ಬದಲಾವಣೆ ಅತ್ಯಗತ್ಯ
ಮೊದಲು ಎಲ್ಲಿಂದ ಬದಲಾವಣೆ ಶುರುವಾಗಬೇಕು..? ನಮ್ಮಿಂದ..!!
ಮೂಢ ನಂಬಿಕೆಯ ಕೆಲ ಉದಾಹರಣೆಗಳು-
1. ವಿಜ್ಞಾನದ ಕೊರತೆ:- ಗ್ರಹಣಕಾಲದಲ್ಲಿ ಕೆಲವು ಮೂಡನಂಬಿಕೆಗಳನ್ನು ನಂಬುವುದು, ಆಕಾಶ ನೋಡದೆ ಇರುವುದು, ಮನಸ್ಸಿಗೆ ಒತ್ತಡ ಮಾಡಿಕೊಂಡು ಗ್ರಹಣ ಕಾಲದಲ್ಲಿ ಊಟ ಮಾಡದೆ ಇರುವುದು ಹಾಗೂ ಮನೆಬಿಟ್ಟು ಎಲ್ಲಿಗೂ ಹೋಗದೆ ಮಂಕಾಗಿ ಮನೆಯಲ್ಲಿ ಇರುವುದು.
2. ಶಿಕ್ಷಣದ ಕೊರತೆ:- ಕೆಲವರು ಓದಿನ ಕೊರತೆಯಿಂದ ಹಿರಿಯರು ಪಾಲಿಸುತಿದ್ದ ಎಲ್ಲಾ ಮೂಢನಂಬಿಕೆಗಳನ್ನು ಕಟ್ಟುನಿಟ್ಟಿನ ಪಾಲನೆ ಮಾಡುವವರನ್ನು ಸಮಾಜದಲ್ಲಿ ಹಿಂದುಳಿದವರು ಎಂದು ಕರೆಯಬಹುದು. ನಮ್ಮ ಸರ್ಕಾರ ಎಲ್ಲಾ ರೀತಿಯ ಅವಕಾಶ ಮಾಡಿಕೊಟ್ಟಿದೆ ಎಲ್ಲಾ ಸರ್ಕಾರಿ ಶಾಲಕಾಲೇಜುಗಳಲ್ಲಿ ಹಣರಹಿತ ಓದುವುದಕ್ಕೆ ಅವಕಾಶವಿದ್ದರು ಓದದೆ ಇರುವುದು ಸಹಜವಾಗಿ ಹಿಂದುಳಿಯುವ ಲಕ್ಷಣಗಳು.
3. ರಾಜಕೀಯ ಮನಸ್ಥಿತಿ:- ಈಗಿನ ರಾಜಕೀಯ ಅವಲಂಬಿಸುರುವುದೇ ಈ ಜಾತಿ ಪದ್ದತಿಯನ್ನು. ಪ್ರತಿನಿದಿಗಳು ಕೇವಲ ಅವರವರ ವಯಕ್ತಿಕ ಏಳಿಗೆಗಾಗಿ ಜಾತಿಗಳ ಹೆಸರುಗಳನ್ನು ಬಳಸುತ್ತಿರುವುದು ಎಂದು ನಮ್ಮ ಮತದಾರರಿಗೆ ಅರ್ಥ ಮಾಡಿಕೊಳ್ಳಲು ಆಗದಿರುವುದು ಕೂಡಾ ಹಿಂದುಳಿದವರ ಲಕ್ಷಣಗಳು.
4. ಜಾತಿಯ ಆಚಾರ ವಿಚಾರಗಳು:- ನಮ್ಮಲ್ಲಿ ಹಲವು ಜಾತಿಗಳನ್ನು ಸೃಷ್ಟಿಸಿ ಅವುಗಳಲ್ಲಿ ಮತ್ತಲವೂ ಆಚಾರ ವಿಚಾರಗಳನ್ನು ಅವರವರ ರೀತಿಯಲ್ಲಿ ಆಚರಿಸುವ ಮೂಢ ಪದ್ದತಿಗಳನ್ನು ತೊಲಗಿಸಲು ನಾವು ಅಂದರೆ ಈಗಿನ ಯುವಕರುಗಳು ಮುಂದಾಗದಿರುವುದು. ಮತ್ತೆ ಹಿರಿಯರು ಹೇಳಿದ ಎಲ್ಲಾ ಮೂಢನಂಬಿಕೆಗಳನ್ನು ಮೂಢರಂತೆ ನಂಬಿ ಇನ್ನೂ ಅವೆಲ್ಲ ಮೂಢನಂಬಿಕೆಗಳನ್ನು ಜೀವಂತವಿರಿಸಿರುವುದು ನಮಗೆ ನಾಚಿಕೆಗೇಡು. ಎಷ್ಟೋ ಹಳ್ಳಿಗಳಲ್ಲಿ ಇನ್ನೂ ಕೆಲವು ಅನಿಷ್ಠ ಮೌಢ್ಯಗಳಿಗೆ ಎಷ್ಟೋ ಜೀವಗಳನ್ನು ಕಳೆದುಕೊಳ್ಳುತ್ತಿರುವುದನ್ನು ನೋಡುತಿದ್ದರೆ ನಂಬಲು ಅಸಾಧ್ಯ ಎನಿಸಬಹುದು.
