ಒಟ್ಟಾರೆ ಹೇಳುವುದಾದರೆ ಜೋಧಾ ಅಕ್ಬರ್ - ಪ್ರಣವ್ ಇವರಿಬ್ಬರ ಪ್ರೇಮ ಪುರಾಣದ ವಿಚಾರ ಬೆಕ್ಕು ಕಣ್ಮುಚ್ಚಿ ಹಾಲು ಕುಡಿಯುತ್ತಿದ್ದರು ಹೇಗೆ ಹೊರ ಜಗತ್ತಿಗೆ ತಿಳಿಯುತ್ತೋ ಹಾಗೆ ಆಯಿತು ಇವರ ವಿಚಾರದಲ್ಲಿಯೂ . ಅಂದರೆ ಲಂಡನ್ ಬೀದಿಗಳಲ್ಲಿ ತಿನ್ನುತ್ತಾ ಹರಟುತ್ತಾ ಹಾಡುತ್ತಾ ಎಗ್ಗಿಲ್ಲದೆ ಪಾರ್ಕ್ ರೆಸ್ಟೋರೆಂಟ್ಗಳಲ್ಲಿ ಈ ಪ್ರಣಯ ಪಕ್ಷಿಗಳು ಸ್ವಂತಂತ್ರವಾಗಿ ಹಾರಾಡುತಿದ್ದಾಗ , ಆಕ್ಸ್ಫರ್ಡ್ ಯೂನಿವರ್ಸಿಟಿಯ ಬಂಗಾರ ಪದಕ ವಿಜೇತೆ ಈಕೆ ಹಾಗು ಪಾಕಿಸ್ತಾನ ಹುಡುಗಿ ಎಂದು ಗುರುತಿಸಿದ ಯಾರೊ ಇಂಗ್ಲೆಂಡ್ ನಿವಾಸಿಯೊಬ್ಬರು ಹಾಗೆ ತನ್ನ ಮೊಬೈಲ್ನಲ್ಲಿ ಇವರ ಚೆಲ್ಲಾಟಗಳನ್ನು ಇವರಿಗೆ ತಿಳಿಯದಂತೆ ಚಿತ್ರಿಸಿಕೊಂಡನು .
ಹೀಗೆ ತಾನು ಚಿತ್ರಿಸಿಕೊಂಡಿದ್ದನ್ನು ತನ್ನ ಸಂತೋಷಕ್ಕಾಗಿ ಹಾಗು ತಾನು ಎಂತಾ ಗೂಡಾಚರಿಕೆ ಮಾಡಿರುವೆ ಎಂದು ಈ ಜಗತ್ತಿಗೆ ತಿಳಿಸಲು ತನ್ನ ಸ್ನೇಹಿತರಿಗೆ ಹಾಗೆ ಬೇಕಾದ ಎಲ್ಲರಿಗು ವಾಟ್ಸಪ್ ಫೇಸ್ಬುಕ್ ಟ್ವಿಟರ್ ಇತ್ಯಾದಿ ಜಾಲಗಳಿಗೆ ಹರಿಬಿಟ್ಟು ತಾನು ಖುಷಿಪಡತೊಡಗಿದನು , ಆದರೆ ಈ ಸುದ್ದಿ ಎಲ್ಲೆಡೆ ಹರಡುತ್ತಾ ಹಾಗೆ ಬಿಬಿಸಿ ನ್ಯೂಸ್ ಚಾನಲ್ ವಾರ್ತಾ ಪತ್ರಿಕೆ ಹಾಗೆ ಭಾರತ ಪಾಕಿಸ್ತಾನದಲ್ಲು ಟಿವಿ ಪ್ರೆಸ್ನಲ್ಲಿ ಪ್ರಸಾರವಾಯಿತು ದೊಡ್ಡ ಪ್ರಮಾಣದಲ್ಲಿ .
