A Love Story On Hindu Muslim - ಅಧ್ಯಾಯ 7

ProfileImg
15 Apr '24
19 min read


image

ಇತ್ತ ಪ್ರಣವ್ ತಂದೆಯ ಅಣತಿಯಂತೆ ತಂದೆಯ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುತ್ತಾ ತನ್ನ ತಂದೆಗು ನೇರವಾಗುತ್ತ ಆ ಮೂಲಕ ತಾನು ಅನುಭವಗಳಿಸಿಕೊಳ್ಳುತ್ತ  ತನಗೆ ಗೊತ್ತಾಗದ್ದನ್ನು ಹೇಗೆ ಮಾಡಬೇಕೆಂದು ತಂದೆ ಇಂದ ತಿಳಿದುಕೊಳ್ಳುತ್ತಾ , ಒಂದು ರೀತಿ ಎಲ್ಲದರಲ್ಲೂ ಪಕ್ವತೆಗೊಳ್ಳುತಿದ್ದಾನೆ ದಿನದಿಂದ ದಿನಕ್ಕೆ . 

ಹೀಗೆ ಒಂದು ದಿನ ಕಚೇರಿಯಲ್ಲಿ ಕುಳಿತು ಎದುರುಗಡೆ ಒಂದಷ್ಟು ಬಗೆ ಬಗೆಯ ಫೋಟೋ ಹರಡಿಕೊಂಡು ಕುಳಿತು ಹಾಗೆ ಕಣ್ಣಾಡಿಸುತಿದ್ದಾನೆ . ಅವು ಯಾವ್ಯಾವುದೊ ಊರುಗಳ ದೇಗುಲಗಳಿಗೆ ಸಂಬಂಧಿಸಿದ್ದು , ಅವುಗಳಲ್ಲಿ ಬಹುತೇಕವಾಗಿ ಜೀರ್ಣದ್ಧಾರಕ್ಕೆ ಸಂಬಂಧಿಸಿದ್ದು ಹಾಗು ಕಾರಣಾಂತರದಿಂದ ಆರ್ಥಿಕ ಆಡಚಣೆಯಿಂದಾಗಿ ಹಾಗೆ ಪೂರ್ತಿಯಾಗದ ದೇಗುಲಗಳು . ನಾನಾ ದೇವರ ಮತ್ತು ದೇಗುಲಗಳ ಫೋಟೋ ನೋಡುತ್ತಿರಬೇಕು ಆಗ ಎದುರುಗಡೆ ನಿಂತ ಇವರ ಸಹಾಯಕ ಆ ಫೋಟೋದ ವಿವರವನ್ನು ಪ್ರಣವ್ಗೆ ನೀಡುತ್ತಿದ್ದಾನೆ . ಯಾವುದೋ ಒಂದು ದೇಗುಲದ 5 - 6 ವಿವಿಧ ಕೋನದಲ್ಲಿ ತೆಗೆದ ಫೋಟೋ ಪ್ರಣವ್ ತನ್ನ  ಕೈಲಿ ಹಿಡಿದುಕೊಂಡು ನೋಡುತ್ತಾನೆ ಜೊತೆಗೆ ಅ ಹಳ್ಳಿಯ ಪಂಚಾಯತ್ ಸದಸ್ಯರ ಪತ್ರ ಅ ಹಳ್ಳಿಗೆ ಸಂಬಂದಿಸಿದ ಪಿಡಿಓ ಲೆಟರ್ ಸಹ ಇದೆ .  ಎಲ್ಲವನ್ನು ಹಾಗೆ ನೋಡುತಿದ್ದಾನೆ ಪ್ರಣವ್ .     

ಸರ್ , ಅದು ದಾವಣಗೆರೆ ಜಿಲ್ಲೆ  ನ್ಯಾಮತಿ ತಾಲೂಕು ಸುರಹೊನ್ನೆ ಗ್ರಾಮದ ಕೋಡಿಕೇರಿಯಲ್ಲಿರುವ ಶ್ರೀಮುರುಳು -ಸಿದ್ದೆಶ್ವರ ದೇಗುಲಕ್ಕೆ ಸೇರಿದ ಫೋಟೋ ಸರ್ .  ಈ ದೇಗುಲ ಸುಮಾರು ೧೫0 ವರ್ಷ ಹಳೆಯ ಕಾಲಕ್ಕೆ ಸೇರಿದ್ದು , ಅಂದು ಕರಿಹಂಚು ಹಾಗು ಕಲ್ಲು ಮಣ್ಣು ಬಳಸಿ ಕಟ್ಟಿದ್ದು , ಇಂದು ಸತತ  ಮಳೆ ಗಾಳಿ ಚಳಿಗೆ ಈಗೋ ಆಗೋ ಬೀಳುವಂತಿದೆ , ಅಷ್ಟೇ ಅಲ್ಲ ಅ ದೇವರ ಮೂರ್ತಿ ಸಹ ತನ್ನ ಸತ್ವ ಕಳೆದು ಕೊಂಡಿದೆ ಹಾಗಾಗಿ ಹೊಸ ಮೂರ್ತಿ ಮಾಡಿಸಿ ಅದಕ್ಕೆ ಅಭಿಷೇಕ ಮಾಡಿಸಬೇಕು . ಈ ದೇಗುಲದ ಮರು ನಿರ್ಮಾಣಕ್ಕೆ ಏನಿಲ್ಲವೆಂದರು ಕನಿಷ್ಟ ೧0 ರಿಂದ ೧೨ ಲಕ್ಷ ರೂಪಾಯಿ ಬೇಕೆಂದು ಅ ದೇಗುಲ ಕಮಿಟಿ ಅನಿಸಿಕೆ ಹಾಗೆ  ಕಮಿಟಿ ೭೦ ಸಾವಿರ ರೂ ದೇಣಿಗೆ ಕೇಳಿದ್ದಾರೆ ಎಂದು ಅಲ್ಲಿಯ ನಮ್ಮ ವರದಿಗಾರ ತನ್ನ ಪತ್ರದಲ್ಲಿ  ತೋರಿಸಿದ್ದು ಇಲ್ಲಿ ನೋಡಿ ಎಂದು ಅ ಪತ್ರ ತೋರಿಸುತ್ತಾನೆ . ಇವರ ಆಪ್ತ ಸಹಾಯಕ . ಎಲ್ಲವನ್ನು ನೋಡಿದ ಬಳಿಕ ಸರಿ ಇವರಿಗೆ ಒಂದು ಲಕ್ಷ ರೂಪಾಯಿ ಡಿ ಡಿ ಕಳಿಸಲು ಹೇಳುತ್ತಾ ತನ್ನ ಕುರ್ಚಿ ಇಂದ ಎದ್ದೇಳುತ್ತಾನೆ . 

ಮನದಲ್ಲಿ ಏನನ್ನೋ ಯೋಚಿಸುತ್ತ ರೂಂ ಎದುರಿನ ಗೋಡೆ ಮೇಲೆ  ತನ್ನ ಮುತ್ತಾತ ತಾತಾ ಹಾಗು ತನ್ನ ತಂದೆ  ಫೋಟೋ ನೋಡುತ್ತ ಹಾಗೆ ಪಾಕಿಸ್ತಾನದ ಹುಡುಗಿ ಜೋದಾಅಕ್ಬರ್ ಎಂಬ ಮುಸ್ಲಿಂ ಬೆಡಗಿ ಎಲ್ಲಿ ಅಪ್ಪಟ ಬ್ರಾಮಿನ್ ಕುಟುಂಬ ಎಲ್ಲಿ ಎಂದು ಏನೇನೋ ತನಗೆ ತಾನೆ ಕಲ್ಪಿಸಿಕೊಂಡು ಈ ವಿಚಾರದಲ್ಲಿ ತುಸು ಗಂಬೀರನಾಗುತ್ತಾನೆ. 

ನಾನು ಈ ವಂಶದಲ್ಲಿ ಹುಟ್ಟಿ ಮಾಡುತ್ತಿರುವುದಾದರು ಏನನ್ನು ? ಛೇ ಛೇ ಇಂತ ದೊಡ್ಡದಾದ ಕುಟುಂಬದ ಮಾನ ಮೂರಾಬಟ್ಟೆ  ಮಾಡುತ್ತಿರುವ ನನ್ನೀ ಕೀಳು ಕೆಲಸದಿಂದ ಈ ಮನೆತನದ ಹೆಸರು ಅಧಿಕಾರ ಅಂತಸ್ತಿನಿಂದ ಎಲ್ಲವನ್ನು ಮಣ್ಣುಪಾಲು ಆಗುವಂತ ಕೆಲಸ ಇದು ನಾ ಏನಾದ್ರೂ ಜೊದಾ ಅಕ್ಬರ್ ಮದುವೆ ಆದದ್ದೇ ಆದಲ್ಲಿ , ಕುಂಬಾರನಿಗೆ ವರ್ಷ ದೊಣ್ಣೆಗೆ ನಿಮಿಷ ಎಂಬಂತೆ ಕ್ಷಣಮಾತ್ರದಲ್ಲಿ ಈ ಕುಟುಂಬ ಮತ್ತು ರಾಜ್ಯದ  ಮಾನ ಮರ್ಯಾದೆ ಪ್ರಶ್ನೆ ಎನ್ನುತ್ತಾ , ಈಗ ಏನು ಮಾಡುವುದು ಎಂದು ಒಂದು ತಿಳಿಯದೆ ತನಗೆ ತಾನೇ ಚಿಂತಾಕ್ರಾಂತನಾಗಿದ್ದಾನೆ .

ಒಂದು ವೇಳೆ ನಾನು ಈ ಹುಡುಗಿಯೊಂದಿಗೆ ಮದುವೆಯಾಗುವುದಾದರೆ , ಏನೆಲ್ಲ ಆಗಬಹುದು ಎಂಬ ವಿಚಾರ ಪ್ರಶ್ನೆ ಮಾಡಿಕೊಳ್ಳುತ್ತಾನೆ  ತನಗೆ ತಾನೇ ಎಂಬಂತೆ .  ತನ್ನ ತಂದೆಯ ಸ್ಥಾನಕ್ಕೆ ಧಕ್ಕೆ ಬಂದಂತೆ ಮಗ ಹೀಗಾದನಲ್ಲ ಎಂದು ತಂದೆ ತಾಯಿ ವಿಷಕುಡಿದಂತೆ ತನ್ನ ತಂದೆಗೆ ವಿನಯವಂತರಾಗಿದ್ದ ಪುರವಾಸಿಗರು ಈ ಘಟನೆಯ ಬಳಿಕ ತಂದೆಗೆ ಎದುರು ಮಾತನಾಡಿದಂತೆ , ಎದೆ ಎತ್ತಿ ನಡೆದಂತೆ , ಮೂಗು ಮುರಿದು ಮಾತನಾಡಿದಂತೆ , ಜನ ದಂಗೆ ಎದ್ದು ತಂದೆ ಸ್ಥಾನದಲ್ಲಿ ಮತ್ತೊಬ್ಬರನ್ನು ನೇಮಿಸಿದಂತೆ ಹೀಗೆ ಏನೆಲ್ಲ ದೃಶ್ಯಗಳು ಇವನ ಕಣ್ ಮುಂದೆ ಆ ಕ್ಷಣ ಹಾಗೆ ಹಾದು ಹೋದವು .

                          *******

ಇತ್ತ ಜೋಧಾಕ್ಬರ್ ಪರಿಸ್ಥಿತಿಯು ಅಷ್ಟೇ , ಇವಳು ಸಹ ಸಂತಸವಾಗಿರದೆ , ಇವಳ ಅಂತರಂಗದಲ್ಲು ನೂರಾರು ತಲ್ಲಣಗಳ ಬಿರುಗಾಳಿ ಬೀಸಲಾರಂಭಿಸಿದೆ . ಪಾಕಿಸ್ತಾನ ಸರ್ಕಾರ  ಜೋದಾಅಕ್ಬರ ತಂದೆ ಒಬ್ಬ ಉತ್ತಮ ವಾಗ್ಮಿ ಚತುರ ಧಾರ್ಮಿಕ ಮುಖಂಡ ಉತ್ತಮ ಧರ್ಮ ಸಂಘಟನಾ ಚತುರ ಹಾಗೆ ಉತ್ತಮ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ಸದಾ ಎಲ್ಲೆಂದರಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಸದಾ ಸಮಾಜದ ಜನತೆಯೊಂದಿಗೆ ಇರುವುದನ್ನು ನೋಡಿಯೇ ಒಟ್ಟಾರೆ ಇವರ ಜೀವಮಾನ ಸಾಧನೆಗಾಗಿ ಪಾಕ್ ಸರ್ಕಾರವು ಆಯ್ಕೆ ಮಾಡಿದ್ದು  ಮುಂದೆ ನಿಂತು ಲಾಹೋರ್ ವಿಶ್ವವಿದ್ಯಾಲಯದ ಅಧೀನದಲ್ಲಿ ಡಾಕ್ಟರೇಟ್ ಪ್ರಶಸ್ತಿ ಸಮಾರಂಭವನ್ನು ಬಹು ದೊಡ್ಡದಾಗಿ ಮಾಡಲು , ಅಲ್ಲಿಯ ದೊಡ್ಡ ಕ್ರೀಡಾಂಗಣದಲ್ಲಿ ಬಾರೀ ಜನಸ್ತೋಮದ ನಡುವೆ ನಡೆಯುವ ಕಾರ್ಯಕ್ರಮ ದಲ್ಲಿ ಇವರನ್ನು ಸನ್ಮಾನಿಸಲು ನಿರ್ಧರಿಸಿ ಅ ನಿಟ್ಟಿನಲ್ಲಿ ಭರದ ಸಿದ್ಧತೆಗಳನ್ನು ನಡೆಸಿದೆ . ಇದು ಅಲ್ಲಿನ ಎಲ್ಲಾ ದೃಶ್ಯ ಶ್ರವಣ ಹಾಗೂ ಅಕ್ಷರ ಮಾದ್ಯಮಗಳು ಹಟಕ್ಕೆ ಬಿದ್ದಂತೆ ಬಹು ದೊಡ್ಡದಾಗಿ ಅಷ್ಟೇ ವರ್ಣರಂಜಿತವಾಗಿ ಬಿತ್ತರಿಸಿ ಜನರ ವಿಶ್ವಾಸ ಪಡೆಯುವ ನಾನಾ ರೀತಿಯ ಕಸರತ್ತು ನಡೆಸಿ ಈಗಾಗಲೇ ಅವರ ಬಗ್ಗೆ ದೊಡ್ಡದಾಗಿ ತಮ್ಮ ಮಾಧ್ಯಮಗಳಲ್ಲಿ ಅವರ ಫೋಟೋ ಹಾಕಿ ಬರವಣಿಗೆ ಹಾಕಿ ತಮ್ಮ ಪತ್ರಿಕೆ ಪ್ರಸಾರ ಹೆಚ್ಚಿಸಿಕೊಳ್ಳುತ್ತಿವೆ .

