ಮೆಂತ್ಯೆಯಲ್ಲಿದೆ ಹಲವಾರು ವೈದ್ಯಕೀಯ ಗುಣಗಳು

ProfileImg
16 Oct '23
5 min read


image

 ಇಂದಿನ ಯುವ ಜನತೆ ಫಾಸ್ಟ್ ಫುಡ್ ಪ್ರಿಯರು. ಅವರಿಗೆ ಸೊಪ್ಪು ತರಕಾರಿಗಳ ಕುರಿತು ಕೊಂಚ ಆಸಕ್ತಿ ಕಡಿಮೆಯೇ. ಸಲಾಡ್ ಅನ್ನುವ ನೆಪದಲ್ಲಿ ಸ್ವಲ್ಪ ತರಕಾರಿಗಳನ್ನು ದೇಹಕ್ಕೆ ಸೇರಿಕೊಳ್ಳಬಹುದು. ಆದರೇ ಸೋಪ್ಪುಗಳಿಂದ ಅವರು ಎಂದಿಗೂ ದೂರವಾಗಿಯೇ ಉಳಿಯುವರು.ಅಂತಹ ಒಂದು ಸೊಪ್ಪು ಮೆಂತ್ಯೆ.    

ಮೆಂತ್ಯೆ ಹಲವಾರು ಔಷಧಿಯ ಗುಣಗಳನ್ನು ಹೊಂದಿದೆ. ಇನ್ನೂ ಮೆಂತ್ಯೆ  ಎಂದರೇ ಅಯ್ಯೋ ಕಹಿ ಎಂದು ಮುಖತಿರುವುವರೇ ಹೆಚ್ಚು. ಮೆಂತೆಯ ಕಹಿಗುಣವೇ ನಮ್ಮ ದೇಹದ ಹಲವಾರು ರೋಗಗಳಿಗೆ ರಾಮಬಾಣ ಇದ್ದಂತೆ ಎಂದು ನಾವು ಮರೆಯಬಾರದು. ಮೆಂತ್ಯೆಯಲ್ಲಿ ಹಲವಾರು ರೀತಿಯ ವೈದ್ಯಕೀಯ ಗುಣಗಳಿವೆ. ಮೆಂತ್ಯೆಯಲ್ಲಿ ಪೋಷಕಾಂಶ, ನಾರಿನಾಂಶ, ವಿಟಮಿನ್ ಸಿ, ನಿಯಾಸಿನ್, ಪೊಟಾಷಿಯಂಗಳಿವೆ. ಮೆಂತ್ಯೆಯಲ್ಲಿರುವ ಈ ಗುಣಗಳು ಸೌಂದರ್ಯ ರಕ್ಷಣೆಯ ಜತೆಗೆ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಪಾತ್ರೆಯಲ್ಲಿ ಮೆಂತ್ಯೆ ಬೀಜ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಅದನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ. ಅರ್ಧ ಚಮಚ ಮೆಂತ್ಯೆ ಪುಡಿಯನ್ನು ಒಂದು ಲೋಟ ನೀರಿಗೆ ಬೆರಸಿ ಕುಡಿಯುವ ಅಭ್ಯಾಸ ಮಾಡಿ. ಬೆಳಗ್ಗೆ ಎದ್ದ ತಕ್ಷಣ ಈ ನೀರನ್ನು ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಜತೆಗೆ ಹೊಟ್ಟೆ ನೋವು ನಿವಾರಣೆಗೆ ಸಹಾಯಕವಾಗಿದೆ. ಆರೋಗ್ಯ ತಜ್ಞರು ಹೇಳುವವ ಪ್ರಕಾರ ಮೆಂತ್ಯೆ ಬೀಜವು ಪ್ರಕೃತಿಯಲ್ಲಿ ದೊರೆಯುವ ಔಷಧೀಯ ಮೂಲ. ಇದರಲ್ಲಿ ನೈಸರ್ಗಿಕವಾಗಿಯೇ ಇನ್ಸುಲಿನ್ ಪ್ರತಿರೋಧ ನಿಯಂತ್ರಣದಲ್ಲಿ ಇಡುವ ಶಕ್ತಿಯನ್ನು ಪಡೆದುಕೊಂಡಿರುತ್ತದೆ. ಇದನ್ನು ಆಹಾರದಲ್ಲಿ ಸೇರಿಸುವುದು ಅಥವಾ ವಿಶೇಷ ಚಹಾ ತಯಾರಿಸಿ ಸೇವಿಸಬಹುದು. ಆಗ ದೇಹದಲ್ಲಿ ಇರುವ ವಿಷಕಾರಿ ಅಂಶವನ್ನು ನಿವಾರಿಸುವುದು. ಅನಗತ್ಯವಾದ ಮತ್ತು ಅಪಾಯಕಾರಿ ಕೊಬ್ಬು ಸುಲಭವಾಗಿ ನಿವಾರಣೆಯಾಗುವುದು. ಮೆಂತ್ಯ ಬೀಜಗಳ ಔಷಧೀಯ ಮೌಲ್ಯವನ್ನು ಆಯುರ್ವೇದ ಗ್ರಂಥಗಳಲ್ಲಿ ಮತ್ತು ಗ್ರೀಕ್ ಮತ್ತು ಲ್ಯಾಟಿನ್ ಫಾರ್ಮಾಕೋಪಿಯಾದಲ್ಲಿ ಉಲ್ಲೇಖಿಸಲಾಗಿದೆ.