ಟಿವಿ ಪೇಪರ್ ವರದಿಗಾರರು ತಮ್ಮ ಸ್ಟುಡಿಯೋಗೆ ದಾರ್ಶನಿಕರನ್ನು ಧರ್ಮಮುಖಂಡರನ್ನು ಕರೆಸಿಕೊಂಡು ಇವರ ಪ್ರೇಮಾದಾಟ ಮದುವೆಯಾಗುವ ಮೂಲಕ ಇದು ಎರಡು ದೇಶದ ಮೇಲೆ ಬೀರಬಹುದಾದ ಪರಿಣಾಮ ಬಗ್ಗೆ ಪರ ವಿರೋದ ಬಗ್ಗೆ ದೊಡ್ಡ ಸೆಮಿನಾರ್ ಏರ್ಪಡಿಸಿ ದೊಡ್ಡದಾಗಿ ಬಿತ್ತರಿಸಿ ತಮ್ಮ trp ಹೆಚ್ಚಿಸಿಕೊಳ್ಳುತ್ತಾ ಇದ್ದಾವೆ ಎಲ್ಲಾ ದೃಶ್ಯ ಶ್ರವಣ ಹಾಗೂ ಅಕ್ಷರ ಮಾದ್ಯಮಗಳು .
ಒಟ್ಟಾರೆ ಈಗ ಇವರಿಬ್ಬರದ್ದೆ ಭಾರತ ಪಾಕಿಸ್ತಾನ ತುಂಬೆಲ್ಲಾ ಬಿಸಿ ಬಿಸಿ ಚರ್ಚೆ. ರಾಜಕೀಯ ಧಾರ್ಮಿಕ ವಲಯ ಹಾಗು ಸಾರ್ವಜನಿಕರು ಸಹ ಇವರ ವಿಚಾರವನ್ನೇ ಮಾತನಾಡತೊಡಗಿದ್ದಾರೆ . ಹಾಗು ಪತ್ರಿಕೆ ಸೇರಿದಂತೆ ನಾನಾ ಮಾಧ್ಯಮವು ನಾನಾ ರೀತಿಯ ಜನರನ್ನು ಬೇಟಿಮಾಡಿ ಇವರ ಬಗ್ಗೆ ಹಲವು ಅಭಿಪ್ರಾಯ ಸಂಗ್ರಹಿಸಿ ಪ್ರಸಾರ ಮಾಡುತಿದ್ದಾರೆ .
ಕೆಲವು ಜನರು , ಇವರಿಬ್ಬರು ಮದುವೆ ಆದರೆ ದೇಶಕ್ಕೆ ಒಳ್ಳೆಯದು ಕೆಟ್ಟದ್ದು ಯುದ್ದ ಜರುಗುತ್ತೆ ಇಲ್ಲ ಎರಡು ದೇಶ ಮದ್ಯೆ ಶಾಂತಿ ಸ್ಥಾಪನೆಯಾಗುತ್ತೆ . ಹಾಗೆ ಹೀಗೆ ಮಣ್ಣು ಮಸಿ ಎಂದೆಲ್ಲ ನಾನಾ ರೀತಿಯಲ್ಲಿ ನಾನಾ ರೀತಿಯ ಜನರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ . ಒಟ್ಟಾರೆ ಎರಡು ದೇಶಗಳ ಪ್ರಜೆಯು ಇವರಿಬ್ಬರತ್ತ ಗಮನ ಹರಿಸುವಂತೆ ಆಗಿದೆ . ಇದಕ್ಕೆ ಕಾರಣ ಇವರ ಪ್ರೇಮ ಎಲ್ಲಿಗೆ ಬಂದು ನಿಲ್ಲುತ್ತೆ ಎಂಬ ಕುತೂಹಲದಿಂದ ಕಾಯುವ ಜನರಿಗು ಕೊರತೆಯಿಲ್ಲ ಎನ್ನುವಂತಾಗಿದೆ .
