A Love Story On Hindu Muslim - ಅಧ್ಯಾಯ 11

ProfileImg
30 Apr '24
7 min read


image

ಇತ್ತ ಪ್ರಣವ್ - ಜೋಧಾ ಅಕ್ಬರ್ ಪ್ರಣಯದ ಕಾವು ದಿನೆ ದಿನೆ ಎರಡು ಕಡೆಯ ದೇಶವಾಸಿಗರಲ್ಲಿ ಹೆಚ್ಚಾಗುತ್ತಿದ್ದಂತೆ , ರಾಜಕೀಯ ವಲಯ ಹಾಗೂ ಸಾರ್ವಜನಿಕರಲ್ಲಿ ಇದರ ಜ್ವರವು ಜ್ವಾಲೆಯ ರೀತಿಯಲ್ಲಿ ವ್ಯಾಪಿಸುತಿದೆ ದಿನದಿಂದ ದಿನಕ್ಕೆ .  ಭಾರತದ ಪ್ರಧಾನ ಮಂತ್ರಿಗಳು ಹಾಗು ಅವರ  ಆಪ್ತವಲಯ ಈ ಪರಿಸ್ಥಿತಿಯನ್ನು  ನಿಭಾಯಿಸುವ ಪರಿ ಹೇಗೆ ಎಂಬ ವಿಚಾರವಾಗಿ ತಮ್ಮ ಮನದಾಳದ ಅನಿಸಿಕೆ ವ್ಯಕ್ತಪಡಿಸಲು ಒಂದು ಗೊತ್ತಾದ ಸ್ಥಳದಲ್ಲಿ ಸಭೆ ಸೇರಿ ಅಲ್ಲಿ ಈ ವಿಚಾರವಾಗಿ ಚರ್ಚೆ    ಮಾಡುತ್ತಿದ್ದಾರೆ .

ಬನ್ನಿ ಅಲ್ಲಿ ನಡೆಯುತ್ತಿರುವ ಚರ್ಚೆಯ ವಿಚಾರವಾಗಿ ನೇರವಾಗಿ ತಿಳಿಯೋಣ.

ಪ್ರಧಾನಿಯೊಂದಿಗೆ ೪-೫ ಜನ ಮಾತ್ರ ಸಚಿವ ಸಂಪುಟ ದವರು  ಚರ್ಚೆಗೆ ಕುಳಿತಿದ್ದು , ಎಲ್ಲರಿಗು ಪ್ರಣವ್ - ಜೋಧಾ 

ಅಕ್ಬರ್ ರವರ ಪ್ರಣಯ ಸಲ್ಲಾಪ ಎಲ್ಲಾ  ಉಭಯ ದೇಶ ವಾಸಿಗರ ಅಂಡಿಗೆ ಒಂದು ರೀತಿಯ ಹುಳು ಕಡಿದoತಾಗಿದ್ದು ತುರಿಸಿಕೊಳ್ಳಲು ಆಗುತ್ತಿಲ್ಲ ಹಾಗೆ ಬಿಟ್ಟುಕೊಳ್ಳಲು ಆಗದು ಎಂಬ ಸ್ಥಿತಿ ಈಗ ನಿರ್ಮಾಣವಾಗಿದೆ .

" ನೋಡಿ ಈ ವಿಷಮ ಪರಿಸ್ಥಿತಿಯಲ್ಲಿ ನಾವು ಏನು ಮಾಡಬೇಕು ಹೇಗೆ ಯಾವ ತೀರ್ಮಾನ ಕೈಗೊಂಡು ಯಾವ ರೀತಿಯ ಹೆಜ್ಜೆ ಇಡಬೇಕು ತಿಳಿಯುತ್ತಿಲ್ಲ" ಎಂದು ಪ್ರದಾನ ಮಂತ್ರಿ ಮೊದಲು ಎಂಬಂತೆ ತಮ್ಮ ಅನಿಸಿಕೆ ವ್ಯಕ್ತಡಿಸಿದರು .

 " ಹೌದು  ಹೇಗಾದ್ರು ಸರಿಯೇ ಮೊದಲು ಇದನ್ನು ಬಗ್ಗು ಬಡಿಯಲೇಬೇಕು , ಇಲ್ಲವಾದ್ರೆ ಮತ್ಯಾರಾದ್ರು ಈ ರೀತಿಯ ಕೆಲ್ಸ ಮಾಡ್ತಾರೆ ಆಗ ಅವರನ್ನು ಸರಿ ಮಾಡೋದು ಆಗುತ್ತೆ . ನಂತರ ಸರ್ಕಾರ ನಿತ್ಯದ ಕೆಲಸದ ಜೊತೆಗೆ ಈ ಮ್ಯಾರೇಜ್ ಬ್ರೋಕರ್ ಕೆಲಸವನ್ನು  ಮಾಡಬೇಕಾಗುತ್ತದೆ " ಎಂದು

ಗೃಹಮಂತ್ರಿ ತಮ್ಮ ಅನಿಸಿಕೆಯನ್ನು  ಹೊರಹಾಕಿದರು .

