ಸೌಂದರ್ಯಮಿಹುದೆಂದು ಬಿಗದಿರು ನೀನು
ಸ್ಥಿರವಲ್ಲವೈ ಈ ನಿನ್ನ ಬಾಹ್ಯ ಸೌಂದರ್ಯ
ಸುಕ್ಕುಗಟ್ಟಿ ಮುಪ್ಪಾಗಿ ಮಣ್ಣಾಗುವ
ಈ ನಿನ್ನಬಾಹ್ಯ ಸೌದರ್ಯದ ಮೇಲೆ ಮೋಹವೇತಕೆ ನಿನಗೆ
ಅಂತರಂಗದ ಸೌಂದರ್ಯ ಮರೆತು
ಬಿಗದಿರು ನಶಿಸದಿರುವ ಹಿರಿದಪ್ಪ
ಸೌಂದರ್ಯ ಒಂದಿಹುದು ತನು ಮನವೆಂಬ
ಈ ಸೌಂದರ್ಯಕಿಂತಲೂ ಮತ್ತಾವ
ಸೌಂದರ್ಯವೂ ಸ್ಥಿರವಲ್ಲ ಮರುಳೆ ✍️ಎಸ್.ಕೆ.ಜಂಬಗಿ
ಕನ್ನಡ ಭಾಷಾ ಶಿಕ್ಷಕರು