A Love Story On Hindu Muslim - ಅಧ್ಯಾಯ 12

ProfileImg
07 May '24
5 min read


image

ಪ್ರಣವ್ - ಜೋದಾ ಅಕ್ಬರ್ ಪ್ರೇಮವು ನಾನಾ ತಿರುವು ಪಡೆಯುತ್ತಿದ್ದಂತೆ , ಭಾರತದಲ್ಲಿ ದೃಶ್ಯ , ಶ್ರವಣ ಹಾಗೂ ಅಕ್ಷರ ಮಾದ್ಯಮಗಳು ನಾ ಮುಂದು ತಾ ಮುಂದು  ಎಂದು ಈ ವಿಚಾರವಾಗಿ ಪ್ರಕಟಿಸುವ ಮೂಲಕ ಪೈಪೋಟಿಗೆ ಬಿದ್ದು ವೀಕ್ಷಕರ ಸಂಖ್ಯೆ ಹಾಗು ತಮ್ಮ  ಟಿಆರ್ಪಿ ಅನ್ನು ಆದಷ್ಟು ಹೆಚ್ಚು ಮಾಡಿಕೊಳ್ಳುತ್ತಿವೆ .

ಇದೆ ವಿಚಾರವಾಗಿ  ಭಾರತದಲ್ಲಿ A ವಾಹಿನಿಯೊಂದು ಭಾರತದ ಗೃಹಮಂತ್ರಿ ಜೊತೆ ನೇರ ಸಂದರ್ಶನ ನಡೆಸುತ್ತಿದೆ ಬನ್ನಿ ವೀಕ್ಷಕರೇ ಅದರ ನೇರ ಪ್ರಸಾರ  ನೋಡೋಣ .

ಭಾರತ ಪಾಕಿಸ್ತಾನಕ್ಕೆ ಸೇರಿದ ಹಿಂದು ಮುಸ್ಲಿಂ ಹುಡುಗ ಹುಡುಗಿಯರ ಪ್ರಣಯದಾಟ ಈ ಬಗ್ಗೆ  ನಿತ್ಯವು ಎಲ್ಲ ದೃಶ್ಯ ಶ್ರವಣ ಹಾಗೂ ಅಕ್ಷರ ಮಾದ್ಯಮಗಳು ಹಟಕ್ಕೆ ಬಿದ್ದವರಂತೆ ಏನೆಲ್ಲ ಸುದ್ದಿಯನ್ನು ಪ್ರಸಾರ ಮಾಡುತ್ತಿರುವುದರಿಂದ ಈಗಾಗಲೇ ಸತ್ಯಸಂಗತಿ ಏನೆಂದು ಬಹುಪಾಲು ಎಲ್ಲ ಜನತೆಗು ಅರಿವಾಗಿದೆ . ಹಾಗಾಗಿ ನಾವು ಈ ಬಗ್ಗೆ ಏನನ್ನು ಹೆಚ್ಚು ಹೇಳಬಯಸುವುದಿಲ್ಲ ಎಂಬುದು ಸ್ಪಷ್ಟವಾಗಿರಲಿ .

ಇವರಿಬ್ಬರ ನಡುವೆ ಪ್ರೀತಿಯ ಪಾಠ ಆಟ ನಡೆಯಬಾರದಿತ್ತು . ಆದರೆ ಹೇಗೋ ಏನೋ ನಡೆದು ಹೋಗಿದೆ . ಇದೊಂದು ವಿದಿ ಬರಹ ಅನ್ನಬೇಕೋ ಇಲ್ಲ ಆದದ್ದೆಲ್ಲ ಒಳ್ಳೆಯದಕ್ಕೆ ಅಂದುಕೊಂಡು ನಮಗೆ ನಾವೆ ಹೇಗೋ ಸಮಾಧಾನ ಪಟ್ಟು ಕೊಳ್ಳಬೇಕೋ ಒಂದು ತಿಳಿಯುತ್ತಿಲ್ಲ . ನೋಡಿ ಇಲ್ಲಿ ಪ್ರೀತಿಯ ಬಲೆಗೆ ಬಿದ್ದವರು ಒಂದೇ ದೇಶಕ್ಕೆ ಸೇರಿದ್ದರೆ ಹೇಗೊ ಏನೋ ನಿಭಾಯಿಸಿ ಬಿಡಬಹುದಿತ್ತು ಆದರೆ ಎಂದು ಅರ್ಧಕ್ಕೆ ಮಾತು ನಿಲ್ಲಿಸಿ ಮತ್ತೆ ಮಾತು ಮುಂದುವರೆಸುತ್ತಾ ,