ಅಂತು ಇಂತು ಎರಡು ದೇಶಗಳಲ್ಲಿರುವ ರಾಜಕೀಯ ಧಾರ್ಮಿಕ ಸಾಮಾಜಿಕ ವಲಯಗಳಲ್ಲಿ ಗುರುತಿಸಿಕೊಂಡಿರುವ ಪ್ರಮುಖರು , ಸಾರ್ವಜನಿಕರು ಏನೆಲ್ಲ ಮಾತಾಡಿಕೊಳ್ಳುವಂತಾಗಿದೆ . ಪ್ರಣವ್ ಜೋಧಾ ಅಕ್ಬರ್ ಪ್ರೇಮ ಪುರಾಣಕ್ಕೆ ಸಂಬಂಧಿಸಿದಂತೆ ಈಗ ರೆಕ್ಕೆ ಪುಕ್ಕ ಕಟ್ಟುವವರಿಗು ಕೊರತೆ ಇಲ್ಲ ಎನ್ನುವಂತಾಗಿದೆ .
ಆದರೆ ಎರಡು ಕುಟುಂಬಗಳ ಸದಸ್ಯರು ಈ ಒಂದು ವಿಚಾರವಾಗಿ ಇದುವರೆಗೂ ಎಲ್ಲೂ ಸಾರ್ವಜನಿಕವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿಲ್ಲ . ಯಾವುದೇ ಮಾದ್ಯಮದ ಮುಂದೆಯಾಗಲಿ ಇಲ್ಲ ತಮ್ಮ ಆಪ್ತರ ಮುಂದೆಯಾಗಲಿ . ಹಾಗಾಗಿ ಇದು ತುಂಬಾ ಕುತೂಹಲಕ್ಕೆ ಹಾಗೆ ಗಾಢವಾದ ಚರ್ಚೆಗೆ ಗ್ರಾಸವಾಗಿದೆ . ಇದೆ ಒಂದು ವಿಚಾರವಾಗಿ ಮಾದ್ಯಮಗಳು ಏನೆಲ್ಲ ಆಗಿಂದಾಗ್ಗೆ ಪ್ರಚಾರ ಮಾಡುವುದು ಹಾಗೂ ಎರಡು ಕುಟುಂಬ ವರ್ಗ ಎಲ್ಲಾ ಬೆಳವಣಿಗೆ ಗೊತ್ತಿದ್ದರೂ ಎಲ್ಲು ಯಾವ ಪ್ರತಿಕ್ರಿಯೆ ನೀಡದಿರುವುದು . ಎರಡು ದೇಶದ ನಿವಾಸಿಗರಿಗೆ ಏನೋ ಕುತೂಹಲಕ್ಕೆ ಒಳಗಾಗಿ ಏನೇನೋ ಗುಸು ಗುಸು ಚರ್ಚೆ ನಡೆಯುತ್ತಿದೆ ಅವರವರಲ್ಲೆ .
ನಿಜ ಹೇಳಬೇಕೆಂದರೆ , ಈ ವಿಚಾರದಲ್ಲಿ ಉಭಯ ಕುಟುಂಬ ವರ್ಗವು ಒಳಗೊಳಗೇ ತತ್ತರಿಸಿ ಹೋಗಿದೆ . ಯಾರಿಗು ಏನನ್ನು ಹೇಳಿಕೊಳ್ಳುವ ಸ್ಥಿತಿಯಲಿಲ್ಲ . ಒಂದು ರೀತಿ ಅಂಡು ಸುಟ್ಟ ಬೆಕ್ಕಿನಂತೆ ಆಗಿದ್ದಾರೆ . ಸುಮಾರು ದಿನಗಳಿಂದ ಎರಡು ಕುಟುಂಬಸ್ಥರು ಈ ವಿಚಾರದಲ್ಲಿ ದಿಕ್ಕು ತೋಚದಂತಾಗಿ ಅನ್ನಹಾರ ನಿದ್ರೆಯಿಲ್ಲದೆ ಅನೇಕ ದಿನಗಳಿಂದ ಹೈರಾಣಾಗಿ ಹೋಗಿದೆ . ಹಾಗು ಆಯಾ ಕುಟುಂಬದ ಹಿತೈಷಿಗಳು ಬಂಧು ಬಳಗ ಸರ್ಕಾರಿ ಪ್ರತಿನಿಧಿ ಮಂತ್ರಿಗಳು ಎಂದೆಲ್ಲ ಬಂದು ಕುಟುಂಬ ವರ್ಗಕ್ಕೆ ಸೂಕ್ತಕಾಲಕ್ಕೆ ಸೂಕ್ತ ಕ್ರಮ ಕೈಗೊಳ್ಳುವಿರಂತೆ ಅಲ್ಲಿವರೆಗೂ ತಾವು ದೈರ್ಯವಾಗಿ ಇರುವಂತೆ ಸಮಾಧಾನದ ಮಾತನಾಡಿ ಹೋಗುತ್ತಿದ್ದಾರೆ .