ಮೆಂತ್ಯೆ ಯಿಂದ ದೊರೆಯುವ ಆರೋಗ್ಯ ಲಾಭಗಳು ನಿಮಗೆ ಗೊತ್ತೇ?

•             ಕೀಲು, ಹಾಗೂ ಮಂಡಿ ನೋವು ಸಮಸ್ಯೆಯನ್ನು ತ್ವರಿತವಾಗಿ ನಿವಾರಿಸುವಲ್ಲಿ ಮೆಂತ್ಯೆ ಜ್ಯೂಸ್ ಮಹಿಳೆಯ ಆರೋಗ್ಯ ಸಮಸ್ಯೆ ನಿವಾರಿಸುತ್ತದೆ ಹಾಗೂ ಋತುಚಕ್ರದ ವೇಳೆ ಉಂಟಾಗುವಂತಹ ಸೆಳೆತವನ್ನು ಕಡಿಮೆ ಮಾಡಲು ನೆರವಾಗುತ್ತದೆ. 

•             ಹದಿ ಹರೆಯದ ಸಮಯದಲ್ಲಿ, ಗರ್ಭಧಾರಣೆ ಮತ್ತು ಹಾಲುಣಿಸುವ ವೇಳೆಯಲ್ಲಿ ಮಹಿಳೆಯರು ಕಬ್ಬಿನಾಂಶದ ಕೊರತೆಯಿಂದ ಬಳಲುತ್ತಾರೆ. ಮೆಂತ್ಯೆ ಸೊಪ್ಪಿನಂತಹ ಹಸಿರು ತರಕಾರಿಗಳನ್ನು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ಉತ್ತಮ ಗುಣಮಟ್ಟದ ಕಬ್ಬಿನಾಂಶ ಪಡೆಯಬಹುದು ಎಂದು ಪಾಸಾನೊ ತನ್ನ ಅಧ್ಯಯನದಲ್ಲಿ ತಿಳಿಸಿದೆ.

•             ಅಧ್ಯಯನಗಳ ಪ್ರಕಾರ ಮೆಂತ್ಯೆ ಕಾಳುಗಳು ಕೊಲೆಸ್ಟ್ರಾಲ್ ತಗ್ಗಿಸುತ್ತದೆ. ಹೃದಯ ಸಂಬಂಧಿ ಅಪಾಯ ತಗ್ಗಿಸುತ್ತದೆ. ಇದರಲ್ಲಿ ಪೊಟಾಶಿಯಂ ಮೂಲ ಅಧಿಕವಾಗಿದ್ದು, ಇದು ಸೋಡಿಯಂನ ಕಾರ್ಯವನ್ನು ಎದುರಿಸಿ ಹೃದಯ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ ಎಂದು ಎನೊನ್ ಸಂಸ್ಥೆಯು ತನ್ನ ಅಧ್ಯಯನದಲ್ಲಿ ತಿಳಿಸಿದೆ. 