" ಹೌದು ಹೌದೌದು ,  ನೀವು ಸರಿಯಾಗಿ ಹೇಳಿದಿರಿ ಗೃಹಮಂತ್ರಿಗಳೇ , ಮಾಡೋ ಕೆಲಸ ಬಿಟ್ಟು ಸರಕಾರ ಮ್ಯಾರೇಜ್ ಬ್ರೋಕರ್ ಆಫೀಸ್ ತೆರೆಯಬೇಕು ಅಷ್ಟೇ " ಎಂದು ತಮ್ಮ ಅಭಿಪ್ರಾಯ ಹೊರಹಾಕಿದರು ರಕ್ಷಣ ಮಂತ್ರಿ ವ್ಯಂಗ್ಯವಾಗಿ ನಗಾಡುತ್ತ , 

"  ಏನ್ರೀ ಪ್ರಧಾನಿಯವರನ್ನು ನೋಡಿಯು ಅವರ ಮನಸ್ಥಿತಿಯ ಬಗ್ಗೆ ಎಲ್ಲ  ಅರಿವಿದ್ದು ನಗಲು ಹೇಗೆ ಮನಸು ಬಂತು " ಎಂದು ವಿದೇಶಾಂಗ ಸಚಿವರು ಕಿಡಿ ಕಾರಿದರು .

"ಹೌದು ಗೃಹ ಮಂತ್ರಿ ಹೇಳಿದ್ದು ಸರಿಯಾಗಿದೆ , ಇದನ್ನು ಮೊದಲು ಬುಡ ಸಹಿತ ಕೀಳಬೇಕು . ಇಲ್ಲವಾದ್ರೆ ಮುಂದೆ ನಡೆಯ ಬಹುದಾದ ಅನೇಕ ಘಟನೆಗಳಿಗೆ ನಾವೆ ರೆಡ್ ಕಾರ್ಪೆಟ್  ಹಾಕಿಕೊಟ್ಟ ಹಾಗೆ ಆಗುತ್ತೆ " ಎಂದು ಪ್ರಧಾನಿ ಭದ್ರತಾ ಸಲಹೆಗಾರರು ತಮ್ಮ ಅನಿಸಿಕೆ ಮುಂದಿಟ್ಟರು . 

" ಎಲ್ಲವನ್ನು ಕೇಳಿಸಿಕೊಳ್ಳುತ್ತಾ ಮೂಕನಂತಿದ್ದ ಪ್ರಧಾನಿ ಮೌನ ಮುರಿದು ಹೌದು ಏನಾದ್ರೂ ಸರಿಯೇ ಇವರ ಪ್ರೀತಿ ಹೀಗೆ ಮುಂದುವರಿಯಲು ಬಿಡಬಾರದು " ಎಂದು ತಮಗೆ ತಾವೇ ಎಂಬಂತೆ ಮಾತಾಡಿಕೊಂಡರು. 

" ಹುಡುಗನ ತಂದೆ ತಾಯಿಗಳು ಈ ವಿಚಾರವಾಗಿ ಏನು ಹೇಳುತ್ತಾರೆ ಅವರ ಬಳಿ ಯಾರಾದರು ಮಾತಾಡಿರುವಿರಾ " ಎಂದು ಪ್ರಧಾನಿಯವರ ರಾಜಕೀಯ ಕಾರ್ಯದರ್ಶಿ ಹೇಳಿದರು .

" ಹೌದು , ನಾನು  ಈ ವಿಷಯವನ್ನು ಕುರಿತು ವಿವರವಾಗಿ ಮಾತಾಡಿರುತ್ತೇನೆ “  ,

ಪಾಪ , ಮಾನ ಮರ್ಯಾದೆ ಎಲ್ಲಾ ಮೂರಾಬಟ್ಟೆ ಆಗೋಯ್ತು , ಎಲ್ಲಾದ್ರೂ ಹೋಗಿ ಪ್ರಾಣ ಬಿಡಬೇಕು ಎನ್ನುವ ಮಾತು ಅವರಿಂದ ಬಂತು " ಎಂದು ಪ್ರಧಾನಿ ಭದ್ರತಾ ಸಲಹೆಗಾರರು ಈ ಬಗ್ಗೆ ಮಾಹಿತಿ ನೀಡಿದರು . 

"ಅಂದ್ರೆ , ಅವರಿಗೆ ಇಷ್ಟ ಇಲ್ವಾ ! " ಪ್ರಧಾನಿ ಹೇಳಿದರು 

" ಪಾಪ , ಯಾವ ತಂದೆ ತಾನೇ ಒಪ್ಪಿಗೆ ಕೊಟ್ಟಾನು ಹೇಳಿ, ಅದರಲ್ಲೂ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಹುಡುಗ

ಸಾಬರ ಹುಡುಗಿಯನ್ನ ಸೊಸೆಯಾಗಿ ಸ್ವೀಕರಿಸುವುದು ಹೇಗೆ ಸಾದ್ಯ ಆಲ್ವಾ ! " ಎಂದು ಗೃಹಮಂತ್ರಿ ಹೇಳಿದರು .