ಒಟ್ಟಾರೆ , ಜೋದಾಕ್ಬರ್ ತನ್ನ ಮನೆಯ ವರಾಂಡದಲ್ಲಿ ಸೋಫ ಮೇಲೆ ಕುಳಿತು ಕೈಲಿ ತನ್ನ ತಂದೆ ಬಗ್ಗೆ ಬರೆದ ಆರ್ಟಿಕಲ್ಸನ ಹಲವು ಮ್ಯಾಗಜಿನ್ ಹಿಡಿದಿದ್ದಾಳೆ ಎದುರು ಟೇಬಲ್ ಮೇಲೆ ತನ್ನ ತಂದೆ ಬಗ್ಗೆ ಬರೆದ ಆರ್ಟಿಕಲ್ಸ್ ನ ವಿವಿಧ ಪತ್ರಿಕೆ ಮ್ಯಾಗಜಿನ್ ಹರಡಿವೆ ಹಾಗೆ ಅವುಗಳ ಮುಖಪುಟದಲ್ಲಿ ಅವರ ತಂದೆಯ ವಿವಿಧ ಫೋಟೋ ನೋಡುತ್ತಾ ಅವರ ಗುಣಗಾನಕ್ಕೆ ಸೀಮಿತವಾದ ಅ ಪತ್ರಿಕೆ ನೋಡುತ್ತಾ , ತಾನು ಕತ್ತರಿಯಲ್ಲಿ ಸಿಕ್ಕ ಅಡಿಕೆಯಂತಾಗಿ ಏನು ತೋಚದೆ ಹಾಗೆ ಧಾರಾಕಾರವಾಗಿ ಕಣ್ಣೀರು ಹಾಕುತ್ತಿದ್ದಾಳೆ .

ಯಾವ ಯಾವುದೋ  ಕೈಗೆ ಸಿಕ್ಕಿದ್ದನ್ನು ತೆಗೆದುಕೊಂಡು ಪುಟ ತಿರುವುತ್ತಲೆ  ತಂದೆ ಬಗ್ಗೆ ಬರೆದ ಬರಹ ಒದಲಾಗದೆ ಇಂತ ತಂದೆಗೆ ಎಂತ ಮರ್ಯಾದೆ ತರುವ ಮಗಳ ಈ ಕಾರ್ಯವೇ ಎಂದು ತನ್ನ ಪ್ರಣವ್ ಕಣ್ಮುಂದೆ ತಂದುಕೊಂಡು ಮತ್ತೆ ಅಳಲಾರಂಬಿಸುತ್ತ …

ಛೇ ನನ್ನದು ಎಂತಹ ತ್ರಿಶಂಕು  ಪರಿಸ್ಥಿತಿ ಎದುರಾಗಿದೆ . ಎಲ್ಲವೂ ಇದ್ದು ಏನೂ ಬೇಡದ ಸ್ಥಿತಿಗೆ ಈ ಜೀವ ಬಂದಿದೆ . ಒಂದು ವೇಳೆ ನಾನು ನನ್ನ ಮನೆಯವರ ಇಚ್ಛೆಗೆ ವಿರುದ್ಧ ವಾಗಿ ,  ಇಲ್ಲ ಯಾರಿಗು ತಿಳಿಯದೆ ಮನೆ ಬಿಟ್ಟು ಪ್ರಣವ್ ಜೊತೆ ಮದುವೆ  ಆಗಿದ್ದೆ ಆದಲ್ಲಿ , ನನ್ನ ಮತ್ತು ನನ್ನ ತಂದೆಯವರ  ಕುಟುಂಬದ ಪರಿಸ್ಥಿತಿ ಹೇಗಾಗಬಹುದು ಎಂದು ಯೋಚಿಸಿದಾಗ , ತಂದೆಗೆ ದಿಕ್ಕಾರ ಹಾಕುವುದು , ಮನೆ ಮೇಲೆ ಕಲ್ಲು ತೂರಾಟ ನಡೆಸಿದಂತೆ , ತಂದೆಯ ಎಲ್ಲ ಬಿರುದು ಅಧಿಕಾರ  ಗೌರವ ಕಿತ್ತುಕೊಂಡು ಬೀಕಾರಿಯಂತೆ ಹರಿದ ಬಟ್ಟೆಯಲ್ಲಿ  ಹುಚ್ಚನಂತೆ , ಇಲ್ಲ ಪಾಪರ್ ಚೀಟಿ ತೆಗೆದುಕೊಂಡವರಂತೆ ಅಲೆದಾಡುವುದು , ಬಿಕ್ಷಾ ಪಾತ್ರೆ ಹಿಡಿದು ಬೀದಿ ಸುತ್ತುವುದು , ಉಗ್ರಗಾಮಿಗಳು ತಂದೆಗೆ  ಬಾಂಬ್ ಇಟ್ಟು ಉಡಾಯಿಸುವುದು ಇಲ್ಲ ತಂದೆಯೇ ಈ ಅವಮಾನ ತಾಳಲಾರದೆ ತೋಟದ ಮರಕ್ಕೆ ನೇಣು ಹಾಕಿ ಕೊಂಡು ಸಾಯುವುದು . ಹೀಗೆ ಹತ್ತಾರು ದೃಶ್ಯ ಕಣ್ಮುಂದೆ ಹಾದುಹೋಗುವುದನ್ನು ಕಲ್ಪಿಸಿಕೊಂಡೆ ಹಾಗೆ ಈಕೆಯು ಭಯಬೀತಳಾಗುತ್ತಾಳೆ .

ಅಷ್ಟಕ್ಕು ನಾನು ಪ್ರಣವ್ನನ್ನು ನಂಬಿ ಈ ಎಲ್ಲ ಸವಲತ್ತುಗಳನ್ನು ತೊರೆದು ಹೋಗಿದ್ದೇ ಆದಲ್ಲಿ ನನ್ನನ್ನು ಆತ ಮುಂದೆ ಹೇಗೆ ನೋಡಿಕೊಳ್ಳುತ್ತಾನೆ .ಈ ಹಿಂದೆ  ಅದೆಸ್ಟು ಈ ಹಿರಿಕರು ನೋಡಿ ಮಾಡಿದ  ಮದುವೆ , ಇಲ್ಲ ಪ್ರೀತಿಸಿ ಅದ ಜೋಡಿ ಆಗಲಿ ಕೆಲ ಕಾಲ ಬಳಿಕ ಕಾರಣಾಂತರಗಳಿಂದ ಬೇರೆ ಬೇರೆ ಆಗಿಲ್ಲ . ಅಂತಹದ್ದರಲ್ಲಿ ಮತ್ತೊಂದು ದೇಶದ ಯುವಕನನ್ನು ನಂಬಿ ಅವನ ಹಿನ್ನೆಲೆ ಮುನ್ನಲೆ ಏನೂ ಅರಿಯದೆ ಅವನ ಜೊತೆ ಹೋಗುವುದು ಎಂದರೆ , ಎಂದು ತನಗೆ ತಾನೇ ಅಂದುಕೊಳ್ಳುವಷ್ಟರಲ್ಲಿ ಪ್ರಣವ್ ಇಂದ ವಾಟ್ಸಪ್ ಬಂತು ಈಕೆ ಮೊಬೈಲಿಗೆ ಅವನದ್ದೇ , ಅದು  ಎಂದು ಆ ರಿಂಗ್ಟನ್ ಕೇಳಿಯೇ  ತನಗೆ ತಾನೇ ಅಂದುಕೊಳ್ಳುತ್ತ ಓಹ್ ಒಳ್ಳೇ ಸಮಯಕ್ಕೆ ಅವನಿಂದೆ ಸಂದೇಶ ಬಂದಿದೆ ಅಂದರೆ ಖಂಡಿತ ನನಗೆ ಮೊಸಮಾಡ್ಲಾರ ನನಗೆ ಆತ ಒಳ್ಳೆ ಬಾಳನ್ನು ಕೊಟ್ಟೆ ಕೊಡುತ್ತಾನೆ ಎಂದು ತನಗೆ ತಾನೇ ಅಂದುಕೊಳ್ಳುವಷ್ಟರಲ್ಲಿ ಮೈಕ್ ಜೋರಾಗಿ ಅಲ್ಲ ಹೂ ಅಕ್ಬರ್ ಎಂದು ಕೇಳಿಬರುತ್ತಿದೆ . ಇದನ್ನು ಕೇಳಿ ಶುಭ ಸುದ್ದಿ ಶುಭ ಶಕುನ ನನ್ನ ಜೀವನ ದಾರಿ ತಪ್ಪದು ಆತನ ಕೈ ಹಿಡಿದರೆ ಎಂದು ತಾನು ಆತನ ಜೊತೆಯೇ ಇರಬೇಕು ಎಂಬ ದೃಢ ನಿರ್ಧಾರ ಮತ್ತೊಮ್ಮೆ ತೆಗೆದುಕೊಳ್ಳುತ್ತಾಳೆ .

                           ************

ಅಂದು ರಾತ್ರಿ ಊಟ ಮಾಡಿಕೊಂಡು ಹಾಲ್ನಲ್ಲಿ ಟಿವಿ ನೋಡುತ್ತಾ ಇರುವಾಗ , ಜೋದಾಳ ತಾಯಿ ಎಲೆಗೆ ಸುಣ್ಣ ಹಾಕಿ ಮಡಚಿ ತನ್ನ ಗಂಡನಿಗೆ ಕೊಡುತ್ತಿದ್ದಾಳೆ , ಅದೇ ಸಮಯಕ್ಕೆ ಜೋದಾಳು ಸಹ ತನ್ನ ಕೊಠಡಿಯಿಂದ ತಂದೆ ಬಳಿ ಕೈಲಿ ಹತ್ತಾರು ಬಗೆಯ ಮ್ಯಾಗಜಿನ್ ಪತ್ರಿಕೆ ಎಂದೆಲ್ಲ ಹಿಡಿದುಕೊಂಡು ಬರುತ್ತಾಳೆ . ಅಷ್ಟರಲ್ಲಿ ಪಕ್ಕದ  ಕೋಣೆ ಯಲ್ಲಿ ಫೋನ್ ರಿಂಗ್ ಆಗುತ್ತೇ ಹಾಗಾಗಿ ಫೋನ್ ಎತ್ತಲು ತಾಯಿ ಹೋಗುತ್ತಾಳೆ ಹಾಗು ಫೋನ್ ಎತ್ತಿ ಮಾತಾಡುತ್ತಾ ಉರ್ದುವಿನಲ್ಲಿ ಅಚ್ಚಿ ಹೈ ಹೂಜಿ ಅಚ್ಚ ಹೈ ಆಹಾ ಟೀಕ್ ಹೈ ಏನೋ ನಗುತ್ತಾ ಹೈ ಅಬ್  ಖಾನ ಹುವಾ  ಹೂ ಅಬ್ ರೆಸ್ಟ್ ಖರೆಗ ಹೂ ಮೈ ಬೋ ,,, ಎಂದೆಲ್ಲ ಮಾತಾಡುತ್ತ ಫೋನ್ ಕಟ್ ಮಾಡಿ ಯಾರೋ ಬಾರ್ ಕೌನ್ಸಿಲ್ ಪ್ರೆಸಿಡೆಂಟ್ ಅಂತೆ  ನಿಮಗೆ ಆದ ಸನ್ಮಾನಕ್ಕೆ ಗೌರವ ವಂದನೆ ತಿಳಿಸಲು ಫೋನ್ ಮಾಡಿದ್ದಾರೆ ಎನ್ನುತ್ತಾ ಅಡುಗೆ ಮನೆಯತ್ತ ಹೋದರು ಜೋಧಾ ತಾಯಿ .