ಇಲ್ಲಿ ಮದುವೆ ಅನ್ನುವುದು ಹುಡುಗ ಹುಡುಗಿಯರ ಸ್ವಂತ ಇಚ್ಛೆಗೆ ಸಂಬಂಧಿಸಿದ್ದು , ಇಲ್ಲಿ ಯಾರ ಕಡೆಯ ಬಂಧು ಬಳಗ ಇಲ್ಲವೆ ಅವರ  ತಂದೆ ತಾಯಿಯರ ಒತ್ತಡ ಅಭಿಮತವಾಗಲಿ ಯಾವುದು ಕೂಡದು . ಆದಾಗ್ಯೂ ಇಲ್ಲಿ ಹುಡುಗನ ತಂದೆ ತಾಯಿ ಇಬ್ಬರು ಒಪ್ಪಿದ್ದು ಸರಿಯಷ್ಟೇ . ಸರ್ಕಾರ ಇವರಿಗೆ ಹೆಗಲಿಗೆ ಹೆಗಲು ಕೊಡಲು  ಎಂದೆಂದು ಬದ್ಧವಾಗಿರುತ್ತದೆ . ಇದರಲ್ಲಿ ಎಳ್ಳಷ್ಟು ಅನುಮಾನಕ್ಕೆ ಆಸ್ಪದವಿಲ್ಲ . ಅಂತೆಯೇ ಹುಡುಗಿ ಕಡೆ ಸಹ ಇದೆ ರೀತಿ ಸಹಕಾರವನ್ನು ಅಲ್ಲಿಯ ಸರ್ಕಾರ ಮತ್ತು ಅವರ  ಬಂಧು ಬಳಗದವರ ಕಡೆಯಿಂದ ನಾವು ನಿರೀಕ್ಷಿಸುತ್ತೇವೆ . ಎಂದು ಭಾರತದ ಗೃಹ ಮಂತ್ರಿಯು ಮಾತಿಗೆ ಮೊದಲೇಂಬಂತೆ  ಓಂಕಾರವಿತ್ತರು .

ಸರ್ , ಪ್ರೀತಿಗಾಗಿ ಅಂದರೆ ಈ ಪ್ರೇಮಿಗಳನ್ನು ಒಂದು ಮಾಡುವಿಕೆಯಲ್ಲಿ ಸರ್ಕಾರದ ಈ  ಪಾತ್ರದಲ್ಲಿ ಏನಾದರೂ ನಿಗೂಢಾರ್ಥವೆನಾದರು  ಇದೆಯಾ ! (Aವಾಹಿನಿ ಪ್ರಶ್ನೆ )

ನಾಟ್ ಎನಿ ಪಾಸಿಬಲಿಟೀಸ್  ಹೈಡ್ ಹಿಯರ್ ಇನ್ ದಿಸ್ ಮ್ಯಾಟರ್  . ನೋಡಿ ಇದರ ಹಿಂದೆ ನೀವುಗಳು ಅಂದು ಕೊಂಡಂತೆ ಹಸಿಶುಂಠಿಯಾಗಲಿ ಇಲ್ಲವೇ ಒಣ ಶುಂಠಿಯಾಗಲಿ ಹಾಗೆ ಅದರ ವಾಸನೆಯಾಗಲಿ ಏನು ಇಲ್ಲ . ನೀವೇ ಅನ್ಯತಾ ಏನೇನೋ ಕಲ್ಪಿಸಿ ಕೊಂಡು ಇಲ್ಲ ಸಲ್ಲದ ವಿಚಾರ ಜನತೆಗೆ ತಿಳಿಸಬೇಡಿ ಎಂದು ದೃಢವಾಗಿ ಗೃಹಮಂತ್ರಿ ನುಡಿದರು.

