ಪ್ರಪಂಚದ ಶ್ರೀಮಂತ ಹಿಂಧೂ ದೇವಾಲಯವೆಂದಾಗ ನೆನಪಾಗುವುದು ತಿರುಪತಿ ತಿಮ್ಮಪ್ಪ. ಹೌದು ಈ ಏಳುಬೆಟ್ಟಗಳ ವಡೆಯನನ್ನು ನೋಡಲು, ಅನುಗ್ರಹ ಪಡೆಯಲು ಲಕ್ಷ-ಲಕ್ಷ ಮಂದಿ ದಿನವೊಂದಕ್ಕೆ ದರ್ಶನ ಪಡೆಯುತ್ತಾರೆ. ಇನ್ನು ಭಕ್ತರು ಆ ಮಹಾಪ್ರಭುವಿಗೆ ದೇಣಿಗೆ ರೂಪದಲ್ಲಿ ನೀಡಿದ, ಹಣ,ವಡವೆ,ವಜ್ರದ ಲೆಕ್ಕವೇ ಇಲ್ಲ. ಅಷ್ಟೊಂದು ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ ಈ ತಿರುಪತಿ ತಿಮ್ಮಪ್ಪ, ಜಗತ್ತಿನಲ್ಲಿ ಒಂದು ಶ್ರೀಮಂತ ಹಾಗೂ ಭಕ್ತರನ್ನು ಕಾಯುವ ದೇವನಾಗಿದ್ದಾನೆ ಎನ್ನಬಹುದು. ಲಕ್ಷ್ಮೀ ಪದ್ಮಾವತಿ ಸಹಿತ ನೆಲೆಸಿರುವ ಶ್ರೀನಿವಾಸ ತನ್ನ ದರ್ಶನಕ್ಕೆ ಬರುವ ಸಕಲ ಭಕ್ತರ ಸಂಕಷ್ಟಗಳನ್ನು ನಿವಾರಿಸಿ ಸುಖ, ಸೌಭಾಗ್ಯ ಕರುಣಿಸುತ್ತಿದ್ದಾನೆ. ಹೀಗಾಗಿಯೇ ಎಲ್ಲ ದೇವಾಲಯಗಳಲ್ಲಿ ವರ್ಷಕ್ಕೊಮ್ಮೆ ಜಾತ್ರೆ ನಡೆದರೆ ಇಲ್ಲಿ ನಿತ್ಯ ಜಾತ್ರೆ ಸೇರುತ್ತದೆ.
ಇನ್ನು ಇಲ್ಲಿನ ಆ ಜಗತ್ ಪ್ರಸಿದ್ಧ ಪ್ರಸಾದ ಎಂದರೆ ಅದು ತಿರುಪತಿ ಲಡ್ಡು. ಹೌದು ಬಹುಷಃ ಹೆಚ್ಚಿನವರಿಗೆ ತಿಳಿದಿರಕ್ಕಿಲ್ಲ ಕೇವಲ ಲಾಡುವಿನ ಮೂಲಕವೇ ತಿಮ್ಮಪ್ಪನ ಆದಾಯ ವರ್ಷಕ್ಕೆ ಕೋಟಿ ಕೋಟಿ ದಾಟುತ್ತದೆ. ಇನ್ನೂ ಈ ತಿರುಪತಿ ತಿಮ್ಮಪ್ಪ ಸಾಲಗಾರ ಎಂದು ಕೂಡ ಹೇಳಲಾಗುತ್ತದೆ. ಅಷ್ಟಕ್ಕೂ ತಿಮ್ಮಪ್ಪ ಸಾಲಗಾರನಾಗಲು ಕಾರಣವೇನು? ಆತನಿಗೆ ಸಾಲವನ್ನು ನೀಡಿದವರು ಯಾರು? ಏಳು ಬೆಟ್ಟಗಳ ಒಡೆಯ ತಿಮ್ಮಪ್ಪ ಮಾಡಿದ ಸಾಲವೆಷ್ಟು? ಈ ಸಾಲದ ಋಣ ಸಂದಾಯವಾಗಲು ಎಷ್ಟು ಸಮಯ ಬೇಕು? ಅಷ್ಟಕ್ಕೂ ಲಕ್ಷ್ಮಿಪತಿ ಸಾಲ ಮಾಡಿದ್ದು ಯಾವ ಕಾರಣಕ್ಕಾಗಿ? ತಿರುಪತಿ ತಿಮ್ಮಪ್ಪನ ದೇವಸ್ಥಾನದ ಟ್ರಸ್ಟಿನ ಖಾತೆಯಲ್ಲಿ ಬರೊಬ್ಬರಿ ಐವತ್ತು ಸಾವಿರ ಕೋಟಿ ಇದೆ. ಆದರೆ ತಿರುಪತಿ ತಿಮ್ಮಪ್ಪ ಮಾತ್ರ ಇನ್ನೂ ಸಾಲದ ಸುಳಿಯಲ್ಲಿದ್ದಾನೆ ಮತ್ತುಅದು ಅಂತಿಂಥ ಸಾಲ ಅಲ್ಲ, ಕಲಿಯುಗ ಮುಗಿದರೂ ಸಹ ಸಾಲವನ್ನು ತೀರಿಸಲಾಗದು. ಭಕ್ತರ ಬಯಕೆಯನ್ನು ಈಡೇರಿಸುವ ತಿಮ್ಮಪ್ಪ ಇನ್ನು ತನ್ನ ಸಾಲವನ್ನು ಯಾಕೆ ತೀರಿಸಿಲ್ಲ? ತಿಮ್ಮಪ್ಪನ ಸಾಲದ ಬಗ್ಗೆ ಒಂದು ಪೌರಾಣಿಕ ಮತ್ತು ಧಾರ್ಮಿಕ ಆಧಾರ ಕೂಡ ಇದೆ. ಪುರಾಣಗಳ ಪ್ರಕಾರ ತಿಮ್ಮಪ್ಪ ಕುಬೇರನ ಸಾಲಗಾರನಾಗಿದ್ದಾನೆ. ಮತ್ತು ಕಲಿಯುಗದ ಅಂತ್ಯದ ತನಕ ತಿಮ್ಮಪ್ಪ ಕುಬೇರನಸಾಲ ತೀರಿಸಬೇಕಾಗಿದೆ ಎಂದು ಪುರಾಣ ಹೇಳುತ್ತದೆ.ವಿಷ್ಣುವಿನ ಮೇಲೆ ಕೋಪಮಾಡಿಕೊಂಡು ವೈಕುಂಠವನ್ನು ತ್ಯಾಜಿಸಿದ ಲಕ್ಷ್ಮಿ ದೇವಿಯು, ಭೂಲೋಕದಲ್ಲಿ ರಾಜನ ಮಗಳಾಗಿ ಜನಿಸುತ್ತಾಳೆ. ಇನ್ನು ಲಕ್ಷ್ಮಿಯನ್ನು ಹುಡುಕುತ್ತಾ ವಿಷ್ಣು ವೆಂಕಟೇಶ್ವರನ ರೂಪದಲ್ಲಿ ಭೂಮಿಗೆ ಬರುತ್ತಾರೆ. ರಾಜನ ಬಳಿ ಹೋಗಿಮದುವೆಯ ಪ್ರಸ್ತಾಪವನ್ನು ಕೂಡ ಇಡುತ್ತಾರೆ. ಭೂಮಿಯ ಮೇಲೆ ರಾಜನ ಮಗಳನ್ನು ಮದುವೆಯಾಗಲು ವಿಷ್ಣುವಿಗೆ ತುಂಬಾ ದುಡ್ಡಿನ ಅಗತ್ಯವಾಗುತ್ತದೆ ಮತ್ತು ಈ ಕಾರಣಕ್ಕಾಗಿ ಬ್ರಹ್ಮ, ಶಿವನ ಸಾಕ್ಷಿಯಾಗಿ ಕುಬೇರನ ಬಳಿ ಅಪಾರ ಪ್ರಮಾಣದ ಸಾಲವನ್ನು ಪಡೆಯುತ್ತಾರೆ. ಇದನ್ನ ಈಗಲೂ ಕೂಡ ಶ್ರೀನಿವಾಸಕಲ್ಯಾಣ ಎಂದೇ ಕರೆಯಲಾಗುತ್ತದೆ. ಕುಬೇರನ ಈ ಸಾಲವನ್ನು ನಾನು ಕಲಿಯುಗದ ಅಂತ್ಯದ ತನಕ ಬಡ್ಡಿ ಸಮೇತವಾಗಿ ತೀರಿಸುತ್ತೇನೆ ಎಂದು ಹೇಳುತ್ತಾನೆ. ಆ ಮಾತಿನಂತೆಯೇ ಇಂದು ಕೂಡ ಸಾಲವನ್ನು ತೀರಿಸುತ್ತಿದ್ದಾನೆ ವೆಂಕಟರಮಣ. ಈ ಕಾರಣಕ್ಕೆ ಸಾಲಗಾರ ತಿಮ್ಮಪ್ಪ ಎಷ್ಟೇ ಹಣ ಹೊಂದಿದ್ದರು ಬಡವನಾಗಿಯೇ ಇದ್ದಾನೆ ಎಂಬ ನಂಬಿಕೆ.
ವಿಶ್ವದಲ್ಲಿಯೇ ಅತಿ ದೊಡ್ಡ ದೇವಸ್ಥಾನ ಶ್ರೀ ತಿರುಪತಿ ತಿರುಮಲ.ಭೂಲೋಕದ ವೈಕುಂಠ,ವೆಂಕಟಾದ್ರಿ ಎಂಬ ಹೆಸರುಗಳು ಸಹ ಅಪಾಯಮಾನವಾಗಿ ಒಪ್ಪುತ್ತವೆ. ಎಲ್ಲದಕ್ಕಿಂತ ಮೊದಲು ತಿಳಿದುಕೊಳ್ಳಬೇಕಾದ ಮುಖ್ಯ ವಿಷಯವೇನೆಂದರೆ ನೀವು ತಿರುಪತಿ ಹಾಗೂ ಆ ದೇಗುಲಗಳ ಬಗ್ಗೆ ಮೊದಲಿನಿಂದಲೂ ಕೇಳುತ್ತಾ ಬಂದ ಎಷ್ಟು ಸಂಗತಿಗಳು.ಅವು ವಾಸ್ತವವಲ್ಲ ಎಂಬ ಸತ್ಯವನ್ನು.