ಪ್ರಣವ್ ತನ್ನ ಕೊಠಡಿಯಲ್ಲಿನ ಮಂಚದ ಮೇಲೆ ಕುಳಿತುಕೊಂಡು ಕೈಯಲ್ಲಿ ಆಯೋದ್ಯಾದಲ್ಲಿ ಅಂದು ಆ ಹುಡುಗಿಯು ಎಸೆದಿದ್ದ ಕರವಸ್ತ್ರ ಹಿಡಿದುಕೊಂಡಿದ್ದಾನೆ ಆ ಕೂಡಲೆ ಅವನಿಗೆ ತನ್ನ ಅಯೋಧ್ಯಾ ಪ್ರವಾಸದಲ್ಲಿನ ಘಟನೆಗಳ ಚಿತ್ರಣಗಳ ಸರಮಾಲೆ ಇವನ ಕಣ್ಮುಂದೆ ಹಾದು ಹೋಗುತ್ತದೆ .ಬಳಿಕ ಮುಗುಳುನಗೆ ಬೀರುತ್ತಾ , ಅ ಹುಡುಗಿ ನೀಡಿದ ಅ ಕರವಸ್ತ್ರ ಬಿಚ್ಚುತ್ತಾನೆ . ಅದರಲ್ಲಿ ಆಕೆ ಬಾಲ್ ಪೆನ್ನಿನಲ್ಲಿ ಒಂದು ಶಾಯಿರಿ ಹಾಗು ವಿಳಾಸವನ್ನು ಹಿಂದಿಯಲ್ಲಿ ಬರೆದಿರುತ್ತಾಳೆ.
ಆಕೆ ಬರೆದ ಷಾಯಿರಿ ಕನ್ನಡಾನುವಾದ ಹೀಗಿದೆ ,
ಧರೆಯೊಳೆಲ್ಲೆಲ್ಲು ಕಾಣಸಿಗದ ಮುತ್ತು ಮಾಣಿಕ್ಯವೆ
ಆಗಸದೊಳೆಲ್ಲೆಲ್ಲು ಗೋಚರಿಸದ ದ್ರುವ ನಕ್ಷತ್ರವೇ
ಈ ಬಾಳಪುಟಕೆ ಅಕ್ಕರೆಯ ಆಕ್ಷರವಾಗುವಾತನೆ
ಬಂದು ಹಾಗೆ ಮಿಂಚಿ ಎಲ್ಲಿ ನೀ ಮರೆಯಾದೆ !
ಇಂತಿ ಪ್ರೀತಿಯ
ಡಾ ll ಜೋಧಾ ಅಕ್ಬರ್ D/O
ಮೌಲಾನ ಕಲಾಂ ಆಜಾದ್
ಧರ್ಮ ಪ್ರವರ್ತಕರು
ರಾವಲ್ಪಿಂಡಿ , ಪಾಕಿಸ್ತಾನ್ .
[email protected]
ಹೀಗೆ ಶಾಯಿರೀ ಮತ್ತು ಮನೆವಿಳಾಸದೊಂದಿಗೆ mail ವಿಳಾಸ ಸಹ ನೀಡಿದ್ದಳು . ಇದನ್ನು ಓದಿದ ತರುವಾಯ ಕೈಲಿದ್ದ ಅ ಕರವಸ್ತ್ರವನ್ನು ಹಲವು ಬಾಗವಾಗಿ ಮಡಚುತ್ತ ಅಮಲು ಕಣ್ಣಿನ ಹುಡುಗ ತನ್ನ ಅ ಹುಡುಗಿಯನ್ನು ನೆನೆಯುತ್ತ ಏನೇನೋ ಕಲ್ಪನೆ ಕನಸು ಕಾಣುತ್ತಾ ಇದ್ದಕಿದ್ದಂತೆ ಯೆಸ್ ಕರೆಕ್ಟ್ ಕರೆಕ್ಟ್ ಎನ್ನುತ್ತಾ , ಬೆರಳಿನಿಂದ ಚಿಟಿಕೆ ಹೊಡೆಯುತ್ತಾ ಹಾಸಿಗೆಯಿಂದ ಎದ್ದು ಅದೆ ಕೊಠಡಿಯ ಟೇಬಲ್ ಮೇಲಿದ್ದ ತನ್ನ ಲ್ಯಾಪ್ಟಾಪ್ ಆನ್ ಮಾಡುತ್ತಾ ಹಿಂದಿಯಲ್ಲಿ ತಾನು ಒಂದು ಷಾಯಿರೀ ಬರೆದು ಆಕೆಯ ಮೇಲ್ ಗೆ ಅಪ್ಲೋಡ್ ಮಾಡುತ್ತಾನೆ .
