ಕಹಳೆ ಟಿವಿ ನಡೆಸಿಕೊಡುವ ಚಿಂತಕರ ಚಾವಡಿ ವಿಭಾಗದಲ್ಲಿ , ಧರ್ಮಜ್ಞಾನಿ ಹಾಗು ಪ್ರಸ್ತುತ ವಿಚಾರಗಳ ವಿಶ್ಲೇಷಕ ದೂರದೃಷ್ಟಿಯುಳ್ಳಾತ ಎಂದೆಲ್ಲಾ ಖ್ಯಾತಿವೆತ್ತ ನಾಡಿನ ಹಿರಿಯ ಬುದ್ದಿಜೀವಿಗಳು ಎಂದೆ ಹೆಸರಾದ ಹಾಗು ಅಷ್ಟೇ ನೇರ ಮಾತುಗಾರ ಮುಚ್ಚುಮರೆಯಿಲ್ಲದೆ ತನ್ನ ಅನಿಸಿಕೆ ಅಭಿಪ್ರಾಯ ಬಿಚ್ಚಿಡುವ ಪತ್ರಿಕಾ ವಿಭಾಗದ ಖ್ಯಾತ ಅಂಕಣಕಾರರು ಆದಂತಹ ಶ್ರೀಯುತ ನಿತ್ಯಾನಂದ ಬ್ರಹ್ಮಾಂಡ ಗುರೂಜಿಯವರು ಇಂದಿನ ಚಿಂತಕರ ಚಾವಡಿಯಲ್ಲಿ ನೇರಾ ನೇರ ಸಂದರ್ಶನವಿರುತ್ತದೆ .
ಇಂದಿನ ವಿಶೇಷ ಚರ್ಚಾವೇದಿಕೆಯಲ್ಲಿ ಎ ರಿಲೇಷನ್ ಶಿಪ್ ವಿತ್ ಹಿಂದೂಸ್ಥಾನ್ v/s ಪಾಕಿಸ್ತಾನ್ ಎಂಬ ಹೆಸರಿನಡಿ ಪ್ರಣವ್ ಲವ್ಸ್ ವಿತ್ ಜೋಧಾ ಅಕ್ಬರ್ ಎಂಬ ವಿಚಾರವಾಗಿ ಚರ್ಚೆಯಾಗುತ್ತೆ . ತಮಗೆಲ್ಲರಿಗೂ ಆದರದ ಸ್ವಾಗತ ಸುಸ್ವಾಗತ ಗುರೂಜಿ ಎಂದು ಟಿವಿ ಆ್ಯಂಕರ್ ಗುರೂಜಿ ಯವರಿಗೆ ಆಹ್ವಾನ ನೀಡುತ್ತಾಳೆ . ಗುರೂಜಿ ನಮಸ್ಕಾರ ಮಾಡುತ್ತಾ ಆಹ್ವಾನ ಸ್ವೀಕರಿಸುತ್ತಾರೆ .
ನಮಸ್ಕಾರ , ನಾಡಿನ ಸಮಸ್ತ ಭಾಂದವರಿಗು ಹಾಗು ಕಾರ್ಯಕ್ರಮದ ವೀಕ್ಷಕ ಮತ್ತು ಚಾನಲ್ ಸಿಬ್ಬಂದಿ ವರ್ಗಕ್ಕೂ ತುಂಬು ಹೃದಯದ ಧನ್ಯವಾದಗಳು ಎಂದು ತಮ್ಮ ಎರಡು ಕೈ ಮುಗಿಯುತ್ತ ಹೇಳಿದರು ಗುರೂಜಿ .
ಗುರೂಜಿ ನೇರವಾಗಿ ವಿಚಾರಕ್ಕೆ ಬರೋಣ . ಎಂದರು ಟಿವಿ ಆಂಕರ್ . ಈಗ ಪ್ರಣವ್ ಜೋಧಾ ಅಕ್ಬರ್ ಪ್ರೇಮ ಪ್ರೀತಿಯ ಚಕ್ರವು ಸುತ್ತಿ ಈಗಲೂ ಸುತ್ತುತಲೇ ಇರುವುದು ಜಗತ್ತಿಗೆ ಒಂದು ಬಗೆಯ ಕೌತುಕದ ವಿಚಾರವಾದರೆ , ಭಾರತ ಪಾಕಿಸ್ತಾನಕ್ಕೆ ನುಂಗಲಾರದ ಹಾಗೆ ಉಗುಳಲು ಆಗದ ಬಿಸಿ ತುಪ್ಪವಾಗಿ ಹೋಗಿದೆ . ಒಂದು ರೀತಿ ಎರಡು ದೇಶಗಳ ನಡುವೆ ಯುದ್ದ ಸನ್ನಿವೇಶ ಸೃಷ್ಟಿಯಾಗಿದೆ . ನೀವು ಈಗ ಈ ವಿಚಾರವಾಗಿ ಏನನ್ನು ಹೇಳಲಿಚ್ಛಿಸುವಿರಿ ? ಗುರೂಜಿ ಎಂಬ ನೇರ ಪ್ರಶ್ನೇ ಎಸೆದರು.
