ಅಂದು ೨೦೧೦ ನೆಯ ಸೆಪ್ಟೆಂಬರ್ ೩೦ ರ ಗುರುವಾರ ಅಲಹಬಾದ್ ಹೈಕೋರ್ಟ್ ನೀಡುವ ತೀರ್ಪಿಗೆ ಈಡಿ ಭರತ ಖಂಡವು ಜಾತಕ ಪಕ್ಷಿಯಂತೆ ಕಾಯುತ್ತಾ ಕುಳಿತಿದ್ದು ತೀರ್ಪು ಹೊರಬಿದ್ದ ಬಳಿಕ ಹಿಂದೂ - ಮುಸ್ಲಿಮರೆನ್ನದೆ , ಎಲ್ಲರು ಹಮ್ ಜಿತೇಗ ಹಮ್ ಜೀತೇಗ ಎನ್ನುತ್ತಾ , ಪಟಾಕಿಗಳನ್ನು ಸುಡುತ್ತ ಸಿಹಿ ಮೆಲ್ಲುತ್ತಾ ಹಾಗೆ ಪರಸ್ಪರ ವಿನಿಮಯ ಮಾಡಿ ಕೊಳ್ಳುತ್ತ ರಸ್ತೆ ಸರ್ಕಲ್ ಮೈದಾನ ಹೀಗೆ ಹೆಚ್ಚು ಹೆಚ್ಚು ಜನ ಸಂದಣಿ ಸೇರುವ ಪ್ರದೇಶಗಳಲ್ಲಿ , ಎಲ್ಲೆಂದರಲ್ಲಿ ಕೇಕೆ ಸಿಳ್ಳೆ ಹಾಕುತ್ತಾ ಮನ ತೋಚಿದಂತೆ ಕುಣಿಯುತ್ತ ಎಲ್ಲಾ ವಯೋ ಮಾನದ ಸ್ತ್ರೀ ಪುರುಷರೆಂಬ ಬೇದ ಭಾವ ಮರೆತು ಹಿಂಡು ಹಿಂಡಾಗಿ ಸಂಭ್ರಮಿಸುತ್ತಿದ್ದಾರೆ .
ಇದಕ್ಕೆಲ್ಲಾ ಕಾರಣ ಇಷ್ಟೆ , ಅಂದು ಹಲವಾರು ಶತ ಶತಮಾನಗಳಿಂದಲು ಇತ್ಯರ್ಥವಾಗದೆ ವಿವಾದಗಳ ಮೇಲೆ ವಿವಾದಗಳನ್ನು ಸೃಷ್ಟಿಸುತ್ತಲೇ ಬಂದಿದ್ದ , ತ್ರೇತಾಯುಗದ ಮರ್ಯಾದಾ ಪುರುಷೋತ್ತಮ ಎನ್ನಿಸಿದ ರಘುಕುಲ ತಿಲಕ ಶ್ರೀರಾಮಚಂದ್ರ ಮಹಾಪ್ರಭುಗಳ ಹುಟ್ಟಿದ ಸ್ಥಳವಾದ ಆಯೋದ್ಯಾದ ರಾಮಜನ್ಮಭೂಮಿ ವಿವಾದ ಇತ್ಯರ್ಥವಾದ ದಿನವದು.
ಈ ತೀರ್ಪಿನ ಪ್ರಕಾರ ಅಯೋಧ್ಯ ನಗರದಲ್ಲಿರುವ , ೨ ಎಕರೆ ೭ ಗುಂಟೆ ವಿಸ್ತೀರ್ಣದ ಶ್ರೀ ರಾಮ ಜನ್ಮಭೂಮಿ ಸ್ಥಳವನ್ನು ಸರಿಯಾಗಿ ೩ ಭಾಗವಾಗಿ ಮಾಡಿ ಪ್ರತಿಯೊಂದು ಭಾಗವನ್ನು ಅಂದರೆ ಒಂದನೇ ಬಾಗವನ್ನು ರಾಮಾಲಲ್ಲ ನಿರ್ಮೋಹಿ ಅಖಾಡಕ್ಕೆ , ಎರಡನೆಯ ಭಾಗ ಸುನ್ನಿ ವಕ್ಫ್ ಮಂಡಳಿಗೆ ಹಾಗೆ ಮೂರನೆ ಬಾಗವನ್ನು ಹಿಂದು ಸಾದು ಸಂತರಿಗೆ ಎಂದು ವಿಭಾಗ ಮಾಡಿತು .ಹಾಗೂ ತಮಗೆ ದೊರೆತ ಅ ಜಾಗವನ್ನು ಅರ್ಹರು ಮಂದಿರ ಮಸೀದಿ ಅಥವ ಬೇರೆ ಏನನ್ನಾದರೂ ಮಾಡಿಕೊಳ್ಳಬಹುದು ಎಂದು ಹೈ ಕೋರ್ಟ್ ತೀರ್ಪು ನೀಡಿ ಸಂಬಂಧ ಪಟ್ಟವರ ಸುಪರ್ದಿಗೆ ನೀಡಿತು .