ಎಲ್ಲವನ್ನು ಅಪ್ಪ ಮಗಳು ಕೇಳಿಸಿಕೊಂಡ ಬಳಿಕ ಇಬ್ರು ಮುಗುಳು ನಗೆ ಬೀರುತ್ತಾ , ಮಗಳ ಕಡೆ ತಿರುಗಿ ಹೂ ಮಗಳೆ ಮುಂದೆನ್ಮಾಡ್ತೀ ಮತ್ತೇನಾದರೂ ಹೈಯರ್ ಸ್ಟಡಿ ಮಾಡೋ ಬಗ್ಗೆ ಏನಾದ್ರೂ ಮನದಲ್ಲಿ ಯೋಚನೆ ಇಲ್ಲ ಆಸೆ ಇದ್ರೆ ಹೇಳು ದೈರ್ಯವಾಗಿ ಮುನ್ನುಗ್ಗು , ನಮ್ಮ ಮುಸ್ಲಿಂ ಧರ್ಮದ ಹೆಣ್ಣುಮಕ್ಕಳು ಹೆಚ್ಚು ಓದೋದಿಲ್ಲ ಅನ್ನೋ ಮೌಢ್ಯತೆ ಹಾಗು  ಸಂಪ್ರದಾಯ ನಿನ್ನಿಂದಲಾದ್ರು ಮುರಿದು ಹೋಗಲಿ ಎಂಬ ಹಿರಿದಾದ ಆಸೆ ನನ್ನದು . ಎನ್ನುತ್ತಾ ಆಸೆ ಕಂಗಳಿಂದ ಮತ್ತೆ ಮುಂದೆ ಏನಾದ್ರೂ ಓದುವಂತೆ ಹುರಿದುಂಬಿಸುತ್ತಾನೆ .

ಅದಕ್ಕೆ ಪ್ರತಿಯಾಗಿ ಮಗಳು ಜೋದಾಅಕ್ಬರ್  ಅಂದ ಹಾಗೆ ಮರೆತಿದ್ದೆ ಅಪ್ಪಾಜಿ , ನೋಡಿಲ್ಲಿ ಭಾರತದಿಂದ ಶುಭಾ ಷಯಗಳ ಮಹಾಪೂರವೇ ನಿಮಗೆ ಹರಿದು ಬಂದಿದೆ  ಎನ್ನುತ್ತಾ ಮೇಲ್ ತೋರಿಸುತ್ತಾಳೆ .

ಅದನ್ನು ಓದುವ ಹಂಬಲವನ್ನು ಸಹ ವ್ಯಕ್ತಪಡಿಸದೆ 

ಏನಂತೆ ?    ಏನೋ ಕರ್ನಾಟಕ ರಾಜ್ಯದಿಂದ ಬಂದಿದೆ ತಾನೇ ಅಚ್ಚರಿಯಿಂದ ಎಂಬಂತೆ ಮಗಳನ್ನು ಕೇಳುತ್ತಾರೆ . 

ಆಹಾ ಏನಿಲ್ಲ , ನಿಮಗೆ ದೊರೆತ ಡಾಕ್ಟರೇಟ್ ಸನ್ಮಾನಕ್ಕೆ ಅಭಿವಂದನೆ ತಿಳಿಸಿದ್ದಾರೆ . ಅದು  ಯಾರೋ ರಾಮಮಂದಿರ ಟ್ರಸ್ಟ್  ಅಧ್ಯಕ್ಷ ರಾಮಾಜೋಯಿಸ್ ಹಾಗು ಅವರ ಮಗ ಪ್ರಣವ್ ಎನ್ನುವವರು ಮಾಡಿದ್ದಾರೆ .

ಆಹಾ ! ನೋಡಿದೆಯಾ ಮಗಳೆ , ಭಾರತ ಹಾಗು ಹಿಂದೂಗಳು ಸಹ ನನ್ನನ್ನು ಹೀಗೆ ಅಭಿನಂದಿಸುತಿದ್ದಾರೆ ಅಂದರೆ .  ನನ್ನ ಕೀರ್ತಿ ಪತಾಕೆ ಹಿಂದೂಸ್ಥಾನದಲ್ಲಿ ಸಹ ಹಾರಾಡುತ್ತಿದೆ ಎಂದಾಯ್ತು ಆಲ್ವಾ  ಮಗಳೆ ! 

ಹೌದು ಅಪ್ಪಾಜಿ ಹೌದು ನಿಜ ಹೇಳಬೇಕೆಂದರೆ , ಅದು ಯಾರೋ  ಪ್ರಣವ್ ಎಂಬಾತ .  ಆಹಾ ! ಅದೇ  ಆ ರಾಮಮಂದಿರ ಟ್ರಸ್ಟೀ ಅನ್ಸುತ್ತೆ  ಅವನಂತೂ ಒಂದು ಹೆಜ್ಜೆ ಮುಂದೆ ಹೋಗಿ ನಿಮಗೆ ಲಭಿಸಿದ ಈ ಪ್ರಶಸ್ತಿ ಪುರಸ್ಕಾರ ಎಲ್ಲ ತನಗೆ ದಕ್ಕಿದೆಯೇನೋ ಎಂಬಂತೆ ಸಂತಸಗೊಂಡಿದ್ದಾರೆ ಹಾಗೆ ಅಲ್ಲಿನ ಪತ್ರಿಕೆಯಲ್ಲು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ ನೋಡಿ ಎಂದು ಹಲವು ಪತ್ರಿಕೆಗಳನ್ನು  ತಂದೆ ಮುಂದೆ ಹಿಡಿದಳು .

ಸಂತಸದಿಂದ ಗುಡ್ ವೇರಿ ಗುಡ್ ಎನ್ನುತ್ತಾ ಹಾಗೆ ಕ್ಷಣ ಮಾತ್ರದಲ್ಲಿ ಕಸಿವಿಸಿಗೊಂಡು ಮನಸ್ಸು ಯಾವುದೋ ಗತಕಾಲದ ಘಟನೆಗಳತ್ತಾ ಜಾರಿತು . ಮನಸ್ಸು ತುಂಬಾ ಭಾರವಾಗಿ ತಡೆದುಕೊಳ್ಳಲು ಆಗದೆ ಕಣ್ಣು ತೇವಗೊಂಡರು ಮಗಳ ಎದುರು ತೋರಿಸಿಕೊಳ್ಳಲು ಹಿಂದೇಟು ಹಾಕುತ್ತಾನೆ. 

ಸೂಕ್ಷ್ಮವಾಗಿ ತಂದೆಯನ್ನು ಗಮನಿಸಿದ ಮಗಳು , ಬಹು ಬೇಗ ತಂದೆಯಲ್ಲಾದ ಬದಲಾವಣೆ ಗುರುತಿಸುತ್ತಾಳೆ .  ಏಕೆ ಏನಾಯ್ತು ಅಪ್ಪಾಜಿ ಎಂದು ಪ್ರಶ್ನಿಸಿಯೆ  ಬಿಟ್ಟಳು .

ಆಹಾ ! ಏನಿಲ್ಲ ಅಂತಹದ್ದೇನಿಲ್ಲ ಬಿಡು ಮಗಳೆ ಎಂದು ನುಣುಚಿಕೊಳ್ಳಲು ಪ್ರಯತ್ನಿಸುತ್ತಾನೆ .

ಸರಿ ಬಿಡಿ ಅಪ್ಪಾಜಿ , ನಿಮ್ಮ ಅಭಿಪ್ರಾಯದಲ್ಲಿ ಭಾರತ ಹಾಗು ಹಿಂದೂಗಳು ಅಂದ್ರೆ ಅಲ್ಲಿನ ಜನಗಳ ಬಗ್ಗೆ ನಿಮ್ಮ ಅಭಪ್ರಾಯವೇನು ? ಈ ಬಗ್ಗೆ ನಿಮ್ಮ ಮನದಾಳದ ಮಾತುಗಳು ಏನು ಪ್ಲೀಜ್ ಹೇಳಿ ಎಂದು ಒತ್ತಾಯಿಸುತ್ತಾಳೆ . 

ಛೇ ಛೇ ಏನು ಅಂತ ಹೇಳಲಿ ಹೇಳು ಮಗಳೆ , ಆಹಾ ಹಾಗೆಲ್ಲ ಹೇಳಬಾರದು . ಏಕೆಂದರೆ ! ಇದೊಂದು ತರ ಆ ಗುಪ್ತಗಾಮಿನಿ ಸರಸ್ವತಿ ನದಿ ಇದ್ದ ಹಾಗೆ .  ನನ್ನಲ್ಲೇ ನನ್ನ ಅಂತರಂಗದಲ್ಲಿಯೆ ಗೌಪ್ಯವಾಗಿ ಇರಬೇಕು .  ಅದನ್ನು ಹಾಗೆಲ್ಲಾ ಹೇಳಬಾರದು . ಆಹಾ ! ನೀನು ಕೂಡ ಹಾಗೆ ಹೇಳುವಂತೆ ಒತ್ತಯಿಸಬಾರದು ತಿಳಿಯಿತಾ ಮಗಳೆ ,

ಈ ಮಾತು ಕೇಳಿದ ಕೂಡಲೇ ಮತ್ತಷ್ಟೂ ಕುತೂಹಲ ಭರಿತಳಾದ ಜೋದಾಕ್ಬಾರ್  ಅಪ್ಪಾಜಿ ನಿಮ್ಮಲ್ಲೂ ಗೌಪ್ಯತೆ ಇವೆಯೋ !  ಅಚ್ಚರಿಯಿಂದ ನಿಮ್ಮ ದೇಹ ಹೀಗೆ ಸದಾ ಸಾರ್ವಜನಿಕ ಜೀವನಕ್ಕೆ ತೆರೆದಿರುವ ಹಾಗೆ ನಿಮ್ಮ ಮನಸ್ಸು ಸಹ ಸದಾ ತೆರೆದಿರುವ ಬಾಗಿಲು ಇದ್ದಂತೆ ಎಂದೆ    ಇದುವರೆಗು ನಿಮ್ಮ ಬಗ್ಗೆ ನಾನು ತಿಳಿದ ಸತ್ಯವಾಗಿತ್ತು . ಎನ್ನುತ್ತಾ ಮತ್ತಷ್ಟೂ ಕುತೂಹಲ ಭರಿತಳಾಗಿ ಅಪ್ಪಾಜಿ ದಯಮಾಡಿ ನನ್ನ ಬಳಿ ಹೇಳಿ ನಾನು ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ ಇದು ಸತ್ಯ ನಿಮ್ಮಾಣೆ ನನ್ನನ್ನು ನಂಬಿ ಎನ್ನುತ್ತಾ , ತೀರಾ ಖಾಸಗಿ ವಿಚಾರವಾದ್ರೆ ಬೇಡ ಬಿಡಿ ಅಪ್ಪಾಜಿ . ಏನೋ ಕಷ್ಟವನ್ನು ಇನ್ನೊಬ್ಬರ ಹತ್ತಿರ ಹಂಚಿಕೊಂಡರೆ ಮನಸ್ಸು ಹಾಗು ಹೃದಯ ಹಗುರವಾಗುತ್ತೆ ಅನ್ನೋ ಏಕೈಕ ಕಾರಣಕ್ಕೆ ಹಾಗೆ ಕೇಳಿದೆ ಅಷ್ಟೇ ಅಪ್ಪಾಜಿ .  ಅದು ಅಲ್ಲದೆ ನಾನು ನಿಮ್ಮ ಮಗಳಲ್ಲವೆ ನಿಮ್ಮ ಮಗಳ ಬಳಿಯೂ ನಿಮ್ಮ ತೀರಾ ಖಾಸಗಿ ವಿಚಾರವನ್ನು ಹೇಳಿಕೊಳ್ಳುವಷ್ಟು ನಾನು ನಿಮ್ಮ ಬಳಿ ಆ ಯೋಗ್ಯತೆ ಉಳಿಸಿಕೊಂಡಿಲ್ಲ ಅಂದ್ರೆ ಬೇಡ ಬಿಡಿ ಎಂದು ಅಪ್ಪಾಜಿಯ ಮನಸ್ಸನ್ನು ಮಾತಲ್ಲೇ ಚುಚ್ಚಿ ಹಾಗೆ ಮುಲಾಮು ಸವರ ತೊಡಗಿದಳು .

