ಭಾರತದ ಟಿವಿ ಚಾನಲ್ ಗಳಲ್ಲಿ ಜೋಧ ಅಕ್ಬರ್ - ಪ್ರಣವ್ ರವರ ಪ್ರಣಯ ವಿಚಾರವಾಗಿ ಗಣ್ಯರ ಅನಿಸಿಕೆಗಳು ಇತರೆ ಕ್ಷೇತ್ರದ ಪ್ರಮುಖರ ಸಂದರ್ಶನಗಳು ಎಂದೆಲ್ಲಾ ಯಾವಾಗ ಬಿತ್ತರಿಸಲ್ಪಟ್ಟಿತೋ ಆ ತದನಂತರದಲ್ಲಿ ಅದರ ಬೆನ್ನ ಹಿಂದೆಯೇ ಪಾಕಿಸ್ತಾನದಲ್ಲೂ ಸಹ ಇದೇ ರೀತಿಯಾಗಿ ಟಿವಿಗಳಲ್ಲಿ ವಿವಿಧ ಚಾನಲ್ನವರು ಇದೆ ಘಟನೆಯನ್ನು ಆಧರಿಸಿ ವಿವಿಧ ಪ್ರಮುಖರ ಸಂದರ್ಶನವನ್ನು ಸಹ ಏರ್ಪಡಿಸಲಾಯಿತು . ಅದರ ನೇರ ಪ್ರಸಾರ ಇಲ್ಲಿದೆ ನೋಡಿ ಹಾಗೂ ನಾನ ಪಕ್ಷಗಳ ಮುಖಂಡರು ಅಲ್ಲಿನ ಧಾರ್ಮಿಕ ನಾಯಕರುಗಳು ಮತ್ತು ಅವರುಗಳ ಅನಿಸಿಕೆಗಳನ್ನು ವಿವಿಧ ಪತ್ರಿಕೆಗಳಲ್ಲಿ ಈಗಾಗಲೇ ಪ್ರಕಟಿಸಲಾಗಿದೆ ಹಾಗಾಗಿ ಈ ವಿಚಾರವಾಗಿ ಪಾಕಿಸ್ತಾನದಲ್ಲಿಯೂ ಸಹ ಒಂದು ರೀತಿಯ ಬಾರಿ ಸಂಚಲನವನ್ನೇ ಉಂಟು ಮಾಡಿತು ಎಂದೆನ್ನಬಹುದು .
ಪಾಕಿಸ್ತಾನದಾದ್ಯಂತ ಕರ್ಫ್ಯೂ ಹಾಗು ನಿಷೇದಾಜ್ಞೆ ವಿಧಿಸಲಾಗಿದೆ ಆದಾಗ್ಯೂ ಎಲ್ಲೆಡೆ ಟಯರ್ ಗಳನ್ನು ಸುಡುವುದು ಧಿಕ್ಕಾರ ಹಾಕುವುದು ಭಾರತದ ನಕಾಶೆಗೆ ಮತ್ತು ಜೋಧ ಪ್ರಣವ್ ಇವರ ಫೋಟೋಗಳಿಗೆ ಮಸಿ ಬಳಿಯುವುದು ಈ ಜೋಡಿಯ ಪ್ರತಿ ಕೃತಿಗಳನ್ನು ಸುಟ್ಟುಹಾಕುವುದು ಜೋದ ಪ್ರಣವ್ ಪ್ರತಿ ಕೃತಿಯ ಶವ ಮೆರವಣಿಗೆ ಮತ್ತು ಬೆಂಕಿ ಸುಡುವುದು ಎಲ್ಲವು ಸಾಂಗವಾಗಿ ನಡೆಯುತ್ತಿದೆ . ಇದನ್ನು ಹತ್ತಿಕುವಲ್ಲಿ ಪಾಕಿಸ್ತಾನದ ಸರ್ಕಾರವು ಬಾರಿ ಪ್ರಮಾಣದಲ್ಲಿ ಕಸರತ್ತು ನಡೆಸುತ್ತಿದೆ . ಇವುಗಳ ನಡುವೆ ಅಲ್ಪಸಂಖ್ಯಾತ ಹಿಂದೂಗಳ ಮನೆಗಳನ್ನು ಸುಡುವುದು ಕಲ್ಲು ಹೊಡೆಯುವುದು ಹಿಂದೂ ಹೆಣ್ಣು ಮಕ್ಕಳನ್ನು ಕೆಟ್ಟದಾಗಿ ಕಾಣುವುದು ಈ ಸಂದರ್ಭದಲ್ಲಿ ಸಹಜ ಎಂಬಂತೆ ಆಗಿದೆ .
ಈ ನಡುವೆಯೇ ಪಾಕಿಸ್ತಾನದ ಟಿ ವಿ ವಾಹಿನಿಯೊಂದು ಅಲ್ಲಿನ ಮುಸ್ಲಿಂ ಸಂಘಟನೆಯೊಂದರ ಮುಖ್ಯಸ್ಥನನ್ನು ಸಂದರ್ಶಿಸಿತು ಮತ್ತು ಅವರ ಸಂದರ್ಶನದ ಪ್ರಮುಖ ವಿವರ ಇಂತಿದೆ .
