ಸೀತಾರಾಂಪುರ ಗ್ರಾಮಕ್ಕೆ ರಾಮಾಜೋಯಿಸರ ಪರಿವಾರವು ಅಯೋಧ್ಯ ಪ್ರವಾಸ ಮುಗಿಸಿಕೊಂಡು ನೇರವಾಗಿ ತಮ್ಮ ಗ್ರಾಮಕ್ಕೆ ಬರುತ್ತಿದ್ದಂತೆ ಪುರಪ್ರಮುಖರು ಹಾಗು ಕೆಲವು ಆಪ್ತರು ಎಂದು ಸುಮಾರು ಜನ ಸೇರಿ ಸ್ವಾಗತಿಸಲು ಸೇರಿದ್ದಾರೆ , ಹಾಗೆ ಬಂದವರಲ್ಲಿ 3-4 ಜನ ಮುತೈದೆಯರು ಆರತಿ ಎತ್ತಿ ಬರ ಮಾಡಿಕೊಳ್ಳುತ್ತಾರೆ .ನಂತರ ರಾಮಾಜೋಯಿಸರು ಪ್ರಣವ್ ಕುರಿತು , ನೋಡು ಎಲ್ಲ ಟ್ಯಾಕ್ಸಿ ಡ್ರೈವರ್ರಗಳಿಗು ದುಡ್ಡು ಕೊಟ್ಟು ಕಳಿಸು ಎನ್ನುತ್ತಾ ,ಬೇಗ ಬೇಗ ಇಳಿದು ತಮ್ಮ ತಮ್ಮ ಸಾಮಾನುಗಳ ಚೀಲ ತೆಗೆದುಕೊಳ್ಳುವಂತೆ ಹೇಳಿ , ಆಹಾ ಪ್ರಣವ್ ಪೂಜಾ ಸಾಮಾಗ್ರಿ ಹುಷಾರಾಗಿ ಇಳಿಸ್ಕೊಂಡು ನನ್ನ ರೂಮ್ನಲ್ಲಿಡಲು ಹೇಳಿ ಅವನ ಪ್ರತಿಕ್ರಿಯೆಗೆ ಕಾಯದೆ ತಮ್ಮ ಆಗಮನವನ್ನು ಸ್ವಾಗತಿಸಲು ಬಂದಿದ್ದ ಗೆಳೆಯರನ್ನ ಕರೆದುಕೊಂಡು ಬನ್ನಿ ಟೀ ಕುಡಿಯುವ ಎನ್ನುತ್ತಾ ಮನೆ ಮುಂದಿನ ಗಾರ್ಡನ್ ಗೆ ಹೊರಟರು . ಗಾರ್ಡನ್ನಲ್ಲಿನ ಗಿಳಿ ಹಂಸ ಹರಿಯುವ ನೀರು ಕಾರಂಜಿ ಇತ್ಯಾದಿ ಎಲ್ಲವೂ ಇವರನ್ನು ಸ್ವಾಗತಿಸಿತು .
ಪ್ರಣವ್ ತುಂಬಾ ಶಾಂತ ಸ್ವಭಾವದವನು ಹಾಗೆ ಆಕರ್ಷಕ ಮೈಕಟ್ಟುಉಳ್ಳವನು ಅಷ್ಟೇ ಅಲ್ಲ ವಿನಯ ವಂತನು ಗುಣವಂತ ಬುದ್ಧಿವಂತನು ಹೌದು , ಎಸ್ಟೆ ಅದ್ರು ಅಮೇರಿಕಾದಲ್ಲಿ ಎಂಫಿಲ್ ನಲ್ಲಿ ಬಂಗಾರದ ಪದಕ ಪಡೆದಾತ ನಲ್ಲವೆ .ಈಗ ತನ್ನ ತಂದೆಯವರ ಜೊತೆ ಇದ್ದು ಅವರ ಕಾರ್ಯಗಳಲ್ಲಿ ಕೈಜೋಡಿಸಿಕೊಂಡು ಹೋಗುತ್ತಿದ್ದಾನೆ .
