ಬೆಳಿಗ್ಗೆ ಸುಮಾರು ಏನಿಲ್ಲವೆಂದರೂ 7.30 ಇಂದ 8.00ರ ಸಮಯ ಆಗಿದೆ . ಪ್ರಣವ್ ಈ ಹೊತ್ತಿನಲ್ಲಿ ತನ್ನ ಲಾಡ್ಜ್ ನಲ್ಲಿರುವ ಬಿಸಿನೀರಿನ ತೊಟ್ಟಿಯಲ್ಲಿ ಕುಳಿತು ನಿರಾಟವಾಡುತ್ತಿದ್ದಾನೆ . ಈ ಸಂದರ್ಭದಲ್ಲಿ ಇವನ ಮೊಬೈಲ್ ರಿಂಗಣಿಸಿತು . ಅದು ತನ್ನ ಪ್ರೇಮದೇವತೆಯದೆ ಎಂದು ತಿಳಿಯುತ್ತದೆ . ಹೇಗೆಂದರೆ ಅವಳು ಈ ಹಿಂದೆ ತನಗೆ ಮಾಡಿದ್ದ ಕರೆಗಳೆಲ್ಲ ಮೊಬೈಲಲ್ಲಿ ರೆಕಾರ್ಡ್ ಆಗಿದ್ದು ಅದರಲ್ಲಿ ತನಗಿಷ್ಟವಾದ ಅವಳ ದ್ವನಿಯನ್ನ ಅವಳ ಕರೆಯನ್ನೆ ರಿಂಗ್ ಟೋನ್ ಆಗಿಸಿಕೊಂಡಿರುತ್ತಾನೆ . ಹಾಗಾಗಿ ಅವಳು ಫೋನ್ ಮಾಡಿದಾಗ ಇವನ ಮೊಬೈಲ್ ಇಂದ ಹಲೋ ಪ್ರಣವ್ ಅಮ್ ಯುವರ್ಸ್ ಜೋಧಾ ಅಕ್ಬರ್ ಫ್ರಮ್ ಪಾಕಿಸ್ತಾನ್ ಎಂಬ ಬೆಳದಿಂಗಳ ಬಾಲೆಯಂತ ದ್ವನಿಮದುರವಾಗಿ ಕೇಳಿಸುತ್ತೆ . ಹಾಗು ಅವಳ ಫೋಟೋ ಕೂಡ ಮೊಬೈಲ್ ಸ್ಕ್ರೀನ್ ಅಲ್ಲಿ ಪ್ಲೇ ಆಗುವಂತೆ ಸೆಟ್ ಮಾಡಿದ್ದಾನೆ . ಹಾಗಾಗಿ ಇವಳ ಕರೆಯೆ ಎಂದು ತಿಳಿದು ಮೊಬೈಲ್ ಕಾಲ್ ಪಿಕ್ ಮಾಡುತ್ತಾನೆ .
ಹಾಯ್ ಪ್ರಣವ್ ಎಲ್ಲಿದ್ದೀರಿ ಎಂದು ಹಿಂದಿಯಲ್ಲಿ ಮಾತಾಡುತ್ತಾಳೆ . ಆಗ ಪ್ರಣವ್ ಆಮ್ ಇನ್ ಲಂಡನ್ಸ್ ಥಾಮ್ಸನ್ ಲಾಡ್ಜ್ ಅಲ್ಲಿ ಇರುವುದಾಗಿ ಹೇಳುತ್ತಾನೆ . ಕೂಡಲೇ ಖುಷಿಯಿಂದ ಗುಡ್ ವೇರಿ ಗುಡ್ ವೀ ಆಲ್ಸೋ ಸ್ಟೈಡ್ ಇನ್ ಸೇಮ್ ಹೋಟೆಲ್ ಎನ್ನುತ್ತಾಳೆ .