"  ಸಾರ್ ಪಾಕ್ ಸರ್ಕಾರವು ನಿಮ್ಮ ಈ ಪ್ರಸಾರವನ್ನು ನೋಡಿದ ಮೇಲೆ ಏನಾದರೂ ಸಕಾರಾತ್ಮಕವಾಗಿ ಒಪ್ಪಿತು ಅನ್ನಿ , ಆಗ ಮುಂದೆ ಎರಡು ದೇಶಗಳ ಬಾಂಧವ್ಯದ ಬೆಳವಣಿಗೆಯ ಪರ್ವ  ಅಥವ ಬೇರೆ ಇನ್ನಾವುದೋ ರೀತಿಯಲ್ಲಿ ಏನನ್ನಾದರು ನಿರೀಕ್ಷಿಸಬಹುದು ಎನ್ನುವಿರಾ ! " ಎಂದು A ವಾಹಿನಿಯು ಗೃಹಮಂತ್ರಿಗೆ ನೇರವಾಗಿಯೇ  ಪ್ರಶ್ನೆಯ ರೂಪದಲ್ಲಿ ಬಾಂಬ್ ಒಂದನ್ನು ಎಸೆಯಿತು .

ಈ ಪ್ರಶ್ನೆಗೆ ಯೋಚಿಸುತ್ತಾ ಭಾರವಾದ ದ್ವನಿಯಲ್ಲಿ  "  ಹಾಗೆ ಏನನ್ನು ಹೇಳಲಾಗದು . ಹಿಂಗೆ ಆಗುತ್ತೆ ಅಂತ ಕರಾರು -ವಕ್ಕಾದ ಉತ್ತರ ಹೇಳುವುದು ಹೇಗೆ ?ಕ್ಷಣ ಯೋಚಿಸುತ್ತಾ , ನಿಜ ಮುಂದೆ ಎರಡು ದೇಶಗಳ ನಡುವಿನ ಪರಿಸ್ಥಿತಿ ಸುಧಾರಿಸಬಹುದು ಇಲ್ಲ ಬಿಗಡಾಯಿಸಲುಬಹುದು . ನೋಡಿ ನೀರಿಗಾಗಿ ಹೆಣ್ಣಿಗಾಗಿ ಮಣ್ಣಿಗಾಗಿ ಯುದ್ದ ಆಗಿರುವ ನಿದರ್ಶನಗಳು ನಮ್ಮ ಮುಂದೆ ಬೇಕಾದಷ್ಟು ನೋಡಿದ್ದೇವೆ ಇತಿಹಾಸದ ಪುಟಗಳಲ್ಲಿ ಅಲ್ಲವೇ ? 

ಬಹುಶಃ ಈ ಮದುವೆಯಿಂದ ಇಲ್ಲವೇ ಈ ಹೆಣ್ಣಿನಿಂದ ಮುಂದೆ ಎಂದಾದರೂ ಈ ಎರಡು ದೇಶಗಳ ನಡುವೆ ಯುದ್ದ ನಡೆಯಲುಬಹುದು ಅಲ್ವಾ ! ಹಾಗಾಗಿ ಯಾವುದನ್ನು ತಳ್ಳಿ  ಹಾಕುವಂತಿಲ್ಲ " ಎಂದು ಗೃಹಮಂತ್ರಿ ಉತ್ತರಿಸಿದರು . ಹಾಗೆ ಮತ್ತೆ ತನ್ನ ಮಾತುಗಳನ್ನು ಮುಂದುವರೆಸುತ್ತಾ 