ಈ ಹಿನ್ನೆಲೆಯಲ್ಲಿ ಹಿಂದೂ ಮುಸ್ಲಿಂ ಬಿಸಿರಕ್ತದ ಯುವ ತರುಣರು ಹಾಗೂ ಆಸಕ್ತರು ಹರ್ಷಚಿತ್ತರಾಗಿ , ತಾವುಗಳು ಪ್ರತ್ಯೇಕವಾಗಿ ತಮ್ಮ ತಮ್ಮ ಪಂಗಡದ ಜೊತೆ ಸೇರಿ ಕುಣಿದು ಕೇಕೆ ಸಿಳ್ಳೆ ಹಾಕುತ್ತ ನರ್ತಿಸುತ್ತಾ ಆಯಾ ಸಂದರ್ಭಕ್ಕೆ ಅನುಗುಣವಾಗಿ ತಮ್ಮಿಷ್ಟದ ಹಾಡನ್ನು ತಮಗೆ ತಾವೇ ಮನ ಬಂದಂತೆಲ್ಲಾ ಹಾಡಿಕೊಳ್ಳುತ್ತ ನಲಿಯುತ್ತಾ ,ನರ್ತಿಸುತ್ತಾ ಮೈಮರೆಯುತ್ತ ತಮ್ಮ ಸಂತಸವನ್ನು ಈ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ .
ಹಿಂದು ಮುಸ್ಲಿಂ ಗಲಭೆಗಳನ್ನು ಶತಶತಮಾನಗಳಿಂದ ನೋಡಿ ನೋಡಿ ಸಾಕು ಸಾಕಾಗಿ ಹೈರಾಣಾಗಿ ಹೋಗಿದ್ದ ಅಯೋಧ್ಯ ನಗರದ ಬಹುತೇಕ ವಯೋಮಾನದವರು ಸಹಜವಾಗಿಯೇ ಈಗ ಇಳಿವಯಸ್ಸಿಗೆ ಜಾರಿದ್ದು , ಬಾಲ್ಯದಿಂದಲೂ ಇರ್ವರ ನಡುವಿನ ಘರ್ಷಣೆ ಕಂಡವರು ಅದರ ನೋವು ಉಂಡವರು , ಈಗಲಾದರೂ ಕರುಣೆ ತೋರಿದೆಯಾ ಈ ತೀರ್ಪು ನೀಡಿ.ಇನ್ನಾದರೂ ಹಿಂದೂ ಮುಸ್ಲಿಂ ನಡುವಣ ಸಹಬಾಳ್ವೆ ನೆಲೆಸುವಂತೆ ಮಾಡು ಎಂದು ಬಾನಂಗಳದತ್ತ ನೋಡಿ ತಮ್ಮಿಷ್ಟದ ದೇವರಿಗೆ ಕೈ ಮುಗಿದು ಪ್ರಾರ್ಥಿಸಿ ಒಂದು ದೊಡ್ಡ ನಿಟ್ಟುಸಿರು ಬಿಡುವ ಮಂದಿಗೆ ಏನು ಕಮ್ಮಿ ಇಲ್ಲ .
ಈ ವಿಚಾರವಾಗಿ ಎಲ್ಲ ಪತ್ರಿಕೆಗಳೂ ತರೆಹವಾರಿ ವಿಚಾರಗಳನ್ನು ಮುದ್ರಿಸುತಿದ್ದರೆ ಜನರಂತು ಕುತೂಹಲ ಭರಿತರಾಗಿ ದೂರದರ್ಶನ , ರೇಡಿಯೋ , ವೃತ್ತಪತ್ರಕೆಗಳು ಬಿತ್ತರಿಸುವ ಸುದ್ದಿಗಳನ್ನು ನೋಡುತ್ತ ತಮ್ಮದೇ ವಿಚಾರಗಳ ವಿನಿಮಯದಲ್ಲೀ ತಲ್ಲೀನರಾಗಿದ್ದಾರೆ .ಈ ವಿಚಾರವಾಗಿ ನಾನಾ ರೀತಿಯ ಭಾಜಿ ಕಟ್ಟುವವರು ಪುಕ್ಕಟೆ ಮನರಂಜನೆ ಪಡೆಯುವ ಮಂದಿಗೆ ಕೊರತೆ ಎನಿಸದಿರದು .
