A Love Story On Hindu Muslim - ಅಧ್ಯಾಯ 14

ProfileImg
27 May '24
7 min read


image

       ನಿಜ , ನಾವು ಪರಸ್ಪರ ಪ್ರೀತಿಸಿದ್ದೇವೆ . ಈ ಜನ್ಮದಲ್ಲಿ ನಮಗೆ ಮದುವೆ ಅಂತ ಆದರೆ ಅದು ಪ್ರಣವ್ - ಜೋಧಾ ಅಕ್ಬರ್ ನೊಟ್ಟಿಗೆ ಮಾತ್ರ ಎಂದು ಪರಸ್ಪರರು ದೃಢವಾಗಿ ಈಗಾಗಲೇ ಅವರು ನಿರ್ಧರಿಸಿಬಿಟ್ಟಿದ್ದಾರೆ .

      ಒಂದು ವೇಳೆ ನಮ್ಮೀ ಮದುವೆಗೇನಾದರು ಜಾತಿ ಮತ ಪಂಥ ಬಂಧುಗಳು ಅಡ್ಡಿಪಡಿಸಿದ್ದೇ ಆದಲ್ಲಿ ಈ ನೆಲವನ್ನು ಬಂಧು ಬಳಗ ಎಲ್ಲವನ್ನು ಸಹ ತೊರೆದು ಮತ್ತೊಂದು ಯಾವುದಾದರೂ ಮೂರನೆ ದೇಶದಲ್ಲಿ ಮದುವೆ ಆಗಿ ಅಲ್ಲಿಯೇ ನಾವು ನಮ್ಮ ನೆಲೆ ಕಂಡುಕೊಳ್ಳುವುದಾಗಿ ಈ ಹಿಂದೆಯೇ ಇಬ್ಬರು ಪ್ರತ್ಯೇಕವಾಗಿ ಮೀಡಿಯಾ ಮುಂದೆ ತಮ್ಮ ಅನಿಸಿಕೆ ತಿಳಿಸಿರುತ್ತಾರೆ ಹಾಗೂ ಅದು ಈಗಾಗಲೇ ಎಲ್ಲಾ ಮೀಡಿಯ ಮಾಧ್ಯಮದಲ್ಲಿ ಪ್ರಸಾರವಾಗಿರುವುದು ಎಲ್ಲರಿಗು ಗೊತ್ತಿರುವಂತದ್ದೇ .

      ಯಾವಾಗ ಪ್ರಣವ್ - ಜೋಧಾ ಅಕ್ಬರ್ ತಮ್ಮ ವಿಚಾರ ವನ್ನು ನೇರಾ ನೇರವಾಗಿ ಖಡಕ್ ಆಗಿ ವಾಹಿನಿಗೆ ನೀಡಿದ ನಂತರ ಕ್ಷಣ ಕ್ಷಣಕ್ಕು ನಾನಾ ರೀತಿಯ ತಿರುವುಗಳನ್ನು ಪಡೆದುಕೊಳ್ಳುತ್ತಾ ದೇಶದೆಲ್ಲೆಡೆ ಒಂದು ರೀತಿಯ ಕಾವು ಏರಿಸತೊಡಗಿತು . ಹಾಗಾಗಿ ಈ ಯುವ ಜೋಡಿಯನ್ನು ಹೇಗಾದರು ಒಂದುಗೂಡಿಸುವ ಮೂಲಕ ಎರಡು ದೇಶಗಳ ನಡುವೆ ಸುಖಾಂತ್ಯ ಬಯಸಿದ , ಕೆಲವು ಹಿತೈಷಿಗಳು ಈ ನಿಟ್ಟಿನಲ್ಲಿ ವಧು ವರನ ತಂದೆ ತಾಯಿಗೆ ಒತ್ತಡ ತರುವ ನಾನಾ ತಂತ್ರಗಾರಿಕೆ ಹೆಣೆಯುವಲ್ಲಿ ನಿರತರಾಗಿದ್ದಾರೆ .

       ಅಂತೆಯೇ , ಪ್ರಧಾನಿ ಆಪ್ತ ಕಾರ್ಯದರ್ಶಿ ಧಾರ್ಮಿಕ ಮಂತ್ರಿ ಸಂಸ್ಕೃತಿ ಇಲಾಖೆ ಮಂತ್ರಿ ಹಾಗು ತೀರಾ ಆಪ್ತರು ಎಂದೆಲ್ಲ ಸೇರಿ ೪ - ೫ ಜನರು ರಾಮಾಜೋಯಿಸರ ಮನೆಯ ಮೀಟಿಂಗ್ ಹಾಲ್ನಲ್ಲಿ ಕುಳಿತಿದ್ದಾರೆ , ಮೊದಲು ಮಾತನಾಡುವ ದೈರ್ಯ ಯಾರು ಮಾಡದೆ ಒಬ್ಬರು ಮತ್ತೊಬ್ಬರ ಮುಖವನ್ನು ನೋಡುತ್ತಾ ಇದ್ದಾರೆ .