ಅದರಲ್ಲಿ ಮೊದಲನೆಯದ್ದು ಶ್ರೀ ತಿರುಪತಿ ಸ್ವಾಮಿಯ ತಲೆಯ ಮೇಲೆ ಕೂದಲು ಬೆಳೆದಿದೆ ಎಂಬ ವಿಷಯ. ಇದುಸತ್ಯವಲ್ಲ. ಈ ವಿಷಯವು ಕೇವಲ ಒಂದು ಕಟ್ಟುಕಥೆ ಎಂದು ಆರು ವರ್ಷಗಳ ಹಿಂದೆ ನಡೆದ ಒಂದು ಸಂದರ್ಶನದಲ್ಲಿ, ಟಿಟಿಡಿಯ ಮುಖ್ಯ ಅರ್ಚಕರಾದ ರಮಣ ದೀಕ್ಷಿತ್ ಎಂಬುವವರೇ ಸ್ಪಷ್ಟಪಡಿಸಿದ್ದರು. ಕ್ಷೇತ್ರದಲ್ಲಿ ಸುಮಾರು 20 ಕಿಲೋ ಮೀಟರ್ ದೂರ ಇರುವ ಯಾರಿಗೂ ತಿಳಿಯದ ಒಂದು ನಿಗೂಢ ಊರಿನಿಂದ ದೇಗುಲಕ್ಕೆ ಬೇಕಾದ ಹೂ-ಪುಷ್ಪಗಳು ಸಪ್ಲೈ ಆಗುತ್ತದೆ ಎಂಬುವುದು ಸಹ ಅಬದ್ದವಾದ ವಿಷಯ. ಇದು ಈಗಲೂ ಸಹ ಅನೇಕ ಕಡೆ ಚಾಲ್ತಿಯಲ್ಲಿರುವ ಸುಳ್ಳು. ಅಲ್ಲಿಯೇ ಇರುವ ಕೈತೋಟದಲ್ಲಿ ಬೆಳೆಯಲಾಗುವ ಹೂಗಳಿಂದ ಹಾಗೂ ಭಕ್ತರು ನೀಡುವ ಹೂಗಳನ್ನು ಬಳಸಲಾಗುತ್ತದೆ ಎಂಬುದು ಅಸಲಿ ಸತ್ಯ. ಇದನ್ನ ಟಿಟಿಡಿಎ ಹಲವು ಸಲ ಹೇಳಿದೆ. 18ನೇ ಶತಮಾನದಲ್ಲಿ ಈಗಿನ ತಿರುಪತಿ ದೇವಾಲಯವನ್ನ 12 ದಿನಗಳಲ್ಲಿ ನಿರ್ಮಿಸಿದ್ದರು ಎಂದು ಸಹ ಹೇಳಲಾಗುತ್ತದೆ. ಈ ವಿಷಯಕ್ಕೂ ಸಹ ಯಾವುದೇ ಗಟ್ಟಿ ಸಾಕ್ಷಿಯಿಲ್ಲ. ಹಾಗಾಗಿ ಇದು ಸಹ ಒಂದು ಆಧಾರ ರಹಿತ ಕಥೆ ಮಾತ್ರ. ಅಂದಿನಿಂದ ಇಂದಿನವರೆಗೂ ಸಹ ತಿರುಪತಿಯಲ್ಲಿ ಪ್ರತಿ ದಿನವೂ ತಪ್ಪದೆ ಇಲ್ಲಿಯ ಅರ್ಚಕರಿಂದ ಸ್ವಾಮಿಗೆ ಪೂಜಾ ಕಾರ್ಯ ನಡೆಯುತ್ತಾಬಂದಿದೆ. ತಿರುಪತಿಯಲ್ಲಿ ಯಾರೇ ಹೋಗಲಿ ಮುಡಿ ಕೊಡುತ್ತಾರೆ. ಇದು ಯಾಕೆ ಎಂದು ನಿಮಗೆ ಗೊತ್ತಾ? ಇದರ ಹಿಂದೆಯೂ ಸಹ ಒಂದು ಪೌರಾಣಿಕ ಹಿನ್ನೆಲೆ ಇದೆ. ವೆಂಕಟೇಶ್ವರ ಸ್ವಾಮಿ ಭೂಲೋಕ ವಾಸಿಯಾಗಿದ್ದಾಗ ಮುಂದಿನ ತಲೆಗೂದಲನ್ನು ಕಳೆದುಕೊಳ್ಳಬೇಕಾಗಿ ಬರುತ್ತದೆ. ಆಗ ಇಲ್ಲಿದ್ದ ಗಂಧರ್ವ ಯುವರಾಣಿಯಾದ ನೀಲಾದೇವಿಯು ತನ್ನ ಮುಂಗುರುಳು ಕತ್ತರಿಸಿ ಸ್ವಾಮಿಯ ತಲೆಗೆ ಅಂಟಿಸುತ್ತಾಳೆ. ಆಕೆಯ ಭಕ್ತಿ ಹಾಗೂ ವಿನಯಕ್ಕೆ ಮೆಚ್ಚಿದ ಸ್ವಾಮಿಯು ಆಕೆಗೆ ಅನುಗ್ರಹಿಸಿ, ಯಾರು ನನ್ನ ಸನ್ನಿಧಿಗೆ ಬಂದು ಈ ರೀತಿ ಭಕ್ತಿಯಿಂದ ಮುಡಿ ಕೊಡುತ್ತಾರೋ, ಅವರೆಲ್ಲರ ಇಷ್ಟಾರ್ಥಗಳು ಸಹ ಸಿದ್ಧಿಸುತ್ತವೆ ಎಂದು ಹೇಳುತ್ತಾರೆ. ಆಗಿನಿಂದ ಇದು ಅಲ್ಲಿ ಪರಂಪರಾಗತವಾಗಿ ರೂಡಿಗೆ ಬಂದಿದೆ. ಈ ದೇವಾಲಯ ಯಾಕೆ ಆಗ ಬ್ರಿಟಿಷರ ವಶವಾಗಲಿಲ್ಲ ಎಂದು ಜನ ಕೇಳುತ್ತಾರೆ. ಆದರೆ ಈ ಗುಡಿ ಬ್ರಿಟಿಷರ ಅಧೀನಕ್ಕೆ ಹೋಗಲಿಲ್ಲ ಅಥವಾ ಅವರು ಆಗ ಇದನ್ನ ತಮ್ಮ ವಶಕ್ಕೆ ತೆಗೆದುಕೊಳ್ಳಲಿಲ್ಲಎಂಬ ವಿಷಯವೂ ಸಹ ಸಂಪೂರ್ಣ ಸತ್ಯವಲ್ಲ. 18ನೇ ಶತಮಾನದ ಹೊತ್ತಿಗೆ ಮರಾಠರ ಯುಗ ಮುಗಿಯುತ್ತಿದ್ದ ಹಾಗೆ ಹಿಂಧೂ ಅರಸರ ಏಳಿಗೆ ಕೊನೆಗೊಳ್ಳುತ್ತದೆ. ಆಗ ಅಖಂಡ ಭಾರತವು ನವಾಬರ ವಶಕ್ಕೆ ಹೋಗುತ್ತದೆ. ಈ ಸಮಯದಲ್ಲಿ ತಿರುಪತಿ ದೇಗುಲ ಸಹ ನವಾಬರ ವಶಕ್ಕೆ ಹೋಗಿತ್ತು. ಮುಂದೆ ಇವರಿಗೂ ಹಾಗೂ ಬ್ರಿಟಿಷರಿಗೂ ಯುದ್ಧವಾದಾಗ,ನವಾಬರು ಬ್ರಿಟಿಷರ ಮುಂದೆ ಸೋಲನ್ನು ಒಪ್ಪಿಕೊಳ್ಳುತ್ತಾರೆ. ಅಥವಾ ಬ್ರಿಟಿಷರಿಗೆ ಕಪ್ಪಅಥವಾ ದಂಡ ಕಟ್ಟಲಾಗದೆ ತಮ್ಮ ಬಳಿ ಇದ್ದ ಅನೇಕ ಜಹಾಗೀರುಗಳನ್ನಅವರಿಗೆ ಬಿಟ್ಟು ಕೊಡುತ್ತಾರೆ. ಆಗ ತಿರುಪತಿ ದೇಗುಲವು ಸಹ ಬ್ರಿಟಿಷರ ಪಾರೂಪತ್ಯಕ್ಕೆ ಒಳಗಾಗುತ್ತದೆ. 1901ರ ಹೊತ್ತಿಗೆ ತಿರುಪತಿ ದೇಗುಲದ ಒಡೆತನವು ಅದಾಗಲೇ ಬ್ರಿಟಿಷರ ತೋಳು ತೆಕ್ಕೆಗೆ ಬಿದ್ದಿತ್ತು. ಮುಂದೆ 1931ರ ಸಮಯದಲ್ಲಿ ಚಿತ್ತೂರು ಡಿಸ್ಟಿಕ್ ಕಲೆಕ್ಟರ್ ಒಬ್ಬರು ಅಂದಿದ ಕೇಂದ್ರದ ಬೋರ್ಡ್ ಆಫ್ ರೆವೆನ್ಯೂಗೆ ಒಂದು ಪತ್ರ ಬರೆಯುತ್ತಾರೆ. ಅದರಲ್ಲಿ ದೇಗುಲದ ಖಾತೆಯಿಂದ ಹಿಡಿದು, ಅದು ಇದ್ದ ಸ್ಥಳದ ಪಹಣಿಯ ವಿವರ ಹಾಗೂ ದೇಗುಲದ ಸಮಸ್ತ ವಿವರವಿತ್ತು. 1942-43ರಾಲ್ಲಿ ಅಂದಿನ ಕಿತ್ತೂರು ಜಿಲ್ಲಾ ಕಲೆಕ್ಟರ್ ಆಗಿದ್ದ ಬ್ರೂಸ್ ಎಂಬಾತ ಈ ದೇಗುಲದ ಆಡಳಿತದ ವಿಷಯಕ್ಕೆ ಸಂಬಂಧಿಸಿದ ಹಾಗೊಂದು ಬೃಹತ್ ಸಂಹಿತೆ ಅಥವಾ ಕೋಡ್ ಆಫ್ಕಂಡಕ್ಟ್ ಒಂದನ್ನು ಸಿದ್ಧಪಡಿಸುತ್ತಾನೆ. ಅದನ್ನು ಈಗಲೂ ಸಹ ಬ್ರೂಸ್ಕೋಡ್ ಎನ್ನಲಾಗುತ್ತದೆ. ಈ ಸೆಟ್ ಆಫ್ರೂಲ್ ಬುಕ್ ನಲ್ಲಿ ದೇಗುಲದ ಬಗ್ಗೆ ಒಟ್ಟು 42 ನಿಬಂಧನೆಗಳ ಪಟ್ಟಿಯ ವಿವರ ವಿತ್ತು. ಅದರಲ್ಲೊಂದು ವಿವರವು ದೇಗುಲಕ್ಕೆ ಹಿಂದುಗಳ ಹೊರತು ಬೇರೆ ಮತದವರು ಪ್ರವೇಶಿಸುವಹಾಗಿಲ್ಲ ಎಂದಿತ್ತು.