ಆಂಕರ್ : ನಮಸ್ತೆ ಪಾಕಿಸ್ತಾನ್ ವರ್ಸಸ್ ಹಿಂದುಸ್ತಾನ್ ಎಂಬ ಶೀರ್ಷಿಕೆ ಅಡಿಯಲ್ಲಿ ಜೋಧಾ ಅಕ್ಬರ್ ಹಾಗು ಪ್ರಣವ್ ರವರ ಪ್ರಣಯ ಸಲ್ಲಾಪ ನಿಮಿತ್ತ ವಿಶೇಷ ಸಂದರ್ಶನಕ್ಕೆ ತಮಗೆ ಬಲು ಆಧರದ ಸ್ವಾಗತ ಸುಸ್ವಾಗತ .
ಮುಖ್ಯಸ್ಥ : ಹೌದು ಸುದ್ದಿವಾಹಿನಿ ಸಿಬ್ಬಂದಿ ಮತ್ತು ಎಲ್ಲ ಸಾರ್ವಜನಿಕರುಗಳಿಗೆ ನಮಸ್ಕಾರಗಳು .
ಅಂಕರ್ : ಸರ್ ನೇರವಾಗಿ ವಿಚಾರಕ್ಕೆ ಬರೋಣ . ಸರ್ ಈ ಜೋಧಾ ಅಕ್ಬರ್ ಮತ್ತು ಪ್ರಣವ್ ವಿಚಾರವಾಗಿ ಎಲ್ಲೆಡೆ ಏನೇನೋ ಗುಲ್ಲು ಎದ್ದಿದೆಯಲ್ಲ , ಈ ವಿಚಾರವಾಗಿ ನೀವು ಈ ಮೂಲಕ ಏನನ್ನು ಹೇಳಲಿಕ್ಕೆ ಬಯಸುತ್ತೀರಿ .
ಮುಖ್ಯಸ್ಥ : ಆವರಿಬ್ಬರ ನಡುವಿನ ನಡೆದಿರುವುದು ನಿಜಾನೇ 100% ಅದರಲ್ಲಿ ಯಾವುದೇ ರೀತಿಯ ಗುಸು ಗುಸು ಗುಮಾನಿ ಎಂಬುದು ಇಲ್ಲವೇ ಇಲ್ಲ .
ಆಂಕರ್ : ಹಾ ! ಸರ್ ಅವರಿಬ್ಬರ ನಡುವೆ ನಡೆದಿದೆಯಲ್ಲ ಆ ಬಗ್ಗೆ ನೀವು ಈಗ ಏನು ಪ್ರತಿಕ್ರಿಯೆ ನೀಡ ಬಯಸುತ್ತೀರಿ .
ಮುಖ್ಯಸ್ಥ : ನಿಜಕ್ಕೂ ಈ ಕೃತ್ಯ ಅತ್ಯಂತ ಹೇಯವಾದದ್ದು ಇದನ್ನು ನಾವು ಬಹಿಷ್ಕರಿಸುತ್ತೇವೆ ಸಾಮೂಹಿಕವಾಗಿ ತಿರಸ್ಕರಿಸುತ್ತೇವೆ ಹಾಗೆ ಧಿಕ್ಕರಿಸುತ್ತೇವೆ ಕೂಡ.
ಅಲ್ಲ ನಮ್ಮ ದೇಶದ ಹೆಣ್ಣು ಮಕ್ಕಳನ್ನು ಏನು ತಿಳಿದುಕೊಂಡಿದ್ದಾನೆ ಆ ಬಡವ ರಾಸ್ಕಲ್ . ಹೆಣ್ಣು ಮಕ್ಕಳಿಗೆ ಏನೇನೋ ನಂಬಿಸಿ ಇಲ್ಲ ಸಲ್ಲದ ಆಸೆ ತೋರಿಸಿ ಪ್ರೀತಿಸುವುದು ಮದುವೆಯಾಗುವುದು ಎಷ್ಟು ಸರಿ ನೀವೇ ಹೇಳಿ . ಇದರಿಂದಾಗಿ ನಮ್ಮ ಸಮಾಜದ ಬಾಂಧವರು ಮುಖ ಎತ್ತಿ ನಡೆದಾಡುವುದಕ್ಕೂ ಸಹ ಆಗುತ್ತಿಲ್ಲ ಇದರಿಂದ ನಮ್ಮ ಮುಸ್ಲಿಂ ಸಮಾಜಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ .
ಇದೇ ಕೆಲಸವನ್ನು ಮುಸ್ಲಿಂ ಹುಡುಗ ಹಿಂದೂ ಹುಡುಗಿಯನ್ನು ಪ್ರೀತಿಸಿ ಶಾದಿ ಆಗ್ಬಿಟ್ರೆ ಅವ್ರ್ದು ಸಮಾಜ ಸುಮ್ಕೆ ಇರ್ತೈತಾ . ಆ ಶಿವಸೇನೆ ಭಜರಂಗಿದಳ ಎಬಿವಿಪಿ ವಿಶ್ವ ಹಿಂದೂ ಪರಿಷತ್ತು ಆರ್‌ಎಸ್‌ಎಸ್ ಇವರು ಎಲ್ಲಾ ಸೇರಿ ಸಾಬ್ರು ಲವ್ ಜಿಹಾದಿ ಮಾಡ್ತಾವ್ರೆ ಎಂದು ಊರು ಅಗಲ ರಾಡಿ ಮಾಡಿ ಬಿಡುತ್ತಿದ್ರು ಅಲ್ವಾ ?