ಇನ್ನು ನಾಡಿನಾದ್ಯಂತ ಇರುವ ಶ್ರೀರಾಮ ಭಜನ ಮಂಡಳಿವತಿಯಿಂದ ರಾಜ್ಯಾದ್ಯಂತ ಎಲ್ಲಾ ದೇಗುಲಗಳ ಅರ್ಚಕರು , ಆಡಳಿತ ಮಂಡಳಿಯವರು ಎಂದೆಲ್ಲ ಸೇರಿ ಬಹು ಸಂತಸದಿಂದ ಮಹಾತ್ಮಗಾಂಧಿಯವರ ಬಹು ಜನಪ್ರಿಯ ಹಾಗೂ ಬೇಡಿಕೆಯಲ್ಲಿರುವ ' ರಘುಪತಿ ರಾಘವ ರಾಜಾರಾಂ ' ಎಂಬ ಭಜನೆಯನ್ನು ಅಂದು ಭಕ್ತಿರಸ ಬೆರೆಸಿ ಪ್ರೀತಿ ಭಕ್ತಿಯಿಂದ ರಾಗವಾಗಿ ಹಾಡುತ್ತಾ ಕುಣಿಯುತ್ತಾ ತಮ್ಮ ಸಂತಸವನ್ನು ಹಾಗೂ ಶ್ರೀರಾಮನ ಮೇಲಿನ ತಮ್ಮ ಭಕ್ತಿಪೂರ್ವಕ ಪ್ರೇಮವನ್ನು ಈ ಮೂಲಕ ನೂರ್ಮಡಿ ಗೊಳಿಸುತಿದ್ದಾರೆ.
ಇನ್ನು ಕೆಲವರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಅಲಹಾಬಾದ್ ಹೈಕೋರ್ಟ್ ತೀರ್ಪು ನಮ್ಮ ಕಡೆ ಬರುವಂತೆ ಅನೇಕ ರೀತಿಯ ಪೂಜೆ ಹೋಮ ಹವನ ಯಜ್ಞ ಕೋಟಿ ಬಾರಿ ರಾಮನಾಮ ಜಪ ಮಂತ್ರ ಓಂಕಾರದ ಉಚ್ಚಾರ ಹೀಗೆ ಹಲವು ದಿನ ಕಾಲ ಹಗಲಿರುಳೆನ್ನದೆ ದಾರ್ಮಿಕ ಕಾರ್ಯದಲ್ಲಿ ಹಾಗೂ ಪೂಜಾ ಕಾರ್ಯದಲ್ಲಿ ನಿರತರಾಗಿದ್ದಾರೆ. ದೇವರು ನಮ್ಮ ಕಡೆ ಅಂದರೆ ಸತ್ಯದ ಪರವಾಗಿಯೆ ಇದ್ದಾನೆ ಎಂದು ಭಾವಿಸಿದ ಜನರು ತೀರ್ಪು ನಮ್ಮಂತೆ ಆದಲ್ಲಿ ಹಾಗೆ ಹೀಗೆ ಎಂದೆಲ್ಲ ಹರಕೆ ಹೊತ್ತವರು ಈಗ ಆ ಹರಕೆ ತೀರಿಸುವಲ್ಲಿ ಮಗ್ನರಾಗಿರುವಾ ಸದ್ಭಕ್ತ ವೃಂದಕ್ಕೆ ಕೊರತೆಯು ಇಲ್ಲ ಎನ್ನುವಂತಾಗಿದೆ ಈ ನಾಡಿನ ಉದ್ದಗಲಕ್ಕೂ .