ಇತ್ತ ಪ್ರಣವ್ ತಂದೆ ರಾಮಾಜೋಯಿಸರಿಗೆ ತನ್ನ ಮಗನ ಮದುವೆ ನಿರ್ಧಾರ ಸುತಾರಾಂ ಒಪ್ಪಿಗೆಯಿಲ್ಲ . ನನ್ನ ದೇಶ ಹಾಗೆ ನನ್ನ ಧರ್ಮದ ಘನತೆ ಗೌರವ ಎಲ್ಲವನ್ನು ಕಾಪಾಡುವುದು ಈಗ ನನ್ನ ಮಗ ತೆಗೆದುಕೊಳ್ಳುವ ನಿರ್ಧಾರದ ಮೇಲಿದೆ . ನನ್ನ ಮತ್ತು ನನ್ನ ದೇಶದ ಮೇಲೆ ಈಗಾಗಲೇ ಸೂತಕದ ಛಾಯೆ ಮೆತ್ತಿಕೊಂಡಿದೆ ಹಾಗಾಗಿ ನನಗೆ ಪ್ರಣವ್ ಎಂಬ ಮಗನೆ ಇಲ್ಲ ಎಂದು ಕೊಳ್ಳುತ್ತೇನೆ ಎಂದು ತನ್ನ ಕೊಠಡಿಯಲ್ಲಿರುವ ತನ್ನ ಭಾಮೈದ (ಹೆಂಡತಿ ತಮ್ಮ ) ಪಂಡಿತಾರಾಧ್ಯರಲ್ಲಿ ಅತ್ಯಂತ ದುಖಃ ಭರಿತರಾಗಿ ಹೇಳಿಕೊಂಡರು .
ಪ್ರಣವ್ ಜೋಧಾಅಕ್ಬರ್ ಪ್ರೇಮ ಪುರಾಣ ಎಲ್ಲೆಡೆ ಪ್ರಚಾರಕ್ಕೆ ಬಂದಾಗ ಹಾಗು ಇವರಿಗೆ ಈ ವಿಚಾರ ತಿಳಿಯುವ ಹೊತ್ತಿಗೆ ಪಂಡಿತಾರಾಧ್ಯರು ತಮ್ಮ ಶಿಷ್ಯವೃಂದ ದೊಂದಿಗೆ ಧರ್ಮ ಜಾಗೃತಿ ಹಾಗು ಪ್ರವಚನಕ್ಕಾಗಿ ಕೆನಡಾ ದೇಶದಲ್ಲಿದ್ದರು . ಈ ವಿಚಾರ ತಿಳಿಯುತ್ತಿದ್ದಂತೆ ತನ್ನ ಕಾರ್ಯವನ್ನು ಹಾಗೆ ಅರ್ಧಕ್ಕೆ ನಿಲ್ಲಿಸಿ ಮಿಕ್ಕ ಕಾರ್ಯದ ಉಸ್ತುವಾರಿಯನ್ನ ತನ್ನ ಶಿಷ್ಯರಿಗೆ ವಹಿಸಿ ಲಘುಬಗೆಯಿಂದ ಹೊರಟು ಸೀದಾ ನೇಪಾಳಕ್ಕೆ ಹೋಗಿ ಅಲ್ಲಿ ತನ್ನ ಹೆಂಡತಿ ಹಾಗು ಮಗಳನ್ನು ಕರೆದುಕೊಂಡು ಸೀದಾ ಭಾರತದ ತನ್ನ ಅಕ್ಕನ ಮನೆ( ಪ್ರಣವ್ ತಾಯಿ ) ಗೆ ಬಂದು ರಾಮಾಜೋಯಿಸ್ಸರನ್ನು ಬೇಟಿ ಮಾಡಲು ಅವರ ಕೋಣೆಗೆ ಹೋದರು .
