದು ಮಗು ಕೂಡ ಆಯ್ತು. ಆದರೆ ಏನು ಮಾಡುವುದು ಸ್ವತಃ ಹೆಂಡತಿಯೆ ಗಂಡನ ಮೇಲೆˌಲೈಂಗಿಕ ಕಿರುಕುಳ ಮತ್ತೆ ವ್ಯಭಿಚಾರ ಕೇಸ್ ದಾಖಲೆ ಮಾಡ್ತಾರೆ. ಅವನ ಮಾನಸಿಕ ಆರೋಗ್ಯ ಸರಿಯಿಲ್ಲ ಎಂಬ ಅರೋಪ ಮಾಡ್ತಲೇ. ಆದರೆ ಶಮಿ ನಾನು ನಿರಪರಾಧಿ ಎಂದೂ ಎಷ್ಟೆ ಹೇಳಿದರು ಯಾರು ನಂಬುವ ಸ್ಥಿತಿಯಲ್ಲಿರಲಿಲ್ಲ! ನಿರಂತರ ನ್ಯಾಯಲಯದ ವಿಚಾರಣೆˌ ಜನರ ನಿಂದನೆಯ ಮಾತುಗಳು ಅದಕ್ಕಾಗಿ ಮೂರುಸಲ ಆತ್ಮಹತ್ಯೆಗೆ ಪ್ರಯತ್ನವನ್ನು ಮಾಡ್ತಾರೇ. ಆದರೆ ಸಾವಿಗೂ ಗೊತ್ತಿತ್ತು ಅನಿಸುತ್ತೆ ಈ ಹುಡುಗ ಸಾಯುವುದಕ್ಕೆ ಇರುವುದಲ್ಲ. ಬದುಕಿ ಸಾಧಿಸುವುದು ತುಂಬಾ ಇದೆ ಅಂತ. ಯಾವುದೆ ಆಟಗಾರ ಎಲ್ಲ ಪಂದ್ಯದಲ್ಲಿಯೂ ಒಂದೆ ರೀತಿಯˌಆಟದ ಪ್ರದರ್ಶನ ಮಾಡುವುದಕ್ಕೆ ಬರುವುದಿಲ್ಲ. ಅದನ್ನ ತಿಳಿದುಕೂಡ ಹಲವರು ಅವರನ್ನ ಪಾಕಿಸ್ಥಾನದ ಜೊತೆ ಮ್ಯಾಚ್ ಪಿಕ್ಸಿಂಗ್ ಮಾಡಿಕೊಂಡಿದಾರೆ ಎಂದರು. ಆದರೆ ಶಮಿ ಹೇಳಿದ್ದು ಒಂದೆ ಮಾತು ನಾನು ಯಾವತ್ತು ದೇಶದ್ರೋಹಿಯಾಗಲಾರೆˌಇಷ್ಟೆಲ್ಲಾ ಅಪಮಾನವನ್ನು ಅನುಭವಿಸಿˌಮನಸಿನಲ್ಲಿ ಆ ಮಟ್ಟದ ನೋವಿದ್ರು ಕೂಡˌಅಮಟ್ಟದಲ್ಲಿ ಬೌಲಿಂಗ್ ಪ್ರದರ್ಶನ ಮಾಡುವುದು ಸಾಮಾನ್ಯ ಮಾತ?, ನೀವೆ ಹೇಳಿ.
ಇದನ್ನೆಲ್ಲ ನೋಡಿದಾಗ ಏನು ಅನಿಸುತ್ತೆ?ˌಸಾಧನೆ ಎಂದರೆ ನಿತ್ಯ ಪರಿಶ್ರಮˌನಾವು ಕನಸುಕಂಡˌವಿಚಾರದ ಬಗೆಗೆ ಕೆಲಸ ಮಾಡುತ್ತ ಹೋಗುವುದುˌ.ಯಾವುದೆ ಪರಿಸ್ಥಿತಿಯಲ್ಲಿಯೂ ನಮ್ಮ ಗುರಿಯನ್ನ ಮರೆಯದೆ ಇರುವುದುˌಇದೆಲ್ಲ ನಮ್ಮಿಂದ ಮಾಡಲೂ ಸಾಧ್ಯವಾದರೆ ನಾವು ಸಾಧಕರಾಗಬಹುದು.
0 Followers
0 Following