ರಿಯಲ್ಲಿ ವಾಟ್ ಎ ಸ್ವೀಟ್ . ಗುಡ್ ಆಗೋದೆಲ್ಲ ಒಳ್ಳೆದಕ್ಕೇ ಎನ್ನುತ್ತಾ ಸರಿ ನಾನು ಈ ಹೋಟೆಲ್ ಎಂಟ್ರೆನ್ಸ್ ಅಲ್ಲಿರುವ ಉದ್ಯಾನದಲ್ಲಿ ನಿಮಗಾಗಿ ಕಾಯುತ್ತೇನೆ ಈ ಕೂಡಲೇ ಬನ್ನಿ ಇಬ್ಬರು ಮುಖಾಮುಖಿ ನೋಡುತ್ತಾ ಮಾತಾಡುವ ಎನ್ನುತ್ತಾನೆ .
ಅದಕ್ಕೆ ಪ್ರತಿಯಾಗಿ ರಿ ಪ್ರಣವ್ ಈಗ ನಾನು ಅಲ್ಲಿಗೆಲ್ಲ ಬರೋದಿಕ್ಕೆ ಆಗೋಲ್ಲ ನಮ್ಮ ಪರಿವಾರದ ಕಣ್ತಪ್ಪಿಸಿ ಎಂದು ಮುಂದೆ ಮಾತಾಡಲಾಗದೆ ತಡಬಡಿಸುತ್ತಾಳೆ.
ಆಗ ಸಿಟ್ಟಿನಿಂದ ಪ್ರಣವ್ ಅಲ್ರೀ ನೀವು ನಿಜಕ್ಕು ನನ್ನನ್ನು ಇಸ್ಟಪಟ್ಟೀದ್ದಿರಾ ಹೇಳಿಬಿಡಿ ಎಂದು ಗದರುತ್ತಾನೆ .
ಹೌದು ರಿ ಈ ಲವ್ ಯೂ ಟೂ ಮಚ್ ಎನ್ನುತ್ತಾಳೆ .
ಏನು ಹೌ ಮಚ್ ಎಂದು ಆಕೆಗೆ ಪ್ರಶ್ನಿಸುತ್ತಾನೆ .
ಡೊಂಟ್ ಟೇಕ್ ಇಟ್ ಸಿಲ್ಲಿ ಇನ್ ದಿಸ್ ಮ್ಯಾಟರ್ ಎಂದು ಗುಡುಗುತ್ತಾಳೆ .
ಅಷ್ಟೇ ಗತ್ತಿನಿಂದ ಬನ್ನಿ ಮತ್ತೆ ನಾನು ನಿಮಗಾಗಿ ಸಾವಿರಾರು ಮೈಲಿ ದೂರದಿಂದ ಏನೆಲ್ಲ ಕಾರ್ಯ ಬದಿಗೊತ್ತಿ ಬಂದಿಲ್ಲ ಹೇಳಿ ಅಂತಹದ್ದರಲ್ಲಿ ನೀವು ನನಗಾಗಿ ಜಸ್ಟ್ ನೂರು ಹೆಜ್ಜೆ ಅವರ ಕಣ್ತಪ್ಪಿಸಿ ಬರಲು ಆಗೊಲ್ಲವಾ . ಇಲ್ಲಿ ನೋಡಿ ನನಗೆ ಗೊತ್ತಿಲ್ಲ ಅದೇನು ಮಾಡುವಿರಾ ನನಗಾಗಿ ಇದೆ ಹೋಟೆಲ್ ಮುಂದಿರೋ ಉದ್ಯಾನಕ್ಕೆ ಈ ಕೂಡಲೇ ನೀವು ಬರುತ್ತೀರಾ ಅಷ್ಟೇ ಎನ್ನುತ್ತಾ ಅವಳ ಯಾವ ಮಾತಿಗೂ ಕಾಯದೆ ಫೋನ್ ಕಾಲ್ ಕಟ್ ಮಾಡಿ ಟವೆಲ್ ಇಂದ ಹಸಿ ಮೈ ಒರೆಸಿಕೊಂಡು ಬೇರೆ ಬಟ್ಟೆ ಉಟ್ಟು ತಲೆ ಬಾಚಿಕೊಂಡು ಸೀದಾ ಉದ್ಯಾನವನಕ್ಕೆ ಹೋಗುತ್ತಾನೆ .
