ವಸ್ತು ಸ್ಥಿತಿ ಹೀಗಿರುವಾಗ , ಸಹಜವಾಗಿಯೇ ರಾಮ ಜನ್ಮಭೂಮಿ ಅಯೋಧ್ಯೆಗೆ ಪ್ರಣವ್ ಎಂಬ ತರುಣ ತನ್ನ ತಂದೆ ತಾಯಿ ಬಳಗ ಬಂಧು ಮಿತ್ರರು ಎಂದೆಲ್ಲ ಸೇರಿ ಸುಮಾರು ೨೫-೩೦ ಜನರ ತಂಡವೊಂದು ಅಯೋಧ್ಯ ನಗರ ವೀಕ್ಷಣೆಗಾಗಿ ಬಂದಿರುತ್ತದೆ .
ಪ್ರಣವ್ ತಂದೆ ರಾಮಾಜೋಯಿಸರು ನಾಡಿನಾದ್ಯಂತ ಬಹು ದೊಡ್ಡ ಹೆಸರುಳ್ಳ ಧರ್ಮಾಧಿಕಾರಿಗಳು , ವಿಚಾರ ವಾದಿಗಳು , ಸಜ್ಜನರು , ಪ್ರಗತಿಪರರು , ಶೀಲವಂತರು ಜನಮಾನಸದಲ್ಲಿ ಇವರನ್ನು ನಡೆದಾಡುವ ದೇವರು ಎಂದೆ ಗೌರವಿಸುತ್ತಾರೆ . ಹೀಗಾಗಿ ಹಿಂದೂಸ್ಥಾನದಲ್ಲಿ ಇವರಿಗೆ ಹಾಗು ಇವರ ಮಾತಿಗೆ ತನ್ನದೇ ಆದ ತೂಕವಂತು ಇದ್ದೇ ಇದೆ ಎಂಬುದು ಎಂದಿಗೂ ಸಾರ್ವಕಾಲಿಕ ಸತ್ಯವಾದುದು .
ರಾಮಾಜೋಯಿಸರ ಪರಿವಾರ ಬೇಟಿಯಿತ್ತ ಸಮಯ ದಲ್ಲೆ ದೇಶ ವಿದೇಶಗಳಿಂದ ಅಂದರೆ ಅಮೆರಿಕ ಇಂಗ್ಲೆಂಡ್ ಬಾಂಗ್ಲಾದೇಶ ಪಾಕಿಸ್ತಾನ ಅಫ್ಘಾನಿಸ್ತಾನ ನೇಪಾಳ ಮತ್ತು ಭೂತಾನ್ ಹೀಗೆ ನಾನಾ ದೇಶಗಳಿಂದ ಆಯಾ ಧರ್ಮಗಳ ಧರ್ಮಾಧಿಕಾರಿಗಳು ಮೌಲ್ವಿಗಳು ಪಾದ್ರಿಗಳು ಸಾಧು ಸಂತ ರು ರಾಜಪರಿವಾರ ಎಂದೆಲ್ಲ ಸೇರಿ ಸುಮಾರು ೬೦೦-೭೦೦ ಮಂದಿ ವಿಐಪಿಗಳು ತುಂಬಾ ಪ್ರಾಚೀನ ನಗರವಾದ ಅಯೋಧ್ಯ ಹಾಗು ಅಲ್ಲಿನ ದೇಗುಲ ವೀಕ್ಷಣೆಗಾಗಿ ಅ ದಿನ ಆಗಮಿಸುತ್ತಾರೆ .
ಪ್ರವಾಸಕ್ಕಾಗಿ ಬಂದ ಎಲ್ಲ ತಂಡಗಳಲ್ಲು ಸ್ತ್ರೀ ಪುರುಷರು ಹಾಗು ಮಕ್ಕಳು ಇದ್ದು , ಶ್ರೀರಾಮ ದೇಗುಲ ಸೀತಾರಸೋಯಿ ಹನುಮಾನ್ ಚಾಲಿಸ ೧೯೯೦ ರ ದಶಕದಲ್ಲಿ ಕರಸೇವಕರಿಂದ ಹಾನಿಗೀಡಾದ ಬಾಬ್ರಿ ಮಸೀದಿಯನ್ನು , ಸರಾಯು ನದಿ ತೀರದ ಇಕ್ಕೆಲಗಳಲ್ಲಿರುವ ರಾಮ - ಲಕ್ಷ್ಮಣರು ತಮ್ಮ ದೇಹತ್ಯಾಗ ಮಾಡಿದ ಹಾಗು ಅಲ್ಲಿ ಇನ್ನು ನೋಡಬಹುದಾದ ಇತರೆ ಸ್ಥಳಗಳನ್ನು ನೋಡುವುದು ಈ ಎಲ್ಲಾ ಯಾತ್ರಾರ್ಥಿಗಳ ಮುಖ್ಯ ಉದ್ದೇಶವಾಗಿದೆ .
ಹೀಗಿರಲು , ಕಥಾ ನಾಯಕಿ ಜೋಧಅಕ್ಬರ್ MBA ಪದವಿಧರೆ ಹಾಗು ಗೋಲ್ಡ್ ಮೇಡಲಿಸ್ಟ್ ಇನ್ ಯುಕೆ (ಆಕ್ಸ್ಫಾರ್ಡ್) ಯೂನಿವರ್ಸಿಟಿ . ಈಕೆ ಪಾಕಿಸ್ಥಾನದ ಶ್ರೇಷ್ಟ ಮೌಲ್ವಿಗಳು , ಶಿಕ್ಷಣ ತಜ್ಞರು , ಪ್ರಗತಿಪರರು , ಚಿಂತಕರು ಎಂದೆಲ್ಲ ಖ್ಯಾತಿವೆತ್ತ ಮೌಲಾನ ಕಲಾಂ ಆಝಾದ್ ರವರ ಏಕಮಾತ್ರ ಸುಪುತ್ರಿ . ತನ್ನ ತಂದೆ ತಾಯಿ ಬಳಗ ಬಂಧು ಮಿತ್ರರು ಎಂದೆಲ್ಲ ಸೇರಿ ೩೦ ಜನರ ಇವರ ತಂಡ ಸಹ ಅಂದೆ ಅಯೋಧ್ಯ ನಗರದ ಪ್ರವಾಸಕ್ಕೆ ಬಂದಿಳಿದರು .
ಅಂದು ಅಯೋಧ್ಯಾ ಪ್ರವಾಸಕ್ಕೆ ಬಂದ ಸುಮಾರು ೬೦೦-೭೦೦ ಮಂದಿ ಎಲ್ಲ ದೇಶಿ ವಿದೇಶಿ ಗಣ್ಯರುಗಳಿಂದಲೆ ತುಂಬಿದೆ , ಹಾಗಾಗಿ ಇವರ ಭದ್ರತೆಯ ದೃಷ್ಟಿಯಿಂದ ಅಂದು ಆಯೋದ್ಯೆ ಹಾಗೂ ಅಲ್ಲಿನ ಎಲ್ಲ ದೇಗುಲಗಳ ಸುತ್ತ ಬಿಗಿ ಪಹರೆ ನಿಯೋಜಿಸಲಾಗಿದೆ . ಹಾಗು ಭದ್ರತಾ ಪಡೆ ಅಂದು ಎಂದಿಗಿಂತಲೂ ಹೆಚ್ಚು ಹೈ ಅಲರ್ಟ್ ಆಗಿದ್ದು ಭದ್ರತಾ ದೃಷ್ಟಿಯಿಂದ ಅಂದು ಸಂಜೆವರೆಗು ಜನಸಾಮಾನ್ಯರಿಗೆ ದೇಗುಲ ದರ್ಶನಕ್ಕೆ ಅವಕಾಶ ನಿಷೇಧಿಸಲಾಗಿದೆ .
ಇತ್ತ ಪ್ರಣವ್ ತನ್ನ ತಂಡದಲ್ಲಿರುವ ಕೆಲವು ಆಪ್ತ -ರೊಂದಿಗೆ ಏನೇನೋ ಹರಟುತ್ತ ,ದೇಗುಲ ಪ್ರವೇಶಿಸುವ ಸರತಿಯ ಸಾಲಿನಲ್ಲಿ ಇರುತ್ತಾರೆ . ಅದೇ ರೀತಿಯಲ್ಲಿಯೆ ಜೋದಾಅಕ್ಬರ್ ಸಹ ತನ್ನವರೊಂದಿಗೆ ಹರಟುತ್ತಾ ಸರದಿ ಸಾಲಿನಲ್ಲಿ ನಿಂತಿರುತ್ತಾಳೆ , ಅದು ವಿಐಪಿಗಳ ಕಾಮನ್ ಕ್ಯೂ ಎಂದು ಮತ್ತೆ ಹೇಳುವಂತಿಲ್ಲ .
ಆಕಸ್ಮಿಕವಾಗಿ ಪ್ರಣವ್ ಹಾಗು ಜೋಧಾ ಅಕ್ಬರ್ ತಾವು ನಿಂತಿರುವ ಸಾಲಿನಿಂದಲೆ ದೂರದಲ್ಲಿರುವಾಗಲೆ ಪರಸ್ಪರ ಆಕರ್ಷಿರಾಗುತ್ತಾರೆ ಹಾಗು ತದೇಕಚಿತ್ತದಿಂದ ಪರಸ್ಪರ ಕಣ್ಣು ಮಿಟುಕಿಸದೆ ನೋಡಲಾರಂಬಿಸಿದರು , ಹೀಗೆ ದೀರ್ಘ ನೋಟದಿಂದ ತಮ್ಮನ್ನು ತಾವು ಮೈಮರೆತು ಅರೆಕ್ಷಣದ ಬಳಿಕ ಎಚ್ಚೆತ್ತ ಇಬ್ಬರು ಪರಸ್ಪರ ಮುಗುಳು ನಗೆ ಬೀರುತ್ತಾರೆ . ಅಷ್ಟರಲ್ಲಿ ತಾವು ನಿಂತಿದ್ದ ಸರದಿ ಸಾಲು ಹಿಂದೆ ಮುಂದೆ ಸಾಗುತ್ತದೆ ಹಾಗಾಗಿ ಇಬ್ಬರು ತಮ್ಮ ತಮ್ಮ ಸಾಲುಗಳಲ್ಲಿ ಎಲ್ಲೋ ಅದೃಶ್ಯವಾಗುತ್ತಾರೆ .
ಆಕಸ್ಮಿಕವಾಗಿ ಪ್ರಣವ್ - ಜೋಧಾ ಅಕ್ಬರ್ ಪರಸ್ಪರ ತಾವು ನಿಂತಿರುವ ಸಾಲಿನಿಂದ ತುಸು ದೂರದಲ್ಲಿರುವ ವಾಗಲೆ ತದೇಕಚಿತ್ತದಿಂದ ಪರಸ್ಪರರು ಬಿಟ್ಟ ಕಣ್ಣು ಮಿಟುಕಿಸದೆ ನೋಡುತಿದ್ದವರು ಒಂದು ದೀರ್ಘಸಮಯದ ಬಳಿಕ ತಮ್ಮನ್ನು ತಾವು ಎಚ್ಚೆತ್ತುಕೊಂಡು ಮತ್ತೆ ತುಂಟ ನಗೆ ಹೊರಹಾಕಿ ಶ್ರೀರಾಮ ದೇಗುಲ ಹಾಗು ಹನುಮಾನ್ ಚಲಿಸಾ ನೋಡಿಯಾದ ಬಳಿಕ ಕರ ಸೇವಕರು ಹೊಡೆದುರುಳಿಸಿದ ಬಾಬ್ರಿಮಸೀದಿ ಗುಮ್ಮಟವನ್ನು ಅಲ್ಲಿಯ ಅಲಹಾಬಾದ್ ಹೈಕೋರ್ಟ್ ಆದೇಶ ಪ್ರಕಾರ ತಾತ್ಕಾಲಿಕ ಸಮಯದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಅಲ್ಲಿಯ ರಾಜ್ಯಸರ್ಕಾರಕ್ಕೇ ಆದೇಶ ನೀಡಿದ ಪ್ರಯುಕ್ತ ರೀಪೇರಿ ಕಾಣದ ಮಸೀದಿಯನ್ನು ಒಳಹೊರಗೆ ಒಂದು ಸುತ್ತು ಹಾಕಿಕೊಂಡು ಬಂದು ಅಲ್ಲೇ ಮಸೀದಿ ಆವರಣದಲ್ಲಿ ನಿಂತಾಗ ಮತ್ತೆ ಅಕಸ್ಮಿಕ ಎಂಬಂತೆ ಇಬ್ಬರು ಪರಸ್ಪರ ಎದುರಾಗುತ್ತಾರೆ .
