A Love Story On Hindu Muslim - ಅಧ್ಯಾಯ 8

ProfileImg
23 Apr '24
7 min read


image

ಯುಗಾದಿ ಹಬ್ಬದ ಒಂಬತ್ತು ದಿನಗಳ ತರುವಾಯ ಹಿಂದೂಸ್ಥಾನದಲ್ಲಿ  ಬರುವ ಮತ್ತೊಂದು ವಿಶಿಷ್ಟ ಹಾಗು ಅಷ್ಟೆ ಮಹತ್ವಪೂರ್ಣವಾದ ಹಬ್ಬವೆಂದರೆ ಶ್ರೀ ರಾಮನವಮಿ . ಇದು ಹಿಂದುಗಳ ಧಾರ್ಮಿಕ ಹಬ್ಬಗಳಲ್ಲಿ ತನ್ನದೇ ಆದ ವಿಶಿಷ್ಟ ಪೂರ್ಣವಾದ ಚಾಪನ್ನು  ಹೊಂದಿರುವಂತಹದ್ದು . ಏಕೆಂದರೆ ಇದು  ಕೇವಲ  ಭಾರತೀಯರುಗಳನ್ನಷ್ಟೇ ಅಲ್ಲದೆ ಪ್ರಪಂಚದಾದ್ಯಂತ ಮರ್ಯಾದಾ ಪುರುಷೋತ್ತಮ ಆದರ್ಶ ಪುರುಷ ಎಂದೇ ಗುರುತಿಸಿಕೊಂಡ ರಘುಕುಲೋತ್ತಮನಾದ ಪ್ರಭು ಶ್ರೀ ರಾಮಚಂದ್ರನ ಜನ್ಮದಿನ  ಅಂದು . 

ಹೀಗಾಗಿ ಅಂದು  ಸಹಜವಾಗಿಯೇ  ಹಿಂದುಸ್ಥಾನದ ಜನಗಳು ಈ ಶ್ರೀ ರಾಮನವಮಿಯನ್ನು ಬಹು ವಿಜೃಂಭಣೆ ಹಾಗು ಮಹತ್ವಪೂರ್ಣವಾಗಿ ಆಚರಿಸುತ್ತ ಬಂದಿದ್ದಾರೆ  ಪುರಾತನ ಕಾಲದಿಂದಲು .  

ಶ್ರೀ ರಾಮನವಮಿಗಾಗಿ  ಈ ನಾಡಿನ  ಉದ್ದಗಲಕ್ಕು ಇರುವ ಸಮಸ್ತ ಹಳ್ಳಿಗಳೆಲ್ಲವೂ ಸಿಂಗಾರವಾಗಿರುತ್ತವೆ .  ಈ ರಾಮನವಮಿಯನ್ನು ಬರಮಾಡಿಕೊಳ್ಳಲು  . ಅಂತೆಯೇ ಸೀತಾರಾಮಪುರವು ಸಹ ಇದಕ್ಕೆ ಹೊರತಾಗಿ ಉಳಿದಿಲ್ಲ .  ಇಲ್ಲಿಯ  ರಾಮನವಮಿ ಉತ್ಸವ ಒಂದು ಕೈ ಮೇಲೆಯೇ ಎನ್ನಬೇಕು . ಇತರ ಹಳ್ಳಿಗಳಿಗೆ ಹೋಲಿಸಿದರೆ . ಏಕೆಂದರೆ ಇದು ಶ್ರೀರಾಮ ದೇಗುಲದವತಿಯಿಂದ ನಡೆಯುವ ಉತ್ಸವ ಬೇರೆ  , ಇನ್ನು ಕೇಳಬೇಕೇ  . ಸಾಮಾನ್ಯ ದಿನಗಳಲ್ಲಿಯೇ ನಿತ್ಯವೂ ಹಲವು ಸಹಸ್ರಾರು ಮಂದಿ ಶ್ರೀ ರಾಮನ ಉಪಾಸಕರು ಆರಾಧಕರು ಇಲ್ಲಿಗೆ ಭೇಟಿ ನೀಡುವ ಸ್ಥಳವಿದು ಅಂದಮೇಲೆ ಇನ್ನು ಶ್ರೀ ರಾಮನವಮಿಯ ವೈಭವ ಸಡಗರ ಹೇಳಬೇಕೇ ಕೇಳಬೇಕೆ ? ಅಂದು ಸ್ವರ್ಗವೇ ಈ ಧರೆಗೆ ಇಳಿದು ಬಂದಂತೆ ಭಾಸವಾಗುವುದರಲ್ಲಿ  ಎಳ್ಳಷ್ಟು ಸಂಶಯ ಇಲ್ಲ . 