ಗಂಭೀರವಾಗಿ ಯೋಚಿಸುತ್ತ ಹೇಳುವುದೋ ಇಲ್ಲ ಬಿಡುವುದೋ ಒಂದು ತಿಳಿಯದೆ ಕೊನೆಗೆ  ಏನೋ ಪ್ರಾಮಿಸ್ ಮಾಡಿದ್ದೀಯ ಅಂತ ಹೇಳುತ್ತೇನೆ  ಕೇಳು , ನೀನಾದರೂ ಅಷ್ಟೇ ಈ ವಿಚಾರ ತುಂಬ ಘೋರಾತೀ ಘೋರವಾದುದು . ಎಂತಹ ವಿಷಮ ಪರಿಸ್ಥಿತಿಯಲ್ಲೂ ಎಂತಹ ಆತ್ಮೀಯರೊಂದಿಗು ಅಷ್ಟೇ ಏಕೆ ನಿನ್ನ ಗಂಡನ ಬಳಿಯೂ ಹೇಳಿಕೊಳ್ಳಬಾರದು .  ಏಕೆಂದ್ರೆ ನಮ್ಮ ರಾಜಕೀಯ ಧಾರ್ಮಿಕ ಸಾಮಾಜಿಕ ವಿಷಯವನ್ನು ಒಳಗೊಂಡ ಕೆಲವು ಮಾಹಿತಿಗಳ ವಿರುದ್ದ ಹೇಳಿಕೆ ಆಗಲಿ ಇಲ್ಲ ಅನಿಸಿಕೆಯೇ  ಇರಲಿ ಅವುಗಳೆಲ್ಲ ಸತ್ಯವೇ ಆದರು ಜನರು ಒಪ್ಪಲಾರರು . ಇದು ವಾಸ್ತವ ಕೂಡ . ವಿಚಾರ ಏನೇ ಇರಲಿ ಭಾರತ ಅಂದ್ರೆ ಸಾಕು ಮೊದಲು ನಾವು ಹೇಗಾದರು ಸರಿ  ವಿರೋದಿಸುವುದನ್ನು ನೋಡಬೇಕು ಅದರ ಸತ್ಯಾ ಸತ್ಯತೆಯ  ಮಾತು  ಆಮೇಲೆ .   ಹಾಗಿದ್ರೆ ಮಾತ್ರ ಇಲ್ಲಿ ಬಾಳು ಇದು ಇಲ್ಲಿಯ ಸದ್ಯದ ವಸ್ತುಸ್ಥಿತಿ ಮಗಳೆ , ನೋಡು ಈ ವಿಚಾರದಲ್ಲಿ ಹೆಚ್ಚು ಕಮ್ಮಿ ಭಾರತೀಯ ರದ್ದು ಅದೇ ಮನೋಭಾವನೆ , ಅದೇ ಕರ್ನಾಟಕ ರಾಜ್ಯ ದಿಂದ ಯಾರೋ ಸಂಸದೆ ಆಕೆ ಹೆಸರು ಏನೋ ಚಂದ ಉಂಟು  ಹುಡುಗಿಯೂ ಅಷ್ಟೇ ಮುದ್ದುಮುದ್ದು ಮನಸು ಇನ್ನು ಮದುವೆಯೇ ಆಗಿಲ್ಲ ಪಾಪ . ಯಾರೋ ಅವಳು ಪಾಕಿಸ್ತಾನಕ್ಕೆ ಯಾವುದೋ ಸರ್ಕಾರಿ ಕಾರ್ಯಕ್ರಮದ ನಿಮಿತ್ತ ಸರ್ಕಾರಿ ಪ್ರತಿನಿಧಿ ಮಂತ್ರಿಗಳ ಜೊತೆ ತಾನು ಬಂದ ತನ್ನ ಕಾರ್ಯಕ್ರಮ ಮುಗಿಸಿಕೊಂಡು ಎಲ್ಲರಂತೆ ತಾನು ತನ್ನ ತಾಯ್ನಾಡು ಭಾರತಕ್ಕೆ ಹಿಂದಿರುಗಿದ ಬಳಿಕ ಅಲ್ಲಿನ ಪತ್ರಕ ರ್ತರು ಸಹಜ ಎಂಬಂತೆ ಕೇವಲ ಕುತೂಹಲಕ್ಕಾಗಿ ಸುಮ್ಮನೆ ಹಾಗೆ  ಪ್ರಶ್ನೆಯೊಂದನ್ನು ಕೇಳಿದ್ದಾರೆ .

 ಏನೆಂದು ?

ಪಾಕಿಸ್ತಾನದ ಪ್ರವಾಸ ಹೇಗಿತ್ತು ? ಅಲ್ಲಿ ನಿಮಗೆ ಆದ ಅನುಭವ ಹಂಚಿಕೊಳ್ಳಿ ಎಂದು ಸಹಜವಾಗಿ ಕೇಳಿದ್ದಾರೆ ಆಹಾ  ! ಅಂದ ಹಾಗೆ ಆಕೆ ಹೆಸರು ಈಗ ನೆನಪಾಯ್ತು ಆಕೆ ಸ್ಥಳೀಯ ಭಾಷೆಯೊಂದರ ಚಿತ್ರ ನಟಿ ರಮ್ಯಾ ಎಂಬಾಕೆ .  ಆಕೆ ಸಹಜವಾಗಿ ನನಗೇನು ವಿಶೇಷ ಅನ್ನಿಸಲಿಲ್ಲ ಅದೇನು ಬೇರೆಯಾ ನಮ್ಮದೇ ಜನ ಬೇರೆಯಾಗಿದ್ದಾರೆ ಅಣ್ಣ ತಮ್ಮಂದಿರು ಬೇರೆ ಬೇರೆ ಆದಂತೆ ಹಾಗಾದಾಗ ಅದರಲ್ಲಿ ವಿಶೇಷ ಅನ್ನಿಸಲಿಲ್ಲ ನನಗೆ ಅಂದದ್ದೆ ತಡ ಅಲ್ಲಿಯ ಹಿಂದು ಸಂಘಟಕರು , ವಿರೋಧಪಕ್ಷ , ದೇಶಾಬಿಮಾನಿಗಳು ಆಕೆಯ ವಿರೋಧಿಗಳು ಎಂದೆಲ್ಲ ಸೇರಿ ಆಕೆಯ ಹೇಳಿಕೆ ಖಂಡಿಸಿ ದೊಡ್ಡ  ಪ್ರತಿಭಟನೆಯನ್ನೆ ಮಾಡಿ ಆಕೆಯ ಗ್ರಹಚಾರ ಬಿಡಿಸಿದರು ತಾಯಿ . 

ಹೋ ಅದಿರಲಿ ಅಪ್ಪಾಜಿ , ನಾನು ಅತ್ಯಂತ ಗೌಪ್ಯವಾಗಿ ಇಟ್ಟಿರುತ್ತೇನೆ ಎಂದು ಮತ್ತೆ ಭರವಸೆ ನೀಡುವೇನು ಮೊದಲು , ಭಾರತ ಹಾಗು ಭಾರತೀಯರ ಬಗ್ಗೆ ನಿಮ್ಮ ಮನದಾಳದಲ್ಲಿ ಮೂಡಿರುವ ನಿಮ್ಮ ಅಭಿಪ್ರಾಯವನ್ನ ನನ್ನೊಂದಿಗೆ ಹಂಚಿಕೊಳ್ಳಿ ಎಂದು ಮತ್ತೆ ತನ್ನ ಅಪ್ಪಾಜಿಗೆ ಪುಸಲಾಯಿಸತೊಡಗಿದಳು . 

ಕೊಠಡಿಯಲ್ಲಿ ತಾನು ಮತ್ತು ಮಗಳು  ಮಾತ್ರ ಇರುವುದನ್ನು ಖಾತ್ರಿಪಡಿಸಿಕೊಂಡು ನೋಡು ಮಗಳೆ , ಈಗ ಹಿಂದೂಸ್ಥಾನಿಯರಲ್ಲಿ ಹರಿಯುತ್ತಿರುವ ರಕ್ತ ಹಾಗು ಪಾಕಿಸ್ತಾನಿಗರಲ್ಲಿ ಹರಿಯುತ್ತಿರುವ ರಕ್ತ ಎರಡು ಒಂದೆ . ಎಂದಿಗು  ಅದು ಬೇರೆ ಬೇರೆಯಾಗಿರಲು ಸಾಧ್ಯವಾಗದ ಮಾತು .  ಮಗಳೆ ಈ ಮಣ್ಣಿನ ವಾಸನೆಯು ಸಹ ತಾಯಿ ಭಾರತಾಂಬೆಯದ್ದು ಎನ್ನುತ್ತಾ ಮಗಳ ಕೈ ಹಿಡಿದುಕೊಂಡು ತನ್ನ ಹಣೆಗೆ ಚಚ್ಚಿಕೊಳ್ಳುತ್ತ ಹಾಗೆ ಮತ್ತೆ ತನ್ನ ಮಾತು ಮುಂದುವರೆಸುತ್ತಾ , ಅಲ್ಲ ತಾಯಿ ಮರದ ರೆಂಬೆ ಕೊಂಬೆ ಬೇರೆ ಬೇರೆಯಾಗಿರಬಹುದು , ಆದರೆ ಅದೆ ಆ ರೆಂಬೆ ಕೊಂಬೆಗಳನ್ನು  ಬಾಚಿ ತಬ್ಬಿಕೊಂಡ ಆ ಮರದ ಬುಡ ಒಂದೇ ಆಲ್ವಾ ! ತಾಯಿ .

ತನ್ನ ತಂದೆಯ ಕೈಗಳಿಂದ ತನ್ನ ಕೈ ಬಿಡಿಸಿಕೊಳ್ಳುತ್ತ ಹೌದು ಹೌದು ಎನ್ನುತ್ತಾ ಹಾಗೆ ಮಾತು ಮುಂದುವರೆಸುತ್ತಾ ಹಿಂದುತ್ವ ಎಂಬ ಬೃಹತ್ ಮರದ ರೆಂಬೆ ಕೊಂಬೆಗಳನ್ನು ಕಡಿದು ಸವರಿ ಅದರ ಜಾಗೆಯಲ್ಲಿ ಬೌದ್ದ ಜೈನ ಸಿಖ್ ಪಾರ್ಸಿ ಜೋರಾಸ್ಟ್ರಿಯನ್ ಕ್ರಿಶ್ಚಿಯನ್ ಮುಸ್ಲಿಂ  ಎಂಬ ಬೇರೆ ಬೇರೆ ಧರ್ಮದ ರೆಂಬೆಯನ್ನು ಜೋಡಿಸಿ ಹಿಂದೂಸ್ಥಾನದಲ್ಲಿ ಹಿಂದು ಹಿಂದುತ್ವ ಎಂಬ ಮರಕ್ಕೆ ಕಸಿ ಮಾಡಿದ್ದಾರೆ , ಬಹುದಿನಗಳ ಅಥವ ವರ್ಷಗಳ ಹಿಂದೆಯೇ ಎಂಬುದು ನಿಮ್ಮ ಮಾತಿನ ತಾತ್ಪರ್ಯ ಅಲ್ಲವೇ ಎಂದು ತಂದೆಯ ಮಾತಿನ ಜಾಡನ್ನು ಬಹು ಬೇಗ ಹಿಡಿದು ತಂದೆ ಮಾತಿನ ಭಾವನೆಯನ್ನು ಸಮರ್ಥವಾಗಿ ಸಮರ್ಥಿಸಿದಳು.

ಹೌದೌದು , ತಾಯಿ ನಿನ್ನ ಮಾತು ನೂರಕ್ಕೆ ನೂರರಷ್ಟು ಸತ್ಯವಾದುದು . ಏನೇ ಅಂದ್ರು ನೀನು ಗೋಲ್ಡ್ ಮೆಡಲಿಸ್ಟ್ ಅಲ್ಲವೇ ! ಜಾಡನ್ನು ಬಹು ಬೇಗ ಗ್ರಹಿಸಿದೆ  ಅಷ್ಟೇ ಎಂದು ಮಗಳ ಮಾತನ್ನು ಮೆಚ್ಚಿಕೊಳ್ಳುತ್ತಾನೆ . ದೊಡ್ಡದಾಗಿ ವ್ಯಂಗ್ಯ ನಗೆಯೊಂದನ್ನು ಬೀರುತ್ತಾ .

ಒಮ್ಮೆ ಮನೆಯಲ್ಲಿ ಯಾರು ಇಲ್ಲದಿದ್ದಾಗ , ಆಕಸ್ಮಿವಾಗಿ ತನ್ನ ತಂದೆಯ ಕೊಠಡಿ ಸ್ವಚ್ಛ ಮಾಡಲು ಹೋದಾಗ ಯಾವುದೋ  ಒಂದು ಡೈರಿ ಟೇಬಲ್ ಮೇಲೆ ಇದ್ದದ್ದು ಇವಳ ಕಣ್ಣಿಗೆ ಬಿತ್ತು . ಸಹಜವೆಂಬಂತೆ ಕುತೂಹಲಕ್ಕೆ ಆ ಡೈರಿಯನ್ನು ತೆಗೆದು ಒಳಗೆ ಕಣ್ಣಾಡಿಸುತ್ತಾಳೆ , ಆಗಲೆ ಇದು ತೀರಾ ಪರ್ಸನಲ್ ಡೈರಿ ಎಂದು ಈಕೆಗೆ ತಿಳಿದದ್ದು . ಇನ್ನೊಬ್ಬರಿಗೆ ಹೇಳಲಾಗದ  ಕೆಲವು ವಿಚಾರವನ್ನು ಇದರಲ್ಲಿ ಬರೆದಿಟ್ಟಿದ್ದು  , ಯಾಕೋ ಏನೋ ಆಕಸ್ಮಿಕವಾಗಿ ಇಂದು ಹೇಗೊ ಮರೆತು ಟೇಬಲ್ ಮೇಲೆ ಇಟ್ಟು ಹೋಗಿದ್ದು , ಜೋಧಾ ಎಲ್ಲವನ್ನು ಓದಿರುತ್ತಾಳೆ . ಅಂದು ಆಕೆ ಆ ಡೈರಿ ಓದಿದಾಗಲೆ ಇವಳಿಗೆ ತಿಳಿದದ್ದು . ನಾವು ಮೂಲತಃ ಹಿಂದೂ ಗಳು ಹಾಗು ಭಾರತೀಯ ಮೂಲದವರು ಎಂದು . ಅಂದಿನಿಂದಲೂ ಇದನ್ನು ಯಾರಲ್ಲೂ ಹೇಳಿಕೊಳ್ಳದೆ ತನ್ನ ಮನದಲ್ಲೇ ಹುದುಗಿಸಿಟ್ಟು ಕೊಂಡು ಕಾಲ ಕಳೆಯತೊಡಗಿದಳು  ಹಾಗು  ಇದೆ ವಿಚಾರವನ್ನು ಸಮಯ ಬಂದಾಗ ತಂದೆಯ ಬಾಯಿಯಿಂದ ಕೇಳಿ ತಿಳಿಯುವ ಸಮಯಕ್ಕಾಗಿ ಕಾಯುತ್ತ ಇದ್ದಳು . ಇದೀಗ ಅ ಸಮಯ ಸಹಜವಾಗಿ ಬಂದಿತ್ತು ಅಷ್ಟೇ , ಹಾಗು ಏನು ಅರಿಯದವಳಂತೆ ತನ್ನ ತಂದೆಯ ಬಳಿ ನಾಟಕ ವಾಡಿದಳು .