5. ಸ್ವಂತಿಕೆ ಇರದಿರುವುದು:- ಇನ್ನೂ ಎಷ್ಟೋ ಜನರು ಶ್ರೀಮಂತ ವ್ಯಕ್ತಿಗಳ ಸೇವಕರಾಗಿ ಅವರು ಕೊಡುವ ಪುಡಿಗಾಸಿಗೆ ಕೈಚಾಚುವುದನ್ನು ನಿಲ್ಲಿಸಿಲ್ಲ ಮತ್ತು ಕುಟುಂಬ ಸಮೇತ ಅವರ ಸೇವೆಗಳನ್ನು ಮಾಡಲು ಸಿದ್ದರಿರುವುದು ಇವರಿಗೆ ಸ್ವಂತ ದುಡಿಮೆಯ ನೆನಪು ದೂರದ ಮಾತಾಗಿರುವ ಮನಸ್ಥಿತಿ.
6. ಕಾನೂನಿನ ಅರಿವು ಕೊರತೆ:- ನಮ್ಮ ದೇಶದಲ್ಲಿ ಎಷ್ಟೋ ಮುಖ್ಯ ಅಧಿಕಾರಿಗಳು ತಮ್ಮ ಕೆಲಸ ಏನೆಂದು ಸ್ವತಃ ತಾವೇ ತಿಳಿದುಕೊಳ್ಳಲಾಗದೆ ಅವರ ಅವದಿಯನ್ನು ಕೊನಾಗಾಣಿಸುವುದು…! ಹೌದು ಎಷ್ಟೋ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯ, ಅದ್ಯಕ್ಷ, ಕಾರ್ಯದರ್ಶಿ ಹಾಗೂ ಸಹಾಯಕ ವೃತ್ತಿಯಲ್ಲಿ ಇರುವವರಿಗೆ ಅವರ ವೃತ್ತಿಗೆ ಅರ್ಹರಾಗಿಲ್ಲದಿದ್ದರೂ ಜಾತಿ ವಾರು ಮೀಸಲಾತಿ ಅಥವಾ ಭ್ರಷ್ಟ ವ್ಯವಸ್ಥೆಯಿಂದ ಆಯ್ಕೆಯಾಗಿ ತಮ್ಮ ಕೆಲಸ ಏನೆಂದು ತಮಗೆ ತಿಳಿಯದಿದ್ದರು ತಿಳಿದಹಾಗೆ ನಟಿಸಿ ಮೂರ್ಖರಿಂದ ಆಯ್ಕೆ ಯಾದ ಅತಿ ಮೂರ್ಖರು ಎಂದರೆ ತಪ್ಪಾಗಲಾರದು. ಈ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ ಮತ್ತಷ್ಟೂ ಮತ ಪಡೆಯುವ ಸಂಚು ಮೇಲಿನ ರಾಜಕಾರಣಿಗಳದ್ದು. ಇವತ್ತಿನ ಬಾರತೀಯ ರಾಜಕೀಯ ಕೊಳಕು ಮನಸ್ಥಿತಿಯನ್ನು ತಲುಪಲು ಮೂಲ ಕಾರಣ ಜಾತಿ ವ್ಯವಸ್ಥೆ ಎಂದರೆ ತಪ್ಪಾಗಲಾರದು. ಹೌದು ನಮ್ಮ ಬಾರತದಲ್ಲಿ ಜಾತಿ ಆದಾರದ ಮೇಲೆ ಎಲ್ಲಾ ಕೆಲಸಗಳು ನೆಡೆಯುತ್ತಿರುವುದು ನಮ್ಮ ದುರಾದೃಷ್ಟ ಸಂಗತಿ. ಸಾಮಾನ್ಯ ಕಾನೂನಿನ ಸಾಮಾನ್ಯ ಅರಿವು ಇರದಿರುವುದು ಕೂಡ ನಮ್ಮ ಸಮಾಜದ ಹಿನ್ನೆಡೆಗೆ ಮುಖ್ಯ ಕಾರಣ.