ಶ್ರೀರಾಮ ದೇಗುಲದವತಿಯಿಂದ ಶ್ರೀರಾಮನವಮಿಯ ಉತ್ಸವಕ್ಕಾಗಿ ಹಲವು ದಿನಗಳ ಮುಂಚೆಯಿಂದಲೇ ಸಕಲ ಸಿದ್ಧತೆಗಳು ನಡೆಯುತ್ತದೆ . ಅಂತೆಯೇ  ರಾಮಜೋಯಿಸರು ತಮ್ಮ ಅಧ್ಯಕ್ಷತೆಯಲ್ಲಿ  ಹಲವು ಪುರ ಪ್ರಮುಖರು ಹಾಗು ಉತ್ಸಾಹಿ ಯವಕರುಗಳನ್ನು ಕರೆದು ಒಂದು ಕಮಿಟಿಯನ್ನು ರಚಿಸುತ್ತಾರೆ . ಅಂದರೆ ಪೆಂಡಾಲ್ ಸಮಿತಿ ಆಹಾರ ಸಮಿತಿ ಪ್ರಚಾರ ಸಮಿತಿ ಅಲಂಕಾರ ಸಮಿತಿ ಧಾನ್ಯ ಸಂಗ್ರಹಣಾ ಸಮಿತಿ ಆಯಾ ದಿನಗಳ ಕಾರ್ಯಕ್ರಮ ನಿರ್ವಹಣಾ ಸಮಿತಿ ಹೀಗೆ ನಾನಾ ಬಗೆಯ ಸಮಿತಿಗಳನ್ನು ರಚಿಸಿ ಪ್ರತಿಯೊಂದು ಸಮಿತಿಯನ್ನು ಆಸಕ್ತ ಯುವಕರಿಗೆ ವಹಿಸಿ ಅದರ ಎಲ್ಲಾ ಹಾಗೂ ಹೋಗುಗಳನ್ನು ಆ ಸಮಿತಿಗೆ  ಸಂಪೂರ್ಣ ಜವಾಬ್ದಾರಿ ವಹಿಸುತ್ತಾರೆ .  ಆಯಾ ಸಮಿತಿಯ ಜವಾಬ್ದಾರಿ ವಹಿಸಿಕೊಂಡಾತನು ತನ್ನ ನೆರವಿಗೆ ತನಗೆ ಬೇಕಾದವರನ್ನು ನೇಮಿಸಿಕೊಂಡು ತಮ್ಮ ತಮ್ಮ ಪಾಲಿನ ಕಾರ್ಯವನ್ನು ಅತ್ಯಂತ ದಕ್ಷತೆಯಿಂದ ಯಶಸ್ವಿಯಾಗಿ ಮನಸ್ಪೂರ್ವಕವಾಗಿ ಮಾಡುತ್ತಾರೆ .  ಇಲ್ಲಿ ಯಾರು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುವುದಿಲ್ಲ ವಿಶ್ವಾಸ ದ್ರೋಹದ ಕಾರ್ಯ ಮಾಡುವುದಿಲ್ಲ ಹೀಗೆ ಆಯಾ ಕಮಿಟಿಯವರು ತಮ್ಮ ತಮ್ಮ ಪಾಲಿನ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿಕೊಡುತ್ತಾ ಈ ಉತ್ಸವ ಯಶಸ್ವಿಯಾಗುವಲ್ಲಿ ತಾವು ಸಹ ಭಾಗಿಯಾಗುತ್ತಾರೆ . ಈ ರಾಮನವಮಿ ಉತ್ಸವ ಮುಗಿದ ಬಳಿಕ ಈ ಎಲ್ಲಾ ಸಮಿತಿಗಳು ಸಹ ಸಹಜವಾಗಿಯೇ ರದ್ದಾಗುತ್ತದೆ . ಅಂದಿನಿಂದಲೂ  ಪ್ರತಿ ವರ್ಷವು ಹೀಗೆ ನಡೆದುಕೊಂಡು ಬಂದಿರುವ ಒಂದು  ಸತ್ ಸಂಪ್ರದಾಯವೇ ಸರಿ .

ಅಂತು ಇಂತು ಸೀತಾರಾಮಪುರವು  ವಿಶೇಷವಾಗಿ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ . ಊರಿನ ಎಲ್ಲಾ ಕೇರಿಗಳ ಇಕ್ಕೆಲವು ಎಲ್ಲೆಂದರಲ್ಲಿ ಸುಣ್ಣ ಬಣ್ಣ ಬಳಿದುಕೊಂಡು ಮಾವಿನ ಎಲೆ ಕೇಸರಿ ತೋರಣಗಳಿಂದ ಹಾಗೂ ಆ ಋತುವಿನಲ್ಲಿ  ಸಹಜವಾಗಿ ಸಿಗುವ ಕಾಡು ಮರಗಳ ವಿವಿಧ ಜಾತಿಯ ಬಣ್ಣ ಬಣ್ಣದ ಹೂ ಗೊಂಚಲುಗಳನ್ನು ತಂದು  ಊರಿಗೆ ಮಠಕ್ಕೆ ಅಲಂಕಾರ ಮಾಡಲಾಗಿದೆ . ಇನ್ನು ವಸಂತ ಕಾಲವಾದ್ದರಿಂದ ಚಿಗುರಲೆ ಚಿತ್ತಾರ ಕೋಗಿಲೆಯ ಗಾನ ಎಲ್ಲೆಲ್ಲೂ ಶುಭ ಶಕುನವಾಗಿ ರಾಮನವಮಿಯ ಕಳೆಯನ್ನು ಮತ್ತಷ್ಟು ರಂಗು ರಂಗಾಗಿಸಿದೆ .

ಈ ಬಾರಿಯ ತೇರನ್ನು ಎಳೆಯಲು ಭಾರತದ ರಾಷ್ಟ್ರಪತಿಗಳು ಬರಲು ಒಪ್ಪಿರುವ ಪ್ರಯುಕ್ತ ರಾಮಭಕ್ತರು ಸಹ ಈ ಬಾರಿ ತುಸು ಹೆಚ್ಚಾಗಿಯೇ ಅಂದರೆ ಅಂದಾಜು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ . ಅದಕ್ಕೆ ಅನುಗುಣವಾಗಿಯೇ ಸರ್ವ ಸಿದ್ಧತೆಗಳು ಈಗಿನಿಂದಲೇ ಯುದ್ದೋಪಾದಿಯಾಗಿ ಜರುಗುತ್ತಿದೆ ಅದು ಸಹ ನಮ್ಮ ರಾಮಜೋಯಿಸರ ನಾಯಕತ್ವದಲ್ಲಿ . 