ಇಲ್ಲಿಯ ವಿಷಯ ಅತ್ಯಂತ ಸ್ಪಷ್ಟ , ಏನಂದ್ರೆ ಹಿಂದು ಬೌದ್ಧ ಜೈನ ಪಾರ್ಸಿ ಸಿಖ್ ಮುಸ್ಲಿಂ ಕ್ರೈಸ್ತರು ಹೀಗೆ ಯಾವುದೇ ೨ ಅನ್ಯ ಕೋಮಿನ ಹುಡುಗ ಹುಡುಗಿ ದೇಶೀಯ ಇಲ್ಲ ಅಂತರ್ದೇಶೀಯರೆ ಆಗಲಿ ಪ್ರೀತಿಸುವುದು , ಪ್ರೀತಿಸುತ್ತಿರುವುದು ಮದುವೆ ಆಗುವುದು ಇಲ್ಲ ಡೈವೋರ್ಸ್ ಕೊಡುವುದು ಇದೆಲ್ಲ ಇತಿಹಾಸ ಪುಟದಲ್ಲಿ ಮೊದಲಲ್ಲ ಹಾಗೆ ಕೊನೆಯು ಅಲ್ಲ . ಹಾಗೆ ಈ ವಿಚಾರವನ್ನು ಇಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಚರ್ಚಿಸುವ ವಸ್ತು ವಿಷಯವು ಇದರಲ್ಲಿ ಅಡಗಿಲ್ಲ. ಆದರೆ , ಪ್ರೀತಿಸುತ್ತಿರುವ ಹುಡುಗ ಹುಡುಗಿ ಹಾಗು ಅವರ ಕೌಟುಂಬಿಕ ವಿಷಯದ ಸ್ಥಿತಿಗತಿಗಳ ಹಿನ್ನೆಲೆಯಲ್ಲಿ ಈ ವಿಷಯ ಅಷ್ಟೊಂದು ಗಹನವಾಗಿ ಹೋಗಿದೆ ಅಷ್ಟೇ. ಅದರಲ್ಲು ನಿಮ್ಮಂತ ಈ ನ್ಯೂಸ್ ಮೀಡಿಯಾದವರು ಈ ವಿಚಾರವನ್ನು ಇಲ್ಲಿ ಒಂದು ರೀತಿ ಬಬ್ಬಲ್ ಗಮ್ ತರ ಎಳೆದು ಎಳೆದು ಊರಗಲ ಮಾಡಿ ರಂಪಾಗಿಸಿದ್ದಿರಿ ಅಷ್ಟೇ . ಗುರೂಜಿ ನೇರವಾಗಿ ಮೀಡಿಯಾಗಳಿಗೆ ಜಾಡಿಸಿದರು .
ಛೇ ಛೇ ಇದು ನಮ್ಮ ಕರ್ತವ್ಯ ಜನತೆಗೆ ಸುದ್ದಿ ಮುಟ್ಟಿಸುವುದು ಎಂದು ನುಣುಚಿ ಕೊಳ್ಳುವ ಪ್ರಯತ್ನ ಆ್ಯಂಕರ್ ಮಾಡಿದರು. ಹೌದು , ಒಂದು ಸಾರಿ ಹೇಳಿ ಮುಗಿಸಬೇಕು ತಾನೇ ! ಆದರೆ ನೀವು ಅದನ್ನೇ ದಿನವಿಡಿ ವಾರವಿಡೀ ಯಾಕೆ ಪ್ರಸಾರ ಚರ್ಚೆ ಸಂವಾದ ಅಂತೆಲ್ಲ ಮೇಲಿಂದ ಮೇಲೆ ಮಾಡೋದು ಹೇಳಿ ಯಾಕಂದ್ರೆ ಹೀಗೆ ಮಾಡಿದ್ರೆ ಅಷ್ಟು ಸಮಯದ ವಿಚಾರ ಸಂಗ್ರಹ ಮಾಡೋದು ತಪ್ತು ಅಂತ ಆಲ್ವಾ !.