" ಮತ್ತೇನು ಹಾಗಾದ್ರೆ ಹಿಂದೂ ಸಮಾಜದ ಹುಡುಗಿ ನೋಡಿ ಮದುವೆ ಮಾಡಿಸುವ , ಅದಕ್ಕಾಗಿ ನಾವು ಹುಡುಗನ ಮನ ಪರಿವರ್ತನೆ ಮಾಡುವ ಮೂಲಕ "  ಎಂದರು ರಕ್ಷಣ ಮಂತ್ರಿ. 

" ಹೌದು ಹೇಗಾದ್ರು ಸರಿಯೇ ಯಾವ ರೀತಿಯ ತೊಂದರೆ ಬಾರದಂತೆ ಎಚ್ಚರಿಕೆಯ ಹೆಜ್ಜೆ ಇಟ್ಟು ಈ ಕೆಲಸ ಮುಗಿಸುವುದು ಒಳ್ಳೆಯದು " ಎಂಬ ಮಾತು ಹೊರ ಹಾಕಿದರು ಪ್ರದಾನ ಮಂತ್ರಿಗಳು .

" ಈ ಸಭೆಯು ತಪ್ಪಾಗಿ ಅರ್ಥೈಸಿಕೊಳ್ಳದಿದ್ದರೆ ಒಂದು ಮಾತು " ಎಂದು ಗೃಹಮಂತ್ರಿ ಹೇಳಿದ ಕೂಡಲೇ , ಎಲ್ಲರು ಇವರತ್ತ ತಿರುಗಿ ಏನು ಹೇಳಿ ವಿಚಾರ ವಿನಿಮಯಕ್ಕೆ ತಾನೇ ನಾವೆಲ್ಲಾ ಇಲ್ಲಿ ಸೇರಿ ಕೊಂಡಿರುವುದು ಎಂದರು ಎಲ್ಲ ಒಕ್ಕೊರಲಿನಿಂದ . 

" ಈ ಜೋಡಿಯನ್ನು ಸರ್ಕಾರವೇ ನಿಂತು ಮದುವೆ ಮಾಡಿಸಿದರೆ ಅಥವ ಅವರೇ ಹೇಗಾದ್ರು ಸರಿಯೇ ಮದುವೆ ಮಾಡಿಕೊಂಡರೆ ಉಭಯ ದೇಶ ಹಾಗೂ ದೇಶವಾಸಿಗಳಿಗೆ  ಒಳ್ಳೆಯದಲ್ಲವೇ ! " 

ಯಾವಾಗ ಈ ಮಾತು ಗೃಹಮಂತ್ರಿ ಹೇಳಿದರೋ ಪ್ರಧಾನಿ ಹೊರತು ಪಡಿಸಿ ಮಿಕ್ಕೆಲ್ಲರು ನಗಲಾರಂಬಿಸಿದರು .

ಏನ್ರೀ ನೀವು ಮಾತಾಡ್ತಿರೋದು ಎಲ್ಲ ಸೇರಿ ಈ ಮದುವೆ ನಿಲ್ಲಿಸಬೇಕು ಅನ್ನೋ ವಿಚಾರಕ್ಕೆ ಸಂಬಂಧಿಸಿದಂತೆ ಗಹನವಾದ ಈ ಚರ್ಚೆಯಲ್ಲಿ  ನಿರತರಾಗಿದ್ದರೆ , ಇನ್ನು ನೀವು … ಮುಂದೆ ಏನೊಂದೂ ಮಾತಾಡದಾದರು ಪ್ರದಾನ ಮಂತ್ರಿ .

ಮದ್ಯೆ ಬಾಯಿ ಹಾಕುತ್ತಾ ಗೃಹಮಂತ್ರಿ ಮುಂದುವರೆದು 

 “ ಹೌದು ಇಲ್ಲಿ ಸೇರಿದ ವಿಚಾರಕ್ಕೆ ವಿರುದ್ಧ ನಿಲುವು ತಳೆದು ಹೇಳಿದ ವಿಚಾರದಲ್ಲಿ  ಉಭಯ ದೇಶಗಳ ನಡುವೆ ಲಾಭವೇ ಅಡಗಿದೆ "

" ಅದು ಹೇಗೆ ? " ಎಂದು ಪ್ರಧಾನಿಗಳ  ರಾಜಕೀಯ ಕಾರ್ಯದರ್ಶಿ ಪ್ರಶ್ನಿಸಿದರು . 

"ನೋಡಿ ಈ ಹುಡುಗ - ಹುಡುಗಿಯರ ಕುಟುಂಬಕ್ಕೆ ಈಡಿ ದೇಶದ ಜನತೆಯೇ ಹಿಂಬಾಲಿಸುವಂತ ಶಕ್ತಿ ಮತ್ತು ಬೆಲೆ ಆಯಾ ದೇಶದಲ್ಲಿ ಅವರ ತಂದೆಯವರ  ಮಾತಿಗಿದೆ ಹೌದೋ ಇದನ್ನು ಒಪ್ಪುತ್ತೀರಾ  !

ಹೌದು ಎಂಬಂತೆ ಸಭೆ ತಲೆಯಾಡಿಸುತ್ತದೆ . 