ಭಾರತದ ರಾಷ್ಟ್ರಪತಿಗಳೇ ಈ ಬಾರಿಯ ಉತ್ಸವಕ್ಕೆ ಆಗಮಿಸುವುದರಿಂದಾಗಿ ಅವರ ರಕ್ಷಣೆಗಾಗಿ ಬಾಂಬ್ ಪರಿಣಿತ ತಜ್ಞರು ಮಿಲಿಟರಿ ಪಡೆ ಪೊಲೀಸ್ ವರಿಷ್ಠರು ಸಾಮಾನ್ಯ ಪೊಲೀಸ್ ಪೇದೆಗಳು ಹೀಗೆ ಹೋಂ ಗಾರ್ಡ್ಸ್ ಶ್ವಾನ ಸಿಬ್ಬಂದಿ ಹೀಗೆ ಎಲ್ಲರೂ ಹೈ ಅಲರ್ಟ್ ಆಗಿ ಸುಮಾರು ನಾಲ್ಕಾರು ದಿನ ಮುಂಚೆಯಿಂದಲೇ ತಮ್ಮ ಕರ್ತವ್ಯದಲ್ಲಿ ನಿರತರಾಗಿ ಈ ಮಠವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದಾರೆ .

ಸೀತಾರಾಮಪುರದಲ್ಲಿನ  ಶ್ರೀರಾಮನವಮಿಯನ್ನು ಪ್ರತಿ ಬಾರಿಯು  ಒಟ್ಟು ಒಂಬತ್ತು ದಿನಗಳ ಕಾಲ ಬಹು ವಿಶಿಷ್ಟ ರೀತಿಯಾಗಿ ಹಾಗೂ ಭಕ್ತರ ತನುಮನದಲ್ಲಿ ಈ ನೆನಪುಗಳು ಹಾಗೆ  ಶಾಶ್ವತವಾಗಿ ಉಳಿಯುವಷ್ಟು ವಿಜೃಂಭಣೆಯಿಂದ ಆಚರಿಸಲಾಗುತ್ತದೆ .  ಒಂಬತ್ತು ದಿನಗಳ ಕಾಲವು ಒಂದಲ್ಲ ಒಂದು ಬಗೆಯ ಕಾರ್ಯಕ್ರಮಗಳು ಇರುತ್ತದೆ .   ಒಟ್ಟಾರೆ  ಮೈಸೂರಿನಲ್ಲಿ ನಡೆಯುವ ನವರಾತ್ರಿಯ ಉತ್ಸವದ ರೀತಿಯಲ್ಲಿಯೇ ಈ ಶ್ರೀರಾಮನವಮಿಯನ್ನು ಸಹ ಹೋಲಿಸಿ ನೋಡುವ ಭಕ್ತ ಮಹಾಶಯರಿಗೂ ಕೊರತೆ  ಇಲ್ಲದಿಲ್ಲ  .  

ಒಟ್ಟಾರೆ  ಈ ರಾಮನವಮಿ ಉತ್ಸವಕ್ಕೆ ಮೂರು ದಿನ ಮೊದಲೇ  ಬೆಳ್ಳಿ ಮಿಶ್ರಿತ ಬಂಗಾರದ ರಥವನ್ನು ಅದರ ಮನೆಯಿಂದ ಹೊರಗೆ ಎಳೆದು ಪೂಜಾ ವಿಧಾನಗಳು ಜರುಗಿಸುವ ಜಾಗದಲ್ಲಿ ನಿಲ್ಲಿಸಲಾಗುತ್ತದೆ . ಬಳಿಕ ಈ  ರಥವನ್ನು ನೀರಿನಿಂದ ತೊಳೆದು ಶುದ್ದಿಗೊಳಿಸುತ್ತಾರೆ ಬಳಿಕ ಅಕ್ಕಸಾಲಿಯು  ರಥವನ್ನು ಪಾಲಿಶ್ ಮಾಡುವ ಮೂಲಕ ಆ ರಥಕ್ಕೆ ಮತ್ತಷ್ಟು ಹೊಳಪು ತುಂಬುತ್ತಾನೆ .  ಬಳಿಕ ಆ ರಥ ವನ್ನು ಸಂಪೂರ್ಣವಾಗಿ ವಿವಿಧ ಹೂಗಳು ವಸ್ತ್ರಗಳು  ಪತಾಕೆ ಕೇಸರಿ ಮುಂತಾದವುಗಳಿಂದ  ಸಿಂಗಾರ ಮಾಡಲಾಗುತ್ತದೆ . ಧಾರ್ಮಿಕ  ಕಲಾಪಗಳು ಜರುಗುವ ಸ್ಥಳದಲ್ಲಿ  ಹಾಗು ದೇಗುಲವು ಸೇರಿದಂತೆ ಸಂಪೂರ್ಣ ಮಠವನ್ನು ಸಿಸಿ ಕ್ಯಾಮರಗಳ ಅದೀನಕ್ಕೆ ತರಲಾಗಿದ್ದು ,  ಪೊಲೀಸ್ ಪಡೆ ಇದರ ಉಸ್ತುವಾರಿ ಹೊತ್ತಿರುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ . 

ಎಲ್ಲಾ ಒಂಬತ್ತು ದಿನಗಳ ಕಾರ್ಯಕ್ರಮದ ವೇಳಾಪಟ್ಟಿ ಈ ಕೆಳಗಿನಂತೆ ಇದೆ  .

