ಇಂಗ್ಲೆಂಡಿನ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿರುವ ಕಾನೋಕೇಶನ್ ಸಮಾರಂಭ ನಡೆಯುವ ಹಾಲನ್ನು ನಾನ ರೀತಿಯ ಬಣ್ಣದ ಟೇಪ್ ಗಳಿಂದ ಬಲ್ಪುಗಳಿಂದ ಹಾಗೂ ಇತರೆ ಅಲಂಕಾರಿಕ ಸಾಮಗ್ರಿಗಳಿಂದ ತುಂಬಾ ಸುಂದರವಾಗಿ ಸಿಂಗಾರಗೊಳಿಸಲಾಗಿದೆ ಹಾಗೆಯೇ ವೇದಿಕೆ ಮತ್ತು ಇಡೀ ಸಭಾಂಗಣವು ಸಹ ಮಧುವಣಗಿತ್ತಿಯಂತೆ ಸಿಂಗಾರವಾಗಿದೆ ಸಭಾಂಗಣದಲ್ಲಿ ಸಹಸ್ರಾರು ಜನರಿಗಾಗಿ ಕುರ್ಚಿಗಳನ್ನು ಹಾಕಲಾಗಿದೆ . ಮುಂದಿನ ಎರಡು ಸಾಲು ಕುರ್ಚಿಗಳು ವಿವಿಧ ಸುದ್ದಿ ಮಾಧ್ಯಮದವರಿಗೆ ಹಾಗೂ ವಿಐಪಿ ಗಳಿಗೆ ಮೀಸಲಿರಿಸಿರುವುದಾಗಿ ಅಲ್ಲಿ ನೇತು ಹಾಕಿರುವ ಬೋರ್ಡ್ ಸಾರಿ ಸಾರಿ ಹೇಳುತ್ತಿದೆ .
ಕಾರಣ ಇಷ್ಟೇ , ಅಂದು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ದಲ್ಲಿರುವ ವಿವಿಧ ಕೋರ್ಸುಗಳಲ್ಲಿನ ೨೦೧೭ - ೧೮ನೇಯ ಸಾಲಿನ ಮೊದಲ ರಾಂಕ್ ವಿಜೇತರಿಗೆ ಬಂಗಾರದ ಪದಕ ಹಾಗೂ ಕಾನೋಕೇಶನ್ ಪತ್ರವನ್ನು ಪ್ರಧಾನ ಮಾಡುವ ಸಮಾರಂಭವದು . ಈ ಕಾರ್ಯಕ್ರಮಕ್ಕೆ ಇಂಗ್ಲೆಂಡಿನ ರಾಣಿ ಲಂಡನ್ ನಗರದ ಮೇಯರ್ ಒಳಗೊಂಡಂತೆ ಇಂಗ್ಲೆಂಡ್ ಮುಖ್ಯ ನ್ಯಾಯಮೂರ್ತಿಗಳು ಸಹ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿಯು ಹಾಗೂ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಕುಲಪತಿಗಳ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಜರಗುತ್ತದೆ . ಅಂದು ವಿವಿಧ ೩0 ವಿಷಯಗಳಲ್ಲಿ ಮೊದಲ ರಾಂಕ್ ವಿಜೇತರು ಹಾಗೂ ಅವರ ಕಡೆಯವರು ವಿಶ್ವವಿದ್ಯಾಲಯದ ಸಿಬ್ಬಂದಿ ಇಂಗ್ಲೆಂಡ್ ರಾಣಿ ಮತ್ತು ಮೇಯರ್ ಇರುವುದರಿಂದ ಅವರ ಕಡೆಯವರು ಎಂದೆಲ್ಲಾ ಸೇರಿ ಸುಮಾರು ಮೂರ್ನಾಲ್ಕು ಸಾವಿರ ಜನ ಅಂದಿನ ಸುಂದರವಾದ ಈ ಸಮಾರಂಭಕ್ಕೆ ಪ್ರೇಕ್ಷಕರಾಗಿ ಭಾಗವಹಿಸುವವರಿದ್ದಾರೆ . ನಿಧಾನವಾಗಿ ಜನರು ಬಂದು ಸೇರಿದಂತೆಲ್ಲ ಹಾಗೆ ಎಲ್ಲಾ ಸೀಟುಗಳು ಭರ್ತಿಯಾಗ ತೊಡಗಿದವು .
ರಾಂಕ್ ವಿಜೇತರುಗಳಿಗೆ ವೇದಿಕೆಯಲ್ಲಿ ಆಸೀನರಾಗಿರುವ ಆ ನಗರದ ಮೇಯರ್ ಇಂಗ್ಲೆಂಡ್ ರಾಣಿ ಕುಲಪತಿಗಳು ಇಂಗ್ಲೆಂಡಿನ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರು ಮುಖ್ಯ ಅತಿಥಿಗಳಾಗಿದ್ದು ಇವರುಗಳ ಶಾಲು ಹೊದಿಸುವುದು ಗಂಧದ ಹಾರ ಹಾಕಿ ನೆನಪಿನ ಕಾಣಿಕೆ ನೀಡಿ ಸನ್ಮಾನ ಮಾಡುತ್ತಾರೆ ಹಾಗೂ ವೇದಿಕೆಯನ್ನು ಅಲಂಕರಿಸುವ ಮುಖ್ಯಸ್ಥರೊಂದಿಗಿನ ಫೋಟೋ ಸೆಶನ್ ನಂತರ ಸನ್ಮಾನ ಸ್ವೀಕರಿಸಿದವರನ್ನು ವೇದಿಕೆ ಮಧ್ಯದಲ್ಲಿ ಹಾಕಿದ ಸಾಧಕರ ಸೀಟಿನಲ್ಲಿ ಕೂರಿಸಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮೂರ್ನಾಲ್ಕು ನಿಮಿಷ ಕಾಲ ನೀಡುತ್ತಾರೆ . ಇದೇ ವಿಧಾನ ಎಲ್ಲಾ ೩೦ ಜನರಿಗೂ ಇರುತ್ತದೆ . ಇದು ಇಲ್ಲಿಯ ಒಂದು ಸಂಪ್ರದಾಯವು ಹೌದು .