ಅಲ್ಲಾ ! ನೀವೇ ಹೇಳಿ ಸಾಮಾಜಿಕ ಕಳಕಳಿ ಇರೋರು ಯಾರಾದರೂ ಸರಿಯೇ ಮಾಡೋ ಕೆಲಸವಾ ಇದು . ಆಯಾ ಕುಟುಂಬ ಹಾಗು ಹುಡುಗ ಹುಡುಗಿಯವರ ಪರ್ಸನಲ್ ವಿಷಯವನ್ನು ಕೆದಕಿ ಕೆದಕಿ ೨ ಧರ್ಮ ಜಾತಿ ದೇಶ ಇನ್ನೇನೋ ಬಣ್ಣ ಕಟ್ಟಿ ನೀವೇ ಏನೆಲ್ಲಾ ಮಜಾ ತಗೊಳ್ಳುತ್ತ ಅ ಹುಡುಗ ಹುಡುಗಿ ಭವಿಷ್ಯದ ಜೊತೆ ಚೆಲ್ಲಾಟವಾಡ್ತಿದ್ದಿವಿ ಅಂತ ನಿಮಗೆ ಎಂದಾದರೂ ಅನ್ನಿಸಿಲ್ಲವೆ ? ನಿಜ ಹೇಳಿ ಇದೆ ಸ್ಥಿತಿ ನಿಮ್ಮವರಿಗೆ ಯಾರಿಗಾದರೂ ಆಗಿದ್ದರೆ ಆಗ ನಿಮ್ಮ ಸ್ಥಿತಿ ಹೇಗಾಗಿರಬೇಡ ಹೇಳಿ . ಕಂಡವರ ಮನೆ ವಿಚಾರದಲ್ಲಿ ಕೆದಕಿ ಕೆದಕಿ ರಾಡಿ ಮಾಡಿ ಖುಷಿ ಪಡೋರು ನೀವು ಐ ಮೀನ್ ಈ ಮಿಡಿಯಾ ದವರು .
ಆಹಾ ! ಒಂದು ವಿಚಾರ ನೆನಪಿರಲಿ , ನಿಮ್ಮ ಈ ಮೀಡಿಯಾದವರ ಕಡೆಯಿಂದ ನನ್ನ ಖಾಸಗಿ ವಿಚಾರ ಬಹಿರಂಗವಾಯಿತು ಅಂತಲೋ ಇಲ್ಲ ಮಾನ ಮೂರಾಬಟ್ಟೆ ಆಯ್ತು ಅಂತಲೋ ಮೀಡಿಯ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರೆ ಆಗ ನಿಮ್ಮ ಗತಿ ಏನೆಲ್ಲಾ ಆಗುತ್ತೇ ಅಂತ ಒಂದು ಕ್ಷಣ ಯೋಚಿಸಿದ್ದೀರಾ ಎಂದಾದರು .
ನೋಡಿ ಪ್ರಪಂಚದಾದ್ಯಂತ ನಿತ್ಯ ಎಸ್ಟೊಂದು ಜನರು ನಾನಾ ಕಾರಣಗಳಿಂದ ಸಾಯ್ತಾನೆ ಇರ್ತಾರೆ ಆಲ್ವಾ ? ಆದರೆ ಅಷ್ಟೊಂದು ಸಾವುಗಳ ನಡುವೆ , ನೋಡಿ ತೀರಾ ಇತ್ತೀಚೆಗೆ ತಮಿಳುನಾಡಿನ ಮುಖ್ಯಮಂತ್ರಿ ಕುಮಾರಿ ಜಯಲಲಿತ ಸಾವು ಏಕೆ ಅಷ್ಟೊಂದು ಮಹತ್ವ ಪಡೆದುಕೊಂಡಿತು ಹೇಳಿ ? ಯಾಕಂದ್ರೆ ಆಕೆಯ ಸ್ಥಿತಿ ಗತಿ ಅಧಿಕಾರ ಅಂತಸ್ತಿನಿಂದ ಹೇಗೊ ಹಾಗೆ ಇಲ್ಲಿಯೂ ಕೂಡ . ಅಂದರೆ ಗೆದ್ದ ಎತ್ತಿನ ಬಾಲ ಹಿಡಿಯುವವರೆ ಇಲ್ಲಿ ಎಲ್ಲ ಅಷ್ಟೇ . ಎಂದು ಗುರೂಜಿ ಹೇಳಿದರು .
ಹೌದು ಹೌದು ಎಂಬಂತೆ ಆಂಕರ್ ತಲೆ ಅಡಿಸುತಿದ್ದಾರೆ .
ನೋಡಿ ಆ ಹುಡುಗ ಹುಡುಗಿಯರ ತಂದೆ ಆಯಾ ದೇಶದ ಲ್ಲಿನ ದೊಡ್ಡ ಗುರುತರವಾದ ಜವಾಬ್ದಾರಿ ಹೊತ್ತವರು ಹಾಗಾಗಿ ತೂಕವಂತವರು ವರ್ಚಸ್ವಿ ವ್ಯಕ್ತಿತ್ವ ಉಳ್ಳವರು ಹಾಗಾಗಿ ಈ ವಿಚಾರ ಅಷ್ಟು ಗಂಬೀರವಾಗಿ ಹೋಯಿತು ಅಷ್ಟೇ ಎಂದು ಗುರೂಜಿ ಹೇಳಿದರು .
ನಿಜ ನಿಜ ಗುರೂಜಿ ಈಗಾಗಲೇ ಹುಡುಗ ಹುಡುಗಿ ಇಬ್ಬರು ಪ್ರತ್ಯೇಕವಾಗಿ ಹೇಳಿಕೆ ಕೊಟ್ಟಿದ್ದಾರೆ ಎಂದು ಆಂಕರ್ ಹೇಳಿದರು .