ನೋಡು ತಾಯಿ , ಆಕಸ್ಮಾತ್  ಬ್ರಿಟಿಷರ ಕುಟಿಲತೆ ಯಿಂದಾಗಿ  ಸೌಂದರ್ಯವತಿಯಾದ ತಾಯಿ ಭಾರತಾಂಬೆ ಯನ್ನು ತುಂಡರಿಸಿ ಭಾರತ ಪಾಕಿಸ್ತಾನ ಹಾಗೂ ಬಾಂಗ್ಲಾ ದೇಶ ಎಂದು ಮಾಡುವ ಮೂಲಕ ತಾಯಿಯನ್ನು ಅಂಗವಿಕಲವನ್ನಾಗಿಸದಿದ್ದರೆ , ಆಗ ನಾವೆಲ್ಲ ಹೆಮ್ಮೆಯ ಭಾರತೀಯ ಪ್ರಜೆಗಳಾಗಿ ಈ ಪ್ರಪಂಚದಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳುತಿದ್ದೆವು , ಎಂದು ಹೇಳುವಾಗ ಅವನ ಕಣ್ಣಲ್ಲಿ ಒಂದು ಬಗೆಯ ಮಿಂಚು ನೋಡಬೇಕಿತ್ತು . ಆದರೆ ಏನ್ಮಾಡೋದು ನಾವೀಗ ಪಾಕಿಸ್ತಾನದ ಪಾಪಿಗಳು . ಇಲ್ಲಿಯ ಪ್ರಜೆಗಳಾಗಿದ್ದೆವೆ ಅಷ್ಟೇ ನಮ್ಮ ಪಾಲಿಗೆ ಬಂದದ್ದು , ಎಂದು ವಿಷಾದದಿಂದ ಹೇಳುತ್ತಾನೆ . ಆದರೆ ಒಂದು ವಿಷಯ ಏನೆ ಆಗಲಿ ನಾವೆಲ್ಲ ಭಾರತಕ್ಕೆ ಸೇರದೆ ಹೋದರು ಭರತಖಂಡಕ್ಕೆ ಸೇರಿದವರು ಎಂಬುದೇ ನಮಗೆ ಸಂತಸದ ಸುದ್ದಿ . ತಾಯಿ ಮುಂದೊಂದು ದಿನ ಮತ್ತೆ ಆ ಗಾಂಧಾರ ಅಂದರೆ ಈಗಿನ ಆಫಘಾನಿಸ್ತಾನವು ಸೇರಿದಂತೆ ಅಂದಿನ ಎಲ್ಲಾ ಭರತಖಂಡದ ಪ್ರಾಂತಗಳು  ಮತ್ತೆ ಒಂದಾಗಿ ಸೇರಿದ ಅಖಂಡ ಭಾರತದ ಅ ಚಿತ್ತಾರವನ್ನು ನೋಡುವ ಮೂಲಕ ಮತ್ತೆ ಭಾರತಾಂಬೆಯನ್ನ ಶಕ್ತಿಭರಿತಳನ್ನಾಗಿಸಬೇಕೆಂಬುದು ನನ್ನ ಆಸೆ .  ಇದು ಈಡೇರದ ಮಾತು ಎಂದು ಗೊತ್ತಿದ್ದರು ಸಹ ಈ ಆಸೆ ಮಾತ್ರ ಹಾಗೆ ಗುಪ್ತಗಾಮಿನಿಯಾಗಿ ನನ್ನಲ್ಲಿ ಇನ್ನೂ ಜೀವಂತವಾಗಿ ಉಳಿದಿದೆ  . ಅಷ್ಟೇ ಅಲ್ಲ ಪ್ರಾಚೀನ ಭಾರತದ ಅ ವೈಭವದ ದಿನ ಮತ್ತೆ ನೋಡುವಾಸೆ ಮಗಳೆ , ಎಂದು ಶೋಕತಪ್ತನಾಗಿ ಹೇಳುತ್ತಾನೆ .

ಎಲ್ಲವನ್ನು ಸಮಾಧಾನದಿಂದ ಕೇಳಿಸಿಕೊಂಡ ಬಳಿಕ ಪ್ರತ್ಯುತ್ತರ ಎಂಬಂತೆ , ಹೆದರಬೇಡಿ ಅಪ್ಪಾಜಿ ಎಲ್ಲವನ್ನು ಕಳೆಯುವ ಮತ್ತೆ ತಂದುಕೊಡುವ ಶಕ್ತಿ ಅ ಕಾಲಕ್ಕೆ ಮಾತ್ರ ಇದೆ ಎಂದು ಅರ್ಜುನನಿಗೆ ಶ್ರೀಕೃಷ್ಣ ರಣರಂಗದಲ್ಲಿ ಹೇಳಿರುವುದನ್ನು ಇಲ್ಲಿ ಒಮ್ಮೆ ಹಾಗೆ ಸ್ಮರಿಸಿಕೊಳ್ಳಿ ಎನ್ನುತ್ತಾ ಅಪ್ಪಾಜಿ ಅ ದಿನಗಳು ಮತ್ತೆ ಬಂದೆ ಬರುತ್ತೆ  . ಭಾರತದ ಹುಡುಗ ಪ್ರಣವ್ನೊಂದಿಗೆ ನನ್ನನ್ನು ಕೊಟ್ಟು ಮದುವೆ ಮಾಡಿ ನೋಡಿ ಆಗ ಎಂದು ನಿದಾನವಾಗಿ ತನಗೆ ತಾನೇ ಗೊಣಗಿಕೊಳ್ಳುತ್ತಾಳೆ.

ಏನೋ ತನಗೆ ತಾನೇ ಅಂದುಕೊಂಡದ್ದನ್ನು ಅರಿತ ತಂದೆ ಏನಂದೆ  ? ಎಂದು ಮಗಳಿಗೆ ಗದರುತ್ತಾನೆ . 

ತಡವರಿಸುತ್ತಾ ಆಹ್ ! ಏನಿಲ್ಲ ಅಪ್ಪಾಜಿ , ಆ ನಿಮ್ಮ ಆಸೆಗಳು ಒಂದಲ್ಲ ಒಂದು ದಿನ ಕೈಗೂಡುತ್ತೆ , ಏಕೆಂದರೆ ಹಿಸ್ಟರಿ ಆಲ್ವೇಸ್ ರಿಪೀಟ್ಸ್  ನಿಮಗೆ ಗೊತ್ತಿಲ್ಲದ್ದೆನಲ್ಲ  , ಎಂದು ನುಣುಚಿಕೊಂಡಳು . 

ಯಾಕೋ ಜೋದಅಕ್ಬರ್ ತಂದೆಯ ಮನದಲ್ಲಿ ಮತ್ಯಾವ ಹಳೆಯ ನೆನಪು ಮತ್ತೆ ಗರಿ ಬಿಚ್ಚಿತೋ  ಏನೋ ಇದ್ದಕಿದ್ದಂತೆ ಮಕ್ಕಳ ಹಾಗೆ ಗಳಗಳನೆ ಅಳತೊಡಗಿದನು .

ಇದನ್ನು ನೋಡಿದ ಕೂಡಲೇ ಮಗಳು ಸಹ ಶಾಕ್ ಆಗಿ ತಾಯಿ ಬಂದ್ರೆ ಎನು ಕತೆ ಎಂಬ ಅಳುಕು ಬೇರೆ , ಯಾಕೆ ? ಯಾಕೆ ಹಾಗೆ ಅಳುತಿದ್ದಿರಿ ! ಏನಾದ್ರೂ ನನ್ನಿಂದ ಅಂದಾಗ, ಇಲ್ಲ ತಾಯಿ ಎನ್ನುತ್ತಾ ಹಾಗೆ ಮುಂದುವರಿದು , ನೀನು ಇಂಡೋ - ಪಾಕ್ ವಿಚಾರ ಕೆದಕಿದೆಯಲ್ಲ ಆಗ ನನ್ನ ಬಾಲ್ಯದ ದಿನಗಳು ಮತ್ತೆ ನೆನಪಾಗಿ ಹಾಗೆ ಕಣ್ಣೀರು ಬಂತು ಎನ್ನುತ್ತಾನೆ ಕಣ್ಣೀರು ಒರೆಸಿಕೊಳ್ಳುತ್ತಾ , ಅಪ್ಪಾಜಿ ಹಾಗೆ ಧಾರಾಕಾರವಾಗಿ ಕಣ್ಣೀರು ಬರುವಂತ ನಿಮ್ಮ ಬಾಲ್ಯದ ಘಟನೆಗಳು ಏನು ? ಎಂದು ಪ್ರಶ್ನಿಸುತ್ತಾಳೆ.

ಆಹ್ಹ್ !  ಮಗಳೆ , ನಾವೆಲ್ಲಾ ಭಾರತೀಯರೇ ಅದು ಸ್ವಾತಂತ್ರ್ಯ ಪೂರ್ವದಲ್ಲಿ ಈಗಲ್ಲ .
ಹೌದು ,ಅಪ್ಪಾಜಿ ಇದು ಜಗತ್ತಿಗೆ ಗೊತ್ತಿರುವಂತದ್ದೇ.
ಅದರಲ್ಲೇನು ವಿಶೇಷವಿಲ್ಲವಲ್ಲ ! 

ಹೌದು ಮಗಳೆ , ಅದರಲ್ಲೇನು ವಿಶೇಷವಿಲ್ಲ ಆದರೆ ನಾನೀಗ ಹೇಳುವ ಈ ವಿಚಾರದಲ್ಲಿ ವಿಶೇಷ ಇದೆ . ಆದರೆ ಜಾಗ್ರತೆ ಇದು ಹೊರ ಜಗತ್ತಿಗೆ ಗೊತ್ತಾಗಬಾರದು ಒಂದು ವೇಳೆ ಗೊತ್ತಾದರೆ ನಮ್ಮ ಕುಟುಂಬದ ಅಸ್ತಿತ್ವಕ್ಕೇ ನಾವೇ ಧಕ್ಕೆ ತಂದುಕೊಂಡಂತೆ ಎಚ್ಚರ ಮಗಳೆ . 

ಹೌದಾ ಅಪ್ಪಾಜಿ ,ಅಂತಹ ವಿಚಾರವಾವುದು ತಿಳಿಯುವ ಕುತೂಹಲದಿಂದ ಮತ್ತಷ್ಟು ಅಪ್ಪಾಜಿ ಹತ್ತಿರಕ್ಕೆ ಬಂದು ಕೂರುತ್ತಾ , ಕೇಳುವ ಕುತೂಹಲ ವ್ಯಕ್ತಪಡಿಸುತ್ತಾ ಹೂ ಹೇಳಿ ಎಂದಳು ಅಷ್ಟೇ ಗಂಭೀರತೆ ಇಂದ .

