ವರ್ಷಕ್ಕೆ 50 ಸಾವಿರ ಹೂಡಿಕೆ 12.5 ಲಕ್ಷ ಆದಾಯ !

ಎಸ್‌ಬಿಐ ಲೈಫ್‌ನ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಪ್ರಯೋಜನ



image

ಜನರು ತಮ್ಮ ಕೂಡಿಟ್ಟ ಹಣ ಅಥವಾ ಉಳಿತಾಯದ ಹಣವನ್ನು ಹಲವು ಕಡೆಗಳಲ್ಲಿ ಹೂಡಿಕೆ ಮಾಡಿ ಮತ್ತಷ್ಟು ಲಾಭ ಪಡೆಯುವ ಯೋಚನೆ ಮಾಡುವುದು ಸಾಮಾನ್ಯ. ಈ ರೀತಿಯ ಹೂಡಿಕೆಗಳಿಂದ ಕೆಲವೊಮ್ಮೆ ಅಧಿಕ ಹಣ ಗಳಿಸಿದರೆ ಕೆಲವೊಮ್ಮೆ ಹಣ ಕಳೆದುಕೊಳ್ಳುವುದೂ ಉಂಟು. ಕಷ್ಟ ಪಟ್ಟು ಉಳಿಸಿದ ಹಣ ಯಾವುದೋ ಅಭದ್ರತೆಯ ಹಣಕಾಸು ಯೋಜನೆಯಲ್ಲಿ ಹಾಕಿ ಕೈಸುಟ್ಟುಕೊಳ್ಳುವವರ ಸಂಖ್ಯೆ ಇತ್ತೀಚೆಗೆ ಕಮ್ಮಿಯೇನಿಲ್ಲ. ಅಲ್ಲದೇ ಆನ್‌ಲೈನ್ ಮೂಲಕವೂ ಜನರು ಒಂದಿಲ್ಲೊಂದು ರೀತಿಯಲ್ಲಿ ಆರ್ಥಿಕ ನಷ್ಟ ಅನುಭವಿಸುತ್ತಿರುವುದು ನಿತ್ಯ ಕಾಣುತ್ತಿದ್ದೇವೆ. ಎಲ್ಲೆಂದರಲ್ಲಿ ಹಣ ಸುರಿದು ನಷ್ಟ ಅನುಭವಿಸುವುದಕ್ಕಿಂತ ಸೂಕ್ತ ಯೋಜನೆಯಲ್ಲಿ ಹೂಡಿಕೆ ಮಾಡಿ ತಮ್ಮ ಆರ್ಥಿಕತೆ ವೃದ್ಧಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಎಸ್‌ಬಿಐ ಲೈಫ್  ಒಂದೊಳ್ಳೆ ವೇದಿಕೆಯಾಗಿದೆ.

ಹೌದು, ತಮ್ಮ‌ ಹಣ ಹೂಡಿಕೆಗೆ ಎಸ್‌ಬಿಐ ಲೈಫ್ ವಿಮೆಯೊಂದಿಗೆ ಆರ್ಥಿಕ ಭದ್ರತೆಯನ್ನೂ ಸಹ ಒದಗಿಸಲಿದೆ. ಈ ನಿಟ್ಟಿನಲ್ಲಿ ನಿಮ್ಮ‌ ನಿರೀಕ್ಷೆಗೆ ಮೀರಿದಂತಹ ಭವಿಷ್ಯದ ಮಾರ್ಗಗಳನ್ನು ತೆರೆಯುವ ಯೋಜನೆಗಳು ಎಸ್‌ಬಿಐ ಲೈಫ್‌ನಲ್ಲಿವೆ. ಆ ಪೈಕಿ ಸಣ್ಣ ಮಕ್ಕಳಿಂದ ದೊಡ್ಡವರವರೆಗೂ ಹೂಡಿಕೆ ಮಾಡಬಹುದಾದ ಗ್ಯಾರಂಟೀಡ್ ಇನ್ವೆಸ್ಟ್‌ಮೆಂಟ್ ಪ್ಲ್ಯಾನ್ ಆಗಿದೆ ಈ ಎಸ್‌ಬಿ‌ಐ ಲೈಫ್ ನ 'ಸ್ಮಾರ್ಟ್ ಪ್ಲ್ಯಾಟಿನಾ ಪ್ಲಸ್' ವಿಮಾ ಯೋಜನೆ.