ಹೀಗೆ ಜೋದಾಗೆ ಕಳಿಸಿದ ಶಾಯಿರಿ ಹೀಗಿದೆ ,
ಈ ಬಾಳ ಪುಟದಿ ಅಕ್ಷರೀಕರಿಸಲು ಒಪ್ಪಿದ
ದಿನವಿದುವೆ ನನ್ನೀ ಬಾಳಿಗೆ ಪರ್ವದಿನವು
ನಮ್ಮಿಬ್ಬರ ಅಪ್ಪುಗೆಯಂದದಿ ಹೊರಟ ಬಿಸಿಯುಸಿರೆ
ದಾಂಪತ್ಯದಾರಂಭಕೆ ಮುನ್ನುಡಿಯಿತ್ತ ಮಂದಾನಿಲ
ಇಂತಿ ಪ್ರಣವ್ S/O ರಾಮಾಜೋಯಿಸ್
ಧರ್ಮಾಧಿಕಾರಿಗಳು , ಸೀತಾರಾಂಪುರ ,
ಕರ್ನಾಟಕ ರಾಜ್ಯ , ಭಾರತ .
ಹೀಗೆ ಆರಂಭದ ದಿನಗಳಲ್ಲಿನ ಮೊದ ಮೊದಲು ಇವರಿಬ್ಬರ ನಡುವೆ ತಮ್ಮ ಹಾಗು ತಮ್ಮ ಕುಟುಂಬಗಳ ಬಗ್ಗೆ ತಮ್ಮ ಕೆಲಸ ಕಾರ್ಯಗಳ ಬಗ್ಗೆ ಮಾತಾಡುತ್ತ ಹಾಗೆ ಒಳ್ಳೇ ಸ್ನೇಹಿತರಾಗುತ್ತಾರೆ ಹಾಗೆ ಮದ್ಯೆ ಮದ್ಯೆ ಪರಸ್ಪರ ಶಾಯರಿ ಬರೆದು ಮೇಲ್ ಕಳುಹಿಸುವುದು ಚಾಟಿಂಗ್ ಅಂತೆಲ್ಲ ಆಗಾಗ್ಗೆ ಇಬ್ಬರ ನಡುವೆ ನಡೆಯುತ್ತಿರುತ್ತದೆ . ಹೀಗೆ ಸ್ನೇಹ ಸಲುಗೆ ಹೆಚ್ಚಿದಂತೆ ಇಬ್ಬರ ನಡುವೆ ಬಹುವಚನ ಕಡಿಮೆಯಾಗಿ ಏಕವಚನ ಇಬ್ಬರ ನಡುವೆ ಬರಲಾರಂಭಿಸಿತು ಹಾಗೆ ಇಬ್ಬರಲ್ಲಿ ಪರಸ್ಪರ ಪ್ರೇಮಾಂಕುರ ಬೆಳೆದು ಒಬ್ಬರನ್ನೊಬ್ಬರು ಬಿಟ್ಟಿರಲಾದಷ್ಟು ಆತ್ಮೀಯತೆ ಬೆಳೆದರು ಯಾರು ಮೊದಲು ಇದನ್ನು ಹೇಳಿಕೊಳ್ಳುವುದಿಲ್ಲ . ಒಂದು ಗೊತ್ತಾದ ದಿನ ಹೀಗೆ ಮೊಬೈಲ್ನಲ್ಲಿ ಚಾಟಿಂಗ್ ಅಲ್ಲಿ ಇರುವಾಗ ಪ್ರೀತಿವಿಚಾರ ಬಂದು ಪರಸ್ಪರ ಒಪ್ಪಿಗೆ ಸೂಚಿಸುತ್ತಾರೆ .