ಇವರ ತಂದೆ ರಾಮಾನಂದಜೋಯಿಸರು ಧರ್ಮಾಧಿಕಾರಿಗಳು ಈಡಿ ನಾಡಿಗೆ ಚಿರಪರಿಚಿತ ಹೆಸರು . .ಶಿಸ್ತು ನಡೆ ನುಡಿಯಲ್ಲಿ ಒಂದೇ ಮಾತು ಇವರದು. ಎಂದು ತಪ್ಪು ಮಾಡಿದ ಉದಾಹರಣೆ ಇಲ್ಲವೇ ಇಲ್ಲ , ಇವರ ಜೀವಮಾನದಲ್ಲಿ . ಇವರ ನಾಲಿಗೆಯಿಂದ ಹೊರಟ ಮಾತೆಂದರೆ ಛಾಪಾ ಕಾಗದದ ಮೇಲೆ ಮೂಡಿದ ಕರಾರು ಪತ್ರ ಎರಡು ಒಂದೇ ಎಂಬ ಮಾತು ನಾಡಿನಾದ್ಯಂತ ಇಂದಿಗು ಚಾಲ್ತಿಯಲ್ಲಿರುವ ಮಾತು .
ನ್ಯಾಯ ತೀರ್ಮನಕ್ಕೆ ಇವರನ್ನು ನಂಬಿ ಇವರ ಮನೆ ಜಗಲಿ ತುಳಿದು ಬಂದ ಯಾರೇ ಆಗಲಿ ನ್ಯಾಯಬದ್ದವಾದ ಸೂಕ್ತವಾದ ಹಾಗೂ ಯಾವುದೇ ಫಲಾಪೇಕ್ಷೆ ಇಲ್ಲದೆ ವಿಚಾರವನ್ನು ಅಳೆದು ತೂಗಿ ಸೋಸಿ ಸೂಕ್ತ ತೀರ್ಮಾನ ಕೈಗೊಂಡು ಎಲ್ಲರೂ ಹೌದೌದು ಎಂಬಂತೆ ತೂಕಬದ್ದವಾದ ತೀರ್ಪು ನೀಡುವಲ್ಲಿ ಸಿದ್ದಹಸ್ತರು . ಒಟ್ಟಿನಲ್ಲಿ ಯಾವುದೇ ಕಾರ್ಯವಿರಲಿ ಕೈ ಹಾಕಿದರೆ ಗುಲಗಂಜಿ ದೋಷವು ಇಲ್ಲದಂತೆ ನೋಡಿಕೊಳ್ಳುವ ಛಾತಿ ಇವರ ಮನೆತನದ ಪೂರ್ವಿಕರ ರಕ್ತದಿಂದ ರಕ್ತಕ್ಕೆ ಹರಿದು ಬಂದದ್ದು ಎಂದರೆ ಅದು ಅತಿಶೋಕ್ತಿಯಾಗಲಾರದು .
ಪ್ರಣವ್ ತಂದೆ ರಾಮಾಜೋಯಿಸರು ಸೀತಾರಾಂ ಪುರದಲ್ಲಿನ ಶ್ರೀರಾಮ ದೇಗುಲಕ್ಕೆ ಅಧಿಪತಿಗಳು ಅಂದರೆ ಧರ್ಮಾಧಿಕಾರಿಗಳು . ಈ ದೇಗುಲದ ಸಂಪೂರ್ಣ ಉಸ್ತುವಾರಿ ಇವರದ್ದೇ . ನಾಡಿನಾದ್ಯಂತ ನಿತ್ಯವು ಈ ದೇಗುಲಕ್ಕೆ ಏನಿಲ್ಲವೆಂದರೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬರುತ್ತಾರೆ . ಹೀಗೆ ಬಂದ ಭಕ್ತರಿಗೆಲ್ಲಾ ನಿತ್ಯವು ಮಧ್ಯಾಹ್ನ ಮತ್ತು ರಾತ್ರಿ ಎರಡು ಹೊತ್ತು ಪ್ರಸಾದ ವಿತರಣೆ ಇರುತ್ತೆ . ಹಾಗೆ ಉಳಿದುಕೊಳ್ಳಲು ವ್ಯವಸ್ಥೆಯು ಉಂಟು .