ಹಿಂದುಗಳ ಪುಣ್ಯ ಕ್ಷೇತ್ರಕ್ಕೆ ಯಾರು ಬರಬೇಕು ಯಾರು ಬರಬಾರದು ಎಂಬುದನ್ನು ಆಗ ಬ್ರಿಟಿಷರು ನಿರ್ಧರಿಸಿದ್ದರು. ಆಗ ರೂಲ್ಸ್ ಮಾಡಲು ಇದ್ದ ಕಾರಣ ಒಂದೇ, ಹಿಂದೂ ಮುಸಲ್ಮಾನರ ನಡುವೆ ಇದ್ದ ಐಕ್ಯ ಮತವನ್ನ ಒಡೆಯುವುದು. ಇದರಿಂದ ಇವರಿಬ್ಬರ ನಡುವೆ ಕಚ್ಚಾಟವಾಗುವ ಹಾಗೆ ಮಾಡಿ ದೇವಸ್ಥಾನದ ಸ್ಥಳ ಕಬಳಿಸುವ ಹುನ್ನಾರ ಅವರಿಗಿತ್ತು. ಆದರೆ ಅದೆಂದಿಗೂ ಸಹ ಈಡೇರಲೇ ಇಲ್ಲ. ಇಲ್ಲಿ ನೀವು ತಿಳಿಯಬೇಕಾದ ಇನ್ನೊಂದು ಮುಖ್ಯ ಸಂಗತಿ ಎಂದರೆ 1930 ರಿಂದ 41ರವರೆಗೆ ಸಹ ತಿರುಪತಿ ದೇಗುಲದಲ್ಲಿ ಸಂಗ್ರಹವಾದ ಒಟ್ಟು ಮೊತ್ತ ಹತ್ತು ಲಕ್ಷಕ್ಕೂ ಹೆಚ್ಚು. ಇದು ಈಗ ಹೋಲಿಸಿದರೆ ಬಹಳ ಕಡಿಮೆಯಾದರೂ, ಆ ಕಾಲಕ್ಕೆ ಅದೇ ಹೆಚ್ಚಿನ ಮೊತ್ತ. ದಿನೇ ದಿನೇ ಭಕ್ತರ ಸಂಖ್ಯೆ ಹಾಗೂ ಭೇಟಿ ಹೆಚ್ಚಾದಂತೆಲ್ಲ ತಿರುಪತಿಯ ಕಾಣಿಕೆ ಹುಂಡಿಯ ಕಲೆಕ್ಷನ್ ಏರುತ್ತದೆ. ತಿರುಪತಿಯಲ್ಲಿ ಒಂದು ದಿನದಲ್ಲಿ ಕಲೆಕ್ಟ್ ಆದ ಬೃಹತ್ ಮೊತ್ತವೆಂದರೆ ಅದು ಆರು ಕೋಟಿ ರೂಪಾಯಿ. ಒಂದೇ ದಿನದಲ್ಲಿ ಇಷ್ಟು ಹಣ ಅಂದರೆ ಸಾಮಾನ್ಯ ಸಂಗತಿಯಲ್ಲ.
ತಿರುಪತಿಯ ತಿರುಮಲ ದೇವಸ್ಥಾನವನ್ನ ಐದು ಸಂಚಾರ ಮಾರ್ಗಗಳ ಮೂಲಕ ತಲುಪಬಹುದು. ಸಾಮಾನ್ಯರೆಲ್ಲ ಏರುವಂತಹ ಮೆಟ್ಟಿಲುಗಳ ಮಾರ್ಗ 12 ಕಿಮೀ ದೂರದ ಅಂತರವಿರುವ ಮಾರ್ಗ ಹಾಗೂ ಎರಡನೆಯ 19 ಕಿಮೀ ಉದ್ದವಿರುವ ನೆಲಮಾರ್ಗ. ಇದರ ಮೂಲಕ ವಾಹನಗಳಲ್ಲಿ ದೇವಸ್ಥಾನ ತಲುಪುವುದು. ಮೂರನೆಯದು, ಚಂದ್ರಗಿರಿ ಯಿಂದ ಇರುವ ಪಾದ ಯಾತ್ರೆಯ ಮಾರ್ಗ. ಇದನ್ನ ಶ್ರೀವಾರಿ ಮಾರ್ಗವೆಂದು ಸಹ ಕರೆಯುತ್ತಾರೆ. ಇದು ಆರು ಕಿಮೀ ದೂರ ಆಗುತ್ತದೆ ಹಾಗೂ ಇದು ಕಾಡು ಮೆಡುಗಳ ಅಡವಿಯ ಮಾರ್ಗ. ನಾಲ್ಕನೆಯದು ಮಮಲ್ಡುರು ಮಾರ್ಗ ಊರಿನಿಂದ ಇರುವ ರೈಲು ಮಾರ್ಗವಾದರೆ, ಐದನೇ ಯದ್ದು ನಾಗಪಟ್ಲು ಎಂಬ ಊರಿನಿಂದ ಇರುವನೇರ ಮಾರ್ಗ. ಮೊದಲನೆಯ ಮಾರ್ಗ ಸುಧೀರ್ಘ ಮೆಟ್ಟಿಲುಗಳ ಮಾರ್ಗವಾಗಿದ್ದು, ಇದರಲ್ಲಿ ಒಟ್ಟು ಮೂರುವರೆ ಸಾವಿರಕ್ಕೂ ಅಧಿಕ ಮೆಟ್ಟಿಲುಗಳಿದೆ. ಇಲ್ಲಿ ಸಿಗುವ ಮೊದಲನೇ ವಿಭಾಗ ಗಾಳಿಗೋಪುರ. ಇಲ್ಲಿವರೆಗೆ ಸುಮಾರು 2000 ಮೆಟ್ಟಿಲುಗಳಿವೆ.