ಆಂಕರ್ : ನೀವು ಹೇಳಿದ್ದು ಸರಿ . ಹಾಗಾದ್ರೆ ನಮ್ಮ ದೇಶದ ಹುಡುಗ ಕ್ರಿಕೆಟರ್ ಅದೇ ಇಮ್ರಾನ್ ಖಾನ್ ಇದಾನಲ್ಲ ಅವ್ನು ಅವರ ದೇಶದ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾಳನ್ನು ಹೇಗೋ ಪ್ರೀತಿ ಪ್ರೇಮ ಅಂತೆಲ್ಲ ಮಾಡಿ ಶಾದಿ ಮಾಡ್ಕಂಡಿ ಕೈಗೆ ಒಂದು ಕೂಸು ಕೊಟ್ಟುಬಿಟ್ಟಿ ಆಮ್ಯಾಕೆ ಡೈವೋರ್ಸ್ ಕೊಟ್ಬಿಟ್ಟಿ ಅವರ್ದು ದೇಶಕ್ಕೆ ವಾಪಸ್ಸು ಕಳಿಸಿದ್ದು ಸರಿನಾ ಇದರ ಬಗ್ಗೆ ನೀವು ಈಗ ಏನು ಹೇಳ ಬಯಸುತ್ತೀರಿ ?
ಮುಖ್ಯಸ್ಥ : ನಿಮ್ದುಕ್ಕೆ ತಲೆ ಐತಾ . ನೀವು ಕೇಳುವ ಪ್ರಶ್ನೆನಾ ಇದು . ನೀವು ಭಾರತಕ್ಕೆ ಸೇರಿದವರ , ಇಲ್ಲ ಭಾರತದ ಪರ ಸಿಬಿಐ ಮಾಡ್ತಿದ್ದೀರಾ . ಸಾನಿಯಾ ಮಿರ್ಜಾ ಯಾರು ನಮ್ದು ಜಾತಿ ಹುಡುಗಿ ಅಲ್ವಾ ಅವಳು . ನಮ್ಮ ಜಾತಿ ಹುಡುಗ ಹುಡುಗಿ ಶಾದಿ ಆಗ್ಬಿಟ್ರೆ ಅದು ಹೆಂಗೆ ತಪ್ಪಾಗ್ತೈತಿ ?
ಆಂಕರ್ : ಅಂದ್ರೆ ನಮ್ಮ ಧರ್ಮದ ಹುಡುಗ ಹಾಗು ಹುಡುಗಿಯರು ಎಷ್ಟು ಬಾರಿ ಬೇಕಾದರೂ ಮದುವೆ ಮಾಡ್ಕಂಡಿ ಆಮೇಲೆ ಬ್ಯಾಡ ಅಂದ್ರೆ ಡೈವರ್ಸ್ ಮಾಡಬಹುದಾ . ಹಾಗೂ ಸಾನಿಯಾ ಮಿರ್ಜಾ ರಾಷ್ಟ್ರೀಯತೆಯಲ್ಲಿ ಭಾರತೀಯ ಆದರೆ ಅದೆ ಇಮ್ರಾನ್ ಖಾನ್ ರಾಷ್ಟ್ರೀಯತೆಯಲ್ಲಿ ಪಾಕಿಸ್ತಾನಿ ಅಲ್ಲವೇನು ?
ಮುಖ್ಯಸ್ಥ : ಅರೆ ಇಸ್ಕಿ ಮಾಕಿ . ನಿಮ್ದು ತಲೆ ನೆಟ್ಟಿಗೆ ಐತೆ . ಅವಳು ಮತ್ತು ಅವನು ಇಬ್ಬರೂ ಮುಸ್ಲಿಂ ಅಲ್ಲವೋ ಮತ್ತೆ ಯಾಕೆ ನ್ಯಾಷನಾಲಿಟಿ ತಗೊಂಡು ನಿಂದು ಕ್ಯಾ ಕರ್ತಾ ಹೇಳು
ಆಂಕರ್ : ಒಂದು ವೇಳೆ ಆಕೆ ಅದೇ ಹುಡುಗನೊಂದಿಗೆ ಶಾದಿ ಆಗ್ಬಿಟ್ರೆ ನಿಮ್ಮ ಮುಂದಿನ ಕ್ರಮ ಏನು ?
ಮುಖ್ಯಸ್ಥ : ಛೆ ಛೆ ಮತ್ತೆ ಎಂತಹ ಪ್ರಶ್ನೆ ಕೇಳ್ತಿರಾ . ನೋ ವೇ ಅವಳು ಆ ಬದ್ಮಾಶ್ ಒಟ್ಟಿಗೆ ಮದುವೆಯಾಗುವ ಮಾತು ಇಲ್ಲವೆ ಇಲ್ಲ .
ಆಂಕರ್ : ಅಷ್ಟು ಕಾರವಾರಕ್ಕಾಗಿ ಹೇಗೆ ಹೇಳ್ತೀರಿ ಹೇಳಿ ?