ಏನೋ ಕುತೂಹಲಕ್ಕೆ ಎಂಬಂತೆಯೊ , ಮೋಹಕ್ಕೊ ಇಲ್ಲ ವ್ಯಾಮೋಹಕ್ಕೊ ಇಬ್ಬರು ಬಲಿಯಾಗಿ ಪರಸ್ಪರರು ಮಾತಾಡ ಬಯಸುತ್ತಾರೆ . ಆದರೆ ಅದು ಹೇಗೆ ಸಾದ್ಯ ? ಅವರಿಬ್ಬರು ಅಪರಿಚಿತರು ಅನ್ಯ ಧರ್ಮ ಅವರೊಟ್ಟಿಗಿರುವ ಅವರ ಪರಿವಾರದ ಕಣ್ತಪ್ಪಿಸಿ ಮಾತಾಡುವುದು ಅಸಾಧ್ಯವೇ .ಹಾಗಾಗಿ ಮೌನ ಹಾಗು ಕಣ್ಸನ್ನೆ ತುಟಿಗಳ ಅದುರುವಿಕೆ ಅಷ್ಟಕ್ಕೆ ಅವರ ಬಯಕೆಗಳ ಹಂಚಿಕೆ ಸೀಮಿತವಾಗಿ ಉಳಿಯಿತು .
ಈ ಘಟನೆಯ ಬಳಿಕ ಪ್ರಣವ್ ಈ ಟ್ರಿಪ್ ಬಗ್ಗೆ ತನ್ನ ಆಸಕ್ತಿಯನ್ನೇ ಕಳೆದುಕೊಳ್ಳುತ್ತಾನೆ . ಅಷ್ಟೇ ಅಲ್ಲ ಜೋಧಾ ಅಕ್ಬರ್ ಎಂಬ ಪಾಕಿಸ್ತಾನ್ ಬೆಡಗಿಯ ಅಂದ ಚಂದಕ್ಕೆ ಮನಸೋತು ಕೂತಲ್ಲಿ ನಿಂತಲ್ಲಿ ಅವಳ ಬಗ್ಗೆ ಹಗಲು ಕನಸು ಕಾಣತೊಡಗಿದನು . ಸೀತಾರಸೋಯಿ ದೇಗುಲಕ್ಕೆ ಪರಿವಾರದೊಂದಿಗೆ ಪ್ರಣವ್ ಹೋಗಿ ಸೀತಾ ಮೂರ್ತಿಗೆ ಕೈ ಮುಗಿಯಲೆಂದು ಹೋದರೆ ಗರ್ಭಗುಡಿಯಲ್ಲಿ ಸೀತಾ ಮಾತಾ ಬದಲು ಪಾಕಿಸ್ತಾನದ ಆ ಬೇಡಗಿಯೇ ನಿಂತತೆ ಅವಳಿಗೆ ಕೈ ಮುಗಿದಂತೆ ಇವನಿಗೆ ಭಾಸವಾಯಿತು . ಹಾಗು ತಾನು ಹೋದ ಕಡೆಯಲೆಲ್ಲಾ ಕಾಣುವ ಆ ಜನಜಂಗುಳಿಯಲ್ಲಿ ಯಾವುದೇ ಸುಂದರ ಹುಡುಗಿ ಕಂಡರೆ ಆ ಪಾಕ್ ಬೇಡಗಿಯೆ ಕಂಡಂತೆ ಇವನಿಗೆ ಭ್ರಮೆಯೊ ದಿಗ್ಭ್ರಮೆಯೋ ಆಗಿ ಇವನ ತನು ಮನ ಪೂರಾ ಆವರಿಸಿ ಒಂದೇ ಸಮನೆ ಕಾಡತೊಡಗಿದಳು .
ಹೀಗೆ ಇತ್ತ ಪ್ರಣವ್ ತನಗೆ ಅರಿವಿಲ್ಲದಂತೆ ಪಾಕಿಸ್ತಾನದ ಆ ಬೆಡಗಿಯ ಪ್ರೇಮ ಪಾಶಕ್ಕೆ ಬಿದ್ದು ಹೋಗಿದ್ದಾನೆ . ಅದೇ ರೀತಿಯಲ್ಲಿ ಅತ್ತ ಜೋಧಾ ಅಕ್ಬರ್ ಸಹ ತನಗೆ ಗೊತ್ತಿಲ್ಲದಂತೆ ಭಾರತದ ಆ ಯುವಕನ ಯಾವುದೋ ಮೋಹದ ಸೆಳೆತದ ಸುಳಿಗೆ ಸಿಲುಕಿ ಹೊರ ಬರಲು ಆಗದೆ ಒಂದೇ ಸಮನೆ ಚಡಪಡಿಸುತಿದ್ದಾಳೆ .
ಪ್ರಣವ್ ಅನ್ನು ನೋಡಿದ ಆ ಕ್ಷಣದಿಂದ ತನ್ನ ಕನಸು ಮನಸು ತುಂಬಾ ತುಂಬಿಕೊಂಡು , ಸದಾ ಅವನೊಂದಿಗೆ ಇರಬೇಕು ಅವನ ತೊಳ್ತೆಕ್ಕೆಯಲ್ಲಿ ಬಂಧಿಯಾಗಿರಬೇಕು ಅವನ್ನೇ ನೋಡುತ್ತಿರಬೇಕು ಅವನ ಸನಿಹದಲ್ಲೇ ಇರಬೇಕು ಎಂದೆಲ್ಲಾ ಚಡಪಡಿಸುತ್ತಿದ್ದಾಳೆ .
ಒಟ್ಟಾರೆ , ಇಬ್ಬರಿಗೂ ಒಂದೇ ತೇರನಾದ ಬಯಕೆಗಳು ಚಿಮ್ಮುತಿದ್ದು , ಮನದ ಕಾರಂಜಿಯು ತರತರದ ಕನಸು ಗಳನ್ನು ಹೆಣೆಯತೊಡಗಿದೆ . ಇದನ್ನು ಇವರು ಯಾರಿಗು ಹೇಳಿ ಕೊಳ್ಳುವಂತಿಲ್ಲ ಹಾಗೆ ಒಬ್ಬರೆ ಅದುಮಿಟ್ಟುಕೊಳ್ಳಲು ಆಗದೆ ಒಂದು ರೀತಿಯ ಕಾವು ಹಾಗು ಕುಂಡಿಯ ಮೇಲೆ ಎದ್ದ ಬೊಬ್ಬೆಯನ್ನೂ ಯಾರಿಗು ತೋರಿಸಲಾಗದೆ ಅದರ ನೋವಿನ ಭಾದೆಯನ್ನು ಅನುಭವಿಸಲು ಆಗದೆ ಒದ್ದಾಡು ತ್ತಿದ್ದಾರೆ ಇಬ್ಬರು .
ಇಲ್ಲೆಲ್ಲಿಯಾದರು ತನ್ನವನು - ತನ್ನವಳು ಮತ್ತೆ ಕಾಣಬಹುದೇ ಎಂಬ ಆಸೆ ಕಣ್ಣುಗಳಿಂದ ಜನದಟ್ಟಣೆ ಕಡೆ ನೋಡುತ್ತಾರೆ . ಹೀಗಿರುವಾಗ ಒಮ್ಮೆ ಬಾಬ್ರಿ ಮಸೀದಿಯ ಹೊರ ವಲಯದಲ್ಲಿ ಯಾವುದೋ ಗುಂಪಿನಲ್ಲಿ ಪ್ರಣವ್ ತರಹದ ಹುಡುಗನನ್ನು ಕಂಡು ಜೋಧಾ ಅಕ್ಬರ್ ಆತನನ್ನು ಪ್ರಣವ್ ಎಂದೆ ಭಾವಿಸಿ ಮಾತಾಡಬಯಸಿ ತನ್ನ ಪರಿವಾರದ ಕಣ್ತಪ್ಪಿಸಿ ತುಸು ದೂರ ಬಂದು ಶ್ ಶ್ ಎಂದು ಕರೆದಾಗ ಆ ಹುಡುಗ ಇವಳತ್ತ ತಿರುಗಿ what what what do you want from me ಎಂದು ಇವಳತ್ತ ತಿರುಗಿ ಬರುತ್ತಾ ಕೇಳಿದಾಗ , ಜೋಧಾ ನೀರಾಶಳಾಗಿ ಇವನಿಂದ ಏನನ್ನು ನಿರೀಕ್ಷಿಸದೆ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸು ತಿರುಗಿ ತನ್ನ ತಂಡ ಸೇರಿಕೊಂಡಳು .
ಯಾರಾಕೆ ?---- ಯಾರವನು ?
ಎಲ್ಲಿಯವನು ?--- ಎಲ್ಲಿಯವಳು ?
ಹೆಸರೇನು ?--- ಏನು ಮಾಡುತ್ತಿದ್ದಾರೆ ?
ಇತ್ಯಾದಿ ಪ್ರಶ್ನೆಗಳು ಇಬ್ಬರ ಮನದ ಮೂಲೆಯಲ್ಲಿ ಒಂದೇ ಸಮನೆ ಪರಸ್ಪರರ ಬಗ್ಗೆ ಯಕ್ಷ ಪ್ರಶ್ನೆಯಾಗಿ ಕಾಡತೊಡಗಿದ್ದು ಸುಳ್ಳೇನಲ್ಲ !
******************
ರಾಮಾಜೋಯಿಸ್ ರವರ ತಂಡದ ಗೈಡ್ ಅಯೋಧ್ಯೆಯಲ್ಲಿ ತೋರಿಸಬಹುದಾದ ಎಲ್ಲಾ ಕ್ಷೇತ್ರಗಳನ್ನು ತೋರಿಸಿ ಆದ ಬಳಿಕ , ಕೊನೆಗೆ ಅಲ್ಲಿಯ ಸ್ಥಳೀಯ ಜನರ ಭಾಷೆಯಲ್ಲಿ ಗೋಗ್ರ ಎಂದು ಕರೆಯುವ ಸರಯೂ ನದಿಯ ತೀರದಲ್ಲಿರುವ ಹನುಮಾನ್ ಗುಡಿಯ ಆವರಣದಲ್ಲಿರುವ ಮರದ ಕೆಳಗೆ ಎಲ್ಲರನ್ನು ಕೂರಿಸಿಕೊಂಡು ಹಿಂದಿಯಲ್ಲಿ ಈ ರೀತಿ ಮಾತಾಡುತ್ತಾನೆ .