ಒಟ್ಟಾರೆ ಅಧಿಕೃತವಾಗಿ ಕಾರ್ಯಕ್ರಮ ಪ್ರಾರಂಭ ಆಗಿ ಮುಖ್ಯಸ್ಥರ ನಾಲ್ಕಾರು ಮಾತುಗಳು ನಡೆದ ಬಳಿಕ ಪ್ರಶಸ್ತಿ ಪ್ರಧಾನ ಸಮಾರಂಭ ಪ್ರಾರಂಭ ಆಯಿತು . ಹೀಗೆ ಒಂದು
ನಾಕಾರು ಜನರಿಗೆ ಪ್ರಶಸ್ತಿ ಪ್ರಧಾನ ಮಾಡಿಯಾದ ಬಳಿಕ ಜೋಧಾ ಅಕ್ಬರ್ ಗೆ ಪ್ರಶಸ್ತಿ ಪ್ರಧಾನ ಮಾಡಲು ಅವಳ ಹೆಸರನ್ನು ಮೈಕ್ ನಲ್ಲಿ ಆ ಕಾರ್ಯಕ್ರಮದ ನಿರೂಪಕರು ಕರೆಯುತ್ತಾರೆ .
ಜೋಧಾ ಅಕ್ಬರ್ ಎದ್ದು ಸಭಿಕರಿಗೆ ಕೈ ಬೀಸುತ್ತಾ ವೇದಿಕೆಯ ಬಳಿ ಬರುತ್ತಾಳೆ . ಆಗ ಆಕೆಯ ಕಡೆಯವರು ಹಾಗೂ ಇತರೆ ಪ್ರೇಕ್ಷಕರು ಜೋರಾಗಿ ಚಪ್ಪಾಳೆ ತಟ್ಟುವ ಮೂಲಕ ಅವಳನ್ನು ಹುರಿದುಂಬಿಸುತಿದ್ದಾರೆ . ಕಾರಣ ಇಷ್ಟೇ ಮುಸ್ಲಿಂ ಸಮಾಜದಲ್ಲಿ ಒಂದು ಹೆಣ್ಣು ಮಗು ಶಾಲೆ ಕಲಿಯುವುದೇ ತುಂಬಾ ಕಠಿಣತರವಾದದು ಆದರೆ ಈಕೆ ಡಾಕ್ಟರೇಟ್ ಪಡೆದು ಗೋಲ್ಡ್ ಮೆಡಲ್ ಪಡೆದಿರುವುದು ನಿಜಕ್ಕೂ ಮುಸ್ಲಿಂ ಬಾಂಧವರು ಹೆಮ್ಮೆ ಪಡಬೇಕಾದ ವಿಷಯವೇ ಎಂದು ಕಾರ್ಯಕ್ರಮ ನಿರೂಪಕಿ ಹೆಮ್ಮೆಯಿಂದ ಮೈಕ್ ನಲ್ಲಿ ಹೇಳುತ್ತಿದ್ದಾಳೆ ಅದಕ್ಕೆ ಅನುಗುಣವಾಗಿ ಸಭೀಕರು ಜೋರಾಗಿ ಚಪ್ಪಾಳೆಯ ಮೂಲಕ ಇವಳನ್ನು ಇನ್ನಷ್ಟು ಹುರಿದುಂಬಿಸುತ್ತಿದ್ದಾರೆ .
ಇಂಗ್ಲೆಂಡಿನ ರಾಣಿ ಜೋದಾಳಿಗೆ ಶಾಲು ಹೊದಿಸುತ್ತಾಳೆ ಕುಲಪತಿ ಕೂಡ ಮಹಿಳೆಯಾಗಿದ್ದು ಹಾಗೆ ಜೋದಾಳಿಗೆ ಗಂಧದ ಹಾರವನ್ನು ಹಾಕುತ್ತಾಳೆ ಇನ್ನು ವಿಶೇಷ ಅತಿಥಿಗಳಾಗಿ ಆಗಮಿಸಿರುವ ಮುಖ್ಯ ನ್ಯಾಯಮೂರ್ತಿಗಳು ಹೂಗುಚ್ಛ ನೀಡಿ ಈಕೆಗೆ ಸನ್ಮಾನಿಸುತ್ತಾರೆ ಬಳಿಕ ಎಲ್ಲರೂ ಗ್ರೂಪ್ ಫೋಟೋ ತೆಗೆಸಿಕೊಳ್ಳುತ್ತಾರೆ . ಈ ಎಲ್ಲಾ ಘಟನೆಗಳು ವಿಡಿಯೋ ರೆಕಾರ್ಡಿಂಗ್ ಆಗುತ್ತಿದೆ ಕಾರಣ ಇದು ಅಲ್ಲಿನ ದೂರದರ್ಶನ ಹಾಗೂ ಸ್ಥಳೀಯ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತದೆ .
ಜೋದಾಳನ್ನು ವೇದಿಕೆಯ ಮಧ್ಯಭಾಗದಲ್ಲಿನ ಸಾಧಕರ ಸೀಟಿನಲ್ಲಿ ಕೂರಿಸಿ ತಮ್ಮ ಅನಿಸಿಕೆಗಳನ್ನು ತಿಳಿಸುವಂತೆ ಕಾರ್ಯಕ್ರಮದ ನಿರೂಪಕಿ ಕೇಳಿಕೊಂಡು ಅವಳ ಕೈಗೆ ಮೈಕನ್ನು ನೀಡುತ್ತಾಳೆ .
ತನ್ನ ಗಂಟಲನ್ನು ಸರಿಪಡಿಸಿಕೊಂಡು ತನ್ನ ಮಾತುಗಳನ್ನು ಆಡಲು ಶುರು ಮಾಡುತ್ತಾಳೆ ಆಂಗ್ಲ ಭಾಷೆಯಲ್ಲಿ .