ಮುಖ್ಯಸ್ಥ : ಅವಳಪ್ಪನ ಮನೆಯ ಸುತ್ತ ಈಗಾಗಲೇ ನಮ್ಮ ಪಡೆಯು ಗಸ್ತು ತಿರುಗುತ್ತಿದೆ ಗೊತ್ತಾ ಒಂದು ವೇಳೆ ಹಾಗೇನಾದರೂ ಆದಲ್ಲಿ ಅವಳ ಜೀವ ಗೊತ್ತು ಅಲ್ಲಿಯೇ ಫಿನಿಶ್ ಅಷ್ಟೇ .
ಆಂಕರ್ : ಒಂದು ವೇಳೆ ಅವಳು ಅದೆ ಹುಡುಗನೊಟ್ಟಿಗೆ ಮದುವೆಯಾದ ಮೇಲೆ ಭಾರತ ಮತ್ತು ಪಾಕಿಸ್ತಾನ ಇವೆರಡೂ ದೇಶಗಳ ಸಂಬಂಧ ಸುಧಾರಿಸುತ್ತದೆ ಅಂತ ಏನಾದರೂ ಆದಲ್ಲಿ ಆ ಬಗ್ಗೆ ನಿಮ್ಮ ಅಭಿಪ್ರಾಯ ಇದ್ದಲ್ಲಿ ತಿಳಿಸಬಹುದಾ ?
ಮುಖ್ಯಸ್ಥ : ಥೂ ! ಅವರು ಒಂದು ಜನ ಏನ್ರೀ . ಅವರಿಗೆ ನೆಟ್ಟಗೆ ಬದುಕೋದು ಗೊತ್ತೇನ್ರಿ . ಅಲ್ಲಿರುವ ನಮ್ಮ ಮುಸ್ಲಿಂ ಜನ ದಿನ ನರಕಯಾತನೆ ಅನುಭವಿಸುತ್ತಿದ್ದಾರೆ ಅವರ ನಡುವೆ ಸಿಕ್ಕಿ . ಈ ಭಾರತೀಯ ಮುಸಲ್ಮಾನರು ದಿನ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ ಅಂತಾನೇ ಅಲ್ಲಿ ಆಜಾದ್ ಕಾಶ್ಮೀರ ಯುದ್ಧ ನಡೆಯುತ್ತಿದೆ . ಅಲ್ರೀ ಆ ಜನಕ್ಕೆ ನೆಟ್ಟಗೆ ಒಂದು ಗನ್ ಎತ್ತಿ ಹಿಡ್ಕೋಳ್ಳೋಕೆ ಬರಲ್ಲ ಎನ್ನುತ್ತಾ ವ್ಯಂಗ್ಯ ನಗು ಹೊರ ಹಾಕುತ್ತಾನೆ .
ಆಂಕರ್ : ಒಂದು ವೇಳೆ , ಅಕಸ್ಮಾತ್ ಇವರಿಬ್ಬರ ಮದುವೆಯಿಂದ ನಿಧಾನವಾಗಿಯಾದರು ಈ ಎರಡು ದೇಶಗಳ ಸಂಬಂಧ ಗಟ್ಟಿಯಾದರೆ , ಆಗ ಆ ಎರಡು ದೇಶವಾಸಿಗರ ಜನಮನ ಒಂದಾಗುವುದಾದರೆ ಹೇಗಿರುತ್ತದೆ ಎಂದು ನಿಮ್ಮ ಮನದಾಳದ ಅಭಿಮತ ಏನು ಎಂದು ತಿಳಿಸಬಹುದಾ !
ಮುಖ್ಯಸ್ಥ: ಆಹ್ಹ್ ! ವಾರೆವಾ ! ಎಂಥಾ ಪ್ರಶ್ನೆ ಕೇಳ್ಬುಟ್ರಿ ನೋಡಿ . ನೀವು ಕೇಳೋ ಪ್ರಶ್ನೆ ಹೇಗಿದೆ ಅಂದ್ರೆ ಈ ನೆಲದಲ್ಲಿ ತೆವಳುವ ಆಮೆಯೊಂದು ಆಕಾಶದಲ್ಲಿ ಹಾರಾಡುವ ಗರುಡನಂತಾಗುವ ಕನಸು ಕಂಡಂತೆ . ದೂರದಲ್ಲಿ ಎಲ್ಲೋ ಭೂಮಿ ಆಗಸ ಒಂದಾದಂತೆ ಇದೆ . ಈ ನಿಮ್ಮ ಕಲ್ಪನೆಯ ಪ್ರಶ್ನೆ ನಿಮ್ಮ ಕನಸಿನಲ್ಲಿಯೇ ಇರಲಿ ಬಿಡಿ ವಾಸ್ತವವಾಗಿ ಅದು ನನಸಾಗುವುದು ಬೇಡವೇ ಬೇಡ .