ವರ್ಷಕ್ಕೆ ಕನಿಷ್ಟ 50 ಸಾವಿರ ಹೂಡಿಕೆ

ಈ ಯೋಜನೆಯಲ್ಲಿ ಪ್ರತಿ ವರ್ಷ ಕನಿಷ್ಟ 50 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಬೇಕಿರುತ್ತದೆ. ಗರಿಷ್ಠ 5 ಲಕ್ಷದವರೆಗೆ  ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆದಾರರು ಕನಿಷ್ಟ 7 ವರ್ಷ ಹೂಡಿಕೆ ಮಾಡಿ ನಿಲ್ಲಿಸಬಹುದು. ಅಥವಾ 8 ವರ್ಷ ಮತ್ತು ಹತ್ತು ವರ್ಷಗಳು ಹೂಡಿಕೆ ಮಾಡುವ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಹೀಗೆ ವರ್ಷಕ್ಕೆ ಕನಿಷ್ಟ 50 ಸಾವಿರದಂತೆ 10 ವರ್ಷಗಳು ಭರಿಸಿದರೆ ಒಟ್ಟು 5 ಲಕ್ಷ ರೂಪಾಯಿಗಳ ಒಂದೊಳ್ಳೆ ಮೊತ್ತವನ್ನು ಯೋಜನೆಗೆ ತೊಡಗಿಸಿದಂತಾಗುತ್ತದೆ. ಆನಂತರ ತಾವು ಯಾವುದೇ ಹಣ ಪಾವತಿ ಮಾಡಬೇಕಿರುವುದಿಲ್ಲ. ಬದಲಾಗಿ ಹನ್ನೊಂದನೇ ವರ್ಷ ವಿರಾಮವಿರಲಿದ್ದು ಹನ್ನೆರಡನೇ ವರ್ಷದಿಂದ ಪ್ರತಿ ವರ್ಷ 50 ಸಾವಿರ ರೂಪಾಯಿಗಳನ್ನು ಎಸ್‌ಬಿಐ ಲೈಫ್ ನಿಮಗೆ ಕೊಡುತ್ತಾ ಹೋಗುತ್ತದೆ. ಇದು ಮುಂದಿನ ಹದಿನೈದು ವರ್ಷ, ಇಪ್ಪತ್ತು ವರ್ಷ ಅಥವಾ ಇಪ್ಪತ್ತೈದು ವರ್ಷಗಳವರೆಗೆ ಸಿಗಲಿದ್ದು ನಿಮಗೆ ಯಾವ ಅವಧಿಯವರೆಗೆ ಹಣ ಬೇಕಿರುತ್ತದೆಯೋ ಆ ಅವಧಿಯ ಸ್ಲ್ಯಾಬ್ ಅನ್ನು ನೀವು ಹೂಡಿಕೆಯ ಸಮಯದಲ್ಲೇ ಆಯ್ಕೆ ಮಾಡಿಕೊಳ್ಳಬೇಕು.


ಈಗ ನೀವಂದುಕೊಳ್ಳಬಹುದು, ಯಾರು ತಾನೆ ಕಡಿಮೆ ಅವಧಿಯ ಸ್ಲ್ಯಾಬ್ ಆಯ್ಕೆ ಮಾಡಿಕೊಳ್ಳುತ್ತಾರೆಂದು. ಹೌದು ಎಲ್ಲರೂ ಸಹಜವಾಗಿಯೇ ದೀರ್ಘ ಸಮಯದ ವರೆಗೆ ಸಿಗುವ ಇಪ್ಪತ್ತೈದು ವರ್ಷಗಳ ಅವಧಿಯನ್ನೇ ತೆಗೆದುಕೊಳ್ಳಬಹುದು. ಆದರೆ ಇಲ್ಲಿ ಮತ್ತೊಂದು ದೊಡ್ಡ ಬೆನಿಫಿಟ್ ನಿಮ್ಮ ಸ್ಲ್ಯಾಬ್ ಆಯ್ಕೆಯ ಮೇಲೆ ಪರಿಣಾಮ‌ ಬೀರುತ್ತದೆ. ಅದೇನೆಂದರೆ ಹಣ ಹೂಡಿಕೆದಾರರು ಯಾವುದೇ ಅವಧಿಯ ಸ್ಲ್ಯಾಬ್ ಆಯ್ಕೆ ಮಾಡಿಕೊಂಡರೂ ಆ ಅವಧಿ ಮುಗಿಯುತ್ತಿದ್ದಂತೆ ಅವರು ಪ್ರತಿ ವರ್ಷದಂತೆ ಯೋಜನೆಗೆ ತೊಡಗಿಸಿದ ಒಟ್ಟು ಮೊತ್ತ ಬೋನಸ್ ನೊಂದಿಗೆ ವಾಪಸ್ ಹೂಡಿಕೆದಾರರಿಗೆ ಸಿಗುತ್ತದೆ.