ಇನ್ನು ಮುಂದಿನದು ಮೊಣಕಾಲಿನ ಮೆಟ್ಟಿಲು ವಿಭಾಗ. ಬಹಳಷ್ಟು ಜನ ಈ ಹಂತಕ್ಕೆ ಬಂದಾಗ ಉಳಿದ ಮೆಟ್ಟಿಲುಗಳನ್ನು ತಮ್ಮ ಮೊಣಕಾಲಿನಿಂದಲೇ ಏರಿ ಸಾಗುತ್ತಾರೆ. ಇದನ್ನ ಮೊಣಕಾಲು ಪರ್ವತ ಎಂದು ಸಹ ಅಲ್ಲಿ ಕರೆಯುವ ವಾಡಿಕೆ ರೂಢಿಯಲ್ಲಿದೆ. ತಿರುಪತಿಯ ಸುತ್ತ ಏಳು ಬೆಟ್ಟಗಳಿದ್ದು, ಇವುಗಳನ್ನು ಸಪ್ತಗಿರಿ ಎಂದು ಸಹ ಕರೆಯುತ್ತಾರೆ. ಈ ಏಳು ಬೆಟ್ಟಗಳ ಹೆಸರುಗಳು ಹೀಗಿವೆ ಶೇಷಾದ್ರಿ, ನೀಲಾದ್ರಿ, ಗರುಡಾದ್ರಿ, ಅಂಜನಾದ್ರಿ, ವೃಷಭದ್ರಿ, ನಾರಾಯಣದ್ರಿ, ವೆಂಕಟಾದ್ರಿ. ಪುರಾಣಗಳ ಕಥೆಯ ಪ್ರಕಾರ ಆದಿಶೇಷನ ಏಳು ಹೆಡೆಗಳೇ, ಏಳು ಬೆಟ್ಟಗಳೆಂದು ಹೇಳಲಾಗುತ್ತದೆ. ಮೇಲಿನಿಂದ ಅಥವಾ ಗೂಗಲ್ ಮ್ಯಾಪ್ನಲ್ಲಿ ಈ ಏಳು ಶಿಖರಗಳು ಸಹ ಉದ್ದಕ್ಕೆ ಸಾಲಾಗಿ ಹಾವಿನ ಆಕಾರದಲ್ಲಿ ಕಾಣುತ್ತದೆ. ಆದಿಶೇಷನು ಮಲಗಿರುವ ಹಾಗೆಯೇ ಇವು ವಾಸ್ತವವಾಗಿಯೂ ಕಾಣೋದು ವಿಶೇಷ. ಸಪ್ತಗಿರಿಗಳಲ್ಲಿ ಮೊದಲನೆಯ ಹಾಗೂ ಪ್ರಮುಖವಾದ ಬೆಟ್ಟವೆಂದರೆ, ಅನು ಶೇಷಾದ್ರಿ. ಇದಕ್ಕೆ ಈ ಹೆಸರು ಬರಲು ಸಹ ಆದಿಶೇಷಣೆ ಕಾರಣ. ಒಮ್ಮೆ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ವಾಯುದೇವನು ಬಂದಾಗ, ಅಲ್ಲಿ ಎದ್ದು ಕುಳಿತ ಆದಿಶೇಷನಿಗೂ ಹಾಗೂ ವಾಯುದೇವನಿಗೂ ಜಟಾಪಟಿಯೇ ನಡೆಯುತ್ತದೆ. ಇದನ್ನ ಬಗೆಹರಿಸಲು ಮಧ್ಯ ಬಂದ ಮಹಾವಿಷ್ಣು, ವಾಯುದೇವ ಹಾಗೂ ಆದಿಶೇಷ ಇವರಿಬ್ಬರಲ್ಲೂ ಸಹ ಯಾರು ಮಹಾಶಕ್ತಿವಂತರೆಂದು ನಿರ್ಧಾರಮಾಡಲು, ವಾಯುದೇವರಿಗೆ ಆಚಲವಾದ ಶೇಷಾದ್ರಿಯನ್ನ ಅಲುಗಾಡಿಸಲು ಹೇಳುತ್ತಾನೆ. ವಾಯುದೇವ ಆಗ ತನ್ನ ಬಲವನ್ನೆಲ್ಲಬಿಟ್ಟು ಮಲಗಿದ ಆದಿಶೇಷನನ್ನ ಅಲುಗಾಡಿಸಲು ಪ್ರಯತ್ನ ಮಾಡಿದಾಗ, ಪ್ರಬಲವಾಗಿ ಬೀಸಿದ ಗಾಳಿಯನ್ನ ಗಮನಿಸಿ ಏನಾಗ್ತಿದೆ ಎಂದು ಆದಿಶೇಷ ತಾನೇ ಎದ್ದು ನೋಡಿದಾಗ ಆತ ಎದ್ದಿದ್ದು ನನ್ನ ಶಕ್ತಿಯಿಂದಲೇ ಎಂದು ತಿಳಿದ ವಾಯುದೇವನು ತಾನೇ ಬಲಶಾಲಿ ಎಂದು ಬೀಗುತ್ತಾನೆ. ಇದರಿಂದ ಆದಿಶೇಷನು ಬೇಸರಗೊಂಡು, ಆತನನ್ನು ಹತ್ತಿರ ಕರೆದು ಸಮಾಧಾನಿಸಿದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯು ಚಿಂತೆ ಬೇಡ. ಆದಿಶೇಷ ಯಾವತ್ತಿದ್ರೂ ನೀನು ನನ್ನ ಆವಾಸ ಸ್ಥಾನದಲ್ಲಿ ಇರುತ್ತೀಯ. ನನ್ನನ್ನ ಕಾಣಲು ಬರುವವರು ನಿನ್ನ ಮೂಲಕವೇ ಬರುವಂತಾಗಲಿ ಎಂದು ಆಶೀರ್ವದಿಸುತ್ತಾನೆ. ಇಂದಿನಿಂದ ಇದು ಶೇಷಾದ್ರಿ ಗಿರಿ ಎಂಬ ಹೆಸರಿನೊಂದಿಗೆ ಖ್ಯಾತಿ ಪಡೆಯುತ್ತಾ ಬಂದಿದೆ. ಇನ್ನೂ ಎರಡನೆಯದಾದ ನೀಲಾದ್ರಿ, ಕೊನೆಯ ಸಲ ಭಕ್ತಿಯಿಂದ ಸ್ವಾಮಿಗೆ ತಲೆ ಕೂದಲನ್ನು ಕೊಟ್ಟ ನೀಲಾಂಬರಿ ಎಂಬ ಭಕ್ತೆಯ ಹೆಸರಿನಲ್ಲಿಯೇ ಇದೆ. ಈಕೆ ತನ್ನ ಕೂದಲನ್ನುಕೊಟ್ಟಿದ್ದು ವ್ಯಕ್ತಿಯೊಬ್ಬ ತನ್ನ ಅಹಂ, ಸ್ವಪ್ರತಿಷ್ಠೆಯನ್ನು ಸ್ವಾಮಿಯ ಮುಂದೆ ಕೊಟ್ಟು ಸ್ವಾಮಿಯ ಕೃಪೆಗೆ ಪಾತ್ರವಾಗುವುದರ ಸಂಕೇತವೇ ಆಗಿದೆ.