ಮಾನ್ಯರೇ , ನೋಡಿ ಈಗ ನೋಡಿದ ಪ್ರಮುಖ ಸ್ಥಳಗಳನ್ನು ಈಗ ಮತ್ತೊಮ್ಮೆ ೨-೩ ಸಾಲುಗಳಲ್ಲಿ ಹೇಳ ಬಯಸುತ್ತೇನೆ . ಮೊದಲನೆಯದಾಗಿ
೧. ರಾಮದೇಗುಲ :----
ಅಯೋಧ್ಯ ನಗರದ ಪ್ರಮುಖವಾದ ದೇಗುಲ ಇದೆ . ಇದು ರಾಮಕೂಟ್ ಎಂಬ ಗುಡ್ಡದ ಮೇಲೆ ಇದೆ . ಕೆಲವು ಶತಮಾನಗಳ ಕಾಲ ಹಿಂದೂ ಮುಸ್ಲಿಂ ಸಂಘರ್ಷಕ್ಕೆ ಕಾರಣವಾಗಿದ್ದು ಮುಖ್ಯವಾಗಿ ಈ ದೇಗುಲ ೨.೭ ಎಕರೆ ವಿಸ್ತೀರ್ಣ ಹೊಂದಿದೆ ಹಾಗೂ ೪೫ ಎಕರೆ ದೇಗುಲದ ಸುತ್ತಲ ಜಾಗವು ಈಗ ರಾಜ್ಯ ಸರ್ಕಾರ ವಶದಲ್ಲಿದೆ . ಇದನ್ನು ಹಿಂದುಗಳು ರಾಮದೇಗುಲ ಅಥವ ರಾಮಜನ್ಮಭೂಮಿ ಎಂದೂ ಹಾಗೆ ಮುಸ್ಲಿಮರು ಬಾಬ್ರಿ ಮಸೀದಿ ಎಂದು ಕರೆಯುತ್ತಾರೆ .
ಈ ಬಾಬ್ರಿ ಮಸೀದಿಯ ಮೇಲಿನ ಗುಮ್ಮಟವನ್ನು ಡಿಸೆಂಬರ್ ೬ , ೧೯೯೨ ರಂದು ಲಕ್ಷಾಂತರ ಸಂಖ್ಯೆಯ ಕರ ಸೇವಕರು ಹೊಡೆದು ಉರುಳಿಸಿದರು . ಆಗೋ ನೋಡಿ ಎನ್ನುತ್ತಾ ಬಾಬ್ರಿ ಮಸೀದಿಯತ್ತ ಕೈ ತೋರಿಸುತ್ತಾನೆ . ಅಷ್ಟೇ ಅಲ್ಲ ಕೋರ್ಟ್ ಮುಂದಿನ ಆದೇಶ ನೀಡುವವರೆಗೂ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿದೆ ಎಂಬ ಮಾತು ಹೇಳುತ್ತಾ , ಈಗಿನ ರಾಮನ ಗರ್ಭಗುಡಿ ಇರುವ ಜಾಗವು ರಾಮ ಹುಟ್ಟಿದ್ದು ಅಂದರೆ ತಾಯಿ ಕೌಸಲ್ಯೆ ಅಂತಪುರ ಆಗಿತ್ತೆಂದು ಸ್ಥಳ ಪುರಾಣ ಹೇಳುತ್ತದೆ ಹಾಗೆ ಭಕ್ತರ ನಂಬಿಕೆ ಸಹ ಇದೆ ಆಗಿದೆ .
೨ .ಸೀತಾ ರಸೋಯಿ :-----
ಇದು ಸೀತಾ ಮಾತೆಯ ಅಡುಗೆ ಮನೆ . ಶ್ರೀರಾಮನನ್ನು ಮದುವೆಯಾದ ಬಳಿಕ ಮೊದಲು ರಾಮನಿಗಾಗಿ ಸೀತೆ ಈ ಜಾಗದಲ್ಲಿ ಅಡುಗೆ ತಯಾರಿಸಿದ್ದು . ಆದರೆ ಇಂದು ಈ ಜಾಗೆ ಯಲ್ಲಿ ಸೀತಾರಾಮ , ಊರ್ಮಿಳಾ ಲಕ್ಷ್ಮಣ , ಮಾಂಡವಿ ಭರತ , ಶೃತಕೀರ್ತಿ ಶತ್ರುಘ್ನ ದಂಪತಿಯರ ವಿಗ್ರಹ ಇದೆ .
೩, ಗುಂನಾಮಿ ಬಾಬಾರವರ ಆಶ್ರಮ :-----
ಭಾರತ ಮಾತೆಯ ದಾಸ್ಯ ವಿಮೋಚನೆಗಾಗಿ ಬ್ರಿಟಿಷರ ವಿರುದ್ಧ ಹೋರಾಡಲು ಅಜಾದ್ ಎ ಹಿಂದ್ ಎಂಬ ಸೇನೆ ಕಟ್ಟಿ ಈ ನಿಮಿತ್ತ ಅನ್ಯ ದೇಶಗಳ ನೆರವು ಕೋರಿ ಕೊನೆಗೆ ವಿಮಾನ ಅಪಘಾತದಲ್ಲಿ ಮಡಿದರು ಎಂದು ( ಸುಳ್ಳು ) ಸುದ್ದಿ ಹರಡಿದ ಬಳಿಕ ಬೋಸರು ಇದೆ ಅಯೋಧ್ಯಾ ನಗರದಲ್ಲಿಯೇ ಗುಮ್ನಾಮಿ ಬಾಬಾ ಎಂಬ ಸ್ವಾಮೀಜಿ ಹೆಸರಲ್ಲಿ ವೇಷಮರೆಸಿಕೊಂಡು ಭೂಗತರಾಗಿ ಉಳಿದು ಕೊನೆಗೆ ೧೯೮೫ ರಲ್ಲಿ ಮರಣವಾದರು . ಆಗ ಇಲ್ಲಿಯೇ ರಹಸ್ಯವಾಗಿಯೇ ಇವರನ್ನು ವಿಧಿವತ್ತಾಗಿ ಅಂತ್ಯಸಂಸ್ಕಾರ ಮಾಡಲಾಯಿತು .
೪, ಹನುಮಾನ್ ಗುಡಿ :------+
ಹನುಮಂತನನ್ನು ಅಯೋಧ್ಯಾ ನಗರದ ಕೊತ್ವಾಲ ಎಂದು ಕರೆಯಲಾಗುತ್ತದೆ . ಈ ದೇಗುಲವನ್ನು ರಾಜಾ ವಿಕ್ರಮಾದಿತ್ಯ ಸ್ಥಾಪಿಸಿದನು . ಈ ದೇಗುಲಕ್ಕೆ ಒಟ್ಟು ೭೬ ಮೆಟ್ಟಿಲು ಇದ್ದು , ತಾಯಿ ಅಂಜನಾದೇವಿಯ ಮಡಿಲಲ್ಲಿರುವ ಬಾಲ ಹನುಮನ ಮೂರ್ತಿ ಇಲ್ಲಿದೆ . ಮುಂದೆ ನವಾಬ ಮನ್ಸೂರ್ ಅಲಿ ಈ ದೇಗುಲವನ್ನು ತನ್ನ ವಶಪಡಿಸಿಕೊಂಡು ಮಸೀದಿ ಮಾಡುವ ಈತನ ಹಲವು ಪ್ರಯತ್ನಗಳು ವಿಫಲವಾಯಿತು .
೬, ತೇತ್ರಾ ಕೆ ಠಾಕೂರ್ :---------
ಶ್ರೀರಾಮನು ಅಶ್ವಮೇಧಯಾಗವನ್ನು ಮಾಡಿದ ಸ್ಥಳವಿದು ಎಂದು ಸ್ಥಳಪುರಾಣ ಹೇಳುತ್ತದೆ . ಹೀಗೆ , ಇಲ್ಲಿ ವಾಲ್ಮೀಕಿ ಭವನ , ಕೊಸಲ್ಯ ಭವನ , ಜೈನ ಮತ್ತು ಬೌದ್ಧ ಭವನ ಗುರುದ್ವಾರ ಎಂದೆಲ್ಲಾ ನೋಡತಕ್ಕ ಸ್ಥಳಗಳ ಸಂಖ್ಯೇ ಸುಮಾರು ೧೦೦ ನ್ನು ದಾಟುತ್ತೆ .
ಆಹಾ ! ಬನ್ನಿ , ರಾಮನು ಇಹಲೋಕ ತ್ಯಜಿಸಿದ ಸ್ಥಳವನ್ನು ಹಾಗೆ ತನ್ನ ಪ್ರಾಣವು ಆತ್ಮವು ಆಗಿದ್ದ ಹಾಗೆ ತಮ್ಮನು ಆದ ಲಕ್ಷ್ಮಣನು ನಿರ್ತಾಣವಾದ ಜಾಗವನ್ನು ನೋಡಿದರೆ ಬಹುಶಃ ನಿಮ್ಮ ಅಯೋಧ್ಯಾ ತೀರ್ಥಯಾತ್ರೆ ಬಹುಪಾಲು ಮುಕ್ತಾಯ ಆದಂತೆ ಅನ್ನುತ್ತಾನೆ ಗೈಡ್ .
ಹಾಗೇ , ಈ ಅಯೋಧ್ಯಾ ನಗರದ ಬಗ್ಗೆ ಸೂಕ್ಷ್ಮಾ ವಾಗಿ ಹೇಳುತ್ತೇನೆ ಕೇಳಿ ಎನ್ನುತ್ತಾ , ಈ ನಗರವು ಕೋಸಲ ಸಾಮ್ರಾಜ್ಯದ ರಾಜಧಾನಿ ಯಾಗಿತ್ತು . ಅಂದರೆ ಸೂರ್ಯವಂಶದ ಇಕ್ಷಾಕು ಕುಲಸ್ಥರ ರಾಜದಾನಿ ಇದಾಗಿತ್ತು . ಅಂಬರೀಶ ಅಜ ಸತ್ಯಹರಿಶ್ಚಂದ್ರ ಭಗೀರಥ ದಶರಥ ರಾಮ ಲವ ಹೀಗೆ ಮುಂತಾದ ೩೫ ಕ್ಕು ಹೆಚ್ಚು ಚಕ್ರವರ್ತಿಗಳು ಇಲ್ಲಿಂದ ರಾಜ್ಯಬಾರ ಮಾಡಿದ್ದಾರೆ . ಹೀಗೆ ಲವ ಮಹಾರಾಜನ ಸಂತತಿಯ ಸುಮಾರು ೨೫೦ ನೆಯ ತಲೆಮಾರಿನ ಕುಡಿ ಈಗಲು ಭಾರತದಲ್ಲಿ ಇರುವುದಾಗಿ ಟಿವಿ fbook ತುಂಬಾ ಬಂದದ್ದು ಬಹುಶ ನೀವು ನೋಡಿರಬೇಕು ಇಲ್ಲ ಕೇಳಿರಬೇಕು .
ಕ್ರಿಸ್ತ ಪೂರ್ವ ಯುಗಕ್ಕೆ ಅಯೋಧ್ಯ ನಗರವು ಸುಮಾರು ೨೫೦ ಚದುರ ಮೈಲು ವಿಸ್ತಾರವಾಗಿತ್ತು , ಹಾಗು ಸ್ಥಳೀಯರ ಭಾಷೆ ಅವಧಿ ಆಗಿದ್ದು ಅವರ ಭಾಷೆಯಲ್ಲಿ ಗೋಗ್ರಾ ಎಂದು ಕರೆಯುವ ಸಾರಾಯು ನದಿ ತೀರದಲ್ಲಿದೆ ಈ ನಗರ .