ಒಟ್ಟಾರೆ ಇವರ ಪ್ರೀತಿ ನೇರಾ ನೇರಾ ನೋಡದೆ ಆನ್ಲೈನ್ ಚಾಟಿಂಗನಲ್ಲೆ ಪ್ರೀತಿ ಪಾಠ ಆಟ ಸಾಗುತ್ತಿವೆ ಯಾರಿಗೂ ತಿಳಿಯದಂತೆ .
ಹೀಗೆ ಇವರ ಪ್ರೇಮ ಪಾಠ ಆಟಗಳೆಲ್ಲ ಒಂದು ಶಿಷ್ಟಾಚಾರ ಚೌಕಟ್ಟಿನಲ್ಲೇ ಇರುತ್ತೆ ಅಂದರೆ ಮಾತು ಒಂದು ಹಿಡಿತದಲ್ಲಿದ್ದ ಪ್ರೇಮ ಎಂದು ಕಾಮವಾಗಿ ಹೋಗುವುದಿಲ್ಲ ಇವರ ಮದ್ಯೆ .
ಈಕೆ ಹೀಗೆ ಮಾತಾಡುತ್ತ ತನ್ನ ಕುಟುಂಬ ತಂದೆ ಅವರ ಸ್ಥಾನಮಾನ ಅವರ ಜವಾಬ್ದಾರಿ ಇವುಗಳ ಬಗೆ ಹೇಳಿಕೊಳ್ಳುತ್ತಾಳೆ ಹಾಗೆ ಇತ್ತ ಪ್ರಣವ್ ಸಹ ತನ್ನ ಕುಟುಂಬ ತಂದೆ ತಾಯಿ ಅವರ ಸ್ಥಾನಮಾನ ಘನತೆ ಜವಾಬ್ದಾರಿ ಬಗ್ಗೆ ಹೇಳಿಕೊಳ್ಳುತ್ತಾನೆ .
ಯಾವಾಗ ಪ್ರಣವ್ ಕರ್ನಾಟಕ ರಾಜ್ಯದವರು ಕನ್ನಡಿಗ ಎಂಬ ವಿಚಾರ ಈಕೆಗೆ ತಿಳಿಯಿತು ಕೂಡಲೇ ಇವಳಿಗೆ ಇವನ ಮೇಲೆ ಇದ್ದ ಪ್ರೀತಿ ನಂಬಿಕೆ ಎಲ್ಲ ಇಮ್ಮಡಿಯಾಗುತ್ತದೆ ಆದರೆ ಹೇಳಿಕೊಂಡಿರಲಿಲ್ಲ ಆದರೆ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಳು . ಆದರೆ ಈಗ ಈಕೆ ಹಲೋ ಪ್ರಣವ್ ಹೇಗಿದ್ದೀರಾ ! ಎಂದು ಕನ್ನಡದಲ್ಲಿ ಮಾತಾಡುತ್ತಾಳೆ . ಈ ಕನ್ನಡ ಮಾತು ಜೋದ ಬಾಯಿಂದ ಕೇಳಿದ ಕೂಡಲೇ ಅವಕ್ಕಾದ ಪ್ರಣವ್ ಕ್ಷಣ ಕಾಲ ಅಚ್ಚರಿಗೊಳಗಾಗುತ್ತಾನೆ ಬಳಿಕ ವಿಡಿಯೋ ಕಾಲ್ ಆದ್ದರಿಂದ ಇದೆಲ್ಲವನ್ನು ಮೊಬೈಲ್ ನಲ್ಲಿ ನೋಡುತಿದ್ದ ಜೊದಾ ನಗುತ್ತಾ ಮತ್ತೆ ಕನ್ನಡದಲ್ಲೇ ಮಾತಾಡುತ್ತ ಯಾಕೆ ಹಾಗೆ ಬೆಚ್ಚಿ ಬಿದ್ದೆ ಎನ್ನುತ್ತಾಳೆ.