7. ಭಯೋತ್ಪಾದನೆಗೆ ಬಲಿ:- ರೌಡಿಸಂ, ಬೆದರಿಕೆ, ಕೊಲೆ, ಬೆದರಿಕೆ ಹಾಗೂ ನಿಯತ್ತಿಗೆ ದೂರ ಇರುವ ಕಿಡಿಗೇಡಿಗಳಿಗೆ ಇಂದಿಗೂ ಸಹ ಈ ಸಮಾಜದಲ್ಲಿ ತಕ್ಕ ಪಾಠ ಕಲಿಸಿಲ್ಲ. ಉಳ್ಳವರು ರೌಡಿಸಂ ಶುರುಮಾಡುತ್ತಾರೆ ಇರದವರು ರೌಡಿಸಂ ಸೇರಿ ಕಣ್ಮರೆಯಾಗುತ್ತಾರೆ. ದುಡ್ಡಿದ್ದವರಿಗೆ ಗೌರವ ಇಲ್ಲದವರಿಗೆ ಅಗೌರವದ ಮನಸ್ಥಿತಿ ಉಳ್ಳ ಈ ಸಮಾಜದಲ್ಲಿ ಸ್ವತಂತ್ರವಾಗಿ ಬದುಕಲು ಭಯಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಹೌದು ಎಲ್ಲಾ ಹಕ್ಕುಗಳನ್ನು ಹಿಂಪಡೆದು ಶಿಕ್ಷೆ ವಿಧಿಸುವ ಶಕ್ತಿ ಉಳ್ಳವನದ್ದಾಗಿದೆ ಎಲ್ಲಾ ರೀತಿಯ ಶೋಷಣೆಗೆ ಒಳಗಾಗುವ ಪರಿಸ್ಥಿತಿ ಇರದವನದ್ದಾಗಿದೆ. ಸತ್ಯವಂತನಿಗೆ ಉಳಿಗಾಲವಿಲ್ಲ. ಸುಳ್ಳುಗಾರನಿಗೆ ಸನ್ಮಾನ.
ಈಗಿನ ಯುವಕರಲ್ಲಿ ಕೇಳಿಕೊಳ್ಳುತ್ತಿದ್ದೇನೆ ರಾಜಕೀಯ ಮನಸ್ಥಿತಿಯನ್ನು ತೊರೆದು ಸಮಾಜದ ಒಳಿತಿಗಾಗಿ ನ್ಯಾಯದ ಪರ, ಅನ್ಯಾಯದ ವಿರುದ್ಧ ನಿಮ್ಮ ದ್ವನಿ ಎತ್ತಿದರೆ ನಿಮಗೂ ನೆಮ್ಮದಿ ಇರುತ್ತೆ ಅವರಿಗೂ ತಪ್ಪು ಅರಿವಾಗಿ ನೂರಕ್ಕೆ ಶೇಕಡಾ ಐವತ್ತರಷ್ಟಾದರು ಕಡಿಮೆಯಾಗುತ್ತವೆ...!!
ವಿಚಾರಕ್ಕೆ ಬೆಲೆ ಕೊಡಿ ಇಲ್ಲಿ ಯಾರು ಯಾರಿಗೂ ವೈರಿಗಳಲ್ಲ ಕೆಲ ಪಕ್ಷಗಳು ಹಾಗು ಪರಿಸ್ಥಿತಿಗಳು ನಿಮ್ಮನ್ನು ಸಮಯಕ್ಕೆ ತಕ್ಕಾಗೆ ವೈರಿಗಳಾಗಿ ಮಾಡುತ್ತಿವೆ ಅಷ್ಟೇ..!