ಹಾಗಾಗಿ ಇವರಿಬ್ಬರನ್ನು ಮದುವೆ ಎಂಬ ಗಾಳದಲ್ಲಿ

ಬೀಳಿಸಿದ್ದೆ ಅದಲ್ಲಿ ಎರಡು ದೇಶ ಮತ್ತು ದೇಶವಾಸಿಗಳ ಮದ್ಯೆ ಭಾಂದವ್ಯದ ಕೊಂಡಿ ಬೆಸೆಯುತ್ತದೆ .  ಇದು ಈ ಎರಡು ದೇಶ ಹಾಗೂ ದೇಶವಾಸಿಗಳ ಮದ್ಯೆ ಈಗ ಇರುವ ದ್ವೇಷ ಅಳಿಸಿ . ಸಹಜವಾಗಿ ಪ್ರೀತಿ ಅರಳಿಸುತ್ತದೆ  ಅಂದ್ರೆ ಇದರಿಂದ ಆಯಾ ದೇಶಕ್ಕೆ ಲಾಭ ತಾನೇ ! 

ಇದರಿಂದ ವಾಣಿಜ್ಯ ಚಟುವಟಿಕೆ ಗರಿಗೆದರುತ್ತದೆ .  ಮಿಲಿಟರಿ ವೆಚ್ಚ ತಗ್ಗುತ್ತದೆ , ಹೀಗೆ ಮುಂದುವರಿದರೆ ಸರ್ಕಾರವೇ ಒಂದು ಹೆಜ್ಜೆಯನ್ನು ಮುಂದೆ ಹಾಕಿ ಈ ಅಂತರ್ಜಾತಿ ಮತ್ತು ಅಂತರ್ದೇಶೀಯ ಮದುವೆ ಮಾಡಿಸುವ ಮೂಲಕ ಹಗೆತನ ಮೀರಿ ಬೆಳೆದು ವರ್ಗ ಧರ್ಮ ದೇಶೀಯ ಅಂತರ್ದೇಶೀಯ ಮಟ್ಟದಲ್ಲಿನ 

ಸಂಘರ್ಷ ಮೆಟ್ಟಿ ನಿಲ್ಲಬಹುದು ತಾನೇ ! ಆಗ ಇದರಿಂದ ಆಗಬಹುದಾದ ಲಾಭ ಒಂದೇ ಎರಡೇ . ದುರುದ್ದೇಶ ಬಿಟ್ಟು ದೂರಾಲೋಚನೆ ಇಂದ ನೋಡಿ ಒಂದು ಕ್ಷಣ — ಎಂದು ತನ್ನ ಮಾತು ನಿಲ್ಲಿಸಿ ಮೌನಕ್ಕೆ ಜಾರಿದ .

ಅರೆ ಕ್ಷಣ ಸಭೆ ಸಹ ಮೌನಕ್ಕೆ ಜಾರಿತು ಚಿಂತನೆ ನೆಪದಲ್ಲಿ . 

" ನಗುತ್ತಾ ಆಹ್ಹ್ ! ಪುಸ್ತಕದ ಬದನೆಕಾಯಿ ತಿನ್ನಲು ಬರಲ್ಲ ನಿಂಗೆ ಗೊತ್ತಿಲ್ಲದ್ದೆ , ನಿತ್ಯ ಇಂಡೋ- ಪಾಕ್ ಗಡಿಯಲ್ಲಿ ಏನೆಲ್ಲ ಆಗುತ್ತೆ ಗೊತ್ತಾ . ಸುಮ್ನೆ ಇದ್ರು ಕಾಲು ಕೆರೆದು ಕೊಂಡು ಬರೋ ಜನ ಅವ್ರು . ಅಂತಹದರಲ್ಲಿ  ಆ ನಿನ್ನ ಪ್ಲಾನ್ ಅನ್ನು ಜಾರಿಗೊಳಿಸಿ ಆದೇಶ ಹೊರಡಿಸಿದರೆ ಮುಗೀತು . ಪಾಕಿಸ್ಥಾದವರು ಹಾಗು ಮುಸ್ಲಿಮರೇ ಒಗ್ಗಟ್ಟಾಗಿ ಎಲ್ಲ ಹಿಂದೂಗಳನ್ನು ಮ್ಯಾರೇಜ್ ಅಡಿಯಲ್ಲಿ ಮುಸ್ಲಿಂ ಆಗಿ ಕನ್ವರ್ಟ್ ಮಾಡ್ತಾರೆ  ಎನ್ನುತ , ಈ ನಿನ್ನ ಪ್ಲಾನ್ ಚೆನ್ನಾಗಿದೆ ಆದರೆ ತುಘಲಕ್ ಕಾಲಕ್ಕೆ ಮಾತ್ರ ಹೊರತು ಈಗ ಸರಿಹೊಂದಲ್ಲ ಬಿಡು ಎಂದು ಕಿಚಾಯಿಸುತ್ತ ಏನೋ ಅಂತಾರಲ್ಲ ಅಗಣಿ ಹಾಕಲೋಗಿ ತನ್ನ ತರಡು ಸಿಗಿಸಿಕೊಂಡಂತೆ ಆಯ್ತು ನಿಮ್ಮ ಕಥೆ ಎಂದು ಕಿಚಯಿಸ ತೊಡಗಿತು ಸಭೆ .