ಆಗ ಪ್ರಣವ್ ತಡವರಿಸಿಕೊಳ್ಳುತ್ತ ಅಚ್ಚರಿ ಹಾಗು ಅನುಮಾನಕ್ಕೆ ಒಳಗಾಗುತ್ತಾನೆ . ಮತ್ತೆ ಮಾತು ಮುಂದುವರೆಸುತ್ತಾ , ಅರೆ ಏನಿದು ನಿನ್ನ ಬಾಯಲ್ಲಿ ಕನ್ನಡ ಮಾತು ಎನ್ನುತ್ತಾನೆ .
ಅರೆ ಏಕೆ ಕನ್ನಡ ಒಂದು ಮಾನವ ಭಾಷೆ ತಾನೇ ಅದೇನು ಬೇರೆಯವರು ಅಂದರೆ ಕನ್ನಡೇತರರು ಅಡಲೆಬಾರದೆ ? ಹಾಗಂತ ಏನಾದ್ರು ಕಾಪಿ ರೈಟ್ ಆಗಿದೆಯಾ ? ಕನ್ನಡ ಏನು ಗಂಧರ್ವ ಭಾಷೆಯಾ ಇಲ್ಲ ಹಕ್ಕಿಗಳ ಭಾಷೆಯಾ ಇಲ್ಲ ಅನ್ಯ ಗ್ರಹ ಎಲಿಯನ್ಸ್ ಭಾಷೆಯಾ ಎಂದೆಲ್ಲ ಮಾತಾಡುತ್ತಾಳೆ .ಎಲ್ಲ ಭಾಷೆಗಳ ಹಾಗೆ ಇದು ಒಂದು ಭಾಷೆ ಆದರೆ ಪುರಾತನ ಭಾಷೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತಿನಿ .
ಮತ್ತಷ್ಟು ಅನುಮಾನಗೊಂಡ ಪ್ರಣವ್ ಅಲ್ಲ ಇವಳು ನಿಜಕ್ಕು ಪಾಕಿಸ್ತಾನದವಳೆ ಇಲ್ಲ ನನ್ನನ್ನು ಪ್ರೀತಿಸುವ ನಾಟಕ ಮಾಡಿ ಗೂಢಾಚಾರಿಕೆ ಮಾಡುವವಳೆ ಇಲ್ಲ ಅಲ್ಲಿಯ ಸರ್ಕಾರದ ಪ್ರತಿನಿಧಿಯಾಗಿ ಈ ದೇಶದ ವಿರುದ್ಧ ಪಿತೂರಿ ನಡೆಸುವವರ ಎಂದೆಲ್ಲ ಮನದಲ್ಲೆ ಅಂದುಕೊಳ್ಳುತ್ತಾನೆ . ಹಾಗು ಇವಳಿಗೆ ಏನನ್ನು ತೋರಿಸಿಕೊಳ್ಳದೆ ಜೋದಾ ನಿಜ ಹೇಳು ನೀನು ಯಾರು ನೀನು ಪಾಕಿಸ್ತಾನೀ ಹೇಗೆ ಕನ್ನಡ ಕಲಿತೆ ಎಂದು ಅನೇಕ ಪ್ರಶ್ನೆ ಮಾಡುತ್ತಾನೆ ಅನುಮಾನದಿಂದ