ಕಾಲಾಂತರದಲ್ಲಿ ಮೌರ್ಯ ಗುಪ್ತರ ಕಾಲ ಘಟ್ಟದಲ್ಲಿ ಅಯೋಧ್ಯ ನಗರ ಬೌದ್ಧ ಕೇಂದ್ರವಾಗಿ ಗಮನ ಸೆಳೆಯಿತು . ಜೈನರ ೧ ನೆ ತೀರ್ಥಂಕರ ರಿಷಭದೇವ ಹಾಗು ಮುಂದಿನ ೫ ತೀರ್ಥಂಕರರು ಇಲ್ಲಿಯೇ ಹುಟ್ಟಿದರು . ಇನ್ನು ೨೪ ನೆಯ ತೀರ್ಥಂಕರನಾದ ಮಹಾವೀರನು ಈ ನಗರಕ್ಕೆ ಭೇಟಿ ಕೊಟ್ಟಿದ್ದನು ಎಂಬುದನ್ನು ಧರ್ಮ ಗ್ರಂಥ ಹೇಳುತ್ತವೆ .
*******************""""
ಹಾ ! ಇನ್ನು ಈ ದೇಶದಲ್ಲಿ ಪ್ರಥಮ ಬಾರಿಗೆ ಶ್ರೀರಾಮಮಂದಿರ ಈ ಅಯೋಧ್ಯ ನಗರದಲ್ಲಿ ಹೇಗೆ ಕಟ್ಟಲಾಯಿತು ಎಂಬ ವಿಚಾರವನ್ನು ಒಂದು ಸಣ್ಣ ಪ್ರಯತ್ನದಲ್ಲಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣವೆ ಎಂದು ತನ್ನ ಗಂಟಲು ಸರಿಪಡಿಸಿಕೊಳ್ಳುತ್ತಾನೆ ಗೈಡ್ .
ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರ ಮಹಾಪ್ರಭುಗಳಿಗೆ ತಮ್ಮ ಅವತಾರ ಸಮಾಪ್ತಿ ಹತ್ತಿರ ಬಂತು ಎಂದು ಖಾತ್ರಿ ಆಗುತ್ತಿದ್ದಂತೆ , ತಮ್ಮ ವಿಶಾಲವಾದ ಸಾಮ್ರಾಜ್ಯವನ್ನು ಒಟ್ಟು ೮ ಭಾಗ ಮಾಡಿ ತನ್ನ ಹಾಗು ತಮ್ಮಂದಿರ ಮಕ್ಕಳು ಸೇರಿ ಒಟ್ಟು ೮ ಮಕ್ಕಳಿಗೆ ಒಂದೊಂದು ಭಾಗವನ್ನು ಹಂಚಿಕೆ ಮಾಡುತ್ತಾನೆ .
ತನ್ನ ಸಾಮ್ರಾಜ್ಯದಲ್ಲಿನ ಭೂಭಾಗವನ್ನು ಅಂದರೆ ,ಕಿರಿ ಮಗ ಲವನಿಗೆ ಲವಸ್ತಲ ಹಿರಿಮಗ ಕುಶನಿಗೆ ಕುಶಸ್ತಲ ಎಂಬ ಪ್ರಾಂತ ನೀಡಿದನು . ಹೀಗೆ ೮ ಪ್ರಾಂತದಲ್ಲಿ ಎಲ್ಲ ಮಕ್ಕಳು ಚೆನ್ನಾಗಿ ರಾಜ್ಯವನ್ನಾಳುತಿದ್ದಾರೆ ಯತೋಚಿತವಾಗಿ ಹಾಗೆ ಧರ್ಮಮಾರ್ಗದಲ್ಲಿ .
ಈಗ ರಾಮ ಲಕ್ಷ್ಮಣ ಭರತ ಶತ್ರುಘ್ನ ಯಾರು ಇಲ್ಲ . ಅವರುಗಳೆಲ್ಲಾ ಭೂಲೋಕ ತ್ಯಜಿಸಿ ಹಲವು ವರ್ಷ ಉರುಳಿ ಹೋಗಿದೆ .
ಹೀಗಿರುವಾಗ ರಾಮನ ಕಿರಿಮಗ ಲವನು ತನ್ನ ಆಸ್ಥಾನದಲ್ಲಿರುವ ಹಿರಿಯ ಮುತ್ಸದ್ದಿಗಳು ಪಂಡಿತರು ಮುನಿಶ್ರೇಸ್ಟರು ಸದಾ ರಾಮನ ಗುಣಗಾನ ಮಾಡುತಿದ್ದನ್ನು ಕೇಳಿ , ತಾನೇಕೆ ತನ್ನ ಅಪ್ಪಾಜಿಯ ಹೆಸರಿನಲ್ಲಿ ದೇಗುಲವನ್ನು ಕಟ್ಟಬಾರದು ಎಂದು ಮನದಲ್ಲೇ ಹಂಬಲಿಸಿ , ಹಲವು ಬಾರಿ ಒಬ್ಬನೆ ಅದರ ಬಗ್ಗೆ ಪರ ವಿರೋದ ಎಲ್ಲ ಯೋಚಿಸಿ ಒಮ್ಮೆ ತನ್ನ ಈ ನಿರ್ಧಾರವನ್ನು ಅಳೆದು ತೂಗಿ ಕೊನೆಗೆ ತನ್ನ ಸಭೆಗೆ ತಿಳಿಸುತ್ತಾನೆ . ಆಗ ಎಲ್ಲ ಮುನಿಗಳು ಮುತ್ಸದ್ದಿಗಳು ಮಂತ್ರಿಗಳು ಪಂಡಿತರು ಅವಶ್ಯವಾಗಿ ಕಟ್ಟಬಹುದು ಎಂದು ಒಕ್ಕೊರಲಿನಿಂದ ಒಪ್ಪಿಗೆ ಇತ್ತರು . ಅಲ್ಲದೆ ಈ ಕಾರ್ಯ ಬಹು ಶೀಘ್ರದಲ್ಲೆ ನಡೆಯಲಿ ಎಂದು ಹಾರೈಸಿದರು .
ಹೀಗೆ ಲವನು ಹಿರಿಯರಿಂದ ಒಪ್ಪಿಗೆ ಪಡೆದ ಬಳಿಕ ತನ್ನ ಅಭಿಲಾಷೆಯಂತೆ ತನ್ನ ತಂದೆ ಶ್ರೀರಾಮನ ದೇಗುಲವನ್ನು ನಿರ್ಮಿಸುವ ಯೋಜನೆ ಕಾರ್ಯರೂಪಕ್ಕೆ ತರಲು ಮುಂದಾ ಗುತ್ತಾನೆ . ರಾಮನು ಹುಟ್ಟಿದ ಜಾಗದಲ್ಲಿ ಅಂದರೆ ಅಯೋಧ್ಯ ನಗರದ ಪಶ್ಚಿಮಕ್ಕಿರುವ ರಾಮ್ ಕೂಟ ಎಂಬ ಗುಡ್ಡದ ಮೇಲೆ . ಆಸ್ಥಾನ ಪಂಡಿತರು ಮುನಿ ಶ್ರೇಷ್ಠರು ಯತಿ ಗಳು ರಾಜಗುರು ಹೀಗೆ ಎಲ್ಲರ ಆಶೀರ್ವಾದ ಪಡೆದು ಅಲ್ಲಿ ರಾಮಮಂದಿರವನ್ನು ನಿರ್ಮಿಸುತ್ತಾನೆ .
ಈ ಮೂಲಕ ಲವ ಚಕ್ರವರ್ತಿ ಈ ಧರೆಯಲ್ಲೆ ಮೊದಲ ಶ್ರೀರಾಮದೇಗುಲ ನಿರ್ಮಿಸಿದ ಕೀರ್ತಿಗೆ ಭಾಜನಕ್ಕೀಡಾದನು ಇನ್ನೊಂದು ವಿಶೇಷ ಏನೆಂದರೆ , ಭರತ ಖಂಡದಲ್ಲಿ ಆ ಕಾಲದಲ್ಲಿ ಸಾಮ್ರಾಜ್ಯ ಇದ್ದರೆ , ಪ್ರಪಂಚದ ಇತರೆ ಭೂ ಭಾಗ ದಲ್ಲಿ ಜನರು ಇನ್ನು ಅಪ್ರಜ್ಞರು ಹಾಗೂ ಅಲೆಮಾರಿಗಳ ಪರಿ ಓದು ಬರಹ ಗೊತ್ತಿಲ್ಲದೆ ಜೀವನ ಸಾಗಿಸುತ್ತಿದ್ದರು .
ಇದೆ ಅದು , ಅದೆ ಇದು ಅಂದರೆ ಲವ ಚಕ್ರವರ್ತಿ ಇಂದ ಆಯೋದ್ಯ ನಗರದ ರಾಮಕೂಟ್ ಎಂಬಲ್ಲಿ ನಿರ್ಮಿತವಾದ ಶ್ರೀರಾಮದೇಗುಲವು ಮುಂದೆ ಅನೇಕ ಶತ ಶತಮಾನಗಳಿಂದ ಹಿಂದು- ಮುಸ್ಲಿಂ ಕಿತ್ತಾಟಕ್ಕೆ ಕಾರಣವಾಯಿತು ಎನ್ನುತ್ತಾ ತುಸು ಹೊತ್ತು ಮೌನಕ್ಕೆ ಜಾರುತ್ತನೆ ಗೈಡ್ .
ಬಳಿಕ ಮತ್ತೆ ಮಾತು ಮುಂದುವರೆಸುತ್ತಾ , ಹೀಗೆ ಲವ ಚಕ್ರವರ್ತಿಗಳಿಂದ ಅಂದು ಕಟ್ಟಲ್ಪಟ್ಟ ಆ ದೇಗುಲವು ಮುಂದೆ ಸುಮಾರು ಶತಮಾನಗಳ ಕಾಲ ನಿರಂತರವಾಗಿ ಪೂಜಾ ಪುನಸ್ಕಾರಗಳು ಸಾಂಗವಾಗಿ ನೇರವೇರುತಿತ್ತು . ಆದರೆ ಕಾಲಾಂತರದಲ್ಲಿ ಅಯೋಧ್ಯ ನಗರ ಹಾಗೂ ರಾಮದೇಗುಲ ಎಲ್ಲವು ಕಾಲಚಕ್ರಕ್ಕೆ ಸಿಲುಕಿತು . ಕಾಡು ನಾಡಾಗಿ ನಾಡು ಕಾಡಾಯಿತು ಎಂಬ ಕಾಲಾತಾತ್ಪರ್ಯದಂತೆ ಅಯೋಧ್ಯ ನಗರ ಹಾಗೂ ದೇಗುಲದ ಸುತ್ತೆಲ್ಲ ಗಿಡ ಮರ ಪೊದೆ ಎಂದೆಲ್ಲ ಬೆಳೆದು ದಟ್ಟವಾದ ಗಿಡ ಮರಗಳ ಕಾಡಿನಿಂದ ಮುಚ್ಚಿ ಹೋಯಿತು . ಹಗಲು ಸರಿದು ರಾತ್ರಿ ಬಂದು ರಾತ್ರಿ ಸರಿದು ಮತ್ತೆ ಹಗಲು ಬರುವಂತೆ . ಹೀಗೆ ಕಾಲ ಚಕ್ರ ಉರುಳಿದಂತೆ ನಾಡು ಕಾಡಾಗಿ ಕಾಡು ಮತ್ತೆ ನಾಡಾಯಿತು ಎನ್ನುವಂತಾಗಿತ್ತು .