ಮೊದಲ ದಿನದ ಕಾರ್ಯಕ್ರಮ :

ನಿಗಧಿತ ಮುಹೂರ್ತದಂದು ದೇವರ ಮೂರ್ತಿಯನ್ನು ಅಲಂಕಾರದಿಂದ ಕಂಗೊಳಿಸುತ್ತಿರುವ ರಥದಲ್ಲಿರಿಸಿ ಸರ್ವ ರೀತಿಯಲ್ಲಿಯು  ಪೂಜಿಸಿ ಸಿದ್ಧವಾಗಿರುತ್ತದೆ . ಆದರೆ ಅಂದು ಉತ್ಸವಕ್ಕೆ ಚಾಲನೆ ನೀಡುವುದಷ್ಟೇ ಬಾಕಿ . ಆ ಕೆಲಸವನ್ನು ಅಂದು ಭಾರತದ ರಾಷ್ಟ್ರಪತಿಗಳು ನೆರವೇರಿಸುತ್ತಾರೆ .  ಅಂದು ರಾಮಭಕ್ತರ ಸಂಖ್ಯೆ ನೋಡಿದರೆ ಎಂತಹವರಿಗು ಗಾಬರಿ ಬೀಳುವಂತಾಗುತ್ತದೆ . ಅಂದಿನ ಭಕ್ತರ ಸಂಖ್ಯೆಒಂದು ರೀತಿ ಜೇನುಗೂಡು ನೋಡಿದ ಅನುಭವವೇ ಸರಿ . 

ಅಂದು ರಾಷ್ಟ್ರಪತಿಗಳು ಹಾಗೂ ಧರ್ಮಾಧಿಕಾರಿಗಳಾದ ರಾಮಜೋಯಿಸರು ಒಂದು ಗೊತ್ತಾದ ವೇದಿಕೆಯಿಂದ ರಥವಿರುವ ಜಾಗಕ್ಕೆ ಒಲಗದವರು ಕರೆದುಕೊಂಡು ಬರುತ್ತಾರೆ .  ಇದಕ್ಕೂ ಮುನ್ನ ವೇದಿಕೆಯಲ್ಲಿ ಇದ್ದಾಗಲೇ  ತಮ್ಮ ಅನಿಸಿಕೆಗಳು ಎಂದಲ್ಲ ಸೇರಿ ಸುಮಾರು 20 ನಿಮಿಷ ಕಾಲ ರಾಮಭಕ್ತರನ್ನು ಕುರಿತು ಮಾತನಾಡಿರುತ್ತಾರೆ  . ಈಗ ನೇರವಾಗಿ ಭಕ್ತರನ್ನು ಕೈ ಬೀಸುತ್ತಾ ಭಕ್ತರನ್ನು ಸಂತರಿಂದ ಅಲೆಯಲ್ಲಿ ಮುಳುಗಿಸಿ ರಥಕ್ಕೆ ಪೂಜಾ ಕಾರ್ಯವನ್ನು ಕೈಗೊಂಡು ಕರ್ಪೂರವನ್ನು ಬೆಳಗುವ ಮೂಲಕ ಹಾಗೂ ರಾಮನವಮಿ ಸಂದೇಶ ಸಾರುವ ಗಾಳಿಫಲಕ ಮತ್ತು ದೊಡ್ಡ ಗಾಳಿ ಚೀಲ ( ಬೆಲೂನ್ )ಗಳನ್ನು ಗಾಳಿಗೆ ಹಾರಿ ಬಿಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಾರೆ  .  ಆ ಬಳಿಕ ರಾಷ್ಟ್ರಪತಿಗಳು ಮತ್ತು ಧರ್ಮಾಧಿಕಾರಿ ರಾಮಜೋಯಿಸರು ಪೊಲೀಸ್ ಕಮಿಷನರ್ ಮತ್ತು ಇತರೆ ಮೂರು ನಾಲ್ಕು ಮಂದಿ ಸೇರಿ  ಭಕ್ತರು ರಥ ಎಳೆಯಲು ಕಟ್ಟಿದ್ದ ಹಗ್ಗದ ಸರಪಳಿಯನ್ನು ಹಿಡಿದು ಎಳೆಯುವ ಮೂಲಕ ರಥವನ್ನು  ಒಂದೆರಡು ಅಡಿಗಳಷ್ಟು ಮುಂದೆ ಎಳೆಯುತ್ತಾರೆ  ತದನಂತರ ಈ ರಾಮನವಮಿಯ ಉತ್ಸವದ ಆರಂಭಕ್ಕೆ ಮುನ್ನುಡಿ ಇಟ್ಟಂತಾಗುತ್ತದೆ .

ರಾಮಭಕ್ತರ ಹರ್ಷ ಮುಗಿಲು ಮುಟ್ಟುತ್ತಿದ್ದಂತೆ ನಾನಾ ರೀತಿಯ ಶ್ರೀರಾಮ ಘೋಷ ವಾಕ್ಯ ಕೂಗುತ್ತಾ  ಭಕ್ತರುಗಳು ರಥವನ್ನು ಎಳೆಯುವವರು ಒಂದು ಕಡೆ ಎಳೆಯುತಿದ್ದರೆ ಮತ್ತೊಂದು ಕಡೆಯಲ್ಲಿ  ಸಹಸ್ರಾರು ಭಕ್ತರು ತಾವು ನಿಂತ ಜಾಗದಲ್ಲೇ ಹಲವಾರು ಸರ್ಕಲ್ ಮಾಡಿಕೊಂಡು ಡಿಜೆ ಸೌಂಡ್ ಅಲ್ಲಿ ತೇಲಿ ಬರುತ್ತಿರುವ ರಾಮ ಗೀತೆಗಳಿಗೆ ಹೆಜ್ಜೆ ಹಾಕುತ್ತಾ ಕುಣಿಯುವ ತರುಣ ತರುಣಿಯರಿಗೇನು  ಅಲ್ಲಿ ಕಮ್ಮಿ ಇಲ್ಲ .  ಕೇಸರಿ ರುಮಾಲು ತಿಲಕ ಹಚ್ಚುವವರು ನೃತ್ಯ ಕುಣಿತ  ನೋಡುಗರಿಗೆ ಮತ್ತೊಂದು ಲೋಕಕ್ಕೆ ಕರೆದು ಕೊಂಡು ಹೋದ ಅನುಭವ ಆಗುತ್ತಿದೆ . 