ಅಲ್ರೀ , ನೀವು ಎಂದಾದರೂ ಎರಡು ಬೇರೆ ಬೇರೆ ಕೋಳಿಯ ಮರಿಗಳನ್ನು ಮಿಶ್ರಣ ಮಾಡಿದರೆ ಏನಾಗುತ್ತದೆ ಗೊತ್ತುಂಟೋ ? ತಾಯಿ ಕೋಳಿ ಇನ್ನೊಂದು ಕೋಳಿಯ ಪಿಳ್ಳೆಗಳನ್ನು ಕುಕ್ಕಿ ಕುಕ್ಕಿ ಸಾಯಿಸುತ್ತದಂತೆ ಹಾಗಾಯಿತು ನೀವು ಕೇಳಿದ ಈ ನಿಮ್ಮ ಈ ಪ್ರಶ್ನೆ . ಭಾರತದ ಶಕ್ತಿ ಸಾಮರ್ಥ್ಯ ಸಂಸ್ಕೃತಿ ಏನು ? ಅದೆ ಈ ಪಾಕಿಸ್ತಾನದ ಶಕ್ತಿ ಸಾಮರ್ಥ್ಯ ಏನು ? ಎಲ್ಲಾದರೂ ಪೂರ್ವ ಪಶ್ಚಿಮ ಒಂದಾಗಲು ಸಾಧ್ಯವೇ ಎಂದಾದರೂ ಹೇಗಾದರೂ ಈಸ್ಟ್ ವೆಸ್ಟ್ ಒಂದಾದಲ್ಲಿ ಆಗೇನಾದರು ಭಾರತ ಮತ್ತು ಪಾಕಿಸ್ತಾನ ಸಹ ಒಂದಾಗಬಹುದೇನೋ !
ಅಂದರೆ ಮುಟ್ಟು ನಿಂತ ಮುದುಕಿ ಮತ್ತೆ ಮೈ ನೆರೆದರೆ ಇಲ್ಲವೇ ಸತ್ತು ಸ್ಮಶಾನ ಸೇರಿದಾತನು ಮತ್ತೆ ಎದ್ದು ಬಂದರೆ ಆಗ ನಿಮ್ಮ ಆಸೆಯಂತೆ ಭಾರತ ಮತ್ತು ಪಾಕಿಸ್ತಾನ ಬಹುಶಹ ಏನಾದರೂ ಒಂದಾಗಬಹುದು ಎನ್ನುತ್ತಾ ವ್ಯಂಗ್ಯವಾಗಿ ನಗುತ್ತಾನೆ .
ಆಂಕರ್ : ಅಂದರೆ , ನಿಮ್ಮ ಮಾತು ಅನಿಸಿಕೆ ಹಾಗೂ ಪಾಕಿಸ್ತಾನದ ಜನಸಾಮಾನ್ಯರ ಅನಿಸಿಕೆ ಅಭಿಪ್ರಾಯ ಎಲ್ಲವು ಒಂದೇ ಎಂಬುದನ್ನು ನೀವು ಒಪ್ಪುವಿರಾ ?
ಮುಖ್ಯಸ್ಥ : ಆಹ್ಹ್ ಆಹ್ಹ್ …ಎಂದು ವ್ಯಂಗ್ಯವಾಗಿ ನಗುತ್ತಾ ಈ ಪ್ರಶ್ನೆ ಕೇಳಲು ನೀವ್ಯಾರು ಇದಕ್ಕೆ ಉತ್ತರಿಸಲು ನಾನ್ಯಾರು ಕಾದು ನೋಡಿ ಕಾಲವೇ ಎಲ್ಲಕ್ಕೂ ಉತ್ತರ ಕೊಡುತ್ತದೆ ಎಂದು ಉದಾಸಿನದಿಂದ ಮಾತನಾಡುತ್ತಾನೆ .
ಆಂಕರ್ : ಕಾಲವು ಎಲ್ಲವನ್ನು ನಿರ್ಧರಿಸುತ್ತದೆ ಮತ್ತು ಉತ್ತರಿಸುತ್ತದೆ ಎನ್ನುವುದಾದರೆ ಮುಂಬರುವ ದಿನಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಒಂದಾದರು ಆಗಬಹುದು ಎಂದು ನಿಮಗ್ಯಾಕೆ ಅನ್ನಿಸುವುದಿಲ್ಲ . ನೋಡಿ ಒಂದು ಕಾಲದಲ್ಲಿ ಭಾರತದ ಅವಿಭಾಜ್ಯ ಅಂಗವಾಗಿ ಹಿಂದುಗಳೇ ತುಂಬಿದ್ದ ಆಫ್ಘಾನಿಸ್ತಾನ ಇಂದು ಸಂಪೂರ್ಣ ಮುಸ್ಲಿಮರೆ ತುಂಬಿರುವ ಸ್ವತಂತ್ರ ರಾಷ್ಟ್ರವೇ ಸರಿ ಆದರೆ ಇಂದು ಬಂಡುಕೋರರು ಹಾಗು ದಾಳಿಕೋರರ ದಾಳಿಗೆ ತುತ್ತಾಗಿ ಸಂಪೂರ್ಣ ಹಾನಿಗೀಡಾಗಿದೆ . ಆದರೆ ಮತ್ತೆ ಅದನ್ನು ಹಿಂದುಸ್ತಾನವು ಅಲ್ಲಿಯ ಸಂಸತ್ ಭವನ ನಿರ್ಮಿಸಿ ಸಂಪೂರ್ಣ ಅಭಿವೃದ್ಧಿ ಪಡಿಸುವ ಹೊಣೆ ಹೊತ್ತಿದೆ ಹಾಗಾಗಿ ಇಂದು ಅಲ್ಲಿಯ ಜನ ಹಿಂದುಸ್ತಾನದತ್ತ ಮತ್ತೆ ಪ್ರೀತಿಯಿಂದ ನೋಡುವಂತಾಗಿದೆ . ಇದನ್ನು ಯಾರಾದರೂ ನಿರೀಕ್ಷಿಸಿದ್ದರ ಇದನ್ನು ಕಾಲವೇ ನಿರ್ಣಯಿಸಿತು ಎನ್ನುತ್ತೀರಾ ಇಲ್ಲ ಎಲ್ಲವೂ ಕಾಲದ ಮಹಿಮೆ ಎನ್ನುತ್ತೀರಾ …