ಇಂದು ನಾನು ಏನಾದರೂ ಈ ಪರಿಯ ಮಾನ ಸನ್ಮಾನಕ್ಕೆ ಭಾಜನಳಾಗುವಲ್ಲಿ , ನನ್ನ ತಂದೆ ತಾಯಿ ಕುಟುಂಬ ಹಾಗೂ ಮುಸ್ಲಿಂ ಪರಿವಾರದ ಪ್ರೋತ್ಸಾಹ ಮತ್ತು ತ್ಯಾಗ ಅತ್ಯಮೂಲ್ಯವಾದುದು . ಏಕೆಂದರೆ ಇಂದು ಮುಸ್ಲಿಂ ಕುಲದಲ್ಲಿ ಹೆಣ್ಣಿಗೆ ಯಾವ ಸೌಕರ್ಯವನ್ನೂ ನೀಡದೆ ಆಕೆಯನ್ನು ಕುಟುಂಬ ಯೋಜನೆಗೂ ಅರ್ಹವಾಗಿಸದೆ ಕೇವಲ ಮಕ್ಕಳನ್ನು ಹೇರುವ ಯಂತ್ರವನ್ನಾಗಿ ಬಳಸಿ ಕೊಳ್ಳುತ್ತಿರುವ ಇಂದಿನ ವೈಜ್ಞಾನಿಕ ಜಮಾನದ ಈ ದುರ್ದಿನಗಳಲ್ಲೂ , ನನ್ನ ತಂದೆ ಮುಸ್ಲಿಂನ ಎಲ್ಲಾ ಕಟ್ಟುಪಾಡುಗಳನ್ನು ದಾಟಿ ನನ್ನನ್ನು ಓದಿಸಲು ಮಾಡಿದ ದೈರ್ಯ ಮತ್ತು ತ್ಯಾಗ ಇದೆಯಲ್ಲ ಅದು ದೊಡ್ಡದು .ಈ ಒಂದು ಕಾರಣಕ್ಕಾಗಿಯಾದರೂ ನಾನು ಅವರಿಗೆ ಮನ ಸ್ಪೂರ್ವಕವಾಗಿ ಒಂದು ಹ್ಯಾಟ್ಸ್ ಆಫ್ ಹೇಳಲೇ ಬೇಕು ಅದು ತುಂಬು ಹೃದಯದಿಂದ . ಇನ್ನು ಮನೆ ಬಾಗಿಲ ಬಳಿ ಇರುವ ಶಾಲೆಗೆ ನಮ್ಮ ಸಮಾಜ ಕೇವಲ ಪ್ರಾರ್ಥಮಿಕ ಶಾಲೆಗೆ ಕಳಿಸುವುದು ದುರ್ಲಭ ಸಂಗತಿಯಾಗಿರುವಾಗ ಅಂತಹದ್ದರಲ್ಲಿ ಬೆಳೆದು ನಿಂತ ಈ ಹೆಣ್ಣೊಬ್ಬಳನ್ನು ಏಕಾಂಗಿಯಾಗಿ ಯಾವುದೋ ಗೊತ್ತು ಪರಿಚಯ ಇಲ್ಲದ ದೂರದ ದೇಶಕ್ಕೆ ಅನೇಕ ವರ್ಷ ಕಾಲ ಓದಲು ಕಳುಹಿಸುವುದು ಅದು ಕೂಡ ನಮ್ಮ ಈ ಮುಸ್ಲಿಂ ಸಮಾಜದ ಕಟ್ಟುಪಾಡುಗಳಲ್ಲಿ ನೋಡುವುದು ಮಹಾನ್ ಸಾಧನೆಯೇ ಸರಿ ಹಾಗಾಗಿ ಈ ನನ್ನ ಸಾಧನೆಗೆ ನನ್ನ ಕುಟುಂಬಸ್ಥರ ಹಾಗೆ ನನ್ನ ಮುಸ್ಲಿಂ ಪರಿವಾರದ ಕಾಣಿಕೆ ಅಪರಿಮಿತವಾದದ್ದು .
ಇನ್ನು ಈ ಪರಿಯ ಸನ್ಮಾನ ಸ್ವೀಕರಿಸುತ್ತಿರುವುದು ನನ್ನ ಪಾಲಿಗೆ ನಿಜಕ್ಕೂ ಅವಿಸ್ಮರಣೀಯವಾದದು . ನಿಜಕ್ಕೂ ಈ ಅರ್ಹತೆಗೆ ನನ್ನಲ್ಲಿ ಎಷ್ಟರಮಟ್ಟಿಗೆ ಆ ಯೋಗ ಯೋಗ್ಯತೆ ಇದೆಯೋ ನಾನಂತೂ ಅರಿಯೆ . ನಿಜಕ್ಕೂ ಪ್ರಪಂಚದ ಶ್ರೇಷ್ಠ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಈ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಅಂಗಳದಲ್ಲಿ ಅದರಲ್ಲು ಅಲ್ಲಿನ ಕುಲಪತಿಗಳು ಇಂಗ್ಲೆಂಡ್ ರಾಣಿ ರಾಜ ಮನೆತನದವರಿಂದ ಸನ್ಮಾನ ಸ್ವೀಕರಿಸುತ್ತಿರುವ ನಾನು ಈ ಪರಿಯ ಸನ್ಮಾನ ಜಗತ್ತಿನಲ್ಲಿ ಅದೆಷ್ಟು ಜನಕ್ಕೆ ಸಿಗುತ್ತೆ ಅಲ್ವೇ ? . ಈ ಒಂದು ಕ್ಷಣ ನನ್ನ ಜೀವಮಾನದಲ್ಲಿಯೇ ಮರೆಯಲಾಗದ ಅಪೂರ್ವ ಕ್ಷಣವೇ ಸರಿ ಎಂದರೆ ಬಹುಶಹ ತಪ್ಪಲ್ಲ ಎನ್ನುತ್ತಾ ಈ ಸಮಾರಂಭಕ್ಕೆ ಈ ಪರಿಯ ಸನ್ಮಾನಕ್ಕೆ ನಾನಂತೂ ನನ್ನ ಈ ಜೀವಮಾನವಿಡಿ ಆಭಾರಿಯಾಗಿರುತ್ತೇನೆ ಎನ್ನುತ್ತಾ ತನ್ನ ಮಾತುಗಳನ್ನು ಮುಗಿಸಿ ಮೈಕನ್ನು ನಿರೂಪಕರಿಗೆ ನೀಡುತ್ತಾ ಸಾಧಕರ ಸೀಟಿನಿಂದ ಎದ್ದು ಆ ವೇದಿಕೆಯಲ್ಲಿನ ಗಣ್ಯರಿಗೆಲ್ಲ ಮತ್ತೊಮ್ಮೆ ವಂದಿಸುತ್ತ ಸಭಿಕರ ಸಾಲಿನಲ್ಲಿದ್ದ ತನ್ನ ಆಸನದತ್ತ ಹೋಗುತ್ತಾಳೆ . ನಿಜಕ್ಕೂ ಈ ಹೇಳಿಕೆಗಳಿಂದ ಸಭಿಕರು ಹುಚ್ಚೆದ್ದು ಐದಾರು ನಿಮಿಷಗಳವರೆಗೂ ಅಂದರೆ ತನ್ನ ಮಾತುಗಳನ್ನು ಮುಗಿಸಿದಂದಿನಿಂದ ತಾನು ತನ್ನ ಸೀಟಿನಲ್ಲಿ ಬಂದು ಕೂರುವವರೆಗೂ ದೀರ್ಘ ಚಪ್ಪಾಳೆಗಳ ಸುರಿಮಳೆ ಜೊತೆಗೆ ಅಭಿಮಾನದ ಹೊಳೆಯನ್ನು ಅಲ್ಲಿನ ಜನರು ಈಕೆಯ ಮೇಲೆ ಹರಿಸುತ್ತಾರೆ .
