ಪಾಕಿಸ್ತಾನದ ಅದ್ಯಕ್ಷರು , ಜೋಧಾಕ್ಬರ್ ವಿಚಾರವಾಗಿ ಮಾತಾಡಲು ಹಾಗು ಇವಳನ್ನು ಮುಂದೆ ಇಟ್ಟುಕೊಂಡು ಭಾರತದೊಂದಿಗೆ ಪಾಕಿಸ್ತಾನವನ್ನು ವಿಲೀನ ಮಾಡುವ ಮನಸ್ಥಿತಿಯಲ್ಲಿ ಇರುತ್ತಾನೆ , ಹಾಗಾಗಿ ಈ ವಿಚಾರವನ್ನು ತನ್ನ ತೀರಾ ಆತ್ಮೀಯರಾದ ಮುಖ್ಯ ನ್ಯಾಯಮೂರ್ತಿಗಳು ಇತರೆ ಕೆಲವು ಗೆಳೆಯರ ಬಳಿ ಹಂಚಿಕೊಂಡು ಇದರ ಬಗ್ಗೆ ಚರ್ಚೆ ಮಾಡಿ ಅವರ ಅನಿಸಿಕೆ ಸಹ ಪಡೆದಿರುತ್ತಾನೆ . ಬಳಿಕ ತನ್ನ ಕ್ಯಾಬಿನೆಟ್ನಲ್ಲಿನ ಕೆಲವು ಆಪ್ತರ ಬಳಿ ಈ ವಿಚಾರವಾಗಿ ದೀರ್ಘವಾಗಿ ಇದರ ಪರ ವಿರೋಧವಾಗಿ ಸವಿಸ್ತಾರವಾದ ಚರ್ಚೆಯನ್ನು ಸಹ ಮಾಡಿರುತ್ತಾನೆ .
ಈ ಮದುವೆ ಸಂಬಂಧವಾಗಿ ಜೋದಾಕ್ಬರ್ ಗೌಪ್ಯವಾಗಿ ವಿಶ್ವಸಂಸ್ಥೆ ಹಾಗು ಅದರ ಅಂಗ ಸಂಸ್ಥೆಯಾದ ಮಹಿಳಾ ಆಯೋಗಕ್ಕೆ ತನ್ನ ಮದುವೆ ವಿಚಾರ ತಿಳಿಸಿ ತನ್ನ ಮದುವೆಗೆ ಸಹಕರಿಸುವಂತೆ , ತನಗು ಹಾಗು ತನ್ನ ಕುಟುಂಬಕ್ಕೂ ಭದ್ರತೆ ಕೋರಿ ಈಗಾಗಲೇ ಮನವಿ ಪತ್ರ ಒಂದನ್ನು ಬರೆದಿರುತ್ತಾಳೆ .
ವಿಶ್ವಸಂಸ್ಥೆ & ಅದರ ಅಂಗಸಂಸ್ಥೆಯಾದ ಮಹಿಳಾ ಆಯೋಗ ಮದುವೆ ಈಕೆ ಇಚ್ಚಿಗನುಸಾರವಾಗಿಯೆ ಆಗಬೇಕು . ಆಕೆಯ ಮತ್ತು ಅವಳ ತಂದೆ ಕುಟುಂಬಕ್ಕೆ ಭದ್ರತೆ ನೀಡಬೇಕು ಎಂದು ಪಾಕಿಸ್ತಾನ ಸರ್ಕಾರಕ್ಕೆ ವಿಶ್ವಸಂಸ್ಥೆ ಬರೆದ ಪತ್ರವನ್ನು ತೋರಿಸುತ್ತಾನೆ ಪಾಕ್ ಅಧ್ಯಕ್ಷ ಕ್ಯಾಬಿನೆಟ್ ಚರ್ಚೆ ವೇಳೆಯಲ್ಲಿ .
ಚರ್ಚೆಯಲ್ಲಿರುವವರನ್ನು ಉದ್ದೇಶಿಸಿ ನೋಡಿ ಇಲ್ಲಿ ಯಾವ ಕ್ಷೇತ್ರದಲ್ಲಿ ಆದರು ಬೇಷ್ ಅನ್ನಿಸಿಕೊಳ್ಳುವಂತಾ ಒಂದಾದರೂ ಕೆಲಸಕಾರ್ಯಗಳು ಆಗಿವೆಯಾ . ಅದೇನೋ ಅದ್ಯಾವ ಗಳಿಗೆಯಲ್ಲಿ ಇಲ್ಲಿ ಹುಟ್ಟಿದ ಆ ಮಲಾಲಾ ಮಾಡಿದ ಅವಳ ಸಾಧನೆಯನ್ನು ಗುರುತಿಸಿ ನೊಬೆಲ್ ಪ್ರಶಸ್ತಿ ನೀಡಿದರು .
ಇವಳನ್ನು ಬಿಟ್ರೆ ೧೯೪೭ ರ ಇಬ್ಬಾಗವಾದಾಗಿನಿಂದಲೂ ಇಲ್ಲಿಯವರೆಗೂ ಮತ್ತೆ ಈ ಪ್ರಪಂಚವು ನಮ್ಮ ದೇಶವನ್ನು ಗುರುತಿಸುವ ಯಾವ ಸಾಧಕರು ಈ ನೆಲದಲ್ಲಿ ಹುಟ್ಟಲಿಲ್ಲ . ಅಷ್ಟೇ ಏಕೆ ಸಾಧಕರು ಹುಟ್ಟುವ ಲಕ್ಷಣಗಳು ಇಲ್ಲ .
ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ . ಅಂದು ಬ್ರಿಟಿಷರು ಭಾರತ ಹಾವಾಡಿಗರ ದೇಶ ಎಂದು ಹೇಳಿದ ಹಾಗೆ ಇಂದು ನಮ್ಮ ದೇಶ ಒಂದು ರೀತಿ ಭಿಕ್ಷುಕರ ದೇಶವಾಗಿದೆ . ನಮ್ಮ ದೇಶಕ್ಕೆ ಎಲ್ಲರೂ ಮಸಿ ಬಳಿಯೋ ಹಾಗೆ ಆಗಿದೆ . ಈ ನೆಲದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಆಡಿಸೋಣ ಎಂದರೆ ಯಾರು ಒಪ್ಪುವುದಿಲ್ಲ ಭದ್ರತೆಯ ಕುಂಟು ನೆಪ ಹೇಳಿ ಆಗಿರೋ ಅಗ್ರಿಮೆಂಟ್ ಮ್ಯಾಚ್ ಕ್ಯಾನ್ಸಲ್ ಮಾಡುವವರೇ ಎಲ್ಲಾ .
ಇನ್ನು ಒಳ್ಳೆ ಪೊಲಿಟಿಕಲ್ ಲೀಡರ್ಸ್ ಇಲ್ಲ ಈಗಿರುವ ರಾಜಕಾರಣಿಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಗೌರವ ಯಾವುದು ಇಲ್ಲ . ನಮ್ಮ ಜೊತೆ ಯಾವ ಒಪ್ಪಂದ ಮಾತುಕತೆ ಯಾವುದನ್ನು ಮಾಡಿಕೊಳ್ಳಲು ಚೀನಾ ಬಿಟ್ಟರೆ ಮಿಕ್ಕೆಲ್ಲರು ಹಿಂದು ಮುಂದು ನೋಡುವವರೆ .
ಭಾರತ ಇಂದು ಆರ್ಥಿಕವಾಗಿ ಇಂಗ್ಲೆಂಡನ್ನು ಓವರ್ ಟೆಕ್ ಮಾಡುವಂತಾಗಿದೆ . ಪ್ರಪಂಚದ ಬಲಾಢ್ಯ ರಾಷ್ಟ್ರಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ . ವಿಜ್ಞಾನ ತಂತ್ರಜ್ಞಾನ ಕೈಗಾರಿಕೆ ಉದ್ಯಮ ಮುಂತಾದವುಗಳಲ್ಲಿ ಎಷ್ಟು ಪ್ರಗತಿ ಬದಲಾವಣೆ ಕಂಡಿದೆ . ಇಂದು ನಾವು ಅಂತಹ ಭಾರತ ದೇಶದೊಂದಿಗೆ ನಮ್ಮ ಕೈ ಜೋಡಿಸಿದರೆ ನಮಗೆ ಅವರು ನೆರವು ನೀಡದೆ ಇರುತ್ತಾರ .