ಹಾ ! ಮಗಳೆ ನಾವು ಮೂಲತಃ ಭಾರತದವರು ಅದರಲ್ಲೂ ನೀನಾಗ ಹೇಳಿದೆಯಲ್ಲ , ಯಾರೋ ನನ್ನನ್ನು ಯಾರೋ ಕರ್ನಾಟಕದವರು ಅಭಿನಂದಿಸಿದ್ದಾರೆ ಅಂದು ಹೌದು . ಅದೇ ರಾಜ್ಯದವರು ನಮ್ಮ ಪೂರ್ವಿಕರು . ಅಂದರೆ ಅಂದಿನ ಗೋಲ್ಕಂಡ ರಾಜ್ಯದ ರಾಜರಲ್ಲಿ ಒಬ್ಬ ಪಾಳೇಗಾರ ಆಗಿದ್ದರಂತೆ . ಅದಕ್ಕು ಮುಂಚೆ ಇಂದಿನ ಬಾಂಗ್ಲಾ ದೇಶಕ್ಕೇ ಸೇರಿದ , ಅಂದಿನ ಬಂಗಾಳ ಪ್ರಾಂತದ ಢಾಕಾ ನಗರದ ಸುತ್ತಲಿನ ಒಂದು ಹಳ್ಳಿಯಲ್ಲಿ ವಾಸಿಸುತ್ತಿದ್ದರಂತೆ . ನಮ್ಮ ಮುತ್ತಜ್ಜ ಎಂದು ಕರೆಯೋಣ , ಆತ ಅಂದೇ ಬಹು ದೊಡ್ಡ ಉದ್ಯಮಿಯಾಗಿ ಗುರುತಿಸಿಕೊಂಡವರು . ಸುಮಾರು ೩೦ - ೪೦ ಜನರು ಈತನ ಕೈಕೆಳಗೆ ದುಡಿಯುತ್ತಿದ್ದರು . ಆತನು  ಮಸ್ಲಿನ್ ಬಟ್ಟೆ ವರ್ತಕನಂತೆ . ಸುತ್ತಲಿನ ಹಳ್ಳಿಗರು ತಮ್ಮ ಮನೆಗಳಲ್ಲಿಯೇ ಮಸ್ಲಿನ್ ವಸ್ತ್ರವನ್ನು ನೇಯ್ದು ನಮ್ಮಜ್ಜನಿಗೇ  ಕೊಡುತ್ತಿದ್ದರು .

ಕಾಟನ್ ರೇಷ್ಮೆ ಪಾಲಿಸ್ಟರ್ ಬಟ್ಟೆಗಳಸ್ಟೆ ಎಂದು ತಿಳಿದಿದ್ದ ಜೋದಾ ಅಕ್ಬರ್ , ಆಹಾ ಏನು ? ಮಸ್ಲಿನ್ ಬಟ್ಟೆಯಾ ! ಹಾಗಂದ್ರೆ ಏನು ಎಂದು ತಂದೆಯನ್ನು ಪ್ರಶಿಸಿದಳು .

ಮೌಲ್ವಿಯವರು ಮಾತು ಮುಂದುವರೆಸುತ್ತಾ , ಮಸ್ಲಿನ್ ಬಟ್ಟೆ ಎಂಬುದು ಅಂದಿನ ಪ್ರಪಂಚದಲ್ಲೇ ಅತಿ ಶ್ರೇಷ್ಠ ವಾದುದು , ನಾಜೂಕು ಹಾಗೂ ಸೌಂದರುವುಳ್ಳದ್ದು ನವಿರು ನವಿರಾಗಿದ್ದು ಇದನ್ನು ಮೀರಿಸುವಂಥ ವಸ್ತ್ರ ಅಂದಿನ ಪ್ರಪಂಚದಲ್ಲಿ ಮತ್ತೊಂದು ಇರಲಿಲ್ಲ . ಇಂತಹ ವಿಶಿಷ್ಟವಾದ ಈ ಮಸ್ಲಿನ್ ಬಟ್ಟೆಯ ತವರುಮನೆ ನಮ್ಮ ಅಂದಿನ ಭಾರತ ಆಗಿತ್ತು  . ಇಂತಹ ಈ ಮಸ್ಲಿನ್ ವಸ್ತ್ರವು ಅಂದಿನ ಬಂಗಾಳ ಪ್ರಾಂತದ ಸುತ್ತಮುತ್ತ  ಹೊರತು ಪಡಿಸಿ ಉಳಿದ ಭಾರತದ ಬಾಗದಲ್ಲಿ ತಯಾರು ಆಗುತ್ತಿರಲಿಲ್ಲ . ಬಹುಶಃ ಇಲ್ಲಿ ಬಿಟ್ಟರೆ ಪ್ರಪಂಚ ಯಾವ ಭಾಗದಲ್ಲೂ ಇದರ ಉತ್ಪಾದನೆ ಆಗುತ್ತಿರಲಿಲ್ಲ ಎಂಬುದು ನನ್ನ ಅಭಿಪ್ರಾಯ . ಆದರೆ ಚೀನಿಯರು ಈಜಿಪ್ಟಿನವರು ಗ್ರೀಕ್ ಜನರು ಹತ್ತಿ ಬಟ್ಟೆ ತಯಾರಿಸಿ ಮಾರುತಿದ್ದರು ಎಂಬ ಮಾತು ಬೇರೆ .

ಇನ್ನು ಈ ಮಸ್ಲಿನ್ ವಸ್ತ್ರದ ವಿಶೇಷ ಎಂದರೆ  ಇಂದು ಸ್ತ್ರೀಯರು ಉಡುವ ಸೀರೆಯ ಒಂದೂವರೆ ಪಟ್ಟು ಇದರ ಉದ್ದ ಇತ್ತು ಹಾಗು ಅಷ್ಟೊಂದು ಉದ್ದನೆಯ ಮಸ್ಲಿನ್ ಸೀರೆಯನ್ನು ಸರಿಯಾದ ರೀತಿಯಲ್ಲಿ ಮಡಚಿಟ್ಟರೆ  ಒಂದು

ಬೆಂಕಿಪೊಟ್ಟಣದಲ್ಲಿ ಇಡಬಹುದಿತ್ತೆಂದರೆ , ಅ ಬಟ್ಟೆ ತಯಾರಕೆಯ ಹಿಂದಿರುವ ತಂತ್ರಗಾರಿಕೆ ಕುಶಲತೆ ಹಾಗು ಆ ಕಾರ್ಮಿಕರ ನೈಪುಣ್ಯತೆ ಎಂತಹದ್ದಿರಬೇಕು ಕ್ಷಣ ಊಹಿಸಿ ಹಾಗಾಗಿಯೇ ಭಾರತದ ಈ ಮಸ್ಲಿನ್ ವಸ್ತ್ರಕ್ಕೆ ಪ್ರಪಂಚದ ಎಲ್ಲೆಡೆ ಬಹುಬೇಡಿಕೆ ಪಡೆದುಕೊಂಡಿತ್ತು .

ಆದರೆ , ಯಾವಾಗ ೧೮ ನೇಯ ಶತಮಾನದಲ್ಲಿ ಇಂಗ್ಲೆಂಡ್ನಲ್ಲಾದ ಕೈಗಾರಿಕಾ ಕ್ರಾಂತಿಯ ನಂತರ  ಪ್ರಪಂಚ ದಾದ್ಯಂತ ಅದೆಷ್ಟು ಬಗೆಯ ಗುಡಿ ಕೈಗಾರಿಕೆಗಳು ಹೇಳ ಹೆಸರಿಲ್ಲದಂತೆ ಈ ಕೈಗಾರಿಕಾ ವಸ್ತುವಿಗೆ ಸ್ಪರ್ಧಿಸಲಾರದೆ ನೆಲಕಚ್ಚಿದವು . ಅದೇ ರೀತಿ ಈ ಮಸ್ಲಿನ್ ವಸ್ತ್ರವು ಸಹ ಮಗಳೆ . ಕಾರಣ ಇಷ್ಟೇ ,

ಯಾವಾಗ ಇಂಗ್ಲೆಂಡ್ ಕೈಗಾರಿಕೆಯಲ್ಲಿ ಕಡಿಮೆ ಅವಧಿಯಲ್ಲಿ ಹೆಚ್ಚು ಹೆಚ್ಚು ಬಟ್ಟೆ ಉತ್ಪಾದನೆ ಆಗತೊಡಗಿತು ಅದೆ ಪ್ರಮಾಣದಲ್ಲಿ ಬಟ್ಟೆ ಮಾರಾಟ ಆಗುತ್ತಿರಲಿಲ್ಲ , ಕೈಗಾರಿಕಾ ಕಾಟನ್ ಬಟ್ಟೆಗೆ ನಮ್ಮ ಮಸ್ಲಿನ್ ಬಟ್ಟೆ ಪ್ರಬಲ ಸ್ಪರ್ಧಿ ಆಗಿತ್ತು ಹಾಗು ಈ ಮಸ್ಲಿನ್ ಬಟ್ಟೆಗೆ ಪ್ರಪಂಚದೆಲ್ಲೆಡೆ ಬಹು ಬೇಡಿಕೆ ಹೊಂದಿತ್ತು ಹಾಗಾಗಿ ಕಾಟನ್ ಬಟ್ಟೆಗೆ ಹೇಳಿಕೊಳ್ಳುವಂಥ ಬೇಡಿಕೆ ಇರಲಿಲ್ಲ .

ಹಾಗಾಗಿಯೆ ಈ ಬ್ರಿಟಿಷರು ಮಸ್ಲಿನ್ ಬಟ್ಟೆಯ ನೇಕಾರರು ಹಾಗೂ ವರ್ತಕರನ್ನು ಹಿಡಿದು ಹಿಡಿದು ಕೊಲ್ಲುವುದು , ಇಲ್ಲವೇ ಮತ್ತೆ ಮಸ್ಲಿನ್ ಬಟ್ಟೆ ನೇಯದಂತೆ ಆ ನೇಕಾರರ ಹೆಬ್ಬೆಟ್ಟನ್ನು ಕತ್ತರಿಸುವಂತ ಹೇಯವಾದ ಕೃತ್ಯವನ್ನು ಎಗ್ಗಿಲ್ಲದೆ  ರಾಜಾರೋಷವಾಗಿ ಮಾಡತೊಡಗಿದರು ಎಲ್ಲೆಡೆ . ಇದರಿಂದ ಅಪಾರ ಪ್ರಮಾಣದ ಈ ಮಸ್ಲಿನ್ ಬಟ್ಟೆಯ ತಯಾರಕರು ಮರಣ  ಹೊಂದುವತಾಯ್ತು . ಹಾಗೆ ಅಷ್ಟೇ ಸಂಖ್ಯೇ ಜನರು ಹೇಗಾದ್ರು ಸರಿ ಬದುಕುಳಿದರೆ ಸಾಕೆಂದು ಅವರ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ತಲೆಮರೆಸಿ ಕೊಳ್ಳತೊಡಗಿದರು . ಒಟ್ಟಾರೆಯಾಗಿ ಈ ಕೃತ್ಯ ಅಂದಿನ ಮತ್ತೊಂದು ಜಲಿಯವಾಲಾಬಾಗ್ ದುರಂತವನ್ನು ಮೀರಿಸುವಂತಿತ್ತು ಮಗಳೆ ,

ಹೀಗೆ ನಮ್ಮ ಪೂರ್ವಿಕರು ಢಾಕಾ ಸಮೀಪದ ತಮ್ಮ ಹಳ್ಳಿಯಿಂದ ಆ ಕೆಂಬೂತಗಳಿಂದ ತಪ್ಪಿಸಿಕೊಂಡರೆ ಸಾಕೆಂದು , ಉಟ್ಟ ಬಟ್ಟೆಯಲ್ಲೇ ಎದ್ದು ಬಿದ್ದು ಹಾಗೆ ಪಲಾಯನಗೈದರು , ನಂತರ ಹಾಗೆ ಊರೂರು 

ತಿರುಗಾಡುತ್ತಾ ಅಂತಿಮವಾಗಿ ಕರ್ನಾಟಕದ ಅಂದಿನ ಗೊಲ್ಕಂಡ ಸಂಸ್ಥಾನದಲ್ಲಿ  ತನ್ನ ಸಂಸಾರದ ಉದರಪೋಷಣೆಗಾಗಿ ಸೈನ್ಯ ಸೇರಿದರು . ಮುಂದೆ ಮುತ್ತಾತನ ಜಾಣ್ಮೆ ದೈರ್ಯ ಮೆಚ್ಚಿ 4-6 ಹಳ್ಳಿಯ ಪಾಳೇಗಾರಿಕೆ ನೀಡಿದರಂತೆ . ಹೀಗೆ ಗೋಲ್ಕಂಡ ರಾಜನಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದರು ಹಾಗೆ ಮುಂದೆ ಇವರಿಗೆ ಹತ್ತಿರಾದಂತೆಲ್ಲ ಹಂತ ಹಂತವಾಗಿ ಉನ್ನತ ಹುದ್ದೆ ಏರುತ್ತಾ ಹೋದರು .

ಆದರೆ , ತೀರಾ ವಿಷಾದದ ಸಂಗತಿ ಎಂದರೆ ,  ಬ್ರಿಟಿಷರ ಶಿಕ್ಷೆಗೆ ಹೆದರಿ ತಪ್ಪಿಸಿಕೊಂಡು ಪಲಾಯನ ಗೈದು ಅಂದು ಬದುಕುಳಿದವರಾಗಲಿ ಇಲ್ಲ ಹೆಬ್ಬೆಟ್ಟು ಕತ್ತರಿಸಿಕೊಂಡವರಾಗಲಿ ಇಲ್ಲ ವ್ಯಾಪಾರಿ ಆಗಲಿ ಮತ್ತೇ ಗೌಪ್ಯವಾಗಿಯಾದರು ಮತ್ತೆ ಅ ಮಸ್ಲಿನ್ ಬಟ್ಟೆ ತಯಾರಿಸುವುದನ್ನು ಮುಂದುವರೆಸುವ ಪ್ರಯತ್ನ ಮಾಡಲಿಲ್ಲ ಹಾಗೂ ಹೆಬ್ಬೆರಳು ಕತ್ತರಿಸಿಕೊಂಡ ನೇಕಾರರು ಸಹ ಆ ನೇಕಾರಿಕೆ ವಿದ್ಯೆ ಮತ್ತೊಬ್ಬರಿಗೆ ಹೇಳಿ ಕೊಡುವ ಕಿಂಚಿತ್ ಪ್ರಯತ್ನವನ್ನು ಮಾಡಲಿಲ್ಲ . ಅಂದಿನವರು  ಬಹುತೇಕರು ಅನಕ್ಷರಸ್ಥರು ಹಾಗಾಗಿ ಮಸ್ಲಿನ್ ಬಟ್ಟೆ ತಯಾರಿಸುವ ವಿಧಾನವನ್ನು ಯಾರು ಅಕ್ಷರ ರೂಪದಲ್ಲಿ ಬರೆದಿಡುವ ಸಣ್ಣ ಪ್ರಯತ್ನವನ್ನು ಸಹ ಯಾರು ಮಾಡದ ಪ್ರಯುಕ್ತ  ಮುಂದಿನ ಜನಾಂಗ ಈ ವಿದ್ಯೆ ಇಂದ ದೂರವಾದ ಪರಿಣಾಮ ಇಂದು ಮಸ್ಲಿನ್ ವಸ್ತ್ರ ಇತಿಹಾಸದ ಪುಟಗಳಲ್ಲಿ ದುರಂತ ಸಾಲಿನಲ್ಲಿ ಸರಿಹೋಯಿತು .