ವಯಸ್ಸು ಲಿಂಗಬೇದ ತಾರತಮ್ಯ ಮಾಡದೆ ಎಲ್ಲ ಭಕ್ತರು ಈ ಹಿಂದೆ ಹರಕೆ ಮಾಡಿಕೋಡಂತೆ ಹಸಿಬಟ್ಟೆಯಲ್ಲಿ ಉರುಳುಸೇವೆ ಮಾಡುವುದು ,ನೂರಾ ಒಂದು ತೆಂಗಿನ ಕಾಯಿ ಒಡೆಯುವುದು ಹಾಲು ಹಣ್ಣಿನ ಅಭಿಷೇಕ ಕುಂಕುಮಾರ್ಚನೆ ಆಳೆತ್ತರದ ಕರ್ಪೂದಾರತಿ ಹೀಗೆ ತರಹೇ ವಾರಿ ಪೂಜಾ ಕಾರ್ಯ ಹಲವು ದಿನಗಳ ಕಾಲ ಹಗಲು ರಾತ್ರಿಯೆನ್ನದೆ ಎಲ್ಲ ದೇಗುಲಗಳಲ್ಲಿ ನಿತ್ಯ ನಡೆಯುತ್ತಿದೆ.
ಹಾಗೆ ತಮ್ಮ ಶಕ್ತಾನುಸಾರ ತಮ್ಮಿಷ್ಟದ ಸಿಹಿ ವಿತರಣೆ ಅನ್ನಸಂತರ್ಪಣೆಯು ಹಲವು ಕಡೆಗಳಲ್ಲಿ ಎಗ್ಗಿಲ್ಲದೆ ಎಲ್ಲವು ಸಂತಸದಿಂದಲೇ ನಡೆಯುತ್ತಿದೆ . ಒಟ್ಟಾರೆ ಎಲ್ಲಾ ಹಿಂದೂ ಮುಸ್ಲಿಂ ಧರ್ಮೀಯರು ತಮ್ಮ ಸಂತಸವನ್ನು ನಾನಾ ರೀತಿಯಾಗಿ ಹೊರಹಾಕುತ್ತಿದ್ದಾರೆ ಹಾಗೂ ಪಟಾಕಿ ಸುಡುವ ಮೂಲಕ ಅಂದೆ ದೀಪಾವಳಿ ಆಚರಿಸುವವರಿಗು ಸಹ ಏನೂ ಕಮ್ಮಿಯಿಲ್ಲ ಎನ್ನುವಂತಾಗಿದೆ .
ಹಿಂದೂಗಳಂತು , ಒಂದು ಹೆಜ್ಜೆ ಮುಂದೆ ಹೋಗಿ ಈ ಜಾಗದಲ್ಲಿ ಸೋಮನಾಥ ದೇಗುಲದ ಪರಿ ಭವ್ಯವಾದ ದೇಗುಲವನ್ನು ಅಷ್ಟೇ ಅದ್ದೂರಿಯಾಗಿ ನಿರ್ಮಿಸುವುದಕ್ಕೆ ಈಗಾಗಲೇ ಅಯೋಧ್ಯಾ ನಗರದ ಹೊರವಲಯದಲ್ಲಿರುವ ಕರಸೇವಕಪುರಂ ಎಂಬ ಗ್ರಾಮದಲ್ಲಿ ಮಂದಿರ ನಿರ್ಮಿಸಲು ನುರಿತ ಶಿಲ್ಪಕರ್ಮಿಗಳು ಹಲವು ವರ್ಷಗಳಿಂದ ಹತ್ತಾರು ಉತ್ತಮ ಬಗೆಯ ಶಿಲೆಗಳನ್ನು ರಾಶಿ ಹಾಕಿಕೊಂಡು ಕೆತ್ತನೆ ಕೆಲಸದಲ್ಲಿ ನಿರತರಾಗಿರುತ್ತಾರೆ .ಹಾಗೆ ಸತತವಾಗಿ ಹಲವು ದಶಕಗಳಿಂದ ಕೆತ್ತಿರುವ ಕಲ್ಲಿನ ಕಂಬ ಇತರೆ ಸ್ತಬ್ದ ಚಿತ್ರ ಆಯೋದ್ಯಾಯಲ್ಲಿ ಕಟ್ಟಲು ಉದ್ದೇಶಿಸಿದ ದೇಗುಲದ ಮಾದರಿಯ ಚಿತ್ರಪಟ ಹಾಗೆ ರಾಮಾಯಣದ ಹಲವು ಚಿತ್ರಗಳ ಬಿತ್ತಿಚಿತ್ರ,ರಾಮದೇಗುಲ ಅಯೋಧ್ಯೆಯಲ್ಲಿ ಕಟ್ಟಿಯೇ ತೀರುತ್ತೇವೆ ಎಂಬ ಉತ್ಸಾಹ ಭರಿತರಾದ RSS ,ABVP ವಿಶ್ವ ಹಿಂದೂ ಪರಷತ್ತಿನ ಪ್ರಮುಖರು , ಸಾಧು ಸಂತರ ದಂಡು ಸೇರಿ ಬಾರಿ ಮೆರವಣಿಗೆಗೆ ಎಲ್ಲ ಸಿದ್ಧತೆ ನಡೆಸಿದೆ.ಈ ನಿಟ್ಟಿನಲ್ಲಿ ಪಥ ಸಂಚಲನ ಸಾಗುವ ರಸ್ತೆ ಇಕ್ಕಲಗಳಲ್ಲಿ ಕೇಸರಿ ತೋರಣ ರಾಮ ಹಾಗೂ ಇತರೆ ದೇವರ ಧರ್ಮಗುರು ನಾಯಕರ ಬಂಟಿಂಗ್ಸ್ ಹಾಗೆ ದೇಶಭಕ್ತಿ ಉಕ್ಕಿಸುವ ಘೋಷ ವಾಕ್ಯದೊಂದಿಗೆ ನಗರವು ಸಿಂಗಾರವಾಗಿದೆ.ಹೀಗೆ ಪಥಸಂಚನದಲ್ಲಿ ವಾದ್ಯಕ್ಕನುವಾಗಿ ಕಾಲು ಕೈ ಬೀಸುವುದು ,ಸ್ತಬ್ಧಚಿತ್ರ ಪ್ರದರ್ಶನ ಪಥ ಸಂಚಲನದ ಮೇಲೆ ಸಾರ್ವಜನಿಕರು ಹೂವಿನ ಎಸಳು ಎರಚುವುದು ಘೋಷ ವಾಕ್ಯ ಮೊಳಗಿಸುವುದು ಎಲ್ಲವನ್ನು ನೋಡುತಿದ್ದರೆ ಎಂತವರಲ್ಲು ದೇಶಭಕ್ತಿ ಉಕ್ಕಿಸುವoತಿದೆ ಒಟ್ಟಾರೆ , ಈ ದೇಶಭಕ್ತರ ಬಲ ಪ್ರದರ್ಶನ ಒಂದು ರೀತಿಯ ೧೯೯೦ ರ ಆಡ್ವಾಣಿಯವರ ರಥ ಯಾತ್ರೆಯನ್ನು ಸಹ ಮೀರಿಸುವಂತೆ ಕಾಣುತಿದೆ ಈಗ ಕಾಣುತ್ತಿರುವ ದೃಶ್ಯ . ವೀರಗಾಸೆ ಡೋಲು ಕುಣಿತ ಯಕ್ಷಗಾನ ಕೋಲಾಟ ವಂದೇಮಾತರಂ ಭಾರತಮಾತೆಯ ಘೋಷವಾಕ್ಯ ಮುಗಿಲು ಮುಟ್ಟುವಂತೆ ಇತ್ತು.ರಸ್ತೆ ಇಕ್ಕಲಗಳಲ್ಲಿ ಹಾಗೂ ಕಟ್ಟಡಗಳ ಮೇಲೆಲ್ಲಾ ಜನವೋ ಜನ ಸಾಗರ.ಎಲ್ಲ ನೋಡುಗರ ಮಂತ್ರಮುಗ್ದ ಗೊಳಿಸುವಂತಿತ್ತು.ಹಾಗೆ ನಾನಾ ರೀತಿಯ ಪಂಜಿನ ಕವಾಯಿತು ದಸರ ಮಹೋತ್ಸವದ ನೆನಪನ್ನು ಮೆಲುಕು ಹಾಕುವ ಹಾಗಿತ್ತು .
ಈ ನಡುವೆ ರಾಮ ಮಂದಿರ ಕಟ್ಟಿಯೇ ತೀರುತ್ತೇವೆ ಎಂಬ ಉತ್ಸಾಹ ತುಂಬುವ ಯಾವುದೋ ಹಾಡನ್ನು ತಮಗೆ ತಾವೇ ಎಂಬಂತೆ ಹಾಡಿಕೊಳ್ಳುತ್ತ ಮೆರವಣಿಗೆ ಮೂಲಕ ಸಾಗುತ್ತಿದೆ ಭಕ್ತರ ದಂಡು .