ಬಾಂಗ್ಲಾದೇಶದ ಅಕ್ರಮ ನುಸುಳುಕಾರರು ನಿರಾಶ್ರಿತರ ಸೋಗಿನಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಭಾರತಕ್ಕೆ ನುಸುಳಿದರು . ಭಾರತ ಸರ್ಕಾರ ಅವರನ್ನು ವಾಪಸ್ ಕಳಿಸುವ ಪ್ರಯತ್ನ ಮಾಡಲಿಲ್ಲ . ಅದಕ್ಕೆ ಬದಲಾಗಿ ಅವರಿಗೆಲ್ಲ ಭಾರತೀಯ ಪೌರತ್ವದ ಅಡಿಯಲ್ಲಿ ಎಲ್ಲಾ ರೀತಿಯ ಹಕ್ಕುಗಳನ್ನು ಪಡೆದು ತಮ್ಮ ಬಾಳ್ವೆಯನ್ನು ಭಾರತೀಯರೊಂದಿಗೆ ಈಗ ನಡೆಸುತ್ತಿಲ್ಲವೇ !
ಟಿಬೆಟಿನ ದಲೈಲಾಮ ಮತ್ತು ಅವನ ಬಳಗ ಅಪಾರ ಪ್ರಮಾಣದಲ್ಲಿ ಭಾರತದ ಹಲವು ಕಡೆಗಳಲ್ಲಿ ಈಗಲೂ ನೆಮ್ಮದಿಯ ಜೀವನ ಸಾಗಿಸುತ್ತಿಲ್ಲವೇ ! ಅವರೇನಾದರೂ ಸರ್ಕಾರದ ಜೊತೆ ಒಳ ಒಪ್ಪಂದ ಮಾಡಿಕೊಂಡು ಬಂದಿದ್ದಾರ ಹಾಗೇನೂ ಇಲ್ವಲ್ಲ ! ಕೇವಲ ಮಾನವೀಯತೆಗೆ ಭಾರತೀಯರು ಬೆಲೆ ಕೊಟ್ಟಿದ್ದಾರೆ ಅಷ್ಟೇ ಆಲ್ವಾ !
ಬರಿಗೈ ದಾಸರಾಗಿ ಬಂದ ದಲೈಲಾಮ ಮತ್ತು ಅವನ ಬಳಗವನ್ನೇ ಈ ಪರಿಯಾಗಿ ನೋಡಿಕೊಳ್ಳುತ್ತಿರುವಾಗ ಇನ್ನು ನಾವು ನಮ್ಮ ದೇಶದ ಭೂಭಾಗ ಸಮೇತ ನಾವು ಅವರ ಬಳಿ ಹೋದರೆ ಇನ್ನು ಭಾರತೀಯರು ನಮ್ಮನ್ನು ಹೇಗೆಲ್ಲ ನೋಡಿಕೊಳ್ಳಬಹುದು ಒಮ್ಮೆ ಹಾಗೆ ಯೋಚಿಸಿ ನೋಡಿ .