ಹೇಗೊ  ಬಂಗಾಳ ಪ್ರಾಂತದವರಾದ ನಮ್ಮ ಅಂದಿನ ಪೂರ್ವಿಕರು ಜೀವ ಭಯದಿಂದ ಎಲ್ಲೆಲ್ಲೋ ಅಲೆದಾಡುತ್ತಾ ಕೊನೆಗೆ ದಕ್ಷಿಾಣಾಭಿಮುಖವಾಗಿ ಬಂದು  ಅಂತಿಮವಾಗಿ ಇಂದಿನ ಕರ್ನಾಟಕದ ಗೊಲ್ಕಂಡ ರಾಜರ ಸೇವೆಯಲ್ಲಿ ತಮ್ಮ ನ್ನು ತಾವು ತೊಡಗಿಸಿಕೊಂಡರು . ಹೀಗೆ ಕಾಲಾಂತರದಲ್ಲಿ   ಗೋಲ್ಕಖಂಡ ಬಿಜಾಪುರ ರಾಜರುಗಳೆಲ್ಲ ಒಂದಾಗಿ ವಿಜಯ ನಗರದರಸರ ವಿರುದ್ದ ಹೋರಾಡಿ ಅಪಾರ ಪ್ರಮಾಣದ ಸಂಪತ್ತು ಲೂಟಿ ಮಾಡಿದವರಲ್ಲಿ ಅಂದಿನ ನಮ್ಮ ವಂಶಸ್ಥರ ಪಾಲು ಸಹ ಇದೆಯಮ್ಮ  .

ಆಹಾ ! ಅದೇ ನಾವು ಕುರಾನ್ ಗ್ರಂಥ ಇಡುವ ಅ ಸ್ಟ್ಯಾಂಡ್ ಇದೆಯಲ್ಲ ಅದನ್ನು ವಿಜಯನಗರದ ಕೋಟೆಯ ಹೆಬ್ಬಾಗಿಲು ಮುರಿದ ಯಾವುದೋ ಒಂದು ತುಂಡಿನಲ್ಲಿ  ತಯಾರಿಸಿರುವವಂತದ್ದು , ನಂತರದ ಕಾಲಾನುಕ್ರಮದಲ್ಲಿ ಕಾಲಚಕ್ರ ಉರುಳಿದಂತೆ ಏನೆಲ್ಲಾ ಬದಲಾವಣೆ  ಆಗುತ್ತಾ ಬಂದಂತೆ . ನಂತರದ ದಿನಗಳಲ್ಲಿ ನಮ್ಮ ಅಜ್ಜ ಹಾಗೆ ವಲಸೆ ಹೋಗಿ ಪಂಜಾಬಿನ ಅಮೃತಸರದ ಬಳಿ ಒಂದು ಹಳ್ಳಿಗೆ ವ್ಯಾಪಾರ ನಿಮಿತ್ತ ಬಂದು ಹಾಗೆ ಅಲ್ಲೇ ಖಾಯಂ ಆಗಿ ನೆಲೆ ನಿಂತರು . ೧೯೪೭ ರ ಸ್ವಾತಂತ್ರ್ಯ ಬಳಿಕ ಭಾರತ ಪಾಕ್ ಇಬ್ಬಾಗವಾದ ಬಳಿಕ  ತನ್ನ ಇಚ್ಚೆಗನುಸಾರವಾಗಿ  ನಮ್ಮಜ್ಜ ಪಾಕ್ನಲ್ಲಿ ನೆಲೆಸಲು ಬಯಸಿದ . ಅದರ ಫಲವೆಂಬಂತೆ ನಾವಿಂದು ಇಲ್ಲಿ ಪಾಕಿಸ್ತಾನದ ಪ್ರಜೆಗಳಾಗಿ ಈ ದೇಶದಲ್ಲಿ ಬದುಕುತ್ತಿದ್ದೇವೆ ಅಷ್ಟೇ ಎಂದನು    ಹಾಗೆ ದೀರ್ಘ ಉಸಿರೆಳೆದುಕೊಂಡು  ಕ್ಷಣಕಾಲ ಮೌನಕ್ಕೆ ಜಾರುತ್ತಾರೆ ತಂದೆ ಮಗಳು ಇಬ್ಬರು .

ತುಸು ಹೊತ್ತು ಹಾಗೆ ಅಪ್ಪ ಮಗಳ ಮದ್ಯೆ ಮೌನ ಆವರಿಸಿದ್ದು , ಬಳಿಕ ಜೋದ ಅಕ್ಬರ್ ಮೌನ ಮುರಿದು ಅಂದ್ರೆ ನಮ್ಮ ತಾತ ಪಾಕಿಸ್ತಾನವನ್ನು ಆಯ್ಕೆ ಮಾಡಿಕೊಳ್ಳದೆ ಇದ್ದಿದ್ದರೆ ಆಗ ನಾವು ಸಹ ಭಾರತೀಯರೇ ಆಗಿರುತಿದ್ದೆವು ಅನ್ನಿ ಅಪ್ಪಾಜಿ .

ಹೌದು ಎಂಬಂತೆ ತಲೆಯಾಡಿಸುತ್ತ , ನಮ್ಮ ವಂಶದ ಕುಡಿಗಳಾದ ನಮ್ಮ ಕೋರ್ ಬ್ರದರ್ಸ್ ಇಂದಿಗೂ ಪಂಜಾಬ್ ಕರ್ನಾಟಕ ಹೀಗೆ ವಿವಿಧ ಭಾಗಗಳಲ್ಲಿ ಹರಿದು ಹಂಚಿ ಹೋಗಿದ್ದಾರೆ . ಆದರೆ ಅವರೆಲ್ಲ ಎಲ್ಲಿದ್ದಾರೋ ಹೇಗಿದ್ದಾರೋ ಹೂಹು ಒಂದು ಅರಿವಿಲ್ಲ . ಆದರೆ ಭಾರತ ಪಾಕ್ ಎಂದು ಇಬ್ಭಾಗ ಆದ ಬಳಿಕ ಅವರನ್ನು ಮತ್ತೆ ನೋಡುವ ಕನಿಷ್ಟ ಸೌಭಾಗ್ಯ ಸಹ ಲಭಿಸದೆ ಹೋಯಿತು ಮಗಳೆ .

ಅಪ್ಪಾಜಿ ! ನಿಮ್ಮ ಒಡಲಾಳದಲ್ಲು ಇಂತಹ ಒಡಲುರಿ ಇದೆ ಎಂದು ನಾನಂತು ಎಣಿಸಿರಲಿಲ್ಲ , ಸಮುದ್ರದಾಳದಲ್ಲಿ  ಲಾವಾರಸ ಅಡಗಿ ಕುಳಿತoತೆ  . ಹೇಗಾದರು ಇರಲಿ ನಾನು ನಿಮ್ಮ ಸಂಬಂಧದ ಬಂಧವನ್ನು ಮತ್ತೆ ಜೋಡಿಸುತ್ತೇನೆ ನೋಡ್ತಾ ಇರಿ .  ಇನ್ನು ಹೇದರಬೇಡಿ ಎಂದು ತನ್ನ ತಂದೆಗೆ ದೈರ್ಯ ತುಂಬುವ ಪ್ರಯತ್ನ ಮಾಡುತ್ತಾಳೆ .

ವ್ಯಂಗ್ಯವಾಗಿ ನಗುತ್ತಾ , ಹುಚ್ಚು ಹುಡುಗಿ . ಕಣಮ್ಮ ಅಂತ ಗಂಡೆದೆಯವರಲ್ಲೆ ಆಗದ್ದು , ಇನ್ನೂ ಈ ಹೆ.. ಣ್ಣು  ಅದು ನೀನು ಎಂದು ಮೂದಲಿಸುತ್ತಾನೆ ಹೆಣ್ಣಿನ ಕೈಲಾಗದು ಎಂಬ ಅರ್ಥದಲ್ಲಿ ವ್ಯಂಗ್ಯ ನಗುವಿನೊಂದಿಗೆ , ಅಪ್ಪಾಜಿ ನಿಮಗಿನ್ನು ಗೊತ್ತಿಲ್ಲ , ಏಷ್ಟೋ ಬಾರಿ ಅದೆಷ್ಟು ಕೆಲಸಗಳು ಗಂಡಸ್ತನದವರ ಕೈಲಿ ಅಗದ್ದು ಈ ಚಿಟಿಕೆ ಹೊಡೆಯೋದರಲ್ಲಿ ಈ ಸ್ತನವುಳ್ಳವರು  ಅಂದ್ರೆ ಅದೆ ಈ ಹೆಂಗಸರು ಮಾಡಿ ತೋರಿಸುತ್ತಾರೆ . ರಾಜರುಗಳ ಬಳಿ ಹಿಂದೆ ಇದ್ದ ವಿಷಕನ್ಯೆ ಹಾಗೂ  ಇಂದು ಮಂತ್ರಿಗಳು ವಿದೇಶಕ್ಕೆ ಹೋಗುವಾಗ ಅವರೊಂದಿಗೆ ಹೋಗುವ ಲಲನೆಯರನ್ನು  ಇಲ್ಲಿ ನೆನಪು ಮಾಡಿಕೊಡುತ್ತಾಳೆ .

ಸರಿಯಾಗಿ ಏನನ್ನು ಕೇಳಿಸಿಕೊಳ್ಳದ ಮೌಲ್ವಿಗಳು ಮನದಲ್ಲೇ ಮಗಳಿಗೆ ಏನೋ ಗೊಣಗಿಕೊಳ್ಳುತ್ತಾನೆ .  

ಆಹಾ ವೇರಿ ಸಿಂಪಲ್ ಅಪ್ಪಾಜಿ  , ನನ್ನನ್ನು ಯಾರಾದರು ಕರ್ನಾಟಕದ ಹುಡುಗನೊಂದಿಗೆ ಕೊಟ್ಟು ಮದುವೆ ಮಾಡಿ ಬಿಡಿ . ಆಗ ನಿಮ್ಮ ಮನದಾಸೆ ಈಡೇರಿದಂತೆ ಆಗುತ್ತಲ್ವೆ  ಎನ್ನುತ್ತಾಳೆ .

ಮೌಲ್ವಿ ಕೂಡಲೇ ಸೀರಿಯಸ್ ಆಗಿ ಆಹ್ಹ್ ಎನಂದೆ ಎಂದು ಮಗಳಿಗೆ ಗದರುತ್ತಾನೆ .

ಆಹ್ಹ್ ಏನಿಲ್ಲ ಅಪ್ಪಾಜಿ , ಇನ್ನು ಒಂದೇ ಒಂದು ಪ್ರಶ್ನೆ ಕೇಳುವಾಸೆ , ತಾವು ತಪ್ಪಾಗಿ ಗ್ರಹಿಸದಿದ್ದರೆ  ಏಕೆಂದರೆ ಇದು ತುಂಬಾ ಸುಕ್ಷ್ಮಾತಿ ಸೂಕ್ಷ್ಮವಾದುದು ಏನಂತೀರಿ ಅಪ್ಪಾಜಿ .

ಸರಿ ಕೇಳಮ್ಮ ಅದೇನು ಕೇಳುತ್ತಿ ಕೇಳು ,

ಆಹ್ಹ್ ಅಂತದ್ದು ಏನಿಲ್ಲ ಅಪ್ಪಾಜಿ , ಅದೆ ಭಾರತೀಯರು ತಾಯಿ ದೈವ ಎಂದೆಲ್ಲ ಕರೆಯುವ ಆರಾಧಿಸುವ ಹಾಗೆ ಪ್ಯೂಜ್ಯ  ಭಾವನೆಯಿಂದ ಕಾಣುವ ಗೋವು ಮುಕ್ಕೋಟಿ ದೈವ ಇದರಲ್ಲಿದೆ ಎಂದೇ ನಂಬಿರುವರು . ಅದೇ ಆ ಗೋವು ಮತ್ತು ಅದರ ಮಾಂಸ ಭಕ್ಷಣೆ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ . 