ಈ ಒಂದು ವಿಚಾರವಾಗಿ ಜೋಧಾ ಅಕ್ಬರ್ ಇವಳ ತಂದೆ ತಾಯಿ ಪರಿವಾರ ಹಾಗೆ ಇಡೀ ಮುಸ್ಲಿಂ ಸಮುದಾಯ ತಲೆಯೆತ್ತಿ ಬಹು ಹೆಮ್ಮೆಯಿಂದ ಬೀಗುವಂತಾಯ್ತು .
ಇನ್ನು ಪ್ರಣವ್ ಸಹ ಇದೆಲ್ಲವನ್ನು ನೋಡುತ್ತಲೇ ಇದ್ದು ಬಹು ದೊಡ್ಡ ಚಪ್ಪಾಳೆಯೊಂದಿಗೆ ಇವಳನ್ನು ಅಭಿನಂದಿಸುತ್ತ ಇವಳ ಸಾಧನೆಗಳನ್ನು ಬಣ್ಣಿಸಲು ಪದಗಳು ಮಾತುಗಳು ಒಂದು ಬಾರದೆ ಹೋದರು ಇವನ ಕಣ್ಣುಗಳಿಂದ ಮಾತ್ರ ಧಾರಾಕಾರವಾಗಿ ಆನಂದ ಭಾಷ್ಪದ ಹೊಳೆಯೇ ಹರಿಯುತ್ತಿದೆ .
****************************
ಲಂಡನ್ ನಗರದ ಹೊರವಲಯದಲ್ಲಿರುವ ಯಾವುದೋ ಒಂದು ಐಸ್ ಕ್ರೀಮ್ ಪಾರ್ಲರ್ ಗೆ ಬಂದು ಇಬ್ಬರು ಒಂದೇ ಒಂದು ಐಸ್ ಕ್ರೀಮ್ ಅನ್ನು ಎದುರಿನ ಟೇಬಲ್ ಮೇಲಿರಿಸಿಕೊಂಡು ಒಬ್ಬರನ್ನೊಬ್ಬರು ನೋಡುತ್ತಲೇ ಇದ್ದಾರೆ . ಇಬ್ಬರಲ್ಲೂ ಮಾತುಕತೆ ಇಲ್ಲ ತಿನ್ನುತ್ತಲು ಇಲ್ಲ ಹಾಗಾಗಿ ಐಸ್ ಕ್ರೀಮ್ ಕರಾಗಿ ನೀರಾಗಿ ಹರಿಯುತ್ತಿದೆ . ಹೀಗೆ ಕರಗಿದ ಐಸ್ ಕ್ರೀಮಿನ ಒಂದು ಹನಿ ತನ್ನ ಕೈಬೆರಳಿಗೆ ತಾಗಿದಾಗ ಎಚ್ಚೆತ್ತ ಪ್ರಣವ್ ಅವಳ ಕೈ ಬೆರಳನ್ನು ಮುಟ್ಟುತ್ತಾ ಸವರುತ್ತಾ ಹಾಗೆ ಐಸ್ ಕ್ರೀಮ್ ತಿನ್ನಲು ಐಸ್ ಕ್ರೀಮಿನತ್ತ ನೋಡುತ್ತಾನೆ ಆದರೆ ಆ ಐಸ್ ಕ್ರೀಮಿನಲ್ಲಿ ಜೋಧಾಳನ್ನು ಕಂಡ ಇವನಿಗೆ ಅದನ್ನು ತಿನ್ನದೇ ಹಾಗೆ ಐಸ್ ಕ್ರೀಂಗೆ ಲೋಚ ಲೋಚನೆ ಮುತ್ತನ್ನು ಕೊಡಲಾರಂಬಿಸುತ್ತಾನೆ .
ಐಸ್ ಕ್ರೀಮಿಗೆ ಮುತ್ತು ಕೊಡುವುದನ್ನು ನೋಡಿ ವಾಟ್ ಆರ್ ಯು ಡುಯಿಂಗ್ ಪ್ರಣವ್ ಎನ್ನುತ್ತಾಳೆ ಒಂದು ರೀತಿ ಅಸಹ್ಯ ಎಂಬಂತೆ .
ಪ್ರತ್ಯುತ್ತರ ಎಂಬಂತೆ ಅಷ್ಟೇ ಕೂಲ್ ಆಗಿ , ಹಾ ಏನಿಲ್ಲ ಐಸ್ ಕ್ರೀಮ್ ನಲ್ಲಿ ನನ್ನಾಕೆಯನ್ನು ನೋಡಿದೆನಲ್ಲ ಹಾಗಾಗಿ ಆಕೆಗೆ ನೇರವಾಗಿ ಮುತ್ತು ನೀಡಿದರೆ ಏನೆನ್ನುತ್ತಾಳೋ ಎಂದು ಐಸ್ ಕ್ರೀಮ್ ಗೆ ಕೊಟ್ಟೆ ಅಷ್ಟೇ ವೇರಿ ಸಿಂಪಲ್ ಎನ್ನುತ್ತಾ ! ಆ ಏನಿಲ್ಲ ಬಿಡಿ ಗಂಡ್ ಐಕ್ಳ ಪ್ರಾಬ್ಲಮ್ ನಿಮಗೆಲ್ಲಾ ಹಾಗೆ ಅಷ್ಟು ಸುಲಭವಾಗಿ ಅರ್ಥವಾಗುವಂಥದ್ದಲ್ಲ ಎಂದು ಹಾಗೆ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಾನೆ.