ಹೀಗೆ ರಾಷ್ಟ್ರಪತಿಗಳ ಚಾಲನೆಯಿಂದ ವಿದ್ಯುಕ್ತವಾಗಿ ಆರಂಭಗೊಂಡ ಬಳಿಕ ಈ ರಥವನ್ನು ಗೊತ್ತಾದ ಜಾಗಕ್ಕೆ ಎಳೆಯಬೇಕಾಗಿದೆ . ಸುಮಾರು ಅರ್ಧ ಕಿಲೋಮೀಟರ್ ದೂರದ ಜಾಗಕ್ಕೆ ಎಳೆದು ನಿಲ್ಲಿಸಲು ಸಹಸ್ರಾರು ಭಕ್ತರು ಇದ್ದು   ಆಮೆ ನಡಿಗೆಯಂತೆ ರಥ ಸಾಗುತ್ತಿದೆ ಎಂದರೆ ಇದಕ್ಕೆ  ಕಾರಣ ಎಲ್ಲೆಲ್ಲೋ  ನೆಲ ಕಾಣದಷ್ಟು ಜನವೋ ಜನ ಹಾಗೂ ಭಜನೆ ಡೊಳ್ಳು ಕುಣಿತ ಭಜನೆ  ಜಾನಪದ ನೃತ್ಯ ಇತ್ಯಾದಿ ಮೆರವಣಿಗೆಯುದ್ದಕ್ಕೂ ಸಾಗಿಬರುತ್ತಿದೆ .   ರಾಷ್ಟ್ರಪತಿಗಳು ಸುಮಾರು ಬೆಳಿಗ್ಗೆ 12ಕ್ಕೆ ಚಾಲನೆ ನೀಡಿದರೆ ರಥವನ್ನು ನಿಲ್ಲಿಸಬೇಕಾದ ಸ್ಥಳಕ್ಕೆ ತಂದು ನಿಲ್ಲಿಸಲು ಮದ್ಯಾಹ್ನ ಮೂರು ಗಂಟೆ ಸಮಯ ಹಿಡಿಯಿತು ಎಂದರೆ ನೀವೇ ಊಹಿಸಿಕೊಳ್ಳಿ ಇದರ ವೈಭವ  .

ಬಳಿಕ  ಒಂದು ಪೂಜೆ ಸಲ್ಲಿಸಿದ  ನಂತರ ಭಕ್ತರಿಗೆಒಟ್ಟಾರೆ ರಥ ಎಳೆಯುವ ಕಾರ್ಯಕ್ರಮ ಮುಕ್ತಾಯವಾದ ಮಧ್ಯಾಹ್ನದಿಂದಲೂ ರಾತ್ರಿಯವರೆಗೂ ಮಹಾಪ್ರಸಾದ ವಿತರಣೆ ಕಾರ್ಯಕ್ರಮ  ಇರುತ್ತದೆ . ಇಲ್ಲಿಗೆ ಮೊದಲನೇ ದಿನದ ಕಾರ್ಯಕ್ರಮಗಳು ಮುಕ್ತಾಯವಾಗುತ್ತದೆ .

(ನಾಡಿನ ಮೂಲೆ ಮೂಲೆಗಳಿಂದಲೂ ಶ್ರೀರಾಮ ಭಕ್ತರು ಕೇಸರಿ ವಸ್ತ್ರವನ್ನು ತೊಟ್ಟು ಕಾಲ್ನಡಿಗೆಯಲ್ಲಿ ಹರಕೆ ಹೊತ್ತುಕೊಂಡು ಬಂದ ಅಪಾರ ಸಂಖ್ಯೆಯ ಭಕ್ತರುಗಳಿಗೆ ಕೊರತೆ ಇಲ್ಲ ಹೀಗೆ ರಾಮನವಮಿಯಂದು ಕಾಲ್ನಡಿಗೆಯಲ್ಲಿ ಬರುವ ಭಕ್ತರನ್ನು ಮಠದ ವತಿಯಿಂದಲೆ ಆಹ್ವಾನಿಸಲಾಗು ವುದು ಮತ್ತು ಅವರಿಗೆ ಊಟೋಪಚಾರದ ವ್ಯವಸ್ಥೆ ಮಾಡಿ ಅವರ ವಿಶ್ರಾಂತಿಗಾಗಿ ವ್ಯವಸ್ಥೆ ಮಾಡಿ ಕೊಡುವುದು .

ಸೀತಾರಾಮಪುರದ ಶ್ರೀ ರಾಮ ಮಠಕ್ಕೆ ಬರುವ ಎಲ್ಲಾ ಭಕ್ತರಿಗು  ರಾಮಮಠದವತಿಯಿಂದ ಹಾಗೂ ಭಕ್ತರು ಅಲ್ಲಲ್ಲಿ ಹಳ್ಳಿಯ ಉದ್ದಕ್ಕೂ ಊಟ ತಂಗಲು ವ್ಯವಸ್ಥೆ ಕೋಸಂಬರಿ ಪಾನಕ ಇತ್ಯಾದಿಯನ್ನು ಪುಕ್ಕಟೆಯಾಗಿ ಕೊಡುವ ಮೂಲಕ ತಮ್ಮ ಭಕ್ತಿಭಾವಣೆಯನ್ನು ಹೊರ ಹಾಕುತ್ತಿದ್ದಾರೆ . ) 

ಎರಡನೇ ದಿನದ ಕಾರ್ಯಕ್ರಮಗಳು :

ಬೆಳಿಗ್ಗೆ : ೧೦:೦೦ ರಿಂದ ೨:೦೦ ರವರೆಗೆ ಕಂಬಳ ( ಕೋಣ ) ಓಟದ ಸ್ಪರ್ಧೆ . 