ಹೂ ಏನಂತ ? ಪ್ರಶಿಸಿದರು ಗುರೂಜಿ.
ನಮ್ಮಿಬ್ಬರ ಮದುವೆಗೆ ಕುಟುಂಬವಾಗಲಿ ಜಾತಿ ಧರ್ಮ ವಾಗಲಿ ಅಡ್ಡಿಯಾಗಿದ್ದೆ ಆದಲ್ಲಿ ನಾವು ಎಲ್ಲವನ್ನು ತೊರೆದು ಬೇರೊಂದು ದೇಶದಲ್ಲಿ ವಾಸಿಸುತ್ತೇವೆ ಎಂದು.
ಹಾಗಾಗಿ ನಿಮ್ಮ ಅಭಿಪ್ರಾಯದಲ್ಲಿ ಇವರಿಬ್ಬರು ಮದುವೆ ಆಗಿದ್ದೆ ಆದಲ್ಲಿ ,ಇಂಡೋ ಪಾಕ್ ಹಿತಾಸಕ್ತಿಗೆ ಏನಾದ್ರೂ ಧಕ್ಕೆ ಮುಂದೆ ಏನೊಂದು ಹೇಳಲಾಗದೆ ಹೋಗುತ್ತಾನೆ ಆಂಕರ್ .
ಈಗಾಗಲೇ ನನ್ನ ಅಭಿಪ್ರಾಯ ತಿಳಿಸಿರುವಂತೆ ಈಗ್ಲೇ ಏನನ್ನು ಹೇಳಲಾಗದು . ಎನಿದ್ರು ಅಂತೆ ಕಂತೆ ಎಂದು ಹೇಳಬಹುದು ಅಷ್ಟೇ . ಆದರೆ ಹೀಗೆಯೇ ಆಗುತ್ತದೆ ಎನ್ನಲಾಗದು . ಬೇಕಾದ್ರೆ ಹೀಗಾಗಬೇಕು ಎಂದಷ್ಟೇ ಹೇಳಲು ಸಾದ್ಯ . ಯಾಕಂದ್ರೆ ಮೀಡಿಯಾದವರಾದ ನೀವೇ ಏಷ್ಟೋ ಬಾರಿ ಚುನಾವಣಾ ಸಮೀಕ್ಷೆ ( ಪೂರ್ವ ಹಾಗು ನಂತರ ) ನಡೆಸುತ್ತೀರಾ , ಆಯ್ದ ಭಾಗದ ಜನರ ಒಟ್ಟಾರೆ ಅಭಿಪ್ರಾಯವನ್ನು ಸಂಗ್ರಹಿಸಿ ಆಮೇಲೆ ಸಿಕ್ಕ ಅಂದಾಜು ಚಿತ್ರಣವನ್ನಾಧರಿಸಿ ನೀವೇ ಈ ಪಾರ್ಟಿಗೆ ಇಷ್ಟು ಆ ಪಾರ್ಟಿಗೆ ಅಷ್ಟು ಸೀಟು ಬರುತ್ತೆ ಅಂತ ಹೇಳಿರುತ್ತಿರಿ . ಹಾಗಾಗಿ ಈ ಪಾರ್ಟಿಗೆ ಬಹುಮತ ಪಡೆದು ಅಧಿಕಾರ ಗದ್ದುಗೆ ಏರುತ್ತೆ ಎಂದೆಲ್ಲ ಹೇಳಿರುತ್ತಿರಿ . ಹೀಗೆ ಏಷ್ಟೋ ಎಲೆಕ್ಷನ್ಗಳಲ್ಲಿ ಹೀಗೆಯೇ ಮಾಡಿದ್ದೀರಿ . ಆದರೆ ನಿಮ್ಮ ಸಮೀಕ್ಷೆ ಏಷ್ಟೋ ಬಾರಿ ಉಲ್ಟಾ ಹೊಡೆದಿರುತ್ತೆ ಆಲ್ವಾ ? ಹಾಗೆ ಇದು ಕೂಡ ೧೦೦ಕ್ಕೆ ೧೦೦ ರಷ್ಟು ಹೀಗೆ ಅಂತ ನಿಖರವಾಗಿ ಹೇಳೋದು ಕಷ್ಟ .
ಆದಾಗ್ಯೂ ಇಲ್ಲಿ ಇಬ್ಬರ ತಂದೆ ಹಾಗು ಆಯಾ ದೇಶಗಳ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಂಡಲ್ಲಿ ಮುಂದೆ ಜರುಗಬಹುದಾದ ಘೋರ ದುರಂತ ತಪ್ಪಿಸಬಹುದು ಇಲ್ಲ ಕಡಿಮೆ ಮಾಡಬಹುದು ಅಷ್ಟೇ ಎಂದರು ಗುರೂಜಿ .