ಇಲ್ಲಿ  ವ್ಯಕ್ತಿಯಾಗಲಿ ಸಂಸ್ಥೆಯಾಗಲಿ ಮಾಡುವ ಕೆಲಸ ಮುಖ್ಯವಲ್ಲ . ಆ ಕೆಲಸವನ್ನು ಮಾಡುವಾತನ ಯೋಗಾ ಮತ್ತು ಯೋಗ್ಯತೆ ಕೆಲವು ಬಾರಿ ಮುಖ್ಯವಾಗುತ್ತೆ ಎಂದು ನನಗೆ ಇಲ್ಲಿ ಅನ್ನಿಸುತ್ತೆ . ಏಕೆಂದರೆ ಏಷ್ಟೋ ಕಡೆಗಳಲ್ಲಿ ಯೋಗವಿದ್ದವನಿಗೆ ಯೋಗ್ಯತೆ ಇಲ್ಲದಿರಬಹುದು ಅಥವ ಯೋಗ್ಯತೆ ಇಲ್ಲದವನಿಗೆ ಯೋಗ ಒದಗಿಬರಬಹುದು . ಆದರೆ ಅದು ಕೇವಲ ಕ್ಷಣಿಕ ಮಾತ್ರವೇ ಹೊರತು ಮತ್ತೇನು ಶಾಶ್ವತ ಅಲ್ಲ .

ಇದಕ್ಕೆ ಉದಾಹರಣೆ ಸಮೇತ ಹೇಳುವುದಾದರೆ , ನಮ್ಮ ಭಾರತದ ಇತಿಹಾಸದಲ್ಲಿ ಹುಚ್ಚು ದೊರೆ ಎಂದೇ  ಪ್ರಸಿದ್ಧಿ ಆಗಿರುವ ತುಘಲಕ್ ದೊರೆ  ಮಹಮದ್ ಬೀನ್ ತುಘಲಕ್  ಇಲ್ಲಿ ಪ್ರತಿಭಾವಂತನಲ್ಲ ಹಾಗೆಯೇ  ( ಅವನು ಕೈಗೊಂಡ ಎಲ್ಲ ಬಗೆಯ  ನಿರ್ಧಾರವು ವಿಫಲ ಆಗುತ್ತೆ ) ಆದರೂ ರಾಜನಾಗುತ್ತಾನೆ . ಅವನು ಯೋಗದ ಬಲದಿಂದ ರಾಜನಾದವನೆ ಹೊರತು ಯೋಗ್ಯತೆ ಇಂದಲ್ಲ .

ಹಾಗೆಯೇ  ಇನ್ನು ಕೆಲವು ಸಿನಿಮಾ ನಟ ನಟಿಯರು ಸಹ ೫-೬ ಚಿತ್ರಗಳಲ್ಲಿ ಮೆರೆದು ಮಣ್ಣಾದವರು ಇದ್ದಾರೆ ಹಾಗೆ ಮತ್ತೆ ಕೆಲವರು ಕೊನೆವರೆಗೂ ಗೆದ್ದವರು ಇದ್ದಾರೆ .  ಇದು ನಿಜ ಆಲ್ವಾ ! " ಎಂದು ಹೇಳುತ್ತಾ ಹಾಗೇ ಗೃಹಮಂತ್ರಿ ನಿಟ್ಟುಸಿರು ಬಿಟ್ಟರು .

ಈ ವಿಚಾರದಲ್ಲಿ ವಿರೋಧಪಕ್ಷ ಏನಾದ್ರೂ ಹೇಳುತ್ತಾ ಅವರ ನಿಲುವು ಏನು ? ಎಂದು A ವಾಹಿನಿ ಪ್ರಶ್ನಿಸಿತು .

ವ್ಯಂಗ್ಯ ನಗುವಿನೊಂದಿಗೆ , ಯು ಸೀ ಕೋಳಿ ಕೇಳಿ ಯಾರಾದ್ರೂ  ಮಸಾಲೆ ಅರಿತಾರೇನು ? ಪ್ರೇಮ ವಿವಾಹ ಎಂಬುದು ಆ ಹುಡುಗ ಹುಡುಗಿ ಸ್ವಂತ ಇಚ್ಛೆಗೆ ತಕ್ಕಂತೆ ನಡೆಯುತ್ತೆ . ಇಲ್ಲಿ ಯಾರಿಗಾದ್ರೂ ಮಗು ಹುಟ್ಟಿದರೆ ಅದನ್ನು ಅದು ಯಾರೇ ಆಗಿರಲಿ ಸಂತೋಷ ಪಡುವ ವಿಚಾರ ತಾನೇ ! ಆದರೆ ಇದನ್ನು  ವಿರೋಧಿಸುವ ಆತುರದಲ್ಲಿ ವಿಚಾರವನ್ನು ನಿಖರವಾಗಿ ಅರಿಯದೆ ವಿರೋದ ಪಕ್ಷವು ಇದು ಆಡಳಿತ ಪಕ್ಷದವರ ಕೈವಾಡ ಅಂದು ಬಿಟ್ಟರೆ ಪಾಪ ಅ ಹೆಂಡ್ತಿ ಗಂಡ ಮತ್ತು ಅವರ ಮನೆಯವರ ಪರಿಸ್ಥಿತಿ ಏನಾಗಬೇಡ ಒಮ್ಮೆ ಯೋಚಿಸಿ ನೋಡಿ , ಆಲ್ವಾ ! " ಎಂದು ಮಾತು ನಿಲ್ಲಿಸಿದರು ಗೃಹಮಂತ್ರಿ .