ಉಜ್ಜಯಿನಿ ದೊರೆ ಆರನೇ ವಿಕ್ರಮಾದಿತ್ಯ ಕ್ರಿಸ್ತ ಪೂರ್ವ ೫೬ ರಲ್ಲಿ ಶಕರನ್ನು ಸೋಲಿಸಿದ ನೆನಪಿಗಾಗಿ ವಿಕ್ರಮ ಶಕೆಯನ್ನು ಆರಂಭಿಸಿದ ಆಗಲೇ ಈ ದೇಗುಲದ ಜೀರ್ಣೋದ್ದಾರ ಆಯಿತು .
ಅಂದರೆ ಒಂದು ದಿನ ರಾಜ ವಿಕ್ರಮಾದಿತ್ಯ ಮಲಗಿದ್ದಾಗ ಸರಿ ಸುಮಾರು ಬೆಳಗ್ಗಿನ ೩-೩೦ ರ ಸಮಯ ಎನ್ನಬಹುದು ಆಗ ಬೀಕರವಾದ ಸ್ವಪ್ನವನ್ನು ಕಾಣುತ್ತಾನೆ . ಆ ಬಳಿಕ ಬೆಳಗ್ಗೆ ತನ್ನ ಕನಸಿನಲ್ಲಿ ಕಂಡಂತೆ ಯಥಾವತ್ತಾಗಿ ತನ್ನ ಮಂತ್ರಿಗಳು ಪಂಡಿತರು ಗುರುಗಳು ಮುನಿಶ್ರೇಷ್ಠರ ಬಳಿ ಹೇಳಿಕೊಂಡರು . ಆಗ ಗುರುಗಳು ಮುನಿ ಶ್ರೇಷ್ಠರು ಮೊದಲು ಆ ಜಾಗವನ್ನು ಆದಷ್ಟು ಬೇಗನೆ ಪತ್ತೆಮಾಡಿಸಿ ಅದನ್ನು ಜೀರ್ಣೋದ್ದಾರ ಮಾಡುವಂತೆ ಸೂಚಿಸುತ್ತಾರೆ .
ಹೀಗೆ ರಾಜಾಜ್ನೆ ದೊರೆತ ಕೂಡಲೆ ಮುಖ್ಯಮಂತ್ರಿ ರಾಜಗುರು ಹೇಳಿದ ದಿಕ್ಕಿಗೆ ಸೇನಾಪತಿ ಅಪಾರ ಸಂಖ್ಯೆಯ ಸೈನ್ಯವನ್ನು ಅಟ್ಟಿದನು . ರಾಜಾವಿಕ್ರಮಾದಿತ್ಯರು ಕನಸಲ್ಲಿ ಕಂಡಂತೆ ಯಾವುದಾದರೂ ಸ್ಥಳ ಪ್ರದೇಶ ಕಂಡರೆ ಇಲ್ಲವೇ ಪತ್ತೆ ಸಿಕ್ಕ ಕೂಡಲೇ ತಿಳಿಸಬೇಕೆಂದು ಎಲ್ಲ ಸೈನಿಕರಿಗೆ ಮತ್ತೆ ಮತ್ತೆ ಮನವರಿಕೆ ಮಾಡಿದ್ದರು . ಹೀಗೆ ಸೈನಿಕರು ಹಲವು ತಿಂಗಳ ಸತತ ಪರಿಶ್ರಮ ಹಾಗೂ ಹುಡುಕಾಟದ ಫಲವೆಂಬಂತೆ ರಾಜವಿಕ್ರಮಾದಿತ್ಯರು ತನ್ನ ಕನಸಲ್ಲಿ ಕಂಡಂತೆ ಇದ್ದ ಅ ಸನ್ನಿವೇಶದ ಸ್ಥಳವೊಂದು ಪತ್ತೆಯಾಯಿತು . ರಾಜನಿಗೆ ಈ ಸುದ್ದಿ ತಿಳಿದ ಕೂಡಲೇ ರಾಜ ಪರಿವಾರ ಆ ಸ್ಥಳಕ್ಕೆ ಬಂತು . ರಾಜವಿಕ್ರಮಾದಿತ್ಯರು ಈ ಸ್ಥಳ ನೋಡಿ ನಿಜಕ್ಕು ದಿಗ್ಬ್ರಮೆಗೆ ಈಡಾಗುತ್ತಾರೆ ಏಕೆಂದರೆ ತಾನು ಅಂದು ಕನಸಲ್ಲಿ ಕಂಡ ಸ್ಥಳ ಯಥಾವತ್ತಾಗಿ ಅದೆ ರೀತಿಯಿತ್ತು ಹೌದು , ಇದೆ ಬೆಟ್ಟ ಇದೆ ನದಿ ಇದೆ ನಗರ . ಹೌದು ಇದೆ ಇದೆ ಗುರುಗಳೇ ಇವೆ ಗಿಡ ಗಂಟಿ ಪೂಜೆ ಇಲ್ಲದ ಅನಾಥವಾದ ದೈವ ದೇಗುಲ ಇದೆ ಇದೆ . ಇದರಲ್ಲಿ ಯಾವ ಅನುಮಾನವೇ ಇಲ್ಲ ಗುರುಗಳೇ . ನನ್ನನು ನಾನೇ ನಂಬಲಾಗುತ್ತಿಲ್ಲ ಎಂದು ಹೀಗೂ ಉಂಟೆ ಎಂದು ತನಗೆ ತಾನೇ ಅಚ್ಚರಿಗಿಡಾಗುತ್ತನೆ .
ಎಲ್ಲರು ಒಮ್ಮೆ ಪಾಳು ಬಿದ್ದು ದೇಗುಲದ ಮೇಲೆ ಹಬ್ಬಿರುವ ಗಿಡ ಮರ ನದಿ ಅಲ್ಲಿನ ಗುಡ್ಡ ಎಲ್ಲವನ್ನು ಕಣ್ತುಂಬಿಕೊಳ್ಳುತ್ತಾರೆ.
ಹೀಗೆ ಲವಚಕ್ರವತ್ರಿಯಿಂದ ನಿರ್ಮಿತವಾದ ಅಂದಿನ ಅಯೋಧ್ಯಾ ರಾಮದೇಗುಲ ಮತ್ತೆ ಏಷ್ಟೋ ಶತಮಾನಗಳ ಬಳಿಕ ಹಾಳಾದ ಈ ದೇಗುಲ ಉಜ್ಜೈನಿ ಸಾಮ್ರಾಟ ಆರನೇ ವಿಕ್ರಮಾದಿತ್ಯ ಪುನರುಜ್ಜೀವನಗೊಳಿಸಿದನು . ಬಳಿಕ ಮತ್ತೆ ಹಲವು ಶತಮಾನ ಕಾಲ ನಿರಂತರವಾಗಿ ಪೂಜೆ ಪುನಸ್ಕಾರ ಎಂದಿನಂತೆ ಯಥೋಚಿತಾಗಿ ಯಾವ ಅಡ್ಡಿ ಆತಂಕವಿಲ್ಲದೆ ನಿರ್ವಿಘ್ನವಾಗಿ ನಡೆದುಕೊಂಡು ಬಂತು .
ಆದರೆ…ಕ್ರಿ.ಶ.೧೫೨೮ ರಲ್ಲಿ ಪಶ್ಚಿಮ ಏಷ್ಯಾದಿಂದ ಬಂದ ದಾಳಿಕೋರನಾದ ಬಾಬರ್ ಎಂಬಾತನ ಆದೇಶ ಮೇರೆಗೆ ತನ್ನ ದಳಪತಿ ಮೀರ್ ಬಾಕಿ ತಾಷ್ಕಂಡಿ ಅಯೋಧ್ಯ ನಗರದ ರಾಮಕೂಟ ಗುಡ್ಡದ ಮೇಲಿನ ಈ ದೇಗುಲವನ್ನು ದಾಳಿ ಮಾಡಿ ಆ ದೇಗುಲದಲ್ಲಿನ ಮೂರ್ತಿನಾಶ ಮಾಡಿ ಹಾಗೆ ಆ ದೇಗುಲವನ್ನು ಅಲ್ಪಸ್ವಲ್ಪ ಬದಲಾಯಿಸಿ ಅಲ್ಲೇ ಮಸೀದಿಯನ್ನು ನಿರ್ಮಿಸಿ ಅದಕ್ಕೆ ತನ್ನ ದೊರೆ ಬಾಬರ್ ಹೆಸರಿನ ಬಾಬ್ರಿ ಮಸೀದಿ ಎಂದು ನಾಮಕರಣ ಮಾಡುತಾನೆ ತಾಷ್ಕಂಡಿ ಎಂಬಾತ . ಮುಂದೆ ಅಂದಿನಿಂದ ಇಂದಿನವರೆಗು ಹಲವು ಶತಮಾನ ಕಾಲ ಈ ರಾಮಜನ್ಮಭೂಮಿ ಹಕ್ಕಿಗಾಗಿ ಹಿಂದುಗಳು ಬಾಬ್ರಿ ಮಸೀದಿ ಹಕ್ಕಿಗಾಗಿ ಮುಸ್ಲಿಮರು ಹೋರಾಡುತ್ತಲೇ ಇದ್ದಾರೆ ಹೀಗಿದ್ದು ಅಂದಿನಿಂದಲೂ ಈ ವಿಚಾರ ಬಗೆಹರಿಯದೆ ಅತಿ ಸೂಕ್ಷ್ಮಾತಿಸೂಕ್ಷ್ಮ ವಿಚಾರವಾಗಿ ಹರಿಯದೇ ಮುರಿಯದೆ ಸವಾಲಾಗಿ ಕಗ್ಗಂಟಾಗಿ ಪರಿಣಮಿಸಿದೆ . ಒಟ್ಟಾರೆಯಾಗಿ ಈ ಜಾಗ ವಿವಾದ ಬಗೆಹರಿಯುವ ತನಕ ಇದರ ಒಡೆತನ ಹಿಂದು ಮುಸ್ಲಿಂ ಇಬ್ಬರಿಗು ಸೇರದೇ ಸರ್ಕಾರಿ ಅಧೀನದಲ್ಲಿ ಇದೆ .
ಅಂದು ರಾಜೀವಗಾಂಧಿ ಪ್ರದಾನ ಮಂತ್ರಿಯಾಗಿದ್ದಾಗ ದೇಗುಲದ ಕೀಲಿ ತೆಗೆಸಿ ಹಿಂದುಗಳಿಗೆ ಪೂಜೆಗೆ ಅವಕಾಶ ಕಲ್ಪಿಸಲಾಯಿತು . ಮುಂದೆ ಇದರ ಹಕ್ಕಿಗಾಗಿ ಅರ್ ಎಸೆಸ್ ಎಬಿವಿಪಿ ಬಾರತಿಯ ಜನತಾ ಪಕ್ಷ ಕರಸೇವಕರು ರಾಮಭಕ್ತರು ವಿಶ್ವಹಿಂದೂ ಪರಿಷದ್ ಎಂದೆಲ್ಲ ಹರಸಾಹಸ ಮಾಡಿದರು ಎಸ್ಟೆಲ್ಲಾ ಸಾವು ನೋವು ಆದವು ಅಡ್ವಾಣಿ ರಥಯಾತ್ರೆ ಆದದ್ದು ಈಗೆಲ್ಲಾ ಇತಿಹಾಸದ ಪುಟಗಳಲ್ಲಿ ಸೇರಿಹೋಗಿದೆ ಎನ್ನುತ್ತಾ ಗೈಡ್ ಕ್ಷಣ ಮೌನಕ್ಕೆ ಜಾರುತ್ತಾರೆ .