•             ಮಧುಮೇಹದಿಂದ ಬಳಲುತ್ತಿರುವವರು ತಪ್ಪದೇ ನಿಮ್ಮ ಆಹಾರದಲ್ಲಿ ಮೆಂತ್ಯೆ ಕಾಳುಗಳನ್ನು ಅಥವಾ ಮೆಂತ್ಯೆ ಸೊಪ್ಪನ್ನು ಬಳಸಿ. ಮೆಂತ್ಯೆ ಕಾಳಿನಲ್ಲಿರುವ ನೈಸರ್ಗಿಕ ನಾರಿನಾಂಶವು, ರಕ್ತ ಸಕ್ಕರೆ ಅಂಶ ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ. ಮೆಂತ್ಯೆಯಲ್ಲಿ ಅಮಿನೊ ಆಮ್ಲವು ಇನ್ಸುಲಿನ್ ಉತ್ಪತ್ತಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.

•             ಮೆಂತ್ಯೆ ಕಾಳು ಜೀರ್ಣಾಂಗದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು ನೆರವಾಗುತ್ತವೆ. ಇದು ಅಜೀರ್ಣ ತಡೆಯುತ್ತದೆ ಮತ್ತು ಮಲಬದ್ಧತೆ ಸುಧಾರಿಸಲು ಸಹಾಯಕಾರಿಯಾಗಿದೆ. ಎದೆಯುರಿ ಶಮನ ಮಾಡುತ್ತದೆ.

•             ಜ್ವರ ಮತ್ತು ಗಂಟಲು ನೋವಿಗೆ ಇದೊಂದು ರಾಮಬಾಣವಿದ್ದಂತೆ. ಮೆಂತ್ಯೆ ಕಾಳುಗಳನ್ನು ಒಂದು ಚಮಚ ಲಿಂಬೆರಸ ಮತ್ತು ಜೇನುತುಪ್ಪದೊಂದಿಗೆ ಸೇವಿಸಿದಾಗ ಅದು ದೇಹವನ್ನು ಪುನಶ್ಚೇತನಗೊಳಿಸಿ, ಜ್ವರ ಕಡಿಮೆ ಮಾಡುತ್ತದೆ ಎಂದು ಎನೊನ್ ಸಂಸ್ಥೆಯು ತನ್ನ ಅಧ್ಯಯನದಲ್ಲಿ ತಿಳಿಸಿದೆ

•             ಕಫ ಮತ್ತು ಗಂಟಲು ನೋವು ನಿವಾರಣೆ ಮಾಡುವಲ್ಲಿ ಮೆಂತ್ಯೆ ಸಹಾಯಕವಾಗುತ್ತದೆ. ಕರುಳಿನ ಕ್ಯಾನ್ಸರ್ ತಡೆಯುತ್ತದೆ. ಮೆಂತ್ಯೆ ಕಾಳಿನಲ್ಲಿರುವ ನಾರಿನಾಂಶವು ಆಹಾರದಲ್ಲಿನ ವಿಷಕಾರಿ ಅಂಶಗಳಿಗೆ ಅಂಟಿಕೊಳ್ಳುತ್ತದೆ ಮತ್ತು ಅದನ್ನು ಹೊರಹಾಕುತ್ತದೆ. ಇದರಿಂದ ಕರುಳಿನ ಲೋಳೆಯ ಪೊರೆಯನ್ನು ಕ್ಯಾನ್ಸರ್ ನಿಂದ ರಕ್ಷಿಸುತ್ತದೆ.

•             ಹಸಿವು ನಿಯಂತ್ರಿಸಿ ದೇಹದ ತೂಕವನ್ನು ಕಡಿಮೆಮಾಡಬೇಕೆಂದರೇ, ನೆನೆಸಿದ ಮೆಂತ್ಯೆ ಕಾಳುಗಳನ್ನು ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಸೇವಿಸಿದರೇ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. 