ಹಾಗಾಗಿ ಮೊಸರಲ್ಲಿ ಕಲ್ಲು ಹುಡುಕೋದು ಬೇಡ . ಭಾರತದಲ್ಲಿ ನಾವು ವಾಸ ಮಾಡ್ತಾ ಇದ್ದೀವಿ ಅಂದ್ರೆ ತಾಯಿ ಗರ್ಭದಲ್ಲಿ ಇದ್ದೀವಿ ಅನ್ನೋ ಭಾವನೆ ಇಲ್ಲಿಯ ಎಲ್ಲಾ ದೇಶವಾಸಿಗಳದ್ದು . ಅಷ್ಟು ಭದ್ರತೆ ಇರುತ್ತೆ . ಒಳ್ಳೆ ಜನ ಸಂಸ್ಕೃತಿ ಅವರದ್ದು ನಾವು ಮತ್ತೆ ಭಾರತ ಪಾಕಿಸ್ತಾನ ಒಂದಾಗುವುದಕ್ಕೆ ಈ ಶಾದಿ ಒಂದು ನೆಪ ಅಷ್ಟೇ . ಈ ಮೂಲಕ ಭಾರತ ಪಾಕಿಸ್ತಾನ ಒಂದಾಗಿದ್ದೆ ಆದಲ್ಲಿ ಕಾಶ್ಮೀರ ಸಮಸ್ಯೆ ಜಲವಿವಾದ ಎಲ್ಲವೂ ಇಲ್ಲ ಅವೆಲ್ಲವೂ ನಮ್ಮವೇ ಆಗುತ್ತದೆ ಅಲ್ಲವಾ ! ಅಷ್ಟೇ ಏಕೆ ಭಾರತದಾದ್ಯಂತ ಎಲ್ಲಿಂದ ಎಲ್ಲಿಗಾದರೂ ಹೇಗಾದರೂ ಓಡಾಡಿಕೊಂಡಿರಬಹುದು ಹಾಗಾಗಲು ಇದೊಂದು ಸುವರ್ಣ ಅವಕಾಶ ನೋಡಿ . ಎಲ್ಲರೂ ಯೋಚಿಸಿ ಒಂದು ಒಳ್ಳೆಯ ತೀರ್ಮಾನ ಹೇಳಿ . ನೆಗೆಟಿವ್ ಯೋಚನೆ ಬೇಡ , ಪಾಸಿಟಿವ್ ಆಗಿ ಯೋಚನೆ ಮಾಡಿ ಎಲ್ಲರಿಗು ಒಳಿತಾಗುತ್ತದೆ .
ಈ ವಿಷಯದಲ್ಲಿ ಪಾಕಿಸ್ತಾನದ ನಾಗರಿಕರು ಭಾರತದ ಕಡೆ ವಾಲುತ್ತಾರೆ ಬೇಕಿದ್ರೆ ನೀವೇ ಗೌಪ್ಯವಾಗಿ ಪಾಕಿಸ್ತಾನದ ನಾಗರೀಕರನ್ನು ಹಾಗೆ ಸುಮ್ಮನೆ ಮಾತನಾಡಿಸಿ ನೋಡಿ .
ಅಭದ್ರತೆ ಇರೋ ಇಲ್ಲಿ ನಿತ್ಯವೂ ಹೊಡೆದಾಡಿ ಸಾಯುವ ಭೀತಿಯಲ್ಲಿ ಬಾಳೋದೇ ಇಲ್ಲಿಯ ನಿತ್ಯ ಕಾಯಕವಾಗಿದೆ . ಯಾರು ಯಾವಾಗ ಹೇಗೆ ಸಾಯುತ್ತಾರೆ ಎಂಬುದೇ ಇಲ್ಲಿ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ . ಏಕೆಂದರೆ ಇಲ್ಲಿ ಜೀವಕ್ಕೆ ರಕ್ಷಣೆ ಇಲ್ಲವೇ ಇಲ್ಲ . ಆಟಿಕೆ ಹಿಡಿಯಬೇಕಾದ ಚಿಕ್ಕ ಮಕ್ಕಳ ಕೈಯಲ್ಲಿ ಗನ್ನು ಮದ್ದು ಗುಂಡುಗಳ ಸದ್ದು . ನೋಡಿ ಈ ದೇಶ ಜನ ಸರಕಾರ ಎತ್ತ ಸಾಗುತ್ತಿದೆ ಎಂದು ಅರ್ಥ ಮಾಡಿಕೊಳ್ಳಲು ಇದೊಂದು ನಿದರ್ಶನ ಸಾಕಲ್ಲವೇ ? ಮಾನವ ಜನ್ಮವೇ ಶ್ರೇಷ್ಠ ಹೀಗಿರುವಾಗ ಯಾಕೆ ವ್ಯರ್ಥವಾಗಿ ಅರ್ಥ ಹೀನವಾಗಿ ಬಾಳುವುದು ಹೇಳಿ .