ನಿಜಕ್ಕು ರಾಮದೇಗುಲ ಜಾಗದಲ್ಲಿ ಮೊದಲಿನಿಂದಲು ಬಾಬ್ರಿ ಮಸೀದಿ ಇತ್ತೋ ಇಲ್ಲವೋ ಎಂಬುದನ್ನು ತಿಳಿಯಲು ಭಾರತೀಯ ಪುರಾತತ್ವ ಇಲಾಖೆ ರೇಡಿಯೋ ತರಂಗಗಳ ಎಕ್ಸರೇ ಸರ್ವೇ ನಡೆಸುವ ಮೂಲಕ ದೇಗುಲಕ್ಕೆ ಕಿಂಚಿತ್ತು ಹಾನಿಪಡಿಸದೆ ದೇಗುಲದ ಪಾಯ ಮತ್ತು ದೇಗುಲದ ತಳಬಾಗವನ್ನು ಪರೀಕ್ಷೆಗೆ ಒಳಪಡಿಸುವ ಮೂಲಕ ಮೊದಲು ರಾಮಮಂದಿರ ಇತ್ತು ಎಂಬುದು ಖಾತ್ರಿ ಅದ ಮೇಲೂ ನಿಖರವಾದ ತೀರ್ಮಾನ ಕೈಗೊಳ್ಳದೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಾಡಿದುದುರ ಮರ್ಮವಾದರು ಏನು ? ಇದರ ಹಿಂದಿನ ನಿಗೂಡವಾದರು ಏನು ಒಂದು ತಿಳಿಯದು .
ಅಂತು ಇಂತು ಕುಂತಿ ಮಕ್ಕಳಿಗೆ ಇಲ್ಲದ ಅಕ್ಕರೆ ಮಾದ್ರಿ ಮಕ್ಕಳ ಮೇಲೆ ಮಮಕಾರ ಎಂಬಂತಾಗಿದೆ ಈ ನೆಲದ ಕಾನೂನು . ಅಂದು ಗಾಂಧಾರಿ ಕಣ್ಣಿಗೆ ಕಟ್ಟಿಕೊಂಡ ಕಪ್ಪು ಬಟ್ಟೆ ಇಂದು ನ್ಯಾಯ ದೇವತೆಗೆ ಬಂದಿದೆ ಅಷ್ಟೇ . ಏನು ಕಲಿಗಾಲ ಕಣಪ ಕಲಿಗಾಲ . ಈ ಕಲಿಗಾಲದಲ್ಲಿ ಮಾವು ಬಿತ್ತಿ ಬೇವು ಬೆಳೆಯೋ ಕಾಲ ಬಂತಪ್ಪ ಹೆ ರಾಮ .
ಹೀಗೆ ಒಬ್ಬರಿಗೊಬ್ಬರು ಕುಳಿತಲ್ಲೇ ನಾನಾ ರೀತಿಯ ಗುಸುಗುಸು ಮಾತನಾಡುತ್ತಿದ್ದಾರೆ .
ಆಹ್ಹ್ ! ನೋಡಿ ಒಂದು ಮುಖ್ಯವಾದ ವಿಷಯವನ್ನು ನಿಮಗೆ ತಿಳಿಸಲೇಬೇಕಾದ ಅನಿವಾರ್ಯತೆ ಇಂದಿನ ವಿಷಮ ಪರಿಸ್ಥಿತಿಯ ಸಂದಿಗ್ಧ ಕಾಲದಲ್ಲಿ ತಿಳಿಸಬೇಕಾದ ಕರ್ತವ್ಯ ನನ್ನದು ಎಂದು ನಾನು ಭಾವಿಸುತ್ತೇನೆ .
ಅದೇನೆoದರೆ , ಕೆಲವು ನೌಕರಿ ಇಲ್ಲದ ಪೋಕರಿ ಪುಡಾರಿಗಳು ಹಿಂದು ಸಂಸ್ಕೃತಿಯನ್ನು , ಅದರಲ್ಲು ನಮ್ಮ ಮಹಾಕಾವ್ಯಗಳಾದ ರಾಮಾಯಣ ಮಹಾಭಾರತ ಇವನ್ನು ಹಿಗ್ಗಮುಗ್ಗ ಹಿಯಾಳಿಸುತ್ತಾರೆ . ಈ ನೆಲದಲ್ಲಿ ರಾಮಾಯಣ ಮಹಾಭಾರತವಾಗಲಿ ನಡೆದೇ ಇಲ್ಲ . ಅವೆಲ್ಲ ಕೇವಲ ಕಪೋಲ ಕಲ್ಪಿತ ಕಥೆ ಎಂದೆಲ್ಲ ಹಗುರವಾಗಿ ಮಾತಾಡಿಕೊಳ್ಳುತ್ತಿದ್ದಾರೆ .
ನೋಡಿ ಪೋಕರಿ ಪುಡಾರಿಗಳು ಹೇಳುವ ಮಾತೆಲ್ಲ ಬರಿ ಸುಳ್ಳು . ನೋಡಿ ತೇತ್ರಾಯುಗದಲ್ಲಿ ರಾಮಾಯಣ ನಡೆದದ್ದು ನಿಜ ಎಂಬುದನ್ನು ಸಾರಿ ಸಾರಿ ಹೇಳಲು ಈ ಸನಾತನ ಸಂಸ್ಕೃತಿಯ ಈ ನೆಲದಲ್ಲಿ ಒಂದಲ್ಲ ಹತ್ತಲ್ಲ ಹೆಜ್ಜೆ ಹೆಜ್ಜೆಗೂ ಸಹಸ್ರಾರು ಸಂಖ್ಯೆಯಲ್ಲಿ ಸಾಕ್ಷಿ ಸಿಗುತ್ತೆ . ಹನುಮನ ಹುಟ್ಟೂರು ಹಂಪೆಯಾಗಲಿ , ಚಿತ್ರಕೂಟವಾಗಲಿ ವಾಲ್ಮೀಕಿ ಆಶ್ರಮವಾಗಲಿ ಅಷ್ಟೇ ಏಕೆ ರಾವಣನ ಸಂಸ್ಕಾರ ನಡೆಸಿದ ಜಾಗ ಪತ್ತೆ ಆಗಿದೆ ಹಾಗು ಆತನ ದೇಹದ ಅಸ್ತಿಪಂಜರ ಈಗಲೂ ಶ್ರೀಲಂಕಾದ ಯಾವುದೋ ಬೆಟ್ಟದ ಮೇಲೆ ಇದೆಯಂತೆ , ಹಾಗು ಶ್ರೀರಾಮನ ಸೇನೆಯು ಶ್ರೀಲಂಕಾಗೆ ಹೋಗಲು ಅವರು ಕಟ್ಟಿದ ವಾನರ ಸೇತುವೆ ಈಗಲು ಇದ್ದು ಇಂದು ಅದರ ಮೇಲೆ 3ರಿಂದ 6 ಮೀಟರ್ ವರೆಗು ಸಮುದ್ರದ ನೀರು ಇದ್ದು ಈಗಲೂ ಅಲ್ಲಿ ಕಾಣಬಹುದು . ಈ ವಾನರ ಸೇತುವೆ ಇಂದು ಎಸ್ಟರ ಮಟ್ಟಿಗೆ ಗಟ್ಟಿಮುಟ್ಟಾಗಿ ಇದೆ ಎಂದರೆ ಅಂದು ಭಾರತದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಕಾಲದಲ್ಲಿ ಏನೋ ಕುಂಟು ನೆಪಮಾಡಿ ರಾಮನ ಕಾಲದ ಸ್ಮಾರಕದಂದಂತೆ ಇರುವ ಸೇತುವೆ ಸ್ಫೋಟಿಸುವುದಾಗಿ ಭಾರೀ ವಿರೋಧದ ನಡುವೆ ಒಂದು ಯೋಜನೆ ರೂಪಿಸಿ ಆ ಪ್ರಕಾರ ಜಪಾನ್ ದೇಶದಿಂದ ಹಡಗು ಒಡೆಯಲೆಂದೆ ವಿಶೇಷ ತಂತ್ರಜ್ಞಾನ ಉಳ್ಳ ಸಾಗರ್ ಸಾಮ್ರಾಟ್ ಎಂಬ ಹಡಗನ್ನು ಅಂದಿನ ದಿನದ ಬಾಡಿಗೆ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ತರಿಸಲಾಯಿತು . ಹಲವು ದಿನಗಳ ಕಾಲ ಕೆಲಸ ಮಾಡಿದರು ಸಾಗರ್ ಸಾಮ್ರಾಟ್ ಕೇವಲ ಒಂದೇ ಒಂದು ಟೀ ಸ್ಪೂನ್ ಅಷ್ಟು ಸೇತುವೆ ಮಣ್ಣು ತೆಗೆಯದೆ ಅದರ ಡ್ರಿಲ್ಲಿಂಗ್ ಯಂತ್ರವೇ ಕೆಟ್ಟು ಬರಿಗೈಲಿ ಹಿಂದುರುಗಿ ಹೋಯಿತು ಅದು ಬೇರೆ ಮಾತು .
ಲಂಕೆಯ ಸೀತೆಯನ್ನು ಇಟ್ಟ ಅಶೋಕವನ ಈಗಲೂ ಅಲ್ಲಿ ಕಾಣಬಹುದು . ಅಷ್ಟೆಲ್ಲಾ ಏಕೆ ವಾಲ್ಮೀಕಿ ತನ್ನ ಕಾವ್ಯದಲ್ಲಿ ಉಲ್ಲೇಖ ಮಾಡಿರುವ ಹಾಗೆ ರಾಮನ ಜನನ ಪಟ್ಟಾಭಿಷೇಕ ಕಾಡಿಗೆ ಹೋದದ್ದು ರಾಮರಾವಣ ಯುದ್ದ ಇತ್ಯಾದಿ ಅಂದಿನ ಕಾಲದ ಹುಣ್ಣಿಮೆ ಅಮಾವಾಸ್ಯೆ ದಿನ ತಿಥಿ ನಕ್ಷತ್ರ ಮುಂತಾದವುಗಳನ್ನು ಉಲ್ಲೇಖಿಸಿದ್ದು ಅವೆಲ್ಲವೂ ಇಂದಿನ ವಿಜ್ಞಾನಿಗಳು ಸೂಪರ್ ಕಂಪ್ಯೂಟರ್ ಗೆ ಹಾಕಿ ನೋಡಿದರೆ ಎಲ್ಲವು ಕಾರಾರುವಕ್ಕಾಗಿತ್ತು ಎಂದು ತಿಳಿಯಿತು ಈ ಜಗತ್ತಿಗೆ . ಇದಕ್ಕಿಂತ ನಿದರ್ಶನ ಬೇರೇನು ಬೇಕು ಈ ಪೋಕರಿಗಳಿಗೆ . ಇದೆಲ್ಲಾ ಸತ್ಯ ಎಂದು ತಿಳಿದ ಮೇಲೆ ಇದನ್ನು ವಿರೋಧಿಸುವವರ ತಿಕದಲ್ಲಿ ರಾಮರಸ ಬದಲು ಲಾವಾರಸ ಸುರುವಿಂದಂತೆ ಹಾಗಿರಬೇಕು ಪಾಪ .