ಉದಾಹರಣೆಗೆ : 
ವರ್ಷಕ್ಕೆ 50 ಸಾವಿರದಂತೆ ಹತ್ತು ವರ್ಷ ಹಣ ಹೂಡಿಕೆ ಮಾಡಿರುತ್ತೀರಿ ಅಂದುಕೊಳ್ಳಿ. ಇದರ ಒಟ್ಟು ಮೊತ್ತ 5 ಲಕ್ಷ ರೂಪಾಯಿಗಳು. ಅದರ ನಂತರ ಎಸ್‌ಬಿಐ ಲೈಫ್ ವತಿಯಿಂದ ನಿಮಗೆ  ಪ್ರತಿ ವರ್ಷ 50 ಸಾವಿರ ಹಣವನ್ನು ಕೊಡಲಾಗುತ್ತದೆ. ಆ ಹಣವನ್ನು ಇಪ್ಪತ್ತೈದು ವರ್ಷಗಳು ಪಡೆಯಲು ಬಯಸುತ್ತೀರೆಂದರೆ ಆ ಅವಧಿ ಪೂರ್ಣಗೊಳ್ಳುವ ತನಕವೂ ಎಸ್‌ಬಿಐ ಲೈಫ್ ಪ್ರತಿ ವರ್ಷ 50 ಸಾವಿರ ನೀಡುತ್ತಾ ಬರುತ್ತದೆ. ಅದಾದ ಬಳಿಕ ನೀವು ಹತ್ತು ವರ್ಷ ಹೂಡಿಕೆ‌ ಮಾಡಿದ್ದ ಐದು ಲಕ್ಷ ರೂಪಾಯಿಗಳ ಜೊತೆ ಬೋನಸ್ ಸೇರಿಸಿ ಒಟ್ಟಿಗೆ ನಿಮಗೆ ಐದೂವರೆ ಲಕ್ಷ ರೂಪಾಯಿಗಳನ್ನು ವಾಪಸ್ ಕೊಡಲಾಗುತ್ತದೆ. ಇದರಿಂದ ನಿಮ್ಮ ಐದು ಲಕ್ಷ ಹಣದ ಮೇಲೆ 50,000×25=12,50,000 + ಬೋನಸ್ ಸಿಕ್ಕಿದಂತಾಗುತ್ತದೆ.

ಅಕಸ್ಮಾತ್ ನೀವು ಇಪ್ಪತ್ತು ವರ್ಷಗಳ ಸ್ಲ್ಯಾಬ್ ಆಯ್ಕೆ ಮಾಡಿಕೊಂಡಿದ್ದರೆ ಇಪ್ಪತ್ತು ವರ್ಷಗಳವರೆಗೆ ಪ್ರತಿ ವರ್ಷಕ್ಕೆ 50  ಸಾವಿರ ಕೊಟ್ಟು ಇಪ್ಪತ್ತು ವರ್ಷದ ಬಳಿಕ ನಿನ್ಮ ಹೂಡಿಕೆಯ ಮೊತ್ತವನ್ನು ಬೋನಸ್ ನೊಂದಿಗೆ ಸೇರಿಸಿ ಕೊಡಲಾಗುವುದು. ಈ ಎರಡೂ ಅವಧಿಗಳ ಸ್ಲ್ಯಾಬ್ ಬಿಟ್ಟು ಹದಿನೈದು ವರ್ಷಗಳ ಸ್ಲ್ಯಾಬ್ ಆಯ್ಕೆ ಮಾಡಿಕೊಂಡಿದ್ದೀರಿ ಎಂದಾದರೆ ಹದಿನೈದು ವರ್ಷಗಳವರೆಗೆ ಪ್ರತಿ ವರ್ಷ ಐವತ್ತು ಸಾವಿರ ಹಣ ಕೊಟ್ಟು ಹದಿಬೈದು ವರ್ಷಗಳ ಬಳಿಕ ತಮ್ಮ‌ ಹೂಡಿಕೆಯ ಒಟ್ಟು ಮೊತ್ತವನ್ನು ಬೋನಸ್ ಸೇರಿಸಿ ಕೊಡಲಾಗುವುದು.‌