ಇನ್ನು ತಮಾಷೆ ಮಾಡಬಾರದು ಎಂದು ಅರಿತು ಕನ್ನಡದಲ್ಲಿ ಮಾತಾಡುತ್ತಾ ತನ್ನ ಇತಿಹಾಸವನ್ನು ಸಣ್ಣದಾಗಿ ಪ್ರಣವ್ಗೆ ಹೀಗೆ ಹೇಳುತ್ತಾಳೆ . ಇನ್ನೊಮ್ಮೆ ಸಮಯ ಸಿಕ್ಕಾಗ ದೀರ್ಘವಾಗಿ ಹೇಳುವೆ ಈಗ ಸಣ್ಣದಾಗಿ ಹೇಳುವೆ ಎನ್ನುತ್ತಾ ತನ್ನ ಕತೆ ಶುರು ಮಾಡುತ್ತಾಳೆ . ತನ್ನ ತಂದೆಯ ಮತ್ತು ಭಾರತದ ಸಂಬಂಧ ಹಾಗು ತಾನು ಕರ್ನಾಟಕದ ಶಿವಮೊಗ್ಗದ ಸಂಸ್ಕೃತ ಹಳ್ಳಿ ಮತ್ತೋಡುವಿನಲ್ಲಿ ತನ್ನ ಕಾಲೇಜ್ ಅಸೈನ್ಮೆಂಟಗಾಗಿ ಕೆಲ ತಿಂಗಳು ಕಳೆದದ್ದು ಆಗ ನಾನು ಕನ್ನಡ ಮತ್ತು ಸಂಸ್ಕೃತ ಎರಡು ಭಾಷೆಯನ್ನು ಕಲಿತದ್ದು ಎಂದು ತಿಳಿಸಿದಳು ಅಂದ ಹಾಗೆ ನಾನು ಇಂದು ನಿನಗೆ ಮೊಬೈಲ್ ಮಾಡಿದ ವಿಚಾರವೇ ಬೇರೆ ಎನ್ನುತ್ತಾ ಹೀಗೆ ಹರಟೆಯ ವಿಚಾರ ವಿಷಯಾಂತರ ಆಯಿತು ಎನ್ನುತ್ತಾ ಇದೆ ಜುಲೈ 6ನೆ ತಾರೀಕು ಇಂಗ್ಲೆಂಡ್ನಲ್ಲಿ ಜರುಗುವ ಪ್ರಶಸ್ತಿ ಸಮಾರಂಭಕ್ಕೆ ಬರಲೇಬೇಕು ಎಂದು ತಿಳಿಸುತ್ತಾಳೆ ಬಳಿಕ ಪ್ರಣವ್ ಏನೋ ಯೋಚಿಸುತ್ತಾ ಬಳಿಕ ಅಗಲಿ ಎನ್ನುತ್ತಾನೆ ಬಳಿಕ ಕಾಲ್ ಕಟ್ ಆಗುತ್ತದೆ .
ಮೊಬೈಲ್ ತನ್ನ ಅಂಗಿ ಜೀಬಿಗಿಡುತ್ತ ಏನಾದರೂ ಜೋದಾ ಉಗ್ರಗಾಮಿ ಗುಂಪಿನವರು ಇದ್ದರು ಇರಬಹುದೇ ಅಲ್ಲ ಪಾಕಿಸ್ತಾನದವಳು ಅಂತಾಳೆ ಕನ್ನಡ ಸುಂದರವಾಗಿಯೇ ಮಾತಾಡುತ್ತಾಳೆ ಕೇಳಿದರೆ ಓದಿಗಾಗಿ ಶಿವಮೊಗ್ಗ ಮತ್ತೊಡು ಎಂದೆಲ್ಲ ಕತೆ ಕಟ್ಟುತ್ತಾಳೆ ಎಲ್ಲಿಯ ಭಾರತ ಮತ್ತೆಲ್ಲಿಯ ಪಾಕಿಸ್ತಾನ ಅಲ್ಲಾ ಅವರಪ್ಪನಿಗೆ ಏನೋ ಭಾರತ ಅದರಲ್ಲೂ ಕರ್ನಾಟಕ ಸಂಬಂಧ ಬಗ್ಗೆ ಏನೋ ಹುಳ ಬೇರೆ ಬಿಟ್ಟಳು ಇದೆಲ್ಲ ಹೇಗೆ ಸಾದ್ಯ ನಂಬುವುದು ಹೇಗೆ ? ಇವಳನ್ನು ಎಂದೆಲ್ಲ ತನ್ನ ತಲೆಗೆ ತಾನೇ ಹುಳು ಬಿಟ್ಟುಕೊಂಡನು .