ಹೇಗೆ ನಿಮ್ಮ ಮಾತನ್ನು ಅಂದ್ರೆ ಆಯಾ ಕುಟುಂಬಗಳು ಹಾಗೂ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಇದೆ . ಮುಂದಿನ ಅನಾಹುತ ತಪ್ಪಿಸುವ ವಿಚಾರದಲ್ಲಿ ಅಂತ ಅದೇಗೆ ಅಷ್ಟು ಖಡಕ್ ಆಗಿ ಸಮರ್ಥಿಸಿ ಕೊಳ್ಳುತ್ತೀರಿ ಗುರೂಜಿ ಎಂದು ಆಂಕರ್ ಪ್ರಶಿಸಿದ್ರು .
ಹೌದು , ಕೆಲವೊಮ್ಮ ರಾಜತಾಂತ್ರಿಕ ಅಂಶಗಳು ಇಂತಹ ಸನ್ನಿವೇಶದಲ್ಲಿ ನುಸುಳುವ ಸಾದ್ಯತೆ ಹೆಚ್ಚು ಪ್ರಮಾಣದಲ್ಲಿ ರುತ್ತದೆ . ಅಂದ್ರೆ ಈ ಮದುವೆ ವಿಚಾರ ಮುಂದಿಟ್ಟುಕೊಂಡು ಸದಾ ಜಗಳಕ್ಕಾಗಿ ತುಡಿಯುವ ಮನಸ್ಥಿತಿ ಉಳ್ಳವರು ಈ ಪರಿಸ್ಥಿತಿಯ ಲಾಭ ಚೆನ್ನಾಗಿಯೇ ಮಾಡಿಕೊಳ್ಳುತ್ತಾರೆ ಅಂದ್ರೆ ಅ ಪಾಕಿಸ್ತಾನ ಸರ್ಕಾರವು ಭಾರತದ ಮೇಲೆ ಏನಾದರೂ ಗೂಬೆಯನ್ನು ಕೂರಿಸಿ ತನ್ನ ಬೇಳೆ ಬೇಯಿಸಿಕೊಳ್ಳಲು ಇದನ್ನೇ ಒಂದು ಅಂತರಾಷ್ಟ್ರೀಯ ವೇದಿಕೆಯನ್ನುನ್ನಾಗಿಸಿ ಕೊಳ್ಳಬಹುದಾಗಿದೆ .
ಭಯೋತ್ಪಾದನೆ , ಉಗ್ರಚಟುವಟಿಕೆ , ಕಳ್ಳಜಾಲ , ನಕಲಿ ನೋಟು ಇತ್ಯಾದಿ ವಿದ್ವಂಸಕ ಕೃತ್ಯಗಳ ಮೂಲಕ ಭಾರತದ ದೇಶದೊಳಗಿನ ಅರ್ಥವ್ಯವಸ್ಥೆಗೆ ಪೆಟ್ಟು ಕೊಡಬಹುದು .
ಇನ್ನು ದಾರ್ಮಿಕ ವಿಚಾರವನ್ನು ಮುಂದಿಟ್ಟುಕೊಂಡು ಹೇಳುವುದಾದರೆ , ಆಯಾ ವಧು ವರನ ತಂದೆಯವರು ದಾರ್ಮಿಕ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿ ತನ್ನದೇ ಆದ ಚಾಪೋತ್ತಿದ್ದಾರೆ . ಕುಶಾಗ್ರ ಹಾಗೂ ಮೊನಚಾದ ಬುದ್ದಿ ಜೀವಿಗಳು ಎಂದೆ ಎಲ್ಲೆಡೆ ಹೆಸರಾದವರು . ಸರ್ಕಾರ ಹಾಗೂ ಜನಸ್ತೋಮ ಇವರ ಸಲಹೆ ಸಹಕಾರ ಉಪದೇಶಕ್ಕಾಗಿ ಹಾತೊರೆಯುತ್ತಾರೆ . ಹಾಗಾಗಿ ಇಲ್ಲಿ ಏನಾದ್ರೂ ಸರಿಯೇ ಸ್ವಲ್ಪವೇ ಏರುಪೇರಾದರೂ ಸಾಕು ಮುಲಾಜಿಲ್ಲದೆ ಎರಡು ದೇಶಗಳಲ್ಲು ದೊಡ್ಡ ಪ್ರಮಾಣದ ಕೋಮುದಳ್ಳುರಿಗೆ ತಿರುಗಿ ಏನೇನು ಅನಾಹುತ ಸೃಷ್ಟಿ ಆಗುತ್ತೋ ಬಲ್ಲವರಾರು ? . ಬಹುಶ ಯುದ್ದದಂತಹ ಪರಿಸ್ಥಿತಿಯೂ ಬಂದೊದಗಬಹುದು ಅಲ್ಲವೇ . ನೀವೇ ಊಹಿಸಕೊಳ್ಳಿ ಎರಡು ದೇಶದವರು ಅಣ್ವಸ್ತ್ರ ಹೊಂದಿವೆ .
