ಒಂದು ಮುತ್ತಿನ ಕಥೆ.

ಆತ್ಮ ಕಥೆಯ ಬಿಡಿ ಭಾಗಗಳು -5

ProfileImg
05 May '24
3 min read


image

ಒಂದು ಮುತ್ತಿನ ಕಥೆ.

ಇದನ್ನು ಕಾಕತಾಳೀಯವೆಂದು ಹೇಗೆ ಒಪ್ಪುದು ?

ನನಗೆ ಎಷ್ಟೋ ಸಲ ಆಶ್ಚರ್ಯ ಆಗುತ್ತದೆ ಅಷ್ಟೊಂದು ಸಣ್ಣ ಹರಳು( ಕಲ್ಲಿನ ತುಂಡು?) ಹೇಗೆ ಪರಿಣಾಮ ಬೀರುತ್ತದೆ ಎಂದು..

2001 ರಲ್ಲಿ ನನಗೆ ಇದರ ಮಿರಾಕಲ್ ನ ಅನುಭವಾಯಿತು
ನನಗೆ 1998 - 2001 ರ ವರೆಗೆ ಅಗಾಗ ಗಂಟಲು ಸೋಂಕಿನ ನ ಸಮಸ್ಯೆತೀವ್ರವಾಗಿ ಕಾಡುತ್ತಿತ್ತು.

ಒಮ್ಮೆ ಆಂಟಿ ಬಯಾಟಿಕ್ಸ್ ತಗೊಂಡು ಕೋರ್ಸ್ ಮುಗಿಸಿ ನಿಲ್ಲಿಸಿ ಹತ್ತು ಹದಿನೈದು ದಿನಕ್ಕೆ ಮತ್ತೆ ಗಂಟಲು ನೋವು..
ಡಾ.ವಿಷ್ಣು ಕಣಿಯೂರು,ಡಾ.ಕಿಶೋರ್ ಕುಮಾರ್ ಶೆಟ್ಟಿ ಮೊದಲಾದ ಇ ಎನ್ ಟಿ ತಜ್ಞರ ಬಳಿ ಚಿಕಿತ್ಸೆ ಪಡೆದೆ

ಕೊನೆಗೆ ಅದು ದ್ವನಿ ಪೆಟ್ಟಿಗೆಗೆ ಮತ್ತೆ ಮತ್ತೆ ಸೋಂಕು  ಆಗುತ್ತಿರುವುದು..ಅದಕ್ಕಾಗಿ ಏನೊ ಸರ್ಜರಿ / ಲೇಸರ್ ಚಿಕಿತ್ಸೆ  ಏನೊ ಹೇಳಿದರು.ಇಲ್ಲಾಂದರೆ ಮಲ್ಟಿಪಲ್ ರೆಸಿಸ್ಟೆನ್ಸ್ ಡೆವಲಪ್ ಅಗಬಹುದು ಇತ್ಯಾದಿ ಎಂತದೊ ಆಗುತ್ತದೆ ಎಂದರು
ಅವರುಗಳು ಹೇಳಿದ್ದು ಪೂರ್ತಿ ಯಾಗಿ ನನಗೆ ಅರ್ಥವಾಗಲಿಲ್ಲ

ಆದರೆ ಧ್ವನಿ‌ ಹೋಗ ಬಹುದು ಎಂದಿದ್ದು ಮಾತ್ರ ಅರ್ಥವಾಗಿತ್ತು.

ಧ್ವನಿ‌ ಇಲ್ಲದೇ ನಾನು ಬದುಕುದು ಹೇಗೆ ? ನಾನು ಟೀಚರ್..ಅದು ಬಿಟ್ಟರೆ ಯಾವ ಕೆಲಸವೂ ಗೊತ್ತಿಲ್ಲ
ಹಾಗಾಗಿ ಆ ಚಿಕಿತ್ಸೆಗೆ ನಾನು ಒಪ್ಪಿರಲಿಲ್ಲ.
 

ಆ ಸಮಯದಲ್ಲಿ ನನ್ನ  ಗುರುಗಳು ನಮ್ಮ ಮನೆಗೆ ಬಂದರು
ನನಗೆ ಗಂಟಲು ನೋವಿನಲ್ಲಿ ಮಾತನಾಡಲು ಆಗುತ್ತಿರಲಿಲ್ಲ..ಚಳಿ ಜ್ವರ ಬೇರೆ
ಆಗ ಅವರು ನನ್ನ ಜಾತಕ ಕೇಳಿದರು ,
ಬರೆದು ಕೊಟ್ಟೆ ( ನನ್ನ ಜಾತಕ ನೆನಪಿತ್ತು)
ಅವರು ನೋಡಿ ನೀನೆಂಥ  ಕಲ್ತದ್ದು..ಪುಸ್ತಕದ ಬದನೆ ಕಾಯಿಯಾ ? ಎಂದು ಬೈದು  ಮುತ್ತಿನ‌ ಓಲೆ ಮಾಡಿ  ಧರಿಸಲು ಹೇಳಿದರು