ಹಾಡು :ಶ್ರೀರಾಮನ ಜ್ಯೋತಿ
ಅಯೋಧ್ಯಾವೇ ಭಾರತೀಯರ ಗೋಕುಲ
ಕಟ್ಟುವೆವು ಅಲ್ಲಿಯೇ ರಾಮನ ದೇಗುಲ
ಶ್ರೀರಾಮನಾಡಿ ಬೆಳೆದ ಸಾರಾಯು ತೀರವೇ
ಶಾಂತಿಯ ಕುಟೀರ ll ಅ.ಪ ll
ಹೊರಟಿತೋ ಹೊರಟಿತೋ ರಾಮಾರಥ
ದಿಲ್ಲಿಯಿಂದ ಹಳ್ಳಿಗೆ , ಹಳ್ಳಿಯಿಂದ ಬೀದಿಗೆ
ಬೀದಿಯಿಂದ ಮನೆಗೆ, ಮನೆಯಿಂದ ಮನಕೆ
ತಂದಿತೋ ತಂದಿತೋ ಭಕ್ತಿಯ ಜ್ಯೋತಿ. ll ಪ ll
ಜ್ಯೋತಿಯೆಂದರೆ ಅದು ಬರಿಯ ದೀವಿಗೆಯ ಜ್ಯೋತಿಯಲ್ಲ
ತಾ ಒಂದೆಂಬ ಭಕ್ತರಸದಲಿ ಭಾರತೀಯರನೆಲ್ಲಾ ಮುಳುಗಿಸಿ
ರಾಮನಾಮದ ಸುಧೆಯ ಜಗಕುಣಿಸಿದ ಪ್ರಭೇಯೀ
ಜ್ಯೋತಿ
ಹೊರಟಿತೋ ಹೊರಟಿತೋ ಭಕ್ತರ ಬಳಗ
ಎದುರಿಸಲು ಸಿದ್ದವದು ಸಾವಿರ ಕಾಳಗ
ಆ ಮಂತ್ರ ಈ ಮಂತ್ರ ರಾಮಮಂತ್ರ
ಪಠಿಸುತ್ತಾ ಸಾಗಿತು ಸಹಸ್ರ ಸಹಸ್ರ
ಸಂಖ್ಯೆ ಸಾಲು ಇರುವೆ ಬಳಗದಂತೆ
ಛೇದಿಸಲಾಗದ ಕೋಟೆಯದು ಅಯೋಧ್ಯಾ
ಸುತ್ತ ಸರಾಯೂ ತೀರ
ಅಲ್ಲೆ ರಾಮನ ಮಂದಿರ
ಕಟ್ಟುವ ಕನಸದು ಸಾಕಾರ .
( ಸಾಹಿತ್ಯ : – ನಾಗರಾಜ್ ಕಾಳೆ skin's )
ಒಟ್ಟಾರೆ ,ಭಾರತದಾದ್ಯಂತ ಈ ಹಿಂದೂಗಳ ಒಗ್ಗಟ್ಟು ಹಾಗು ಅವರಲ್ಲಿ ಕಂಡು ಬಂದ ವೈಭವಯುತವಾದ ಬಲ ಪ್ರದರ್ಶನ ದೇಶೀಯ ಹಾಗೂ ವಿದೇಶೀಯ ಕೆಲವು ಅನ್ಯ ಕೋಮಿಗೆ ಕುಂತಲ್ಲಿ ಕೂರಾಲಾಗದ ,ನಿಂತಲ್ಲಿ ನಿಲ್ಲಲಾಗದ ಸ್ಥಿತಿಗೆ ತಂದು ನಿಲ್ಲಿಸಿದ್ದು ಸುಳ್ಳಾಗಿ ಉಳಿದಿಲ್ಲ ಎಂಬುದು ಸತ್ಯವಾಗಿ ಜಗತ್ತಿಗೆ ತೋರಿಸಿಕೊಟ್ಟಿದೆ .