      ಎಲ್ಲವನ್ನು ಅರ್ಥೈಸಿಕೊಂಡ ರಾಮಾಜೋಯಿಸರು ಮೊದಲು ಎಂಬಂತೆ ಛೇ ಛೇ.. ದೀಪದ ಕೆಳಗೆ ಕತ್ತಲು ಎಂಬಂತೆ ಆಗಿದೆ ನೋಡಿ ನನ್ನ ಈ ಬಾಳು . ನಾನು ಇರುವ ಒಬ್ಬನೇ ಮಗನನ್ನು ಅಪರಂಜಿ ತರ ಸಾಕಿದ್ದೆ ಆದರೆ..! ಆತ ಗುಲಗಂಜಿ ಎಂದು ಸಾಬೀತು ಮಾಡಿಬಿಟ್ಟ ದರಿದ್ರದವನು . ಎಂದು ತನ್ನ ದುಃಖವನ್ನು ತೋಡಿಕೊಂಡರು .

     ಅಷ್ಟೇ ಅಲ್ಲ ಈ ಬಾಳಿನ ಉತ್ಸಾಹದ ಚಿಲುಮೆಯನ್ನು ಬತ್ತಿ ಹೋಗುವಂತೆ ಹಾಗು ಯಾವ ಆಸೆಗಳು ಸಹ ಮತ್ತೆ ಗರಿಗೆದರದಂತೆ ಅಷ್ಟೇ ಅಲ್ಲ ಇನ್ನು  ಯಾರಿಗು ಸಹ  ಮುಖ ತೋರಿಸದಂತೆ ಮಾಡಿದ . ಅದು ಸಾಲದೆಂಬಂತೆ ಅಜಾತ  ಶತ್ರುವೆಂಬಂತಿದ್ದ ನನ್ನನ್ನು ನೋಡಿದವರು ಸಹ ಎಂದೂ ತಲೆ ಎತ್ತಿ ಮತ್ತೆ ನೋಡದಂತೆ ಮಾಡಿದ ಎಂದು ತನ್ನಕಣ್ಣಂಚಿನಲ್ಲಿ ಒಸರುತಿದ್ದ  ಕಣ್ಣೀರನ್ನು ಒರೆಸಿಕೊಳ್ಳುತ್ತಾ ಹೇಳಿದರು .

      ಧರ್ಮಾದಿಕಾರಿಗಳೆ  , ತಾವೇ ನಿಮ್ಮ ಮನಸಿನಲ್ಲಿ ಅನ್ಯತಾ ಏನೇನೋ ಕಲ್ಪಿಸಿಕೊಂಡು ಏಕೆ ಹೀಗೆಲ್ಲ ಸುಮ್ಮನೆ ಮಾತಾಡುತ್ತಿರುವಿರಿ ಎಂದು ಪ್ರದಾನ ಮಂತ್ರಿಗಳ ಆಪ್ತ ಕಾರ್ಯದರ್ಶಿ ಹೇಳಿದ .

   ಈ ಮಾತಿಗೆ ಪ್ರತಿಯಾಗಿ ಯಾವುದು ಸುಳ್ಳು ? ಎಂದು ರಾಮಾಜೋಯಿಸ್ರು ಪ್ರಶ್ನಿಸಿದರು .

    ಹಾ ಅನ್ಯತಾ ಭಾವಿಸಬಾರದು . ಈಗಲೂ ಸಹ ದೇಶವಾಸಿಗಳು ನಿಮ್ಮನ್ನು ಅದೇ ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದಾರೆ  , ನನ್ನ ಮಾತು ನಂಬಿ ಇದು ಅಕ್ಷರಶಃ ಸತ್ಯ   ಎನ್ನುತ್ತಾರೆ ಧಾರ್ಮಿಕ ಮಂತ್ರಿಗಳು .

    ಧರ್ಮಾಧಿಕಾರಿಗಳೇ ನಡೆಯುವಾತ ಎಡವುವುದು ಸಹಜ . ಹಾಗೆ ಬೆಳೆದು ನಿಂತ ಪ್ರೌಢರು ತಪ್ಪು ಮಾಡುವುದು ಕೂಡ ಅಷ್ಟೇ ಸಹಜವಲ್ಲವೇ  . ಈ ತಪ್ಪಿಗೆ ಕಾಲ ದೇಶ ವಯಸ್ಸು ಲಿಂಗ ಎಂಬ ತಾರತಮ್ಯ ಇಲ್ಲವೆ ಇಲ್ಲ  . ಈ ಮಾತನ್ನು ನೀವೇ ಏಷ್ಟು ಬಾರಿ ಅದೆಷ್ಟು  ಜನತೆಗೆ ಹೇಳಿಲ್ಲ . ಈ ಮಾತನ್ನು ಸುಮ್ಮನೆ ಇಲ್ಲಿ ನೆನಪಿಸಿದೆ ಅಷ್ಟೇ . ತಾವು ಏಷ್ಟು ಜನರ ತಪ್ಪು ಮನ್ನಿಸಿ ಅವರಿಗೆ ನ್ಯಾಯೋಚಿತವಾದ ತೀರ್ಪಿತ್ತು ಆ ಜೀವಕ್ಕೆ ಬೆಳಕಾದ ನೀವು ಇಂದು  ನೀ.. ನೀವೇ ಮುಂದೆ ಹೇಳದಾಗುತಾನೆ  ಗೃಹಮಂತ್ರಿ .

      ಸ್ವಾಮಿ ಮಾನವ ಜಾತಿ ತಾನೊಂದೇ ವಲಂ ಎಂದು ಅಂದೆ ಆದಿ ಕವಿ ಪಂಪ ಹೇಳಿಲ್ಲವೇ ?

     ಎಲ್ಲಾ ದೇಶಗಳು ಆಯಾ ದೇಶದ ಬಹುಸಂಖ್ಯಾತ ಸಮುದಾಯದ ಆದರದ ಮೇಲೆ ಆ ಧರ್ಮವನ್ನು ಆಯಾ ದೇಶದ ರಾಷ್ಟ್ರ ಧರ್ಮವೆಂದು ಘೋಷಿಸಿಕೊಂಡು ಬಂದಿವೆ ಆದರೆ ಪ್ರಪಂಚದಲ್ಲೇ ಬಹುಶಃ ಈ ಭಾರತ ಮಾತ್ರ ಬಹು ಸಂಖ್ಯಾತ ಹಿಂದು ಧರ್ಮೀಯರಿಂದ ಕೂಡಿದ್ದರು ಸಹ ಈ ದೇಶವನ್ನು ಹಿಂದೂರಾಷ್ಟ್ರ ಎಂದು ಗುರುತಿಸಿಕೊಳ್ಳದೆ ಜಾತ್ಯತೀತ ರಾಷ್ಟ್ರ ಎಂದೇ ಕರೆಯಲ್ಪಡುತ್ತಿರುವ ದೇಶ .  ಏಕೆ ಹೇಳಿ ಈ ಮಣ್ಣ ಸಂಸ್ಕೃತಿ ಹಾಗಿದೆ ಅಲ್ಲವೇ ! ಇದು ನಿಮಗೆ ತಿಳಿಯದ್ದೇನಲ್ಲ , 

   ಅದು ಅಲ್ಲದೆ ಇನ್ನು ನಾವು ನೀವು ಎಲ್ಲ ಬಾಳುವೆ ಮಾಡುವುದಾದರು ಇನ್ನು ಎಸ್ಟು ದಿನ ಅಂತ . ಈ ಬಾಳೆಂಬ ಐದಾರು  ದಿನದ ಜಾತ್ರೆಗೆ ಧರ್ಮ ಜಾತಿ ಎಂಬ ಸಂಕೋಲೆ ಇನ್ನು ಬೇಕು ಅನ್ನಿಸುತ್ತಾ ? ಹೇಳಿ  ಎಂದು ಜೋಯಿಸರನ್ನು ಕುರಿತು ಹೇಳಿದ  ಧರ್ಮಾಧಿಕಾರಿ ಆಪ್ತ .