ಇನ್ನು ಮಹಾಭಾರತ ವಿಷಯಕ್ಕೆ ಬರುವುದಾದರೆ ದ್ವಾಪರ ಯುಗದಲ್ಲಿ ಮಹಾಭಾರತ ನಡೆದದ್ದು ಸತ್ಯ ಎಂಬುದಕ್ಕೆ ದ್ವಾಪರಯುಗದ ಅಂತ್ಯಕ್ಕೆ ಅಂದರೆ ಕೃಷ್ಣನ ಅಂತ್ಯ ( ಮಹಾಪ್ರಸ್ಥಾನ) ಬಳಿಕ ಕೃಷನ ರಾಜದಾನಿ ಮಥುರಾ ನಗರವು ಸಂಪೂರ್ಣವಾಗಿ ಸಮುದ್ರದಲ್ಲಿ ಮುಳುಗಿ ಹೋಗಿದೆ ಹಾಗೂ ಆತನಿಗೆ ಸೇರಿದ ಅರಮನೆ ರಥ ಇತ್ಯಾದಿ ಎಲ್ಲವು ಸಮುದ್ರದಲ್ಲಿ ಮುಳುಗಿದ್ದು ಅದೆಲ್ಲವನ್ನು ಅಂದಿನ ಕೇಂದ್ರ ಪ್ರಾಕ್ತನ ಇಲಾಖೆ ಮುಖ್ಯಸ್ಥ ನಮ್ಮ ಕನ್ನಡಿಗರಾದ ಶಿಕಾರಿಪುರದ dr ll sr Rao ರವರು ಈ ಮಥುರಾ ನಗರ ಮುಳುಗಿದ್ದ ಸಮುದ್ರದಲ್ಲಿ ಮುಳುಗಿದ್ದ ಎಲ್ಲವನ್ನು ಯಥಾವತ್ತಾಗಿ ಫೋಟೋ ಸಮೇತ ದಾಖಲಿಸಿ ಅದಕ್ಕೆ ಸಂಬಂಧಿಸಿದ ಒಂದು ಗ್ರಂಥ ಹೊರತಂದಿದ್ದಾರೆ . ನಿಜಕ್ಕು ಇದು ಹೆಮ್ಮೆ ಹಾಗು ವಿಸ್ಮಯ ಅಲ್ಲವೇ
ಹೀಗೆ ಹೇಳುತ್ತಾ ಹೋದರೆ ಸಾಕಷ್ಟು ನಿದರ್ಶನ ಹೇಳಬಹುದು. ಹೀಗೆ ಎಲ್ಲವನ್ನು ಮೌನವಾಗಿದ್ದೆ ಗಮನಿಸುತ್ತಿದ್ದ ಗೈಡ್ ಬನ್ನಿ ಈಗ ನಿಮ್ಮ ಯಾತ್ರೆಯ ಅಂತಿಮ ಘಟ್ಟಕ್ಕೆ ಹೋಗೋಣ ಅಂದರೆ ಶ್ರೀರಾಮ ಲಕ್ಷ್ಮಣರು ಇಹ ಲೋಕ ತ್ಯೇಜಿಸಿದ ಜಾಗಕ್ಕೆ ಹೋಗೋಣ ಎನ್ನುತ್ತಿದ್ದಂತೆ ಎಲ್ರು ಲಗುಬಗೆ ಇಂದ ಹೊರಡಲು ಸಿದ್ಧರಾದರು .
ರಾಮಾಜೋಯಿಸರ ತಂಡವು ತಮ್ಮ ಗೈಡ್ ರವರನ್ನು ಅನುಸರಿಸುತ್ತಾ ಅವರ ಜೊತೆ ನಡೆದು ಸರಯೂ ನದಿಯ ತೀರದಲ್ಲಿ ಅನತಿ ದೂರದವರೆಗೆ ನಡೆದು ಒಂದು ಗೊತ್ತಾದ ಜಾಗಕ್ಕೆ ಬಂದರು . ಗೈಡ್ ಎಲ್ಲರನ್ನು ಕುರಿತು ನೋಡಿ ಈ ನದಿಯ ಈ ಜಾಗ ಇದೆಯಲ್ಲ ಇದೆ ಜಾಗದಲ್ಲಿನ ನದಿಯ ತಳ ಪ್ರವೇಶ ಗೈದು ದರ್ಬಾಸನ ಹಾಕಿ ಓಂಕಾರ ಜಪಿಸುತ್ತಾ ಪಠಿಸುತ್ತಾ ಶ್ರೀರಾಮನು ಇಹಲೋಕವನ್ನ ತ್ಯಜಿಸಿದ್ದು ಈ ಘಟನೆಗೆ ಮಹಾಪ್ರಸ್ಥಾನ ಎಂದು ಕರೆಯಲಾಗುತ್ತದೆ ಎನ್ನುತ್ತಾ ಹಾಗೆ ಮುಂದುವರಿದು ನೋಡಿ ಅಗೋ ಅ ದೂರದಲ್ಲಿ ಕಾಣುವ ಗುಡ್ಡ ಹಾಗು ಅದರ ಸುತ್ತ ಪ್ರಶಾಂತವಾಗಿ ಹರಿಯುತ್ತಿರುವ ನದಿ ಕಾಣುತಿದೆಯಲ್ಲ ಅದೆ ಲಕ್ಷ್ಮಣ ಪ್ರಭುವನ್ನು ಶ್ರೀರಾಮರು ತ್ಯಜಿಸಿದ ಜಾಗ ಎನ್ನುತ್ತಾನೆ .
ಆ ನೋಡಿ ಎಲ್ಲ ಇಲ್ಲಿಯೇ ಕೈಕಾಲು ಮುಖ ಸ್ನಾನ ಮಾಡುವವರು ವಸ್ರ ಬದಲಿಸುವವರು ಸಂಧ್ಯಾವಂದನೆ ಮಾಡುವವರು ಇಲ್ಲಿಯೇ ಮಾಡಿಬಿಡಿ . ಆಹ್ ಎಚ್ಚರ ಅ ಸರಪಳಿ ದಾಟಿ ಮುಂದೆ ಹೋಗಬೇಡಿ ತುಂಬಾ ಅಪಾಯ ಜಾಗ್ರತೆಯಿಂದ ತಮ್ಮ ಕಾರ್ಯ ಮುಗಿಸಿಬಿಡಿ ಎಂದರು .
ಬಳಿಕ ಸ್ನಾನಮಾಡುವವರು ವಸ್ತ್ರ ಬದ್ಲಿಸುವವರು ಸಂಧ್ಯಾ ವಂದನೆ ಮಾಡುವವರು ಎಲ್ಲ ಮಾಡಿದರು . ಬಳಿಕ ಎಲ್ಲ ತೃಪ್ತಿ ಆಗುವತನಕ ಸರಯೂ ನದಿ ನೀರನ್ನು ಕಣ್ಣಿಗೆ ಒತ್ತಿಕೊಂಡು ಕುಡಿದರು ತಾವು ತಂದಿದ್ದ ಬಾಟಲಿಯಲ್ಲಿ ನೀರು ತುಂಬಿಕೊಂಡು ತಮ್ಮ ಮನೆಗೆ ಒಯ್ಯಲು ಇಟ್ಟುಕೊಂಡರು .
ಪಾವನ ತೀರ್ಥ
ಭುವಿಯ ಮೇಲರಿಯುವ ಪಾವನ ತೀರ್ಥವಿದು l
ಸರಾಯುವಿನ ಹನಿಹನಿಯು ಪರಮ ಜಲವಿದು ll
ಶ್ರೀರಾಮನು ಜನಿಸಿ ಬೆಳೆದ ಪಾವನ ತೀರವಿದು
ಶ್ರೀರಾಮನು ನಿತ್ಯವೂ ಪೂಜಿಸಿದ ಸೇವಿಸಿದ ಜಲವಿದು
ಓಂಕಾರವನು ಜಪಿಸುತ ಇಹಲೋಕವನು ತ್ಯೇಜಿಸುತ
ವೈಕುಂಠಕೆ ಸಾಗಲು ಬಳಸಿದ ಪಾವನ ತಾಣವಿದು
ಭಕ್ತಮಹಾಶಯರು ಸರಾಯುವಿನ ಜಲದೊಳು
ಮಂಗಳ ಸ್ನಾನವನು ಮಾಡಲು ಸಂತಾನಿಕ ಲೋಕ
ಪ್ರಾಪ್ತಿಯಾಗಲೆಂದು ಬ್ರಹ್ಮನಿಂದ ವರಪಡೆದುಕೊಂಡ
ಬ್ರಹ್ಮಾಂಡದಲ್ಲೆ ಸರ್ವಶ್ರೇಷ್ಠ ಜಲದ ಮೂಲವಿದು .
( ಸಾಹಿತ್ಯ skin's Nagaraj Kale )
ಹೀಗಿರಲು ಅಯೋಧ್ಯ ನಗರದಲ್ಲಿ ನೋಡಬೇಕಾದ ಸ್ಥಳವನ್ನೆಲ್ಲಾ ನೋಡಿಯಾದ ಬಳಿಕ ಗೈಡ್ಗೆ ರಾಮಾಜೋಯಿಸ್ಸರು ತಮಗೆ ಇಲ್ಲಿ ತೋರಿಸಬೇಕಾದ ಎಲ್ಲ ಸ್ಥಳಗಳನ್ನು ತೋರಿಸಿ ಅದಕ್ಕೆ ಸಂಬಂಧಿಸಿದ ವಿವರವನ್ನು ಹೇಳಿದ್ದಕ್ಕೆ ಧನ್ಯವಾದಗಳು ಹೇಳಿ ಒಂದಷ್ಟು ಹಣವನ್ನು ನೀಡಿ ಅಲ್ಲಿಂದ ಹೊರಟು ಅಯೋಧ್ಯ ನಗರದ ಅಂಗಡಿಗಳಿಗೆ ಭೇಟಿ ನೀಡಿ ತಮಗೆ ಬೇಕಾದ ವಸ್ತುವನ್ನು ಎಲ್ಲರುಕೊಂಡು ಕೊಂಡರು ಬಳಿಕ ಕತ್ತಲು ಅದ ಬಳಿಕ ಎಲ್ಲ ಹೋಟೆಲ್ಗೆ ಹೋಗಿ ಬೇಕಾದುದದನ್ನು ತಿಂದು ಲಾಡ್ಜ್ ಗೆ ಹೋಗಿ ವಿಶ್ರಾಂತಿ ಪಡೆದು ಕೊಂಡರು .
ಬೆಳಿಗ್ಗೆ ಆದ ಮೇಲೆ ತಮ್ಮ ಊರುಗಳಿಗೆ ಹೋಗಲೆಂದು ತಮ್ಮ ಸಾಮಗ್ರಿಗಳನ್ನು ಸರಿಯಾಗಿ ಜೋಡಿಸಿಟ್ಟು ಕೊಂಡರು ಇತ್ತ , ಜೋದಾ ಅಕ್ಬರ್ ಲಾಡ್ಜ್ ನಲ್ಲಿರುವ ಹಾಸಿಗೆಯ ಮೇಲೆ ಕುಳಿತು ಏಕಾಂಗಿಯಾಗಿ ಪ್ರಣವ್ ಬಗ್ಗೆ ಆತನ ಅಂದ ಚಂದ ಮೈಕಟ್ಟು ಎಲ್ಲವನ್ನು ತನ್ನ ಕಣ್ತುಂಬಿಕೊಂಡು ಹಾಗೆ ಹಗಲುಗನಸು ಕಾಣುತ್ತಿದ್ದಾಳೆ ಹೇಗಾದರೂ ಸರಿ ಅವನನ್ನು ಕಾಣುವ ಇಲ್ಲ ಮಾತಾಡಿಸುವ ಒಂದು ಸಣ್ಣ ಅವಕಾಶ ಸಿಗಲಿಲ್ಲವಲ್ಲ ಎಂದು ಕೊರಗುತ್ತಾ ತನ್ನ ಬಿಳಿ ಬಣ್ಣದ ಕರವಸ್ತ್ರ ತೆಗೆದುಕೊಂಡು ಬಾಲ್ ಪೆನ್ನಿನಿಂದ ಏನನ್ನೋ ಬರೆದು ಹಾಗೆ ಮಡಚಿ ಗೌಪ್ಯವಾಗಿ ಇಟ್ಟುಕೊಂಡಳು ಹಾಗು ಲಘು ಬಗೆಯಿಂದ ಹಾಸಿಗೆಯಿಂದ ಎದ್ದು ತನ್ನ ಸಾಮಗ್ರಿಗಳನ್ನು ಪ್ಯಾಕ್ ಮಾಡಿಕೊಂಡು ತನ್ನೂರಿಗೆ ಹೊರಡಲು ತನ್ನವರೊಂದಿಗೆ ತಾನು ಸಹ ರೆಡಿಯಾದಳು .