******"*******"
ಅಲಹಾಬಾದ್ ಹೈಕೋರ್ಟ್ ತೀರ್ಪು ಕೇವಲ ಹಿಂದುವಿಗಷ್ಟೆ ಸ್ವಿಕಾರ್ಹವಾಗೀ ಉಳಿದಿಲ್ಲ ,ಮುಸ್ಲಿಮರಿಗೂ ಈ ತೀರ್ಪು ಸ್ವಾಗತಾರ್ಹವಾಗಿದ್ದು ,ಈ ವಿಚಾರ ಸ್ವಾಗತಿಸು ವಿಕೆಯಲ್ಲಿ ಮುಸ್ಲಿಮರು ಸಹ ಹಿಂದೆ ಬಿದ್ದವರಲ್ಲ .
ಮುಸ್ಲಿಮರು ಸಹ ನಾಡಿನಾದ್ಯಂತ ಎಲ್ಲ ಮಸೀದಿ ದರ್ಗಾಗಳಲ್ಲಿ ಸೇರಿ ವಿಶೇಷವಾದ ನಮಾಜು ಮಾಡಿ , ಶುಭಾಶಯ ವಿನಿಮಯದ ಮಾಡಿಕೊಂಡದ್ದು ಪರಸ್ಪರ ಅಲಂಗಿಸಿಕೊಳ್ಳುವುದು ಒಂದು ರೀತಿಯಲ್ಲಿ ಅಂದೆ ಅವರಿಗೆ ಈದ್ ಮಿಲಾದ್ ಎಂಬಂತೆ ಆಗಿ ಹೋಗಿದೆ . ಮುಸ್ಲಿಂ ಉನ್ನತ ಕಮಿಟಿ ಸಭೆಯಲ್ಲಿ ತಮಗೆ ದೊರೆತ ಅ ಜಾಗದಲ್ಲಿ ಹೇಗೆ ಮಸೀದಿ ಕಟ್ಟುವುದು ಇಲ್ಲ ಬೇರೇನು ಹೇಗೆ ಆ ಜಾಗವನ್ನು ಬಳಸಿಕೊಳ್ಳುವುದು ಇತ್ಯಾದಿ ವಿಚಾರಕ್ಕೆ ಸಭೆ ಸೇರಿ ದೀರ್ಘ ಚರ್ಚೆ ಮಾಡುತ್ತಿದ್ದಾರೆ . ಆದರೆ ,ಸಾಮಾನ್ಯ ಮುಸ್ಲಿಂ ಭಾಂದವರು ಮಾತ್ರ ಎಲ್ಲೆಡೆ ಒಂದಾಗಿ ಅಲ್ಲಲ್ಲಿ ಗುಂಪು ಗುಂಪಾಗಿ ತಮ್ಮಷ್ಟಕ್ಕೆ ತಾವೇ ಎಂಬಂತೆ ಜಾತ್ಯಾತೀತ ಈ ಭಾರತದಲ್ಲಿ
ಜಾತಿ ಧರ್ಮ ಒತ್ತಟ್ಟಿಗಿರಲಿ
ಲಲ್ಲ ಅಲ್ಲ ಎಲ್ಲ ಇಲ್ಲೇ ನಮಗೆಲ್ಲಾ
ಧರ್ಮಾತೀತರಾಗಿ ಬನ್ನಿರೆಲ್ಲ
ಭಾರತಾಂಬೆ ತೇರಾ ಮುನ್ನಡೆಸುವ
ಬಾರಾ ನಮ್ಮದಲ್ಲಾ ನಿಮ್ಮದಲ್ಲ ಎಲ್ಲರದಲ್ಲ
ಎಂಬರ್ಥದ ಎಂಥದೋ ಸಾಲುಗಳನ್ನು ಆ ಕ್ಷಣದಲ್ಲೇ ಪೋಣಿಸಿ ಹಾಗೆ ಹಾಡಿಕೊಳ್ಳುತ್ತಾ ,ಮೈದಾನ ರಸ್ತೆ ಸರ್ಕಲ್ ಹೀಗೆ ಎಲ್ಲೆಂದರಲ್ಲಿ ಶಾಮಿಯಾನ ಜಡಿದು ಬಿರಿಯಾನಿ ಮಾಡಿ ಎಲ್ಲರಿಗು ಪುಕ್ಕಟೆ ಹಂಚುವ ಮೂಲಕ ಅ ಸಂಭ್ರಮದಲ್ಲಿ ತಾವು ಭಾಗಿಯಾಗಿದ್ದಾರೆ .ಹಾಗೆ ಈ ಬಿರಿಯಾನಿಯನ್ನು ಹಿಂದೂ ಕ್ರೈಸ್ತ ಮುಸಲ್ಮಾನ ಎಲ್ಲ ಬಾಂಧವರು ತಿಂದು ಸಂತಸ ವ್ಯಕ್ತಪಡಿಸುತಿದ್ದಾರೆ .