    ಧರ್ಮಾಧಿಕಾರಿಗಳೆ ಈಗ ಮುಂದೆ ನಡೆಯುವ ನಿಮ್ಮ ಮಗನ ಮದುವೆಗೆ ನೀವು ಒಪ್ಪಿಗೆ ಕೊಡುತ್ತೀರಾ ಇಲ್ಲವೋ ಎಂಬ ಪ್ರಶ್ನೆಯೇ ಇಲ್ಲಿ ಉದ್ಭವಿಸವುದಿಲ್ಲ ಏಕೆಂದರೆ , ಹೆತ್ತವರು ಬಂಧು ಬಳಗ ಅಷ್ಟೇ ಏಕೆ ದೇಶವನ್ನು ಸಹ ತೊರೆದು ಅದೇ ಅ ಹುಡುಗಿಯೊಂದಿಗೆ ಮದುವೆಯಾಗಿ ಮತ್ತೊಂದು ಯಾವುದಾದರೂ ಮೂರನೆ ದೇಶದಲ್ಲಿ ತಾನು ಜೀವನ ಸಾಗಿಸುವುದು ಶತಸಿದ್ಧ ಎಂದು ಈಗಾಗಲೇ ಕೊಟ್ಟ ಹೇಳಿಕೆ ಎಲ್ಲೆಡೆ ಜಗಜಹಿರಾಗಿದೆ ಇದು ನಿಮಗೆ ತಿಳಿಯದ ವಿಚಾರವೇನಲ್ಲ . ಹೀಗಿರುವಾಗ ನಿಮ್ಮ ವಿರೋದ  ಮದ್ಯೆ ಮದುವೆ ಆಗುವ ಬದಲು ನಿಮ್ಮ ಒಪ್ಪಿಗೆ ಹಾಗೂ ಎಲ್ಲ ಹಿರಿಯರ ಸಾನಿಧ್ಯ ಹಾಗೂ ಆಶೀರ್ವಾದ ಪಡೆದು ಅದ ಮದುವೆ ನಿಮಗೂ ಅ ಜೋಡಿಗು ಹೆಚ್ಚು ಶ್ರೇಯಸ್ಸು ಎಂದು ನಿಮಗೆ  ಅನಿಸುವುದಿಲ್ಲವೇ ?  ಒಂದು ವೇಳೆ ನಿಮ್ಮನ್ನು ದಿಕ್ಕರಿಸಿ ಮದುವೆಯಾದಲ್ಲಿ ನೀವು ಇದ್ದು ಏನು ಪ್ರಯೋಜನ ಹೇಳಿ ನಿಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿದಂತೆ ಆಗುವುದಿಲ್ಲವೇ , ಹಾಗಾಗಿ ನೀವು ಒಪ್ಪುವಿರೋ ಇಲ್ಲವೋ ಆತ ಮದುವೆ ಆಗುವುದು ಖಚಿತ ಅನ್ನುವುದಾದರೆ ನೀವ್ಯಾಕೆ ಒಪ್ಪಿಗೆ ಕೊಡಬಾರದು . ಮನಸಾರೆ ಒಪ್ಪುವಿರೊ ಇಲ್ಲ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಗೆ ಕೊಡುವಿರೋ ಅದು ಬೇರೆ ಮಾತು . ಇಲ್ಲಿ ಮನಸು ಮುಖ್ಯವಲ್ಲ ಮನಸಿನಿಂದ ಬಂದ ಮಾತು ಮುಖ್ಯ ಆಗುತ್ತೆ ಹಾಗಾಗಿ ಸುಮ್ಮನೆ ಹೂ ಅಂದು ಬಿಡಿ ಆಗ ನಿಮ್ಮ ಗೌರವವಾದರು ಉಳಿಯುತ್ತೆ ಎಂದ ಮತ್ತೊಬ್ಬ .

      ಇದಪ್ಪ ಮಾತು ಅಂದ್ರೆ . ಧರ್ಮಾಧಿಕಾರಿಗಳೆ ಸುಮ್ಮನೆ ಒಳ್ಳೆ ಮನಸಿನಿಂದ ಹೂ ಅಂದು ಬಿಡಿ ಮುಂದಿನದ್ದನ್ನು ಆ ಶ್ರೀರಾಮನೇ ನೋಡಿಕೊಳ್ಳುತ್ತಾನೆ ಎಂದರು ಗೃಹ ಮಂತ್ರಿ .

       ಹೌದು ಹೌದು ಹೂ ಅನ್ನಿ ಆಗೋದೆಲ್ಲ ಒಳ್ಳೆದಕ್ಕೆ ಎಂದು ಒಂದೇ ರಾಗ ಎಳೆದರು ಸಭೆಯಲ್ಲಿದ್ದವರು .

       ಹೌದು ಧರ್ಮಾಧಿಕಾರಿಗಳೇ ಈಗ ನೀವು ಮುಕ್ತ ಮನಸ್ಸಿಂದ ಈ ಮದುವೆಗೆ ಒಪ್ಪಿದ್ದೆ ಆದಲ್ಲಿ ಆಗ ಈ ಎರಡು ದೇಶಗಳ ಮದ್ಯೆ ಸಂಬಂಧ ಏನಾದ್ರು ಬಹುಶಃ ಸುದಾರಿಸಿದ್ರು ಸುಧಾರಿಸಬಹುದು ಧರ್ಮಾಧಿಕಾರಿ ಆಪ್ತ ಹೇಳಿದಾಗ ಹೇಗೆ ಎಂಬಂತೆ ಮುಖ ನೋಡಿದಾಗ ಧರ್ಮಾಧಿಕಾರಿ ಕುರಿತು ನೋಡಿ ಹೇಗೆಂದರೆ , ಎರಡು ದೇಶ ಮದ್ಯೆ ಸಂಬಂಧ ಸುಧಾರಿಸಿತು ಎಂದಾದಲ್ಲಿ ಮಿಲಿಟರಿ ವೆಚ್ಚ ತಗ್ಗುತ್ತದೆ ಈ ಹಣ ಇತರೆ ಅಭಿವೃದ್ದಿ ಕಾರ್ಯಕ್ಕೆ ಬಳಸಬಹುದು .

