ಈ ಮಾತು ನನ್ನನ್ನು ತುಂಬಾ ಮೂಕರನ್ನಾಗಿಸಿತು. ಅಮ್ಮ ಎಂಬ ಪದಕ್ಕೆ ಸರಿಸಾಟಿ ಏಕೆ ಇಲ್ಲ, ಅವಳ ಬಗ್ಗೆ ಬರೆಯಲು ಸಾಧ್ಯವಿಲ್ಲ, ತಾಯಿ ಸಮುದ್ರ ತರ ಅವರ ಬಗ್ಗೆ ಮಾತನಾಡಲು ಕೊನೆಯಿಲ್ಲ. ಕುಡುಕನೊಬ್ಬ ರಸ್ತೆಯಲ್ಲಿ ಬಿದ್ದು ಹೇಳಲಾಗದೆ ಉರುಳುತ್ತಿದ್ದ ಘಟನೆ ನಡೆದಿದೆ. ಅಲ್ಲಿ ಅವನ ತಾಯಿ ಬಂದು ಅವನನ್ನು ತನ್ನ ಕೈಗಳಿಂದ ಮೇಲಕ್ಕೆತ್ತಿದಳು ಮತ್ತು ಅವನ ಹಲ್ಲುಗಳಿಂದ ರಕ್ತ ಬರುತ್ತಿರುವುದನ್ನು ನೋಡಿ ಅದನ್ನು ತನ್ನ ಬಟ್ಟೆಯಿಂದ ಹೊರಸಿದಳು ಅಲ್ಲದೆ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡುವಂತೆ ಕೋರಿದಳು. ನಾನು ಅಲ್ಲೇ ನೋಡುತ್ತಾ ನಿಂತೆ.
ತನ್ನ ಸಂಸಾರಕ್ಕೆ ಯಾವ ರೀತಿಯಲ್ಲೂ ಮಗ ದುಡಿಯಲಿಲ್ಲ, ಮಗ ಊಟಕ್ಕೆ ಬಾರದೇ ಇದ್ದಾನೆ ಎಂದು ತಾಯಿ ಅಂದುಕೊಂಡು ಆತನನ್ನು ಹುಡುಕಿ ಊಟ ಮಾಡಿಸುತ್ತಿದ್ದಳು. ಆ ವ್ಯಕ್ತಿ ತಾಯಿಯನ್ನು ಎಷ್ಟು ಬಾರಿ ಗದರಿಸಿ ಹೊಡೆದರೂ, ಅವಳು ಇನ್ನೂ ತನ್ನ ಮಗನನ್ನು ಪ್ರೀತಿಸುತ್ತಿದ್ದಳು ಮತ್ತು ಕಾಳಜಿ ವಹಿಸುತ್ತಿದ್ದಳು. ನಾನು ಆ ತಾಯಿಯೊಂದಿಗೆ ಮಾತನಾಡಿದೆ,ಇಂತಹ ಮಗ ನಿಮ್ಮ ಗೌರವವನ್ನು ಕಡಿಮೆ ಮಾಡುತ್ತಾನೆ ಅಲ್ವಾ ಎಂದು ಕೇಳಿದೆ. ಅದಕ್ಕೆ ಅಮ್ಮ ಹೇಳಿದಳು ಅಯ್ಯೋ ಬಿಡು ಸಾರ್ ಇನ್ನೂ ದಿನವೂ ಇದೆ ಪುರಣ ಇದು ನನಗೆ ಅಭ್ಯಾಸವಾಗಿ ಹೋಗಿದೆ. ಎಲ್ಲರೂ ನನ್ನನ್ನು ಬೈಯುತ್ತಾರೆ, ನಿಮ್ಮ ಮಗ ಸುಮ್ಮನೆ ಎಲ್ಲರನ್ನು ಬೈದುಕೊಂಡು ಕೂಗುತ್ತಾ ಹೋಗುತ್ತಾನೆ, ಯಾರಾದ್ರೂ ಅವನನ್ನು ಹೊಡೆಯುತ್ತಾರೆ, ಅವನ ಕೈ ಮತ್ತು ಕಾಲು ಮುರಿದುಹಾಕುತ್ತಾರೆ . ಎಂದು ಹೇಳಿದಾಗ ನನಗೆ ಭಯವಾಗುತ್ತೆ,ಒಂದೊಂದು ದಿನ ಮನೆಯಲ್ಲಿ ಕೂಡು ಹಾಕುತ್ತೇನೆ. ಏನಾದರೂ ಹೆಚ್ಚು ಕಮ್ಮಿ ಆದ್ರೆ ಏನ್ ಕಥೆ ಸರ್. ಅವನಿಗೆ ಚಿಕ್ಕ ಮಕ್ಕಳು ಮನೆಯಲ್ಲಿ ಇದ್ದಾರೆ,ನಾನು ಇರುವವರೆಗೂ ಅವರನ್ನು ನೋಡಿಕೊಳ್ಳುತ್ತೇನೆ. ದೇವರು ಮುಂದೆ ಅದನ್ನು ನೋಡಿಕೊಳ್ಳುತ್ತಾನೆ. ನಾನು ಹೇಳುತ್ತಿರುವುದು ತಾಯಿಯ ಆತ್ಮಸ್ಥೈರ್ಯ. ಜೀವನ ನಡೆಸುವುದೇ ಕಷ್ಟ, ಮಕ್ಕಳು ಚೆನ್ನಾಗಿರಲಿ ಎಂದು ಜೀವನವನ್ನೇ ಮುಡಿಪಾಗಿಟ್ಟಿದ್ದಾಳೆ. ಕೊನೆಗೆ ಆಟೋ ಡ್ರೈವರ್ ಬಂದು ಮಗ ಮತ್ತು ಅಮ್ಮನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕ ಎಂದ. ಓ ಬಪ್ಪಾ ಸ್ವಾಮಿ, ಅವನನ್ನು ಕರೆದುಕೊಂಡು ಹೋಗೋಣ. ಎಷ್ಟು ಹಣ ಅಂತ ಕೇಳಿದಳು, 100 ರೂಪಾಯಿ ಕೊಡು, ಸ್ವಲ್ಪ ಕಡಿಮೆ ಮಾಡು ಎಂದವಳು ತನ್ನ ಕೈಚೀಲದಿಂದ 70 ರೂಪಾಯಿ ತೆಗೆದುಕೊಂಡು ಕೊಟ್ಟು ಆಟೋದಲ್ಲಿ ಹೊರಟಳು. ನಾನು ಹೇಳಲು ಹೊರಟಿರುವುದು ಇದನ್ನೇ, ತಾಯಿ ತನ್ನ ಮಕ್ಕಳಿಗಾಗಿ, ತನ್ನ ಸಂಬಂಧಿಕರಿಗಾಗಿ, ತನ್ನ ಸಂತೋಷಕ್ಕಿಂತ ಮಕ್ಕಳ ಸಂತೋಷಕ್ಕಾಗಿ ಬದುಕುತ್ತಾಳೆ. ಆದರೆ ನಾವು ನನ್ನ ತಾಯಿಗೆ ಎಷ್ಟು ನೋವು ನೀಡುತ್ತೇವೆ,
ತಾಯಿಗೆ ಬೆಲೆ ಕಟ್ಟಲು ಸಾಧ್ಯವೇ....... ಬೇರೆಯವರ ಸುಖದಲ್ಲಿ ತನ್ನ ಸುಖವನ್ನು ಕಾಣುವ ತಾಯಿಗೆ ಅವಳ ಬಗ್ಗೆ ಈ ಒಂದು ಪುಟ ಸಾಲದು.............. ಈ ಕಥೆ ಇಷ್ಟ ಆದ್ರೆ ಕಾಮೆಂಟ್ ಮಾಡಿ ಧನ್ಯವಾದಗಳು ನಿಮಗೆ.
ReplyForward Add reaction |