ಹಾಗಾಗಿ ವಧು ವರರ ಕುಟುಂಬದಲ್ಲಿ ಯಾರಾದ್ರೂ ಒಬ್ಬರು ಸೇಡಿನ ಮನೋಭಾವನೆ ತೆರಳಿ ವಿಕೃತ ಮನಸು ತಾಳಿದರು ಸಾಕು ಯುದ್ದ ಜರುಗಿತು ಎಂದೇ ಅರ್ಥ . ಎಂದು ಗುರೂಜಿ ತನಗನಿಸಿದ್ದನ್ನು ವಿವರಿಸಿದರು .
ಗುರೂಜಿ ನಿಮ್ಮಿಂದ ಹೊರಡೋ ಅ ಮಾತೆ ಕೇಳಲು ಎಸ್ಟೊಂದು ಭಯಾನಕವಾಗಿದೆ , ಇನ್ನು ಅವೆಲ್ಲ ನಿಜವಾದಲ್ಲಿ ಹೇಗಾಗಬೇಡ ! ಗುರೂಜಿ ಈ ವಿಚಾರವಾಗಿ ಇಬ್ಬರ ತಂದೆಯವರಿಗೆ ಹಾಗೂ ಎರಡು ಸರ್ಕಾರಕ್ಕೆ ಏನಾದರೂ ನಿಮ್ಮ ಕಡೆಯಿಂದ ಸಂದೇಶ ನೀಡುವುದು ಇದ್ದರೆ ಈ ಮೂಲಕ ತಿಳಿಸಿಬಿಡಿ ಎಂದು ಹೇಳಿದರು ಆ್ಯಂಕರ್ .
ಒಹೋ ! ಏಕಾಗಬಾರದು . ನೋಡಿ ಇಲ್ಲಿ ನಾನು ವೈಯಕ್ತಿಕವಾಗಿ ಎರಡು ಸರ್ಕಾರಕ್ಕೆ ಮತ್ತು ವಧು ವರನ ತಂದೆ ತಾಯಿಗೆ ಹೆಚ್ಚು ಹೇಳಬಯಸುವುದಿಲ್ಲ . ಏಕೆಂದರೆ ವಧು ವರನ ಕಡೆಯವರು ಉನ್ನತ ಮನೋಸ್ಥಿತಿಯನ್ನು
ಉಳ್ಳವರು ಹಾಗು ಉನ್ನತ ಮಟ್ಟದ ಚಿಂತನ ಪರಿಣಿತರು . ಅವರು ಏನೇ ಮಾಡಿದರೂ ಅದರಿಂದ ಅವರವರ ಸಮಾಜ ಹಾಗು ಅವರ ದೇಶದ ಮೇಲೆ ಬೀರಬಹುದಾದ ಚಿತ್ರಣದ ಸಂಪೂರ್ಣ ಅರಿವು ಹಿಡಿತ ಇರುವಂತಹ ಧೀಮಂತ ವ್ಯಕ್ತಿಗಳು . ಆದರೂ ಶಕುನಿಯಿಂದ ದುರ್ಯೋಧನ ಕೆಟ್ಟ ಅನ್ನೋ ಹಾಗೆ ಅವರವರ ಕುಟುಂಬ ಸದಸ್ಯರು ಬಂಧು ಮಿತ್ರರು , ಸಮಿತಿ ಬಳಗದವರು ಕೆಟ್ಟ ಹಾಗು ಉದ್ದೇಶ ಪೂರ್ವಕವಾಗಿ ನೀಡುವ ಏನೇನೋ ಬಿಟ್ಟಿ ಸಲಹೆ ಸೂಚನೆಗಳನ್ನು ಕೇಳಬಾರದು . ಹಾಗು ತಮ್ಮ ವಿವೇಕವನ್ನು ಕಳೆದುಕೊಳ್ಳದೆ ಶಾಂತ ಚಿತ್ತದಿಂದ ದೃಢ ಸಂಕಲ್ಪದಿಂದ ದೃಢ ನಿರ್ಧಾರ ತೆಗೆದುಕೊಳ್ಳಬೇಕು . ಹಾಗು ಯಾವುದೇ ನಿರ್ಧಾರ ಕೈಗೊಳ್ಳುವಾಗಲು ನಿದಾನವಾಗಿ ಬಾಗಿಸಿ ಗುಣಿಸಿ ಹತ್ತಾರು ಬಾರಿ ಆಲೋಚಿಸಿ ಎರಡು ಕಡೆ ಅಂದ್ರೆ ದೇಶ ಸಮಾಜವನ್ನ ಗಮನದಲ್ಲಿಟ್ಟು ಕೊಳ್ಳುವುದು ಒಳಿತು . ಸರ್ಕಾರಕ್ಕು ಇದೆ ಸಂದೇಶ ನೀಡಬಯಸುತ್ತೇನೆ . ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು .
ಗುರೂಜಿ ಕಡೆ ಪ್ರಶ್ನೆ ,ಈ ವಿಚಾರವಾಗಿ ಮಾದ್ಯಮ ಹಾಗು ಜನಸಾಮಾನ್ಯರಿಗೆ ಏನನ್ನಾದರು ಹೇಳಬಯ ಸುವಿರಾ ಎಂದು ಆ್ಯಂಕರ್ ಹೇಳಿದರು .