ಈ ಅನ್ನ ದಾಸೋಹ ನಾಡಿನ ರೈತರು ತಾವು ಬೆಳೆದ ಕಾಯಿಪಲ್ಲೆ ಧಾನ್ಯವನ್ನು ಕಾಣಿಕೆ ರೂಪದಲ್ಲಿ ಭಕ್ತಿಪೂರ್ವಕ ವಾಗಿ ಅರ್ಪಿಸುತ್ತಾರೆ , ಇನ್ನು ತಮ್ಮ ಕಷ್ಟ ಕಳೆದರೆ ಕೊಡುತ್ತೇ ನೆಂದು ಏನೇನೋ ಹರಕೆಹೊತ್ತವರು ಹಾಗೆ ಹರಕೆ ತೀರಿಸು ವವರ ಜಾತ್ರೆ ನಿತ್ಯವು ಮಾಮೂಲು ಎಂಬಂತೆ ನಡೆಯುತ್ತದೆ ಇಲ್ಲಿ .
ಈ ದೇಗುಲವತಿಯಿಂದ ವಿದ್ಯಾಭ್ಯಾಸ ಆಸ್ಪತ್ರೆ ನಿರುದ್ಯೋಗಿ ಯುವಕರಿಗೆ ಕರಕುಶಲಗಾರಿಕೆ ಕೈಕಸುಬು ಸಣ್ಣ ಉದ್ಯೋಗ ಬಗ್ಗೆ ಅರ್ಹರಿಂದ ತರಬೇತಿ ಕೊಡಿಸಿ ಒಂದು ಪ್ರಮಾಣ ಪತ್ರ ನೀಡಿ ಅದರ ಆದಾರದ ಮೇಲೆ ಬ್ಯಾಂಕ್ ಲೋನ್ ನೀಡಿ ತಮ್ಮ ಕಾಲಮೇಲೆ ತಾವು ನಿಂತು ಸ್ವಾವಲಂಬಿಗಳಾಗಿಸಿ ಆರ್ಥಿಕವಾಗಿಯೂ ಯುವಕರು ಪ್ರಬಲರಾಗುವಂತೆ ಮಾಡಿ ನಿರುದ್ಯೋಗ ಪ್ರಮಾಣ ಕಡಿಮೆ ಮಾಡುವತ್ತ ದಾಪುಗಾಲು ಇಟ್ಟಿದೆ .
ಒಟ್ಟಾರೆ ರಾಮಾಜೋಯಿಸ್ಸರಿಗೆ ನಿತ್ಯವು ಒಂದಲ್ಲ ಒಂದು ಮೀಟಿಂಗ್ ಇಲ್ಲ ನೊಂದವರಿಗೆ ಸಾಂತ್ವಾನ ಹೇಳುವುದು ನಾನಾ ರೀತಿಯ ಕೆಲಸ ಕಾಮಗಾರಿ ಯಾವ ಹಂತಕ್ಕೆ ಬಂದಿದೆ ಎಂದು ಪರಿಶೀಲಿಸುವುದು ನಾನಾ ಕ್ಷೇತ್ರ ಬೇಟಿ ನಾನಾ ಭಕ್ತರ ಅಹವಾಲು ಸ್ವೀಕರಿಸಿ ಅವರಿಗೆ ಸೂಕ್ತ ಮಾತುಗಳಾಡುವುದು . ಹೀಗೆ ನಿತ್ಯವು ಬಿಡುವಿಲ್ಲದ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ .
ಜಗಳ ನ್ಯಾಯ ಪಂಚಾಯತಿ ಬಯಸಿ ಬಂದವರಿಗೆ ನ್ಯಾಯ ತೀರ್ಮಾನ ಅಪರಾಧಿಗಳಿಗೆ ಸೂಕ್ತ ಶಿಕ್ಷೆ ನಿರಪರಾಧಿಗೆ ರಕ್ಷೆ ಇವರ ಕೈಯಲ್ಲೇ ಇದೆ . ಇವರ ತೀರ್ಪಿಗೆ ಎಂಥವರು ಸಹ ಮರುಮಾತಿಲ್ಲದೆ ಒಪ್ಪುತ್ತಾರೆ . ತಂದೆಯ ಜೊತೆಯಲ್ಲಿದ್ದುಕೊಂಡು ಅವರ ನಿತ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ತಂದೆಯವರ ಕಾರ್ಯ ವೈಖರಿ , ಮಾತು ಗಾರಿಕೆ ತಂತ್ರಕೌಶಲ್ಯ ಪಾಂಡಿತ್ಯ ಹೀಗೆ ಎಲ್ಲವನ್ನು ಅರಗಿಸಿಕೊಂಡು ತಂದೆಯವರ ಮಾರ್ಗದಲ್ಲಿ ನಡೆಯುತ್ತಾ , ತಂದೆಯವರಿಗಿಂತಲು ಒಳ್ಳೆ ಹೆಸರು ಸಂಪಾದಿಸಿದ್ದಾರೆ . ರಾಮಾಜೋಯಿಸರಿಗೇ ಪ್ರಣವ್ ಏಕಮಾತ್ರ ಪುತ್ರ . ಹಾಗಾಗಿ ಇವನ ಮೇಲೆ ಅಪಾರ ಪ್ರೀತಿ ಪ್ರಾಣ ಇಟ್ಟುಕೊಂಡಿದ್ದಾರೆ ಲೋಕರೂಡಿಯೆಂಬಂತೆ .
*******
ನಿತ್ಯವು ಪ್ರತಿರಾತ್ರಿ ತಂದೆಯೊಂದಿಗೆ ದೇಗುಲಕ್ಕೆ , ಶಾಲಾಕಾಲೇಜುಗಳು ಆಸ್ಪತ್ರೆ ಹೀಗೆ ತಮ್ಮೆಲ್ಲ ವ್ಯವಹಾರಕ್ಕೆ ಸಂಬಂಧಿಸಿದಂತೆ ,ಸಂಬಂಧಪಟ್ಟ ಚರ್ಚೆಯಲ್ಲಿ ಸಹ ಪ್ರಣವ್ ಅಧಿಕಾರಿಗಳೊಂದಿಗೆ ಪಾಲ್ಗೊಳ್ಳುವನು .
ಪ್ರತಿನಿತ್ಯವೂ ಆದ ಹಣಕಾಸಿನ ಖರ್ಚು, ಭಕ್ತರಿಂದ ಬಂದ ಹಣದ ಲೆಕ್ಕ ಹಾಗೆ ದೂರದ ಊರಿಂದ ಭಕ್ತರು ದೇಗುಲಕ್ಕೆ ಪೋಸ್ಟ್ ಮೂಲಕ ನೀಡಿದ ಹಣ ಹೀಗೆ ಎಲ್ಲಾ ಹಣಕಾಸಿನ ವಿವರವನ್ನು ತಿಳಿದು , ತಂದೆಗೆ ಸರಿಯಾದ ಮಾಹಿತಿ ಕೊಡುತ್ತಾನೆ . ಬಳಿಕ ತಂದೆಗೆ ತಾವು ಮಾಡಬೇಕಾದ ಅಂದಿನ ಕಾರ್ಯಗಳ ಬಗ್ಗೆ ನೆನಪು ಮಾಡುವುದು . ಸಣ್ಣ ಪುಟ್ಟ ಸಭೆ ಸಮಾರಂಭ ಹಾಗೆ ಸಣ್ಣ ಪುಟ್ಟ ನ್ಯಾಯ ತೀರ್ಮಾನ ಇದ್ದಲ್ಲಿ , ತಂದೆ ಅಣತಿ ಮೇರೆಗೆ ತಾನೇ ಸೂಕ್ತ ತೀರ್ಪು ನೀಡುತ್ತಾನೆ ಒಟ್ಟಾರೆ ತಂದೆಯವರ ಮಾರ್ಗದಲ್ಲಿ ನಡೆಯುತ್ತಾ ತಾನು ಸಹ ತಂದೆಯ ಎಲ್ಲ ಕಾರ್ಯವನ್ನು ಯಶಸ್ವಿಯಾಗಿ ನಿಭಾಯಿಸಬಲ್ಲ ಎಂಬ ಹೆಸರು ಎಲ್ಲೆಡೆ ಕೇಳಿ ಬರುತ್ತಿದೆ .