•             ಚರ್ಮದ ಗಾಯಗಳನ್ನು ನಿವಾರಣೆ ಮಾಡಿಕೊಳ್ಳಬೇಕಾದಲ್ಲಿ, ನೆನೆಸಿದ ಮೆಂತ್ಯೆಯ ಪೇಸ್ಟ್ ಮಾಡಿ ಅದನ್ನು ಸುಟ್ಟ, ಗಾಯ ಮತ್ತು ಇಸುಬು ಇತ್ಯಾದಿ ಸಮಸ್ಯೆಗಳ ಚಿಕಿತ್ಸೆಗೆ ಬಳಸಬಹುದು. ಗಾಯ ನಿವಾರಣೆಯಲ್ಲಿ ಮೆಂತ್ಯೆಕಾಳುಗಳು ಪ್ರಮುಖ ಪಾತ್ರವಹಿಸುತ್ತವೆ.

 •            ಮನೆಯಲ್ಲಿ ತಯಾರಿಸುವ ಸೌಂದರ್ಯ ವರ್ಧಕಗಳ ಫೈಕಿ ಮೆಂತ್ಯೆ ಕಾಳುಗಳು ಒಂದು. ಮೆಂತ್ಯೆ ಕಾಳುಗಳನ್ನು ನೆನೆಸಿ ಅದನ್ನು ಸಣ್ಣದಾಗಿ ರುಬ್ಬಿ ಫೇಸ್‌ಪ್ಯಾಕ್ ತರಮುಖಕ್ಕೆ ಹಚ್ಚುವುದರಿಂದ ಕಪ್ಪು ಕಲೆಗಳು, ಮೊಡವೆ, ನೆರಿಗೆ ಇತ್ಯಾದಿಗಳಿಗೆ ಕಡಿವಾಣ ಹಾಕಬಹುದು. 

•             ನಿಮ್ಮ ತೋಚೆ ಯಾವಗಲೂ ಹೊಳೆಯುತ್ತಿರಬೇಕು, ಕಾಂತಿಯಿಂದ  ಕೂಡಿರಬೇಕು  ಎಂದರೆ, ಕುದಿಸಿದ ಮೆಂತ್ಯೆ ಕಾಳುಗಳ ನೀರಿನಿಂದ ಮುಖ ತೊಳೆಯಿರಿ ಹಾಗೂ ಮೆಂತ್ಯೆ ಸೊಪ್ಪಿನ ಪೇಸ್ಟನ್ನು ಮುಖಕ್ಕೆ ವಾರದಲ್ಲಿಎರಡುಬಾರಿಯಾದರೂ ಹಚ್ಚಿಕೊಳ್ಳಿ 

•             ಯಾವಾಗಲೂ ಕೂದಲು ಉದುರುತ್ತವೆ. ವಯಸ್ಸಿಗೂ ಮುಂಚೆ ಬಿಳಿ ಕೂದಲು ಆಗುತ್ತಿದ್ದರೆ, ನಿಮ್ಮ ಆಹಾರದಲ್ಲಿ ಮೆಂತ್ಯೆ ಕಾಳನ್ನು ಬಳಸುವುದು ಮತ್ತು ಕೊಬ್ಬರಿ ಎಣ್ಣೆಯಲ್ಲಿ ಮೆಂತ್ಯೆಕಾಳುಗಳನ್ನು ಬಳಸುವುದರಿಂದ ನಿಮ್ಮ ಕೂದಲ ಉದುರುವಿಕೆ ನಿಲ್ಲುತ್ತದೆ ಹಾಗೂ ಕಪ್ಪಾಗಿ ಹೊಳೆಯುತ್ತದೆ. 

•    ಮೆಂತ್ಯೆಯಲ್ಲಿ ಆಂಟಿಆಕ್ಸಿಡೆಂಟ್‌ ಅಂಶ ಅಧಿಕವಾಗಿದೆ. ಆ ಕಾರಣಕ್ಕೆ ಇದು ದೇಹದ ಉರಿಯೂತ ಸಮಸ್ಯೆಯನ್ನು ನಿವಾರಿಸುತ್ತದೆ. ಇದರಲ್ಲಿ ಫ್ಲೆವನಾಯ್ಡ್ಸ್‌ ಎಂದು ಕರೆಯುವ ಪಾಲಿಫೆನಾಲ್ಸ್‌ ಅಥವಾ ಸಸ್ಯ ಸಂಯುಕ್ತಗಳಿವೆ. ಇದು ದೇಹದಲ್ಲಿ ಫ್ರಿ ರಾಡಿಕಲ್ಸ್‌ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಜೀವಕೋಶಗಳ ರಕ್ಷಣೆಗೆ ಸಹಾಯ ಮಾಡುತ್ತದೆ