ಹೌದೌದು ಇದು ಬಹು ಮುಖ್ಯವಾದ ಹಂತ , ನೋಡಿ ಎಲ್ಲ ದೃಶ್ಯ ಶ್ರವಣ ಹಾಗೂ ಅಕ್ಷರ ಮಾದ್ಯಮದ ಎಲ್ಲ ನನ್ನ ನೆಚ್ಚಿನ ಬಂಧುಗಳೇ , ಈ ಸನ್ನಿವೇಶ ಏಷ್ಟು ಸೂಕ್ಷ್ಮಾ . ಒಂದು ರೀತಿಯ ತಂತಿ ಮೇಲಿನ ನಡಿಗೆ ಎಂಬಂತಿದೆ . ಹಾಗಾಗಿ ಈ ಸನ್ನಿವೇಶದ ಪ್ರತಿ ವಿಚಾರಗಳನ್ನು ನೀವು ಪ್ರಸಾರ ಮಾಡುವುದು ನಿಜಕ್ಕೂ ನಿಮಗೆ ಒಂದು ಸವಾಲೇ ಸರಿ . ದಯಮಾಡಿ ಸರಿಯಾದ ನಿರ್ದಾರದೊಂದಿಗೆ ವಿಷಯ ಪ್ರಸಾರ ಮಾಡಿ . ಇಲ್ಲವಾದಲ್ಲಿ ಕೋಮುದಲ್ಲೂರಿ , ಗಲಭೆ ದಂಗೆ ಇತ್ಯಾದಿಗಳ ಪ್ರಚೋದನೆಗೆ ನಿಮ್ಮ ಪ್ರಸಾರದ ವಸ್ತು ವಿಷಯವೇ ಕಾರಣವಾದರೂ ಆಗಬಹುದು.
ಈ ವಿಚಾರಕ್ಕೆ ಸಂಬಂಧಿಸಿದಂತೆ , ಎಲ್ಲೋ ನಡೆದ ದಂಗೆ ಗಲಭೆ ಹತ್ಯೆ ಮುಂತಾದ ಸೂಕ್ಷ್ಮಾತಿಸೂಕ್ಷ್ಮ ವಿಚಾರವನ್ನು ಒಮ್ಮೆ ಮಾತ್ರ ಹಾಗೆ ಲೈಟ್ ಆಗಿ ಹೇಳಿ ಹಾಗೆ ತೇಲಿಸಿಬಿಡಿ . ಯಾವ ಕಾರಣಕ್ಕೂ ಅವನ್ನ ಹೈಲೈಟ್ ಮಾಡಿ ಮತ್ತೆ ಮತ್ತೆ
ಅವನ್ನೇ ಪ್ರಸಾರ ಮಾಡುವ ಮೂಲಕ , ಈಗಿನ ಶಾಂತವಾದ ಪರಿಸ್ಥಿತಿ ಉದ್ರೇಕವಾಗಿ ಏನೆಲ್ಲಾ ಅನಾಹುತ ಆಗುವಲ್ಲಿ ನಿಮ್ಮ ಸುದ್ದಿಯೇ ಕಾರಣವಾದರು ಆಗಬಹುದು ಹಾಗಾಗಿ ಏನನ್ನು ಹೇಳಬಯಸುತಿದ್ದೀರಿ ಅದನ್ನು ಹೇಗೆ ಎಷ್ಟರ ಮಟ್ಟಿಗೆ ಹೇಳಬೇಕು ಎಂದು ಎಚ್ಚರ ವಹಿಸಿ .
ಇನ್ನು ಸಾಮಾನ್ಯ ಜನರೇ , ಆದಷ್ಟು ಸದಾ ಜಾಗ್ರತೆ ಎಚ್ಚರದಿಂದ ಇರಬೇಕು ಹಾಗೂ ಆದಷ್ಟು ಶಾಂತತೆ ಕಾಪಾಡಿ . ನಿಮ್ಮ ಬುದ್ದಿ ನಿಮ್ಮ ಕೈಲಿರಲಿ ಗುಂಪು ಚರ್ಚೆಗೆ ಅವಕಾಶ ನೀಡಬೇಡಿ ಸುಳ್ಳು ವದಂತಿ ಹಬ್ಬಿಸಬೇಡಿ ಊಹಾಪೋಹಕ್ಕೆ ಆಸ್ಪದವೀಯ ಬೇಡಿ ನಿಮ್ಮ ಏರಿಯಾದಲ್ಲಿ ಅಪರಿಚಿತ ಅನುಮಾನ ಬಂದ ವ್ಯಕ್ತಿಗಳು ಕಂಡು ಬಂದಲ್ಲಿ ಮೊದಲು ಹತ್ತಿರದ ಪೊಲೀಸ್ ಸ್ಟೇಶನ್ ಇಲ್ಲ ೧೦೧ ಕ್ಕೆ ಕರೆ ಮಾಡಿ .
