ಮಲೆನಾಡಿನ ಆಂತರ್ಯ

ಮಲೆನಾಡು ಕೇವಲ ಪದವಲ್ಲ ಭಾವನೆ

ProfileImg
25 Dec '23
4 min read


image

*ಮಲೆನಾಡು ಕೇವಲ ಪದವಲ್ಲ ಭಾವನೆ* ....

ಸಂಚಿಕೆ: ೧

       ನಾಡ ಹಂಚಿನ ಮನೆಯ ಮೇಲ್ಗಡೆ ದೋಯ್ ಎಂದು ಹರಿಯುವ ನೀರು.ಆಗಾಗ ಎದೆಯ ಬಡಿತ ಹೆಚ್ಚಿಸುವ ಸಿಡಿಲು ಗುಡುಗು.ಚಂಗನೆ ಅಂಗಳಕ್ಕೆ ಹಾರುವಂತೆ ಮಾಡುವ ಆಲಿಕಲ್ಲು.ಇದರ ಅನುಭವಂತು ಪ್ರತಿಯೊಬ್ಬ ಮಲೆನಾಡಿಗನಿಗೂ ಆಗುವ ಸುಮಧುರ ನೆನೆಪು.

     ಚಾಪೆ ಕಂಬಳಿ ಹೊತ್ತು ಮಲಗುವವರು ಒಂದೆಡೆಯಾದರೆ ಹುಯ್ಯುವ ಮಳೆಯಲ್ಲೂ ಗದ್ದೆ ಬೈಲಿನಲ್ಲಿರುವವರು ಇನ್ನೊಂದೆಡೆ.

ಮಳೆಗಾಲಕ್ಕೆಂದೆ ಮಲೆನಾಡು ರೂಪಿಸಿದ ಆಹಾರ ಪದ್ದತಿಯಂತೂ ಹೇಳತೀರಲಾರದು.

ಅಮ್ಮನ ಹಳೆಯ ಸೀರೆಯ ಹಿಡಿದು ತಮ್ಮೆಷ್ಟತ್ತರಕ್ಕೆ ಹಾರುವ ಮೀನು ಹಿಡಿಯುವ ಕುಶಿ ಮಲೆನಾಡ ಮಕ್ಕಳ ಹೊರತು ಇನ್ನಾರಿಗೂ ಇರಲೂ ಸಾಧ್ಯವೇ ಇಲ್ಲ ಬಿಡಿ.ಊರವರ ಹಳೆ ಬ್ಯಾಟರಿಗಳೆಲ್ಲ ಕೂಡಿ ಹೊಳೆದಂಡೆ ಮೇಲೆ ಮಿನುಗು ಹುಳುವಿನಂತೆ ಗೋಚರಿಸುತ್ತಿದ್ದವು.

ಕಾರೇಡಿಯ ಹಿಡಿಯಲೂ ಹೆದರಿ ಕಡಿಯುವವರೆಷ್ಟೋˌಲೆಕ್ಕಕ್ಕೆ ಸಿಗದ ಕೊಂಬುಗಳು ಸಿಗದಿರುವುದೆಷ್ಟೋˌˌˌಕೊಂಬಿನೊಳಗಿನ ರಸ ಸೀಪಿ ಅನಂದಿಸಿದವರೆಷ್ಟೋ..

  ಹಳೆಯ ಬ್ಯಾಟರಿ ಮೊಬ್ಬಾಗಿ ಹೊಳೇಗದ್ದೆಲ್ಲಿರುವ ನಿರೋಳೆ ಹಾವುಗಳ ಮಂಡೆ ಕಡಿದು ಮಾರನೆಯ ದಿನ ಮೇಸ್ರ್ಟು ದೊಣ್ಣೆ ಕಂಡು ಹೆದೀರುವ ಹಳ್ಳಿ ಮಕ್ಳ ಹಾಗೇ ಹೆದರುವ ಹಾವುಗಳೀಗ ವಿನಾಶದಂಚಿನಲ್ಲಿವೆ.