ಇತ್ತ ಜೋದಾಕ್ಬರ್ ಛೇ ಛೇ ಎನ್ನುತ್ತಾ ತನ್ನ ಕೈ ಕೈ ಹಿಸುಕಿಕೊಳ್ಳುತ್ತ ನಾನು ಈಗ ಇವರಿಗೆ ಫೋನ್ ಮಾಡಿದ್ದೆ ತಪ್ಪಾಯ್ತು ಅನ್ಸುತ್ತೆ . ಈಗ ಹೇಗೆ ನನ್ನ ಪರಿವಾರ ಕಣ್ ತಪ್ಪಿಸಿ ಅಪರಿಚಿತ ಸ್ಥಳದಲ್ಲಿ ಅದು ಒಂದು ಮುಸ್ಲಿಂ ಹೆಣ್ಣು 5-10 ನಿಮಿಷ ಒಂಟಿಯಾಗಿ ಹೋಗುವುದು ಅಂದ್ರೆ ತಮಾಷೆಯ ಹೆ ಅಲ್ಲ ಈ ಹೆಣ್ಣಾಗಿ ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಲು ದೈರ್ಯಕೊಡುತ್ತಿಯ ಎಲ್ಲ ನಿನ್ನ ಕೃಪೆ ಎನ್ನುತ್ತಾ , ಒಮ್ಮೆ ತನ್ನ ರೂಂ ಕಡೆ ಹೆಜ್ಜೆ ಹಾಕುತ್ತಾ ರೂಮ್ ಅಲ್ಲಿರೋ ತಂದೆ ತಾಯಿ ಹಾಗು ಹಿರಿಯರಿಗೆ ಏನೋ ಸಬೂಬು ಹೇಳಿ 10-15 ನಿಮಿಷ ಮತ್ತೆ ಬೇಗ ಬರುತ್ತೇನೆ ಎಂದು ಹೇಳಿ ಅವರಿಂದ ಒಪ್ಪಿಗೆ ಪಡೆದು ಕೂಡಲೇ ಉದ್ಯಾನವನದತ್ತ ದೌಡಾಯಿಸಿದ್ದಾಳೆ . ಇವಳ ತಂದೆ ತಾಯಿ ಇತರರು ಯಾವುದೋ ಮಾತುಗಾರಿಕೆಯಲ್ಲಿ ತೊಡಗಿದ್ದರು ಹಾಗಾಗಿ ಇವಳ ಬಗ್ಗೆ ಗಮನ ಹರಿಸದೆ ಒಪ್ಪಿದರು ಅನ್ನಿಸುತ್ತೆ .
ಇಷ್ಟರಲ್ಲಾಗಲೇ ಪ್ರಣವ್ ಉದ್ಯಾನವನಕ್ಕೆ ಬಂದು ಜೋದಾಳ ಬರುವಿಕೆಯನ್ನೆ ಕಾಯುತ್ತಾ ಉದ್ಯಾನದ ಸುಂದರವಾದ ಹೂಗಳನ್ನು ಹಸಿರು ಹುಲ್ಲುಹಾಸು ಸಣ್ಣ ನೀರಿನ ತೊರೆಗಳು ಲೋಚಾ ಗುಟ್ಟುವ ಬಾತುಕೋಳಿ ಇವನ್ನೆಲ್ಲ ನೋಡುತ್ತಾ ಆಗಾಗ್ಗೆ ವಾಚ್ ಇಂದ ಟೈಂ ನೋಡಿ ಛೇ ಇನ್ನು ಬರಲಿಲ್ಲ ಎಂದು ಕೊಳ್ಳುತ್ತಾ ಇದ್ದಾನೆ . ಹಾಗೆ ಉದ್ಯಾನವನದ ಗೇಟ್ ಬಳಿ ಒಬ್ಬಳೇ ಹುಡುಗಿ ಬರುತ್ತಿರುವುದನ್ನು ನೋಡಿ ಏಷ್ಯಾ ಹುಡುಗಿ ಎಂದು ಗುರುತಿಸಿ ಇವಳೇ ಪಾಕ್ ಬೆಡಗಿ ಎಂದುಕೊಳ್ಳುತ್ತಾನೆ . ಅಷ್ಟರಲ್ಲಿ ಆಕೆ ಇವನ ಬಳಿಗೆ ಬಂದು ನಿಂತಳು ಮುಗುಳು ನಗೆ ಬೀರುತ್ತಾ .
ತೀರಾ ಹತ್ತಿರಕ್ಕೆ ಬಂದು ಅದರಲ್ಲೂ ಎದುರು ಬದುರು ನಿಂತಾಗ ಇಬ್ಬರಲ್ಲೂ ಈ ಏನು ಹೇಗೆ ಮಾತಾಡಬೇಕು ಅರಿಯದೆ ಹಾಗೆ ನಿಂತರು ಏನು ಮಾತಾಡದೆ . ಏಕೆಂದರೆ ಇಬ್ಬರು ಮುಖಾಮುಖಿ ಆಗಿರುವುದು ಇದೆ ಮೊದಲ ಬಾರಿ ಹಿಂದೆ ಇವರು ಏಷ್ಟೋ ಬಾರಿ ಮೊಬೈಲ್ ಅಲ್ಲಿ ನೆಟ್ ಇಂದ ನೇರವಾಗಿ ಟಿವಿ ರಿಲೆ ತರ ಲೈವ್ ಆಗಿ ಮಾತಾಡಿದರು ಈಗ ಕ್ಷಣ ಮೌನ ಆವರಿಸಿದೆ ಅದು ಎಂತವರಿಗಾದರು ಸಹಜ .
ಇಬ್ಬರು ನಗುತ್ತ ಮೊದಲು ಎಂಬಂತೆ ಜೋದಾಕ್ಬರ್ ಕುರಿತು ಹಿಂದೆ ಜೋದಾ ಹಿಂದೆ ತನಗಾಗಿ ಬರೆದ ಶಾಯರಿ ಹಾಡುತ್ತ ಶುರುಮಾಡುತ್ತಾನೆ .
ನೀ ನನಗೆ ಮಾಮರದ ಚಿಗುರಾಗ ಬಯಸುವುದಾದರೆ
ನಾ ನಿನಗೆ ಮಾಮಾರದ ಕೋಗಿಲೆಯಂತಾಗಿ ಮುದದಿ
ನಿನ್ನಂದವೆಂಬ ಮಾವಿನ ತಳಿರನುಂಡು ಈಗಲೇ ನಾ
ಹಾಡುತ ನಿನ್ನ ತನುಮನದಿ ನಾ ನೆಲೆಸಲೇನು ?
ಈ ಶಾಯರಿ ಕೇಳಿ ಪ್ರಸನ್ನಳಾದ ಜೋದಾಕ್ವರ್ ತನಗೆ ಹಿಂದೆ ಬರೆದ ಪ್ರಣವ್ನ ಈ ಶಾಯಿರನ್ನು ಹಾಡುತ್ತಾಳೆ .