      ಹೀಗೆ ಎರಡು ದೇಶ ಒಂದಾದಲ್ಲಿ ಗೋದಿ ಬೆಳೆಯುವ ವಿಶಾಲ ಭೂಮಿ ನಮ್ಮದಾಗುತ್ತದೆ , ಸಟ್ಲೇಜ್ ನೀರಾವರಿ ಪ್ರದೇಶ ನಮ್ಮದಾಗುತ್ತದೆ ಎಲ್ಲಕ್ಕು ಮಿಗಿಲಾಗಿ ಸಿಂದು ನಾಗರೀಕತೆ ತೊಟ್ಟಿಲುಗಳು ಹರಪ್ಪ ಮಹೆಂಜೋದಾರೋ ಎಂಬ ಪ್ರದೇಶ ಮತ್ತೆ ನಮ್ಮ ಕೈ ಸೇರುತ್ತದೆ . ಧರ್ಮಾಧಿಕಾರಿ ಆಪ್ತ ಹೇಳಿದ .

      ಅಷ್ಟೆಲ್ಲ ಏಕೆ ? ಈ ೨ ನೆಯ ಪ್ರಪಂಚ ಯುದ್ದ ಮುಗಿದ ಮೇಲೆ  ಅಮೆರಿಕಾ ಮತ್ತು ಮಿತ್ರ ದೇಶ ಎಲ್ಲಾ ಒಂದಾಗಿ , ಜರ್ಮನಿ ಬಲವನ್ನು ಮುರಿಯಲು ಜರ್ಮನ್ ದೇಶವನ್ನು ಎರಡು ಬಾಗ ಮಾಡಿ ಪೂರ್ವ ಮತ್ತು ಪಶ್ಚಿಮ ಜರ್ಮನ್ ಎಂದು ಎರಡು ದೇಶವಾಗಿಸಿದರು .ಆದರೆ ೮೦ ರ ದಶಕದಲ್ಲಿ ಈ ದೇಶಗಳೆರಡು ಮತ್ತೆ ಒಂದಾದವು . ಅಂದು ಅಮೆರಿಕಾ ಮತ್ತು ಮಿತ್ರ ದೇಶಗಳು ಕಟ್ಟಿದ್ದ ಗಡಿಬೇಲಿಯ ಅ ಗೋಡೆಯನ್ನು ಜರ್ಮನ್ ಮತ್ತೆ ಉರುಳಿಸಿ ಹಾಕಿತು ಅ ಮೂಲಕ ಪೂರ್ವ ಪಶ್ಚಿಮ ಜರ್ಮನ್ ಮತ್ತೆ ಒಂದಾದುದು ಈಗ ಇತಿಹಾಸ ಪುಟ ಸೇರಿದೆ.ಇಂದು ಅವರು ಮತ್ತೆ ಒಂದಾಗಿ ನೆಮ್ಮದಿ ಸುಖದ ಜೀವನ ಸಾಗಿಸುತ್ತಿಲ್ಲವೆ ? ಧರ್ಮಾಧಿಕಾರಿಗಳೆ  ಎಂದು ಗೃಹಮಂತ್ರಿ ಹೇಳಿದರು.

        ಪೂರ್ವ ಮತ್ತು ಪಶ್ಚಿಮ ಜರ್ಮನ್ ಆಯಾ ದೇಶಗಳು ಮತ್ತೆ ಒಂದಾದ ಕಥೆಯ ನಿದರ್ಶನ ಇಲ್ಲಿ ಸರಿ ಹೊಂದದು , ಏಕೆಂದರೆ ಪೂರ್ವ ಮತ್ತು ಪಶ್ಚಿಮ ಜರ್ಮನ್  ಎರಡು ಕ್ರಿಶ್ಚಿಯನ್ ಧರ್ಮದವರು ಹಾಗೂ ಒಂದೇ ಸಾಂಸ್ಕೃತಿಕ ಹಿನ್ನೆಲೆಯವು . ಆದರೆ ,,ಇಲ್ಲಿ ಹಾಗಿಲ್ಲವಲ್ಲ , ಇಲ್ಲಿ ನೋಡಿ ಪಾಕಿಸ್ತಾನ ನೂರಕ್ಕೆ ನೂರಷ್ಟು ಮುಸ್ಲಿಂ ಬಾಹುಳ್ಯ ರಾಷ್ಟ್ರ ಇನ್ನು ಭಾರತವೊ ಪ್ರಪಂಚದ ಎಲ್ಲ ಧರ್ಮೀಯರನ್ನು ತನ್ನ ಒಡಲಲ್ಲಿ ಇಟ್ಟಕೊಂಡಿದೆ . ಹಾಗೆ ಕೇವಲ ಶಾಸ್ತ್ರಕ್ಕೆ ಎಂಬಂತೆ ಹಿಂದೂಗಳು ಬಹುಸಂಖ್ಯಾತರು ಎಂಬ ಹಣೆ ಪಟ್ಟಿ ಇಟ್ಟುಕೊಂಡಿದ್ದಾರೆ ಅಷ್ಟೇ . ಹೀಗಾಗಿ ವಸ್ತು ಸ್ಥಿತಿ ಕಂಡು ಹೇಗೆ ಯಾವ ರೀತಿಯಲ್ಲಿ ಭಾರತ ಪಾಕಿಸ್ತಾನ ಮತ್ತೆ ಒಂದಾಗಲು ಸಾದ್ಯ ಹೇಳಿ  ಎಂದು ಸಭೆಯನ್ನು ರಾಮಾಜೋಯಿಸರು ಪ್ರಶ್ನಿಸುತ್ತಾರೆ . 