ಬಳಿಕ ಜೋದಾ ಅಕ್ಬರ್ ಪ್ರಣವ್ ಕೈ ಹಿಡಿದು ಹೇ ಧರ್ಮಾಧಿಕಾರಿಯ ಮಗನೇ ಐ ಲವ್ ಯು ಕಣೋ ಎನ್ನುತ್ತಾ ಕಣ್ ಸನ್ನೆ ಮಾಡಿ ಪ್ರಣವ್ ಕೈ ಬೆರಳನ್ನು ನಿಧಾನವಾಗಿ ಅಮುಕುತ್ತಾ ಪ್ರಣವ್ ನನ್ನು ಸಲ್ಲಾಪಕ್ಕೆ ಆಹ್ವಾನಿಸುವಂತೆ ಕೆಣಕುತ್ತಾಳೆ ಮಾದಕ ನೋಟದಿಂದ .
ಆಹ್ ! ಏನ್ ಮಾಡ್ತಿದ್ದೀಯಾ ಜೋದಾ ಅಕ್ಬರ್ ಎನ್ನುತ್ತಾನೆ ಪ್ರಣವ್ .
ಓಹ್ ! ನಾನು ಸರಿಯಾದದ್ದನ್ನೇ ಹೇಳಿದ್ದೇನೆ ಹಾಗೆ ಸರಿಯಾದುದನ್ನೇ ಮಾಡುತ್ತಿದ್ದೇನೆ . ಅಂದ ಹಾಗೆ ಕನ್ನಡದಲ್ಲಿಯೇ ಮಾತನಾಡು ಪ್ರಣವ್ . ಯಾಕೆ ನನಗೇನು ಕನ್ನಡ ಬರಲ್ವಾ ಯಾಕೆ ಈ ಹಿಂದೆ ಮಾಡಿದ ಏಷ್ಟೋ ಚಾಟಿಂಗ್ನಲ್ಲಿ ಮೊಬೈಲ್ ಗಳಲ್ಲಿ ನನ್ನ ಮತ್ತು ಶಿವಮೊಗ್ಗದ ಮತ್ತೂರು ನಲ್ಲಿ ಉಳಿದುಕೊಂಡಾಗ ಅಲ್ಲಿನ ಸ್ಥಳೀಯರಿಂದ ಕನ್ನಡ ಮತ್ತು ಸಂಸ್ಕೃತ ಭಾಷೆಗಳನ್ನು ಕಲಿತುದರ ಬಗ್ಗೆ ಈ ಹಿಂದೆ ನಿನಗೆ ತಿಳಿಸಿರುವುದನ್ನು ಅಷ್ಟು ಬೇಗ ಮರೆತೆಯ ಹೇಗೆ ಎನ್ನುತ್ತಾಳೆ ಜೋಧ ಅಕ್ಬರ್ .
ತಲೆ ಕೆರೆದುಕೊಳ್ಳುತ್ತಾ ಪ್ರಣವ್ ಹೌದು ಹೌದೌದು ಈ ಒಂದು ಕ್ಷಣದಲ್ಲಿ ನನಗೆ ಏನೊಂದು ತಿಳಿಯುತ್ತಿಲ್ಲ ಹಾಗೆ ಏನೊಂದು ಹೊಳೆಯುತ್ತಿಲ್ಲ . ಏನ್ ಮಾಡ್ಲಿ ಈಗ ಜೋಧಾ ಡಿಯರ್ ಅಂದಹಾಗೆ ಶಿವಮೊಗ್ಗದ ಮತ್ತೂರಿನಲ್ಲಿ ಉಳಿದದ್ದು ಕನ್ನಡ ಮತ್ತು ಸಂಸ್ಕೃತ ಭಾಷೆಯನ್ನು ಕಲಿತದ್ದರ ಬಗ್ಗೆ ಸೂಕ್ಷ್ಮವಾಗಿ ನಾಲ್ಕಾರು ಸಾಲುಗಳಲ್ಲಿ ತಿಳಿಸಿದ್ದೆ ನಿಜ . ಆಗ ದೀರ್ಘವಾಗಿ ಹೇಳುವುದಕ್ಕೆ ಅಂದು ಸೂಕ್ತ ಸಮಯ ಕಾಲ ಸನ್ನಿಹಿತವಾದಾಗ ಹೇಳುತ್ತೇನೆ ಅಂದು ಆಗ ಹಾಗೆ ಜಾರಿಕೊಂಡೆ . ಆದರೆ ಈಗ ಆ ಸೂಕ್ತ ಕಾಲ ಮತ್ತು ಸಮಯ ಎರಡು ಸನ್ನಿಹಿತವಾಗಿದೆ ಎಂದು ನಾನು ಭಾವಿಸುತ್ತೇನೆ . ಈಗಲಾದರು ಹೇಳು ಎಂದು ಬಲವಂತ ಪಡಿಸುತ್ತಾನೆ .
ಕೂಲ್ ಕೂಲ್ ಧರ್ಮಾಧಿಕಾರಿ . ಐ ಮೀನ್ ಮಾವನ ಮಗನೆ ಎಂದು ತಿವಿಯುತ್ತ , ನಾನು ಇಂಗ್ಲೆಂಡಿನ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಓದುವಾಗ ಅಲ್ಲಿನ ಪದ್ಧತಿಯ ಪ್ರಕಾರ ಇಂಗ್ಲೆಂಡ್ ಹಾಗೂ ವಿದ್ಯಾರ್ಥಿಯ ಸ್ವಂತ ದೇಶವನ್ನು ಹೊರ ತುಪಡಿಸಿ ಮತ್ತೊಂದು ದೇಶದ ಯಾವುದಾದರೂ ಭಾಷೆ ಸಂಸ್ಕೃತಿ ಅಲ್ಲಿಯ ಆಚಾರ ವಿಚಾರದ ಬಗ್ಗೆ ಒಂದು ಅಸೈನ್ಮೆಂಟ್ ಸಿದ್ದಪಡಿಸಿಕೊಡಬೇಕು . ಅದಕ್ಕೆ ಆರು ತಿಂಗಳ ಕಾಲಾವಕಾಶ ಕೊಡುತ್ತಾರೆ . ನಾನು ಸಹಜವಾಗಿ ಭಾರತದ ಶಿವಮೊಗ್ಗದ ಮತ್ತೂರು ಎಂಬ ಗ್ರಾಮವನ್ನು ಆರಿಸಿಕೊಂಡೆ .