ಅದೂ ಒಂದು ನೋಡುವ ಎಂದು ಬಹಳ ನಂಬಿಗಸ್ಥರಾದ  ಉಮೇಶ್ ಅಚಾರ್ ಅವರಿಗೆ  ಹೇಳಿ‌ ಮುತ್ತಿನೋಲೆ ಮಾಡಿಸಿ ಹಾಕಿದೆ

ಅದಾಗಿ ಎರಡು ದಿನಕ್ಕೆ ಕೇರಳ ಸ್ಟ್ರೈಕಿನ ಕಾರಣಕ್ಕೆ ನನ್ನಸಣ್ಣ ತಮ್ಮ  ಸಣ್ಣ ತಮ್ಮ ಎಂ ಎಸ್ ಡಬ್ಲು ಪರೀಕ್ಷೆ ಇರುವ ಕಾರಣ ನಮ್ಮ ಮನೆಗೆ ಬಂದ
:ನನ್ನ ಗಂಟಲು ನೋವು  ನೋಡಿ ಸಿಡಾಲ್ ಅಂತ ಒಂದು ಮಾತ್ರೆ ಇದೆ ಅದನ್ನು ತಗೊಂಡರೆ ಒಮ್ಮೆಗೆ ಕಡಿಮೆ ಆಗುತ್ತದೆ ಎಂದ
ಯಾರೇನು ಹೇಳಿದರೂ ತಗೊಳ್ಳುವ ಸ್ಥಿತಿಗೆ ನಾನು ತಲುಪಿದ್ದೆ
ಪ್ರಸಾದ್ ಗೆ ಪೋನ್ ಮಾಡಿ ಸಿಡಾಲ್ ಎರಡು ಮಾತ್ರೆ ತರಲು ಹೇಳಿದೆ.ಅವರಿಗೆ ಜಿಡಾಲ್ ಅಂತ ಕೇಳಿಸಿ ಊರಿಡೀ ಹುಡುಕಾಡಿ ಕೊನೆಗೆ ಗಣೇಶ್ ಮೆಡಿಕಲ್ಸ್ ನಿಂದ ತಂದರು
ಅದರಲ್ಲಿ zydone ಎಂದು ಹೆಸರಿತ್ತು
ನನಗೆ ಸಿಟ್ಟು ಬಂತು
ಮೊದಲೇ ಗಂಟಲು ನೊವಿನಲ್ಲಿ ಊಟ ಕೂಡ ಮಾಡಲಾಗುತ್ತಿರಲಿಲ್ಲ.
ಒಂದು ಲೋಟ ಹಾಲು ಕುಡಿದು"ಎಂತ ಬೇಕಾದರೂ ಆಗಲಿ "ಎಂದು ಆ ಮಾತ್ರೆ ತಗೊಂಡು ಮಲಗಿದೆ
ಗಂಟಲು ನೋವಿಗೆ ಯಾವಾಗಲು ನೆರಕುತ್ತಿದ್ದವಳು ಅ ದಿನ ಚಂದ ನಿದ್ರೆ
ಪ್ರಸಾದ್ ಗೆ ಭಯ
ಅದು ಎಂತ ಮಾತ್ರೆಯೋ ಏನೊ..ಕಿಡ್ನಿದೋ ಹಾರ್ಟಿದೋ ಅಗಿದ್ದರೆ ಎಂದು. ಅವರು ಆಗಾಗ ಎದ್ದು ನನ್ನ ಮೂಗಿನಹತ್ರಿರ ಬೆರಳು ಹಿಡಿಯುದು..😀
ಉಸಿರಾಡುವಳೋ ಇಲ್ಲವೊ ಎಂಬ ಆತಂಕ ಅವರಿಗೆ.
"ಎಂತ ಮಲಗಿ ಸಾಯಲು ಬಿಡುದಿಲ್ಲ 'ಎಂದು ಅವರ ಕೈಗೆ ಬಡಿದು ತಿರುಗಿ ಮಲಗಿದ್ದೆ‌
ಮರುದಿನ ಏಳುವಾಗ ಅರ್ಧಾಂಶ ನೋವು ಕಡಿಮೆ ಆಗಿತ್ತು.
ಮರುದಿನ ಇನ್ನೊಂದು ಮಾತ್ರೆ ತಿಂದೆ
ಅದರ ಮರುದಿನಕ್ಕಾಗುವಾಗ ಪೂರ್ತಿಯಾಗಿ ನೋವು ಗುಣ ಆಯ್ತು
ಅದಾಗಿ ಒಂದೆರಡು ತಿಂಗಳಾದರೂ ನೋವು ಬರಲಿಲ್ಲ
ಹಾಗಾದರೆ ಅ ಮಾತ್ರೆ ನಾಲ್ಕು  ತಂದಿಡುವ .ಮುಂದೆ ಗಂಟಲು ನೋವು ಬಂದರೆ ಇರಲಿ ಎಂದು ಪ್ರಸಾದ್ ಗೆ ಹೇಳಿದೆ
ಪ್ರಸಾದ್ ಅದೇ ಮೆಡಿಕಲ್ ಶಾಪಿಗೆ ಹೋಗಿ ಕೇಳಿದರು ಜಿಡಾಲ್  ಕೊಡಿ ಎಂದು
ಅಂತಹ ಮಾತ್ರೆಯೇ ಇಲ್ಲ ಎಂದರು
ಆಗ "ಎರಡು ತಿಂಗಳ ಮೊದಲು ತಗೊಂಡು ಹೋಗಿದ್ದೇನೆ " ಎಂದಾಗ ಕಂಪ್ಯೂಟರ್ ನಲ್ಲಿ ಚೆಕ್ ಮಾಡಿ ಕೂಡ ಅಂತಹದ್ದು ನಮ್ಮಮೆಡಿಕಲ್ ಶಾಪಿಗೆ ಬಂದೇ ಇಲ್ಲ ಎಂದರಂತೆ
ಆಗ  ಇದ್ದ ಕೆಲಸದ ಹುಡುಗ ಬಿಟ್ಟು ಹೋಗಿದ್ದ.ಹಾಗಾಗಿ 
ಯಾರಲ್ಲಿ‌ ಕೇಳುದು ? ಸುಮ್ಮನಾದೆವು
ಅಂದು ಗುಣವಾದ ಗಂಟಲು ನೋವು ಇಂದಿಗೂ ಇಲ್ಲ ಮಾತ್ರವಲ್ಲ ನಮಗೆ ಕೆಲಸ ಮನೆ ಬದುಕು ಎಲ್ಲ  ಆಗಿ ನಾವು ಮೇಲೆ ಬಿದ್ದೆವು.
ಇದು ಕೇವಲ ಕಾಕತಾಳೀಯ ಎಂದು ಹೇಗೆ ಒಪ್ಪುದು ? ಅಷ್ಟರ ತನಕ ಇದ್ದ ನೋವು ಮಾಯವಾದದ್ದು ಹೇಗೆ? ತನ್ನಿಂತಾನಾಗಿಯೇ ದೇಹದಲ್ಲಿ ಇದ್ದಕ್ಕಿದ್ದಂತೆ ರೋಗ ನಿರೋಧಕ ಶಕ್ತಿ ಉಂಟಾಯಿತಾ? 
ದೇವರೊಬ್ಬನೇ ಬಲ್ಲ.
ಚಂದ್ರನ ಗುರುತ್ವಾಕರ್ಷಣಾ ಬಲದಿಂದಾಗಿ ಸಮುದ್ರದಲ್ಲಿ ಭರತ ಇಳಿತಗಳಾಗುತ್ತದೆ ಎಂದು ಪಾಠದಲ್ಲಿ ಓದಿದ್ದೆ.
ಒಂದು ಜಡ ವಸ್ತು ನೀರಿನ ಮೇಲೆ ಗ್ರಹಗಳು ಪರಿಣಾಮ ಬೀಳುವುದಾದರೆ ಮನುಷ್ಯನ ಮೇಲೆ ಪ್ರಭಾವ ಬೀರದೇ ? 
ಈ ಬಗ್ಗೆ ಹೆಚ್ಚು ನನಗೆ ಗೊತ್ತಿಲ್ಲ.
ಆದರೆ ನನ್ನ ಬದುಕಿನಲ್ಲಿ ಪವಾಡ ಸದೃಶ ಬದಲಾವಣೆ ಉಂಟಾದದ್ದು ಹೌದು.