       ಟ್ರಾಕ್ ನಮ್ಮ ಕಡೆ ವಾಲುತ್ತಿದೆ ಎಂಬುದನ್ನು ಅರಿತ ಸಂಸ್ಕೃತಿ ಸಚಿವರು ಕೂಡಲೇ ಮದ್ಯೆ ಬಾಯಿ ಹಾಕಿ ಸರ್ , ಅದು ಆಮೇಲಿನ ಮಾತು . ನೋಡಿ ಸಹಸ್ರಾರು ವರ್ಷಗಳ ಅವಧಿಯಲ್ಲಿ ಒಂದಾಗಿ ಬಾಳಿದ್ದಾಗ ಹಿಂದೂ ಮುಸ್ಲಿಂ ಬೌದ್ಧ  ಜೈನ ಇತ್ಯಾದಿ ಧರ್ಮ ಇರಲಿಲ್ಲವಾ ! ಈಗಲೂ ಆಗಲೂ ಇನ್ನೂ ಮುಂದೆಯೂ ಎಲ್ಲಾ ಧರ್ಮೀಯರು ಒಟ್ಟಾಗಿಯೇ ಬಾಳುತ್ತ ತಾಯಿ ಭಾರತಾಂಬೆಯ ತೇರು ಎಳೆಯುತ್ತಾರೆ ಇದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ . ಈಗ ನಾವು ಭಾರತ ಪಾಕಿಸ್ತಾನ ಮತ್ತೆ ಒಂದಾಗಿಸುವ ಮೂಲಕ ಮತ್ತೆ ಪ್ರಪಂಚದಲ್ಲಿ ಹೊಸ ಶಕೆ ಆರಂಭಿಸುವ . ಅದು ನೀವು  ಈಗ ತೆಗೆದುಕೊಳ್ಳುವ ತೀರ್ಮಾನ (ಮದುವೆಗೆ ಮುಕ್ತ ಮನಸ್ಸಿಂದ ಒಪ್ಪಿಗೆ ಕೊಡುವ )ಮೂಲಕ ನಿಮ್ಮಿಂದಲೇ ಆಗಲಿ ಏನಂತೀರಾ ಸ್ವಾಮಿ ಎಂದರು . 

     ಜೇರುಸೇಲಂ ಪ್ರದೇಶಕ್ಕಾಗಿ ಮುಸ್ಲಿಂ ಕ್ರಿಶ್ಚಿಯನ್ ಜನಾಂಗ ಅಂದಿನಿಂದಲೂ ಜಿಹಾದ್ ಹೆಸರಿನಲ್ಲಿ ಬಡಿದಾಡುತಿವೆ ಅಂತವರಿಗೆ ಇದು ಒಂದು ರೀತಿಯ ಪಾಠವಾಗಿ ಜಗತ್ತಿನ ಕಣ್ಣು ತೆರೆಸಿದಂತಾಗಲಿ ಈ ಒಂದು ಪ್ರಕರಣ ಏನಂತೀರಾ  ಗೆಳೆಯರೇ ಎಂದು ಪ್ರದಾನ ಮಂತ್ರಿಗಳ ಆಪ್ತ ಕಾರ್ಯದರ್ಶಿ ಹೇಳಿದ .

     ರಿಯಲಿ ವೇರಿ ಗುಡ್ ಸಜೆಸೇಷನ್ ಟು ದಿಸ್ ವರ್ಲ್ಡ್ . ಅದು ಈ ಮಣ್ಣಿನಿಂದ ಅದರಲ್ಲೂ ನಿಮ್ಮ ಮೂಲಕ ಎಂದು ಗೃಹಮಂತ್ರಿ ಹೇಳಿದರು .

       ಜನರು ಎಂದೂ ಧರ್ಮ ಜಾತಿ ಪಂಗಡಗಳ ಹೆಸರಿನಲ್ಲಿ ಒಂದಾಗಿ ಬೆರೆಯಬಾರದು , ಎಂದು ಮನಪೂರ್ವಕವಾಗಿ ಬೇರೆಯುತ್ತಾರೋ ಅದು ಶಾಶ್ವತವಾಗಿ ಇರುವಂತದ್ದು .