ನಾಮಿನಿ ಹೆಸರಿಗೆ ಹತ್ತು ಪಟ್ಟು ಡೆತ್ ಬೆನಿಫಿಟ್

ಯಾವುದೇ ಮೊತ್ತ ಹೂಡಿಕೆ ಮಾಡಿ ಈ ಯೋಜನೆ ಪಡೆದುಕೊಂಡ ಆ ಕ್ಷಣದಿಂದಲೇ ಡೆತ್ ಬೆನಿಫಿಟ್ ಇರುತ್ತದೆ. ಮೊದಲ ಕಂತಿನ ಹೂಡಿಕೆ ಮೊತ್ತದ ಹತ್ತು ಪಟ್ಟು ಹಣ ಡೆತ್ ಬೆನಿಫಿಟ್ ಆಗಿರುತ್ತದೆ. ಅಂದರೆ ಹೂಡಿಕೆದಾರರು ಅಕಸ್ಮಾತ್ ಯಾವುದೇ ರೀತಿಯಲ್ಲಿ ಮರಣ ಹೊಂದಿದರೆ ನಾಮಿನಿ ಹೆಸರಿಗೆ ಹತ್ತು ಪಟ್ಟು ಹಣ ಸಂದಾಯವಾಗುತ್ತದೆ.

ಇದೊಂದು ಗ್ಯಾರಂಟೀಡ್ ಇನ್‌ಕಮ್ ಆಗಿದ್ದು ಇದರಲ್ಲಿ ಹಣ ಹೂಡಿಕೆ ಮಾಡಿದಾಗ ತಮಗೆ ನೀಡಲಾಗುವ ಪಾಲಿಸಿ ಬಾಂಡ್‌ನಲ್ಲಿ ಎಲ್ಲವೂ ಉಲ್ಲೇಖವಾಗಿರುತ್ತದೆ. ಈ ಯೋಜನೆಯನ್ನು ಎಲ್ಲಾ ವಯೋಮಾನದವರು ಸಹ ಪಡೆದುಕೊಳ್ಳಬಹುದು. ವರ್ತಕರು, ಸರ್ಕಾರಿ ನೌಕರರು, ರೈತರು, ಕಾರ್ಮಿಕರು,  ಉದ್ದಿಮೆದಾರರು ಹೀಗೆ ಯಾರು ಬೇಕಾದರು ಈ ಯೋಜನೆಯಲ್ಲಿ ತಮ್ಮ ಹೆಸರಿನಲ್ಲೇ ಹಣ ಹೂಡಿಕೆ ಮಾಡಬಹುದು.

ಈ ಯೋಜನೆಯಲ್ಲಿ ನೀವು ಹಣ ತೊಡಗಿಸಿ ನಂತರ ಪಡೆದುಕೊಳ್ಳುವ ಒಟ್ಟಾರೆ ಹಣಕ್ಕೆ ಯಾವುದೇ ತೆರಿಗೆ ಪಾವತಿಸುವ ಅವಶ್ಯಕತೆ ಇರುವುದಿಲ್ಲ‌. ಪ್ರತಿಯೊಬ್ಬರಿಗೂ ಇದು  ಅತ್ಯುತ್ತಮ ಆರ್ಥಿಕ‌‌ ಭದ್ರತೆ ಒದಗಿಸುವ ಯೋಜನೆಯಾಗಿದ್ದು ಇದರಲ್ಲಿ ಹಣ ಹೂಡಿಕೆ ಮಾಡುವ ಮೂಲಕ ತಮ್ಮ ಆರ್ಥಿಕ ಸ್ಥಿತಿಗತಿ ಸುಧಾರಿಸಿಕೊಳ್ಳಬಹುದು. ಇದೇ 'ಸ್ಮಾರ್ಟ್ ಪ್ಲಾಟಿನ ಪ್ಲಸ್' ಯೋಜನೆಯಲ್ಲಿ ವರ್ಷಕ್ಕೆ ಒಂದು ಲಕ್ಷ ಹೂಡಿಕೆ ಮಾಡಿದರೆ ಯಾವ ರೀತಿಯ ಪ್ರಯೋಜನಗಳು ಪಡೆದುಕೊಳ್ಳಬಹುದು ಎಂಬುದನ್ನು ಕೆಳಗೆ ವಿವರಿಸಲಾಗಿದೆ.