ಹೀಗೆ ಗುಜು ಗುಜು ನಗೆಯ ಗದ್ದಲದಲ್ಲಿ ಮುಳುಗಿದೆ ಸಭೆ .      ಏನೋ ಹೊಳೆದವರಂತೆ ಪ್ರಧಾನಿ ವಾಹ್ !  ವಾಟ್  ಗುಡ್ ಸಜೇಶನ್ ಯೂ ಅರ್ ಗಿವೆನ್ ಎನ್ನುತ ಗೃಹ ಮಂತ್ರಿಯ ಬೆನ್ನು ತಟ್ಟಿದರು . 

ಈ ಘಟನೆಯಿಂದ ಸಭೆ ಅರೆ ಕ್ಷಣ ಅವಕ್ಕಾಯಿತು . ಅಲ್ಲಾ ಸರ್ ಏನು ಮಾಡ್ತಾ ಇದ್ದೀರಿ !

ಸಭೆ ಸೇರಿದ ಉದ್ದೇಶ ಏನಾಗಿತ್ತು

" ದೆವ್ವ ಭಗವದ್ ಗೀತೆ ಹೇಳಿದಂತೆ "

ಅಲ್ಲಾ ಹೋಗಿ ಹೋಗಿ ಮೂರನ್ನು ಬಿಟ್ಟು ನಿಂತ ಪಾಪೀ

ಪಾಕಿಸ್ತಾನದ ಜೊತೆ ಸರಸವೆ ಹೆ ಭಗವಾನ್ !

ಹೀಗೆ ಸಭೆ ಅನೇಕ ಮಾತು ಹೊರ ಹಾಕಿತು. 

" ಬೇಡಿ ಸರ್ ದುಡುಕ ಬೇಡಿ , ಜಾಣನಿಗೆ ಮಾತಿನ ಪೆಟ್ಟು

ಅದೇ ದಡ್ಡನಿಗೆ ದೊಣ್ಣೆ ಪೆಟ್ಟು ಸಾಕು , ನೀವೀಗ ತೆಗೆದು ಕೊಳ್ಳುವ ಯಾವುದೇ ತೀರ್ಮಾನ ಎರಡು ಕುಟುಂಬಕ್ಕೆ ಅಲ್ಲ ದೇಶಕ್ಕೆ ಅನ್ವಯ ಆಗುತ್ತೆ ಹಾಗೆ ಭವಿಷ್ಯ ಪ್ರತಿಷ್ಠೆ ಎಲ್ಲವನ್ನು  ಈ ಒಂದು ತೀರ್ಮಾನ ನಿರ್ಧರಿಸುತ್ತದೆ " ಎಂದು ಪ್ರದಾನಮಂತ್ರಿಗೆ ತನ್ನ ಕಾರ್ಯದರ್ಶಿ ಎಚ್ಚರಿಸಿದನು .

"ಆಹ್ ! ತಾಳಿ ನಿಮಗೆ ಬೇಡದ್ದು ನನಗೂ ಬೇಡ , ಇದೆ ವಿಚಾರಕ್ಕೇ ತಾನೇ ಹೇಗೆ ಏನು ಯಾವ ತೀರ್ಮಾನ ಕೈಗೊಳ್ಳಬೇಕು ಎಂಬ ಬಗ್ಗೆ ಸವಿಸ್ತರವಾಗಿ ಚರ್ಚೆಗೆ ಕುಳಿತದ್ದು . ನಮಗೂ ಈ ವಿಚಾರದಲ್ಲಿ ನಕಾರಾತ್ಮಕ ಭಾವನೆಗಳು ಇತ್ತು .  ಈಗ ನೋಡಿದರೆ ಗೃಹಮಂತ್ರಿ ನಿಲುವು ಸರಿ ಅನ್ಸುತ್ತೆ . ಯಾಕಂದ್ರೆ ಯಾರಿಗೆ ಯಾರೂ ಶತ್ರುವು ಅಲ್ಲ ಹಾಗೆ ಮಿತ್ರನು ಅಲ್ಲ . ಕಾಲಚಕ್ರ ಎಂಬುದು ಎಲ್ಲವನ್ನು ಕೊಡುತ್ತೆ ಅಂತೆಯೆ ಕಿತ್ತು ಕೊಳ್ಳುತ್ತೇ ಹಾಗೆ ಎಲ್ಲವನ್ನೂ ಮರೆಸುತ್ತದೆ ಮತ್ತು ನೆನಪಿಸುತ್ತದೆ . 