•    ಎದೆಹಾಲಿನ ಕೊರತೆಯ ಸಮಸ್ಯೆ ಎದುರಿಸುವವರು ಪ್ರತಿನಿತ್ಯ ಆಹಾರದಲ್ಲಿ ಮೆಂತ್ಯೆಯನ್ನು ಸೇರಿಸಬೇಕು. ಇಲ್ಲದಿದ್ದರೆ ಮೆಂತ್ಯೆಕಾಳಿನ ಗಂಜಿ, ಕಾಫಿ, ಕಿಚಡಿ ಇದರ ಸೇವನೆಯನ್ನೂ ಮಾಡಬಹುದು. ಇದರಿಂದ ಎದೆಹಾಲಿನ ಪ್ರಮಾಣ ಹೆಚ್ಚುತ್ತದೆ. ನಿರಂತರ ಮೆಂತ್ಯೆ ಸೇವನೆ ಎದೆಹಾಲಿನ ಪ್ರಮಾಣ ಹೆಚ್ಚಳಕ್ಕೆ ನೆರವಾಗುತ್ತದೆ ಎಂದು ಸೈನ್ಸ್ ಡೈರೆಕ್ಟ್ ಎಂಬ ಪುಸ್ತಕದಲ್ಲಿ ವರದಿಯಾಗಿದೆ.

•    ೩ ದೊಡ್ಡ ಚಮಚದಷ್ಟು ಚೆನ್ನಾಗಿ ನೆನೆಸಿ ನುಣ್ಣಗೆ ರುಬ್ಬಿಕೊಂಡ ಮೆಂತ್ಯೆ ಕಾಳಿಗೆ ೨ ಚಮಚ ಕೊಬ್ಬರಿ ಎಣ್ಣೆ ಮತ್ತು ೧ ಚಮಚ ಹರಳೆಣ್ಣೆ ಬೆರೆಸಿ ತಲೆ ಕೂದಲ ಬುಡಕ್ಕೆ ಹಚ್ಚಿ ಮಸಾಜ್ ಮಾಡಿಕೊಳ್ಳಿ. ಒಂದು ಘಂಟೆ ನಂತರ ತಲೆ ತೊಳೆದುಕೊಳ್ಳಿ. ವಾರಕ್ಕೆರಡು ಸಲ ಮಾಡುತ್ತಿದ್ದಲ್ಲಿ ತಲೆಕೂದಲು ಸೊಂಪಾಗಿ ಬೆಳೆಯುತ್ತದೆ.

•    ಬಾಣಂತಿ ಮಹಿಳೆಯರಿಗೆ ಹೆಚ್ಚಾಗಿ ಮೆಂತ್ಯೆ ಕಾಳಿನಿಂದ ಮಾಡಿರುವ ಆಹಾರ ನೀಡಲಾಗುತ್ತದೆ. ಇದರಲ್ಲಿ ಇರುವಂತಹ ಡೈಸ್ಜೆಜಿನ್ ಎನ್ನುವ ಅಂಶವು ಹಾಲಿನ ಉತ್ಪತ್ತಿ ಹೆಚ್ಚಿಸುವುದು. ಹಲವಾರು ಅಧ್ಯಯನಗಳು ಕೂಡ ಇದನ್ನು ಹೇಳಿವೆ. ಬಾಣಂತಿ ಮಹಿಳೆಯರು ಮೆಂತೆ ಕಾಳುಗಳನ್ನು ಬಳಸಿಕೊಳ್ಳಬೇಕು ಎಂದು ಬಿಎಂಸಿ ಕಾಂಪ್ಲಿಮೆಂಟರಿ ಆಯಂಟ್ ಆಲ್ರ‍್ನೇಟಿವ್ ಮೆಡಿಸಿನ್ ೨೦೧೩ರಲ್ಲಿ ಪ್ರಕಟಿಸಿದ ವರದಿಯು ಹೇಳಿದೆ. 304 ಮಂದಿಯನ್ನು ಈ ಅಧ್ಯಯನಕ್ಕೆ ಒಳಪಡಿಸಿದಾಗ ಇದರಲ್ಲಿ ಮೆಂತ್ಯೆಕಾಳು ತುಂಬಾ ಪರಿಣಾಮಕಾರಿ ಎಂದು ಸಾಬೀತಾಗಿದೆ.