" ಸರ್ , ಒಂದು ವೇಳೆ ಈ ಮದುವೆ ಇಂದ ಎರಡು ದೇಶಗಳ ನಡುವೆ ಸಂಬಂಧ ಸುಧಾರಿಸಿತು ಎಂದಾದರೆ ,ಈ ಎರಡು ದೇಶವಾಸಿಗಳು ಏನೆಲ್ಲಾ ಅಂದುಕೊಳ್ಳಬಹುದು " ನೇರವಾದ ಪ್ರಶ್ನೆ A ವಾಹಿನಿ ಹಾಕಿತು.

" ಹು ನಿಮಗೆನೆನೆಲ್ಲಾ ಬೇಕು ಅನ್ನಿಸುತ್ತೋ ಅದನ್ನೆಲ್ಲ ಅಂದುಕೊಳ್ಳಿ  " ಗೃಹಮಂತ್ರಿ 

" ನಗುತ್ತಾ ಹಾಗಲ್ಲ ಸರ್ " A ವಾಹಿನಿ

" ನೋಡಿ ಇತಿಹಾಸದ ಪುಟಗಳಲ್ಲಿ ಇವೆರಡು ದೇಶಗಳು ದೊಡ್ಡ ದುರಂತ ಘಟನೆಗಳನ್ನು ದಾಖಲಿಸಿದೆ . ಒಂದು  ವೇಳೆ ಹಾಗೇನಾದರೂ  ಒಳ್ಳೆಯದೇ ಆದರೆ ಇದರಿಂದ ವಿಶ್ವಸಂಸ್ಥೆಯು ನಿಜಕ್ಕೂ ಮೊದಲು  ಖುಷಿಯಾಗುತ್ತೆ . 

ನೋಡಿ ಮುಖ್ಯವಾಗಿ ಭೂಗತ ಚಟುವಟಿಕೆ ಉಗ್ರಗಾಮಿ ಮಿಲಿಟರಿ ವೆಚ್ಚ ಕಡಿಮೆಯಾಗುತ್ತೆ . ಹಾಗೆ ಕೃಷಿ ಚಟುವಟಿಕೆ ಹುಲುಸಾಗಿ ಬೆಳೆಯುತ್ತೆ . ರಾಜಕೀಯ ಭದ್ರತೆ ಹೆಚ್ಚುತ್ತೆ ಹಾಗೇ ಎರಡು ದೇಶಗಳ ಅಭಿವೃದ್ದಿ ಪಥ ಹೆಚ್ಚುತ್ತೆ ."ಎಂದು ಗೃಹಮಂತ್ರಿ ಹೇಳಿದರು.