ಪಂಡಿತಾರಾಧ್ಯರೇನು ಸಾಮಾನ್ಯರಲ್ಲ , ಇವರು ವೇದಾಂತ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರಖಾಂಡ ಪಾಂಡಿತ್ಯ ಉಳ್ಳವರು ಹಾಗೂ ಈ ವಿಚಾರದಲ್ಲಿ ಇವರನ್ನು ಮೀರಿಸುವವರು ಮತ್ತೊಬ್ಬರಿಲ್ಲ ಇವರ ಸಮಕಾಲೀನರಲ್ಲಿ . ಈಗ ಇವರು ನೇಪಾಳದ ಪಶುಪತಿ ದೇಗುಲದ ಮುಖ್ಯ ಟ್ರಸ್ಟೀಗಳಾಗಿದ್ದಾರೆ ಭಾವ , ಈಗ ಆಗಿದ್ದಕ್ಕೆ ಚಿಂತಿಸುವ ಸಮಯವಲ್ಲ , ಮುಂದಿನ ನಡೆ ಹೇಗೆ ಎಂದು ನಿರ್ಧರಿಸುವ ಸಮಯವಿದು . ಹೌದು ಭಾವ ಮನಸಿಗೆ ನೋವಾಗುತ್ತೆ . ಏಕೆಂದರೆ ಹಿಂದು ಮುಸ್ಲಿಂ ಪದಗಳ ಕೇಳಿಯೇ ಹೌಹಾರುವಂತಿದೆ .
ಎಲ್ಲಿಯ ಮೂಡಣ ಮತ್ತೆಲ್ಲಿಯ ಪಡುವಣ ಹಾಗೆಂದು ಗೋಕುಲಾಷ್ಟಮಿಗು ಇಮಾಮ್ ಸಾಬಿಗು ಸಂಬಂಧ ಕಲ್ಪಿಸುವುದು ಸಹ ಸೂಕ್ತವಲ್ಲ . ಭಾವ ನಡೆಯುವಾತ ಎಡಹುವುದು ಸಹಜವೆಂಬಂತೆ ,ವಯಸ್ಸಿನ ಹುಡುಗ ತಪ್ಪು ಮಾಡಿದ್ದಾನೆ . ತಾರುಣ್ಯದ ವಯಸ್ಸೇ ಹಾಗೇ , ಮೀಸೆ ಬಂದಾಗ ದೇಶ ಕಾಣದೆಂಬಂತೆ ಎಡವಿದ್ದಾನೆ ನಿಜ . ಆದರೆ ಎಳವೆಯಲ್ಲಿ ಅರಿಯದ ಕೂಸು ಮಲಮೂತ್ರ ಮಾಡಿದಾಗ ಸ್ವಲ್ಪವೂ ಬೇಸರಿಸಿಕೊಳ್ಳದೆ ತಾಯಿ ಹೇಗೆ ತೊಳೆದು ತನ್ನ ಕರ್ತವ್ಯ ಮೆರೆಯುವಳೊ ಹಾಗೆ ಹರೆಯದಲ್ಲಿ ಮಾಡಿದ ತಪ್ಪನ್ನು ಮನ್ನಿಸಿ ಸರಿದಾರಿಗೆ ತರುವವನೆ ನಿಜವಾದ ತಂದೆ ಮತ್ತು ಅವನ ಕರ್ತವ್ಯ ಕೂಡ ಅಲ್ಲವೇ !
ಇದು ಸರ್ವ ವಿದಿತ ಎಂದೆಲ್ಲಾ ತನಗೆ ಆ ಕ್ಷಣದಲ್ಲಿ ತೋಚಿದ್ದನ್ನು ಹೇಳಿ ತನ್ನ ಭಾವನನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ ..