ನೋಡಿ ನಾಳೆಯ ದಿನಗಳಲ್ಲಿ ಭಾರತ ಮತ್ತು ಪಾಕಿಸ್ತಾನದ ಸಂಬಂಧ  ಈ ವಿಚಾರದಲ್ಲಿ ಹಳಸಿ ಯುದ್ದ ಜರುಗಿದರೆ ಆಗ ನಮ್ಮನ್ನು ವಿಶ್ವಸಂಸ್ಥೆ ಇಲ್ಲಾ ಪ್ರಪಂಚದ ಯಾವ ದೇಶವೇ ಆಗಲಿ ನಮ್ಮನ್ನು ತೆಗಳಲಾರದು , ಯಾಕಂದ್ರೆ ಈ ಎಲ್ಲಾ ಕಾರ್ಯಕ್ರಮಗಳು ಈ ಎರಡು ದೇಶ ಸಂಬಂಧ ಸುಧಾರಣೆಗಾಗಿಯೆ ಭಾರತ ಕೈಗೊಂಡ ಕ್ರಮಗಳು  ಎಂದು ಎಂತಾ ಸಾಮಾನ್ಯ ನಾಗರಿಕನೂ ಅರ್ಥ ಮಾಡಿ ಕೊಳ್ಳದೆ ಇರಲಾರ . ಹೂ ಏನಂತೀರಾ ಸಹೋದ್ಯೋಗಿ ಮಿತ್ರರೇ ? 

ಯುದ್ದ ಜರುಗಿದ್ದೆ ಆದಲ್ಲಿ ಪಾಕಿಸ್ತಾನ ನೆಲಸಮ ಆಗುವುದರಲ್ಲಿ ಸಂಶಯವಿಲ್ಲ.ಆದ್ರೂ ಯುದ್ಧದಲ್ಲಿ ಸೋತೋನು ಸತ್ತ ,ಗೆದ್ದೊನು ಸೋತ ಎಂಬ ಗಾದೆಯಂತೆ ,ನಮ್ಮಲ್ಲೂ ಏನೆಲ್ಲಾ ಪ್ರಭಾವ ಪರಿಣಾಮ ಬೀರದೆ ಇರಲಾರದು,ಆಲ್ವಾ ! ಎಲ್ಲವನ್ನು ಜಾಗತಿಕ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಮುಂಬರುವ ಎಲ್ಲ ಸನ್ನಿವೇಶ ಹಾಗು ಎದುರಾಳಿ ಬಾಯಿ ಮುಚ್ಚಿಸುವ ಅಸ್ತ್ರವಾಗಿ ಈ ವೇದಿಕೆ ಬಳಸಿಕೊಳ್ಳಲು ಇದೊಂದು ಪ್ರಯೋಗ ಶಾಲೆ ಇದ್ದಂತೆ ಅಷ್ಟೇ.

ನಾವೇನು ಅವರಿಗೆ ನೀವು ಪ್ರೀತಿಸುವ ಹಾಗೆ ಹೂ ಗುಚ್ಛ ನೀಡಿ ಸರ್ಕಾರ ಪರವಾಗಿ ಬೇಡಿಕೊಂಡು ಇಲ್ಲ. ಹಾಗೆ

ಹುಡುಗ - ಹುಡುಗಿ ಪ್ರತ್ಯೇಕವಾಗಿ tv ವಾಹಿನಿಗೆ ಹೇಳಿಕೆ ಸಹ ನೀಡಿದ್ದಾರಂತೆ ಯಾರು ಒಪ್ಲಿ ಬಿಡ್ಲಿ ನಾವಂತೂ ಮದುವೆ ಆಗುವುದು ಆ ಸೂರ್ಯ ಚಂದ್ರರಸ್ಟೆ ಸತ್ಯ  .

ಹಾಗಾಗಿ ಸಪ್ಪೊಟ್ ಎಂಬ ನಾಟಕ ಮಾಡಿ ದೇಶಕ್ಕೆ ಒಳ್ಳೆಯದನ್ನೇ ಮಾಡುವ ಸರ್ಕಾರವೇ ಒಂದು ಹೆಜ್ಜೆ ಮುಂದೆ ನಿಂತು  ಅಂತರ್ದರ್ಮೀಯರ ಜೊತೆ ವೈವಾಹಿಕ ಸಂಬಂಧಗಳಿಗೆ ನಾನಾ ರೀತಿಯ ಪ್ರೋತ್ಸಾಹ ನೀಡುವ ಮೂಲಕ ವರ್ಗ- ಧರ್ಮ ಸಂಘರ್ಷ ತಡೆಯುವ ಪ್ರಯತ್ನ ಮಾಡಿತು ಎಂಬ ಹೆಸರು ಸರ್ಕಾರಕ್ಕೆ ಸಿಗುವುದಿಲ್ಲವೆ? " ಎಂದು ಪ್ರದಾನ ಮಂತ್ರಿಗಳು ತಮ್ಮ ಮನದಾಳದ ಮಾತು ಹೊರಹಾಕಿದರು.

ಹೌದು ತಾಳಿಯಾನು ಬಾಳಿಯಾನು , ಕೊಡುವ ಕೈ ಎಂದು ಸೊಲದು ಎಂಬ ಹಿರಿಯರ ಮಾತು ಸತ್ಯ.