  ಗೂಡು ದೀಪದಲ್ಲು ದೊಡ್ಡ ಬೆಳಕು ಕಂಡು ಹುಲ್ಲು ಹಂಚಿನ ಸಗಣಿ ಬಳಿದ ನೆಲದಲ್ಲೂ ಕಂಡ ಸಂತೋಷ ಮೂರಫ್ಟಿಯೋರಿನ ಬಿಲ್ಡಿಂಗಲ್ಲೂ ಸಹ ಕಾಣಲೂ ಸಧ್ಯಾವಿಲ್ಲ.

ಸಂಚಿಕೆ:೧

 ಕನಸುಗಳ ಬಂಡಿ ಹೊತ್ತು ಅಕ್ಕರೆಯ ಸ್ವಗ೯ದಲ್ಲಿ ಬೆಚ್ಚಗೆ ಮಲಗಿಸಿಕೊಳ್ಳುವ ನನ್ನೂರು 
ಮಲೆನಾಡು ಎಂಬ ಪದಕ್ಕೆ ಆಂತಯ೯ ಎಂಬ ಭಾವ ಬೆರೆಸಿ ಬರೆದಿರುವ ಪುಟ್ಟ ಮನದ ಅಕ್ಕರೆಯ ಮಾತುಗಳಿವು.
    ಹಂಚಿನ ಮನೆಯ ಪುಟ್ಟ ಸ್ವಗ೯ದಲ್ಲಿ ಸಗಣಿ ಬಳಿದ ನೆಲಹಾಸಿನ ಮಳಿಗೆಯಲ್ಲಿ ಕೆಂಪನೆಯ ಸಂಪಿಗೆಯಂತೆ ಉರಿಯುವ ಸೌದೆಯ ಒಲೆಯಲ್ಲಿ ಹೇಳುವುಕ್ಕೆ ಸಾವಿರ ಪದಗಳು ನೆನಸಿದರೆ ಆಹಾ ಕಣ್ಣಂಚಿನ ಇಬ್ಬನಿಯ ಹಾಗೆ ನೆನಪಿನ ಒಂದೊಂದೆ ಬುತ್ತಿಗಳು
  ಶುರು ಮಾಡೋಣ ಬನ್ನೀ:
            ಸಾವಿರ ಜಾತಿಯ  ಮರಗಳ ಮದ್ಯೆ ಹಸಿರೆಲೆಯ ಹಾಸಿಗೆಯ ನಡುವಲ್ಲಿ ಮುಂಜಾನೆ ಕೂಗುವ ಆ ಕೋಳಿಗಳ ಸದ್ದು ತನ್ನನ್ನೆ ಎಬ್ಬಿಸಲು ಹೊಡೆದ ಕೂಗೆಂದು ನನ್ನಮ್ಮ  ಕಂಪನಿಯ ಸೈರನ್ನಿನ ಶಬ್ದದಂತೆ ಅಷ್ಟದಿಕ್ಪಾಲಕರ ನೆನಪಿಸಿ ಬೆಳ್ಳನೆಯ ಬೂದಿ ತುಂಬಿದ ಒಲೆಯ ಎದುರಿನಲ್ಲಿ ಬೆಂಕಿ ಎಂಬ ಅಟೆಂಡೆನ್ಸ್ ಹಾಕಿ ತನ್ನಷ್ಟು ಶಕ್ತಿಯನ್ನು ಕಡಬಿನ ಸರಗಲ್ಲಿನ ಮೇಲೆ ದಾರೆ ಎರೆದು ಈಗಿನ ಸ್ವಿಗ್ಗಿ ಝೋಮ್ಯಾಟೋ ಗಳಿಗೆ ಕಾಂಪಿಟೇಶನ್ ಕೊಡುವ ಹಾಗೆ ಯಾವ ಫೈವ್ಸ್ಟಾರ್ ಹೋಟೆಲ್ ಗಳಿಗೂ ಕಡಿಮೆ ಇರದಂತೆ ಕನಸಿನ ವಾತ್ಸಾಲ್ಯವನ್ನು ತುಂಬಿ ಮುಗ್ದತೆಯ ಭಾವ ಬೆರೆಸಿ ಮಾಡುವ ಆ ಅಡಿಗೆ ಯಾವ ಅಮೃತಕ್ಕೂ ಕಡಿಮೆಯೋನಲ್ಲ ಬಿಡಿ…