ಅಷ್ಟೇ ಅಲ್ಲ ಸುಮಾರು 25 ವರ್ಷಗಳ ಹಿಂದೆ ಅಂದರೆ 1990ರ ದಶಕದಲ್ಲಿ ಅನಿಸುತ್ತದೆ . ಬಂಡುಕೋರನ ಹಿಡಿತಕ್ಕೆ ಸಿಕ್ಕ ಆಫ್ಘಾನಿಸ್ತಾನದಲ್ಲಿನ ಸಾವಿರಾರು ವರ್ಷ ಹಳೆಯದಾದ ಹಾಗೂ ಅಶೋಕ ಮೌರ್ಯ ಕಾಲದಲ್ಲಿ ಗುಹೆಗಳಲ್ಲಿ ಕೆತ್ತಿದ್ದ ಬುದ್ಧನ ವಿಗ್ರಹಗಳನ್ನು ಬಾಂಬ್ ಹಾಕಿ ಪುಡಿಗಟ್ಟಿದ್ದರು ಹಾಗೂ ಒಮ್ಮೆ ಆ ದಿನದ ಬೌದ್ಧ ವಿಗ್ರಹ ನಾಶ ಮಾಡುವ ಟಾರ್ಗೆಟ್ ಮುಗಿಯದ ಪ್ರಯುಕ್ತ ಅಂದು ಅಲ್ಲನು ಸಿಟ್ಟುಗೊಂಡನು ಮತ್ತು ಅವನ ಶಾಂತಿ ಪ್ರಸನ್ನತೆಗಾಗಿ ಎಂದು ಬಂಡುಕೋರರು ಎಷ್ಟೋ ಧನಗಳನ್ನು ಅಂದರೆ ಹಿಂದುಗಳ ಗೋಮಾತೆಯನ್ನು ಬಲಿ ಕೊಟ್ಟಿದ್ದರು ಇದನ್ನು ಜಗತ್ತು ಮರೆಯುವುದುಂಟೆ ಅಷ್ಟು ಸುಲಭವಾಗಿ .
ಆದರೆ ಇಂದು ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ಗಡಿ ಭಾಗದ ಗುಡ್ಡದಲ್ಲಿರುವ ಅಲ್ಪಸಂಖ್ಯಾತ ಹಿಂದುಗಳು ಆರಾಧಿಸುವ ಹಿಂಗ್ಲಾಜ್ ಎಂಬ ಸ್ತ್ರೀ ದೇವತೆಯನ್ನು ಅದೇ ಬಹು ಸಂಖ್ಯಾತ ಮುಸಲ್ಮಾನರು ಕೇವಲ ಎರಡು ಪರ್ಸೆಂಟ್ ಇಲ್ಲದ ಹಿಂದುಗಳ ಆ ಮಾತೆಯ ದೇಗುಲವನ್ನು ಕಾಪಾಡುತ್ತಿದ್ದಾರೆ ನಿಮಗೆ ಇದು ಗೊತ್ತಾ ? ಇಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರು ಇದರ ಮೇಲೆ ನಿಮಗೆ ನಂಬಿಕೆ ಇಲ್ಲವೇ ?
ಮುಖ್ಯಸ್ಥ : ಯಾ ಅಲ್ಲಾಹು ಅಕ್ಬರ್ ನೋಡೋಣ ಹೂ ನೋಡೋಣ ತಾಳಿಯಾನು ಬಾಳಿಯಾನು ಅಲ್ವೇ !
ಆಂಕರ್ : ಈ ವಿಚಾರವಾಗಿ ಅಂದ್ರೆ ಜೋಧಾ ಅಕ್ಬರ್ ಮತ್ತು ಪ್ರಣವ್ ಅವರ ಪ್ರೀತಿ ಪ್ರಣಯದ ವಿಚಾರವಾಗಿ ನಿಮ್ಮ ಅಭಿಪ್ರಾಯವನ್ನು ಈ ಟಿವಿ ವಾಹಿನಿ ಮೂಲಕ ಜನತೆಗೆ ಏನನ್ನಾದರೂ ಹಂಚಿಕೊಳ್ಳಲು ಬಯಸುತ್ತೀರಾ ?
ಮುಖ್ಯಸ್ಥ : ಇದೊಂದು ಧರ್ಮ ಬಾಹಿರ ಚಟುವಟಿಕೆ . ಇದನ್ನು ಬೇರು ಸಹಿತ ಕಿತ್ತು ಹಾಕಲೇಬೇಕು ಇಲ್ಲದಿದ್ದರೆ ಎಲ್ಲೆಡೆ ಹರಡಿ ಕ್ಯಾನ್ಸರ್ ರೋಗದಂತೆ ಇಡೀ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತದೆ ಹಾಗಾಗಿ ಇಂತಹ ಚಟುವಟಿಕೆಗಳಿಗೆ ಧರ್ಮವಾಗಲಿ ಸಮಾಜವಾಗಲಿ ಸರ್ಕಾರಗಳಾಗಲಿ ಯಾವುದೇ ಕಾರಣಕ್ಕೂ ಸಹಾಯವನ್ನು ಮಾಡಲೇಬಾರದು .