ನನಗೆ ಕೇವಲ ಗಂಟಲು ನೋವು ಪರಿ ಹಾರ ಆದದ್ದಲ್ಲ,ಬರವಣಿಗೆ ಶುರು ಮಾಡಿದೆ ,ಮನೆ ಆಯಿತು,ಕೆಲಸ ಆಯಿತು , ಅರವಿಂದ್ ಹುಟ್ಟಿದ..ಹೀಗೆ ಹಲವು ಒಳಿತುಗಳು ಉಂಟಾದವು

ಭಾಗ್ಯಾಧಿಪತಿ ಅಥವಾ ಭಾಗ್ಯ ಸ್ಥಾನಗತ ಗ್ರಹಕ್ಕೆ ಬಲ ಕೊಟ್ಟರೆ ಮಿರಾಕಲ್ ನಡೆಯುವುದು ಹೌದು ಎಂದು ಅನೇಕರು ಹೇಳಿದ್ದಾರೆ ಇದು ಕಾಕತಾಳೀಯವೂ ಇರಬಹುದು..ನನಗಂತೂ ಬಹುವಿಧದ ಶ್ರೇಯಸ್ಸು ಆದದ್ದು ಮಾತ್ರ ಸತ್ಯ 

ಡಾ.ಲಕ್ಷ್ಮೀ ಜಿ ಪ್ರಸಾದ 

Category:Personal Development



ProfileImg

Written by Dr Lakshmi G Prasad

Verified