ಮಧ್ಯಾನ್ಹ : ೨:೦೦ ರಿಂದ ೪:೦೦ ರವರೆಗೆ ಪ್ರಸಾದ ವಿತರಣೆ

ಸಂಜೆ : ೬:೦೦ ರಿಂದ ೯:೦೦ ವರೆಗೆ  ಭಜನೆ 

ರಾತ್ರಿ : ೯:೦೦ ರಿಂದ ಪ್ರಸಾದ ವಿತರಣೆ 

ಮೂರನೇ ದಿನದ ಕಾರ್ಯಕ್ರಮಗಳು:

ಬೆಳಿಗ್ಗೆ :  ೧೦:೦೦ ರಿಂದ ೨:೦೦ ಗ್ರಾಮೀಣ ಕ್ರೀಡೆ ಎಣ್ಣೆಗಂಬ ಏರುವ ಸ್ಪರ್ಧೆ .

ಮಧ್ಯಾನ : ೨:೦೦ ರಿಂದ ೪:೦೦  ರವರೆಗೆ ಪ್ರಸಾದ ವಿತರಣೆ

ಸಂಜೆ :  ೬:೦೦ ರಿಂದ ೯:೦೦ ರವರೆಗೆ ಹರಿಕಥೆ ಕಾರ್ಯಕ್ರಮ ( ಶ್ರೀರಾಮಾಯಣಕ್ಕೇ  ಸಂಬಂಧಪಟ್ಟಂತೆ )

ರಾತ್ರಿ ೯:೦೦ ರಿಂದ ಪ್ರಸಾದ ವಿತರಣೆ 

ನಾಲ್ಕನೇ ದಿನದ ಕಾರ್ಯಕ್ರಮಗಳು:

ಬೆಳಿಗ್ಗೆ : ೯:೦೦ ರಿಂದ ೨:೦೦ ಶ್ರೀರಾಮಯಣಕ್ಕೆ ಸಂಬಂಧಪಟ್ಟಂತೆ ನುರಿತ  ಪಂಡಿತರಿಂದ   ಜನಸಾಮಾನ್ಯರೊಂದಿಗೆ ಸಂವಾದ ಕಾರ್ಯಕ್ರಮ .

ಮಧ್ಯಾನ: ೨:೦೦ ರಿಂದ ೪:೦೦   ಪ್ರಸಾದ ವಿತರಣೆ

ಸಂಜೆ : ೬:೦೦ ರಿಂದ ೯:೦೦ ರಾಮಾಯಣ ಮಹಾ ಕಾವ್ಯದಲ್ಲಿ ಬರುವ ವಿವಿಧ ಪಾತ್ರಗಳ ವೇಷಭೂಷಣ ಸ್ಪರ್ಧೆ, ವಿವಿಧ ವಯೋಮಾನದವರಿಂದ. 

ರಾತ್ರಿ : ೯:೦೦ ರಿಂದ ಪ್ರಸಾದ ವಿತರಣೆ .

ಐದನೇ ದಿನದ ಕಾರ್ಯಕ್ರಮಗಳು:

ಬೆಳಿಗ್ಗೆ ೧೦:೦೦ ರಿಂದ ೨:೦೦ ರವರೆಗೆ ಈ  ಜಗತ್ತಿನಲ್ಲಿ ಸನಾತನ ಸಂಸ್ಕೃತಿ ಸಾಗಿ ಬಂದ ಹಾದಿ ( ವೇದಕಾಲಕ್ಕೂ ಮುಂಚೆಯಿಂದ ಇಂದಿನ ದಿನಗಳ ಕಾಲಘಟ್ಟವರೆಗೆ.

ಮಧ್ಯಾನ್ಹ  ೨:೦೦ ರಿಂದ ೪: ೦೦ರವರೆಗೆ  ಪ್ರಸಾದ ವಿತರಣೆ

ಸಂಜೆ : ೬:೦೦ ರಿಂದ ೯:೦೦ ಹಿಂದು ಧರ್ಮದ ಪ್ರಭಾವ ಇತರೆ ಧರ್ಮಗಳ ಮೇಲೆ ಹಾಗು ಇಂದು ಹಿಂದು ಧರ್ಮ ಎದುರಿಸುತ್ತಿರುವ ಪ್ರಮುಖ ಸವಾಲುಗಳು ಈ ವಿಚಾರವಾಗಿ ನುರಿತ  ಪಂಡಿತರುಗಳಿಂದ ಸಂವಾದ ಮತ್ತು ಉಪನ್ಯಾಸ.

ರಾತ್ರಿ   ೯:೦೦ ರಿಂದ ಪ್ರಸಾದ ವಿತರಣೆ .

ಆರನೇ ದಿನದ ಕಾರ್ಯಕ್ರಮಗಳು:

ಬೆಳಿಗ್ಗೆ : ೯:೦೦ ರಿಂದ ೨:೦೦ ವೇದಕಾಲದಿಂದ ಇಂದಿನ ಕಾಲಘಟ್ಟದವರೆವಿಗು       ಭಾರತದಲ್ಲಿ ವಿಜ್ನಾನವು ಬೆಳೆದು ಬಂದ ಹಾದಿಯ ಕುರಿತು ಪಕ್ಷಿನೋಟ ಮತ್ತು ಕೆಲವು ಮಾದರಿಗಳ ಪ್ರದರ್ಶನ .

