ದಾರಿ ತಪ್ಪಿದಾ ಪ್ರೀತಿ ..
ಬಚ್ಚಲಿನ ಹಿಂದಿನ ಗೋಡೆಯ ಮೇಲೆ
ಎಗ್ಗಿಲ್ಲದೆ ಹಬ್ಬುತಿಹ ಕಾಡುಬಳ್ಳಿಯ ಹಾಗೆ...
ಗೊಬ್ಬರದ ಗುಂಡಿಯಲಿ
ಕುಕ್ಕಿ ಕೆದರಿ, ಗಲಬರಿಸುವ
ಹಸಿದ ಹುಂಜದ ಹಾಗೆ...
ದಾರಿ ತಪ್ಪಿದ ಗೂಳಿ
ಊರ ತಿರುಗಿ ನೋಡದ ಹಾಗೆ..
ರೆಕ್ಕೆಬಲಿಯದ ಹಕ್ಕಿ
ಬಾನೆಡೆಗೆ ಚಿಮ್ಮಿನೆಲಕ್ಕಪ್ಪಳಿಸುವ ಹಾಗೆ.
ಉಸಿರೇ ಇಲ್ಲದ ಮಗು
ತಾಯ ಹಸಿಗರ‍್ಭದಲಿ
ರೆಪ್ಪೆ ಬಿಡದೇ ಹೂತು ಹೋಗುವ ಹಾಗೆ
ಸೋಲನರಿಯದ ಸುಖವು
ಪ್ರೀತಿಯಿಲ್ಲದ ಸಖನು
ಮಳೆ ಇಲ್ಲದ ಇಳೆಯಂತೆ
ಬರೀ ಬರಡು ಬರಡು
ಹಳಸಿದ ಹೃದಯವೆರಡು..!!
-ಸೌಮ್ಯ ಜಂಬೆ..
ಮೈಸೂರು
0 Followers
0 Following