ನನಗೂ ಮನಸಿದೆ-ಕನಸುಗಳ ಕಾಣುವೆ,
ಗೂಡೊಂದು ಕಟ್ಟಬೇಕಿದೆ,
ನಾನೂ ಸಹ ಬದುಕಬೇಕಾಗಿದೆ,
ಬೇರೆಯವರ ಹಂಗಿಲ್ಲದೇ,
ನನ್ನದೇ ಸ್ವತಂತ್ರ ಲೋಕದಿ ಸ್ವಚ್ಚಂದವಾಗಿ ಹಾರುವೆ.…
ನನ್ನ ನಾಳೆಯ ಬದುಕಿಗಾಗಿ,
ಭಾವನೆಗಳ ಹಂಚಿಕೊಂಡು ನನ್ನ ನೆಚ್ಚಿಕೊಂಡು ಜೊತೆಯಾದವರಿಗಾಗಿ,
ನಾನೇ ಆಸರೆಯ ನೀಡಬೇಕಾಗಿದೆ,
ಮಳೆಯಲ್ಲಿ ನೆನೆಯದೆ,
ಚಳಿಯಲ್ಲಿ ನಡುಗದೆ,
ಬಿಸಿಲಿಗೆ ಬಾಡದೇ ಇರುವ ಹಾಗೇ ಬೆಚ್ಚಗಿರಿಸಲು
ಗೂಡೊಂದು/ಸೂರೊಂದು ಕಟ್ಟಿದೆ,
ನನ್ನವರ ಮೊಗದಲ್ಲಿ ನಗು ತರಿಸಿದೆ,
ಬದುಕಿನ ಪಯಣದಲ್ಲಿ ಸಾಗಲೇ ಬೇಕಾಗಿದೆ…
ಶಾಂತಾರಾಮ ಹೊಸ್ಕೆರೆ, ಶಿರಸಿ
ಉತ್ತರ ಕನ್ನಡ,7676106237
ಬರಹಗಾರ...
0 Followers
0 Following