ಹೀಗೆ ಎಸ್ಟೆಲ್ಲಾ ಅಧಿಕಾರ ಇದ್ದರು ಪ್ರಣವ್ ಎಂದೂ ತನ್ನ ಸ್ವಾರ್ಥಕ್ಕೆ ತಂದೆಯ ಹೆಸರು ಅಧಿಕಾರ ಬಳಸಿಕೊಂಡವನಲ್ಲ ಹಾಗಾಗಿ ಜನಸಾಗರ ರಾಮಾಜೋಯಿಸರಂತೆ ಪ್ರಣವ್ಗು ಒಂದು ಸ್ಥಾನ ನೀಡಿ ಅಂತೆ ಗೌರವ ಭಾವನೆ ಇಂದ ಕಾಣುತ್ತಿದ್ದಾರೆ .
ಆಡಳಿತ ಮಂಡಳಿಯಲ್ಲಿ ಎದುರಾಗಬಹುದಾದ ಕಠಿಣ ಹಾಗು ಎಂತಹ ಜಟಿಲ ಸಮಸ್ಯೆ ಬಂದರು ಸಹ ಲೀಲಾಜಾಲ ವಾಗಿ ಪರಿಹರಿಸಬಲ್ಲ ಕುಶಾಗ್ರ ಬುದ್ದಿಮತ್ತೆಯುಳ್ಳವನು ತನ್ನ ತಂದೆಯಂತೆ .ಇಂತಹ ಪ್ರಣವ್ ಯಾಕೋ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕವಾಗಿ ಹಾಗು ಖಾಸಗಿಯಾಗಿ ತೀರಾ ಡಲ್ ಆಗಿರುವುದು ಎಲ್ಲೆಡೆ ಕುತೂಹಲಕ್ಕೆ ಕಾರಣವಾಗಿದೆ .
ಇತ್ತೀಚೆಗೆ ಪ್ರಣವ್ ಮಂಕಾಗಿರುವುದು ಎಲ್ಲದರಲ್ಲೂ ಅನಾಸಕ್ತಿತಾಳುವುದು . ಈ ವಿಚಾರ ಹಾಗೆ ಬಾಯಿಂದ ಬಾಯಿಗೆ ಹರಡಿ ವಿಷಯ ಪಲ್ಲಟವಾಗಿ ಏನೇನೋ ಗಾಳಿ ಸುದ್ದಿ ಆಗಿ ರೆಕ್ಕೆಪುಕ್ಕ ಕಟ್ಟಿಕೊಂಡು ನಾಡಿನ ತುಂಬೆಲ್ಲ ಚರ್ಚೆಗೆ ಗ್ರಾಸವಾಗಿದೆ . ದೆವ್ವ ಮೆತ್ತಿದೆ ದೃಷ್ಠಿ ತಾಗಿದೆ ದೈವ ಶಾಪ ಹರೆಯದ ಯುವಕ ಹಾಗಾಗಿ ಎಲ್ಲರ ಕಣ್ಣು ತಾಕಿ ಹಾಗಾಗಿದೆ ಎಂದು ನಾನಾ ರೀತಿಯಲ್ಲಿ ಗುಸುಗುಸು ಪಿಸು ಮಾತುಗಳು ಕೇಳಿಬರುತ್ತಿವೆ . ಹಾಗೆ ಇವನ ಈ ಪರಿಸ್ಥಿತಿಗೆ ಪಶ್ಚಾತಾಪ ಪಡುವ ಜನತೆಗೂ ಕೊರತೆಯಿಲ್ಲ .