ಭಾರತದ ಕರ್ನಾಟಕವನ್ನೇ ಆರಿಸಿಕೊಳ್ಳಲು ನನಗೆ ಬಹು ದೊಡ್ಡದಾದ ಹಿನ್ನೆಲೆಯ ಕಾರಣವಿದೆ . ಅದನ್ನು ಇನ್ನೊಮ್ಮೆ ಕಾಲಾವಕಾಶ ಬಂದಾಗ ಹೇಳುತ್ತೇನೆ ಎನ್ನುತ್ತಾ, ಸಹಜವಾಗಿ ಶಿವಮೊಗ್ಗದ ಸಂಸ್ಕೃತ ಗ್ರಾಮವಾದ ಮತ್ತೂರು ಗ್ರಾಮಕ್ಕೆ ಅಂದು ನಾನು ಬಂದಾಗ , ಆ ಗ್ರಾಮಸ್ಥರ ಸಂಸ್ಕೃತ ಭಾಷೆ ಸಂಸ್ಕೃತಿ ಪರಿಸರ ಎಲ್ಲವನ್ನು ನಿಧಾನವಾಗಿ ಅಲ್ಲಿಯ ಸ್ಥಳೀಯರ ನೆರವು ಗ್ರಂಥಗಳ ನೆರವು ತಾಳೆಗರಿ ಓಲೆಗರಿ ಹೀಗೆ ಸ್ಥಳೀಯರ ಅನಿಸಿಕೆ ಎಲ್ಲವನ್ನು ಅಲ್ಲಿದ್ದ ಆರು ತಿಂಗಳ ಕಾಲಾವಧಿಯಲ್ಲಿ ಸಂಗ್ರಹಿಸುತ್ತ ಬಂದೆ . ಬೇಕಾದವುಗಳನ್ನು ಹಾಗೆ ವಿಡಿಯೋ ಚಿತ್ರೀಕರಿಸಿಕೊಂಡೆ . ನಿಜಕ್ಕೂ ಅಲ್ಲಿನ ಸ್ಥಳೀಯರು ನನ್ನನ್ನು ಪಾಕಿಸ್ತಾನಿ ಮುಸ್ಲಿಂ ಎಂದು ಭಿನ್ನ ಭೇದ ಭಾವ ತೋರದೆ ಮನೆ ಮಗಳಂತೆ ನನ್ನನ್ನು ನೋಡಿಕೊಂಡರು . ಅಲ್ಲಿನ ಹಬ್ಬ ಹರಿದಿನಗಳಲ್ಲಿ ಎಲ್ಲಾ ಪೂಜಾ ಕಾರ್ಯಗಳಿಗೂ ನನ್ನನ್ನು ಮನೆಮಗಳಂತೆ ಸೇರಿಸಿಕೊಳ್ಳುತ್ತಿದ್ದರು ಹಾಗೆ ಅವರ ಜೊತೆಗೆ ನಾನು ಸಹ ಲೀಲಾಜಾಲವಾಗಿ ವಿನೋದವಾಗಿ ಕಾಲ ಕಳೆದೆ ಅವರಲ್ಲೊಬ್ಬಳಾಗಿ ನಾನು ಇದ್ದೆ ಹಾಗೆ ನಾನು ಅಲ್ಲಿದ್ದ ಆರು ತಿಂಗಳ ಅವಧಿಯಲ್ಲಿ ಸಾಧ್ಯವಾದಷ್ಟು ಅವರ ಸಂಸ್ಕೃತ ಮತ್ತು ಕನ್ನಡ ಎರಡು ಭಾಷೆಯನ್ನು ಸಹಜವಾಗಿ ಕಲಿತುಕೊಂಡೆನು .
ವಾವ್ ವಾಟ್ ಎ ಮಾರ್ವಲಸ್ ಎಂದು ಅಚ್ಚರಿಗೊಂಡ ಪ್ರಣವ್ .
ಅಷ್ಟೇ ಅಲ್ಲ ಪ್ರಣವ್ ನನ್ನ ಪೂರ್ವಿಕರೂ ಸಹ ಭಾರತೀಯರು . ಗೋಲ್ಕಂಡ ರಾಜ್ಯದ ಪಾಳೆಗಾರ ಮನೆತನದವರು . ಅದು ಹೇಗೋ ನನ್ನ ಮುತ್ತಾತಂದಿರು ಕಾರ್ಯನಿಮಿತ್ತ ಪಂಜಾಬಿಗೆ ಬಂದು ನಂತರ ಭಾರತ ಪಾಕಿಸ್ತಾನ ವಿಭಜನೆಗೊಂಡ ಬಳಿಕ ನಮ್ಮ ತಾತನೆ ಸ್ವ
ಇಚ್ಚೆಯಿಂದ ಇಂದಿನ ಪಾಕಿಸ್ತಾನಕ್ಕೆ ಸೇರಿದರಂತೆ ಎಂದು ಒಂದು ಸಣ್ಣ ಸೂಕ್ಷ್ಮವನ್ನು ಹೇಳುತ್ತಾ , ಹಾಗಾಗಿ ನನ್ನಲ್ಲು ಭಾರತೀಯತೆಯ ಸಂಸ್ಕೃತಿ ನನ್ನ ರಕ್ತದಲ್ಲೇ ಸಮ್ಮಿಳಿತಗೊಂಡಿದೆ ಎನ್ನುತ್ತಾಳೆ .
ನನ್ನ ವಿದ್ಯಾಭ್ಯಾಸ ಮುಗಿದ ಬಳಿಕ ನನ್ನ ಮನೆಯಲ್ಲಿ ಅಂದರೆ ಪಾಕಿಸ್ತಾನದಲ್ಲಿ ಇದ್ದುಕೊಂಡೇ ಗೂಗಲ್ ಸಹಕಾರದಿಂದ ಕನ್ನಡ ಮತ್ತು ಸಂಸ್ಕೃತ ಈ ಎರಡು ಭಾಷೆಯನ್ನು ಹೆಚ್ಚಿನ ಮಟ್ಟದಲ್ಲಿ ಅಭ್ಯಾಸ ಮಾಡಿದೆ . ಇನ್ನೂ ಒಂದು ವಿಚಾರ ಪ್ರಣವ್ . ಈ ಮತ್ತೂರ ಗ್ರಾಮಸ್ಥರು ಜನವರಿ ತಿಂಗಳಲ್ಲಿ ಅನ್ಸುತ್ತೆ ಕಣದಲ್ಲಿ ಭತ್ತದ ರಾಶಿಯನ್ನು ಹಾಕಿ ಪೂಜೆ ಮಾಡುವ ಸುಗ್ಗಿ ಹಬ್ಬಕ್ಕೆ ನನ್ನನ್ನು ಕರೆದುಕೊಂಡು ಹೋದಾಗ ನಾನು ಕನ್ನಡದ ಸಿನಿಮಾ ರವಿಚಂದ್ರನ್ ಅವರ ಪುಟ್ನಂಜ ಚಿತ್ರದ ಹಾಡು ನಮ್ಮಮ್ಮ ನಮ್ಮಮ್ಮ ಭೂಮಿ ತಾಯಮ್ಮ ಹಾಡನ್ನು ಹಾಡಿ ಎಲ್ಲರನ್ನು ರಂಜಿಸಿದ್ದೆ ಎಂದು ತನ್ನ ಅಂದಿನ ಹಳೆ ನೆನಪನ್ನು ಇಲ್ಲಿ ಮತ್ತೆ ಮೆಲುಕು ಹಾಕುತ್ತಾಳೆ .