 

ಯೋಜನೆಯ ಹೆಸರು : ಎಸ್‌ಬಿಐ ಲೈಫ್ 'ಸ್ಮಾರ್ಟ್ ಪ್ಲಾಟಿನಾ ಪ್ಲಸ್'

ಅತ್ಯುತ್ತಮ ಹಣ ಹೂಡಿಕೆ ಯೋಜನೆ ವಿಮೆಯೊಂದಿಗೆ (Best investment plan with insurance)

ಪ್ರತಿ ವರ್ಷಕ್ಕೆ 1 ಲಕ್ಷದಂತೆ 10 ವರ್ಷಗಳ ಹೂಡಿಕೆ = 10 ಲಕ್ಷ
11 ನೇ ವರ್ಷ ಬಿಡುವು
12 ನೇ ವರ್ಷದಿಂದ ನಿಮ್ಮ ಅಕೌಂಟಿಗೆ ಪ್ರತಿ ವರ್ಷ 1 ಲಕ್ಷ × 25 ವರ್ಷಗಳು

ಅಂದರೆ ಒಟ್ಟು 25 ಲಕ್ಷ ರೂಪಾಯಿಗಳು

ಇಷ್ಟೇ ಅಲ್ಲದೇ 25 ನೇ ವರ್ಷದ ಕೊನೆಯಲ್ಲಿ, ತಾವು ಹೂಡಿಕೆ ಮಾಡಿದ್ದ 10 ಲಕ್ಷ + ಬೋನಸ್ 1 ಲಕ್ಷ ಸೇರಿ = 11 ಲಕ್ಷ ಒಟ್ಟಿಗೆ ನೇರವಾಗಿ ತಮ್ಮ ಅಕೌಂಟಿಗೆ.

10 ಲಕ್ಷ ಹೂಡಿಕೆ = 36 ಲಕ್ಷ ಗಳಿಕೆ

ಹೂಡಿಕೆಯ ಮೊದಲ ದಿನದಿಂದಲೇ ಜೀವ ವಿಮೆ ಅನ್ವಯ (ನಾಮಿನಿ ಹೆಸರಿಗೆ ವಿಮಾ ಮೊತ್ತ = 11 ಲಕ್ಷ)

ಹಕ್ಕುತ್ಯಾಗ: ಈ ಪೋಸ್ಟ್‌ನಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಲೇಖಕರ ಅಭಿಪ್ರಾಯಗಳು ಮತ್ತು ಆಯ್ರಾ ಟೆಕ್ನಾಲಜೀಸ್‌ನ ಅಭಿಪ್ರಾಯವಲ್ಲ. ಆಯ್ರಾ ಟೆಕ್ನಾಲಜೀಸ್‌ ಈ ಲೇಖನದಲ್ಲಿ ಮಾಡಿದ ಹಕ್ಕುಗಳನ್ನು ಪರಿಶೀಲಿಸಿಲ್ಲ. ಯಾವುದೇ ಇನ್ವೆಸ್ಟ್ಮೆಂಟ್ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಅಥವಾ ಈ ಪೋಸ್ಟ್‌ನಲ್ಲಿ ಉಲ್ಲೇಖಿಸಲಾದ ಯಾವುದೇ ಯೋಜನೆಗಳಲ್ಲಿ ಭಾಗವಹಿಸುವ ಮೊದಲು ಓದುಗರು ತಮ್ಮದೇ ಆದ ಸಂಶೋಧನೆ ಮಾಡಬೇಕು.

Disclaimer: The views expressed in this article are solely those of the author and do not represent Ayra or Ayra Technologies. The contents of this article have not been verified. Readers are encouraged to conduct their own research before making any investment or financial decisions.
Category:Finance and Investing



ProfileImg

Written by ಎಂ.ಡಿ.ಯುನುಸ್

Verified

ಪತ್ರಕರ್ತ, ಲೇಖಕ ಹಾಗೂ ಸಂದರ್ಶಕ

0 Followers

0 Following