ಹೀಗೆ ಮಾಡುವ ಮೂಲಕ ಮತ್ತೆ ಹಳೆ ಭರತಖಂಡದ ಗತ ವೈಭವ ಮರುಕಳಿಸುವಂತಾಗಲಿ ಹಾಗೆ ರಾಮರಾಜ್ಯದ ಕನಸು ಸಾಕಾರಗೊಳ್ಳಲಿ ಏನಂತೀರಿ ಸಾಂಸ್ಕೃತಿಕವಾಗಿ , ಆಚಾರ ವಿಚಾರಗಳಲ್ಲಿ ಅಷ್ಟೊಂದು ಪ್ರಗತಿ ಸಾಧಿಸದ ಜರ್ಮನ್ ಇಂದು ಒಂದಾಗಿ ನೆಮ್ಮದಿ ಸುಖದ ಜೀವನ ಸಾಗಿಸುವುದು ಎಲ್ಲರ ಕಣ್ಣು ಮುಂದೆ ಇರುವಾಗ , ಸಾಂಸ್ಕೃತಿಕವಾಗಿ ಮುಂದುವರಿದ ನಮ್ಮಲ್ಲೇಕೆ ಸಾಧ್ಯವಾಗದು ಇದು ಹೇಳಿ ಮೊದಲು ನೀವು ಮನಸು ಮಾಡಿ , ಒಳ್ಳೆ ಮನಸ್ಸಿಂದ ಒಪ್ಪಿ ಮುಂದೆ ಎಲ್ಲವು ಸಲೀಸಾಗಿ ಸಾಗುತ್ತೆ  ಶ್ರೀರಾಮ ಬಿಲ್ಲನ್ನು ಎತ್ತಿದಂತೆ . ನಿಮ್ಮ ದೇವರಲ್ಲಿ ನಂಬಿಕೆ ಇಡಿ . ಮನಸು ಹಗುರ ಬಿಡಿ . ಈ ದೇಶದ ಕ್ರಾಂತಿಯ ಮುನ್ನುಡಿ ಗಾಗಿಯಾದರು ಮೊದಲು ಈ ಮದುವೆಗೆ ಒಪ್ಪಿಬಿಡಿ . ನಿಮ್ಮನ್ನು ಮುಂದೆ ಅ ನಿಮ್ಮ ಶ್ರೀರಾಮ ಕಾಪಾಡುತ್ತಾನೆ . ಎಂದರು ಜೋಯಿಸರ ಆಪ್ತರು .

      ದೇಶಕ್ಕೆ ಹೋಲಿಸಿದರೆ , ವ್ಯಕ್ತಿ ಮುಖ್ಯವು ಅಲ್ಲ ಹಾಗೆ ಶಾಶ್ವತವು ಅಲ್ಲ . ಇನ್ನು ನಾವು ನೀವೆಲ್ಲಾ ಎಸ್ಟು ದಿನ ಅಂತ ಬಾಳಬಹುದು ಹೇಳಿ . ಅಬ್ಬಬ್ಬಾ ಅಂದ್ರೆ ೫೦-೬೦ ಬೇಡ ೮೦ ವರ್ಷ ಬಾಳಿದರೆ ಅದು ಹೆಚ್ಚು ಈ ಕಲಿಗಾಲದಲ್ಲಿ . ನಂತರ ಒಂದು ದಿನ ಸಾಯಲೇಬೇಕು ತಾನೇ , ಆದರೆ ಅದೇ ಈ ದೇಶಕ್ಕಾಗಿ ಮಾಡಿದ ತ್ಯಾಗ ಅಮರವಾದುದು . ಆಗ ಭಾರತದ ಇತಿಹಾಸದಲ್ಲಿ ಅಮರರಾಗುತ್ತವೆ ನೋಡಿ ಒಂದು ಕ್ಷಣ ಯೋಚಿಸಿ ನೋಡಿ . ಈಗ  ನಿಮ್ಮ ಅಂಗಳದಲ್ಲಿ ಚೆಂಡು ಬಂದು ಕೂತಿದೆ  ಇನ್ನು  ಅವಕಾಶ ಎಂಬ ಚೆಂಡನ್ನು ಹಿಡಿಯುವುದು ಬಿಡುವುದು ನಿಮ್ಮಿಷ್ಟ ಎಂದರು ಸಂಸ್ಕೃತಿ ಸಚಿವರು .