ಎಲ್ಲವನ್ನು ಕೇಳಿಯಾದ ಬಳಿಕ ಪ್ರಣವ್ ಖುಷಿಯಿಂದ ಅರರೆ ಅರರೆ ನನ್ನ ಅತ್ತೆ ಮಗಳೇ ಎನ್ನುತ್ತಾ ಅವಳನ್ನು ಹಾಗೆ ಎತ್ತಿಕೊಂಡು ಎರಡು ಮೂರು ಬಾರಿ ಹಾಗೆ ಸುತ್ತಲೂ ತಿರುಗಿಸುತ್ತಾನೆ .
ನಾಚಿಕೊಂಡು ನೀರಾದ ಜೋಧಾ ಅಕ್ಬರ್ ಏನ್ ಮಾಡ್ತಾ ಇದ್ದೀರಿ ಎನ್ನುತ್ತಾಳೆ ಹುಸಿ ಕೋಪದಿಂದ ಎಂಬಂತೆ .
ಸಾರಿ ಸಾರಿ ರಿ ಮೌಲ್ವಿಯ ಮಗಳೇ ಮೌಲ್ಯವನು ತಿಳಿದವಳೆ ನನಗರಿವಾಗಲಿಲ್ಲ ಏನೋ ಸಂತಸ ಏನೋ ಹೀಗೆಲ್ಲಾ ಮಾಡಿಸಿತು ನೋಡಿ ಎನ್ನುತ್ತಾ ಆಕೆಗೆ ಕಣ್ಣು ಮಿಟುಕಿಸುತ್ತಾನೆ .
ಜೋಧಾ ಅಕ್ಬರ್ ಆಲ್ರೈಟ್ ಏನೋ ನನ್ನನ್ನು ಮದುವೆಯಾಗುವ ಹುಡುಗ ಶಾಸ್ತ್ರೀಯ ಮಗ ಅಂದು ಕೊಂಡು ಸುಮ್ಮನೆ ಬಿಟ್ಟಿದ್ದೇನೆ . ಬೇರೆ ಯಾರಾದರೂ ಆಗಿದ್ದಿದ್ದರೆ ಎಂದು ಕಿಚಾಯಿಸುತ್ತಾ ಏನೋ ಈ ತನು ಮನದ ಒಡೆಯ ಎಂದು ಸುಮ್ಮನಾಗುತ್ತಿದ್ದೇನೆ ಎನ್ನುತ್ತಾಳೆ .
ಅಷ್ಟರಲ್ಲಿ ಜೋದಾಳನ್ನು ಹಿಡಿಯಲು ಯತ್ನಿಸುತ್ತಾನೆ ಹಾಗೆ ಅವನ ಕೈಗೆ ಸಿಗದಂತೆ ಆಕೆ ಓಡುತ್ತಾಳೆ . ಪ್ರಣವ್ ಅವಳನ್ನು ಹಿಡಿಯಲು ಅವಳನ್ನು ಹಿಂಬಾಲಿಸಿ ಓಡುತ್ತಾನೆ . ಹಾಗೂ ಅವಳನ್ನು ಹಿಡಿಯುತ್ತಾನೆ .
ಹಾಡು : ಮೌಲ್ವಿಯ ಮಗಳೇ
ಗಂಡು : ಮೌಲ್ವಿಯ ಮಗಳೇ ಮೌಲ್ವಿಯ ಮಗಳೇ
ಮೌಲ್ಯವನು ತಿಳಿದವಳೇ
ಹೆಣ್ಣು : ಅರ್ಚಕನ ಮಗನೇ ಅರ್ಚಕನ ಮಗನೆ
ಶಾಸ್ತ್ರಪುರಾಣ ತಿಳಿದವನೇ
ಗಂಡು : ಬೂರ್ಖವನು ತೆರೆ ನಿನ್ನಂದವನು ತೋರಲು
ಹೆಣ್ಣು : ಸಂಪ್ರದಾಯಗಳನು ಮುರಿ ಸ್ವಚ್ಛಂದವಾಗಿ ಬದುಕಲು
ಇಬ್ಬರು: ನಾವಿಬ್ಬರೊಂದಾಗಿ ಸಂಪ್ರದಾಯದ ಸಂಕೋಲೆ ತೊರೆದು ಸ್ವಚ್ಛಂದವಾಗಿ ಬಾಳೋಣ ಬಾರ ಬಾ ಬಾರ
ಗಂಡು: ಹಿರಿಯರು ಮಾಡಿದ ಗೊಡ್ಡು ಸಂಪ್ರದಾಯಗಳು
ಒಂದಾಗಿ ಬದುಕಲು ಬಿಡದ ಶಕುನಿಗಳು
ಗಂಡು: ಸೃಷ್ಟಿಕರ್ತನ ದೃಷ್ಟಿಯಲ್ಲಿ ಹೆಣ್ಣು ಗಂಡೆಂಬ ಜಾತಿಗಳೆರಡು
ಹೆಣ್ಣು : ಮನುಜನ ಸೃಷ್ಟಿಯಲ್ಲಿ ಜಾತಿ ಸಂಪ್ರದಾಯದ ಬೇಲಿಗಳೊ ನೂರಾರು ಗಂಡು : ದೇವನ ಸೃಷ್ಟಿಯಲ್ಲಿ ಭುವಿಯೊಂದೆ
ಹೆಣ್ಣು :ಮನುಜನ ದೃಷ್ಟಿಯಲ್ಲಿ ಸೀಮೆಯ ಗಡಿಗಳು ನೂರಾರು
ಗಂಡು :ಸೃಷ್ಟಿ ಒಂದೇ ದೃಷ್ಟಿ ಬೇರೆ ಯಾಕೆ ಹೀಗೆ
ಮೌಲ್ವಿಯ ಮಗಳೇ ಮೌಲ್ವಿಯ ಮಗಳೇ
ಮೌಲ್ಯವನು ತಿಳಿದವಳೆ
ಹೆಣ್ಣು: ಮಾನವ ಜಾತಿಯೊಂದೆ ಕುಡಿಯುವ ನೀರೊಂದೆ
ಹರಿಯುವ ರಕ್ತವೊಂದೆ ಆದರೂ ಧರ್ಮ ಬೇರೆ