ಮಧ್ಯಾನ್ಹ ೨:೦೦ ರಿಂದ ೪:೦೦  ಪ್ರಸಾದ ವಿತರಣೆ 

ಸಂಜೆ  :೬:೦೦ ರಿಂದ ೯:೦೦ ನಾಡಿನ  ಹೆಮ್ಮೆಯ  ISRO ಅಧ್ಯಕ್ಷರು ಹಾಗು ಕೆಲವು ಕನ್ನಡ ವಿಜ್ಞಾನಿಗಳೊಂದಿಗೆ ಸಂವಾದ ಮತ್ತು ಉಪನ್ಯಾಸ ಕಾರ್ಯಕ್ರಮ . ಆಯ್ದ ಸಹಸ್ರಾರು ಕಾಲೇಜ್ ವಿದ್ಯಾರ್ಥಿಗಳೊಂದಿಗೆ .

ರಾತ್ರಿ ೯:೦೦ ಪ್ರಸಾದ ವಿತರಣೆ .

ಏಳನೇ ದಿನದ ಕಾರ್ಯಕ್ರಮಗಳು:
ಬೆಳಿಗ್ಗೆ :  ೯:೦೦ ರಿಂದ ೨:೦೦ ಶ್ರೀರಾಮಾಯಣ ನಡೆದಿತ್ತೆ ಇಲ್ಲ ಕಾಲ್ಪನಿಕವೇ ಎಂಬ ವಿಚಾರವಾಗಿ ವಿಷಯ ತಜ್ಞರಿಂದ  ವಿಚಾರ ಸಂಕಿರಣ & ಪುರಾತನ ಭಾಷೆಗಳಲ್ಲೊಂದಾದ  ಸಂಸ್ಕೃತ ಭಾಷೆಯ  ವಿಶಿಷ್ಟತೆ ಪ್ರಸ್ತುತ ದಿನಮಾನಗಳಲ್ಲಿ ಅದರ ಪ್ರಾಮುಖ್ಯತೆ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ  ಅತ್ಯುತ್ತಮವಾಗಿ ಬರೆದ ಪ್ರಬಂಧಕಾರನಿಗೆ ಗೌರವ ಸಮರ್ಪಣೆ ಹಾಗು ಆ ಪ್ರಬಂಧ ಕ್ಕೇ ರಾಷ್ಟ್ರೀಯ ಪುರಸ್ಕಾರ ದೊರೆತು ಎಲ್ಲ ಪತ್ರಿಕೆಯಲ್ಲಿ ಇದನ್ನು ಪ್ರಕಟಿಸಿದ್ದಕ್ಕೆ ಅಭಿನಂದನೆ ಸಲ್ಲಿಕೆ .

ಸಂಜೆ : ೬:೦೦ ರಿಂದ ರಾತ್ರಿ ೯:೦೦ ರವರೆಗೆ ರಾಮನವಮಿಯ ಏಳನೇ ದಿನದ ಇಂದು ನಾಡಿನ ಖ್ಯಾತ  ಸಂಗೀತಗಾರರಿಂದ ಸಂಗೀತಗೋಷ್ಠಿ ಹಾಗು ಹಾಡುಗಾರಿಕೆ.

ಹಾಡು : ಶ್ರೀರಾಮನವಮಿ 

ಎನಿತು ಮಧುರವದು ಶ್ರೀ ರಾಮನಾಮ l 
ಏನಿತು ಭಾಗ್ಯಶಾಲಿಯೋ ರಘುಕುಲ ಸೋಮ ll

ಬಂದಿತು ಇಂದು ನಾಡಿನ ಜನತೆಗೆ ಶ್ರೀ ರಾಮನವಮಿಯು ತಂದನೊ ವಸಂತನಿಂದು ಸಸ್ಯ ಸಂಕುಲಕೆ ಹಸುರಿನ ಐಸಿರಿ 
ನಾದ ಗಂಧ ವರ್ಣದ ಚಿತ್ತಾರದ ಚೆಲುವಿನ ನಡುವೆ 
ಶುಭವನು ಕೋರಿದೆ ಕೋಗಿಲೆ ಬಳಗವು ಶ್ರೀರಾಮನವಮಿಗೆ 

ಸುಡುವ ಬಿಸಿಲೊಳು ನೊಂದ ಮನಕೆ 
ಚಿಗುರಲೆ ಚಿತ್ತಾರದ ನಡುವೆ ರಾಮ ನವಮಿಯ ಸಂಭ್ರಮಕೆ ಬೆಲ್ಲದ ಪಾನಕ ಕೋಸಂಬರಿಯ ಸವಿಯದು
ತಂದಿತು ತಂಪನು ಬೆಂದ ಈ ದೇಹಕೆ 

ಶ್ರೀ ರಾಮನವಮಿಯ ಸಡಗರ ಭಕ್ತರ ಬಾಳಿಗೆ
ಶ್ರೀ ರಾಮನಾಮ ಸ್ಮರಣೆ ನೊಂದವರ ಪಾಲಿಗೆ
ಶ್ರೀರಾಮನ ಆದರ್ಶವೇ ಸ್ಪೂರ್ತಿ ಮಾನವ ಜನಾಂಗಕೆ      

ಎಂಟನೇ ದಿನದ ಕಾರ್ಯಕ್ರಮಗಳು:

ಬೆಳಿಗ್ಗೆ :೯:೦೦ ರಿಂದ ೨:೦೦ ಭರತ ಮತ್ತು ಶ್ರೀರಾಮರ ಮಿಲನ ಹಾಗು ಶ್ರೀರಾಮನ  ಪಟ್ಟಾಭಿಷೇಕ ಎಂಬ ವಿಚಾರವಾಗಿ ಯಕ್ಷಗಾನ ಹಾಗು 

ಸಂಜೆ : ೬:೦೦ ರಿಂದ ಮುಗಿಯುವವರೆಗೆ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಮಹಾಪ್ರಸ್ತಾನ  ಎಂಬ ನಾಟಕ.