•    ಕೂದಲಿನ ಬೆಳವಣಿಗೆಯ ಬಗ್ಗೆ  ಚಿಂತೆ ಕಾಡುತ್ತಿದ್ದರೆ, ಮೆಂತ್ಯೆ  ಮತ್ತು ಜೇನುತುಪ್ಪವನ್ನು ಬಳಸಬಹುದು. ಮೆಂತ್ಯೆ  ಮತ್ತು ಜೇನುತುಪ್ಪದ ಬಳಕೆಯಿಂದ ಕೂದಲಿನ ಬೆಳವಣಿಗೆಯನ್ನು ಸುಧಾರಿಸಬಹುದು. ಮೆಂತ್ಯೆ ಬೀಜಗಳನ್ನು ನೀರಿನಲ್ಲಿ ಹಾಕಿ ಮತ್ತು ರಾತ್ರಿಯಿಡೀ ನೆನೆಸಿ. ಬೆಳಿಗ್ಗೆ ನೆನೆಸಿಟ್ಟ ಮೆಂತ್ಯೆಯ ಪೇಸ್ಟ್ ಮಾಡಿ. ನಂತರ ಈ ಪೇಸ್ಟ್‌ಗೆ ಜೇನುತುಪ್ಪವನ್ನು ಸೇರಿಸಿ ಮತ್ತು ಅದನ್ನು ಕೂದಲಿಗೆ ಹಚ್ಚಿ. ನಂತರ ನಿಮ್ಮ ಕೂದಲನ್ನು ಶಾಂಪೂ ಬಳಸಿ ತೊಳೆಯಿರಿ. ವಾರಕ್ಕೊಮ್ಮೆ ಈ ಹೇರ್ ಮಾಸ್ಕ್ ಅನ್ನು ಬಳಸುವುದರಿಂದ ಕೂದಲು ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತದೆ.

•    ಕಫ ಹೆಚ್ಚಾಗಿ ಇರುವಂತಹ ಜನರ ದೇಹದಲ್ಲಿ ಉಷ್ಣತೆ(ಅಗ್ನಿ)ಯು ಕಡಿಮೆ ಇರುವುದು ಎಂದು ಆಯರ‍್ವೇದವು ಹೇಳುತ್ತದೆ ಎಂದು ಸೈನ್ಸ್ ಡೈರೆಕ್ಟ್ ಎಂಬ ಪುಸ್ತಕದಲ್ಲಿ ವರದಿಯಾಗಿದೆ.

•    ಮೆಂತ್ಯೆ ಕಾಳಿನ ನೀರು ದೇಹದಲ್ಲಿ ದ್ರವಾಂಶ ನಿಲ್ಲುವುದು ಮತ್ತು ಹೊಟ್ಟೆ ಉಬ್ಬರ ತಡೆಯುವುದು. ಇದರಲ್ಲಿ ಉತ್ತಮ ಪ್ರಮಾಣದ ಮೆಗ್ನಿಶಿಯಂ ಇದೆ ಮತ್ತು ನಿಯಮಿತವಾಗಿ ಇದರ ಸೇವನೆ ಮಾಡಿದರೆ ಅದರಿಂದ ದೇಹವು ಆರಾಮವಾಗಿರಲು ನೆರವಾಗುವುದು. 

•    ಇನ್ನು ಮುಖವನ್ನು ಕ್ಲಿನ್ಸಿಂಗ್ ಮಾಡುವುದಕ್ಕೆ ಕೂಡ ಈ ಮೆಂತೆಯನ್ನು ಬಳಸಬಹುದು. ೩ ಚಮಚ ಮೆಂತ್ಯೆಯನ್ನು ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ, ರುಬ್ಬಿಕೊಂಡು ಸ್ಕ್ರಬ್ ರೀತಿ ಇದನ್ನು ಬಳಸಿಕೊಳ್ಳಿ. ಮುಖದ ಮೇಲೆ 5 ನಿಮಿಷಗಳ ಕಾಲ ಇದನ್ನು ನಿಧಾನಕ್ಕೆ ಮಸಾಜ್ ಮಾಡಿ, ಡೆಡ್ ಸ್ಕಿನ್ ನಿವಾರಣೆಯಾಗುತ್ತದೆ.

•    ಮೆಂತ್ಯವನ್ನು ನೀರಿನಲ್ಲಿ ನೆನೆಹಾಕಿ ನುಣ್ಣಗೆ ರುಬ್ಬಿ ಹಾಲಿನೊಂದಿಗೆ ಬೆರೆಸಿ ರಾತ್ರಿ ಮಲಗುವುದಕ್ಕೆ ಮುಂಚೆ ಈ ಮಿಶ್ರಣವನ್ನು ಮುಖಕ್ಕೆ ಲೇಪಿಸಿ. ಮರುದಿನ ಬೆಳಿಗ್ಗೆ ಬಿಸಿ ನೀರಿನಿಂದ ಮುಖ ತೊಳೆಯಿರಿ. ಮುಖ ಸುಕ್ಕುಗಟ್ಟುವುದನ್ನು ನಿವಾರಿಸುತ್ತದೆ.

•    ಎಳೆಯ ಮಗುವಿಗೆ ಎದೆಹಾಲು ಮಾತ್ರ ಆಹಾರದ ಮೂಲವಾಗಿರುವುದು, ಎದೆಹಾಲಿನಲ್ಲಿ ಇರುವಂತಹ ಪೋಷಕಾಂಶಗಳು ಬೇರೆಲ್ಲೂ ಸಿಗದು. ಮೆಂತ್ಯೆಯು ಬಾಣಂತಿಯರಲ್ಲಿ ಎದೆಹಾಲು ಹೆಚ್ಚು ಮಾಡುವ ಗುಣ ಹೊಂದಿದೆ. ಇದನ್ನು ತರಕಾರಿ ಅಥವಾ ಗಿಡಮೂಲಿಕೆ  ರೂಪದಲ್ಲಿ ಬಳಕೆ ಮಾಡಬಹುದು. ಇದರಿಂದ ಎದೆಹಾಲು ಉತ್ಪತ್ತಿ ವೃದ್ಧಿಸುವುದು. ಇದರ ಬಗ್ಗೆ ವೈದ್ಯರ ಸಲಹೆ ಪಡೆದುಕೊಂಡರೆ ಒಳ್ಳೆಯದು.

•    ಮೆಂತ್ಯ ಕಷಾಯ ಕುಡಿಯುವುದರಿಂದ ಬೆನ್ನು ನೋವಿನ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ. ಇದೇ ಮಂತೆ ಮುಖದ ಹಾಗೂ ಕೂದಲಿನ ಸೌಂದರ್ಯಕ್ಕೂ ಸಹಕಾರಿಯಾಗಿದೆ

•    ಮೆಂತ್ಯೆ ನೀರಿನ ನಿಯಮಿತ ಸೇವನೆಯು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಒಟ್ಟಾರೆ ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಮೆಂತ್ಯೆ ಕಹಿನೇ ನಿಜ ಆದರೇ ಅದರ ಔಷಧಿ ಗುಣಗಳು ನಮ್ಮ ಆರೋಗ್ಯವನ್ನು ಕಾಪಾಡುತ್ತವೆ ಎಂಬುವುದು ನಾವು ಮರೆಯುವಂತಿಲ್ಲ. ನೀವು ಸಹ ನಿಮ್ಮ ಆಹಾರ ಕ್ರಮದಲ್ಲಿ ಮೆಂತ್ಯೆಯನ್ನುಹೆಚ್ಚಾಗಿ ಬಳಸಿ ಆರೋಗ್ಯೆಕರವಾದ ಜೀವನ ಶೈಲಿಯನ್ನುನಿಮ್ಮದಾಗಿಸಿಕೊಳ್ಳಿ.

Disclaimer: The views expressed in this article are solely those of the author and do not represent the views of Ayra or Ayra Technologies. The information provided has not been independently verified. It is not intended as medical advice. Readers should consult a healthcare professional or doctor before making any health or wellness decisions.
Category:Health and Wellness



ProfileImg

Written by aishwarya chimmalagi

journalist

0 Followers

0 Following