ನಾವು  ಈ ಮದುವೆಗೆ ಸಹಕರಿಸುವ ಮೂಲಕ  ಎರಡು ದೇಶಗಳ ಸಂಬಂಧ ಗಟ್ಟಿಗೊಳಿಸುವ .ಪಾಕಿಸ್ತಾನ್ ಅಂದ್ರೆ ಯಾವುದು ಅದು ? ಅಲ್ಲಿಗರಲ್ಲಿ ಹರಿಯುತ್ತಿರುವ ರಕ್ತ ಸಂಸ್ಕೃತಿಯ ಬೇರು ಎಲ್ಲಾ ಈ ತಾಯಿ ಭಾರತೀಯ ಳದ್ದೇ ಅಲ್ಲವೇ ?

ಅಲ್ಲಿಯ ಜನ ಸಂಸ್ಕೃತಿ ಆಚಾರ ವಿಚಾರ ಆಹಾರ ಪದ್ಧತಿ ಎಲ್ಲ ಭಾರತೀಯರದ್ದೇ ಅಲ್ಲವೋ !ಅದೇ ಅಲ್ಲಿನ ಎಲ್ಲ ವಿಚಾರಗಳಲ್ಲೂ ಭಾರತೀಯತೆ ಎಂಬ ತಾಯಿಬೇರು ಇದ್ದು ಪಾಶ್ಚಿಮಾತ್ಯ ಎಂಬ ತಂತು ಬೇರು ತಾಯಿಬೇರಿನ ಸುತ್ತ  ತಳುಕು ಹಾಕಿಕೊಂಡು ಬೆಳೆದಿದೆ ಅಷ್ಟೇ.ಆದರೆ… 

ತಂತು ಬೇರನ್ನು ಸವರಲು ಎಸ್ಟು ಹೊತ್ತು ಬೇಕು ಹೇಳಿ.

ನಿಮಗೆ ಒಂದು ವಿಚಾರ ನೆನಪಿರಲಿ ಆಹಾ ! ನಮ್ಮ ಈ ಹಿಂದಿನ ಪ್ರಧಾನಿ ಅಟಲ್ ಬಿಹಾರಿ ವಾಪೇಯಿಯವರು 

ಪಾಕಿಸ್ತಾನ ಜೊತೆ ಸಂಬಂಧ ಸುಧಾರಣೆಗಾಗಿ ಬಸ್ ಬಿಟ್ಟರು ಲಾಹೋರ್ ಇಂದ ದೆಲ್ಲಿವರೆಗೆ . ಏಷ್ಟೋ ರಾಜಕಾರಣಿ ಪತ್ರಕರ್ತರು ಅಲ್ಲಿಗೆ ಹೋಗಿ ಬಂದರು  ಅಷ್ಟೇ.ಹೋಗಿ ಬಂದದ್ದು ಅಷ್ಟೇ ಮುಂದೆ  ಏನು ಆಗದೆ ಎಲ್ಲ ಕೈ ಚೆಲ್ಲುವಂತಾಯಿತು ಆಲ್ವಾ !

ಆದ್ರೆ ನೆನಪಿರಲಿ ನಮ್ಮ ಪತ್ರಕರ್ತರು ಅ ಪಾಕಿಸ್ತಾನದ ಕೆಲವು ಜನರನ್ನು ಮಾತಾಡಿಸಿದರು ಆಗ ಯಾರೂ ಸಹ ಈ ಭಾರತದ ವಿರುದ್ದ ಮಾತಾಡಲಿಲ್ಲ ಅಂದರೆ ಈಗಲೂ ಅಲ್ಲಿಯ ಸಾಮಾನ್ಯ ಜನಕ್ಕೆ ಬಾರತ ಮತ್ತು ಭಾರತೀಯರ ಮೇಲೆ ಪ್ರೀತಿ ನಂಬಿಕೆ ವಿಶ್ವಾಸ ಇದೆ ಎಂದರ್ಥ ಅಲ್ಲವೇ !.

ಹಾಗಾಗಿ ನೋಡೋಣ ವಿಜ್ಞಾನಿಗಳು ಮೊದಲು ಇಲಿ ಮೇಲೆ ಪ್ರಯೋಗಿಸಿಸುವಂತೆ ನಾವು ಇವರ  ಮೇಲೆ ಅಸ್ತ್ರ ಹೂಡುವ , ಮುಂದೇನಾಗುತ್ತೆ ನೋಡುವ ಏನಂತೀರಿ !

ಹೀಗೆ ಪ್ರದಾನಮಂತ್ರಿ ದೀರ್ಘ ಮಾತಿನಬಳಿಕ ಎಲ್ಲ ಒಪ್ಪಿಗೆ ಇತ್ತರು. 