      ಯೋಚಿಸುತ್ತ ಕೂರುವ ಕಾಲ ಇನ್ನೂ ಉಳಿದಿಲ್ಲ  ಈಗ ಸುಮ್ಮನೆ ಊ ಅಂದು ಬಿಡಿ ಉಸಿರು ನಿಲ್ಲುವ ಮುನ್ನ ಹೆಸರು ನಿಲ್ಲಲಿ ಎಂಬ ಜ್ಞಾನಿಗಳ ವಾಣಿಯನ್ನು ಒಮ್ಮೆ ನೆನಪಿಗೆ ತಂದುಕೊಳ್ಳಿ ಎಂದ ಧಾರ್ಮಿಕ ಮಂತ್ರಿ .

      ಇಷ್ಟೆಲ್ಲಾ ನಡೆದ ಮೇಲೆ ಇನ್ನೇನು ? ಎಂದು ತಮಗೆ ತಾವೇ ಸಮಾಧಾನ ಮಾಡಿಕೊಂಡ ಬಳಿಕ ಒಪ್ಪುವ ಮನಸಿದ್ದರು ದೈರ್ಯ ಸಾಲದಾಯಿತು ಹಾಗಾಗಿ ಹೇಗೆ ಎಂದು ಏನನ್ನೋ ಮನಸಿನಲ್ಲೇ ಲೆಕ್ಕ ಹಾಕತೊಡಗಿದರು . ಕೊನೆಗೆ ನನ್ನದೇನು ಉಳಿದಿದೆ ಹೇಳಿ ಒಂದು ವೇಳೆ ನಾನು ಒಪ್ಪಿದರು ಸಹ ಆ ಹುಡುಗಿ ಕಡೆಯವರು ಒಪ್ಪಬೇಕಲ್ಲ  ಎಂದು ರಾಮಾಜೋಯಿಸರು ಹೇಳಿ ಕ್ಷಣ ಕಾಲ ಮೌನಕ್ಕೆ ಶರಣಾದರು .

      ಅಂತು ಒಪ್ಪಿಗೆಯಿತ್ತರಲ್ಲ ಎಂದು ಸಭೆ ಹರ್ಷಚಿತ್ತದಿಂದ ಅಂತು ಈ ಮದುವೆಗೆ ತಾವು ಒಪ್ಪಿದಿರಿ ಅನ್ನಿ ಎಂದು ಎಲ್ಲ ಹರ್ಷದ ದೊಡ್ಡ ನಿಟ್ಟುಸಿರಿತ್ತರು .

……………………………..

   ಯಾವಾಗ ರಾಮಾಜೋಯಿಸ್ಸರು ಈ ಮದುವೆಗೆ  ಒಪ್ಪಿಗೆ ಇತ್ತ ವಿಚಾರ ಟಿವಿ ಪ್ರೆಸ್ ಇತ್ಯಾದಿ ಎಲ್ಲ ಬಗೆಯ ಮಾದ್ಯಮಕ್ಕೆ ಈ ವಿಚಾರವನ್ನು ಬಹು ದೊಡ್ಡದಾಗಿ ಬಿತ್ತರಿಸಿ ಎಲ್ಲೆಡೆ ದೊಡ್ಡ ಸುದ್ದಿಯಾಗುವ ಹಾಗೆ ನೋಡಿಕೊಂಡರು .

     ಇದರಿಂದ ಭಾರತದಲ್ಲಿ ಇದರ ವಿರುದ್ದ ಕೆಲವು ಗುಂಪುಗಳು ಪ್ರತಿಭಟಿಸಲಾರಂಬಿಸಿದರೆ ಮತ್ತೆ ಕೆಲವು ಜನರ ಗುಂಪು  ಹರ್ಷಚಿತ್ತವಾಗಿ ಕುಣಿಯಲಾರಂಬಿಸಿತು .

      ಹೀಗೆ ರಾಮಾಜೋಯಿಸ್ಸರನ್ನು ಒಪ್ಪಿಸುವುದು ಒಂದು ಬಗೆಯ ಗಜಪ್ರಸವ ಆದಂತಾಯಿತು . ಒಟ್ಟಾರೆಯಾಗಿ ಈ ಮದುವೆಗೆ ವರನ ಕಡೆಯವರನ್ನು ಒಪ್ಪಿಸುವ ಮೂಲಕ ಭಾರತ ಸರ್ಕಾರ ಪರೋಕ್ಷವಾಗಿ ವರನ ಕಡೆಯವರಿಗೆ ತನ್ನ ಬೆಂಬಲವಿದೆ ಎಂದು ಹೇಳಿದಂತಾಯಿತು . ಇನ್ನು ವಧುವಿನ ಕಡೆಯವರು ಮತ್ತು ಪಾಕಿಸ್ತಾನ ಸರ್ಕಾರದ ಪ್ರತಿಕ್ರಿಯೆ ಏನೆಂದು ಕಾತುರದಿಂದ ಕಾಯುವಂತಾಯಿತು .

Category:Stories



ProfileImg

Written by Nagaraj Kale

Writer

0 Followers

0 Following