ಹಾಗೆ ನೋಡುತ್ತೀರೆ ನಿನ್ನ ಒಲುಮೆ ಮೂಡಿತು
ನೋಟಕೆ ನೋಟ ಬೆಸೆದು ಅನುರಾಗದ ಆಲೆ
ರಾಗವಾಗಿ ಹೊನಲ ರಸಧಾರೆ ಮಾಧುರ್ಯದಿ
ತೊಟ್ಟಿಕ್ಕುತಾ ಹನಿಹನಿಯಾಗಿ ಹರಿಯಿತು ಎಲ್ಲೆಲ್ಲು
ಹೀಗೆ ಇಬ್ಬರು ಮುಖಾಮುಖಿ ನೋಡುತ್ತಾ ಪರಸ್ಪರ ತಮ್ಮ ಶಾಯರಿ ವಿನಿಮಯ ಮಾಡಿಕೊಂಡ ಬಳಿಕ , ಪ್ರಣವ್ ಮುಂದುವರೆದು ನೋಡಿ ಅಂತು ಇಂತು ನೇರಾನೇರ ನೋಡುವ ಮುಟ್ಟುವ ಈ ಕಾಲ ಇಷ್ಟು ಬೇಗ ಬರುತ್ತೇ ಅಂದು ಕೊಂಡಿರಲಿಲ್ಲ ಅಲ್ಲವೇ ನೋಡಿ ಆ ಕಾಲವು ಸನ್ನಿಹಿತವಾಗಿದೆ ಅಲ್ಲವೇ ಅದು ಭಾರತವು ಅಲ್ಲದ ಪಾಕಿಸ್ತಾನವು ಅಲ್ಲದ ಮತ್ತೊಂದು ದೇಶದಲ್ಲಿ ಅದೆ ರೋಚಕವಾಗಿದೆ ಏನಂತೀರಿ ಜೋದಾಕ್ಬಾರ್ ಮೇಡಂ ಅವರೇ ಎನ್ನುತ್ತಾ ಮತ್ತೊಮ್ಮೆ ಅವಳನ್ನು ಮುಟ್ಟುವ ನೆಪದಲ್ಲಿ ಜಿಗುಟುತ್ತ ಅಂದ ಹಾಗೆ ಹೇಗಿದ್ದೀರಿ ಎಂದು ಕೇಳುತ್ತಾನೆ .
ಹೌದು ಹೌದು ಏನು ಅಚ್ಚರಿ ನೋಡಿ ವಿಧಿಲಿಖಿತ ಎಂದರೆ ಇದೆ ಏನೋ ನೋಡಿ f ಬುಕ್ ಮೇಲ್ ಚಾಟಿಂಗ್ ಅಲ್ಲೇ ನಮ್ಮ ನಿಮ್ಮ ದರ್ಶನ ಆದರೆ ಇಂದು ಈ ಪ್ರತ್ಯಕ್ಷ ದರ್ಶನ ನಿಜಕ್ಕು ರೋಮಾಂಚನ . ಅಂದ ಹಾಗೆ ನೀವು ಹೇಗಿದ್ದೀರಿ ಪ್ರಣವ್ ಎನ್ನುತ್ತಾಳೆ .
ನೋಡಿ ನಿಮ್ಮ ಚಿಂತೆಯಲ್ಲಿ ಈ ಬಡ ದೇಹ ಹೇಗೆ ಬಡಕಲಾಗಿದೆ ನನ್ನ ನೋಡಿದ ಮೇಲೂ ನಿಮಗೆ ಏನು ಅನ್ನಿಸುತಿಲ್ಲವೆ ಎಂದು ಹೇಳಿದ .