ಹೌದು ಭಾಮೈದ ನೀ ಸರಿಯಾಗಿ ಹೇಳಿದ್ದಿ , ಆದರೆ ಇದು ಮೈಮೇಲೆ ಅದ ಗಾಯ ಅಲ್ಲಪ್ಪ ನಾಳೆಯೋ ನಾಡಿದ್ದೋ ವಾಸಿಯಾಗುತ್ತದೆ ಅಂದುಕೊಂಡು ಆಗಿರೋ ಗಾಯಕ್ಕೆ ಔಷಧಿ ಹಚ್ಚಿ ಗುಣಡಿಸಬಹುದು ಎಂದು ಕೊಳ್ಳಲು ಇದು ಮಿತಿ ಮೀರಿ ಹೋಗಿರುವ ಕ್ಯಾನ್ಸರ್ ಮಹಾಮಾರಿ ಕಣಪಾ ಈಗ ಹೇಳು ಇದನ್ನು ಹೇಗೆ ಗುಣಪಡಿಸುವುದು ಎಂದನು ಶೋಕ ಭರಿತವಾದ ಭಾರವಾದ ದ್ವನಿಯಲ್ಲಿ .
ಭಾವ ನೀ ಸರಿಯಾಗಿಯೇ ಹೇಳುತ್ತಿರುವೆ ಆದಾಗ್ಯೂ ದುಡುಕಿ ತನ್ನ ಬುದ್ದಿಯನ್ನು ಕಳೆದುಕೊಳ್ಳಬೇಡಿ . ಬೇಗ ಎಲ್ಲಾದ್ರೂ ಒಂದು ಮದುವೆ ಮಾಡಿಬಿಡು . ಅದೇನೋ ಅಂತಾರಲ್ಲ ಮದುವೆ ಆಗೋವರೆಗೂ ಹುಚ್ಚು ಬಿಡೋಲ್ಲ . ಎನ್ನೋ ಗಾದೆಯಂತೆ ಅಗಾದ್ರೂ ಇವನು ಸರಿ ಹೋದರು ಹೋಗಬಹುದು ನೋಡೋಣ .ಬೇರೆ ಕಡೆ ಸಂಬಂಧ ನೋಡುವ ಮನಸಿಲ್ಲ ಅಂದ್ರೆ ಬೇಡ . ನನ್ನ ಮಗಳು ರುಕ್ಮಿಣಿಯನ್ನು ಕೊಡುತ್ತೇನೆ . ಏನೋ ಒಟ್ಟಾರೆ ನಿನ್ನ ಮಾನ ಹೊಳೆಯಲ್ಲಿ ಹುಣಸೆ ಹಣ್ಣು ಕೊಚ್ಚಿ ಹೋದಂತೆ ಹೋಗಬಾರದು ಎಂಬುದು ಅಷ್ಟೇ ನನ್ನ ಉದ್ದೇಶ ಎಂದನು
ಭಾವ ರಾಮಾಜೋಯಿಸರು ಏನೊಂದೂ ಮಾತಾಡದೆ ಹಾಗೆ ಭಾಮೈದುನನ ಕೈ ಸವರಿ ಬೇರೊಂದು ರೂಂಗೆ ಹೊರಟರು . ತರುವಾಯ ಎದುರಲ್ಲೇ ಕುಳಿತಿರುವ ತನ್ನ ಅಕ್ಕ ಸೀತಳತ್ತ ತಿರುಗಿ ಅಕ್ಕ ನೋಡಿದೆಯಾ ನಾ ಏನಾದ್ರೂ ತಪ್ಪು ಮಾತಾಡಿದೆ ಏನು . ಅಕ್ಕ ನಮ್ಮ ಮಾನ ಮರ್ಯಾದೆ ಎಲ್ಲಾ ಹೋಯ್ತು . ಕೊಂದ ಪಾಪ ತಿಂದು ಪರಿಹಾರ ಅನ್ನೋ ಹಾಗೆ ಕಾಣುತ್ತೆ, ಎನ್ನುತ್ತಾ ಅಕ್ಕ ಸೀತಾಳ ಕೈ ಹಿಡಿದು ಗೊಳಾಡತೊಡಗಿದ .