ಒಂಬತ್ತನೇ ದಿನದ ಕಾರ್ಯಕ್ರಮಗಳು:

ಇಂದು  ಶ್ರೀರಾಮನವಮಿಯ ಮುಕ್ತಾಯದ  ಅಂದರೆ ಅಂತಿಮ ದಿನವಾದ ಇಂದು ಶ್ರೀ ರಾಮನವಮಿಯ ಎಲ್ಲಾ  ಕಾರ್ಯಕ್ರಮಕ್ಕೆ ಅಂತಿಮ ತೆರೆ ಎಳೆಯುವ ದಿನ .  ಇಂದು ಈ ಕಾರ್ಯಕ್ರಮದ ಯಶಸ್ವಿಗಾಗಿ ಉಸ್ತುವಾರಿಯ ಹೊಣೆ ಹೊತ್ತ ರಾಮಜೋಯಿಸರಿಂದ ಅಧ್ಯಕ್ಷೀಯ ಭಾಷಣ ಹಾಗು ಕಾರ್ಯಕ್ರಮದ ಪ್ರಾರಂಭದಿಂದಲೂ ಕೊನೆಯ ದಿನದ ಕೊನೆಯ ಕ್ಷಣದವರೆಗೂ ಪಾಲ್ಗೊಂಡು ದುಡಿದ ಎಲ್ಲಾ ಪ್ರಮುಖರಿಗು ವಂದಿಸುವುದು ಸನ್ಮಾನ ಮಾಡುವುದು ಸ್ಮರಣ ಫಲಕ ನೀಡುವುದು ಹಾಗೂ ಎಲ್ಲರಿಗೂ ಶಾಲುಹೊದಿಸಿ ಪುಷ್ಪಮಾಲೆ ಹಾಕಿ ಒಂದುವರೆ ಅಡಿ ಎತ್ತರದ ಶ್ರೀರಾಮನ ಪುತ್ತಳಿಯನ್ನು ನೆನಪಿನ ಕಾಣಿಕೆಯಾಗಿ ಕೊಡುವುದು .

ಒಟ್ಟು 9 ದಿನಗಳ ಕಾಲ ಸೀತಾರಾಮಪುರದ ಈ ಮಠದ ಆವರಣದಲ್ಲಿ ಬಹು ದೊಡ್ಡ ಜಾತ್ರೆಯೇ ಜರುಗುತ್ತಿದ್ದು  , ಬೀದಿ ಬದಿಗಳಲ್ಲಿ ಪೆಂಡಾಲುಗಳನ್ನು ಹಾಕಿಕೊಂಡು ಪುಸ್ತಕ ಬಟ್ಟೆ ಆಟಿಕೆ ಸಿಹಿತಿಂಡಿ ರಾಮ ಸೀತೆ ಹನುಮಂತ ಹಾಗೂ ಇತರೆ ದೇವರುಗಳ ಚಿತ್ರಪಟಗಳು ಭಕ್ತಿಗೀತೆ ಕ್ಯಾಸೆಟ್ ಸಿಡಿ ಇತ್ಯಾದಿ ಇತ್ಯಾದಿ ಮಾರಾಟ ಜೋರಾಗಿ ನಡೆಯುತ್ತಿದೆ  . ಹೀಗೆ ಇಷ್ಟೆಲ್ಲಾ ವೈಭವಯುತವಾಗಿ ನಡೆದ ಜಾತ್ರೆಗೆ ಇಂದು ಮುಕ್ತಾಯದ ತೆರೆ ಅಧಿಕೃತವಾಗಿ ಬಿದ್ದರು ಈ ಜಾತ್ರೆಯ ಹವಾ  ಮತ್ತು ಈ ಜನಜಂಗುಳಿ ಕಮ್ಮಿ ಆಗಲು ಇನ್ನು ಕಡಿಮೆ ಎಂದರು ಐದಾರು ದಿನಗಳ ಕಾಲ ಹಿಡಿಯುತ್ತದೆ .

ಒಟ್ಟಾರೆ ಮಳೆ ನಿಂತರು ಮಳೆ  ಹನಿ ಬಿಡದು ಎಂಬ ಗಾಧೆ ಮಾತಿನಂತೆ ,  ಈ ನಾಡಿಗೆ ಶ್ರೀರಾಮನವಮಿ ಸಡಗರ ಮುಗಿದರು ಸಹ ಏಳನೇ ದಿನದ ಕಾರ್ಯಕ್ರಮದಲ್ಲಿ  ಖ್ಯಾತ ಸಂಗೀತಗಾರರು ಹಾಡಿದ ಶ್ರೀ ರಾಮನವಮಿಯ ಹಾಡಿನ ಧ್ವನಿ ಮಾತ್ರ ಮೈಕಿನಲ್ಲಿ ಎಲ್ಲೆಡೆ ದೊಡ್ಡ ದ್ವನಿಯಲ್ಲಿ ಇಂಪಾಗಿ ಕೇಳುತ್ತ ಇದೆ .

Category:Stories



ProfileImg

Written by Nagaraj Kale

Writer