   ಇದಿಷ್ಟು ನನ್ನಮ್ಮನ  ಮಂಜಾನೆಯ ಪಾಟ್೯ ಒಂದದಾರೆ ನನ್ನಪ್ಪನ ಬಗ್ಗೆ  ಹೇಳಲೆಬೇಕು ಬಿಡಿ….ಕನಸಿನ ಬಾರ ಹೊತ್ತು ಪಕ್ಕೆಲುಬು ಮುರಿಯುವ ಹಾಗೆ ಸಂಸಾರ ಎಂಬ ನೊಗವನ್ನ ಏರಿ ಮನಸಿನ ತುಂಬೆಲ್ಲ ನನ್ನವರು ಎಂಬ ಬಾವನೆ ತುಂಬಿ ತನಗಾಗಿ ಕಾದು ಕುಳಿತ ಆ ಏಳು ಹಸುಗಳ ಹೊಟ್ಟೆ ಬಯಕೆಯ ತೀರಿಸಲು ಮುಂಜಾನೆಯ ಆ ಇಬ್ಬನಿಯ ನಡುವಿನಲ್ಲಿ ತನ್ನವರ ಸೇವೆಗೆ ತನ್ನ ಜೀವನವನ್ನ ಮುಡಿಪಾಗಿಡಲು ನನ್ನಪ್ಪಯ್ಯ ಮನೆಯ ಹಿಂಬದಿಯ ಅ ಹಸಿರೆಲೆಯ ಮರದ ಕೆಳಗೆ ನಿಂತು ನಮ್ಮನೆಯ ಮಕ್ಕಳಿಗೆ ಮಲಗಲು ಕಾಲ೯ನ್ ಬೆಡ್ ಬೇಕೆಂಬಂತೆ ಮರದ ಕೆಳಗೆ ಬುಡದ ಬೇರಿಗೆ ನಮಸ್ಕರಿಸುತ್ತ ತನ್ನ ಶಿಕರವನ್ನೇರಿ ಮುಡಿಯ ಕತ್ತರಿಸಲು ಅನುಮತಿಯ ಬೇಡಿ ಹಸಿರೆಲೆಯ ಮರದಲಿ ಒಂದೊಂದೆ ರೆಂಬೆಯ ಚಿಗುರ ಕತ್ತರಿಸಿ ಕೆಳಗಿಳಿದು ಬಂದು ಒಂದೊಂದೆ ರೆಂಬೆಯನ್ನಾರಿಸಿ ಹೊರೆಯ ಕಟ್ಟಿ ತಲೆಯ ಮೇಲಿರಿಸಿ ಮನೆಯೊಡೆಗೆ ಹೆಜ್ಜೆ ಹಾಕಿದ…ತನ್ನೊಡೆಯನ  ನೋಡಿ ನಮ್ಮನೆಯ ಕೆಂಪಿ ತನ್ನವನೇ ಬಂದಂತೆ ಅಂಬೋ ಎಂಬ ಪಿತೃವಾತ್ಸಲ್ಯದಿಂದ ಚಂಗನೆ ಎದ್ದು ನಿಂತಿತು…ಕೊಟ್ಟಿಗೆಯ ಬಳಿ ಬಂದು ನನ್ನಪ್ಪ ದಢಿರ್ ಎಂದು ಶಿದ ದ ಮೇಲಿರುವ ಸೊಪ್ಪಿನ ಹೊರೆಯ ಕೆಳಗೆ ಹಾಕಿ ಆ ಗಜ ಗಾತ್ರದ ಹೊರೆಯ ಬಾರ ಅವನ ಉಸಿರಿನ ಎದೆ ಬಡಿತದ ಶಬ್ದದಲ್ಲಿಯೋ ತಿಳಿಯುತ್ತಿತ್ತು…ನನ್ನಮ್ಮ ಕಾಸಿದ ಆ ಹೊಟ್ಟು ಕಾಪಿಯ ಸವಿಯಲು ಮಲೆನಾಡಿಗರಿಗೆ ಅದೊಂದು ಎನಜಿ೯ ಡ್ರಿಂಕ್ ಬಿಡಿ …ಕಪ್ಪನೆಯ ಆ ಡ್ರಿಂಕ್ ನನ್ನುರದಲಿ ಸೇರಿದರೆ ರಾಕ್ಷಸಿರಿಗೆ ಕೈ ತಪ್ಪಿ ದೇವತೆಗಳಿಗೆ ಸಿಕ್ಕ ಆ ಅಮೃತವು ಚೂ ಉಳಿದು ನನ್ನಮ್ಮ ಕೈ ಸೇರಿದೆ ಎಂದೆನಿಸುವುದರಲ್ಲಿ ಯಾವುದೇ ವಿಷದವು ಇಲ್ಲ ಬಿಡಿ…ಸೊಪ್ಪಿನ ಹೊರೆಯ ಕೆಳಗಿಳಿಸಿ ಬಂದ ನನ್ನಪ್ಪಯ್ಯ ತನ್ನ ಮನೆಯ ಹೊರಗಿನ ಮಕ್ಕಳಾದ ಆ ದನಕರುಗಳ ಹೊಟ್ಟೆಯ ತುಂಬಿಸಲು ಒಣಹುಲ್ಲ ಬವಣೆಯಲಿ ಪಿಂಡಿಯ ಬಿಚ್ಚುತ ಒಂದೋಂದೆ ಮಕ್ಕಳಿಗೆ ಆ ಪ್ರೀತಿಯಿಂದಲೆ ಉಣಬಡಿಸಿ ತನ್ನೆದುರಿಗೆ ಕಾಣುವ ಆ ದೇವರು ಎಂದರೆ ನೀವೆ ಎಂಬ ಆ ನಿಷ್ಕಲ್ಮಷ ಭಾವದ ಮೇವಿನ ಉಣಬಡಿಸುವಿಕೆ ಬಹುಷಃ ಇದೆಲ್ಲ ಇಂದಿಗೆ ಕೊನೆಯಾಗಬದಹುದೇನೋ…
ತನ್ನ ಬೆನ್ನ ಮೂಳೆ ಮುರಿದು ದುಡಿಯುವ ನನ್ನಪ್ಪಯ್ಯ ತಾ ಮಾಡುವುದೆಲ್ಲ ನನ್ನವರಿಗೆ ಎನ್ನುವ ನಮ್ಮವ್ವ ನಮ್ಮಜ್ಜ ಬಿಟ್ಟು ಹೋದ ಆ ಹಳೆಯ ನಾಡಹಂಚಿನ ಮನೆಯ ಸೌಂದಯ೯ ಕ್ಕೆ ಕೊರತೆ ಇದ್ದರೂ ನಮ್ಮದಿ ಅಳೆಯಲಾರದಷ್ಟಿತ್ತು….ಮನೆಯ ಮುಂದಿನ ಆ ಹಸಿರು ಹಾಸಿಗೆ ಹೊದ್ದು ಭೂ ಲೋಕದ ಸ್ವಗ೯ದಂತೆ ಕಾಣುತ್ತಿದ್ದ ಭತ್ತದ ಗದ್ದೆಗಳು ಅದರ ಮುಂದೆ ಯಾವ  ಟೂರಿಸ್ಟ್ ಪ್ಲೇಸ್ ಕಡಿಮೆಯೋ..ಮಲೆನಾಡು ಎಂಬುವುದೇ ಹಾಗೆ ಒಂದೊಂದದಲ್ಲಿಯೂ ಒಂದೊಂದು ವಿಶೇಷವೇ  ಮನೆಯ ಕಡಬಿನ ಸರಗಲ್ಲಿನಿಂದ ಹಿಡಿದು ಬೂದಿ ಒಲೆ ಸಗಣಿ ಸಾರಿಸಿದ ಆ ನೆಲ ನಾಡ ಹಂಚಿನ ಮನೆ ಮಣ್ಣು ತೌಡಿನಿಂದ ಕಟ್ಟಿದ್ದ ಮನೆಯ ಗೋಡೆಗಳು ಶತಮಾನದ ಇತಿಹಾಸವ ಸಾರುವ ಹೆಮ್ಮರಗಳು ದನದ ಬ್ಯಾಣ ಕಾರೇಡಿ ಸಾರು ಮಳೆಗಾಲ ಬಂತೆಂದರೆ ಹತ್ತುಮೀನು ಕಡಿಯುವ ಆ ಕುಶಿ ಎರಡೆತ್ತನ್ನು