ಇನ್ನೂ ಒಂದು ಒಳ್ಳೆ ವಿಚಾರ . ಏನಪ್ಪಾ ಅಂದರೆ ನಾವು ರಾಜಕೀಯವಾಗಿ ಹೊರಗಿನಿಂದ ಇದನ್ನು ವಿರೋಧಿಸೋಣ ಆದರೆ ಒಳಗಿನಿಂದ ನಾವು ಸಪೋರ್ಟ್ ಮಾಡೋಣ . ಏಕೆಂದರೆ ರಾಷ್ಟ್ರೀಯ ಮಟ್ಟದಲ್ಲಿ ನಮಗೂ ಮಾನ ಮರ್ಯಾದೆ ಇದೆ ಅಂತ ತೋರಿಸಿಕೊಳ್ಳುವುದಕ್ಕಾಗಿ ಆದರೆ ಒಳಗಿಂದ ಒಳಗೆ ಹುಡುಗಿಯ ಈ ಮದುವೆಗೆ ಒಪ್ಪೋಣ ಮತ್ತು ಸಹಕರಿಸೋಣ ಏನಂತೀರಿ .
ಈ ವಿಚಾರವನ್ನು ಹುಡುಗಿಯ ತಂದೆಗೆ ತಿಳಿಸೋಣ . ಏನಂತಿರಪ್ಪ !
ತುಸು ಹೊತ್ತು ಗುಸು ಗುಸು ಅಂತ ಏನೇನೋ
ಮಾತಾಡಿಕೊಳ್ಳುತ್ತಾರೆ . ಬಳಿಕ ಎಲ್ಲರು ಇದಕ್ಕೆ ತಮ್ಮ ಸಹಮತವನ್ನು ವ್ಯಕ್ತಪಡಿಸುತ್ತಾರೆ .
ನಂತರ ಇದನ್ನು ಟಿವಿ ವಾಹಿನಿಯಲ್ಲಿ ಓಲ್ಲದ ಮನಸ್ಸಿನಿಂದ ಎಂಬಂತೆ ಒಪ್ಪಿಗೆ ಸೂಚಿಸುತ್ತಾರೆ . ಹುಡುಗಿ ಏನಂದರು ಒಪ್ಪುತ್ತಿಲ್ಲ ಈ ಜನ್ಮದಲ್ಲಿ ಮದುವೆ ಅನ್ನುವುದಾದರೆ ಅದು ಭಾರತದ ಆ ಹುಡುಗನ ಜೊತೆ ಮಾತ್ರ ಎಂದು ಹುಡುಗಿಯ ಹಠ ಎಂದು ಹುಡುಗಿಯ ಮೇಲೆ ಗೂಬೆಕೂರಿಸುವ ನಾಟಕ ಮಾಡುತ್ತಾರೆ ಹಾಗೂ ಹುಡುಗಿ ಆಕೆ ಕುಟುಂಬಕ್ಕೆ ನಾನಾ ರೀತಿಯ ಬೆದರಿಕೆಯ ತಂತ್ರಗಳನ್ನು ಅನುಸರಿಸುವ ತಂತ್ರ ತಾವೇ ಹೆಣೆದು ಅದನ್ನು ವಾಹಿನಿಗಳಲ್ಲಿ ತೋರಿಸುವ ನೆಪ ಮಾಡುತ್ತಾ ಹಾಗೆ ಇಲ್ಲಿ ತಾವುಗಳು ಸಹ ಒಂದಷ್ಟು ಪುಕ್ಕಟೆಯಾಗಿ ಪ್ರಚಾರವನ್ನು ಪಡೆಯುತ್ತಿದ್ದಾರೆ .
Writer