ಆಂಕರ್ : ಕೊನೆಯದಾಗಿ ಒಂದು ಪ್ರಶ್ನೆ . ಅಲ್ಲ ನಾವು ಈಗ ಯಾವ ಜಮಾನದಲ್ಲಿ ಇದ್ದೇವೆ ಹೇಳಿ . ನಮ್ಮ ವಿಜ್ಞಾನ ಆವಿಷ್ಕಾರಗಳು ಎಲ್ಲಿಗೆ ಬಂದಿದೆ . ವಿಶ್ವವೇ ನಮ್ಮ ಮನೆ ಎನ್ನುವ ಕಲ್ಪನೆ ಈಗ ಹಳೆಯದಾಯಿತು . ನಾವೀಗ ಮಂಗಳ ಚಂದ್ರ ಮತ್ತು ಶುಕ್ರ ಗ್ರಹದಲ್ಲಿ ಮಾನವ ವಾಸ ಯೋಗ್ಯ ತಾಣಕ್ಕಾಗಿ ಮಾನವನು ಪರಿತಪಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಇನ್ನು ನಾವು ದೇಶ ಜಾತಿ ಧರ್ಮ ಕಾಲ ಎಂಬ ಅಂಧಶ್ರದ್ಧೆ ಎಂಬ ಗಡಿಯ ಗೋಡೆಯನ್ನು ಹಾಕಿಕೊಂಡು ಎಲ್ಲರು ಬದುಕುತ್ತಿದ್ದೇವೆ ಎಂಬ ಕೊರಗು ನಮ್ಮನ್ನು ಭಾಧಿಸುತ್ತಿದೆ ಎಂಬ ಸಂಶಯದ ಪಿಡುಗು ಏಕೆ ಇನ್ನು ನಿಮ್ಮನ್ನು ಕಾಡುತ್ತಿಲ್ಲವೇ ?
ಮುಖ್ಯಸ್ಥ : ನೋಡ್ರಿ ನೀವು ಹಿಂದೂ ಧರ್ಮ ಮತ್ತು ಸಂಪ್ರದಾಯ ಸಂಸ್ಕೃತಿ ಪರವಾಗಿಯೇ ಮಾತನಾಡುತ್ತಾ ಇದ್ದೀರಿ ಹಾಗಾಗಿ ಅವರ ಧರ್ಮದ ಒಂದು ಅಂಧಶ್ರದ್ಧೆ ಬಗ್ಗೆ ಅದರಲ್ಲೂ ಇಸ್ರೋ ವಿಜ್ಞಾನಿಗಳ ಅಂಧಶ್ರದ್ದೆಯನ್ನು ನಾನು ಈ ಮೂಲಕ ಜಗತ್ತಿಗೆ ತಿಳಿಯಪಡಿಸುತ್ತೇನೆ ಕೇಳಿ .
ಇಸ್ರೋ ಮತ್ತು ಅಲ್ಲಿನ ವಿಜ್ಞಾನಿಗಳು ಮತ್ತು ಅವರ ಸಾಧನೆಯ ಬಗ್ಗೆ ಪ್ರಪಂಚಕ್ಕೆ ಗೊತ್ತು ಅದರ ಬಗ್ಗೆ ಹೇಳುವುದೇ ಬೇಡ . ಇಸ್ರೋ ಮತ್ತು ಆ ವಿಜ್ಞಾನಿಗಳ ಟೀಮ್ ಪ್ರತಿಬಾರಿಯೂ ಹೊಸ ಹೊಸ ಮೈಲುಗಲ್ಲನ್ನು ಸಾಧಿಸುತ್ತಿದ್ದಾರೆ ಅಲ್ಲವೇ . ಆದರೆ ಪ್ರತಿ ಉಪಗ್ರಹ ಉಡಾವಣೆ ಮುನ್ನ ಅದರದ್ದೇ ಆದ ಪ್ರತಿರೂಪವನ್ನು ಸ್ವಯಂ ವಿಜ್ಞಾನಿಗಳೇ ಅಲ್ಲಿಯ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಇಟ್ಟು ಪೂಜೆ ಮಾಡಿಸಿಕೊಂಡು ಬರುತ್ತಾರೆ . ಈ ವಿಜ್ಞಾನಿಗಳಿಗೂ ಮತ್ತು ಅಂದ ಸಂಪ್ರದಾಯಕ್ಕೆ ಏನು ಹೇಳಲಿ ನೀವೇ ಹೇಳಿ ಇನ್ನು .
ಪ್ರಕೃತಿಯ ವಿಚಾರಕ್ಕೆ ಬರೋಣ . ನೋಡಿ ಇವರೇ ಒಂದು ತಂಗಿ ಮರ ಎತ್ತರಕ್ಕೆ ಬೆಳೆದಂತೆಲ್ಲ ಅಂದರೆ ತಾನು ಬೆಳೆದಂತೆ ಹಳೆಯ ಗರಿಗಳನ್ನು ಕಳಚುತ್ತಾ ಹೊಸ ಗರಿಗಳನ್ನು ಬಿಚ್ಚಿಕೊಳ್ಳುತ್ತ ಸಾಗುತ್ತದೆ ಅಲ್ಲವೇ ಹಾಗೆ ಹಳೆಯ ಗರಿ ಕಳಚುವಾಗ ಅದರ ಗುರುತನ್ನು ತಾನು ಹಾಗೆ ಉಳಿಸಿಕೊಳ್ಳುತ್ತದೆ ತಾನೇ !