ನಮ್ಮನೆಯ ಗದ್ದೆ ಯ ಹೂಟಿಗೆಂದೇ ಕಳುಹಿಸಿದ ಆ ಭಗವಂತ  ಆ ಎತ್ತುಗಳೋ ಬೇಸಿಗೆ ರಜೆಯ ಮುಗಿಸಿ ಮಳೆಗಾಲದ ಉಳುಮೆಗೆ ಆರಂಭದಲ್ಲಿ ವಿರೋದಿಸಿದರೂ ಆಮೆಲೆ ಅದೇನೋ ಅಭ್ಯಾಸವಾದಂತೆ ಹೆಜ್ಜೆ ಹಾಕುತ್ತಿದ್ದವು…ಮಲೆನಾಡು ಎಲ್ಲರನ್ನ ನೆಂಟರಂತೆಯೋ ಸ್ವೀಕರಿಸುವ ಹೊರಗಿನವರನ್ನ ತನ್ನವರಂತೆ ನೋಡುವ ವಿಶೇಷತೆಯನ್ನ ಹೊತ್ತು ನಿಂತಿರುವ ಮಣ್ಣಿನ ಗುಣ ಅದೆಷ್ಟೇ ಹೇಳಿದರೂ ಕೂಡ  ಮಲೆನಾಡಿನಿಂದ ಹೊರಗುಳಿದ ಮಂದಿಗೆ ತನ್ನ ತಾಯಿಯ ನೆನಪು ಒಮ್ಮೆಲೆ ಉಕ್ಕಿ ಜೋಗ ಜಲಪಾತದಂತೆ ಉಕ್ಕಿ ಹರಿದು ಕೊನೆಗೆ ನಾಲ್ಕು ಕವಲುಗಳಾದ ರಾಜ ರಾಣಿ ರೋರರ್ ರಾಕೇಟ್ ಒಂದೆಡೆ ಸೇರಿ ಹರಿಯುವಂತದು. ಅದೋಂದು ಪದ ಎಲ್ಲೆ ಕೇಳಿದರೂ ಮಸಸ್ಸಲ್ಲಿ ಅದೊಂತರಹದ ಅನುಭವ …ಕರುಳ ಕಿವುಚಿ ಕಣ್ಣಿನಲ್ಲಿರುವ ಆ ನೀರು ಕಟ್ಟೆಯೊಡೆದು ಕೆಳಗೆ ಬೀಳುವ ಮುಂಚೆ ನಮ್ಮಪ್ಪ ಕಿವಿಹಿಂಡಿ ಬುದ್ದಿ ಕಲಿಸಿದ ನನ್ನಮ್ಮ ಮುದ್ದು ಮಾಡಿ ಚಂದ್ರನನ್ನು ನನ್ನಪ್ಪನ ಹಾಗೆ ನೆನೆದು ತುತ್ತು ತಿನ್ನಿಸುವಾಗ ಆ ಚಂದ್ರನನ್ನು ಭೂಮಿಗೆ ಇಳಿಸಿ ಆ ತುತ್ತು ಹೊಟ್ಟೆಗೆ ಹೋಗುವಾಗ ಆಕಾಶಕ್ಕೆ ಕಳುಹಿಸಿ ನನ್ನಾಂದಕ್ಕೆ ಕಾರಣವಾದ ಅ ನಮ್ಮನೆಯ ಅಂಗಳ ಎಲೆ ಅಡಿಕೆ ಗುದ್ದಿ ಕೊಡುವಾಗ ನಮ್ಮಜ್ಜ  ಕೊಡುತ್ತಿದ್ದ ಆ ಪಾಕೇಟ್ ಮನಿ……………..ಮುಂದುವರೆಯುತ್ತದೆ     ……
ಅಪೂಣ೯ವೆನಿಸಬಹುದು ಶೀಘ್ರದಲ್ಲಿ ಮತ್ತೋಂದು ಸಂಚಿಕೆಯಲಿ ಸಿಗುವ…..

Category:Travel



ProfileImg

Written by koushik y s