ಮೂರನೇಯದಾಗಿ ಗರುಡದ್ರಿ , ವಿಷ್ಣುವಿನ ವಾಹನವಾದ ಗರುಡನು ತನ್ನ ದಾಯಾದಿಗಳಾದ ಕೂದ್ರುವಿನ ಮಕ್ಕಳನ್ನು ಹತ್ಯೆ ಮಾಡಿದ ತಪ್ಪಿಗೆ, ಮೋಕ್ಷ ಪಡೆಯಲು ಸ್ವಾಮಿಯ ಕುರಿತು ತಪಸ್ಸನಾಚರಿಸಿ, ಸ್ವಾಮಿಯ ವರ ಹಾಗೂ ಸಾನಿಧ್ಯ ಬೇಡಿದಾಗ ಮಹಾವಿಷ್ಣು ಆತನಿಗೆ ಒಲಿದು ನೀನು ಸಹ ನನ್ನ ಬಳಿಯೇ ಇರು ಎಂದು ಹೇಳಿ, ಆತನನ್ನು ಒಂದು ಶಿಖರದ ರೂಪದಲ್ಲಿಅಲ್ಲಿಯೇ ನೆಲೆಸುವ ಹಾಗೆ ವರ ಕೊಡುತ್ತಾನೆ. ಇದೇ ಗರುಡಾತ್ರಿಯ ಬೆಟ್ಟ, ಇದನ್ನ ಗರುಡಚಲ ಎಂದು ಸಹ ಕರೆಯುತ್ತಾರೆ. ನಾಲ್ಕನೆಯದಾಗಿ ಅಂಜನಾದ್ರಿ ಬೆಟ್ಟ. ಅಂಜನಾದ್ರಿ ಬೆಟ್ಟ ಪ್ರಾಣ ದೇವರಾದ ಆಂಜನೇಯನ ತಾಯಿ ಅಂಜನ ದೇವಿಹೆಸರಲ್ಲಿ ಈ ಬೆಟ್ಟವಿದೆ.ಈಕೆ ಕೇಸರಿ ರಾಜನನ್ನ ಕೈ ಹಿಡಿದ ಎಷ್ಟೋ ಕಾಲದವರೆಗೂ ಮಕ್ಕಳಾಗದ ಕಾರಣ, ಈ ಬೆಟ್ಟದ ಮೇಲೆ ತಪಸ್ಸನ್ನ ಆಚರಿಸುತ್ತಾ ಕೂರುತ್ತಾಳೆ. ಈಕೆಯ ತಪಸ್ಸಿಗೆ ಒಲಿದ ವಾಯುದೇವನು ಈ ಬೆಟ್ಟದಲ್ಲಿ ಬೆಳೆಯುವ ಒಂದು ಗರ್ಭ ಫಲವನ್ನು ನೀಡುತ್ತಾನೆ. ಅದನ್ನ ಸೇವಿಸಿದ ಬಳಿಕ
ಗರ್ಭವತಿಯಾದ ಅಂಜನಾದೇವಿ, ಆಂಜನೇಯ ಸ್ವಾಮಿಗೆ ಜನ್ಮ ನೀಡುತ್ತಾಳೆ ಎಂಬುದು ಪ್ರತೀತಿ. ಆಂಜನೇಯ ಸ್ವಾಮಿ ವಾಯುದೇವನ ಕೃಪಾ ಕಟಾಕ್ಷದಿಂದ ಜನಿಸಿದ ಬಾಲಕ. ಅಂಜನಾದೇವಿ ಕುಳಿತು ತಪಸ್ಸನ್ನಾಚರಿಸಿದ ಈ ಶಿಖರವೇ ಮುಂದೆ ಅಂಜನಾದ್ರಿ ಬೆಟ್ಟವಾಯಿತು. ಐದನೇಯದಾಗಿ ವೃಷಭಾದ್ರಿ ಬೆಟ್ಟವು, ಬಹಳ ಹಿಂದೆ ಕೃತಯುಗದಲ್ಲಿ ವೃಷಭಾಸುರ ಎಂಬ ರಾಕ್ಷಸ ಇಲ್ಲಿ ಜೀವಿಸುತ್ತಿದ್ದ. ಈತನೂ ಪ್ರತಿ ವರ್ಷ ಶಿವರಾತ್ರಿಯಂದು ತಪ್ಪದೆ ತನ್ನ ಶಿರವನ್ನೇ ಕಡಿದು ಶಿವನಿಗೆ ಅರ್ಪಿಸುತ್ತಿದ್ದ. ಅಂದ ಹಾಗೆ ಪ್ರತಿಸಲ ಶಿರ ಕಾಡಿದಾಗ ಒಂದು ಹೊಸ ಶಿರ ಹುಟ್ಟುತ್ತಿತ್ತು. ಈತನ ತಪೋಭಕ್ತಿಗೆ ಮೆಚ್ಚಿ, ಶಿವ ಪ್ರಸನ್ನನಾಗಿ ನಿನಗೇನು ವರ ಬೇಕು ಕೇಳು ಎಂದಾಗ, ಈತ ತಾನು ಶಿವನ ಜೊತೆ ದ್ವಂಧ್ವ ಯುದ್ಧದಲ್ಲಿ ತೊಡಗಬೇಕೆಂಬ ವಿಚಿತ್ರ ಕೋರಿಕೆಯನ್ನು ಇಡುತ್ತಾನೆ. ಅನೇಕ ದಿವಸಗಳವರೆಗೂ ನಡೆದ ಯುದ್ಧದಲ್ಲಿ ಶಿವ ಗೆಲ್ಲುತ್ತಾನೆ. ಹೆದರಿ ಓಡಿ ಹೋದ ವೃಷಭಾಸುರ, ಸೋತು ಪ್ರಾಣ ಬಿಡುವಾಗ ಕೊನೆಯ ಸಲ ನಿನಗೇನು ಬೇಕೆಂದು ಶಿವ ಕೇಳಿದಾಗ, ನಿನ್ನ ಸಾನಿತ್ಯದಲ್ಲಿ ಸದಾ ಇರುವಂತೆ ಅನುಗ್ರಹಿಸಲು ವೃಷಭಾಸುರ ಬೇಡಿದಾಗ ಶಿವ, ತಥಾಸ್ತು ಎನ್ನುತ್ತಾನೆ. ಸಪ್ತಗಿರಿಯ ಒಂದು ಬೆಟ್ಟವನ್ನು ವೃಷಭಾಸುರನ ಹೆಸರಿನಲ್ಲಿ ವೃಷಭದ್ರಿ ಬೆಟ್ಟ ಎನ್ನುತ್ತಾನೆ. ಆರನೆಯದ್ದು ನಾರಾಯಣಾದ್ರಿ ಬೆಟ್ಟ, ಈ ಹಿಂದೆ ಮಹಾವಿಷ್ಣುವಿನ ಪೂಜೆನೀಯ ಭಕ್ತನಾಗಿದ್ದ ಶ್ರೀ ನಾರಾಯಣ ಮಹರ್ಷಿಯು, ತಾನು ಮಹಾವಿಷ್ಣುವನ್ನ, ಯಾವ ತಡೆಯು ಇಲ್ಲದೆ ತಪಸ್ಸು ಆಚರಿಸಲು, ಯಾವುದೇ ವಿಗ್ನ ಹಾಗೂ ಭಂಗಭಾರದ ಸ್ಥಳ ಭೂಲೋಕದಲ್ಲಿ ಯಾವುದಿದೆ ಎಂದು ಹುಡುಕುತ್ತಿದ್ದಾಗ, ಆತನಿಗೆಆ ಬ್ರಹ್ಮ ದೇವರು ಈಗ ನಾರಾಯಣದ್ರಿ ಇರುವ ಸ್ಥಳ ತೋರಿಸುತ್ತಾರೆ. ಅದರಂತೆ ಅಲ್ಲಿ ಕುಳಿತು ಶ್ರದ್ಧೆಯಿಂದ ವಿಷ್ಣುವನ್ನು ಭಜಿಸುವ ನಾರಾಯಣ ಮಹರ್ಷಿಯ ಭಕ್ತಿ ಹಾಗೂ ತಪೋ ಭಕ್ತಿಗೆ ಒಲಿದ ವಿಷ್ಣು, ಪ್ರಸನ್ನನಾಗಿ ಬೇಕಾದವರ ಕೇಳು ಎಂದಾಗ, ತಾನು ಕುಳಿತ ಜಾಗಕ್ಕೆ ತನ್ನ ಹೆಸರೇ ಶಾಶ್ವತವಾಗಿ ಸೀಮಿತವಾಗಿರುವಂತೆ ಮುನಿ ಕೋರುತ್ತಾನೆ. ಆತನ ಆಸೆಯಂತೆ ಈ ಗಿರಿಗೆ ನಾರಾಯಣದ್ರಿ ಎಂಬ ಹೆಸರು ರೂಡಿಗೆ ಬರುತ್ತದೆ. ಏಳನೇಯದ್ದು ವೆಂಕಟಾದ್ರಿ, ಇದು ಭೂಲೋಕದ ವೈಕುಂಠವೆಂದೆ ಹೆಸರಾದ ಬೆಟ್ಟ. ವೈಕ ಅಂದ್ರೆ ಪಾಪಗಳು.ಕಟ ಎಂದರೆ ಅದು ನೀಗುವುದು ಎಂದರ್ಥ. ಅಂದರೆ ಈ ಬೆಟ್ಟದಲ್ಲಿ ಸ್ವಾಮಿಯನ್ನು ಭಕ್ತಿಯಿಂದ ನೆನೆದರೆ ನಮ್ಮ ಸಕಲ ಪಾಪಗಳು ನೀಗುತ್ತವೆಂದು ಹೇಳಲಾಗುತ್ತದೆ. ಹೀಗಾಗಿ ಇದಕ್ಕೆ ವೆಂಕಟಾದ್ರಿ ಬೆಟ್ಟ ಎಂದು ಕರೆಯುತ್ತಾರೆ. ಸಕಲ ಹಿಂದೂಗಳ ಪೂಜ್ಯನಿಯ ಸ್ಥಳ ಇದು ಯುಗ ಯುಗಗಳಿಂದಲೂ ಸಹ ತನ್ನ ಮಹಿಮೆಯನ್ನು ಸಾರುತ್ತ ಎಲ್ಲರನ್ನ ಆಶೀರ್ವದಿಸುತ್ತ ಇಲ್ಲಿ ಭೂಲೋಕದ ವೈಕುಂಠದ ಹಾಗೆ ನೆಲೆ ನಿಂತ ಸ್ಥಳವೆಂಬುವುದು ನಿರ್ವಿವಾದಿತ ಸತ್ಯ.
journalist