ಅಂದರೆ ಇದರಿಂದ ನಾವು ಕಲಿಯಬೇಕಾದದ್ದು ಬಹಳಷ್ಟು ಇದೆ . ನಾವು ನಮ್ಮ ಅನುಕೂಲಕ್ಕಾಗಿ ವಿಜ್ಞಾನ ತಂತ್ರಜ್ಞಾನ ಬೆಳೆಸಿಕೊಂಡಿರಬಹುದು ಅಥವಾ ಬಳಸಿಕೊಂಡಿರಬಹುದು ಆದರೆ ನಮ್ಮ ಮಾನವ ಜನಾಂಗದ ಮೂಲಗಳಾದ ಧರ್ಮ ನಂಬಿಕೆ ಶ್ರದ್ಧೆ ಸಂಪ್ರದಾಯದ ಬೇರುಗಳನ್ನು ಹೊರತುಪಡಿಸಿ ಬದುಕಬಹುದು ಅನ್ನುವಿರಾ ! ವಿಚಾರ ಮಾಡಿ ನೋಡೋಣ
ಬಾಳಬಹುದು ಆಧುನಿಕ ತಂತ್ರಜ್ಞಾನದಲ್ಲಿ ಈ ನೆಲ ಜನ ಸಂಬಂಧ ಸಂಸ್ಕೃತಿ ಎಲ್ಲವನ್ನು ಬಿಟ್ಟು ಬಾಳಬಹುದು ಆದರೆ ಅದೊಂದು ಜೀವನವೇ ನೋಡಿ ನಾವು ಎಷ್ಟು ದಿನ ಅಂತ ಟಿವಿ ಇಂಟರ್ನೆಟ್ ಕಂಪ್ಯೂಟರ್ ಮುಂತಾದವುಗಳಲ್ಲಿ ಕಾಲ ಕಳೆಯಬಹುದು .
೨೪ ಗಂಟೆ ಬೇಡ ಒಂದು ವಾರ ಆಮೇಲೆ ಕಣ್ಣಿನ ಸ್ನಾಯು ಸೆಳೆತ ತಲೆನೋವು ಇತ್ಯಾದಿ ಎಲ್ಲವು ಬರುತ್ತದೆ . ಸುನಾಮಿ ಭೂಕಂಪ ಮುಂತಾದವುಗಳಿಂದ ಮನೆ ಮಠ ಎಲ್ಲವೂ ನಾಶವಾಗುತ್ತದೆ . ಎಲ್ಲವನ್ನು ಕಳೆದುಕೊಂಡ ನಾವು ಪುನರಪಿ ಜನನ ಹಾಗೆ ಹಿಸ್ಟರಿ ಆಲ್ವೇಸ್ ರಿಪೀಟ್ಸ್ ಎನ್ನುವಂತೆ ಮತ್ತೆ ನಾವು ಬೆತ್ತಲೆ ಯುಗಕ್ಕೋ ಇಲ್ಲವೇ ಶಿಲಾಯುಗದಿಂದ ನಮ್ಮ ಜೀವನ ಪ್ರಾರಂಭ ಮಾಡಬೇಕು . ಆಗ ಮತ್ತೆ ಧರ್ಮ ಶಾಸ್ತ್ರ ಸಂಪ್ರದಾಯ ಶ್ರದ್ಧೆ ಇವುಗಳು ಎಲ್ಲವು ನಮ್ಮನ್ನು ಒಂದೊಂದಾಗಿ ನಮ್ಮಕೈ ಹಿಡಿಯುತ್ತವೆ ಹೌದೋ ಅಲ್ಲವೋ ಏನು ಹೇಳುವಿರಿ ಹೇಳಿ ಇದಕ್ಕೆ
ಅಂಕರ್: ಹೌ ದೌದು ಎಂದು ತಲೆ ಆಡಿಸುತ್ತಾ ,
ಇಷ್ಟು ಹೊತ್ತು ನಮ್ಮೊಂದಿಗೆ ಮುಕ್ತವಾಗಿ ಜೋಧಾ ಅಕ್ಬರ್ ಮತ್ತು ಪ್ರಣವ್ ವಿಚಾರವಾಗಿ ತಮ್ಮ ಮನದಾಳದ ಅಭಿಪ್ರಾಯಗಳನ್ನು ತಿಳಿಸಿದ್ದೀರಿ ಹಾಗು ಮುಕ್ತವಾಗಿ ಸಾರ್ವಜನಿಕರೊಂದಿಗೆ ಹಂಚಿಕೊಂಡಿದ್ದೀರಿ ಇದಕ್ಕಾಗಿ ಧನ್ಯವಾದಗಳು . ಇಲ್ಲಿಗೆ ಈ ನಮ್ಮ ಕಾರ್ಯಕ್ರಮ ಮುಕ್ತಾಯವಾಗುತ್ತದೆ ನಮಸ್ಕಾರಗಳು.
Writer
0 Followers
0 Following