*******
ಹೀಗೆ ಅಲಹಾಬಾದ್ ಹೈಕೋರ್ಟ್ ತೀರ್ಪು ಬಂದ ನಂತರದ ದಿನಮಾನಗಳಲ್ಲಿ ,ಈ ರಾಮಜನ್ಮಭೂಮಿಯ ವಿಚಾರವಾಗಿ ಅಯೋಧ್ಯ ನಗರದ ವಿವಾದಿತ ಶ್ರೀರಾಮ ದೇಗುಲ ದರ್ಶಕ್ಕಾಗಿ ನಿತ್ಯವು ಸಹಸ್ರಾರು ಭಕ್ತರು ಇಲ್ಲಿಗೆ ಬರುವಂತಾಯಿತು .
ರಾಮಜನ್ಮಭೂಮಿ ನೋಡಲೆಂದು ಹಿಂದುಗಳು ಸಂತಸದಿಂದ ಹಾಗೆ ಗುಮ್ಮಟ ಉರುಳಿದ ಬಾಬ್ರಿಮಸಿದಿ ನೋಡಲೆಂದು ಶೋಕತಪ್ತ ಮುಸ್ಲಿಮರು ತಂಡ ತಂಡವಾಗಿ ನಿತ್ಯವು ಬರತೊಡಗಿತು .ಹೀಗೆ ದಿನಕಳೆದಂತೆ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದಂತೆ ಈ ಸ್ಥಳವು ಬಹು ಬೇಗನೆ ಜನಪ್ರಿಯವಾಗೀ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿತು.
ಒಟ್ಟಾರೆ ಅಯೋಧ್ಯಾ ಶ್ರೀರಾಮ ಜನ್ಮಭೂಮಿ ಯಾವಾಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿತು ಆಗ ಇಲ್ಲಿಗೆ ದೇಶೀಯ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಕ್ಕಾಗಿ ಜೈನ ಪಾರ್ಸಿ ಸಿಖ್ ಮುಸ್ಲಿಂ ಕ್ರೈಸ್ತರು ಹಿಂದೂ ಸಮಾಜದ ಜನರು ಧರ್ಮಾತೀತರಾಗಿ ಬರತೊಡಗಿದರು.
ಅಂತು ಈ ಜನ ಸಾಗರ ನಿಯಂತ್ರಿಸುವ ನಿಟ್ಟಿನಲ್ಲಿ ಹಾಗು ಅತಿ ಸೂಕ್ಷ್ಮಾ ಪ್ರವಾಸಿ ತಾಣವಾಗಿ ಗುರುತಿಸಿ ಕೊಂಡಿತು .ಈ ದೇಗುಲ ಹಾಗು ಇಲ್ಲಿಗೆ ಬರುವ ಪ್ರವಾಸಿಗರ ರಕ್ಷಣೆ ನೀಡುವ ಸಲುವಾಗಿ ಸದಾ ಶಸ್ತ್ರಗಳೊಂದಿಗೆ ಹೈ ಅಲರ್ಟ್ ಆಗಿರುವ ಸೇನಾಪಡೆ ಅರೆಸೇನಾಪಡೆ ನಿತ್ಯವು ಹೇಣಗಾಡುವಂತಾಯಿತು .ಒಟ್ಟಾರೆ ಭದ್ರತಾ ದೃಷ್ಟಿಯಿಂದ ಅಯೋಧ್ಯ ನಗರ ಮತ್ತು ದೇಗುಲ ನದಿತೀರ ಎಲ್ಲ ಕಡೆಯು ಬಹು ಬಿಗಿಯಾದ ಪಹರೆ ಹಾಕಲಾಯಿತು ,ಹಾಗು ಎಲ್ಲೆಡೆ ಹಾಕಿರುವ ಸಿ ಸಿ ಕ್ಯಾಮರಾಗಳು ಭದ್ರತಾ ಪಡೆಗೆ ಇನ್ನಷ್ಟು ಬಲ ತಂದುಕೊಟ್ಟವು .
( ಇಲ್ಲಿಗೆ ಮೊದಲನೆಯ ಅಧ್ಯಾಯ ಮುಗಿಯಿತು )
Writer
0 Followers
0 Following