ಈ ಪ್ರಶ್ನೆ ಸರಿಯಾಗಿ ಅರ್ಥೈಸಿಕೊಳ್ಳಲು ಆಗದೇ ಏನಮ್ಮ ಇನ್ನೊಮ್ಮೆ ಹೇಳು ಎಂಬ ಅರ್ಥದಲ್ಲಿ ಮಗಳನ್ನು ಪ್ರಶ್ನಾರ್ಥಕವಾಗಿ  ನೋಡುತ್ತಾನೆ .

ಏನಿಲ್ಲ ಅಪ್ಪಾಜಿ ಭಾರತೀಯ ಹಿಂದೂಗಳಲ್ಲಿನ ಕೆಲ ಪಂಥೀಯರು ಹಾಗು ಕೆಲವು ಜಾತೀಯ ಜನರು ಗೋವನ್ನು ತಮ್ಮ ಆಹಾರದ ಒಂದು ಪದ್ಧತಿಯಾಗಿ ಗೋ ಮಾಂಸವನ್ನು ಬಳಸುತ್ತಿದ್ದಾರೆ , ಅಂತೆಯೇ ಕೆಲ ಹಿಂದೂ ವರ್ಗವು ಅದೇ ಗೋವನ್ನು ಮಾತೆ ದೈವ  ಜನ್ಮ ನೀಡಿದ ತಾಯಿಯ ಸಮ . ಪರಮ ಪವಿತ್ರ ಎಂದೆಲ್ಲ ತಿಳಿದು ಆರಾಧಿಸುತ್ತಾ ಪೂಜ್ಯ ಭಾವನೆಯಿಂದ ಕಾಣುತ್ತಾ ಬಂದಿದ್ದಾರೆ ಹಾಗಾಗಿ ಈ ಒಂದು ನಿಟ್ಟಿನಲ್ಲಿ ನನ್ನ ತಂದೆಯಾಗಿ ಅಲ್ಲ  ಮುಸ್ಲಿಂ ಪ್ರತಿನಿಧಿಯಾಗಿ ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಅಪ್ಪಾಜಿ ಎನ್ನುತ್ತಾಳೆ .

ವ್ಯಂಗ್ಯ ನಗುವಿನೊಂದಿಗೆ , ಈ ಬಗ್ಗೆ ಹೇಳಲು ನಾನಾರು ತಾಯಿ . ಒಂದು ಹೇಳುವುದಾದರೂ ನಾ ಏನನ್ನು  ಹೇಳಲು ಸಾಧ್ಯ ತಾಯಿ . ನಮ್ಮ ಆಚಾರ ವಿಚಾರ ಸಂಸ್ಕೃತಿ ದೇಶ  ಎಲ್ಲವೂ ಬೇರೆ ಬೇರೆ . ಅಂತೆಯೇ , ಅವರ ನಂಬಿಕೆ ವಿಚಾರ ಪದ್ಧತಿ ದೃಷ್ಟಿಕೋನ ಎಲ್ಲವೂ ಬಿನ್ನ ಬಿನ್ನ . ಪೂರ್ವ ಪಶ್ಚಿಮ ಹೇಗೆ ಒಂದಾಗದೋ ಹಾಗೆ ಪಾಕ್ ಇಂಡೋ  ಹಿಂದೂ ಮುಸ್ಲಿಂ ನಡುವಣ ಆಚಾರ ವಿಚಾರ ಆಯಾ ಧರ್ಮಗಳ ಸಾರ ಸಂಸ್ಕಾರ ಪದ್ಧತಿ ಎಲ್ಲ ಬಿನ್ನ ವಿಭಿನ್ನ ಹೀಗಿರುವಾಗ ಸಹಜವಾಗಿಯೇ ಆಹಾರ ಪದ್ಧತಿಯಲ್ಲಿ ಕೆಲವು ವ್ಯತ್ಯಾಸ ಸಹಜ . ನೋಡು ಚೈನಾ ಜನರು ನಾಯಿ ಜಿರಳೆ ಹಾವು ಪಲ್ಲಿ ಹೀಗೆ ಏನೆಲ್ಲಾ ತಿಂತಾರೆ . ಥೂ ಎನ್ ವಿಚಿತ್ರ ಜನ ಚೀನೀ ಯರು ಅಸಹ್ಯ ಆಲ್ವಾ ಅದು ಅವರ ಆಹಾರ ಪದ್ಧತಿ . ಹಾಗಂತ ಪ್ರಪಂಚ  ಚೀನೀಯರಿಗೆ ಹಾವು ಇಲಿ ಹೆಗ್ಗಣ ಇತ್ಯಾದಿ ತಿನ್ನಬೇಡಿ ಅನ್ನಾಲಾದೀತೆ ಹೇಳಿ . ಅದು ಅವರ ಇಷ್ಟ ಸಂಪ್ರದಾಯ ಹಾಗೆ ಹಕ್ಕು ಅದರಲ್ಲಿ ಮೂಗು ತೂರಿಸಲು ನಾವ್ಯಾರು ? ನಮಗೇನು ಹಕ್ಕಿದೆ ಹೇಳು . ಹಾಗೆ ಮಗಳೆ ಇಲ್ಲು ಸಹ ತಿಳಿಯಿತ ಇಲ್ಲು ಸಹ ಗೋಮಾಂಸ ವಿಚಾರದಲ್ಲೂ  ಆಲ್ವಾ ! ಇಷ್ಟ ಇದ್ದವ ತಿಂತಾನೆ ಕಷ್ಟ ಅದಾವ ಬಿಡ್ತಾನೆ ಬಿಡು ಅದರಲ್ಲೇನು ? 

ನೋಡು ತಾಯಿ , ಆಹಾರ ಪದ್ಧತಿ ಅಂತ ಏನು ಇಲ್ಲ .ಪ್ರಕೃತಿ ಮಕ್ಕಳಾದ ನಮಗೆ ಪ್ರಕೃತಿ ನಿಯಮ ಏನು ಹೇಳುತ್ತೆ ಹೇಳಿ , ಸ್ಟ್ರಗಲ್ ಫಾರ್ ಎಕ್ಸಿಸ್ಟೆನ್ಸ್ ಅಂದ್ರೆ ಉಳಿವಿಗಾಗಿ ಹೋರಾಟ ಅದೆ ತಾನೇ ! 

 ಅಂದ್ರೆ , ತಾಯಿ ಕಪ್ಪೆ ತನ್ನ ಕೈಗೆ ನಿಲುಕುವ ತನಕವೂ ಮರಿ ಕಪ್ಪೆಯನ್ನು ನೀರಿನ ಮುಳುಗುವಿಕೆಯಿಂದ ಕಾಪಾಡಿಕೊಳ್ಳುತ್ತೆ . ಅದೇ ನೀರಿನ ಪ್ರಮಾಣ ಹೆಚ್ಚಾಗಿ ತನ್ನ ಕುತ್ತಿಗೆಗೆ ಬಂದರೆ ಆಗ ತನ್ನ ತಲೆ ಮೇಲಿನ ಮರಿ ಕಪ್ಪೆಯನ್ನು  ತನ್ನ ಕಾಲಡಿ ಹಾಕಿಕೊಂಡು ತಾನು ಬದುಕುತ್ತೆ , ಇದೆ ತಾನೇ ಆ ಕಥಾ ಸಾರಾಂಶ .

ಹಾಗೇ ಮನುಜನು ಸಹ  ರೀತಿ ನೀತಿ ಧರ್ಮ ಕಾನೂನು ದೈವ ಮಣ್ಣು ಮಸಿ ಅಂತೆಲ್ಲ ಹೀಳ್ತಿವಿ ಅಷ್ಟೇ . ಪುಸ್ತಕದ ಬದನೆಕಾಯಿ ತಿನ್ನೋಕೆ ಬರಲ್ಲ  . ಅಂದ ಹಾಗೆ ಶವವನ್ನು ಬೋಗಿಸುವವರ ಹಾಗೆ ಸೇವಿಸುವವರ  ಸಂಖ್ಯೆ ಇಂದಿಗು ಈ ಮಾನವ ಪ್ರಪಂಚದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇದೆ ಎಂಬುದು ನಿನಗೆ ಗೊತ್ತುಂಟೋ .

ಗೊತ್ತಿಲ್ಲ ಎಂಬರ್ಥದಲ್ಲಿ ಜೋಧಾ ಅಕ್ಬರ್ ತಲೆಯಾಡಿಸುತ್ತಾಳೆ .

ಅದು ಹೋಗಲಿ , ತನ್ನ ಹಡೆದ ತಾಯಿಯನ್ನೇ ಗೊತ್ತಿದ್ದೋ ಗೊತ್ತಿಲ್ಲದೆಯೋ ಬೋಗಿಸಿದವರು ಈ ಕೆಟ್ಟ ಪ್ರಪಂಚದಲ್ಲಿ ರುವ ಸಾಕಷ್ಟು ನಿದರ್ಶನಗಳು ಇರುವಾಗ , ಇನ್ನು ಮನುಜ ಜಾತಿಯಲ್ಲದ ಮತ್ಯಾವುದೋ ಪ್ರಾಣಿಯನ್ನು ತಾಯಿ ಸಮಾನ ದೈವ ಸಮಾನ ಎಂದೆಲ್ಲ ಕರೆಯುವುದು  ಎಂದರೆ ನಂಬಲರ್ಹವಾದುದೆ ತಾಯಿ ಎನ್ನುತ್ತ ಮತ್ತೊಮ್ಮೆ ವ್ಯಂಗ್ಯ ನಗೆ ಹೊರ ಹಾಕುತ್ತಾನೆ .

ಪ್ರಕೃತಿ ಸೃಷ್ಟಿಯಲ್ಲಿ ಎಸ್ಟೊಂದು ಜೀವರಾಶಿ ಇದೆ . ಆ ಪ್ರಕೃತಿ ದೃಷ್ಟಿಯಲ್ಲಿ ಎಲ್ಲ ಜೀವರಾಶಿಯು  ಒಂದೇ . ಆದರೆ ಬುದ್ಧಿವಂತನಾದ  ಮನುಜ ಮಾತ್ರ ಈ ಪ್ರಕೃತಿಯನ್ನ ಹಾಗು ಎಲ್ಲ ಜೀವರಾಶಿಯನ್ನೂ ಬಲಾತ್ಕಾರವಾಗಿ ಇಲ್ಲ ಬುದ್ದಿವಂತಿ ಕೆಯಿಂದ ತನ್ನ ಅಂಕೆಯಲ್ಲಿರಿಸಿಕೊಂಡು ಜೀವರಾಶಿಗಳಲ್ಲಿ ತನ್ನ ಅಧಿಪತ್ಯ  ಸ್ಥಾಪಿಸಿಕೊಂಡು ಮೆರೆಯುತ್ತಿದ್ದಾನೆ . ಹಡೆದ ತಾಯಿಗೆ ಹೇಗೆ ಮೊದಲ ಹಾಗು ಕೊನೆಯ ಮಕ್ಕಳೆಲ್ಲ ಹೇಗೆ ಮುಖ್ಯವೋ ಹಾಗೆ ಪ್ರಕೃತಿ ಮಾತೆಯು ಸಹ ಎಲ್ಲ ಜೀವ ರಾಶಿಯನ್ನ ಒಂದೇ ರೀತಿ ಕಾಣುತ್ತೆ . ಹಾಗು ಆ ಮಾತೆಗೆ ಮೇಲು ಕೀಳು ಹೆಚ್ಚು ಕಮ್ಮಿ ಎಂಬ ತಾರತಮ್ಯ ಇಲ್ಲ . ಹುಲಿ ರಾಷ್ಟ್ರೀಯ ಪ್ರಾಣಿ , ಗೋವು ತಾಯಿ ಸಮಾನ , ಸಾಧು ಪ್ರಾಣಿ , ಸಾಕು ಪ್ರಾಣಿ , ಕಾಡು ಪ್ರಾಣಿ ಎಂದೆಲ್ಲ ಬೇದವನ್ನು ನಾವು ಮಾಡಿದ್ದೇವೆ ಅಷ್ಟೇ .

ರಾಷ್ಟ್ರ ಪ್ರಾಣಿ ,  ರಾಷ್ಟ್ರ ಪಕ್ಷಿ ಹಾಗೆ ಕಡವೆ ಜಿಂಕೆ ಆನೆ ಇವುಗಳನ್ನು ಇಂತಹವನ್ನ ಯಾರು ಕೊಲ್ಲುವಂತಿಲ್ಲ .ಹಾಗೆ ಒಂದು ವೇಳೆ ಕೊಂದರೆ ಕಾನೂನು ಕ್ರಮ ಕೈಗೊಳ್ಳ.ಲಾಗುತ್ತದೆ  . ಆದರೆ ಕುರಿ ಕೋಳಿ ಮೇಕೆ ಮೀನು ಇವುಗಳನ್ನು ಕೊಂದು ತಿಂದರೆ ಕಾನೂನು ಯಾವ ಶಿಕ್ಷೆಯನ್ನು ವಿಧಿಸುವುದಿಲ್ಲ  ನೋಡಿದೆಯಾ ಮಗಳೇ ಎಂತ ವಿಚಿತ್ರ ಕಾನೂನು ಆಲ್ವಾ ! 

Category:Stories



ProfileImg

Written by Nagaraj Kale

Writer

0 Followers

0 Following