ನೀವು ಯಾವ ಪಕ್ಷಕ್ಕೆ ಸೇರಿದ್ದೀರಿ ಅನ್ನುವುದು ಮುಖ್ಯ ಅಲ್ಲ ನೀವು ಸೇರಿರುವ ಉದ್ದೇಶ ಏನೆಂಬುದು ಮುಖ್ಯ ಆಗುತ್ತದೆ..ಯಾಕೆಂದರೆ ಕೆಲವರು ಓಳ್ಳೊಳ್ಳೆಯ ಕೆಲಸವನ್ನು ಮಾಡಬೇಕೆಂದು ಸೇರಿರುತ್ತಾರೆ ಇನ್ನೂ ಕೆಲವರು ದುಡ್ಡು ಮಾಡಬೇಕೆಂದು ಸೇರಿರುತ್ತಾರೆ
ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ನೀವು ಎಷ್ಟೇ ನಿಷ್ಠೆಯಿಂದ ಶ್ರದ್ಧೆಯಿಂದ ಒಳ್ಳೆಯ ಮನಸ್ಸಿನಿಂದ ಇದ್ದರೂ ಅನಿವಾರ್ಯವಾಗಿ ನಿಮ್ಮ ಮನಸ್ಥಿತಿಯನ್ನು ಒತ್ತಡಕ್ಕೆ ತಳ್ಳಿ ನಿಮಗೆ ತಿಳಿಯದಾಗೆ ನಿಮ್ಮ ಕೈಯಲ್ಲಿ ಬ್ರಷ್ಟ ಕೆಲಸವನ್ನು ಮಾಡಿಸುವಂತಹ ಕೈಮೀರಿ ಆಳವಾಗಿ ಬೇರೂರಿರುವ ವ್ಯವಸ್ಥೆ ಇದು!! ಅದಕ್ಕಾಗಿಯೇ ಯುವಕರಲ್ಲಿ ಬದಲಾವಣೆ ಅತ್ಯಗತ್ಯ ಬನ್ನಿ ಎಲ್ಲರೂ ಸೇರಿ ಒಂದು ಅದ್ಭುತ ಬದಲಾವಣೆ ತಂದು ನಮ್ಮ ರಾಜ್ಯವನ್ನು ದೇಶಕ್ಕೆ ಮಾದರಿಯಾಗಿ ಮಾಡೋಣ, ನಮ್ಮ ದೇಶವನ್ನು ಪ್ರಪಂಚಕ್ಕೆ ಮಾದರಿಯಾಗಿ ಮಾಡೋಣ✊✊🙌
ನಾವೆಲ್ಲರು ಬದಲಾವಣೆ ಆದರೆ ಅಸಾಮಾನ್ಯ ಪ್ರೆಜೆಗಳಾಗುವಲ್ಲಿ ಯಶಸ್ಸು ಕಾಣುತ್ತೇವೆ, ಊರ ಉದ್ದಾರಕ್ಕೆ ನಾಂದಿಯಾಡುತ್ತೇವೆ.
ಕಿವಿಮಾತು
"ಸಾಗುವ ಹೊಸ ದಾರಿಯಲ್ಲಿ ಕಲ್ಲು ಮುಳ್ಳು ಸಹಜ"
ಒಂದಂತೂ ನಿಜ ನಿ ಮುಂದಕ್ಕೆ ಸಾಗಬೇಕೆಂದ್ರೆ
ನಿನ್ನ ದಾರಿಯನ್ನು ನೀನೆ ಸಿದ್ದಪಡಿಸಿಕೊಳ್ಳಬೇಕು, ಇಲ್ಲಂದ್ರೆ ಅದೆ ಜಾಡುಬಿದ್ದ ಹಳೇ ದಾರಿಯಲ್ಲಿ ನೆಡಿಬೇಕು ಹಾಗು ಹಳೆಯದರಲ್ಲೆ ಜೀವಿಸ್ಬೇಕು ಈ ಸಮಾಜದಲ್ಲಿ
"ಹಳೇದ್ರಲ್ಲೆ ಹೊಸತು ಕಾಣೋದು ಕಷ್ಟಸಾಧ್ಯ"!!
ನನ್ನ ಕಿರು ಪರಿಚಯ
ಸತೀಶ್ ಎನ್ ಕೃಷ್ಣಗಿರಿ
ಪಾವಗಡ “ತಾ”
“ಹೆಮ್ಮೆಯ ಕನ್ನಡಿಗ”
“ಕನ್ನಡವೆ ಸತ್ಯ ಕನ್ನಡವೆ ನಿತ್ಯ”
ಕನ್ನಡ ಬರಹಗಾರ
0 Followers
0 Following