ಒಪ್ಪಿಗೆ ಸಿಕ್ಕ ಬಳಿಕ ಪ್ರಧಾನಮಂತ್ರಿಯು ತಮ್ಮ ಆಪ್ತ ಕಾರ್ಯದರ್ಶಿ ಹಾಗೂ ಗೃಹಮಂತ್ರಿ ಇಬ್ಬರು ಹೋಗಿ ರಾಮಾ ಜೋಯಿಸ್ಸರ ಬಳಿ ಗುಪ್ತವಾಗಿ ಹೋಗಿ ಈ ವಿಚಾರವನ್ನು ತಿಳಿಸಿ ಹೇಗಾದ್ರು ಸರಿ ಮನವೊಲಿಸಿ  ಈ ಮದುವೆಗೆ ತಾವು ಒಪ್ಪುವುದರಿಂದ ಎರಡು ದೇಶಕ್ಕೆ ಆಗಬಹುದಾದ ಅನುಕೂಲ ಬಗ್ಗೆ ತಮ್ಮ ಬುದ್ದಿ ಉಪಯೋಗಿಸಿ ಹೇಗೆ ಒಪ್ಪಿಸುವಿರಿ ನಾನು ನೋಡುತ್ತೇನೆ ನಿಮಗಿದು ಒಂದು  ಚಾಲೆಂಜ್ ಎಂದು ಹೇಳುವಸ್ಟರಲ್ಲಿ,

ಸಾರ್ ! ನಾನಿಲ್ಲಿ ಈ ವಿಚಾರ ಪ್ರಸ್ತಾಪಿಸಬಾರದು  ಅದ್ರು ಇರಲಿ ಅಂತ ಮಾತಾಡುವ ,ಏನಂದ್ರೆ ಈ ವಿಚಾರದಲ್ಲಿ ಏನಾದ್ರೂ ವಿರೋಧಪಕ್ಷವನ್ನು ನಮ್ಮ ಕಡೆ ಒಲಿಸಿಕೊಳ್ಳುವ ಕನಿಷ್ಟ ಪ್ರಯತ್ನ ಏನಾದ್ರು …ಎಂದು ಪ್ರಧಾನಿ ಕಾರ್ಯದರ್ಶಿ ಕೇಳುತ್ತಾರೆ.

ಇದರಿಂದ ಉಗ್ರವಾದ ಪ್ರಧಾನಿಗಳು ವಾಟ್ ಡು ಯು ಮೀನ್  ? ನಾವೇನು ರಾಜಕೀಯ ಮಾಡ್ತಿದ್ದಿವಾ ಇಲ್ಲ ತಿದ್ದುಪಡಿ ತರುತಿದ್ದೇವಾ ಅವರನ್ನ ಕೇಳಲು , ಅವರದ್ದೊಳ್ಳೆ ಆಯ್ತಲ್ಲ ಇಲ್ಲಿ ಆಗ್ತಾ ಇರೋದು ಮದುವೆ .ಮದುವೆ ಏನಿದ್ರು ಎರಡು ಕುಟುಂಬ ಮದ್ಯೆ ನಡೆಯುವಂತಹ ವಿಚಾರ 

ವಿರೋದ ಪಕ್ಷ ಇರೋದೇ ವಿರೋದಿಸಲಿಕ್ಕೆ ತಾನೇ ಇದನ್ನು ಬಿಟ್ಟು ಏನು ತಾನೇ ಬೇರೆ ಕೆಲಸ ಅವರಿಗೆ ? 

ಅವರ ಮನಸ್ಥಿತಿ ಹೇಗೆ ಅಂದ್ರೆ ಅವರು ಏನನ್ನಾದರೂ ತಿಂದರೂ ವಿರೋಧಿಸುತ್ತಾರೆ ಹಾಗೆ ಹೇತ್ರು ವಿರೋಧಿಸುತ್ತಾರೆ .ಅಂದ್ರೆ ವಿರೋದ ಪಕ್ಷ ವಿರೋದಿಸುತ್ತೆ ಅಂತ ತಿನ್ನೋದನ್ನು ಹೇಲೋದನ್ನು ಬಿಡೋಕಾಗುತ್ಯೇ ನಮ್ ಪಾಡಿಗೆ ನಾವು ನಮ್ ಕೆಲಸ ಮಾಡಿಕೊಂಡು ಹೋಗುತ್ತಿರಬೇಕು .ನಮ್ಮ ಕೆಲಸ ಏನಿದ್ರೂ ಜನ ಸಾಮಾನ್ಯ ಮೆಚ್ಚಬೇಕು ಆಗ ನಮ್ಮ ಕೆಲಸಕ್ಕೆ ಆತ್ಮ ತೃಪ್ತಿ

ಈ ಮಾತು ಕೇಳಿ ಎಲ್ಲ ನಗಾಡತೊಡಗಿದರು.ಹಾಗೂ ಎಲ್ರೂ ನಗುತ್ತಲೇ ಸಭೆ ಮುಕ್ತಾಯ ಮಾಡಿದರು.

ಒಂದು ದಿನ ಗೃಹಮಂತ್ರಿ ಹಾಗೂ ಪ್ರಧಾನಿ ಕಾರ್ಯದರ್ಶಿ ಇಬ್ಬರು ಗೌಪ್ಯವಾಗಿ ರಾಮಾಜೋಯಿಸ ರನ್ನು ಬೇಟಿ ಮಾಡಿ ಎಲ್ಲವನ್ನು ವಿಸ್ತಾರವಾಗಿ ಚರ್ಚಿಸುತ್ತಾರೆ 

Category:Stories



ProfileImg

Written by Nagaraj Kale

Writer

0 Followers

0 Following