ಕನಸೊಂದು ಶುರುವಾಗಿದೆ.…
ಇದ್ದಬಿದ್ದ ಬೆಟ್ಟಗಳನ್ನು ಏರಿ ಕಠೋರ ಕರ್ಮಟ ಸತ್ಯಗಳನ್ನು ಸಂಬಂಧಗಳಲ್ಲಿ ಕಂಡು ಇನ್ನು ಇಲ್ಲೇನು ಉಳಿದಿದೆ ಎಂಬ ಪ್ರಶ್ನೆ ಕಾಡಿದಾಗ.....ಮೋಕ್ಷದ ದಾರಿಯೇ ಸುಲಭವೆಂದು.…
ಕನಸೊಂದು ಶುರುವಾಗಿದೆ
ನನಗೆ ನೀನು ನಿನಗೆ ನಾನು ಹೇಳುವ ನಾಲಿಗೆಯ ಮೇಲಿನ ಮಾತುಗಳು ಕೆಲವೊಮ್ಮೆ ನಾಟಕದಂತೆ ಕಂಡರೂ ಜೀವನವೇ ನಾಟಕರಂಗವೆಂಬ ಅರಿವಿಗೆ ಸಾಕ್ಷಿಗಳೇ ನನ್ನ ಜೀವನವಾದಾಗ.....ದೇವರ ಪಾದಗಳಿಗೆ ಕೊನೆಯ ಉಸಿರ ಬಿಡುವ ಮನಸಿಗೆ..…
ಕನಸೊಂದು ಶುರುವಾಗಿದೆ..…
ಬಿರಿದ ಮಲ್ಲಿಗೆ ಮೊಗ್ಗುಗಳನ್ನು ಹೆಕ್ಕಿ ಆಯ್ದು ಕಾಪಿಡುವ ಈ ಸಮಾಜದಲ್ಲಿ ನೆಲಕ್ಕೆ ಬಿದ್ದ ನರಳಾಡಿದ ಅನೇಕ ನಿತ್ಯಪುಷ್ಪಗಳ ಬೆಲೆಯೇ ಇಲ್ಲದ ವೇಳೆ, ಭೂಮಿಗೇ ಪಾರಿಜಾತದ ಮಳೆರಾಶಿಗೆ ಅವನೇ ಕಾರಣನೆಂದು ಶ್ರೀ ಚಕ್ರಧಾರಿಯ ಹೃನ್ಮಂಗಳದ ಅಡಿಗೆ ಮುಡಿಯಿಡುವಿಕೆಗೆ…
ಕನಸೊಂದು ಶುರುವಾಗಿದೆ....…
ಮನಮೋಹಕವಾಗಿ ನೋಟ ಬೀರಿ ಕರೆಯುವ ಕೈಗಳಿಗೆ ಬೇಕಿರುವುದು ದೇಹದ ವಾಸನೆಯೇ ಹೊರತು ಮನಸಿನ ಪರಿಮಳವಲ್ಲ, ಸಂಜೆಮಲ್ಲಿಗೆಯ ದೇಹದೊಳಗಿನ ಮಜ್ಜೆಯನು ಬಿಡದ ಇವರ ತೆವಲಿಗೆ ಸಮಾಜೋದ್ಧಾರಕನೆಂಬ ನಾಮಫಲಕದ ಒಳಗೆ ಅಳುವ ಕಂಗಳಿಗೆ ಸಮಾಧಾನಕೊಡುವ.…
ಕನಸೊಂದು ಶುರುವಾಗಿದೆ.....…
ಬಯಕೆಯ ಬೆಂಕಿ ನಂದಿದ ನಂತರ ಉಳಿಯುವ ಬೂಧಿಯನ್ನು ಬಿಡದೇ ಪ್ರಾಣಿಗಳಂತೆ ಹೊಡೆದಾಡುವುದನ್ನು ನೋಡಿದಾಗ ಮನಸೇ ನೀನಿಲ್ಲದೇ ನನಗೇ ತೀವ್ರವಾದ ಸಂತೋಷವಾಗಿದೆ...ನಿನ್ನೋಳಗಿನ ನಾನು ಹೊರಗೆ ಬಂದು ಕೈಲಾಸವಾಸಿಯ ಭಸ್ಮವಾಗುವಿಕೆಗೇ..…
ಕನಸೊಂದು ಶುರುವಾಗಿದೆ...…
ಮೇಘವಾಗಿ, ಮೋಡವಾಗಿ, ಅರುಣನ ಕಿರಣವಾಗಿ, ವರುಣನ ಪ್ರಿಯೆಯಾಗಿ, ಇಂದ್ರನ ಆಸ್ಥಾನದ ಮಂತ್ರಿಯಾಗಿ, ಇಳೆಗೆ ಮಳೆಯಾಗಿ, ಮಿಂಚಿನ ಬೆಳಕಾಗಿ, ವಿಹಂಗಮದ ನೋಟದಲಿ ಊಪಿರಿಯ ಸಮ್ಮೋಹನದ ನಕಾಶೆಯಾಗಿ, ಗೆಜ್ಜೆಯ ತಾಳವಾಗಿ, ಲಾಸ್ಯದದಲಿ ಬಕುಳ ಪುಷ್ಪದ ಎಲೆಯಾಗಿ, ಮಂದಾವರೇ ಮನಚೆಲ್ಲಿ ಎರಡು ಬೆರಳುಗಳನ್ನು ಸೇರಿಸಿ ಕಟ್ಟಿದ ದಾರದ ಆತುರದಲ್ಲಿ ನನ್ನ ಪ್ರಯಾಣದ ವೇಗಕ್ಕೇ.…
ಶಾರದ ಭಟ್
0 Followers
0 Following