ರಾಮಾಜೋಯಿಸ್ಸರು ಮಗನ ಕೋಣೆಗೆ ಬಂದು ಹೆ ಮಗು ಏಕೆ ? ಏನಾಗಿದೆ ನಿನ್ನ ಆರೋಗ್ಯದಲ್ಲಿ ಏನಾದ್ರೂ ತೊಂದರೆ ಆಗಿದೆಯಾ ಬಿಡುವು ಇಲ್ಲದ ನಿನ್ನ ಕಾರ್ಯ ಗಳಿಂದ ಏನಾದ್ರೂ ಬಳಲಿಕೆ ಆಗಿದ್ರೆ , ಕೊಂಚ ದಿನ ರೆಸ್ಟ್ ಮಾಡು . ಮೋದಲಿನಂತಾದ ಬಳಿಕ ಇದ್ದೆ ಇದೆ . ಕೆಲಸ ಕಾರ್ಯ ಎಲ್ಲ ಎಂದು ಮಾತಾಡುತ್ತಾರೆ.
ಇಲ್ಲ ಅಪ್ಪಾಜಿ ನನ್ನಲ್ಲಿ ಅಂತಹದ್ದು ಏನು ಆಗಿಲ್ಲ , ಆರೋಗ್ಯವೂ ಚೆನ್ನಾಗಿದೆ ಆದರೂ ಹೀಗೇಕೆ ಎಂದು ನನಗೂ ಅರ್ಥವಾಗುತ್ತಿಲ್ಲ ಎಂದು ತನ್ನ ಮಾತು ಹೇಳಿದ.
ಹೇಗಾದ್ರು ಸರಿ ಒಮ್ಮೆ ಡಾಕ್ಟರ್ ಬಳಿ ತೋರಿಸುವುದು ಒಳ್ಳೆಯದು ಅಲ್ಲವಾ ಎಂದು ತಂದೆ ಹೇಳಿದ.
ಅಗಲಿ ಎಂಬಂತೆ ತಲೆಯಾಡಿಸುತ್ತಾನೆ ಪ್ರಣವ್ .
ಮಗನ ಕೋಣೆಯಿಂದ ಹೊರ ಬಂದ ತನ್ನ ಗಂಡನನ್ನು ಕುರಿತು ಪತ್ನಿ ಸೀತಾ ಎದುರಾಗಿ ಗಂಡನನ್ನು ಕುರಿತು , ಏನು ರಾಯರು ಮಗನನ್ನು ಕಾಣ ಹೋಗಿದ್ದೀರಿ ಅನ್ಸುತ್ತೆ . ಏನು ಹೇಳಿದ ನಿಮ್ಮ ದೇವರು ಕೇಳಿದಿರಾ ಯಾವ ಕಡೆಯ ಹೂ ನೀಡಿತು ಮತ್ತೇನಾದರೂ ಹೇಳಿತಾ ಹೀಗೆ ಒಂದೇ ಉಸಿರಿಗೆ ಗಂಡನಿಗೆ ದಾಬಾಯಿಸುತ್ತ ಗಂಡನ ಉತ್ತರಕ್ಕೂ ಕಾಯದೆ , ಬುದ್ದಿ ಇದೆಯಾ ನಿಮಗೆ , ಅವನು ಅಯೋಧ್ಯ ಟ್ರಿಪ್ ಹೋಗಿ ಬಂದ ದಿನಗಳಿಂದ ಅವ್ನು ಹೀಗೆ ಮಂಕಾಗಿದ್ದಾನೆ ಕಾರಣ ಗೊತ್ತ ಬುದ್ದಿ ಇದೆಯೆ ನಿಮಗೆ ವಯಸ್ಸಿಗೆ ಬಂದ ಮಗನ ಬಳಿ ಏಕೆ ಚೆನ್ನಾಗಿದ್ದೀರಾ ಚೆನ್ನಾಗಿಲ್ಲ ಏಕೆ ಹೀಗೆ ಮಂಕಾಗಿರುವೆ ಎಂದೆಲ್ಲಾ ಕೇಳೋ ಮಾತೆನ್ರಿ . ತಂದೆ ತಾಯಿಗಳೆ ಅರ್ಥ ಮಾಡಿಕೊಳ್ಳಬೇಕು ತಾನೇ ! ಅವನು ವಯಸ್ಸಿನ ಹುಡುಗ ನೀವೇನು