ಯು ಯು , ನಾಟಿ ಬಾಯ್ ಎನ್ನುತ್ತಾ ಅವನ ಬುಜಕ್ಕೆ ಹಾಗೆ ಹೊಡೆಯುತ್ತಾಳೆ , ಅಂದ ಹಾಗೆ ಐದು ನಿಮಿಷ ಅನುಮತಿ ಪಡೆದು ಬಂದಿರುವುದಾಗಿ ತೀರಾ ಲೇಟ್ ಆದರೆ ಗಾಬರಿಗೆ ಬಿದ್ದು ನಮ್ಮವರು ಯಾರಾದ್ರೂ ಹುಡುಕಿಕೊಂಡು ಬಂದರೆ ಕಷ್ಟ ನಾ ಬಂದು ಈಗ ಇಪ್ಪತ್ತು ನಿಮಿಷ ಮೇಲಾಗಿ ಹೋಯಿತು ಎಂದು ಇಲ್ಲಿಂದ ಹೋಗಲು ಅನುಮತಿ ನೀಡಿ ಎನ್ನುತ್ತಾ ಹೊರಡಲು ಸಿದ್ಧಳಾಗುತ್ತಾಳೆ .
ಓಹ್ ! ಹಾಗೆ ಬಂದು ಹಾಗೆ ಹೋದ್ರೆ ಏನು ? ಅಂದ ಹಾಗೆ ಏನು ಇಲ್ಲವಾ ಎನ್ನುತ್ತಾ ಕೆನ್ನೆ ತೋರಿಸುತ್ತಾನೆ .
ಆಹಾ ! ಅದೆಲ್ಲಾ ಶಾದಿ ಕೆ ಬಾದ್ ಎನ್ನುತ್ತಾ ಹಾಗೆ ತುಟಿಗೆ ಕೈ ಅಡ್ಡ ಹಿಡಿದು ಸದ್ಯಕ್ಕೆ ಇಷ್ಟನ್ನು ಹಿಡಿದಿಟ್ಟು ಕೊಂಡಿರು ಎನ್ನುತ್ತಾ ಅನತಿ ದೂರದಿಂದ ಹಾಗೆ ಪ್ಲೈನ್ ಕಿಸ್ ಕೊಟ್ಟು ಅಂದ ಹಾಗೆ ನಾಳೆ ಬೆಳಿಗ್ಗೆ ಹತ್ತು ಘಂಟೆಗೆ ಆಕ್ಸ್ಫರ್ಡ್ ಯೂನಿವರ್ಸಿಟಿ ಕಾನ್ಫರೆನ್ಸ್ ಹಾಲ್ ಫಂಕ್ಷನ್ ಮರೆಯಬೇಡ ಎನ್ನುತ್ತಾ ಕಣ್ಣು ಹೊಡೆದು ತಾನು ಬಂದ ಮಾರ್ಗದಲ್ಲೇ ಅವಸರವಸರವಾಗಿ ನಡೆದು ಹೋಗಿಯೇ ಬಿಟ್ಟಳು .
ಪ್ರಣವ್ ಮಾತ್ರ ಹಾಗೆ ನಿಂತ ಬಂಗಿಯಲ್ಲೆ ಆಕೆ ನೀಡಿದ
ಪ್ಲೈನ್ ಕಿಸ್ ಹಾಗು ಕಣ್ಣು ಹೊಡೆದುದಕ್ಕೆ ಹಾಗೆ ಅ ಕಿಸ್ ತನ್ನ ಎದೆಗವಚಿಕೊಂಡು ಅದೆ ತನ್ನ ಪಾಲಿನ ಸವಿ ಎಂಬಂತೆ ಅನುಭವಿಸುತ್ತಾ ಹೋದ ದಾರೀಲಿ ಆಕೆ ಕಣ್ಮರೆ ಆಗುವವರೆಗೂ ಹಾಗೆ ದಿಟ್ಟಿಸಿ ಆಕೆಯ ದೇಹದ ಹಿಂಬಾಗ ನೋಡುತ್ತಾ ನಿಂತ .
ಆಧ್ಯಾಯ ೫ ಇಲ್ಲಿಗೆ ಮುಕ್ತಾಯ
ಹಕ್ಕುಗಳು ಕಾಯ್ದಿರಿಸಿದೆ
Writer
0 Followers
0 Following