ಶಾಸ್ತ್ರ ಬೇರೆ ಸಂಪ್ರದಾಯ ಬೇರೆ ಯಾಕೆ ಹೀಗೆ
ವೇದವನ್ನರಿತವನೆ ಶಾಸ್ತ್ರ ತಿಳಿದವನೆ ಶಾಸ್ತ್ರೀಯ ಮಗನೇ
ಗಂಡು: ಮೌಲ್ವಿಯ ಮಗಳೇ ಮೌಲ್ವಿಯ ಮಗಳೇ
ಮನವನು ಕದ್ದವಳೆ ನಿನ್ನಂದಕೆ ನಾನು ಸೋತೆ
ಹೆಣ್ಣು: ಅರ್ಚಕನ ಮಗನೇ ಅರ್ಚಕನ ಮಗನೆ
ಅಂದದ ಗುಣದವನೆ ನಿನ್ನಂದಕ್ಕೆ ನಾನು ಸೋತೆ
ಇಬ್ಬರು : ಗೊಡ್ಡು ಶಾಸ್ತ್ರ ಸಂಪ್ರದಾಯ ಜಾತಿ ನೀತಿಗೆ ಎಳ್ಳು
ನೀರು ಬಿಟ್ಟು ಮಾನವ ಜಾತಿ ತಾನೊಂದೇ ವಲಂ
ಎಂಬ ನೀತಿಯನು ಸರ್ವರಿಗೂ ಸಾರೋಣ ಬಾರ
ಬಾರ ಬಾಬಾರ.
( ಸಾಹಿತ್ಯ : skin's )
ಹೀಗೆ ಇರುವಾಗ ನೆನ್ನೆಯ ದಿನದಂದು ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಬಂಗಾರದ ಪದಕ ವಿಜೇತಳಾದವಳು ಇದೆ ಪಾಕಿಸ್ತಾನದ ಹುಡುಗಿ ಎಂದು ಯಾರೋ ಸಾರ್ವಜನಿಕ ವ್ಯಕ್ತಿಯೊಬ್ಬ ಗುರುತಿಸಿ ಇವರಿಬ್ಬರಿಗೂ ಗೊತ್ತಾಗದಂತೆ ಇವರಿಬ್ಬರ ತುಂಟಾಟವನ್ನು ತನ್ನ ಮೊಬೈಲ್ ಕ್ಯಾಮರದಲ್ಲಿ ಚಿತ್ರಿಸಿಕೊಳ್ಳುತ್ತಾನೆ .
ಪಾರ್ಕ್ ನಲ್ಲಿನ ಹುಲ್ಲುಗಾವಲಿನಲ್ಲಿ ಪ್ರಣವ್ ತೊಡೆ ಮೇಲೆ ಜೋಧಾ ಅಕ್ಬರ್ ಮಲಗಿದ್ದಾಳೆ . ಪ್ರಣವ್ ಆಕೆಯ ಜಡೆಯನ್ನು ತನ್ನ ಮುಖಕ್ಕೆ ಬ್ರಷ್ ರೀತಿ ಮಾಡಿಕೊಂಡು ಉಜ್ಜಿಕೊಳ್ಳುತ್ತಿದ್ದಾನೆ ಹಾಗೆ ಏನೇನು ಮಾತುಕತೆಯಲ್ಲಿ ಮುಳುಗಿದ್ದಾರೆ . ಅಂದರೆ ತಮ್ಮ ಮದುವೆಯ ಬಗ್ಗೆ ಅವರಿಬ್ಬರ ಸ್ಥಾನಮಾನ ತಂದೆಯ ಸ್ಥಾನಮಾನ ದೇಶ ಜಾತಿ ಧರ್ಮ ಬೇರೆ ಬೇರೆ . ನಾವಿಬ್ಬರು ಮದುವೆ ಆಗಿದ್ದೆ ಆದಲ್ಲಿ ನಮ್ಮ ಕುಟುಂಬ ದೇಶ ಜನ ಹೇಗೆ ಸ್ವೀಕರಿಸಿಯಾರು ಹೀಗೆ ಪರ ವಿರೋಧ ಎರಡು ವಿಚಾರ ಮಾತಾಡಿ ಏನೋ ಚಿಂತಿಸಿ ಒಂದು ತೀರ್ಮಾನಕ್ಕೆ ಬರುತ್ತಾರೆ . ಏನೇ ಆಗಲಿ ನಾವು ಮದುವೆಯಾಗೋಣ ನಮ್ಮನ್ನು ಈ ಸಮಾಜ ಸ್ವೀಕರಿಸಿದರೆ ಸಂತೋಷ ಇಲ್ಲ ಸಮಾಜ ದೇಶ ಜನ ಎಲ್ಲವೂ ನಮ್ಮ ವಿರುದ್ಧವಾದರೆ ಚಿಂತೆ ಇಲ್ಲ. ಎಲ್ಲವನ್ನು ಎಲ್ಲರನ್ನು ಧಿಕ್ಕರಿಸಿ ಎಲ್ಲವನ್ನೂ ಬಹಿಷ್ಕರಿಸಿ ನಾವಿಬ್ಬರೂ ಎರಡು ದೇಶವನ್ನು ಬಿಟ್ಟು ಯಾವುದಾದರೂ ಮೂರನೇ ದೇಶದಲ್ಲಿ ನಾವು ನಮ್ಮ ಬಾಳ್ವೆಯನ್ನು ಕಂಡುಕೊಳ್ಳೋಣ ಎಂಬ ತೀರ್ಮಾನಕ್ಕೆ ಇಬ್ಬರು ಬದ್ದರೆಂದು ತಮ್ಮ ತಮ್ಮಲ್ಲಿ ಮಾತಾಡಿಕೊಳ್ಳುತ್ತಾರೆ ಹಾಗೂ ಪರಸ್ಪರ ಸಿಹಿ ಮುತ್ತು ಕೊಟ್ಟು ಕೊಳ್ಳುತ್ತಾರೆ.
Writer
0 Followers
0 Following