ನಿಮ್ಮಪ್ಪನಿಗೆ ಹೇಳಿದ್ರ ನನಗು ಮದುವೆ ಆಗೋ ವಯಸು ಮತ್ತು ಮನಸು ಎರಡು ಈಗ ಬಂದಿದೆ ಮೊದಲು ಯಾವುದಾದರೂ ಒಂದು ಹೆಣ್ಣು ನೋಡಿ ಮದುವೆ ಮಾಡಿ . ನಿಮ್ಮಂತೆ ಅವನು ಆಲ್ವಾ ! ಅಲ್ಲ ನಿಮ್ಮ ಬುದ್ದಿನೆ ಅವನಿಗು ಧಾರೆ ಎರೆದು ಬಿಟ್ಟಿದ್ದಿರಾ ವಯಸ್ಸಿನ ಮಹಿಮೆ ಅದು ಬೇರೇನೂ ಅಲ್ಲ ಅಷ್ಟೇ ಅದರ ಒಳ ಮರ್ಮ . ಮೊದಲು ಒಂದು ಹುಡುಗಿ ಹುಡುಕಿ ಗಂಟು ಹಾಕಿಸಿ ಎಲ್ಲ ಸರಿ ಹೋಗುತ್ತೆ ಎಂದು ಗಂಡನಿಗೆ ದಬಾಯಿಸುತ್ತಾ ಐಯ್ಯೋ ಅದೇನು ಮನಶಾಸ್ತ್ರ ಓದಿಕೊಂಡಿದ್ದಿರೋ ಅದೇನು ಪಂಚಾಯತಿ ಮಾಡುವಿರೋ ಹೆ ಭಗವಂತ ಎನ್ನುತ್ತ ಅಡುಗೆ ಮನೆಯತ್ತ ನಡೆದಳು .
ಸಾಕು ಮಾಡು ಮಾರಾಯ್ತಿ , ಎಲ್ಲ ಅರ್ಥವಾಯ್ತು ನಿಲ್ಸಿ ನಿಮ್ಮ ಸೀತಾಮೃತ ಕಥಾ ಮಾಲಿಕೆ ಎಂದು ಹೊರಡುತ್ತಾ ಹೌದೌದು ಸೀತಾ ಹೇಳಿದ್ದು ಸರಿಯಾಗಿದೆ . ನನಗೆ ಅರ್ಥ ವಾಗಲಿಲ್ಲ ಆದ್ರೆ ಕ್ಷಣಮಾತ್ರದಲ್ಲಿ ಸೀತಾ ಎಲ್ಲವನ್ನು ಕಂಡಳು . ಹೌದು ಮೊದಲು ಮಗನಿಗೆ ಒಳ್ಳೆಯ ಕಡೆ ಸಂಬಂಧ ನೋಡಿ ಮದುವೆ ಮಾಡಬೇಕಾಗಿದೆ . ಅಂದ ಹಾಗೆ ನನ್ನ ಮಗನಿಗೆ ಸೂಕ್ತವಾದ ಹೆಣ್ಣು ಎಲ್ಲಿದೆ ನಮ್ಮ ಮನೆತನ ಗೌರವ ಎತ್ತಿಹಿಡಿಯುವ ಹೆಣ್ಣು ಎಲ್ಲಿದೆ ಎಂದು ಮನದಲ್ಲೇ ಯೋಚಿಸುತ್ತ ಹೋಗುವಾಗ ಅವನ ಕಣ್ಮುಂದೆ 4-6 ಹೆಣ್ಣು ಹಾಗೆ ತಮ್ಮ ಅಂತಸ್ತಿಗೆ ಹೊಂದುವ ಕುಟುಂಬಗಳ ಬಗ್ಗೆಯೇ ಯೋಚಿಸುತ್ತಾ ಇರಲಿ ಅದು ಬೇಡ ಹಾಗೆ ಹೀಗೆ ಏನೇನೋ ಮನಸಲ್ಲೇ ಅಂದು ಕೊಂಡು ದೇಗುಲದ ಮುಖ್ಯ ದ್ವಾರದ ಬಳಿ ಬಂದರು .
( ಇಲ್ಲಿಗೆ ಮೂರನೆಯ ಅಧ್ಯಾಯ ಮುಗಿಯಿತು ).
Writer
0 Followers
0 Following