ಪ್ರಣವ್ ಮತ್ತು ಜೋಧಾಕ್ಬರ್ ಈ ಎರಡು ಪರಿವಾರಗಳು ಒಂದೆ ಲಾಡ್ಜ್ ನ ಪಕ್ಕಪಕ್ಕದ ರೂಮ್ ಗಳಲ್ಲಿ ಉಳಿದುಕೊಂಡಿತ್ತು ಆದರೆ ಈ ವಿಚಾರ ಇವರಿಗೆ ತಿಳಿದಿರುವುದಿಲ್ಲ ಅಷ್ಟೆ . ಈ ಎರಡು ಪರಿವಾರಗಳು ಪ್ರತ್ಯೇಕವಾಗಿ ತಮ್ಮ ತಮ್ಮ ಲಗೆಜುಗಳೊಂದಿಗೆ ತಾವು ತಂಗಿದ್ದ ರೂಮುಗಳನ್ನು ಖಾಲಿ ಮಾಡಿ ಕೆಳಗಿಳಿದು ತಮಗಾಗಿ ಮೊದಲೇ ಗೊತ್ತು ಮಾಡಿರುವ ಟ್ಯಾಕ್ಸಿಯತ್ತ ಬರುತ್ತಿದ್ದಾರೆ ಆದರೆ ಈ ಹುಡುಗ ಹುಡುಗಿಯರು ಮಾತ್ರ ತಮ್ಮ ಲವರ್ ಸಿಕ್ಕರು ಸಿಗಬಹುದೆಂದು ಆಶಾಭಾವನೆಯನ್ನು ಹೊಂದಿ ಬಾರಿ ಕುತೂಹಲ ಹಾಗು ನಿರೀಕ್ಷೆಯೊಂದಿಗೆ ತಮ್ಮ ಪರಿವಾರದಿಂದ ತುಸು ಹಿಂದಾಗಿ ಭಾರವಾದ ಹೆಜ್ಜೆಗಳನ್ನು ಇಡುತ್ತಾ ಆಸೆಯ ಕಂಗಳು ಏನನ್ನೋ ಹುಡುಕುತ್ತಾ ಹೊರಟಂತಿದೆ .
ಪ್ರಣವ್ ಪರಿವಾರಕ್ಕೆ ನಿಗದಿ ಪಡಿಸಿರುವ ಹಲವು ಟ್ಯಾಕ್ಸಿಯಲ್ಲಿ ತನ್ನ ಪರಿವಾರದವರು ತಮ್ಮ ಸಾಮಗ್ರಿ ತುಂಬಿಸಿ ವಾಹನವನ್ನು ಹತ್ತುತಿದ್ದಾರೆ ಆದರೆ ಪ್ರಣವ್ ಕಣ್ಣುಗಳು ಮಾತ್ರ ಸುತ್ತ ಏನಾದ್ರೂ ತನ್ನ ಹುಡುಗಿ ಸಿಗಬಹುದೆಂಬ ನಿರೀಕ್ಷೆಯೊಂದಿಗೆ ಬಾರವಾದ ಹೆಜ್ಜೆಗಳನ್ನು ಇಡುತ್ತಾ ಬರುತ್ತಿದ್ದಾನೆ ತನ್ನ ಟ್ಯಾಕ್ಸಿಯತ್ತ .
ಆಕಸ್ಮಿಕ ಎಂಬಂತೆ ತನ್ನೆದುರು ತುಸು ದೂರದಲ್ಲಿ ತನ್ನ ಆ ಹುಡುಗಿ ತನ್ನ ಪರಿವಾರದೊಂದಿಗೆ ಬರುತ್ತಿರುವುದನ್ನು ಇಬ್ಬರು ಒಮ್ಮೆಲೇ ನೋಡಿದ ಬಳಿಕ ಇಬ್ಬರಿಗೂ ಸ್ವರ್ಗವೆ ಕೈಗೆ ಸಿಕ್ಕಂತೆ ಆಗುತ್ತದೆ . ಸಂತಸದಿಂದ ಇಬ್ರು ಮುಖವನ್ನು ಊರಗಲ ಅರಳಿಸುತ್ತಾರೆ ಆದರೆ ತಮ್ಮ ಸಂತಸವನ್ನು ಹಂಚಿಕೊಳ್ಳಲು ಇಲ್ಲಿ ಅನುಕೂಲತೆ ಇರುವುದಿಲ್ಲ ಎಂಬ ಅರಿವು ಇಬ್ಬರಿಗೂ ಇದೆ ಹಾಗಾಗಿ ತಮ್ಮ ಭಾವನೆಯನ್ನು ಹಾಗೆ ಅದುಮಿಕೊಳ್ಳುತ್ತಾರೆ ಕಾರಣ ಎದುರುಗಡೆ ಇರುವ ತಮ್ಮ ತಮ್ಮ ಪರಿವಾರ . ಹೀಗೆ ಅನತಿ ದೂರದ ಜೋದಾಳ ತಂಡ ಪ್ರಣವ್ ತಂಡದ ಟ್ಯಾಕ್ಸಿ ಹಿಂದೆಯೇ ಇದ್ದು ಜೋದಾಳು ಇವರತ್ತ ಜೋದಳ ತಂಡ ಬರುತ್ತಿದೆ .
ಇತ್ತ ಪ್ರಣವ್ ಹೊರತು ಪಡಿಸಿ ಮಿಕ್ಕೆಲ್ಲರು ತಮ್ಮ ವಾಹನದಲ್ಲಿ ಕುಳಿತ್ತಿದ್ದಾರೆ ಹಾಗು ಡ್ರೈವರ್ ಪ್ರಣವ್ ಬನ್ನಿ ಸಾರ್ ಅಲಹಾಬಾದ್ ಏರ್ಪೋರ್ಟ್ ಗೆ ಹೆವಿ ಟ್ರಾಫಿಕ್ ಇದ್ದು ಲೇಟ್ ಆಗುತ್ತೆ ಎನ್ನುತ್ತಾನೆ ಹಿಂದಿಯಲ್ಲಿ .
ಅದಕ್ಕೆ ಪ್ರತಿಯಾಗಿ ಪ್ರಣವ್ ತುಸು ಜೋರಾಗಿ ಜೋಧಾಳಿಗೆ ಕೇಳಲೆಂದೆ ಹಿಂದಿಯಲ್ಲಿ ಈ ರೀತಿ ಹೇಳುತ್ತಾನೆ ತಾಳಿ ಸ್ವಲ್ಪ ನಾನು ಆಯೋದ್ಯಾಗೆ ಬಂದ ಮೇಲೆ ನನ್ನ ಜೀವಮಾನದಲ್ಲಿ ಕಂಡರಿಯದ ಅಮೂಲ್ಯ ರತ್ನವನ್ನು ಕಂಡೆ ಹೇಗಾದ್ರೂ ನಾನು ಅದನ್ನು ನನ್ನ ಸ್ವಂತ ಮಾಡಿಕೊಳ್ಳಬೇಕು ಅದಕ್ಕಾಗಿ ಏನಾದ್ರು ಸರಿಯೇ ಎಂದು ಹೇಳಿದನು . ಇದೆಲ್ಲವನ್ನು ಆಕೆ ಸ್ಪಷ್ಟವಾಗಿ ಕೇಳಿಸಿಕೊಳ್ಳುತ್ತಾಳೆ ಹಾಗೆ ಈಕೆ ತನ್ನ ಪರಿವಾರದಿಂದ ನಾಲ್ಕಾರು ಹೆಜ್ಜೆಯಸ್ಟು ಹಿಂದಾಗಿ ಪ್ರಣವ್ಗೆ ಕೈ ಬೀಸಿ ಈ ಹಿಂದೆ ಕರವಸ್ತ್ರದಲ್ಲಿ ಏನನ್ನೋ ಬರೆದು ಇಟ್ಟುಕೊಂಡಿದ್ದನ್ನು ಈಗ ತೆಗೆದು ಪ್ರಣವ್ ಗೆ ಕಾಣುವಂತೆ ತೋರಿಸುತ್ತಾ ಅದಕ್ಕೆ ಸಿಹಿ ಮುತ್ತು ನೀಡಿ ರಸೆಯಲ್ಲಿ ಹಾಕಿ ಅದನ್ನು ತೆಗೆದುಕೊಳ್ಳುವಂತೆ ಸನ್ನೆ ಮಾಡಿದಳು ಮತ್ತು ತನಗೇನು ಗೊತ್ತಿಲ್ಲದವಳ ಹಾಗೆ ತನ್ನ ಪರಿವಾರ ಸೇರಿಕೊಂಡಳು .
ಪ್ರಣವ್ ಕೂಡಲೇ ಓಡಿ ಹೋಗಿ ಜೋದಾ ಹಾಕಿದ್ದ ಅ ಕರವಸ್ತ್ರ ತೆಗೆದುಕೊಂಡು ಸಂತಸದಿಂದ ಅವಳತ್ತ ನೋಡುತ್ತಾನೆ .
ಜೋಧಾ ತಂದೆ ಬನ್ನಿ ಬನ್ನಿ ಬೇಗ ಎನ್ನುತ್ತಾ ತನ್ನ ಪರಿವಾರಕ್ಕೆ ಹೇಳುತ್ತಾ ಏರ್ಪೋರ್ಟ್ ಗೆ ಲೇಟ್ ಆದರೆ ಪಾಕಿಸ್ತಾನದ ಪ್ಲೈನ್ ಹೋಗುತ್ತೆ ಅಂತ ಎಲ್ಲರನ್ನು ಎಚ್ಚರಿಸುತ್ತಾರೆ ಉರ್ದು ಮಿಶ್ರಿತ ಹಿಂದಿಯಲ್ಲಿ ಹಾಗು ತಾನು ಸೇರಿದಂತೆ ಎಲ್ಲರು ತಮ್ಮ ಟ್ಯಾಕ್ಸಿ ಹತ್ತುತ್ತಾರೆ ..
ಹೀಗೆ ಇಬ್ರು ತಮ್ಮ ತಮ್ಮ ಟ್ಯಾಕ್ಸಿಗಳ ಕಿಟಕಿ ಪಕ್ಕ ಕುಳಿತುಕೊಂಡು ಪರಸ್ಪರ ಕೈ ಸನ್ನೆ ಬಾಯ್ಸನ್ನೆ ಮಾಡಿಕೊಂಡು ತುಸು ದೂರ ಹೋದರು ಬಳಿಕ ಟ್ಯಾಕ್ಸಿ ದೂರ ಅದ ಬಳಿಕ ಸುಮ್ಮನಾದರು . ಹೀಗೆ ಸಾಲಾಗಿ ಎಲ್ಲರ ವಾಹನಗಳು ಅಲಹಾಬಾದ್ ಏರ್ಪೋರ್ಟ್ ಕಡೆ ಪ್ರಯಾಣ ಬೆಳೆಸಿದವು .
( ಇಲ್ಲಿಗೆ ೨ ನೆ ಪಾಠ ಮುಗಿಯಿತು )
Writer
0 Followers
0 Following