ಹೇಗೆ ಸರ್ ? A ವಾಹಿನಿ ಪ್ರಶ್ನಿಸಿತು 

ಹೇಗೆ ಅಂದ್ರೆ ಭಾರತ - ಪಾಕಿಸ್ತಾನ ಎಂಬ ಎರಡು ಬೇರೆ ಬೇರೆ ದೇಶಗಳೇ ಇರೋಲ್ಲ . ಮುಖ್ಯವಾಗಿ ಮಿಲಿಟರಿ ವೆಚ್ಚ . ಪಹರೆ( ಗಡಿ)ಯೆ ಇಲ್ಲವೆಂದ ಮೇಲೆ ಪಹರೆ ಕಾಯುವ ಸೈನಿಕರ ಸಂಬಳ ಯುದ್ದೋಪಕರಣ ವೆಚ್ಚ ಭಯೋತ್ಪಾದನೆ ಹಾಗು ಇತರೆ ಚಟುವಟಿಕೆ ನಿಗ್ರಹಕ್ಕಾಗಿ ಮಾಡುವ ವೆಚ್ಚ ಇವೆಲ್ಲ ಉಳಿಯುತ್ತದೆ . ಆಹ್ ನೋಡಿ ಪ್ರತಿ ವರ್ಷ ಎರಡು ದೇಶವು ದೇಶ ರಕ್ಷಣೆಗಾಗಿ ಎನಿಲ್ಲವೆಂದರು ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ತನ್ನ ಬಡ್ಜೆಟ್ ಮಂಡಿಸುತ್ತೆ ಅದೆಲ್ಲ ಉಳಿಯುತ್ತೆ ಹಾಗೆ ಆ ಹಣವನ್ನು ಬೇರೆ ಕ್ಷೇತ್ರದ ಮೇಲೆ ಹೂಡಬಹುದು ಅಲ್ಲವೇ ! ಎಂದು ಗೃಹಮಂತ್ರಿ ಉತ್ತರಿಸಿದರು .

ಒಟ್ಟಾರೆ ಎರಡು ದೇಶಗಳ ಸಂಬಂಧ ಸುಧಾರಣೆ ಆದಲ್ಲಿ ಎರಡು ದೇಶಗಳಲ್ಲಿ ಇರಬಹುದಾದ ಈ ರಕ್ತಬಿಜಾಸುರರ ದಮನ ಆಗುತ್ತೆ ಹಾಗೆ ಶಾಂತಿ ಏರ್ಪಡುವ ಮೂಲಕ ಎರಡು ಜನಾಂಗ  ಮದ್ಯೆ ಶಾಂತಿ ಹಾಗು ಪ್ರಗತಿ ಸಾಧ್ಯ ಈ ಮದುವೆ ಆಗಿದ್ದೆ ಆದಲ್ಲಿ ಎಂಬುದು ನಿಮ್ಮ ಮನದಾಳದ ಮಾತು ಆಲ್ವಾ ಎಂದು A ಟಿವಿ  ಪ್ರಶ್ನಿಸಿತು .

ಹೌದು ನೂರಕ್ಕೆ ನೂರರಷ್ಟು  ನಿಮ್ಮ ಮನದಾಳದ ಮಾತು ಸತ್ಯ ನೋಡಿ ಎಂದು ಹೇಳಿದರು ಗೃಹಮಂತ್ರಿ .

ಭಾರತ ಸರ್ಕಾರದ ಪ್ರತಿನಿಧಿಯಾಗಿ ನೀವು ಪಾಕ್ ಸರ್ಕಾರ ಹಾಗು ಎರಡು ದೇಶದ ಪ್ರಜೆಗಳಿಗೆ ನಿಮ್ಮ ಹೇಳಿಕೆ ಇದ್ದಲ್ಲಿ ತಿಳಿಸಲಿಚ್ಚಿಸುವಿರಾ,,A ವಾಹಿನಿ ಪ್ರಶ್ನಿಸಿತು 

ನೋಡಿ ವ್ಯಕ್ತಿ ದೇಶ ಯಾವುದೇ ಆಗಲಿ ಇಲ್ಲಿ ಯಾರು ಯಾವುದು ಶಾಶ್ವತ ಅಲ್ಲವೇ ಅಲ್ಲ  . ಗುಡ್ or ಬ್ಯಾಡ್ ಥಿಂಗ್ಸ್ ಎಲ್ಲರಲ್ಲೂ ಬರುತ್ತೆ ಹೋಗುತ್ತೆ ಆದ್ರೆ ನಾವು ಬಾಳುವ ಬಾಳಿದ ಬಾಳುತ್ತಿರುವ ರೀತಿ ಇದೆಯಲ್ಲ ಅದು ಮಾತ್ರ ನಮ್ಮನ್ನು ಚರಿತ್ರೆಯ ಪುಟದಲ್ಲಿ ದಾಖಲಾರ್ಹ ವಾಗಿಸುವ ಮೂಲಕ ನಮ್ಮನ್ನು ಅಮರರನ್ನಾಗಿಸುತ್ತೆ .