ಗುರೂಜಿ ಸಮಯ ಜಾರಿದ್ದೆ ಅರಿವಿಗೆ ಬರಲಿಲ್ಲ ನಿಮ್ಮಲ್ಲಿ ಮಾತಾಡಲು ಇನ್ನು ಸಾಕಷ್ಟು ವಿಚಾರ ಪ್ರಶ್ನೆ ಇತ್ತು ಮುಂದಿನ ಬೇಟಿಯಲ್ಲಿ ಅ ಬಗ್ಗೆ ಮಾತಾಡುವ ಇಲ್ಲಿವರೆಗೂ ತಾವು ವೀಕ್ಷಕರಿಗಾಗಿ ಎಸ್ಟೊಂದು ವಿಚಾರ ಹಂಚಿಕೊಂಡಿರಿ ತಮಗೆ ನಮ್ಮ ಕಹಳೆ ಟಿವಿ ಹಾಗು ನಮ್ಮ ವೀಕ್ಷಕರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು .
ಹೀಗೆ ಭಾರತದಾದ್ಯಂತ ಎಲ್ಲ ಟಿವಿ ಚಾನಲನವರು ನಾನಾ ರೀತಿಯ ಹೆಸರಿನಡಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಜನಾಭಿಪ್ರಾಯ ಸಂಗ್ರಹಿಸಿ ಹಾಗೆ ಇನ್ನು ಬಗೆ ಬಗೆಯ ಕಾರ್ಯಕ್ರಮ ಮಾಡುತ್ತಿದ್ದಾರೆ . ಭಾರತದ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ನಾನಾ ಧರ್ಮ ಸಂಘಟನಾ ಮುಖಂಡರು ಹೀಗೆ ಎಲ್ಲರನ್ನೂ ಕರೆಸಿ ಒಂದೇ ವೇದಿಕೆಯಡಿ ದೊಡ್ಡ ಸೆಮಿನಾರ್ಗಳು ಚರ್ಚಾ ಕೂಟಾ ಎಂದೆಲ್ಲಾ ಹಮ್ಮಿಕೊಂಡು ಟಿವಿಗಳಲ್ಲಿ ಬಿತ್ತರಿಸುವ ಮೂಲಕ ತಮ್ಮ ತಮ್ಮ ಟಿಆರ್ಪಿ ಹೆಚ್ಚಿಸಿಕೊಳ್ಳುವ ಪ್ರಯತ್ನ ಇಲ್ಲಿ ಎಡೆಬಿಡದೆ ನಡೆಯುತ್ತಿದೆ ಎಂದು ಇದನ್ನು ನೋಡಿದ ಎಂಥವರಿಗಾದರು ಅನ್ನಿಸದೆ ಇರುತ್ತದೆಯೇ ಹೇಳಿ ನೋಡೋಣ .
ಒಟ್ಟಾರೆ , ಈ ವಿಚಾರದ ಪರ ವಿರೋದ ಎರಡು ಬಗೆಯ ಚರ್ಚೆಗೆ ಗ್ರಾಸವಾಗಿದೆ ಸದ್ಯದ ಸ್ಥಿತಿಯಲ್ಲಿ . ಬೈಕ್ ರ್ಯಾಲಿ ಟೈರ್ ಸುಡುವುದು ಇತ್ಯಾದಿ ಪ್ರತಿಭಟನೆಯು ನಿಧಾನವಾಗಿಯಾದರೂ ತನ್ನ ಕಾವನ್ನು ಹೆಚ್ಚಿಸಿಕೊಳ್ಳುತ್ತಿದೆ ಎರಡು ದೇಶಗಳಲ್ಲಿ .
ಜನಸಾಮಾನ್ಯರು ಯುವಕ ಯುವತಿಯರು ಶಾಲಾ ಕಾಲೇಜುಗಳಿಗೆ ಸಾರ್ವತ್ರಕವಾಗಿ ರಜೆ ಘೋಷಿಸಲಾದ ಪ್ರಯುಕ್ತ ಕೆಲವರು ಸಂತಸಗೊಂಡರೆ ಮತ್ತೆ ಇನ್ನು ಕೆಲವರು ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಏನೇನೋ ಇಲ್ಲ ಸಲ್ಲದ್ದನ್ನು ಕಲ್ಪಿಸುವುದು , ಹಾಗೆ ಗಲಭೆ ಪ್ರತಿಭಟನೆ ಇತ್ಯಾದಿ ಚಿತ್ರವನ್ನೂ ಮೊಬೈಲ್ಗಳಲ್ಲಿ ಚಿತ್ರೀಕರಿಸಿಕೊಂಡು ತಮಗೆ ಬೇಕಾದವರಿಗೆ ವಾಟ್ಸಪ್ f ಬುಕ್ ಟ್ವಿಟರ್ರಗಳಲ್ಲಿ ಮುಂತಾದ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟು ಮಜಾ ತಾಗೋತ ಇದ್ದಾರೆ .
Writer