ಉರ್ಮಿಳಾ ತನ್ನ ಗಂಡ ಪಂಡಿತಾರಾಧ್ಯರ ಕೈ ಸರಿಸುತ್ತಾ , ಚಿಕ್ಕಮ್ಮ ಸೀತಾಳನ್ನು ಕುರಿತು ಈ ವೇಳೆಯಲ್ಲಿ ಗಂಡ ಹೆಂಡತಿ ದುಡುಕುವುದು ತರವಲ್ಲ . ಹಿಂದಿನಿಂದಲೂ ಈ ಸಂಸಾರದಲ್ಲಿ ಶೃತಿ ತಾಳ ರಾಗ ಅಪಭ್ರoಶವಾಗದಂತೆ ನೋಡಿಕೊಂಡು ಬಂದ ಕುಟುಂಬದಲ್ಲಿ ಇಂದು , ಈಗ ನಿಮ್ಮ ಮೇಲೆ ತುಸು ಹೆಚ್ಚಿನ ಜವಾಬ್ದಾರಿ ಇದೆ ಇದನ್ನು ಗಂಡಹೆಂಡತಿ ಇಬ್ರು ಅರಿತು ಸೂಕ್ತವಾದ ಹೆಜ್ಜೆ ಇಡಬೇಕು . ಇಲ್ಲಿ ನಿಮ್ಮ ತೀರ್ಮಾನ ಅಂತಿಮ . ಇಲ್ಲಿನ ಆಗುಹೋಗನ್ನು ತಿಳಿಯಲು ಹಾಗೆ ಹೊರ ಜಗತ್ತಿಗೆ ಡಂಗುರ ಸಾರಲು ಮೀಡಿಯಾ ಬಕ ಪಕ್ಷಿಯಂತೆ ಹೊರಗೆ ಕಾದು ಕೂತಿದೆ . ಯಾವಾಗ ಹೇಗೆ ಯಾವ ಸುದ್ದಿ ಈ ಮನೆಯಿಂದ ಬರುತ್ತೆ ಅಂತ ಹಾಗೆ ಸಮಸ್ತ ನಾಗರಿಕರು ಸಹ ಈ ಮನೆ ಯಾವ ತೀರ್ಮಾನ ಕೈಗೊಳ್ಳುತ್ತೆ ಎಂದು ತಿಳಿಯಲು ಬಲು ಉತ್ಸುಕವಾಗಿದೆ . ನನ್ನ ಮಗಳು ರುಕ್ಮಿಣಿಯನ್ನು ನೀವು ನಿನ್ನ ಮಗನಿಗೆ ತಂದು ಕೊಳ್ಳದಿದ್ದರು ಚಿಂತೆಯಿಲ್ಲ , ಎಲ್ರು ಮನೆ ದೋಸೆ ತೂತೆ ಅನ್ನುವಂತೆ ತಪ್ಪು ದಾರಿ ತುಳಿಬೇಡಿ ತಪ್ಪು ನಿರ್ಣಯ ಕೈಗೊಳ್ಳುವ ಮೂಲಕ . ಇದು ನನ್ನ ಮಾತು ಚಿಕ್ಕಮ್ಮ ಎಂದಳು . ಆಗ ಸೀತಾ ಅಯ್ಯೋ ಇಲ್ಲಿ ನನ್ನದೇನು ಪಾತ್ರವಿದೆ ಹೇಳು . ನೀ ಬಂದಾಗಿನಿಂದ ನೋಡುತ್ತಿಲ್ಲವೆ ? ಎಂದು ತನ್ನ ಗೋಳನ್ನು ತೋಡಿಕೊಂಡಳು , ತನ್ನ ತಮ್ಮ ಹಾಗು ಅವನ ಹೆಂಡತಿ ಮುಂದೆ ಸೀತಾ .
Writer