…………………
ಪ್ರಣವ್ ತನ್ನ ಕೊಠಡಿಯಲ್ಲಿ ಏಕಾಂತವಾಗಿದ್ದು ಅಯೋಧ್ಯ ಟ್ರಿಪ್ ಫೋಟೋಗಳನ್ನು ನೋಡುತ್ತಾ ಇದ್ದಾನೆ . ಅದರಲ್ಲಿ ಜೋದಾ ಹಾಗು ಅವರ ಪರಿವಾರದ ಫೋಟೋಗಳು ಸಹ ಇದ್ದಾವೆ ಎಲ್ಲವನ್ನು ಹಾಗೆ ನೋಡುತ್ತಾ ಹಾಗೆ ತನಗೆ ತಾನೆ ಹುಸಿ ನಗೆ ಬೀರುತ್ತಾ ಇದ್ದಾನೆ . ಎಲ್ಲ ನೋಡುತ್ತಿರುವಂತೆ ಇವನಿಗೆ ಅರೆ ಹೌದಲ್ಲ ಜುಲೈ 6 ಕ್ಕೆ ಜೋದಾ ಎಂಬಿಎ ಮೊದಲ ರಾಂಕ್ ಅಲ್ಲಿ ಪಾಸ್ ಆಗಿದ್ದು ಈಕೆಗೆ ಈಗ ತಾನು ಓದಿದ ಇಂಗ್ಲೆಂಡ್ ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ಕಾನೋಕೇಷನ್ ಸಮಾರಂಭದಲ್ಲಿ ಈಕೆಗೆ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಹೇಗಾದ್ರೂ ಬರಲೇಬೇಕು ಎಂಬ ಹಟಕ್ಕೆ ಬೇರೆ ಬಿದ್ದುಬಿಟ್ಟಿದ್ದಾಳೆ ಎಂಬುದನ್ನು ನೆನಪಿಸಿಕೊಂಡು ಸರಿ ಇನ್ನು ಆರು ದಿನ ಬಾಕಿ ಇದೆ ಈಗಿನಿಂದಲೇ ಹೋಗಲು ಸಿದ್ಧತೆ ನಡೆಸಿಕೊಳ್ಳಬೇಕು ಎಂದು ತನಗೆ ತಾನೇ ಹೇಳಿಕೊಳ್ಳುತ್ತಾನೆ ಹಾಗೂ ಅದಕ್ಕೆ ಸಂಬಂಧಿಸಿದದಂತೆ ತನ್ನ ಬಟ್ಟೆ ಬರೆ ವೀಸಾ ಪಾಸ್ಪೋರ್ಟ್ ಎಲ್ಲವನ್ನು ಜೋಡಿಸಿಕೊಂಡು ಮರುದಿನ ಬೆಳಿಗ್ಗೆ ಬೆಂಗಳೂರ್ ಇಂದ ನೇರವಾಗಿ ಇಂಗ್ಲೆಂಡ್ ಹೋಗಲು ಸಿದ್ಧತೆ ಮಾಡಿಕೊಂಡನು ಹಾಗು ತನ್ನ ತಂದೆ ತಾಯಿಗೆ ಇಂಗ್ಲೆಂಡ್ ಗೆಳೆಯನ ಮದುವೆಗೆ ಹೋಗುವುದಾಗಿ ಹೇಳಿ ಅವರಿಂದ ಒಪ್ಪಿಗೆ ಪಡೆಯುತ್ತಾನೆ .
ಮರುದಿನ ಪ್ರಣವ್ ತಂದೆ ತಾಯಿ ಪಾದಕ್ಕೆ ನಮಸ್ಕರಿಸಿ ಬೆಂಗಳೂರಿನಲ್ಲಿ ಹಲವು ಸ್ನೇಹಿತರು ಬರುತ್ತಾರೆ ಅಲ್ಲಿಂದ ಎಲ್ಲ ಒಟ್ಟಾಗಿ ಹೋಗುತ್ತೇವೆ ಎಂದು ಸುಳ್ಳು ಹೇಳಿ ತನ್ನ ಬ್ಯಾಗ್ ಹಿಡಿದು ಮನೆಯಿಂದ ಹೊರಟನು .
(ಇಲ್ಲಿಗೆ ನಾಲ್ಕನೇ ಅದ್ಯಾಯ ಮುಕ್ತಾಯ)
Writer
0 Followers
0 Following