ಇಲ್ಲಿ ನೋಡಿ ಎಸ್ಟೋ ಸಾವಿರಾರು ವರ್ಷಗಳ ಹಿಂದೆ ರಾಮ ರಾವಣ ಇಬ್ಬರು ಇದ್ದರು .  ಈಗ  ಆ ಇಬ್ಬರು ಇಲ್ಲ ಆದರೆ ಅವರ ಹೆಸರು ಶಾಶ್ವತ ಆಗಿದೆ ಆಲ್ವಾ . ನೋಡಿ ಅವರನ್ನು ನೆನಪಿಸಿಕೊಳ್ಳುವ ರೀತಿಯಲ್ಲೂ ವಿಭಿನ್ನತೆ ಇದೆ . ಅಂದರೆ ಐ ಮೀನ್ ರಾಮನನ್ನು ನೆನಪಿಸಿಕೊಳ್ಳುವ ರೀತಿ ವಿಧಾನವೇ ಬೇರೆ ಅದೆ ರಾವಣನನ್ನು ಜಗತ್ತು ನೆನಪು ಮಾಡಿಕೊಳ್ಳುವ ರೀತಿಯೇ ಬೇರೆ ಆಲ್ವಾ . ಆದರ್ಶ ಪುರುಷ ಶ್ರೀರಾಮನಿಗೆ ಜಗತ್ತಿನಲ್ಲಿ ಹಲವು ಕಡೆ ದೇಗುಲಗಳಿವೆ ಆತ ಪೂಜಾರ್ಹ ಕೂಡ .  ಅದೆ ರಾವಣನಿಗೆ ಅವನ ಸ್ವಂತ ಸ್ಥಳದಲ್ಲೇ ಆತನನ್ನು ದಿಕ್ಕರಿಸುವವರಿದ್ದಾರೆ ಅಲ್ಲವೇ !

ಈ ಕತೆ ಕೇಳಿ ರಾಮ ರಾವಣ  ಬಾಳಿದಂತೆ ಬಾಳುವ ಎನ್ನುತ್ತಿಲ್ಲ ಈ ದಾರಿಯಲ್ಲಿ ಸಾಗಿದರೆ  ಕೊನೆ ಪಕ್ಷ ನಾವು ಅವರಂತೆ ಪೂಜಾರ್ಹ ಆಗದಿದ್ದರೂ ನಮ್ಮ ಆತ್ಮಕ್ಕಾದರು ನೆಮ್ಮದಿ ಸಿಗುವ ಹಾಗೆ ಬಾಳಬಹುದಲ್ಲ ಎಂದು  ಆಶಿಸುತ್ತಾ , ಭಾರತ ಸರ್ಕಾರದ ಈ ಒಂದು ಒಳ್ಳೆಯ ಕಾರ್ಯಕ್ಕೆ ಸದಾ ಸಿದ್ದವೆನ್ನುತ್ತ ಪ್ರಣವ್ - ಜೋದಾಅಕ್ಬರ್  ವಿಚಾರದಲ್ಲಿ ಪಾಕಿಸ್ತಾನದ ನಿರ್ಧಾರವನ್ನು ಕಾಯುತ್ತಿರುತ್ತದೆ ಹಾಗೂ ಇನ್ಮುಂದೆಯಾದರು ಎರಡು ದೇಶ ಒಟ್ಟಾಗಿ ಸಾಗುವ ಮೂಲಕ ಹೊಸ ಮುನ್ನುಡಿ ಬರೆದು ಹೊಸ ಶಕೆ ಆರಂಭಿಸುವ ಎನ್ನುತ್ತಾ ನನ್ನ ಈ ಮಾತು ಮುಗಿಸುತ್ತೇನೆ . ಜೈ ಹಿಂದ್ , ಜೈ ಭಾರತ್ ಮಾತಾ ಕೀ , ವಂದೇ ಮಾತರಂ .

ಎಂದು ಭಾರತದ ಗೃಹಮಂತ್ರಿ ತನ್ನ ಮಾತು ಮುಗಿಸಿದರು .

Category:Stories



ProfileImg

Written by Nagaraj Kale

Writer